Showing posts with label ದೇವತೆಗಳು. Show all posts
Showing posts with label ದೇವತೆಗಳು. Show all posts

ದೇವರ ಪೂಜೆ ಮತ್ತು ಉಪಾಸನೆಯ ಬಗೆಗಿನ ಲೇಖನಗಳು

ಈ ಬ್ಲಾಗ್‌ನಲ್ಲಿರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ನಮ್ಮ ಅನುಮತಿ ಪಡೆದು, ಆಧಾರಗ್ರಂಥವನ್ನು ಉಲ್ಲೇಖಿಸಬೇಕು ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ - dharma.granth0@gmail.com

ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು; ಹೆಸರುವಾಸಿಯಾಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಆಯಾ ಧರ್ಮಶಿಕ್ಷಣದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ನೀವು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. - ಧರ್ಮಗ್ರಂಥ (ಸನಾತನ ಸಂಸ್ಥೆ)

ದೇವರ ಪೂಜೆಯ ಬಗೆಗಿನ ಲೇಖನಗಳು
  1. ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
  2. ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
  3. ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
  4. ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
  5. ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
  6. ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
  7. ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
  8. ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
  9. ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?
  10. ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು?
  11. ಶ್ರೀ ದತ್ತಸ್ತವಸ್ತೋತ್ರಮ್
  12. ಶ್ರೀದತ್ತಾತ್ರೇಯಸ್ತೋತ್ರಮ್ (ನಾರದಪುರಾಣ)
  13. ಶ್ರೀ ಗಣೇಶ ಪೂಜಾವಿಧಿ
  14. ಹಸುವಿನ ಸೆಗಣಿಯಿಂದ ಭಸ್ಮವನ್ನು ತಯಾರಿಸುವ ವಿಧಿ
  15. ಬಿಲ್ವಾಷ್ಟಕಮ್
  16. ಲಿಂಗಾಷ್ಟಕಮ್
  17. ಶಿವಾಷ್ಟಕಮ್
  18. ಶಿವಪಂಚಾಕ್ಷರಿ ಸ್ತೋತ್ರಮ್
  19. ಆತ್ಮ ಷಟಕಮ್ / ನಿರ್ವಾಣ ಷಟಕಮ್
  20. ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ
  21. ರುದ್ರಾಕ್ಷಿಧಾರಣೆ
  22. ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ
  23. ಘಂಟಾನಾದದ ಮಹತ್ವ
  24. ಭಸ್ಮಧಾರಣೆ
  25. ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?
  26. ದೇವರ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿನ ಕೆಲವು ಕೃತಿಗಳ ಶಾಸ್ತ್ರ
  27. ನವಗ್ರಹಸ್ತೋತ್ರ
  28. ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು - ದೂರ್ವೆ
  29. ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ
  30. ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
  31. ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
  32. ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
  33. ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
  34. ಶ್ರೀರಾಮರಕ್ಷಾ ಸ್ತೋತ್ರ

ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ

ಮೂರ್ತಿವಿಜ್ಞಾನ

ಪ್ರತಿಯೊಂದು ದೇವತೆ ಎಂದರೆ ಒಂದು ತತ್ತ್ವವಾಗಿದೆ. ಈ ತತ್ತ್ವವು ಎಲ್ಲ ಯುಗಗಳಲ್ಲಿ ಇದ್ದೇ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಿರುವ ಸಗುಣರೂಪದಲ್ಲಿ ಪ್ರಕಟವಾಗುತ್ತದೆ. ಉದಾ. ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಮಾನವನು ಕಾಲಕ್ಕನುಸಾರ ದೇವತೆಗಳನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ.

ಶಿವನ ಮೂರ್ತಿಯಲ್ಲಿ ಕಾಲಕ್ಕನುಸಾರ ಮುಂದೆ ಕೊಟ್ಟಿರುವಂತೆ ಬದಲಾವಣೆಯಾಗುತ್ತಾ ಹೋಯಿತು. ಈ ವಿಷಯವನ್ನು ಓದುವಾಗ ‘ಶಿವನು ಲಯದ ದೇವತೆಯಾಗಿರುವಾಗ ಶಿವನ ಶಿಶ್ನ, ನಂದಿ, ಲಿಂಗ-ಭಗ ರೂಪದಲ್ಲಿನ ಶಿವಲಿಂಗ ಮುಂತಾದ ಉತ್ಪತ್ತಿಯ ಸಂದರ್ಭದಲ್ಲಿನ ಮೂರ್ತಿಗಳನ್ನು ಏಕೆ ತಯಾರಿಸಲಾಯಿತು’ ಎಂಬ ಪ್ರಶ್ನೆಯು ಯಾರಿಗಾದರೂ ಬರುವ ಸಾಧ್ಯತೆಯಿದೆ. ಅದರ ಉತ್ತರವು ಹೀಗಿದೆ - ಶೈವ ಸಂಪ್ರದಾಯಕ್ಕನುಸಾರ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಸ್ಥಿತಿಗಳ ದೇವರು ಶಿವನೇ ಆಗಿದ್ದಾನೆ. ತ್ರಿಮೂರ್ತಿ ಸಂಕಲ್ಪನೆಯಲ್ಲಿ (ದತ್ತ ಸಂಪ್ರದಾಯದಲ್ಲಿ) ಶಿವನು ಕೇವಲ ಲಯದ ದೇವತೆಯಾಗಿದ್ದಾನೆ. ಮನಃಶಾಸ್ತ್ರದ ದೃಷ್ಟಿಯಿಂದಲೂ ಉತ್ಪತ್ತಿ ಮತ್ತು ಸ್ಥಿತಿಗೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಹೆಚ್ಚಿನ ಜನರಿಗೆ ಸುಲಭವಾಗುತ್ತದೆ ಮತ್ತು ಲಯಕ್ಕೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಕಠಿಣವಾಗುತ್ತದೆ. ಆದುದರಿಂದ ಶೈವ ಸಂಪ್ರದಾಯದಲ್ಲಿ ಶಿವನು ಉತ್ಪತ್ತಿಗೂ ಸಂಬಂಧಿಸಿದ್ದಾನೆ.’

ಪಿಂಡರೂಪ (ಲಿಂಗರೂಪ)

‘ಭಗ’ದ ಪ್ರತೀಕವಾಗಿರುವ ‘ಪಾಣಿಪೀಠ’ ಮತ್ತು ಲಿಂಗದ ಪ್ರತೀಕವಾಗಿರುವ ‘ಲಿಂಗ’ ಇವೆರಡೂ ಸೇರಿ ಶಿವಲಿಂಗವು ತಯಾರಾಯಿತು. ಭೂಮಿ ಎಂದರೆ ಸೃಜನ ಮತ್ತು ಶಿವ ಎಂದರೆ ಪಾವಿತ್ರ್ಯ, ಹೀಗೆ ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದರೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀರ್ಯದಿಂದ) ಆಗದೇ ಶಿವನ ಸಂಕಲ್ಪದಿಂದಾಯಿತು. ಈ ರೀತಿ ಶಿವ-ಪಾರ್ವತಿಯರು ಜಗತ್ತಿನ ತಂದೆ-ತಾಯಿಯಾಗಿದ್ದಾರೆ. ಕನಿಷ್ಕನ ಮಗನಾದ ಹುಇಷ್ಕನು ಎರಡನೆಯ ಶತಮಾನದಿಂದ ಶಿವಲಿಂಗ ಪೂಜೆಯನ್ನು ಪ್ರಾರಂಭಿ ಸಿದನು. ಶಕ್ತಿ ಇಲ್ಲದೇ ಶಿವನು ಏನೂ ಮಾಡಲಾರನು; ಆದುದರಿಂದ ಶಿವನ ಜೊತೆಯಲ್ಲಿ ಶಕ್ತಿಯ ಪೂಜೆಯು ಪ್ರಾರಂಭವಾಯಿತು. ಪಿಂಡರೂಪದಲ್ಲಿರುವ ಶಿವಲಿಂಗವು ಇಂಧನಶಕ್ತಿಯ ಪ್ರತೀಕವಾಗಿದೆ. ಇತ್ತೀಚಿನ ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತೆಯೇ ಇರುತ್ತದೆ.

ಶಿವಲಿಂಗದ ವಿಧಗಳನ್ನು ಈ ಕೊಂಡಿಯಲ್ಲಿ ಓದಿ.

ಲಿಂಗ

ಅ. ಲಿಂಗವೆಂದರೆ ಯಾವುದಾದರೊಂದು ವಸ್ತುವಿನ ಅಥವಾ ಭಾವನೆಯ ಚಿಹ್ನೆ ಅಥವಾ ಪ್ರತೀಕ. ಮೇದಿನಿಕೋಶದಲ್ಲಿ ಲಿಂಗ ಶಬ್ದದ ಅರ್ಥವನ್ನು ಮುಂದಿನಂತೆ ಹೇಳಲಾಗಿದೆ.
ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾವಪಿ |
ಶಿವಮೂರ್ತಿವಿಶೇಷೇ ಚ ಮೆಹನೇಪಿ ನಪುಂಸಕಮ್ ||
ಅರ್ಥ: ಲಿಂಗ ಶಬ್ದವು ಚಿಹ್ನೆ, ಅನುಮಾನ, ಸಾಂಖ್ಯಶಾಸ್ತ್ರದಲ್ಲಿನ ಪ್ರಕೃತಿ, ಶಿವಮೂರ್ತಿ ವಿಶೇಷ ಮತ್ತು ಶಿಶ್ನ ಎಂಬ ಅರ್ಥಗಳಲ್ಲಿದ್ದು ಅದು ನಪುಂಸಕವಾಗಿದೆ; ಆದರೆ ಸಾಮಾನ್ಯವಾಗಿ ಲಿಂಗ ಎಂಬ ಶಬ್ದವನ್ನು ‘ಶಿವನ ಪ್ರತೀಕ’ವೆಂದೇ ಅರ್ಥೈಸಲಾಗುತ್ತದೆ.
ಆ. ಪ್ರಳಯಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗುತ್ತದೆ ಮತ್ತು ಸೃಷ್ಟಿಕಾಲದಲ್ಲಿ ಮತ್ತೆ ಅದರಿಂದಲೇ ಸಾಕಾರವಾಗುತ್ತದೆ; ಆದುದರಿಂದ ಅದನ್ನು ಲಿಂಗ ಎನ್ನಲಾಗಿದೆ.
ಇ. ಮಹಾಲಿಂಗಕ್ಕೆ ಮೂರು ಕಣ್ಣುಗಳಿರುತ್ತವೆ. ಅವು ಉತ್ಪತ್ತಿ, ಸ್ಥಿತಿ ಮತ್ತು ಲಯ, ಹಾಗೆಯೇ ತಮ (ವಿಸ್ಫುಟಿತ), ರಜ (ತಿರ್ಯಕ್), ಸತ್ತ್ವ (ಸಮ್ಯಕ್) ಲಹರಿಗಳ ಸಂಕೇತವಾಗಿವೆ.

ಪಾಣಿಪೀಠ (ಲಿಂಗವೇದಿಕೆ)

ಭೂಮಿಯು ದಕ್ಷಪ್ರಜಾಪತಿಯ ಮೊದಲನೆಯ ಕನ್ಯೆಯಾಗಿದ್ದಾಳೆ. ಅದಿತಿ, ಉತ್ತಾನಪಾದಾ, ಮಹೀ ಮತ್ತು ಪಾಣಿಪೀಠವು ಅವಳ ರೂಪ ಗಳಾಗಿವೆ. ಪಾಣೀಪೀಠದ ಮೂಲ ಹೆಸರು ಸುವರ್ಣಶಂಖಿನಿಯಾಗಿದೆ. ಏಕೆಂದರೆ ಶಂಖದ (ಮತ್ತು ಕವಡೆಯ) ಆಕಾರವು ಸ್ತ್ರೀಯ ಸೃಜನೇಂದ್ರಿಯದಂತಿರುತ್ತದೆ. ಪಾಣಿಪೀಠದ ಪೂಜೆಯು ಮಾತೃದೇವತೆಯ ಪೂಜೆಯೇ ಆಗಿದೆ. ಪಾಣಿಪೀಠದ ಒಳಭಾಗದಲ್ಲಿ ಕೆತ್ತಿರುವ ರೇಖೆಗಳು ಮಹತ್ವದ್ದಾಗಿರುತ್ತವೆ. ಅವುಗಳಿಂದ ಲಿಂಗದಲ್ಲಿ ನಿರ್ಮಾಣವಾಗುವ ಸಾತ್ತ್ವಿಕ ಶಕ್ತಿಯು ಲಿಂಗದಲ್ಲಿ ಮತ್ತು ಗರ್ಭಗುಡಿಯಲ್ಲಿಯೇ ಸುತ್ತುತ್ತಲಿರುತ್ತದೆ ಮತ್ತು ವಿನಾಶಕರ ತಮಪ್ರಧಾನ ಶಕ್ತಿಯು ಪಾಣಿಪೀಠದ ಹರಿನಾಳದಿಂದ (ಅಭಿಷೇಕದ ನೀರು ಹೋಗುವ ದಾರಿ) ಹೊರಗೆ ಹೋಗುತ್ತದೆ.


ಅ.ಸುತ್ತಳತೆಗನುಸಾರ ಪಾಣಿಪೀಠದ ವಿಧಗಳು
೧. ಲಿಂಗದ ಸುತ್ತಳತೆಯ ಮೂರು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಅಧಮ.
೨. ಲಿಂಗದ ಸುತ್ತಳತೆಯ ಒಂದೂವರೆ ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಮಧ್ಯಮ.
೩. ಲಿಂಗದ ಸುತ್ತಳತೆಯ ನಾಲ್ಕು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಉತ್ತಮ.

ಆ. ಎತ್ತರ: ಪಾಣಿಪೀಠದ ಎತ್ತರವು ಲಿಂಗದ ವಿಷ್ಣುಭಾಗದಷ್ಟಿರಬೇಕು.

ಇ. ಆಕಾರ: ಪಾಣಿಪೀಠಕ್ಕೆ ೪, ೬, ೮, ೧೨ ಅಥವಾ ೧೬ ಕೋನಗಳನ್ನು ಮಾಡಬಹುದು. ಆದರೆ ಪಾಣಿಪೀಠವು ಹೆಚ್ಚಾಗಿ ವೃತ್ತಾ ಕಾರವೇ ಆಗಿರುತ್ತದೆ.
ಪಾಣಿಪೀಠವು ಉತ್ತರಮುಖಿಯಾಗಿದ್ದರೆ, ಅದರ ಆಕಾರವು ಕೆಳಗಿನ ಆಕೃತಿಯಲ್ಲಿ ತೋರಿಸಿದಂತಾಗುತ್ತದೆ.


ಈ. ವೀರ್ಯಾಣು ಮತ್ತು ಸುವರ್ಣಕಾಂತಿಮಯ ಅಧಃಶಾಯಿ (ಗರ್ಭದಲ್ಲಿ ಪ್ರವೇಶಿಸುವ ಜೀವ) ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಹೀಗೆಯೇ ಕಾಣಿಸುತ್ತವೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಜ್ಯೋತಿರ್ಲಿಂಗಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹದಿಮೂರನೆಯ ಪಿಂಡಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡವೆಂದರೆ (ದೇಹವೆಂದರೆ) ಕಾಲಪಿಂಡ. ಹನ್ನೆರಡು ಜ್ಯೋತಿರ್ಲಿಂಗಗಳು ಮುಂದಿನಂತಿವೆ.


ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡು (ನೇಪಾಳ) ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ.

ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳ ಮಹತ್ವ
ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು ಸಾತ್ತ್ವಿಕ ಲಹರಿಗಳ ಪ್ರಮಾಣವು ಹೆಚ್ಚಿರುತ್ತದೆ. ಹೇಗೆ ಸಂತರ ಸಮಾಧಿಯು ಭೂಮಿಯ ಕೆಳಗಿರುತ್ತದೆಯೋ, ಹಾಗೆಯೇ ಜ್ಯೋತಿರ್ಲಿಂಗಗಳು ಮತ್ತು ಸ್ವಯಂಭೂ ಶಿವಲಿಂಗಗಳು ಭೂಮಿಯ ಕೆಳಗಿರುತ್ತವೆ. ಈ ಶಿವಲಿಂಗಗಳಲ್ಲಿ ಇತರ ಶಿವಲಿಂಗಗಳ ತುಲನೆಯಲ್ಲಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿರುವುದರಿಂದ ಅವುಗಳಿಂದ ಚೈತನ್ಯ ಮತ್ತು ಸಾತ್ತ್ವಿಕತೆಯು ಹೆಚ್ಚು ಪ್ರಮಾಣದಲ್ಲಿ ಮತ್ತು ಸತತವಾಗಿ ಪ್ರಕ್ಷೇಪಿಸುತ್ತಿರುತ್ತದೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಸತತವಾಗಿ ಶುದ್ಧವಾಗುತ್ತಿರುತ್ತದೆ, ಅದರೊಂದಿಗೆ ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳಿಂದ ಪಾತಾಳದ ದಿಕ್ಕಿನಲ್ಲಿಯೂ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯ ಪ್ರಕ್ಷೇಪಣೆಯಾಗಿ ಪಾತಾಳ ದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಅವರ ಯುದ್ಧವು ಸತತವಾಗಿ ನಡೆಯುತ್ತಿರುತ್ತದೆ. ಇದರಿಂದ ಪಾತಾಳದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳ ಹಲ್ಲೆಯಿಂದ ಭೂಲೋಕದ ರಕ್ಷಣೆಯಾಗುತ್ತದೆ.

ವೈಶಿಷ್ಟ್ಯಗಳು
ರುದ್ರಾಕ್ಷದ ಮಂತ್ರಸಿದ್ಧಿಗಾಗಿ ಗುಣ ಹಾಗೂ ಶಕ್ತಿಗೆ ತಕ್ಕಂತೆ ಯೋಗ್ಯ ಗುಣಗಳುಳ್ಳ ಜ್ಯೋತಿರ್ಲಿಂಗವನ್ನು ಆರಿಸಿಕೊಂಡು ಆ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಬೇಕು. ಉದಾಹರಣೆಗೆ ಮಹಾಕಾಳನು ತಾಮಸಶಕ್ತಿಯಿಂದ ಯುಕ್ತನಾಗಿದ್ದಾನೆ, ನಾಗನಾಥನು ಹರಿಹರ ಸ್ವರೂಪನಾಗಿದ್ದು ಸತ್ತ್ವ ಹಾಗೂ ತಮೋಗುಣ ಪ್ರಧಾನನಾಗಿದ್ದಾನೆ, ತ್ರ್ಯಂಬಕೇಶ್ವರನು ತ್ರಿಗುಣಾತ್ಮಕ (ಅವಧೂತ) ನಾಗಿದ್ದಾನೆ ಮತ್ತು ಸೋಮನಾಥನು ರೋಗಮುಕ್ತಿಗಾಗಿ ಯೋಗ್ಯನಾಗಿದ್ದಾನೆ.

ಜ್ಯೋತಿರ್ಲಿಂಗದ ಅರ್ಥ
೧. ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ
೨. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.
೩. ಶಿವಲಿಂಗದ ಹನ್ನೆರಡು ಖಂಡಗಳು
೪. ಪಾಣಿಪೀಠವು ಯಜ್ಞವೇದಿಕೆಯ ಮತ್ತು ಲಿಂಗವು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ, ಅಂದರೆ ಯಜ್ಞಶಿಖೆಯ ಪ್ರತೀಕವಾಗಿದೆ.
೫. ದ್ವಾದಶ ಆದಿತ್ಯರ ಪ್ರತೀಕಗಳು
೬. ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕ ಸ್ಥಾನಗಳು

ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮನು ಶಂಕರನ ಅಧಿಪತ್ಯದಲ್ಲಿರುವುದರಿಂದ ದಕ್ಷಿಣ ದಿಕ್ಕು ಶಂಕರನ ದಿಕ್ಕಾಗುತ್ತದೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖಿಯಾಗಿರುತ್ತವೆ, ಅಂದರೆ ಜ್ಯೋತಿರ್ಲಿಂಗಗಳ ಪಾಣಿಪೀಠದ ಹರಿನಾಳವು ದಕ್ಷಿಣ ದಿಕ್ಕಿಗಿರುತ್ತದೆ. ಬಹುತೇಕ ಮಂದಿರಗಳು ದಕ್ಷಿಣಾಭಿಮುಖವಾಗಿರುವುದಿಲ್ಲ. ಪಾಣಿಪೀಠವು ದಕ್ಷಿಣಾಭಿಮುಖವಾಗಿದ್ದರೆ ಆ ಲಿಂಗವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹರಿನಾಳವು ಉತ್ತರ ದಿಕ್ಕಿಗಿದ್ದರೆ ಆ ಲಿಂಗವು ಕಡಿಮೆ ಶಕ್ತಿಶಾಲಿಯಾಗಿರುತ್ತದೆ.

(ಸನಾತನ ಸಂಸ್ಥೆಯ "ಶಿವ" ಗ್ರಂಥವನ್ನು ಓದಿರಿ.)

ಇತರ ವಿಷಯಗಳು
ಮಹಾಶಿವರಾತ್ರಿ
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಮಹಾಶಿವರಾತ್ರಿ

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.

ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು?
ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.

ವ್ರತವನ್ನಾಚರಿಸುವ ಪದ್ಧತಿ
ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.

ವ್ರತದ ವಿಧಿ
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

ಯಾಮಪೂಜೆ
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವು ಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.

೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಇತರ ವಿಷಯಗಳು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಶಿವನ ವಿಶ್ರಾಂತಿಯ ಕಾಲ ಎಂದರೇನು?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ ೪ ಪ್ರಹರಗಳು ಮತ್ತು ರಾತ್ರಿಯಲ್ಲಿ ೪ ಪ್ರಹರಗಳು ಹೀಗೆ ೨೪ ಗಂಟೆಗಳಲ್ಲಿ ಒಟ್ಟು ೮ ಪ್ರಹರಗಳಿವೆ. ಒಂದು ಪ್ರಹರವು ೩ ಗಂಟೆಯದ್ದಾಗಿದೆ.

ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ: ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ ೩೦ ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ. ೧೦೦ ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ. ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವತತ್ತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ. - ಬ್ರಹ್ಮತತ್ತ್ವ (ಓರ್ವ ಸಾಧಕಿಯ ಮಾಧ್ಯಮದಿಂದ)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶಿವ')

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
Dharma Granth

ಬಾದಾಮಿಯ ಶಕ್ತಿದೇವತೆ ಶ್ರೀ ಬನಶಂಕರಿ ದೇವಿ


ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಶ್ರೀ ಬಾದಾಮಿಯ ಶಾಕಾಂಭರಿ ಶಕ್ತಿ ಪೀಠವೂ ಒಂದಾಗಿದೆ. ಇವಳಿಗೆ ಬನಸಿರಿದೇವಿ, ಬನಶಂಕರಿ ಎಂದೂ ಕರೆಯುತ್ತಾರೆ. ಶ್ರೀ ಶಾಕಾಂಭರಿ ದೇವಿಯ ವಿವರವು ಸ್ಕಂದಪುರಾಣದಲ್ಲಿ ಬರುತ್ತದೆ. ಪದ್ಮಪುರಾಣದಲ್ಲಿಯೂ ಇದರ ವಿವರಣೆ ಇದೆ. ಬಾದಾಮಿ ಬನಶಂಕರಿ ದೇವತೆಯು ನಾಡಿನ ಜನತೆಯ ಆರಾಧ್ಯದೇವಿಯಾಗಿ, ಶಕ್ತಿದೇವತೆಯಾಗಿ, ವನದೇವತೆಯಾಗಿ ಭಕ್ತರ ಕಾಮಧೇನುವಾಗಿ ಅವರ ಕಷ್ಟಗಳನ್ನು ದೂರ ಮಾಡುವವಳಾಗಿದ್ದಾಳೆ. ಬನಶಂಕರಿ ಜಾತ್ರೆಯ ಪ್ರಯುಕ್ತ ದೇವಿಯ ಮಾಹಿತಿ ನೀಡುತ್ತಿದ್ದೇವೆ.

ಚರಿತ್ರೆ
ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಬ್ರಹ್ಮಾದಿ ದೇವತೆಗಳೆಲ್ಲ ಸೇರಿ ತ್ರಿಗುಣಾತ್ಮಿಕಾ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ಶ್ರೀದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಕಾಹಾರದಿಂದ ಸಕಲ ಜಗತ್ತನ್ನು ಕಾಪಾಡಿ ದಳು. ಅವಳ ಕೃಪೆಯಿಂದ ಬರ ನೀಗಿತು, ದಾಹ ತೀರಿತು, ಹಸಿವು ಇಂಗಿತು, ಜಲ ಸಂಪತ್ತಿನಿಂದ ಭೂದೇವಿ ಹಸಿರು ವರ್ಣ ತಾಳಿದಳು. ಎಲ್ಲ ಬನಗಳು ಹಸಿರು ವರ್ಣ ದಿಂದ ನಲಿದವು ಶ್ರೀ ದೇವಿ ಶಾಕಾಂಭರಿ ಎಂದು ಪ್ರಸಿದ್ಧಳಾದಳು.

ಬನಶಂಕರಿ ದೇವಿಯ ಜಾತ್ರೆ
ಪ್ರತೀವರ್ಷ ಶ್ರೀ ದೇವಿಯ ನವರಾತ್ರ್ಯುತ್ಸವವು ಪುಷ್ಯ ಮಾಸದ ಅಷ್ಟಮಿಯಂದು ಆರಂಭವಾಗಿ ಪೂರ್ಣಿಮೆಯಂದು(ಬನದ ಹುಣ್ಣಿಮೆಯಂದು) ರಥೋತ್ಸವದೊಂದಿಗೆ ಮುಕ್ತಾಯವಾಗುತ್ತದೆ.

ದೇವಿಯ ಮೂರ್ತಿ
ಶ್ರೀ ದೇವಿಯ ಮೂರ್ತಿಯು ಎಂಟು ಭುಜಗಳಿಂದ ಕೂಡಿದೆ, ಕೈಗಳಲ್ಲಿ ಹಿಡಿದ ಖಡ್ಗ, ಘಂಟೆ, ತ್ರಿಶೂಲ, ಲಿಪಿ ಮತ್ತು ಢಮರುಘ, ಢಾಲು, ರುಂಡ ಮತ್ತು ಅಮೃತಪಾತ್ರೆ ಇವು ದೇವಿಯ ಲೀಲೆಯನ್ನು ಸಾರುತ್ತವೆ. ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮಿ, ಶ್ರೀ ಮಹಾಸರಸ್ವತಿಯೆಂದು ಅವಳನ್ನು ಪೂಜಿಸುತ್ತಾರೆ.

ದೇವಿಯ ವಿವಿಧ ಪೂಜೆಗಳು
ಶ್ರೀದೇವಿ ದರ್ಶನ ಮಾಡಿಕೊಂಡು ಜ್ಞಾನ, ಶೌರ್ಯ ಹಾಗೂ ಐಶ್ವರ್ಯ ಪ್ರಾಪ್ತಿಗೆ ಅವಳ ಆರಾಧನೆ ಮಾಡಿ ಭಕ್ತರು ತಮ್ಮ ಜೀವನ ಸಾರ್ಥಕಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದ ಬಿಲ್ವಾರ್ಚನೆ, ಕಾರ್ತಿಕ ಮಾಸದ ದೀಪಾರಾಧನೆ ಮತ್ತು ನವರಾತ್ರಿ ದಸರಾ ಉತ್ಸವದಲ್ಲಿ ದೇವಿಗೆ ವಿಶೇಷ ಉತ್ಸವವು ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನ ದೇವಿಗೆ ಅಭ್ಯಂಜನ, ಪಂಚಾಮೃ ತಾಭಿಷೇಕ, ಸಕೃತಾವರ್ತನ, ರುದ್ರಾಭಿಷೇಕಗಳು ವಿಶೇಷವಾಗಿ ನಡೆಯುತ್ತವೆ.

ರಥೋತ್ಸವ
ಶ್ರೀ ದೇವಿಯ ರಥೋತ್ಸವವು ಪುಷ್ಯ ಮಾಸದ ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ನಡೆಯುತ್ತದೆ. ಶಾಕಾಂಭರಿಗೆ (ಶುದ್ಧ) ಚತುರ್ದಶಿಯಂದು ಪಲ್ಲೇದ ಹಬ್ಬ ಅಚರಿಸುತ್ತಾರೆ. ದೇವಿಗೆ ಹಬ್ಬದಲ್ಲಿ ೧೦೮ ಪಲ್ಲೇದ ನೈವೇದ್ಯ ಮಾಡುತ್ತಾರೆ. ವಿವಿಧ ಜನಾಂಗದವರು ಸೇರಿ ಅದ್ಧೂರಿಯಿಂದ ಜಾತ್ರೆ ಮಾಡುತ್ತಾರೆ.
- ಶ್ರೀ.ಗದಾಧರ ಪೂಜಾರ, ಚೊಳಚಗುಡ್ಡ

ಶಿವಲಿಂಗದ ವಿಧಗಳು

ಚಲ ಮತ್ತು ಅಚಲ

೧. ಚಲ ಲಿಂಗವನ್ನು ಯಾವುದಾದರೊಂದು ವಿಶಿಷ್ಟ ಪೂಜೆಯನ್ನು ಮಾಡಲು ತಯಾರಿಸುತ್ತಾರೆ. ಶ್ರೀಗಣೇಶ ಚತುರ್ಥಿಗೆ ಯಾವ ರೀತಿ ಶ್ರೀಗಣೇಶನ ನೂತನ ಮೂರ್ತಿಯನ್ನು ತಯಾರಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆಯೋ ಅದೇ ರೀತಿ ಇದನ್ನು ಮಾಡುತ್ತಾರೆ. ಅಚಲ ಲಿಂಗವನ್ನು ಒಂದು ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ.

೨. ಲಿಂಗಾಯತ ಜನರು ಕುತ್ತಿಗೆಯಲ್ಲಿ ಧರಿಸುವ ಲಿಂಗಕ್ಕೆ ‘ಚಲ ಲಿಂಗ’ ಎಂದು ಹೇಳುತ್ತಾರೆ.

ಭೂಮಿಯ ಸಂದರ್ಭದಲ್ಲಿ

೧. ಭೂಮಿಯ ಒಳಗಿರುವ ಲಿಂಗಗಳು (ಸ್ವಯಂಭೂ)
ಅ. ಇವುಗಳಲ್ಲಿ ಬಹಳ ಶಕ್ತಿಯಿರುತ್ತದೆ; ಆದುದರಿಂದಲೇ ಇವು ಭೂಮಿಯ ಒಳಗಿರುತ್ತವೆ. ಅವು ಭೂಮಿಯ ಮೇಲಿದ್ದರೆ ಅವುಗಳಿಂದ ಹೊರಬೀಳುವ ಶಕ್ತಿಯನ್ನು ಭಕ್ತರು ಸಹಿಸಲಾರರು. (ಕಣ್ಣುಗಳಿಂದ ಹೊರಬೀಳುವ ತೇಜದಿಂದ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗ ಬಾರದೆಂದು ತಿರುಪತಿ ಬಾಲಾಜಿಯ ಕಣ್ಣುಗಳು ಅರ್ಧಮುಚ್ಚಿರುತ್ತವೆ.) ಪೂಜೆಯನ್ನು ಮಾಡು ವವರು ನೆಲದ ಮೇಲೆ ಮಲಗಿಕೊಂಡು ಕೆಳಗೆ ಕೈ ಹಾಕಿ ಲಿಂಗದ ಪೂಜೆಯನ್ನು ಮಾಡುತ್ತಾರೆ. ಜ್ಯೋತಿರ್ಲಿಂಗಗಳ ನಂತರ ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಶಿವತತ್ತ್ವವಿರುತ್ತದೆ. ಇವು ಶಿವೇಚ್ಛೆ ಯಿಂದ ತಯಾರಾಗುತ್ತವೆ. ಮುಂದೆ ಯಾವುದಾದರೊಬ್ಬ ಭಕ್ತನಿಗೆ ಸಾಕ್ಷಾತ್ಕಾರವಾಗಿ ಇವುಗಳ ಅಸ್ತಿತ್ವದ ಅರಿವಾಗುತ್ತದೆ ಮತ್ತು ಅವುಗಳ ಪೂಜೆಯು ಪ್ರಾರಂಭವಾಗುತ್ತದೆ.

೨. ಭೂಮಿಗೆ ಸಮಾನವಾಗಿರುವ ಲಿಂಗಗಳು: ಇವುಗಳನ್ನು ಋಷಿ ಅಥವಾ ರಾಜರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಶಕ್ತಿಯು ಕಡಿಮೆಯಿರುತ್ತದೆ. ಭಕ್ತರಿಗೆ ಈ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ. ಪೂಜೆ ಮಾಡುವವನು ಲಿಂಗದ ಪಕ್ಕದಲ್ಲಿರುವ ತಗ್ಗಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾನೆ.

೩. ಭೂಮಿಯ ಮೇಲಿರುವ ಲಿಂಗಗಳು: ಇವುಗಳನ್ನು ಭಕ್ತರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಮತ್ತು ಎಲ್ಲರಿಗೂ ಸಹನವಾಗುವಷ್ಟೇ ಶಕ್ತಿಯಿರುತ್ತದೆ. ಪೂಜೆ ಮಾಡುವವರು ಲಿಂಗದ ಪಕ್ಕದಲ್ಲಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ.

ಎರಡನೆಯ ಮತ್ತು ಮೂರನೆಯ ವಿಧದ ಲಿಂಗಗಳಿಗೆ ‘ಮಾನುಷ ಲಿಂಗ’ ಎನ್ನುತ್ತಾರೆ. ‘ಇವುಗಳನ್ನು ಮನುಷ್ಯರು ತಯಾರಿಸುವುದರಿಂದ ಇವುಗಳಿಗೆ ಮಾನುಷಲಿಂಗ ಎಂಬ ಹೆಸರು ಬಂದಿರಬಹುದು. ಈ ಲಿಂಗಗಳನ್ನು ಸ್ಥಿರಲಿಂಗಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ರಹ್ಮಭಾಗ, ವಿಷ್ಣುಭಾಗ ಮತ್ತು ರುದ್ರಭಾಗ ಎಂದು ಮೂರು ಭಾಗಗಳಿರುತ್ತವೆ. ಎಲ್ಲಕ್ಕಿಂತಲೂ ಕೆಳಗಿನ ಭಾಗಕ್ಕೆ ‘ಬ್ರಹ್ಮಭಾಗ’ ಎನ್ನುತ್ತಾರೆ. ಅದು ಚತುಷ್ಕೋನಾಕಾರದ್ದಾಗಿರುತ್ತದೆ. ಮಧ್ಯದ ಅಷ್ಟಕೋನಾಕಾರದ ಭಾಗವನ್ನು ‘ವಿಷ್ಣುಭಾಗ’ ಎನ್ನುತ್ತಾರೆ. ಈ ಎರಡೂ ಭಾಗಗಳು ಭೂಮಿಯ ಒಳಗೆ ಇರುತ್ತವೆ. ಎಲ್ಲಕ್ಕಿಂತಲೂ ಮೇಲಿನ ಉದ್ದನೆಯ ದುಂಡಾದ ಭಾಗಕ್ಕೆ ರುದ್ರಭಾಗ ಎಂಬ ಹೆಸರಿದೆ. ಇದಕ್ಕೆ ಪೂಜೆಯ ಭಾಗವೆಂದೂ ಕರೆಯುತ್ತಾರೆ. ಏಕೆಂದರೆ ಪೂಜೆಯ ಸಾಮಗ್ರಿಗಳನ್ನು ಇದರ ಮೇಲೆಯೇ ಅರ್ಪಿಸುತ್ತಾರೆ. ಮೂರ್ತಿಶಾಸ್ತ್ರದ ಗ್ರಂಥಗಳಲ್ಲಿ ರುದ್ರಭಾಗದ ಮೇಲೆ ಕೆಲವು ರೇಖೆಗಳಿರಬೇಕು ಎಂದು ಹೇಳಲಾಗಿದೆ. ಈ ರೇಖೆಗಳಿಗೆ ‘ಬ್ರಹ್ಮಸೂತ್ರಗಳು’ ಎನ್ನುತ್ತಾರೆ. ದೈವಿಕ ಮತ್ತು ಆರ್ಷಕ ಲಿಂಗಗಳ ಮೇಲೆ ಇಂತಹ ರೇಖೆಗಳು ಇರುವುದಿಲ್ಲ.’

(ಚಿತ್ರದಲ್ಲಿ ಬರೆದಿರುವುದನ್ನು ಓದಲು ಚಿತ್ರಕ್ಕೆ ಕ್ಲಿಕ್ ಮಾಡಿ)

೪. ಗಾಳಿಯಲ್ಲಿ ತೇಲಾಡುವ ಲಿಂಗಗಳು: ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ ಐದು ಮೀ.ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ದರ್ಶನಾರ್ಥಿಗಳು ಅದರ ಕೆಳಗಿನಿಂದ ಹೋಗುತ್ತಿದ್ದರು. ಅದೇ ಲಿಂಗದ ಪ್ರದಕ್ಷಿಣೆಯಾಗುತ್ತಿತ್ತು.

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಗಣೇಶ ಜಯಂತಿ


ಇತಿಹಾಸ: ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.

ಗಣೇಶ ಜಯಂತಿ: ಮಾಘ ಶುಕ್ಲ ಚತುರ್ಥಿಯನ್ನು ‘ಗಣೇಶ ಜಯಂತಿ’ ಎಂದು ಆಚರಿಸುತ್ತಾರೆ. ಈ ತಿಥಿಯ ವೈಶಿಷ್ಟ್ಯವೆಂದರೆ, ಈ ತಿಥಿಗೆ ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಮಹತ್ವ
ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ಶ್ರೀ ಗಣೇಶ ಚತುರ್ಥಿ

ಮಹತ್ವ: ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. (ಈ ಲಹರಿಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಸನಾತನದ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

ಶ್ರೀ ಗಣೇಶ ಚತುರ್ಥಿಯ ದಿನ ಹಾಗೆಯೇ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ದಿನನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತ ವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಗಣೇಶನ ಉಪಾಸನೆಯಿಂದ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.

ಗಣೇಶನಿಗೆ ಸಂಬಂಧಿಸಿದ ಹಬ್ಬಗಳಂದು ಬಿಡಿಸಬೇಕಾದ ರಂಗೋಲಿ


(ಹೆಚ್ಚಿನ ಮಾಹಿತಿಗೆ ಓದಿ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ಗಣಪತಿ')

ಶ್ರೀ ಗಣೇಶನ ಕುರಿತು ಲಭ್ಯವಿರುವ ಸನಾತನ ಸಂಸ್ಥೆಯ ಇತರ ಗ್ರಂಥಗಳು
೧. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೨. ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು!
೩. ಶ್ರೀ ಗಣಪತಿ (ಕಿರುಗ್ರಂಥ)
೪. ಶ್ರೀ ಗಣೇಶ ಪೂಜಾವಿಧಿ (ಕೆಲವು ಮಂತ್ರಗಳ ಅರ್ಥಸಹಿತ)

ಸಂಬಂಧಿತ ವಿಷಯಗಳು
Dharma Granth

ಶ್ರೀ ಸರಸ್ವತಿದೇವಿ


ನಿರ್ಮಿತಿ: 
ಸ್ಥೂಲ, ಸೂಕ್ಷ್ಮ ಮತ್ತು ಸೂಕ್ಷ್ಮತರ ಈ ಸ್ತರದಲ್ಲಿನ ನಿರ್ಮಿತಿಗಾಗಿ ಬ್ರಹ್ಮನಿಗೆ ನಿರ್ಗುಣ ಸ್ತರದಲ್ಲಿ ಕಾರ್ಯ ವನ್ನು ಮಾಡುವ ಮಹಾಸರಸ್ವತಿದೇವಿಗಿಂತ ಸಗುಣ ಸ್ತರದಲ್ಲಿ ಕಾರ್ಯವನ್ನು ಮಾಡುವ ಶಕ್ತಿಯ ಆವಶ್ಯಕತೆಯೆನಿಸಿತು. ಆಗ ಸಗುಣ ಶ್ರೀ ಸರಸ್ವತೀದೇವಿಯ ನಿರ್ಮಿತಿಯಾಯಿತು.

ಕಾರ್ಯ: 
ಶ್ರೀ ಸರಸ್ವತಿದೇವಿಯ ನಿರ್ಮಿತಿಯ ಪ್ರಕ್ರಿಯೆಯಿಂದ ದೇವತೆಗಳ (ಸಗುಣ) ರೂಪಗಳು, ಅವರ ಶಸ್ತ್ರಗಳು, ಅಸ್ತ್ರಗಳು, ಅಂತಃಪುರ, ಅವರ ಸ್ಥೂಲದಲ್ಲಿನ ವೈಶಿಷ್ಟ್ಯಪೂರ್ಣ ಲೋಕಗಳು, ಬ್ರಹ್ಮಾಂಡದ ಸಗುಣ ಲೋಕಗಳ ಕೆಳಗಿನ ಸಪ್ತಪಾತಾಳಗಳ ವರೆಗಿನ ಲೋಕಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವಗಳ ನಿರ್ಮಿತಿಯಾಯಿತು (ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ, ಸೂಕ್ಷ್ಮತಮ ಮತ್ತು ಸೂಕ್ಷ್ಮಾತಿಸೂಕ್ಷ್ಮ ಈ ರೀತಿ ಏರಿಕೆಯ ಕ್ರಮದಲ್ಲಿ, ಹೆಚ್ಚೆಚ್ಚು ಸೂಕ್ಷ್ಮ ಹಂತಗಳಿವೆ.) - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೧.೩.೨೦೦೫, ರಾತ್ರಿ ೯.೫೮)

ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ
ಉಚ್ಚದೇವತೆಗಳು ಯಾವಾಗಲೂ ನಿರ್ಗುಣದಲ್ಲಿರುವುದರಿಂದ, ಅಂದರೆ ದೇಹಧಾರಣೆ ಮಾಡಿ ಮಾನವರಂತೆ ಕಾರ್ಯ ಮಾಡದಿರುವುದರಿಂದ ಅವರೆಲ್ಲರೂ ಏಕರೂಪವಾಗಿಯೇ ಇರುತ್ತಾರೆ. ಸಗುಣದಲ್ಲಿ ಭಕ್ತನಿಗೆ ದರ್ಶನ ನೀಡಲು ಅಥವಾ ವೈಶಿಷ್ಟ್ಯಪೂರ್ಣ ಕಾರ್ಯಕ್ಕಾಗಿ ಅವರು ಒಂದು ಕಾಲಮಿತಿಯವರೆಗೆ ದೇಹವನ್ನು ಧರಿಸುತ್ತಾರೆ. ಆದರೂ ಅವರಲ್ಲಿ ಪತಿ-ಪತ್ನಿ ಎಂಬಂತಹ ಸಂಬಂಧಗಳಿರುವುದಿಲ್ಲ. ಎಲ್ಲ ಸಂಬಂಧಗಳು ಜೀವ ಮತ್ತು ಜೀವಾತ್ಮ ದಶೆಯಲ್ಲಿರುತ್ತವೆ. ದೇವತೆಗಳು ದೇಹವನ್ನು ಧರಿಸಿದರೂ ಅವರು ಶಿವ ಮತ್ತು ಶಿವಾತ್ಮ ದಶೆಯಲ್ಲಿಯೇ ಇರುತ್ತಾರೆ. ಅದುದರಿಂದ ಮಾನವರು ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ, ಹಾಗೆಯೇ ರಾಧಾ-ಕೃಷ್ಣರ ಬಗ್ಗೆ ತಪ್ಪು ತಿಳುವಳಿಕೆಯನ್ನು ಇಟ್ಟುಕೊಳ್ಳುವುದು ವ್ಯರ್ಥವಾಗಿದೆ. ಬ್ರಹ್ಮದೇವ ಮತ್ತು ಶ್ರೀ ಸರಸ್ವತಿದೇವಿ ಇವರು ಪರಬ್ರಹ್ಮ ಮತ್ತು ಬ್ರಹ್ಮ ಇವರ ಏಕರೂಪತೆಯನ್ನು ದರ್ಶಿಸಿದರೆ, ಶ್ರೀಕೃಷ್ಣ ಮತ್ತು ರಾಧೆ ಇವರು ಪರಮಾತ್ಮ ಮತ್ತು ಆತ್ಮ ಇವುಗಳಲ್ಲಿರುವ ಏಕರೂಪತೆಯನ್ನು ದರ್ಶಿಸುತ್ತಾರೆ.

ಶ್ರೀ ಸರಸ್ವತಿದೇವಿಗೆ ಬ್ರಹ್ಮನ ಶಕ್ತಿಯೆಂದು ನಂಬುವುದರ ಕಾರಣ: ಮಹಾಸರಸ್ವತಿದೇವಿ ಮತ್ತು ಶ್ರೀ ಸರಸ್ವತಿದೇವಿ ಇಬ್ಬರೂ ಅನುಕ್ರಮವಾಗಿ ನಿರ್ಗುಣ ಮತ್ತು ಸಗುಣ ಈ ಎರಡೂ ಸ್ತರಗಳಲ್ಲಿ ಬ್ರಹ್ಮನ ಶಕ್ತಿಯಾಗಿ ಬ್ರಹ್ಮಾಂಡದ ನಿರ್ಮಿತಿಯಲ್ಲಿ ಬ್ರಹ್ಮದೇವನಿಗೆ ಸಹಾಯ ಮಾಡಿದ್ದಾರೆ. ಶ್ರೀಸರಸ್ವತಿದೇವಿ ಅಂದರೆ ಬ್ರಹ್ಮನ ನಿರ್ಗುಣ ಅಥವಾ ಸಗುಣ ಸ್ತರದಲ್ಲಿ ಕಾರ್ಯನಿರತವಾಗುವ ಶಕ್ತಿಯಾಗಿದೆ. ‘ಬ್ರಹ್ಮನ ಶಕ್ತಿಯು ಅವರೊಂದಿಗೆ ಏಕರೂಪವೇ ಆಗಿರುತ್ತದೆ. ಆವಶ್ಯಕತೆಗನುಸಾರ ಅದು ಕಾರ್ಯನಿರತವಾಗುತ್ತದೆ ಎಂಬುದು ಮಾನವರಿಗೆ ತಿಳಿಯಬೇಕೆಂದು ‘ಶ್ರೀ ಸರಸ್ವತಿದೇವಿಯು ಬ್ರಹ್ಮನ ಶಕ್ತಿಯಾಗಿದ್ದಾಳೆ’, ಎಂದು ಹೇಳಲಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ಸರಸ್ವತಿ')

ದತ್ತಾತ್ರೇಯ - ಶ್ರೀ ಗುರುದೇವ ದತ್ತ


ಅರ್ಥ
ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.

ಇತರ ಕೆಲವು ಹೆಸರುಗಳು
ಅವಧೂತ
೧. ‘ಅವಧೂತ ಚಿಂತನ ಶ್ರೀ ಗುರುದೇವ ದತ್ತ|’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ - ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?

ಪೂಜೆಯಲ್ಲಿ ಯಾವ ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವು ಆ ದೇವತೆಗೆ ಇಷ್ಟವಾಗಿದೆ ಎಂದು ಹೇಳುತ್ತಾರೆ. ಉದಾ. ಗಣಪತಿಗೆ ಕೆಂಪು ಹೂವು, ಶಿವನಿಗೆ ಬಿಲ್ವಪತ್ರೆ ಮತ್ತು ವಿಷ್ಣುವಿಗೆ ತುಳಸಿ. ಪ್ರತ್ಯಕ್ಷದಲ್ಲಿ ಶಿವ, ವಿಷ್ಣು, ಗಣಪತಿ ಇಂತಹ ಉಚ್ಚದೇವತೆಗಳಿಗೆ ಯಾವುದಾದರೊಂದು ವಸ್ತುವಿನ ಬಗ್ಗೆ ಇಷ್ಟವಿದೆ ಅಥವಾ ಇಷ್ಟವಿಲ್ಲದಿರುವುದು ಎಂದು ಇರುವುದಿಲ್ಲ. ವಿಶಿಷ್ಟ ವಸ್ತುವನ್ನು ವಿಶಿಷ್ಟ ದೇವತೆಗೆ ಅರ್ಪಿಸುವ ಕಾರಣವು ಮುಂದಿನಂತಿದೆ.


ಮೂರ್ತಿಯಲ್ಲಿ ಚೈತನ್ಯ ನಿರ್ಮಾಣವಾಗಬೇಕು ಹಾಗೂ ಅದು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ನಾವು ಪೂಜೆಯನ್ನು ಮಾಡುತ್ತೇವೆ. ಚೈತನ್ಯವನ್ನು ನಿರ್ಮಾಣ ಮಾಡಲು ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವಿನಲ್ಲಿ ಆ ದೇವತೆಯ ಮಹಾಲೋಕದವರೆಗೂ ಹರಡಿರುವ ಪವಿತ್ರಕಗಳನ್ನು (ಆ ದೇವತೆಯ ಸೂಕ್ಷ್ಮಾತಿ ಸೂಕ್ಷ್ಮಕಣ) ಆಕರ್ಷಿಸುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುತ್ತದೆ. ಕೆಂಪು ಹೂವುಗಳಲ್ಲಿ ಗಣಪತಿಯ, ಬಿಲ್ವಪತ್ರೆಯಲ್ಲಿ ಶಿವನ, ತುಳಸಿಯಲ್ಲಿ ವಿಷ್ಣುವಿನ ಮತ್ತು ಎಣ್ಣೆ, ಸಿಂಧೂರ ಹಾಗೂ ಎಕ್ಕದ ಎಲೆಗಳಲ್ಲಿ ಮಾರುತಿಯ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿರುತ್ತದೆ; ಆದುದರಿಂದ ಮಾರುತಿಗೆ ಎಣ್ಣೆ, ಸಿಂಧೂರ ಮತ್ತು ಎಕ್ಕದ ಎಲೆಗಳನ್ನು ಅರ್ಪಿಸುತ್ತಾರೆ.

(ಆಧಾರ: ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ)

ಸಂಬಂಧಿತ ಲೇಖನಗಳು
ಮಾರುತಿ
ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?

ತೆಂಗಿನಕಾಯಿಯು ಒಳ್ಳೆಯ ಹಾಗೂ ಕೆಟ್ಟ ಹೀಗೆ ಎರಡೂ ತರಹದ ಲಹರಿಗಳನ್ನು ಆಕರ್ಷಣೆ ಮತ್ತು ಪ್ರಕ್ಷೇಪಣೆ ಮಾಡುತ್ತದೆ. ತೆಂಗಿನಕಾಯಿಯನ್ನು ಅರ್ಪಿಸುವಾಗ ಅದರ ಜುಟ್ಟನ್ನು ಮಾರುತಿಯ ಕಡೆಗೆ ತಿರುಗಿಸಿ, ಮಾರುತಿಯ ಸಾತ್ತ್ವಿಕ ಸ್ಪಂದನಗಳು ತೆಂಗಿನಕಾಯಿಯಲ್ಲಿ ಬರುವಂತೆ ಪ್ರಾರ್ಥಿಸಬೇಕು. ಅನಂತರ ತೆಂಗಿನಕಾಯಿಯನ್ನು ಒಡೆದು ಅದರ ಅರ್ಧಭಾಗವನ್ನು ನಮ್ಮಲ್ಲಿಟ್ಟುಕೊಂಡು ಉಳಿದ ಅರ್ಧ ಭಾಗವನ್ನು ಅಲ್ಲಿನ ಸ್ಥಾನದೇವತೆಗೆ ಅರ್ಪಿಸಬೇಕು. ಇದರಿಂದ ಸ್ಥಾನದೇವತೆಯ ಮಾಧ್ಯಮದಿಂದ ದೇವಸ್ಥಾನದ ಪರಿಸರದಲ್ಲಿರುವ ತೊಂದರೆದಾಯಕ ಶಕ್ತಿ ಮತ್ತು ಕನಿಷ್ಟ ಭೂತಗಳಿಗೆ ಅನ್ನವು ದೊರಕಿ ಅವುಗಳೂ ಸಂತುಷ್ಟವಾಗುತ್ತವೆ. ನಂತರ ನಮ್ಮ ಕಡೆಯಿರುವ ತೆಂಗಿನಕಾಯಿಯ ಅರ್ಧಭಾಗವನ್ನು ನಮಗಾಗಿ ಇಟ್ಟುಕೊಳ್ಳಬೇಕು. ಇದರಿಂದ ದೇವತೆಯ ತತ್ತ್ವದ ಅಧಿಕಾಧಿಕ ಲಾಭ ಪಡೆದುಕೊಳ್ಳಬೇಕು.

(ಆಧಾರ: ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ)

ಸಂಬಂಧಿತ ಲೇಖನಗಳು
ಮಾರುತಿ
ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ

ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?

ಶನಿಕಾಟವಿದ್ದಾಗ ತೊಂದರೆಗಳ ನಿವಾರಣೆಗಾಗಿ ಮಾರುತಿಯನ್ನು ಪೂಜಿಸುತ್ತಾರೆ. ಈ ಪೂಜಾವಿಧಿಯು ಮುಂದಿನಂತಿದೆ - ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಹದಿನಾಲ್ಕು ಕಪ್ಪು ಉದ್ದಿನ ಕಾಳುಗಳನ್ನು ಹಾಕಿ ಅದರೊಳಗೆ ತಮ್ಮ ಪ್ರತಿಬಿಂಬವನ್ನು ನೋಡಬೇಕು. ನಂತರ ಆ ಎಣ್ಣೆಯನ್ನು ಮಾರುತಿಗೆ ಅರ್ಪಿಸಬೇಕು. ಕಾಯಿಲೆಯಿರುವ ವ್ಯಕ್ತಿಯು ಮಾರುತಿಯ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಇದೇ ರೀತಿ ಮಾಡಬಹುದು. ಎಣ್ಣೆಯಲ್ಲಿ ಮುಖದ ಪ್ರತಿಬಿಂಬವು ಬಿದ್ದಾಗ ಕೆಟ್ಟಶಕ್ತಿಯ ಪ್ರತಿಬಿಂಬವೂ ಬೀಳುತ್ತದೆ. ಈ ಎಣ್ಣೆಯನ್ನು ಮಾರುತಿಗೆ ಅರ್ಪಿಸಿದಾಗ ಅದರಲ್ಲಿದ್ದ ಕೆಟ್ಟಶಕ್ತಿಯು ನಾಶವಾಗುತ್ತದೆ.

ನಿಜವಾದ ಗಾಣಿಗನು ಶನಿವಾರ ಎಣ್ಣೆಯನ್ನು ಮಾರುವುದಿಲ್ಲ; ಏಕೆಂದರೆ ಯಾವ ಶಕ್ತಿಯ ತೊಂದರೆಯಿಂದ ಬಿಡುಗಡೆ ಹೊಂದಲು ವ್ಯಕ್ತಿಯು ಮಾರುತಿಗೆ ಎಣ್ಣೆಯನ್ನು ಅರ್ಪಿಸುತ್ತಾನೋ, ಆ ಶಕ್ತಿಯು ಆ ಎಣ್ಣೆಯನ್ನು ಮಾರುವವನಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ; ಆದುದರಿಂದ ಮಾರುತಿ ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.
(ಹಲವು ಉಪಾಸನೆಗಳಲ್ಲಿ ಒಂದು ಉಪಾಸನೆಯನ್ನು ಕೊಡಲಾಗಿದೆ.)

(ಆಧಾರ: ಸನಾತನ ಸಂಸ್ಥೆಯು ನಿರ್ಮಿಸಿದ ಕಿರುಗ್ರಂಥ ‘ಮಾರುತಿ)

ಸಂಬಂಧಿತ ಲೇಖನಗಳು
ಮಾರುತಿ
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
ದೃಷ್ಟಿ ತಗಲುವುದು ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ

ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಮಾರುತಿಗೆ ಹರಕೆ ಹೊತ್ತರೆ ನಿಶ್ಚಿತವಾಗಿಯೂ ಫಲಪ್ರಾಪ್ತಿಯಾಗುತ್ತದೆ ಎಂಬ ಶ್ರದ್ಧೆ ಇರುವುದರಿಂದ ಬಹುಮಂದಿ ಸ್ತ್ರೀ-ಪುರುಷರು ವ್ರತ ಅಥವಾ ಹರಕೆಯೆಂದು ಮಾರುತಿಗೆ ಪ್ರತಿದಿನ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಮದುವೆಯಾಗದಿರುವ ಕುಮಾರಿಯರು ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಬೇಕೆಂದು ಹೇಳುತ್ತಾರೆ; ಕೆಲವರಿಗೆ ಇದರ ಬಗ್ಗೆ ಆಶ್ಚರ್ಯವೆನಿಸುತ್ತದೆ. ಕುಮಾರಿಯರ ಮನಸ್ಸಿನಲ್ಲಿ ‘ಬಲಿಷ್ಠ ಪುರುಷನು ಪತಿಯಾಗಬೇಕು’ ಎನ್ನುವ ಇಚ್ಛೆಯಿರುತ್ತದೆ ಅದಕ್ಕಾಗಿ ಅವರು ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ ಎನ್ನುವ ಮನಃಶಾಸ್ತ್ರಾಧಾರಿತ ತಪ್ಪು ಸ್ಪಷ್ಟೀಕರಣವನ್ನು ಕೆಲವರು ನೀಡುತ್ತಾರೆ; ಆದರೆ ಅದರ ನಿಜವಾದ ಕಾರಣಗಳು ಮುಂದಿನಂತಿವೆ.

೧. ಮದುವೆಯಾಗದೇ ಇರುವವರಲ್ಲಿ ಸುಮಾರು ಶೇ. ೩೦ ರಷ್ಟು ವ್ಯಕ್ತಿಗಳಿಗೆ ಭೂತ, ಮಾಟ ಮುಂತಾದ ಕೆಟ್ಟ ಶಕ್ತಿಗಳ ತೊಂದರೆಗಳಿರುವುದರಿಂದ ಮದುವೆಯಾಗುವುದಿಲ್ಲ. ಇಂತಹ ತೊಂದರೆಗಳು ಮಾರುತಿಯ ಉಪಾಸನೆಯಿಂದ ದೂರವಾಗುತ್ತವೆ ಮತ್ತು ಮದುವೆಯಾಗಲು ಸುಲಭವಾಗುತ್ತದೆ. 

(ಶೇ. ೧೦ ರಷ್ಟು ವ್ಯಕ್ತಿಗಳ ಸಂದರ್ಭದಲ್ಲಿ ಭಾವಿ ವಧುವಿನಲ್ಲಿ ಅಥವಾ ವರನಲ್ಲಿ ಪರಸ್ಪರರ ಬಗ್ಗೆ ಪೂರೈಸಲಾಗದಂತಹ ಅಪೇಕ್ಷೆಗಳಿರುವುದರಿಂದ ಮದುವೆ ಆಗುವುದಿಲ್ಲ. ಇಂತಹ ಅಪೇಕ್ಷೆಗಳನ್ನು ಕಡಿಮೆ ಮಾಡಿದರೆ ಮದುವೆಯಾಗುತ್ತದೆ. ಶೇ. ೫೦ ರಷ್ಟು ವ್ಯಕ್ತಿಗಳ ಮದುವೆಯು ಪ್ರಾರಬ್ಧದಿಂದ ಆಗುವುದಿಲ್ಲ. ಪ್ರಾರಬ್ಧ ಮಂದ ಅಥವಾ ಮಧ್ಯಮವಾಗಿದ್ದರೆ ಕುಲದೇವತೆಯ ಉಪಾಸನೆಯಿಂದ ಅಡಚಣೆಗಳು ದೂರವಾಗಿ ಮದುವೆಯಾಗುವ ಸಾಧ್ಯತೆ ಇರುತ್ತದೆ. ಪ್ರಾರಬ್ಧವು ತೀವ್ರವಾಗಿದ್ದಲ್ಲಿ ಸಂತರ ಕೃಪೆ ಇದ್ದರೆ ಮಾತ್ರ ಮದುವೆಯಾಗುತ್ತದೆ. ಉಳಿದ ಶೇ. ೧೦ ರಷ್ಟು ವ್ಯಕ್ತಿಗಳ ಮದುವೆಯಾಗದಿರಲು ಇತರ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಅವುಗಳಿಗಾಗಿ ಆಯಾ ಕಾರಣಗಳಿಗನುಸಾರ ಪರಿಹಾರೋಪಾಯ ಮಾಡಬೇಕಾಗುತ್ತದೆ.)

೨. ಅತ್ಯುಚ್ಚ ಮಟ್ಟದ ದೇವತೆಗಳಲ್ಲಿ ಬ್ರಹ್ಮಚಾರಿ ಅಥವಾ ವಿವಾಹಿತ ಹೀಗೆ ವ್ಯತ್ಯಾಸವಿರುವುದಿಲ್ಲ. ಎಲ್ಲರ ಜನ್ಮವೂ ಸಂಕಲ್ಪದಿಂದಲೇ, ಅಂದರೆ ‘ಅಯೋನಿ ಸಂಭವ’ವಾಗಿರುವುದರಿಂದ ಅವರಲ್ಲಿ ಸ್ತ್ರೀ ಅಥವಾ ಪುರುಷ ಎನ್ನುವ ಲಿಂಗಭೇದವಿರುವುದಿಲ್ಲ. ಮನುಷ್ಯರು ಈ ರೀತಿಯ ಭೇದಗಳನ್ನು ಮಾಡಿರುತ್ತಾರೆ. ಸ್ತ್ರೀ ದೇವತೆ ಎಂದರೆ ದೇವರ ಶಕ್ತಿಯೇ ಆಗಿದೆ. 

ಮಾರುತಿ


ಜನ್ಮದ ಇತಿಹಾಸ
ರಾಜಾ ದಶರಥನು ಪುತ್ರಪ್ರಾಪ್ತಿಗಾಗಿ ‘ಪುತ್ರಕಾಮೇಷ್ಟಿ ಯಜ್ಞ’ವನ್ನು ಮಾಡಿದನು. ಆಗ ಯಜ್ಞದಿಂದ ಅಗ್ನಿದೇವನು ಪ್ರತ್ಯಕ್ಷನಾಗಿ ದಶರಥನ ರಾಣಿಯರಿಗಾಗಿ ಪಾಯಸ (ಖೀರು, ಯಜ್ಞದಲ್ಲಿನ ಉಳಿದ ಪ್ರಸಾದ) ವನ್ನು ನೀಡಿದನು. ದಶರಥನ ರಾಣಿಯರಂತೆಯೇ ತಪಸ್ಸನ್ನು ಮಾಡುವ ಅಂಜನೀಗೂ ಪಾಯಸವು ದೊರಕಿತ್ತು ಮತ್ತು ಅದರಿಂದಲೇ ಮಾರುತಿಯ ಜನ್ಮವಾಗಿತ್ತು. ಆ ದಿನ ಚೈತ್ರ ಪೌರ್ಣಿಮೆಯಾಗಿತ್ತು. ಈ ದಿನವನ್ನು ‘ಹನುಮಾನ್ ಜಯಂತಿ’ ಎಂದು ಆಚರಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ (ಕಿಷ್ಕಿಂಧಾಕಾಂಡ, ಅಧ್ಯಾಯ ೬೬)

ಹನುಮಂತ ಜಯಂತಿ
ತಿಥಿ: ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.

ಮಹತ್ವ: ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ‘ಶ್ರೀ ಹನುಮತೇ ನಮಃ|’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ: ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ.

ಕಾರ್ಯ ಮತ್ತು ವೈಶಿಷ್ಟ್ಯಗಳು
ಸರ್ವಶಕ್ತಿವಂತ: ಹುಟ್ಟಿದ ಕೂಡಲೇ ಮಾರುತಿಯು ಸೂರ್ಯನನ್ನು ನುಂಗಲು ಹಾರಿದನು ಎಂಬ ಕಥೆಯಿದೆ, ಇದರಿಂದ ವಾಯುಪುತ್ರ (ಅಂದರೆ ವಾಯುತತ್ತ್ವದಿಂದ ನಿರ್ಮಾಣವಾದ) ಮಾರುತಿಯು ಸೂರ್ಯನನ್ನು (ತೇಜತತ್ತ್ವ ವನ್ನು) ಜಯಿಸುವವನಾಗಿದ್ದನು ಎನ್ನುವುದು ತಿಳಿಯುತ್ತದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳಲ್ಲಿ ವಾಯುತತ್ತ್ವವು ತೇಜತತ್ತ್ವಕ್ಕಿಂತಲೂ ಹೆಚ್ಚು ಸೂಕ್ಷ್ಮ, ಅಂದರೆ ಹೆಚ್ಚು ಶಕ್ತಿಯುಳ್ಳದ್ದಾಗಿದೆ.

ಭೂತ ಮತ್ತು ಮಾರುತಿ: ಎಲ್ಲ ದೇವತೆಗಳಲ್ಲಿ ಕೇವಲ ಮಾರುತಿಗೆ ಮಾತ್ರ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದಿಲ್ಲ. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರು, ಆದರೆ ಅವರಿಗೆ ಮಾರುತಿಗೆ ತೊಂದರೆ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾರುತಿಗೆ ‘ಭೂತಗಳ ಸ್ವಾಮಿ’ ಎನ್ನುತ್ತಾರೆ. ಯಾರನ್ನಾದರೂ ಭೂತವು ಹಿಡಿದಿದ್ದರೆ, ಆ ವ್ಯಕ್ತಿಯನ್ನು ಮಾರುತಿಯ ದೇವಸ್ಥಾನಕ್ಕೆ ಒಯ್ಯುತ್ತಾರೆ ಅಥವಾ ಮಾರುತಿ ಸ್ತೋತ್ರವನ್ನು ಪಠಿಸುತ್ತಾರೆ. ಇದರಿಂದ ಅವನ ತೊಂದರೆಗಳು ಕಡಿಮೆಯಾಗದಿದ್ದರೆ ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸಿ ಮಾರುತಿಯ ದೇವಸ್ಥಾನದಲ್ಲಿ ಒಡೆಯುತ್ತಾರೆ. ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸುವುದರಿಂದ ಅವನಲ್ಲಿದ್ದ ಕೆಟ್ಟ ಶಕ್ತಿಯು ತೆಂಗಿನಕಾಯಿಯಲ್ಲಿ ಪ್ರವೇಶಿಸುತ್ತದೆ ಮತ್ತು ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದರಿಂದ ಅದರಲ್ಲಿರುವ ಕೆಟ್ಟ ಶಕ್ತಿಯು ಮಾರುತಿಯ ಸಾಮರ್ಥ್ಯದಿಂದ ನಾಶವಾಗುತ್ತದೆ. ನಂತರ ಆ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುತ್ತಾರೆ.

ಮಹಾಪರಾಕ್ರಮಿ: ರಾಮ-ರಾವಣರ ಯುದ್ಧದಲ್ಲಿ ಬ್ರಹ್ಮಾಸ್ತ್ರದಿಂದ ರಾಮ, ಲಕ್ಷ್ಮಣ, ಸುಗ್ರೀವ ಇತ್ಯಾದಿ ವೀರರು ಮೂರ್ಛೆ ಹೋದಾಗ ಜಾಂಬವಂತನು ಹನುಮಂತನ ಪರಾಕ್ರಮದ ಬಗ್ಗೆ ಹೀಗೆ ವರ್ಣನೆ ಮಾಡಿದ್ದನು - ವಾನರಶ್ರೇಷ್ಠ ಹನುಮಂತನು ಜೀವಂತವಾಗಿದ್ದಾಗ ಎಲ್ಲ ಸೈನ್ಯವು ಮರಣ ಹೊಂದಿದರೂ ಅವರು ಮರಣ ಹೊಂದದಂತೆ ಆಗಿದೆ; ಆದರೆ ಹನುಮಂತನು ಪ್ರಾಣತ್ಯಾಗ ಮಾಡಿದರೆ ನಾವು ಜೀವಂತವಾಗಿದ್ದರೂ ಮೃತರಾದಂತೆಯೇ ಆಗಿದೆ. ಹನುಮಂತನು ಜಂಬು-ಮಾಲಿ, ಅಕ್ಷ, ಧೂಮ್ರಾಕ್ಷ, ನಿಕುಂಭ ಇತ್ಯಾದಿ ಬಲಾಢ್ಯ ವೀರರನ್ನು ನಾಶ ಮಾಡಿದನು. ಅವನು ರಾವಣನನ್ನೂ ಮೂರ್ಛಿತಗೊಳಿಸಿದನು. ಸಮುದ್ರ ಉಡ್ಡಾಣ, ಲಂಕೆಯ ದಹನ, ದ್ರೋಣಗಿರಿ ಪರ್ವತವನ್ನು ತರುವುದು ಇತ್ಯಾದಿ ಘಟನೆಗಳು ಹನುಮಂತನ ಶೌರ್ಯದ ಪ್ರತೀಕವಾಗಿವೆ.

ಜಿತೇಂದ್ರಿಯ: ಸೀತೆಯನ್ನು ಶೋಧಿಸಲು ರಾವಣನ ಅಂತಃಪುರದೊಳಗೆ ಪ್ರವೇಶಿಸಿದ ಮಾರುತಿಯ ಮನಃಸ್ಥಿತಿಯು ಅವನ ಉಚ್ಚಚಾರಿತ್ರ್ಯದ ನಿದರ್ಶಕವಾಗಿದೆ. ಅವನು ಸ್ವತಃ ಹೇಳುತ್ತಾನೆ, ‘ನಿಶ್ಚಿಂತೆಯಿಂದ ಬಿದ್ದಿರುವ ಈ ಎಲ್ಲ ರಾವಣನ ಸ್ತ್ರೀಯರನ್ನು ನಾನು ಹೀಗೆ ನೋಡಿರುವುದು ನಿಜ, ಆದರೆ ಅವರನ್ನು ನೋಡಿ ನನ್ನ ಮನಸ್ಸಿನಲ್ಲಿ ವಿಕಾರವುಂಟಾಗಲಿಲ್ಲ’ (ಶ್ರೀವಾಲ್ಮೀಕಿರಾಮಾಯಣ, ಸುಂದರಕಾಂಡ, ಅಧ್ಯಾಯ ೧೧, ಶ್ಲೋಕ ೪೨, ೪೩) ಅನೇಕ ಸಂತರೂ ಈ ಜಿತೇಂದ್ರಿಯ ಮಾರುತಿಯ ಪೂಜೆಯನ್ನು ಮಾಡಿ ಅವನ ಆದರ್ಶವನ್ನು ಸಮಾಜದ ಮುಂದೆ ಇಟ್ಟಿದ್ದಾರೆ.

ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ : ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಹನುಮಂತನು ಧರಿಸಿರುವ ಜನಿವಾರವು ಬ್ರಾಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ. ಹನುಮಂತನಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಾಶ ಮಾಡುತ್ತಿದ್ದರು.

ಉಪಾಸನೆ
ಉದ್ದೇಶ: ಮಾರುತಿಯಲ್ಲಿನ ಪ್ರಕಟ ಶಕ್ತಿಯು (ಶೇ.೭೨) ಇತರ ದೇವತೆಗಳ ಪ್ರಕಟ ಶಕ್ತಿಯ (ಶೇ.೧೦) ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿರುವುದರಿಂದ ಮುಂದಿನ ಕಾರಣಗಳಿಗಾಗಿ ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ.

ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಉಪಾಸನೆ: ಸಮಾಜದಲ್ಲಿನ ಶೇ.೧೦೦ರಷ್ಟು ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವು ಬಾರಿ ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ. ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ಅಡಚಣೆಗಳನ್ನೂ ನಿರ್ಮಿಸುತ್ತವೆ; ಆದರೆ ದುರ್ದೈವದಿಂದ ಬಹುತೇಕ ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಸಮಾಜದಲ್ಲಿನ ಕೆಲವು ಜನರು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಂತ್ರಿಕ ಅಥವಾ ಭಗತರ ಕಡೆಗೆ ಹೋಗುತ್ತಾರೆ. ಆದರೆ ಅವರು ಮಾಡಿದ ಉಪಾಯವು ಹೆಚ್ಚಿನಾಂಶ ತಾತ್ಕಾಲಿಕವಾಗಿರುತ್ತದೆ. ಕೆಲವು ಸಮಯದ ನಂತರ ಕೆಟ್ಟ ಶಕ್ತಿಗಳು ಆ ವ್ಯಕ್ತಿಗೆ ಪುನಃ ತೊಂದರೆಗಳನ್ನು ಕೊಡಬಹುದು. ಹೆಚ್ಚಿನಾಂಶ ಮಾಂತ್ರಿಕ ಮತ್ತು ಭಗತರು ಮೋಸಗಾರರಾಗಿರುತ್ತಾರೆ. ಅವರು ಜನರನ್ನು ಮೋಸಗೊಳಿಸುತ್ತಾರೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಕಪಟ ಮಾಂತ್ರಿಕ ಮುಂತಾದವರ ಕೈಯಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮತ್ತು ಮುಗಿಯದ ಕರ್ಮಕಾಂಡಗಳನ್ನು ಮಾಡುವುದಕ್ಕಿಂತ ಸಾಧನೆ ಮಾಡುವುದೇ ಪ್ರಭಾವಿ ಉಪಾಯವಾಗಿದೆ.
ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯನ್ನು ಮಾಡುವ ದೇವತೆಗಳಲ್ಲಿ ಮಾರುತಿಯು ಒಬ್ಬನು. ಮಾರುತಿಯ ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಯಿಂದ ಶಾಶ್ವತವಾಗಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಸನಾತನ ಸಂಸ್ಥೆಯ ಸತ್ಸಂಗಗಳಲ್ಲಿ ಹೇಳಲಾಗುತ್ತದೆ.

ರೋಗನಿವಾರಣೆ: ರೋಗಿ ವ್ಯಕ್ತಿಗಳಿಗೆ ಒಳ್ಳೆಯದಾಗಲು ಅವರನ್ನು ಹನುಮಂತನ ದೇವಸ್ಥಾನಕ್ಕೆ ಕರೆದೊಯ್ಯುವ ಪದ್ಧತಿಯಿದೆ. ರೋಗಗಳಿಂದ ಮುಕ್ತರಾಗಲು ವೀರಹನುಮಂತನ ಮಂತ್ರವನ್ನೂ ಪಠಿಸುತ್ತಾರೆ.

ಮಾರುತಿಯ ಪೂಜೆ ಅಥವಾ ಉಪಾಸನೆಯ ಮೊದಲು ಬಿಡಿಸಬೇಕಾದ ರಂಗೋಲಿ
ಈ ರಂಗೋಲಿಯು ಮಾರುತಿ ತತ್ತ್ವವನ್ನು ಆಕರ್ಷಿಸುತ್ತದೆ ಮತ್ತು ಪ್ರಕ್ಷೇಪಿಸುತ್ತದೆ


ಮಧ್ಯದ ಬಿಂದುವಿನಿಂದ ಅಷ್ಟದಿಕ್ಕುಗಳಲ್ಲಿ ೪ ಚುಕ್ಕಿಗಳನ್ನು ಹಾಕಬೇಕು.

ಮಾರುತಿ ಗಾಯತ್ರಿ
ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|
ತನ್ನೋ ವೀರಃ ಪ್ರಚೋದಯಾತ್||
ಅರ್ಥ: ನಾವು ಅಂಜನೀಪುತ್ರ ಮಾರುತಿಯನ್ನು ಅರಿತಿದ್ದೇವೆ. ವಾಯುಪುತ್ರ ಮಾರುತಿಯ ಧ್ಯಾನವನ್ನು ಮಾಡುತ್ತೇವೆ. ಆ ವೀರ ಮಾರುತಿಯು ನಮ್ಮ ಬುದ್ಧಿಗೆ ಸತ್ಪ್ರೇರಣೆ ಕೊಡಲಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ’ ಓದಿರಿ.)

ಮಾರುತಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು


  • ಹೇ ಮಾರುತಿ, ನೀನು ಹೇಗೆ ಶ್ರೀರಾಮಚಂದ್ರನ ದಾಸ್ಯಭಕ್ತಿಯನ್ನು ಮಾಡಿದೆಯೋ, ಹಾಗೆಯೇ ನನಗೂ ಭಕ್ತಿಯನ್ನು ಮಾಡಲು ಕಲಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!
  • ಹೇ ಮಾರುತಿ, ಧರ್ಮರಕ್ಷಣೆಗಾಗಿ ನೀನು ನನಗೆ ಭಕ್ತಿ ಮತ್ತು ಶಕ್ತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!
  • ಹೇ ಮಾರುತಿ, ಹೇಗೆ ನೀನು ರಾಮನಾಮದ ಬಲದಿಂದ ಅಧರ್ಮಿ ಅಸುರರನ್ನು ನಾಶ ಮಾಡಿದೆ, ಹಾಗೆ ಈಗ ನಡೆಯುತ್ತಿರುವ ಧರ್ಮ-ಅಧರ್ಮದ ಹೋರಾಟದಲ್ಲಿ ನಮಗೆ ‘ಸಾಧನೆ’ಯೆಂದು ರಾಷ್ಟ್ರರಕ್ಷಣೆ, ಧರ್ಮರಕ್ಷಣೆ ಇವುಗಳ ಕಾರ್ಯವನ್ನು ಮಾಡಲು ಆಶೀರ್ವಾದ ಮತ್ತು ಬಲವನ್ನು ಕೊಡು!

(ಪ್ರಾರ್ಥನೆಯ ಬಗೆಗಿನ ಸವಿಸ್ತಾರ ವಿವೇಚನೆ ಮತ್ತು ವಿವಿಧ ಪ್ರಸಂಗಗಳಲ್ಲಿ ಮಾಡಬೇಕಾದ ಪ್ರಾರ್ಥನೆಗಳನ್ನು ಸನಾತನ ಸಂಸ್ಥೆಯ ‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’ ಈ ಕಿರುಗ್ರಂಥದಲ್ಲಿ ಕೊಡಲಾಗಿದೆ.)

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ’ ಓದಿರಿ.)

ಸಂಬಂಧಿತ ವಿಷಯಗಳು
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಪಂಚಮುಖಿ ಮಾರುತಿ


ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದ ಕಥಾಸಾರಾಂಶ:

ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು. ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ. ಅದರಿಂದಾಗಿ ಈ ಗಲಭೆಗಳು ಆದವು. ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಆಗ ಮಾರುತಿರಾಯನು ಅವರನ್ನು ಕೊಂದನು. ಅದರಿಂದ ಮಾರುತಿರಾಯನು ರಾಕ್ಷಸರ ಉದ್ಧಾರವನ್ನೇ ಮಾಡಿದನು. ನಂತರ ಪಾತಾಳದಲ್ಲಿ ಆ ರಾಕ್ಷಸರಿಗಿಂತ ಭಯಂಕರ ದೊಡ್ಡ ರಾಕ್ಷಸರು ನಿರ್ಮಾಣವಾದರು. ಈ ರಾಕ್ಷಸರು ಮಾರುತಿರಾಯನಿಂದ ಸಾಯುತ್ತಿರಲಿಲ್ಲ. ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು. (ಪ.ಪೂ.ಶ್ರೀಧರಸ್ವಾಮಿಯವರು ಇದರ ಹಿನ್ನೆಲೆಯಲ್ಲಿನ ಕಥೆಯನ್ನು ಪ.ಪೂ. ಭಗವಾನದಾಸ ಮಹಾರಾಜರಿಗೆ ಹೇಳಿದರು.) ಮಹಿರಾವಣನನ್ನು ವಧಿಸಲು ಮಾರುತಿ ಪಾತಾಳಕ್ಕೆ ಹೋದನು. ಅಲ್ಲಿನ ಐದು ದೀಪಗಳನ್ನು (ಐದು ರಾಕ್ಷಸರ) ಒಂದೇ ಸಮಯದಲ್ಲಿ ವಿನಾಶ ಮಾಡದೇ (ಅಂದರೆ ಆ ಐದು ದೀಪಗಳನ್ನು ಆರಿಸದೆ) ಮಹಿರಾವಣನ ಮರಣವಿಲ್ಲವೆಂದು ಹನುಮಂತನಿಗೆ ಅರಿವಾಯಿತು. ಅದರಿಂದಾಗಿ ಆ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಪರ್ಯಾಯವಿರಲಿಲ್ಲ. ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.

ಮಾರುತಿಯ ಪಂಚಮುಖಗಳು ಮತ್ತು ಅವುಗಳ ಕಾರ್ಯ
ಮಾರುತಿಯ ಐದು ಮುಖಗಳು ಬೇರೆ ಬೇರೆ ಶಕ್ತಿ ಮತ್ತು ಸಾಮರ್ಥ್ಯಗಳ ಪ್ರತೀಕಗಳಾಗಿವೆ. ಈ ಐದು ಮುಖಗಳು ಮತ್ತು ಅವುಗಳ ಕಾರ್ಯಗಳು ಮುಂದಿನಂತಿವೆ.

ಹನುಮಂತ: ಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.

ನರಸಿಂಹ: ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.

ಗರುಡ: ಇದು ಪಶ್ಚಿಮದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.

ವರಾಹ: ಇದು ಉತ್ತರದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.

ಹಯಗ್ರೀವ: ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.

ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.

ಸಂಬಂಧಿತ ವಿಷಯಗಳು
ಮಾರುತಿ
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಶ್ರೀಕೃಷ್ಣ ಜನ್ಮಾಷ್ಟಮಿ


ಆಚರಣೆ

ಹಿಂದೂಸ್ಥಾನದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ.

ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವ

ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರಸ್ಥಾನಗಳಾಗಿವೆ. ಇಲ್ಲಿ ಈ ಉತ್ಸವವನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಬೃಂದಾವನದಲ್ಲಿ ಡೋಲೋತ್ಸವವಾಗುತ್ತದೆ. ಅದು ನೋಡಲು ಆನಂದದಾಯಕವಾಗಿರುತ್ತದೆ. ಇತರ ಕ್ಷೇತ್ರಗಳ ಅನೇಕ ಸ್ಥಳಗಳಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿಯೇ ಗೋಕುಲ-ಬೃಂದಾವನದಂತೆ ಪ್ರತಿರೂಪ ಮಾಡಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತಾರೆ. ವೈಷ್ಣವ ಪಂಥೀಯರು ಈ ದಿನವನ್ನು ಅತೀವ ಭಕ್ತಿಭಾವದಿಂದ ಆಚರಿಸುತ್ತಾರೆ. ಅನೇಕ ವೈಷ್ಣವ ದೇವಾಲಯಗಳಲ್ಲಿ ದೀಪಾರಾಧನೆ, ಶೋಭಾಯಾತ್ರೆ, ಕೃಷ್ಣಲೀಲೆ, ಭಾಗವತ ಪಠಣ, ಕೀರ್ತನೆ, ಭಜನೆ, ನೃತ್ಯ-ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವು ಶ್ರಾವಣ ಕೃಷ್ಣ ಪಾಡ್ಯದಿಂದ ಶ್ರಾವಣ ಕೃಷ್ಣಾಷ್ಟಮಿಯವರೆಗೂ ನಡೆಯುತ್ತದೆ.

ಶ್ರೀಕೃಷ್ಣಜನ್ಮಾಷ್ಟಮಿ ವ್ರತ

ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನಗೊಳಿಸುತ್ತಾರೆ. ಈ ವ್ರತವು ಎಲ್ಲರೂ ಮಾಡುವಂತಹದ್ದಾಗಿದೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ- ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.

ಶ್ರೀಕೃಷ್ಣಜನ್ಮಾಷ್ಟಮಿಯ ವ್ರತಕ್ಕೆ ಸಂಬಂಧಿಸಿದ ಉಪವಾಸ

ಈ ದಿನ ದಿನವಿಡೀ ಉಪವಾಸವನ್ನು ಮಾಡಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.

ಶ್ರೀಕೃಷ್ಣಜನ್ಮಾಷ್ಟಮಿಯ ಪೂಜಾವಿಧಿ

ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ. ‘ಭಗವಾನ ಶ್ರೀಕೃಷ್ಣನ ಜನ್ಮವಾಗಿದೆ’ ಎಂಬ ಧಾರಣೆಯಿಂದ ಪೂಜೆಯನ್ನು ಮಾಡಬೇಕು.

ಪೂಜೆಯ ತಯಾರಿ

೧. ಪೂಜೆಗೆ ಮಣೆಯ ಮೇಲೆ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಇಡಿರಿ.
೨. ಅನಂತರ ಶ್ರೀಕೃಷ್ಣನ ಮೂರ್ತಿಗೆ ಚಂದನ ತಿಲಕವನ್ನು ಹಚ್ಚಿರಿ.
೩. ಅನಂತರ ಪುಷ್ಪವನ್ನು ಅರ್ಪಿಸಿರಿ.
೪. ಸಾಧ್ಯವಿದ್ದಲ್ಲಿ ಕೃಷ್ಣಕಮಲವನ್ನು ಅರ್ಪಿಸಿರಿ.
೫. ಈಗ ಶ್ರೀ ಕೃಷ್ಣನಿಗೆ ತುಳಸಿಯನ್ನು ಅರ್ಪಿಸಿರಿ.
೬. ಸಾಧ್ಯವಿದ್ದಲ್ಲಿ ತುಳಸಿಯ ಮಾಲೆಯನ್ನು ಅರ್ಪಿಸಿರಿ.
೭. ಈಗ ಊದುಬತ್ತಿಯನ್ನು ತೋರಿಸಿರಿ. ಎರಡು ಊದುಬತ್ತಿಗಳನ್ನು ತೆಗೆದುಕೊಂಡು ದಕ್ಷಿಣಾವರ್ತದಲ್ಲಿ ಮೂರು ಬಾರಿ ಸುತ್ತಿಸಿ.
೮. ಈಗ ದೀಪವನ್ನು ತೋರಿಸಿ.
೯. ಈಗ ಮೊಸರವಲಕ್ಕಿಯ ನೈವೇದ್ಯ ವನ್ನು ನಿವೇದಿಸಿ.
೧೦. ಪ್ರದಕ್ಷಿಣೆ: ಪೂಜಾವಿಧಿಯ ನಂತರ ಸಾಧ್ಯವಿದ್ದರೆ ಭಗವಾನ ಶ್ರೀಕೃಷ್ಣನಿಗೆ ಕಡಿಮೆಯೆಂದರೆ ಮೂರು ಅಥವಾ ಮೂರರ ಪಟ್ಟಿನಲ್ಲಿ ಪ್ರದಕ್ಷಿಣೆಯನ್ನು ಹಾಕಿರಿ. ಪ್ರದಕ್ಷಿಣೆಯನ್ನು ಹಾಕುವುದು ಸಾಧ್ಯವಿಲ್ಲದಿದ್ದಲ್ಲಿ ನಿಂತಲ್ಲಿಯೇ ಸುತ್ತ ತಿರುಗಿ ಪ್ರದಕ್ಷಿಣೆ ಹಾಕಿರಿ.
೧೧. ಅನಂತರ ಶರಣಾಗತ ಭಾವದಿಂದ ನಮಸ್ಕಾರ ಮಾಡುತ್ತಾ ಪ್ರಾರ್ಥನೆಯನ್ನು ಮಾಡಿರಿ.
೧೨. ಅಂತ್ಯದಲ್ಲಿ ಎಲ್ಲರೊಂದಿಗೆ ಪ್ರಸಾದವನ್ನು ಗ್ರಹಿಸಿ.
ಇಲ್ಲಿ ಗಮನದಲ್ಲಿಡಲು ಯೋಗ್ಯವಾಗಿರುವ ಅಂಶವೆಂದರೆ, ಪೂಜಾವಿಧಿಯಲ್ಲಿ ಸಂಪ್ರದಾಯ, ಪ್ರದೇಶ, ರೂಢಿ ಇತ್ಯಾದಿಗಳಿಗನುಸಾರ ಸ್ವಲ್ಪ ವ್ಯತ್ಯಾಸವಾಗಬಹುದು.

ಶ್ರೀಕೃಷ್ಣಜನ್ಮಾಷ್ಟಮಿಯಂದು ಇವುಗಳನ್ನು ಮಾಡಿ!

೧. ತಮ್ಮ ಬಂಧು ಮಿತ್ರರಿಗೆ ಕಿರುಸಂದೇಶಗಳನ್ನು ಕಳುಹಿಸಿ ಅವರಿಗೆ ಶ್ರೀಕೃಷ್ಣನ ನಾಮಜಪವನ್ನು ಮಾಡಲು ಹೇಳಿರಿ!
೨. ಶ್ರೀಕೃಷ್ಣನ ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡಿ!
೩. ಶ್ರೀಕೃಷ್ಣನ ಅವಮಾನವಾಗುತ್ತಿರುವುದು ಕಂಡು ಬಂದಲ್ಲಿ ಅದನ್ನು ತಡೆಗಟ್ಟಿರಿ!
೪. ಈ ದಿನ ಕೃಷ್ಣತತ್ತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದನ್ನು ಗ್ರಹಿಸಲು ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪವನ್ನು ಮಾಡಿ! : ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣತತ್ತ್ವವು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ೧ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದುದರಿಂದ ಶ್ರೀಕೃಷ್ಣನ ಚೈತನ್ಯದಾಯಕ ತತ್ತ್ವಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವಕ್ಕೆ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ. ಈ ಕಾರ್ಯನಿರತ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಈ ದಿನ ‘ಓಂ ನಮೋ ಭಗವತೇ ವಾಸುದೇವಾಯ|’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಿರಿ.

ಕೃಷ್ಣಗಾಯತ್ರಿ

ದೇವಕೀನಂದನಾಯ ವಿದ್ಮಹೇ | ವಾಸುದೇವಾಯ ಧೀಮಹಿ |
ತನ್ನೋ ಕೃಷ್ಣಃ ಪ್ರಚೋದಯಾತ್ ||
ಅರ್ಥ: ನಾವು ದೇವಕೀಪುತ್ರ ಕೃಷ್ಣನನ್ನು ಅರಿತಿದ್ದೇವೆ. ವಾಸುದೇವನ ಧ್ಯಾನ ಮಾಡುತ್ತೇವೆ. ಆ ಕೃಷ್ಣನು ನಮ್ಮ ಬುದ್ಧಿಗೆ ಸತ್ ಪ್ರೇರಣೆ ಕೊಡಲಿ.

ರಂಗೋಲಿ

ಶ್ರೀಕೃಷ್ಣನ ಉಪಾಸನೆಯಲ್ಲಿನ ಕೆಲವು ದಿನನಿತ್ಯದ ಕೃತಿಗಳು

ಪ್ರತಿಯೊಂದು ದೇವತೆಯ ಉಪಾಸನೆಯ ವಿಶಿಷ್ಟ ಶಾಸ್ತ್ರವಿದೆ; ಅಂದರೆ ಪ್ರತಿಯೊಂದು ದೇವತೆಯ ಉಪಾಸನೆಯಲ್ಲಿನ ಪ್ರತಿಯೊಂದು ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಮಾಡುವುದರ ಹಿಂದೆ ಶಾಸ್ತ್ರವಿದೆ. ಇಂತಹ ಕೃತಿಗಳಿಂದಲೇ ಆ ದೇವತೆಯ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ಸಹಾಯವಾಗುತ್ತದೆ. ಶ್ರೀಕೃಷ್ಣನ ಉಪಾಸನೆಯಲ್ಲಿನ ಕೆಲವು ನಿತ್ಯಕೃತಿಗಳನ್ನು ನಿರ್ದಿಷ್ಟವಾಗಿ ಹೇಗೆ ಮಾಡಬೇಕು, ಎಂಬುದರ ಕುರಿತು ಈಶ್ವರನ ಕೃಪೆಯಿಂದ ದೊರಕಿದ ಜ್ಞಾನವನ್ನು ಮುಂದೆ ಕೋಷ್ಟಕದಲ್ಲಿ ನೀಡಲಾಗಿದೆ.


ತುಳಸಿಯಿಂದಾಗುವ ಸೂಕ್ಷ್ಮ ಲಾಭಗಳನ್ನು ತೋರಿಸುವ ಈ 2 ನಿಮಿಷದ (ಹಿಂದಿ ಭಾಷೆಯ) ವೀಡಿಯೋ ನೋಡಿ


ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

ಶ್ರೀ ಗಣೇಶ : ಚತುರ್ಥಿ ಮಹತ್ವ

ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!


 ಗಣೇಶೋತ್ಸವ ಮಂಡಳಿಗಳೇ, ಅಗ್ಗದ ಜನಪ್ರಿಯತೆಗಾಗಿ ಗಣೇಶೋತ್ಸವವನ್ನು ಆಚರಿಸದೇ, ಲೋಕಕಲ್ಯಾಣಕ್ಕಾಗಿ ಆಚರಿಸಿರಿ!
ಇಂದು ಧರ್ಮಶಿಕ್ಷಣದ ಅಭಾವದಿಂದ ಮತ್ತು ಅಗ್ಗದ ಜನಪ್ರಿಯತೆಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿವರ್ಷ ಚಿತ್ರವಿಚಿತ್ರ ರೂಪದಲ್ಲಿನ ಮತ್ತು ಬೃಹತ್ ಆಕಾರದ ಶ್ರೀ ಗಣೇಶಮೂರ್ತಿಯನ್ನು ಕುಳ್ಳಿರಿಸುತ್ತಾರೆ.

ಮಕ್ಕಳಿಗೆ ಇಷ್ಟವಾಗುತ್ತದೆ ಎಂದು ತರುವ ಮೂರ್ತಿಯನ್ನು ಬದಲಾಯಿಸುವುದು ಕಠಿಣವಾಗುತ್ತದೆ: ಕೆಲವು ಮನೆಗಳಲ್ಲಿ ಮಕ್ಕಳು ಹೇಳಿದಂತೆ, ಉದಾ. ಕ್ರಿಕೆಟ್ ಆಡುವ ಗಣೇಶ ಮೂರ್ತಿಯನ್ನು ತರುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಇಷ್ಟವಾಗುತ್ತದೆ ಎಂದು ಪ್ರತಿವರ್ಷ ವೈವಿಧ್ಯಮಯ ಅಶಾಸ್ತ್ರೀಯ ರೂಪದ ಮೂರ್ತಿಗಳನ್ನು ತರುತ್ತಾರೆ. ಪಾಲಕರು, ‘ಮಕ್ಕಳಿಗೆ ಇಷ್ಟವಾಗುವ ಮೂರ್ತಿಯನ್ನು ತರುವುದು ಅಯೋಗ್ಯವಾಗಿದೆಯೇ’ ಎಂದು ಕೇಳುತ್ತಾರೆ.

ಅ. ಪ್ರತಿವರ್ಷ ಅದರಲ್ಲಿ ವೈವಿಧ್ಯತೆ ಬೇಕೆಂದು ಹೇಳಲು, ಗಣೇಶನ ಮೂರ್ತಿ ಆಟದ ಸಾಮಾನಲ್ಲ, ಭಕ್ತಿಭಾವವನ್ನು ಹೆಚ್ಚಿಸುವುದು, ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮುಂತಾದವುಗಳಿಗಾಗಿ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜಿಸಬೇಕಾಗಿರುತ್ತದೆ. ಧರ್ಮಶಾಸ್ತ್ರದಲ್ಲಿ ಹೇಳಿದ್ದನ್ನು ಎಂದಿಗೂ ಬದಲಾಯಿಸಬಾರದು. ಬದಲಿಗೆ ಈ ನಿಮಿತ್ತದಿಂದ ಮಕ್ಕಳಿಗೆ ಪ್ರಬೋಧನೆ ಮಾಡಬೇಕು ಮತ್ತು ಅವರಿಗೆ ಧರ್ಮಶಿಕ್ಷಣ ನೀಡಬೇಕು.

ಆ. ದೊಡ್ಡವರಿಗೆ ಮಕ್ಕಳ ಇಷ್ಟದಂತೆಯೇ ಏನಾದರೂ ಮಾಡಬೇಕೆಂದು ಅನಿಸಿದರೆ ಬಟ್ಟೆ, ತಿಂಡಿ-ತಿನಿಸುಗಳಲ್ಲಿ ತಾರತಮ್ಯ ಮಾಡಬೇಕು.

ಇ.ಪಾಲಕರೇ, ಶಾಸ್ತ್ರದಲ್ಲಿ ಹೇಳಿರುವ ಮೂರ್ತಿಯನ್ನು ಬಿಟ್ಟು ಬೇರೆ ಮೂರ್ತಿಯನ್ನು ತರುವುದು ಅಯೋಗ್ಯವಾಗಿದೆ ಎಂದು ಮಕ್ಕಳಿಗೆ ಹೇಳುವುದು ನಿಮ್ಮ ಧರ್ಮಕರ್ತವ್ಯವೇ ಆಗಿದೆ! ಇಲ್ಲದಿದ್ದಲ್ಲಿ ಅಯೋಗ್ಯ ಮೂರ್ತಿಯಿಂದಾಗಿ ನಮ್ಮ ದೇವತೆಗಳ ಕುರಿತು ಮಕ್ಕಳಿಗೆ ಯೋಗ್ಯ ಧರ್ಮಶಿಕ್ಷಣ ಸಿಗುವುದಿಲ್ಲ.

ಪರಂಪರೆಗನುಸಾರ ತರಲಾಗುವ ಮೂರ್ತಿಯನ್ನು ಬದಲಾಯಿಸುವುದು ಕಠಿಣವೆನಿಸುತ್ತದೆ: ಕೆಲವು ಗಣೇಶಭಕ್ತರ ಮನೆಗಳಲ್ಲಿ ಪರಂಪರೆಗನುಸಾರ, ಅಂದರೆ ಕಳೆದ ೪೦-೫೦ ವರ್ಷಗಳಿಂದ ಒಂದೇ ರೀತಿಯ ಮೂರ್ತಿಯನ್ನು ತರುತ್ತಾರೆ, ಉದಾ.ಗರುಡನ ಮೇಲೆ ಕುಳಿತ ಮೂರ್ತಿ, ಮೂರು-ನಾಲ್ಕು ಅಡಿ ಎತ್ತರದ ಮೂರ್ತಿ ಅಥವಾ ನಿಂತಿರುವ ಭಂಗಿಯಲ್ಲಿನ ಮೂರ್ತಿ. ಅವರಿಗೆ ಈ ಪರಂಪರೆಯನ್ನು ಬದಲಾಯಿಸುವುದು ಯೋಗ್ಯವಲ್ಲ ಎಂದು ಅನಿಸುತ್ತದೆ.

ಆ ಕಾಲದಲ್ಲಿನ ಕುಟುಂಬಪ್ರಮುಖರು ವಿಶಿಷ್ಟ ಗಣೇಶ ಮೂರ್ತಿಯನ್ನು ತರುವ ಪರಂಪರೆಯನ್ನು ಪ್ರಾರಂಭಿಸಿರುತ್ತಾರೆ. ಬಹುತೇಕ ಬಾರಿ ಧರ್ಮಶಾಸ್ತ್ರದ ಬಗ್ಗೆ ವಿಚಾರ ಮಾಡದೇ ಇಷ್ಟವಾಗುತ್ತದೆ ಎಂದು ಅಥವಾ ಯಾರಾದರೂ ಹೇಳಿದ್ದಾರೆಂದು ಅಂತಹ ಪರಂಪರೆಯು ಪ್ರಾರಂಭವಾಗಿರುತ್ತದೆ. ‘ಕೇವಲ ಹಿಂದಿನಿಂದ ನಡೆಯುತ್ತಾ ಬಂದಿರುವ ಪರಂಪರೆಯಾಗಿದೆ’ ಎಂದು ಅದನ್ನು ಪಾಲಿಸುವುದಕ್ಕಿಂತ ‘ಆ ಪರಂಪರೆಯು ಧರ್ಮಶಾಸ್ತ್ರಕ್ಕನು ಸಾರವಾಗಿದೆಯೇ’, ಎಂಬ ವಿಚಾರವನ್ನು ಗಣೇಶಭಕ್ತರು ಮಾಡುವುದು ಆವಶ್ಯಕವಾಗಿದೆ. ‘ಧರ್ಮಶಾಸ್ತ್ರವು ಸುಸ್ಪಷ್ಟ ವಾಗಿದ್ದಲ್ಲಿ, ಅದಕ್ಕನುಸಾರ ಆಚರಣೆ ಮಾಡಬೇಕು’, ಎಂದು ಧರ್ಮಾಧಿಕಾರಿಗಳೂ ಹೇಳುತ್ತಾರೆ. ಮೂರ್ತಿವಿಜ್ಞಾನದ ಬಗ್ಗೆ ಹಿಂದೂ ಧರ್ಮಶಾಸ್ತ್ರವು ಸುಸ್ಪಷ್ಟ ವಿವೇಚನೆಯನ್ನು ಮಾಡುತ್ತದೆ. ಪ್ರಸ್ತುತ ಕಿರುಗ್ರಂಥದಲ್ಲಿಯೂ ಈ ಶಾಸ್ತ್ರವನ್ನು ವಿವರವಾಗಿ ಹೇಳಲಾಗಿದೆ. ಆದ್ದರಿಂದ ಪರಂಪರೆಯಿಂದ ಕಳೆದ ಕೆಲವು ವರ್ಷಗಳಿಂದ ತರಲಾಗುತ್ತಿರುವ ಶಾಸ್ತ್ರಕ್ಕನುಸಾರವಿರದ ಮೂರ್ತಿಯನ್ನು ಬದಲಿಸಿ ಶಾಸ್ತ್ರಕ್ಕನುಸಾರವಿರುವ ಮೂರ್ತಿಯನ್ನೇ ತರಬೇಕು. ಹೀಗೆ ಮಾಡುವುದರಿಂದ ಶ್ರೀ ಗಣೇಶನ ಅವಕೃಪೆಯಾಗುವ ಅಪಾಯವಂತೂ ಆಗುವುದೇ ಇಲ್ಲ, ಬದಲಿಗೆ ಅವನು ಭಕ್ತರ ಮೇಲೆ ಪ್ರಸನ್ನನಾಗುತ್ತಾನೆ.

(ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು')

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!

ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಧಿಯಿದೆ: ಪಾರ್ವತಿಯು ತಯಾರಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮೃತ್ತಿಕೆಯ (ಮಣ್ಣಿನ) ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನ ಆವಾಹನೆಯನ್ನು ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಹೇಳಲಾಗಿದೆ.) ‘ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿಯನ್ನು ತಯಾರಿಸಬೇಕು’, ಎಂದು ಶಾಸ್ತ್ರವಿಧಿಯಿದೆ.

ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಮಾತ್ರ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಮತ್ತು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಗಣೇಶ ಮೂರ್ತಿಯಲ್ಲಿ ವ್ಯತ್ಯಾಸವಿದೆ.

೧. ಮಣ್ಣಿನ ಮೂರ್ತಿಯಿಂದಾಗುವ ಲಾಭಗಳು


 ಅ. ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ: ‘ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. ಆದ್ದರಿಂದ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ.’ - ಕು.ಪ್ರಿಯಾಂಕಾ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಯೇಷ್ಠ ಕೃ.೯, ಕಲಿಯುಗ ವರ್ಷ ೫೧೧೩ (೨೫.೬.೨೦೧೧))

ಆ. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ವಾಯುಮಂಡಲವು ಶುದ್ಧವಾಗುತ್ತದೆ: ‘ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೭.೭.೨೦೦೫, ರಾತ್ರಿ ೮.೪೪)

೨. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದಾಗುವ ಹಾನಿ

ಅ. ಮೂರ್ತಿಯ ವಿಸರ್ಜನೆಯು ಸರಿಯಾಗಿ ಆಗುವುದಿಲ್ಲ: ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ನೀರಿನಲ್ಲಿ ಸಹಜವಾಗಿ ಕರಗದಿರುವುದರಿಂದ ವಿಸರ್ಜನೆಯ ನಂತರ ಮೂರ್ತಿಯು ನೀರಿನ ಮೇಲೆ ತೇಲುತ್ತದೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾಗದ ಮೂರ್ತಿಗಳ ಅವಶೇಷಗಳನ್ನು ಕೆಲವೊಮ್ಮೆ ಒಟ್ಟು ಮಾಡಿ ಅವುಗಳ ಮೇಲೆ ‘ಬುಲ್ಡೋಝರ್’ನ್ನು ಚಲಾಯಿಸಲಾಗುತ್ತದೆ. ಹೀಗೆ ಮಾಡುವುದು ಶ್ರೀ ಗಣಪತಿಯ ಘೋರ ವಿಡಂಬನೆಯೇ ಆಗಿದೆ. ಯಾವ ಸನ್ಮಾನದಿಂದ ನಾವು ಶ್ರೀ ಗಣಪತಿಯನ್ನು ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ.


ಆ. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಕೆರೆ, ನದಿ, ಸಮುದ್ರ ಮುಂತಾದವುಗಳ ನೀರು ಕಲುಷಿತಗೊಳ್ಳುತ್ತದೆ.

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಬೇರೆ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ!: ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್’ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.

‘ಇಕೋ ಫ್ರೆಂಡ್ಲಿ’ ಗಣೇಶಮೂರ್ತಿಗಳ ಬಗೆಗಿನ ವಂಚನೆಯಿಂದ ಎಚ್ಚರ!: ಇತ್ತೀಚೆಗೆ ಕೆಲವು ಸಂಸ್ಥೆಗಳು ‘ಇಕೋ-ಫ್ರೆಂಡ್ಲಿ (‘ಇಕಾಲಾಜಿಕಲ್ ಫ್ರೆಂಡ್ಲಿ’, ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿ’ಗಳನ್ನು ತಯಾರಿಸಲು ಆಹ್ವಾನಿಸುತ್ತಾರೆ. ಅವುಗಳಲ್ಲಿ ಕೆಲವು ಮೂರ್ತಿಗಳನ್ನು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತದೆ. ಇದು ಅಶಾಸ್ತ್ರೀಯವಂತೂ ಆಗಿದೆ, ಹಾಗೆಯೇ ಪರಿಸರಕ್ಕೆ ಹಾನಿಕರಕವೂ ಆಗಿದೆ; ಏಕೆಂದರೆ ಕಾಗದದ ಮುದ್ದೆಗಳು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರುತ್ತವೆ ಮತ್ತು ಜೀವಗಳಿಗೆ ಹಾನಿಕರವಾದ ‘ಮಿಥೇನ್’ ವಾಯುವನ್ನು ನಿರ್ಮಿಸುತ್ತವೆ. ಇಂತಹ ಸಂಸ್ಥೆಗಳಿಂದ ಮಾಡಲಾಗಿರುವ ನಿಸರ್ಗದ ವಿಚಾರವು ಕೇವಲ ಮೇಲುಮೇಲಿನದ್ದಾಗಿರುತ್ತದೆ. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನೂ ಮಾಡಿರುತ್ತದೆ ಎಂಬುದನ್ನು ಗಮನದಲ್ಲಿಡಿ.

ಧರ್ಮಶಾಸ್ತ್ರಕ್ಕನುಸಾರ ತರಬೇಕಾದ ಜೇಡಿಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ: ಈ ರೀತಿ ಹೇಳುವುದು ಕುಂಟುನೆಪವಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ಖರ್ಚಿನಲ್ಲಿ (ಉದಾ.ಆಧುನಿಕ ಅಲಂಕಾರ, ಕುಟುಂಬದವರಿಗೆ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯ ಖರೀದಿಗಾಗಿ ಆಗುವ ಖರ್ಚು ಅತ್ಯಲ್ಪವಾಗಿರುತ್ತದೆ. ಶ್ರೀ ಗಣೇಶನನ್ನು ಪೂಜಿಸುವುದರ ಉದ್ದೇಶವು ಕುಟುಂಬದಲ್ಲಿನ ಸದಸ್ಯರಿಗೆ ಮೂರ್ತಿಯಿಂದ ಗಣೇಶತತ್ತ್ವ ಸಿಗುವುದಾಗಿದೆ. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಈ ಲಾಭ ಸಿಗುವುದು ಸಾಧ್ಯವಿಲ್ಲ. ಗಣೇಶಭಕ್ತರೇ, ಮೂರ್ತಿಯ ಖರ್ಚಿನ ಪ್ರಶ್ನೆಯಿದ್ದರೆ, ಚಿಕ್ಕ ಮೂರ್ತಿಯನ್ನು ತೆಗೆದುಕೊಳ್ಳಿರಿ; ಆದರೆ ತುಲನೆಯಲ್ಲಿ ಅಗ್ಗವಾಗಿದೆ ಎಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯನ್ನು ಕೊಳ್ಳುವ ಧರ್ಮಶಾಸ್ತ್ರವಿರೋಧಿ ವರ್ತನೆಯನ್ನು ಮಾಡಬೇಡಿರಿ.

(ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು')

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು