Showing posts with label ಆಧ್ಯಾತ್ಮಿಕ ತೊಂದರೆ. Show all posts
Showing posts with label ಆಧ್ಯಾತ್ಮಿಕ ತೊಂದರೆ. Show all posts

'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಕರ್ಪೂರ’ದ ಪುಡಿಯನ್ನು ಹಚ್ಚುವುದು ಅಥವಾ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುವುದು 
(ತತ್ತ್ವ : ತೇಜತತ್ತ್ವ)


ಅ. ‘ಸನಾತನ ಕರ್ಪೂರ’ದ ವೈಶಿಷ್ಟ್ಯಗಳು

೧. ‘ಸನಾತನ ಕರ್ಪೂರ’ವು ಭೀಮಸೇನಿ ಕರ್ಪೂರವಾಗಿದೆ. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ.
೨. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಕ್ಷಮತೆಯೂ ಹೆಚ್ಚಿರುತ್ತದೆ.

ಆ. ಉಪಯುಕ್ತತೆ /ಲಾಭ

೧. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಶ್ವಾಸಮಾರ್ಗದಲ್ಲಿನ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.
೨. ಕರ್ಪೂರದ ಸುಗಂಧವನ್ನು ತೆಗೆದುಕೊಂಡರೆ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗಿ ಬುದ್ಧಿಯ ತೀಕ್ಷ್ಣತೆ ಹೆಚ್ಚಾಗುತ್ತದೆ: ಕರ್ಪೂರದ ಸುಗಂಧದಿಂದ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಅದರಲ್ಲಿ ಆಧ್ಯಾತ್ಮಿಕ ಶಕ್ತಿಯು ಸಂಗ್ರಹವಾಗುವುದರಿಂದ ಅದರ ತೀಕ್ಷ್ಣತೆಯೂ ಹೆಚ್ಚಾಗುತ್ತದೆ. ಕರ್ಪೂರದ ಸುಗಂಧದಿಂದ ಸೇವೆಯಲ್ಲಿನ ಬುದ್ಧಿಯ ಅಡಚಣೆಯು ದೂರವಾಗುವುದರಿಂದ ಸೇವೆಯ ಪರಿಣಾಮವೂ ಹೆಚ್ಚಾಗುತ್ತದೆ.
೩. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ದೂಷಿತ ವಾಯು ನಾಶವಾಗಿ ಕಣ್ಣುಗಳು ಶಾಂತವಾಗಲು ಮತ್ತು ಮುಖಚರ್ಯೆ ಮತ್ತು ಮನಸ್ಸು ಪ್ರಸನ್ನವಾಗಲು ಸಹಾಯವಾಗುತ್ತದೆ.
೪. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ, ಕಣ್ಣುಗಳಿಗೆ ಮಸುಕಾಗಿ ಕಾಣಿಸುತ್ತಿದ್ದರೆ ದೃಷ್ಟಿಯು ಸ್ಪಷ್ಟವಾಗುತ್ತದೆ, ನಿದ್ರೆಯು ಪೂರ್ಣವಾಗಿದ್ದರೂ ಬರುವಂತಹ ನಿದ್ರೆಯು ದೂರವಾಗುತ್ತದೆ, ಮನಸ್ಸಿನ ನಿರಾಶೆ ದೂರವಾಗುತ್ತದೆ; ಇವೇ ಮುಂತಾದ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೧.೧೨.೨೦೧೦)
೫. ಸನಾತನದ ‘ಭೀಮಸೇನಿ ಕರ್ಪೂರ’ವು ದೃಷ್ಟಿಯನ್ನು ತೆಗೆಯಲೂ ಉಪಯುಕ್ತವಾಗಿದೆ.
(‘ಕರ್ಪೂರದಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು?’ ಈ ವಿಷಯದ ವಿವೇಚನೆಯನ್ನು ಸನಾತನ ನಿರ್ಮಿತ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ಇ. ಕರ್ಪೂರವನ್ನು ಹೇಗೆ ಉಪಯೋಗಿಸಬೇಕು?

೧. ಕರ್ಪೂರದ ಪುಡಿಯನ್ನು ಮುಖಕ್ಕೆ ಹಚ್ಚಿ ಅದರ ಪರಿಮಳವನ್ನೂ ತೆಗೆದುಕೊಳ್ಳಬೇಕು.
ಅ. ಚಿಟಿಕೆಯಷ್ಟು ಪುಡಿಯಾಗುವಷ್ಟು ಕರ್ಪೂರದ ತುಂಡನ್ನು ಕೈಯಲ್ಲಿ ತೆಗೆದುಕೊಂಡು ನಾಮಜಪ ಮಾಡುತ್ತಾ ಅದನ್ನು ಅಂಗೈಯಲ್ಲಿ ಪುಡಿ ಮಾಡಬೇಕು. ಕಣ್ಣುಗಳನ್ನು ಮುಚ್ಚಿ ಪುಡಿಯನ್ನು ಕಣ್ಣುಗಳೊಂದಿಗೆ ಇಡೀ ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಮುಖದ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ಕಡಿಮೆಯಾಗುತ್ತದೆ.
ಆ. ಈ ಪುಡಿಯನ್ನು ಆಜ್ಞಾಚಕ್ರದ ಮೇಲೆ (ಎರಡೂ ಹುಬ್ಬುಗಳ ನಡುವೆ) ಹೆಚ್ಚು ಪ್ರಮಾಣದಲ್ಲಿ ತಿಕ್ಕಬೇಕು. ಇದರಿಂದ ಆಜ್ಞಾಚಕ್ರ ಜಾಗೃತವಾಗಲು ಸಹಾಯವಾಗುತ್ತದೆ.
ಇ. ಉಳಿದ ಪುಡಿಯನ್ನು ಎರಡೂ ಅಂಗೈಗಳಿಗೆ ತಿಕ್ಕಬೇಕು. ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮೂಗಿನೊಂದಿಗೆ ಮುಖವನ್ನು ಮುಚ್ಚಿಕೊಳ್ಳಬೇಕು.
ಈ. ಎರಡೂ ಕೈಗಳ ಬೊಗಸೆಯಲ್ಲಿ ಕಣ್ಣುಗಳ ರೆಪ್ಪೆಗಳನ್ನು ೪-೫ ಬಾರಿ ಮುಚ್ಚುವುದು ತೆರೆಯುವುದು ಮಾಡಬೇಕು. ಬೊಗಸೆಯ ಟೊಳ್ಳಿನಿಂದ ದೀರ್ಘಶ್ವಾಸವನ್ನು ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಒಂದು ಸಲಕ್ಕೆ ೩-೪ ಬಾರಿ ಮಾಡಬೇಕು.

೨. ಇತರ ಉಪಯೋಗಗಳು
ಅ. ಖಾಲಿ ಡಬ್ಬಿಯಲ್ಲಿ ಕರ್ಪೂರದ ತುಂಡುಗಳನ್ನಿಟ್ಟು ಆ ಡಬ್ಬಿಯ ಟೊಳ್ಳಿನ ಸುಗಂಧವನ್ನು ಆಗಾಗ ತೆಗೆದುಕೊಳ್ಳಬೇಕು, ನಮ್ಮ ಮೇಲೆ ಸತತವಾಗಿ ಬರುವ ತ್ರಾಸದಾಯಕ ಶಕ್ತಿಯ ಆವರಣದೊಂದಿಗೆ ಹೋರಾಡಲು ಈ ಉಪಾಯವನ್ನು ನಡೆದಾಡುವಾಗ, ಇತರರೊಂದಿಗೆ ಚರ್ಚೆ ಮಾಡುವಾಗ, ಸಭೆ / ಸತ್ಸಂಗ ಇವುಗಳಲ್ಲಿಯೂ ಮಾಡಬಹುದು.
ಆ. ವೈದ್ಯಕೀಯ ಉಪಚಾರವನ್ನು ಮಾಡಿಯೂ ಶರೀರ ತುರಿಸುವುದು, ಶರೀರದ ಮೇಲೆ ಗುಳ್ಳೆ ಅಥವಾ ಪರಚಿದ ಗುರುತುಗಳು ಮೂಡುವುದು, ಶರೀರದ ಉಷ್ಣತೆ ಹೆಚ್ಚಾಗುವುದು, ಹಾಗೆಯೇ ತಲೆನೋವು, ಏನೂ ಹೊಳೆಯದಿರುವುದು ಮುಂತಾದ ತೊಂದರೆಯಾಗುತ್ತಿದ್ದಲ್ಲಿ ಆಜ್ಞಾಚಕ್ರದ ಮೇಲೆ ಅಥವಾ ಶಾರೀರಿಕ ತೊಂದರೆಯ ಅರಿವಾಗುತ್ತಿರುವ ಸ್ಥಳದ ಮೇಲೆ ‘ಸನಾತನದ ಕರ್ಪೂರ’ದ ತುಂಡನ್ನು ಹಚ್ಚಿಕೊಳ್ಳಬೇಕು. ಸಾಮಾನ್ಯವಾಗಿ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಆ ತುಂಡು ತಾನಾಗಿಯೇ ಅಂಟಿಕೊಳ್ಳುತ್ತದೆ ಮತ್ತು ತೊಂದರೆ ಕಡಿಮೆಯಾದ ನಂತರ ಕೆಳಗೆ ಬೀಳುತ್ತದೆ.
ಇ. ಶರೀರ ಅಥವಾ ತಲೆಗೆ ಎಣ್ಣೆಯಿಂದ ಮರ್ದನ (ಮಾಲೀಶ್) ಮಾಡುವ ಮೊದಲು ಒಂದು ಕೈಯಲ್ಲಿ ಕರ್ಪೂರದ ಸ್ವಲ್ಪ ಪುಡಿ ಮಾಡಬೇಕು; ಅದರಲ್ಲಿ ಎಣ್ಣೆ ಹಾಕಿ ಅನಂತರ ಮರ್ದನ (ಮಾಲೀಶ್) ಮಾಡಬೇಕು. ಇದರಿಂದ ಕರ್ಪೂರದಲ್ಲಿನ ಶಿವತತ್ತ್ವರೂಪೀ ಗಂಧದಿಂದ ನಮಗೆ ಅತ್ಯಧಿಕ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭ ಸಿಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೫.೧೧.೨೦೧೦)
ಈ. ರಾತ್ರಿ ಮಲಗುವಾಗ ಹಾಸಿಗೆಯ ಮೇಲೆ ಕರ್ಪೂರದ ಪುಡಿಯನ್ನು ಹರಡಬೇಕು

ಈ. ಅನುಭೂತಿ

೧. ‘ಸನಾತನ ಕರ್ಪೂರ’ದ ಸುಗಂಧ ತೆಗೆದುಕೊಂಡ ನಂತರ ಶೀತ (ನೆಗಡಿ) ದೂರವಾಗುವುದು : ೧೭.೧೦.೨೦೦೭ರಂದು ಬೆಳಗ್ಗಿನಿಂದ ನನಗೆ ನೆಗಡಿಯಿಂದ ತೊಂದರೆಯಾಗುತ್ತಿತ್ತು. ನಾನು ‘ಸನಾತನ ಕರ್ಪೂರ’ದ ತುಂಡನ್ನು ಕೈಯಲ್ಲಿ ತೆಗೆದುಕೊಂಡೆ. ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿ ಆ ಕರ್ಪೂರದ ಪುಡಿ ಮಾಡಿ ಅದರ ಸುಗಂಧವನ್ನು ತೆಗೆದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ನನ್ನ ನೆಗಡಿ ನಿಂತಿತು. - ಶ್ರೀ.ದತ್ತಾತ್ರೇಯ ಅಣ್ಣಪ್ಪ ಲೋಹಾರ, ಖಡಕೆವಾಡಾ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ.
೨. ಕರ್ಪೂರದ ಉಪಾಯ ಮಾಡಿದ ನಂತರ ಶರೀರ ತುರಿಸುವುದು ನಿಂತಿತು : ಒಂದು ಸಲ ನನಗೆ ಹಾಸಿಗೆಯ ಮೇಲೆ ಮಲಗಿದ ಕೂಡಲೆ ಶರೀರ ತುರಿಸಲು ಪ್ರಾರಂಭವಾಯಿತು. ನಾನು ‘ಸನಾತನ ಕರ್ಪೂರ’ದ ಪುಡಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರಾರ್ಥನೆಯನ್ನು ಮಾಡಿ ಶರೀರದ ಮೇಲೆ ಹಚ್ಚಿದೆ. ಕೂಡಲೇ ತುರಿಸುವುದು ನಿಂತಿತು. ಹೀಗೆ ಸತತವಾಗಿ ಮೂರು ದಿನ ಮಾಡಿದ ಮೇಲೆ ನಾಲ್ಕನೆಯ ದಿನದಿಂದ ತುರಿಸಲೇ ಇಲ್ಲ.
- ಕು.ವತ್ಸಲಾ ರೆವಂಡಕರ, ಮಾಝಗಾವ, ಮುಂಬೈ (ಜೂನ್ ೨೦೦೯)

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ,  ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಅತ್ತರು’ (ಸುಗಂಧದ್ರವ್ಯ) ಹಚ್ಚಿಕೊಂಡು ಅದರ ಸುಗಂಧ ತೆಗೆದುಕೊಳ್ಳುವುದು 
(ತತ್ತ್ವ : ಪೃಥ್ವಿ-ಆಪತತ್ತ್ವ)


ಅ. ಕಾರ್ಯ/ಉಪಯುಕ್ತತೆ

೧.ಶ್ವಾಸಮಾರ್ಗದ ಶುದ್ಧಿಯಾಗುತ್ತದೆ : ಶ್ವಾಸದೊಂದಿಗೆ ‘ಸನಾತನ ಅತ್ತರ’ನಲ್ಲಿರುವ ಸುಗಂಧವು ಶರೀರದೊಳಗೆ ಹೋಗಿ ಶ್ವಾಸಮಾರ್ಗವು ಚೈತನ್ಯದ ಸ್ತರದಲ್ಲಿ ಶುದ್ಧವಾಗುತ್ತದೆ. ಇದರಿಂದ ವಾತಾವರಣದಲ್ಲಿನ ರಜ-ತಮ ಕಣಗಳು, ನಕಾರಾತ್ಮಕ ವಿಚಾರ ಮತ್ತು ತ್ರಾಸದಾಯಕ ಶಕ್ತಿಯು ಶ್ವಾಸದ ಮಾರ್ಗದಿಂದ ಒಳಗೆ ಬರುವುದು ತಡೆಗಟ್ಟಲ್ಪಡುತ್ತದೆ.
೨.ಮನಸ್ಸಿನಲ್ಲಿನ ನಕಾರಾತ್ಮಕತೆಯನ್ನು ದೂರಗೊಳಿಸಲು ಮತ್ತು ಸೇವೆಯಲ್ಲಿ ಮನಸ್ಸನ್ನು ಪ್ರಸನ್ನವಾಗಿರಿಸಲು ‘ಸನಾತನ ಅತ್ತರಿನ’ ದೈವೀ ಸುಗಂಧವು ಉಪಯುಕ್ತವಾಗಿದೆ.
೩.‘ಸನಾತನ ಅತ್ತರ’ ಇದರಲ್ಲಿನ ಸುವಾಸನೆಯ ಸಹವಾಸದಲ್ಲಿ ಮಾಡಿದ ಕರ್ಮವು ಸಾತ್ತ್ವಿಕವಾಗುತ್ತದೆ.

ಆ. ‘ಸನಾತನ ಅತ್ತರ’ನ್ನು ಹೇಗೆ ಉಪಯೋಗಿಸಬೇಕು?

೧. ಸನಾತನ ಅತ್ತರನ್ನು ಕೈಗೆ ಹಚ್ಚಿಕೊಂಡು ಅದರ ಪರಿಮಳವನ್ನು ದೀರ್ಘ ಶ್ವಾಸದೊಂದಿಗೆ ತೆಗೆದುಕೊಳ್ಳಬೇಕು.
೨. ಹತ್ತಿಯ ಚಿಕ್ಕ ಉಂಡೆಗೆ ಅತ್ತರು ಹಚ್ಚಿ ಆ ಉಂಡೆಯನ್ನು ಕಿವಿಯ ಹಾಲೆಯ ಮೇಲಿನ ಭಾಗದಲ್ಲಿ ಇಡಬೇಕು ಮತ್ತು ಆಗಾಗ ಆ ಉಂಡೆಯಿಂದ ಕೈಗೆ ಅತ್ತರು ಹಚ್ಚಿಕೊಂಡು ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೩. ಕರವಸ್ತ್ರಕ್ಕೆ (ರುಮಾಲು) ಸ್ವಲ್ಪ ಅತ್ತರು ಹಚ್ಚಿ ಆಗಾಗ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು.
೪. ಶರೀರಕ್ಕೆ ದುರ್ಗಂಧ ಬರುತ್ತಿದ್ದಲ್ಲಿ ಎಣ್ಣೆಯಲ್ಲಿ ಒಂದು ಹನಿ ಸನಾತನದ ‘ಚಮೇಲಿ’ ಅತ್ತರು ಹಾಕಿ ಅದರ ಮೂಲಕ ಮರ್ದನ (ಮಾಲಿಶ್) ಮಾಡಿದರೆ ಶರೀರದ ಆಯಾ ಭಾಗದಲ್ಲಿನ ದುರ್ಗಂಧಯುಕ್ತ ವಾಯು ನಾಶವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೩.೪.೨೦೦೯)

ಇ. ಲೋಲಕದ ಮೂಲಕ ದೃಢಪಟ್ಟಿರುವ ‘ಸನಾತನ ಅತ್ತರ’ನ ಸಾತ್ತ್ವಿಕತೆ : 

ಅಂತರರಾಷ್ಟ್ರೀಯ ಸ್ತರದಲ್ಲಿ ಮಾನ್ಯತೆ ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತುಗಳು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿನ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿದ್ದಲ್ಲಿ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಪೇಟೆಯಲ್ಲಿ (ಮಾರುಕಟ್ಟೆ) ನ ಅತ್ತರು ಮತ್ತು ‘ಸನಾತನ ಅತ್ತರು’ ಇವುಗಳ ಬಾಟಲಿಗಳ ಮೇಲೆ ಪ್ರತ್ಯೇಕವಾಗಿ ಲೋಲಕವನ್ನು ಹಿಡಿದಾಗ ನನಗೆ ಮುಂದಿನಂತೆ ಅರಿವಾಯಿತು.

ಇ೧. ಪೇಟೆಯಲ್ಲಿನ ಅತ್ತರು : ಇದರ ಮೇಲೆ ಲೋಲಕವು ನಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ವಿರುದ್ಧ ದಿಕ್ಕಿನಲ್ಲಿ) ತಿರುಗಿತು.
ಇ೨. ಸನಾತನ ಅತ್ತರು : ಇದರ ಮೇಲೆ ಲೋಲಕವು ಸಕಾರಾತ್ಮಕ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳ ದಿಕ್ಕಿನಲ್ಲಿ) ತಿರುಗಿತು. ಇದರಿಂದ ‘ಸನಾತನದ ಅತ್ತರಿನಲ್ಲಿ’ ಚೈತನ್ಯವಿದೆ ಎಂದು ಸ್ಪಷ್ಟವಾಗುತ್ತದೆ.
- ಶ್ರೀ.ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ (೨೦೦೯)

ಈ. ಅನುಭೂತಿ - ಕುತ್ತಿಗೆಯ ನರ ನೋಯುವುದು ಮತ್ತು ತಲೆ ಜೋಮುಗಟ್ಟಿದಂತಾಗುವುದು, ಔಷಧಿಗಳಿಂದ ಕಡಿಮೆಯಾಗದೇ, ಸನಾತನದ ಅತ್ತರು ಹಚ್ಚಿದ ಒಂದು ಗಂಟೆಯಲ್ಲಿ ಕಡಿಮೆಯಾಗುವುದು : ಬಹಳಷ್ಟು ದಿನಗಳಿಂದ ನನ್ನ ಕುತ್ತಿಗೆಯ ಬಲಬದಿಯ ನರವು ಬಹಳ ನೋಯುತ್ತಿತ್ತು ಮತ್ತು ತಲೆಯೂ ಜೋಮುಗಟ್ಟುತ್ತಿತ್ತು. ವೈದ್ಯಕೀಯ ಔಷಧೋಪಚಾರ ಮಾಡಿಯೂ ನೋವು ಕಡಿಮೆಯಾಗುತ್ತಿರಲಿಲ್ಲ. ಅನಂತರ ಸನಾತನದ ಓರ್ವ ಸಾಧಕರು ನನಗೆ ಸನಾತನದ ‘ಚಂದನ’ ಅತ್ತರನ್ನು ಕುತ್ತಿಗೆಗೆ ಹಚ್ಚಲು ಹೇಳಿದರು. ನಾನು ಹಾಗೆ ಮಾಡಿದ ಒಂದು ಗಂಟೆಯೊಳಗೆ ಕುತ್ತಿಗೆಯ ನರದ ನೋವು ಮತ್ತು ತಲೆ ಜೋಮುಗಟ್ಟುವುದು ಸಂಪೂರ್ಣ ನಿಂತು ಹೋಯಿತು. - ಶ್ರೀ.ಅಮೋಲ ಪಾಟೀಲ, ಸಾಂಗ್ಲಿ.

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
"ಸನಾತನ ಅತ್ತರ್"ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?

ವ್ಯಕ್ತಿಯ ಪ್ರಕೃತಿಯು ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿಂದ ಆಗಿರುತ್ತದೆ. ಸತ್ತ್ವಗುಣವು ಮನಸ್ಸಿಗೆ ಸ್ಥಿರತೆಯನ್ನು ಕೊಡುವ, ಆನಂದದಾಯಕ ಮತ್ತು ವ್ಯಕ್ತಿಯ ಪ್ರವಾಸವು ಈಶ್ವರೀ ತತ್ತ್ವದ ಕಡೆಗೆ ಆಗಲು ಪೂರಕವಾಗಿರುತ್ತದೆ. ರಜ ಮತ್ತು ತಮ ಗುಣಗಳು ಸತ್ತ್ವಗುಣಕ್ಕೆ ವಿರುದ್ಧವಾಗಿರುತ್ತವೆ. ವ್ಯಕ್ತಿಯಲ್ಲಿ ರಜ ಮತ್ತು ತಮ ಗುಣಗಳು ಹೆಚ್ಚಾದರೆ ವ್ಯಕ್ತಿಯ ಮೇಲೆ ಅವುಗಳ ಅನಿಷ್ಟ ಪರಿಣಾಮವಾಗುತ್ತದೆ. ಇದನ್ನೇ ವ್ಯಕ್ತಿಯು ‘ಆಧ್ಯಾತ್ಮಿಕ ತೊಂದರೆ’ಗಳಿಂದ ಪೀಡಿತನಾಗುವುದು ಎನ್ನುತ್ತಾರೆ.

ಕೇವಲ ವ್ಯಕ್ತಿಗಳಷ್ಟೇ ಅಲ್ಲ, ವಾಸ್ತು ಮತ್ತು ವಾಹನದಂತಹ ನಿರ್ಜೀವ ವಸ್ತುಗಳೂ ಆಧ್ಯಾತ್ಮಿಕ ತೊಂದರೆಗಳಿಂದ ಪೀಡಿತವಾಗುತ್ತವೆ. ಹಾಗೆಯೇ ವಾಯುಮಂಡಲದಲ್ಲಿನ ರಜ-ತಮ ಘಟಕಗಳ ಪ್ರಾಬಲ್ಯ ಹೆಚ್ಚಾದರೆ ಆಧ್ಯಾತ್ಮಿಕ ತೊಂದರೆಗಳು ಉದ್ಭವಿಸುತ್ತವೆ.

ಭುವರ್ಲೋಕ ಮತ್ತು ಪಾತಾಳ ಲೋಕಗಳಲ್ಲಿ ವಾಸಿಸುವ ಸೂಕ್ಷ್ಮ-ರೂಪದಲ್ಲಿನ ‘ಅಸುರೀ ಶಕ್ತಿಗಳ’ ಆಕ್ರಮಣದಿಂದ ಆಧ್ಯಾತ್ಮಿಕ ತೊಂದರೆಯಾಗುವ ಪ್ರಮಾಣವು ಅತ್ಯಧಿಕವಾಗಿರುತ್ತದೆ.

ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳು

ಆಧ್ಯಾತ್ಮಿಕ ತೊಂದರೆಗಳು ಸೂಕ್ಷ್ಮವಾಗಿರುತ್ತವೆ. ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಕ್ಷಮತೆಯಿರುವವರು ಮತ್ತು ಸಂತರೇ ಅವುಗಳನ್ನು ಗುರುತಿಸಬಲ್ಲರು. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಮುಂದಿನಂತೆ ಸ್ಥೂಲದಲ್ಲಿಯೂ ಕಂಡುಬರುತ್ತವೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ಅ. ಶಾರೀರಿಕ ಲಕ್ಷಣಗಳು : ಔಷಧೋಪಚಾರ ಮತ್ತು ಪಥ್ಯ ಇತ್ಯಾದಿಗಳನ್ನು ಅನೇಕ ತಿಂಗಳು ಅಥವಾ ವರ್ಷಗಳ ಕಾಲ ಮಾಡಿಯೂ ರೋಗವು ಗುಣವಾಗದಿರುವುದು; ಶರೀರವು ಅಕಸ್ಮಾತ್ತಾಗಿ ಮಂಜುಗಡ್ಡೆಯಂತೆ ತಣ್ಣಗಾಗುವುದು; ಶರೀರದ ಮೇಲೆ ಗುಣಾಕಾರ ಚಿಹ್ನೆಗಳು ಮೂಡುವುದು; ನಾಲಿಗೆಯು ನೀಲಿಯಾಗುವುದು; ಕಣ್ಣುಗಳು ಬಿಳಿ ಮತ್ತು ನಿಸ್ತೇಜವಾಗುವುದು; ಅಕಸ್ಮಾತ್ತಾಗಿ ದೃಷ್ಟಿ, ಸ್ಮೃತಿ, ವಾಣಿ ಅಥವಾ ಸಂವೇದನೆಗಳು ಇಲ್ಲವಾಗುವುದು, ಕೂದಲು ಕೃತ್ರಿಮ (ನಕಲಿ) ಕೂದಲುಗಳಂತೆ ಹೊಳೆಯುವುದು ಅಥವಾ ನಿಸ್ತೇಜವಾಗುವುದು; ಉಗುರುಗಳ ಮೇಲೆ ಕಪ್ಪು ಚುಕ್ಕೆಗಳು ಮೂಡುವುದು; ಕೂದಲುಗಳಲ್ಲಿ ಪದೇಪದೇ ಹೇನುಗಳಾಗುವುದು ಇತ್ಯಾದಿ.

ಆ. ಮಾನಸಿಕ ಲಕ್ಷಣಗಳು : ಸತತ ಒತ್ತಡ ಮತ್ತು ನಿರಾಶೆ ಬರುವುದು, ಅತಿಯಾದ ಭಯ, ಮನಸ್ಸಿನಲ್ಲಿ ಕಾರಣವಿಲ್ಲದೇ ನಕಾರಾತ್ಮಕ ವಿಚಾರಗಳು ಬಂದು ಮನಸ್ಸು ಅಸ್ವಸ್ಥವಾಗುವುದು ಇತ್ಯಾದಿ.

ಇ. ಕೌಟುಂಬಿಕ ಲಕ್ಷಣಗಳು : ಮನೆಯಲ್ಲಿ ಸತತವಾಗಿ ಜಗಳಗಳಾಗುವುದು, ಕುಟುಂಬದಲ್ಲಿನ ಯಾರಾದರೊಬ್ಬರಿಗೆ ಸಿಗರೇಟು ಅಥವಾ ಮದ್ಯದ ವ್ಯಸನ ತಗಲುವುದು, ಕುಟುಂಬದಲ್ಲಿನ ವ್ಯಕ್ತಿಗಳಿಗೆ ಚಿಕ್ಕ ದೊಡ್ಡ ಅಪಘಾತಗಳಾಗುವುದು ಇತ್ಯಾದಿ.

ಈ. ಶೈಕ್ಷಣಿಕ ಲಕ್ಷಣಗಳು : ಬೌದ್ಧಿಕ ಕ್ಷಮತೆಯಿದ್ದರೂ ಅಧ್ಯಯನದಲ್ಲಿ ಏಕಾಗ್ರತೆ ಬರದಿರುವುದು, ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿಯೂ ಅನುತ್ತೀರ್ಣರಾಗುವುದು ಇತ್ಯಾದಿ.

ಉ.ಆರ್ಥಿಕ ಲಕ್ಷಣಗಳು : ಪ್ರಯತ್ನ ಮಾಡಿಯೂ ನೌಕರಿ ಸಿಗದಿರುವುದು, ಯಾವುದೇ ವ್ಯವಹಾರದಲ್ಲಿ ಯಶಸ್ಸು ಸಿಗದಿರುವುದು, ಸತತವಾಗಿ ಆರ್ಥಿಕ ಮುಗ್ಗಟ್ಟು ಉಂಟಾಗುವುದು ಇತ್ಯಾದಿ.

ಊ. ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಲಕ್ಷಣಗಳು : ವಿವಾಹವಾಗದಿರುವುದು, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಪಾತವಾಗುವುದು, ಮಗು ಅವಧಿಗಿಂತ ಮೊದಲೇ ಹುಟ್ಟುವುದು, ಮತಿಮಂದ ಅಥವಾ ವಿಕಲಾಂಗ ಮಕ್ಕಳಾಗುವುದು, ಚಿಕ್ಕಪ್ರಾಯದಲ್ಲಿಯೇ ಮಗು ಸಾಯುವುದು ಇತ್ಯಾದಿ.

ಎ. ನೈಸರ್ಗಿಕ ಲಕ್ಷಣಗಳು : ಮನೆಯ ಅಂಗಳದಲ್ಲಿನ ತುಳಸಿಯ ಗಿಡವು ಕಾರಣವಿಲ್ಲದೇ ಕರಟುವುದು, ಮರಗಳಿಗೆ ಗೆದ್ದಲು ಹಿಡಿಯುವುದು, ಮರದ ಎಲೆಗಳು ಅಕಾಲದಲ್ಲಿ ಉದುರುವುದು ಇತ್ಯಾದಿ

ಏ. ಆಧ್ಯಾತ್ಮಿಕ ಲಕ್ಷಣಗಳು : ಶ್ರೀರಾಮರಕ್ಷಾ ಅಥವಾ ತತ್ಸಮಾನ ಸ್ತೋತ್ರಗಳನ್ನು ಹೇಳುವಾಗ ಆಕಳಿಕೆಗಳು ಬರುವುದು, ನಿದ್ರೆಯಲ್ಲಿ ಕಿರುಚುವುದು ಅಥವಾ ಹಲ್ಲು ಕಡಿಯುವುದು, ಹಾಗೆಯೇ ಕೆಟ್ಟ ಕನಸುಗಳು ಬೀಳುವುದು, ರಾತ್ರಿ ವಾಸ್ತುವಿನಲ್ಲಿ ಗೆಜ್ಜೆಯ ಶಬ್ದ ಕೇಳಿಸುವುದು; ಬಟ್ಟೆ ಅಥವಾ ದೇವರ ಚಿತ್ರಗಳ ಮೇಲೆ ಪರಚಿದ ಗುರುತುಗಳು ಅಥವಾ ರಕ್ತದ ಕಲೆಗಳು ಬೀಳುವುದು ಇತ್ಯಾದಿ.

(ವಿವರವಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಸಂಬಂಧಿತ ಲೇಖನಗಳು
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
‘ದೃಷ್ಟಿ ತಗಲುವುದು’ ಎಂದರೇನು?ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
Dharma Granth

ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ


ಅ. ಸನಾತನದ ಉತ್ಪಾದನೆಗಳಲ್ಲಿ ದೈವೀ ತತ್ತ್ವವಿರುವುದರ ಕಾರಣಗಳು
೧. ಪರಾತ್ಪರಗುರುಗಳಾದ ಪ.ಪೂ.ಡಾ.ಜಯಂತ ಆಠವಲೆಯವರು ಸಾತ್ತ್ವಿಕ ಉತ್ಪಾದನೆಗಳ ನಿರ್ಮಿತಿಯ ಸಂಕಲ್ಪವನ್ನು ಮಾಡಿದ್ದಾರೆ. ಅವರ ಸಂಕಲ್ಪಶಕ್ತಿಯಿಂದ ಈ ಉತ್ಪಾದನೆಗಳಲ್ಲಿನ ದೈವೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ.
೨. ಬಹಳಷ್ಟು ಉತ್ಪಾದನೆಗಳಲ್ಲಿ ಗೋಮೂತ್ರ ಮತ್ತು ಯಜ್ಞದ ವಿಭೂತಿಯಂತಹ ಸಾತ್ತ್ವಿಕ ಘಟಕಗಳನ್ನು ಉಪಯೋಗಿಸಲಾಗಿದೆ.
೩. ಸನಾತನ ಊದುಬತ್ತಿ, ಅತ್ತರು ಮುಂತಾದ ಉತ್ಪಾದನೆಗಳಲ್ಲಿನ ಸುಗಂಧವು ಯಾವುದಾದರೊಂದು ದೇವತೆಯ ತತ್ತ್ವವನ್ನು ಆಕರ್ಷಿಸುವಂತಹದ್ದಾಗಿದೆ.
೪. ಹೆಚ್ಚಿನ ಉತ್ಪಾದನೆಗಳನ್ನು ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲಾಗಿದೆ ಮತ್ತು ಕೆಲವು ವಸ್ತುಗಳಲ್ಲಿ ಆವಶ್ಯಕತೆಗನುಸಾರ ರಾಸಾಯನಿಕಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ. ನೈಸರ್ಗಿಕ ವಸ್ತುಗಳಲ್ಲಿ ದೈವೀ ತತ್ತ್ವಗಳ ಪ್ರಮಾಣವು ಹೆಚ್ಚಿರುತ್ತದೆ.

ಆ. ಓರ್ವ ತಜ್ಞರು ಸನಾತನದ ಸಾತ್ತ್ವಿಕ ಉತ್ಪಾದನೆಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದ್ದಾರೆ: ಬೆಂಗಳೂರಿನಲ್ಲಿ ಶ್ರೀ.ಸುಬ್ರಹ್ಮಣ್ಯಮ್ ಅಯ್ಯರ್ ಎಂಬ ಹೆಸರಿನ ಓರ್ವ ‘ಹೀಲಿಂಗ್ ಮಾಸ್ಟರ್’ ಇದ್ದಾರೆ. ಸನಾತನದ ಸಾಧಕಿ ಸೌ.ಶೈಲಜಾ ಫಡ್ಕೆಯವರು ಅವರಿಗೆ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಮಹತ್ವ ಮತ್ತು ‘ಅವುಗಳನ್ನು ಹೇಗೆ ಉಪಯೋಗಿಸಬೇಕು’ ಎಂಬುದನ್ನು ಹೇಳಿದರು. ಶ್ರೀ.ಅಯ್ಯರ್‌ರವರು ‘ಸನಾತನ ಕರ್ಪೂರ’ ಮತ್ತು ‘ಸನಾತನ ಉದುಬತ್ತಿ’ಗಳನ್ನು ಕೂಡಲೇ ಉಪಯೋಗಿಸಲು ಪ್ರಾರಂಭಿಸಿದರು. ಅನಂತರ ಅವರು ಸೌ.ಫಡ್ಕೆಯವರಿಗೆ, ‘ಈ ವಸ್ತುಗಳಿಂದ ಬಹಳ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ನಾನು ಇತರರಿಗೆ ಆಧ್ಯಾತ್ಮಿಕ ಉಪಾಯ ಮಾಡಿದ ನಂತರ ನನ್ನ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಆವರಣವನ್ನು ಸನಾತನದ ಊದುಬತ್ತಿಯಿಂದ ತೆಗೆಯುತ್ತೇನೆ, ಹಾಗೆಯೇ ಸನಾತನದ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ಈಗ ಅವರು ಪ್ರತಿವಾರ ಸನಾತನ ನಿರ್ಮಿತ ಊದುಬತ್ತಿ, ಕರ್ಪೂರ ಮತ್ತು ಸನಾತನದ ಇತರ ಉತ್ಪಾದನೆಗಳನ್ನು ಖರೀದಿಸುತ್ತಾರೆ ಮತ್ತು ಅವರಲ್ಲಿಗೆ ಬರುವ ರೋಗಿಗಳಿಗೂ ವಿತರಿಸುತ್ತಾರೆ. - ಶ್ರೀ.ಪ್ರಣವ ಮಣೇರಿಕರ, ಬೆಂಗಳೂರು. (೪.೧೧.೨೦೧೧)

ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಗಮನದಲ್ಲಿಡಬೇಕಾದ ಸಾಮಾನ್ಯ ಸೂಚನೆಗಳು

ಅ. ಆಧ್ಯಾತ್ಮಿಕ ಉಪಾಯದ ಆರಂಭದಲ್ಲಿ ಪ್ರಾರ್ಥನೆ, ಉಪಾಯವನ್ನು ಮಾಡುವಾಗ ನಾಮಜಪ ಮತ್ತು ಉಪಾಯ ಮುಗಿದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು

ಅ೧. ಪ್ರಾರ್ಥನೆ ಮಾಡುವುದು
ಅ೧ಅ. ಪ್ರಾರ್ಥನೆ : ಆಧ್ಯಾತ್ಮಿಕ ಉಪಾಯವನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು, ‘ಹೇ ದೇವತೆಯೇ, ನಿನ್ನ ಕೃಪೆಯಿಂದ ಈ ವಸ್ತುವಿನ ಮೂಲಕ (ವಸ್ತು ಇದ್ದಲ್ಲಿ ಅದನ್ನು ಉಲ್ಲೇಖಿಸಬೇಕು) ನನ್ನ ಮೇಲೆ (ತಮ್ಮ ಹೆಸರು ಹೇಳಬೇಕು) ಹೆಚ್ಚೆಚ್ಚು ಆಧ್ಯಾತ್ಮಿಕ ಉಪಾಯವಾಗಿ ನನ್ನ ಆಧ್ಯಾತ್ಮಿಕ ತೊಂದರೆಗಳು ಬೇಗನೇ ನಾಶವಾಗಲಿ.’
ಆಧ್ಯಾತ್ಮಿಕ ಉಪಾಯ ನಡೆಯುತ್ತಿರುವಾಗ ಆಗಾಗ ಪ್ರಾರ್ಥನೆ ಮಾಡಬೇಕು.

ಅ೧ಆ. ವಾಸ್ತುಶುದ್ಧಿ ಮತ್ತು ವಾಹನಶುದ್ಧಿಗಾಗಿ ಮಾಡಬೇಕಾದ ಪ್ರಾರ್ಥನೆ : ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಆರಂಭಿಸುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ‘ಹೇ ದೇವತೆ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ತಮ್ಮ ಹೆಸರನ್ನು ಹೇಳಬೇಕು) ರಕ್ಷಾ ಕವಚ ನಿರ್ಮಾಣವಾಗಲಿ, ಹಾಗೆಯೇ ಈ ವಾಸ್ತುವಿನಲ್ಲಿರುವ / ವಾಹನದಲ್ಲಿರುವ ಕೆಟ್ಟ ಶಕ್ತಿಗಳ ಅಸ್ತಿತ್ವ ಮತ್ತು ಕೆಟ್ಟ ಸ್ಪಂದನಗಳು ನಾಶವಾಗಲಿ’.
ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯನ್ನು ಮಾಡುವಾಗಲೂ ಮಧ್ಯಮಧ್ಯದಲ್ಲಿ ಪ್ರಾರ್ಥನೆ ಮಾಡಬೇಕು.
ಅ೨. ನಾಮಜಪ ಮಾಡುವುದು: ಉಪಾಯವನ್ನು ಮಾಡುವಾಗ ಮನಸ್ಸಿನಲ್ಲಿ ಅಥವಾ ದೊಡ್ಡ ಧ್ವನಿಯಲ್ಲಿ ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಅ೨ಅ. ವಾಸ್ತುಶುದ್ಧಿಯನ್ನು ಮಾಡುವುದರ ಮೊದಲು ೧೫ ನಿಮಿಷ ಶ್ರೀ ಗಣೇಶನ ಅಥವಾ ಉಪಾಸ್ಯದೇವತೆಯ ನಾಮಜಪ ಮಾಡುವುದು ವಿಶೇಷ ಲಾಭದಾಯಕವಾಗಿದೆ.

ಅ೩. ಕೃತಜ್ಞತೆಯನ್ನು ವ್ಯಕ್ತ ಪಡಿಸುವುದು : ಉಪಾಯ ಪೂರ್ಣವಾದ ನಂತರ ಉಪಾಸ್ಯದೇವತೆ ಮತ್ತು ಉಪಾಯಕ್ಕೆ ಸಹಾಯಕವಾದಂತಹ ವಸ್ತುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು.

ಆ.ಉಪಾಯಗಳ ಬಗ್ಗೆ ಮನಸ್ಸಿನಲ್ಲಿ ಭಾವವಿರಬೇಕು!
೧. ದೇವರ ಕೃಪೆಯಿಂದ ನನಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಅವಕಾಶ ಲಭಿಸಿ ನನ್ನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತಿವೆ ಎಂಬ ಭಾವವಿರಬೇಕು.
೨. ಉಪಾಯಗಳ ವಸ್ತುಗಳ ಬಗ್ಗೆಯೂ ಭಾವವಿರಬೇಕು, ಉದಾ. ‘ಸನಾತನ ಊದುಬತ್ತಿ’ ಎಂದರೆ ‘ದೇವರು ಕಳುಹಿಸಿದ ರಕ್ಷಕ’ವಾಗಿದೆ ಅಥವಾ ‘ಸನಾತನದ ಅತ್ತರಿನ’ ಸುಗಂಧ ತೆಗೆದುಕೊಳ್ಳುವಾಗ ‘ಶ್ರೀ ದುರ್ಗಾದೇವಿಯ ಚರಣಗಳಿಗೆ ಅರ್ಪಿಸಿದ ಹೂವುಗಳ ಸುವಾಸನೆಯನ್ನು ಆಘ್ರಾಣಿಸುತ್ತಿದ್ದೇನೆ’ ಎಂಬ ಭಾವವಿರಬೇಕು.

ಇ.ಆಧ್ಯಾತ್ಮಿಕ ತೊಂದರೆಗಳ ತೀವ್ರತೆಗನುಸಾರ ಉಪಾಯಗಳನ್ನು ಮಾಡಬೇಕು! : ‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?' ಎಂಬುದರಲ್ಲಿ ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ಅವುಗಳಿಂದ ಸಾಧಾರಣ ನಮಗಿರುವ ತೊಂದರೆಗಳ ಅಂದಾಜು ಮಾಡಬಹುದು. ತೊಂದರೆಗಳ ತೀವ್ರತೆಗನುಸಾರ ಆಧ್ಯಾತ್ಮಿಕ ಉಪಾಯಗಳ ವಿಧ ಮತ್ತು ಉಪಾಯಗಳ ಪುನರಾವರ್ತನೆಯನ್ನು ಹೆಚ್ಚಿಸಬೇಕು.

ಈ. ಹುಣ್ಣಿಮೆ ಮತ್ತು ಅಮಾವಾಸ್ಯೆ ಈ ತಿಥಿಗಳಿಗೆ, ಹಾಗೆಯೇ ಈ ತಿಥಿಗಳ ಎರಡು ದಿನ ಮೊದಲು ಹಾಗೂ ಎರಡು ದಿನಗಳ ನಂತರ ಉಪಾಯಗಳನ್ನು ಹೆಚ್ಚಿಸುವುದರೊಂದಿಗೆ ಪ್ರಾರ್ಥನೆ, ನಾಮಜಪ ಮುಂತಾದ ಸಾಧನೆಗಳನ್ನೂ ಹೆಚ್ಚೆಚ್ಚು ಮಾಡಬೇಕು!

ಉ. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಕಾಣಿಸದಿದ್ದರೂ, ಕಡಿಮೆ ಪ್ರಮಾಣದಲ್ಲಾದರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲೇಬೇಕು!

ಊ. ಆಧ್ಯಾತ್ಮಿಕ ಉಪಾಯ ಮಾಡುವಾಗ ‘ಕೆಲವೊಮ್ಮೆ ಏನಾದರೊಂದು ತೊಂದರೆಯಾಗುವುದು’ ಸಹ ಉಪಾಯದ ಪರಿಣಾಮವಾಗಿದೆ ಎಂಬುದನ್ನು ಗಮನದಲ್ಲಿಡಬೇಕು!
ಊ೧. ಆಧ್ಯಾತ್ಮಿಕ ಉಪಾಯವೆಂದರೆ ಒಂದು ರೀತಿಯಲ್ಲಿ ಕೆಟ್ಟ ಶಕ್ತಿಗಳ ವಿರುದ್ಧದ ಸೂಕ್ಷ್ಮದಲ್ಲಿನ ಯುದ್ಧವೇ ಆಗಿದೆ!
ಊ೨. ಕೆಟ್ಟ ಶಕ್ತಿಗಳ ವಿರುದ್ಧದ ಯುದ್ಧದಿಂದ ವ್ಯಕ್ತಿಯ ಶರೀರ ಮತ್ತು ಮನಸ್ಸಿನ ಮೇಲಾಗುವ ಪರಿಣಾಮಗಳ ಕೆಲವು ಉದಾಹರಣೆಗಳು : ವ್ಯಕ್ತಿಗೆ ಆರಂಭದಲ್ಲಿ ಕೆಲವು ಸಮಯ / ಕೆಲವು ದಿನ ಅಸ್ವಸ್ಥವೆನಿಸುವುದು, ತಲೆ ಭಾರವಾಗುವುದು, ಆಯಾಸಗೊಂಡಂತಾಗುವುದು, ಉಪಾಯ ಮಾಡುವಾಗ ಸತತವಾಗಿ ತೇಗು / ಆಕಳಿಕೆಗಳು ಬರುವುದು ಮುಂತಾದ ತೊಂದರೆಗಳಾಗಬಹುದು. ಇಂತಹ ಸಮಯದಲ್ಲಿ ಹೆದರಬಾರದು. ಏಕೆಂದರೆ ಇವು ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆಗಳ ಮೇಲೆ ಉಪಾಯವಾಗುತ್ತಿರುವುದರ ಲಕ್ಷಣವಾಗಿವೆ.

ಊ೩. ಉಪಾಯಗಳನ್ನು ಮಾಡುವಾಗ ತೊಂದರೆಯಾದರೆ ಅಥವಾ ಅಡಚಣೆಗಳು ಬಂದರೆ ಏನು ಮಾಡಬೇಕು?
ಅ. ಹೇಗೆ ಶರೀರದಲ್ಲಿನ ರೋಗಜಂತುಗಳನ್ನು ನಾಶಗೊಳಿಸಲು ‘ಇಂಜೆಕ್ಷನ್’ ಚುಚ್ಚಿಕೊಳ್ಳುವಾಗ ನಾವು ವೇದನೆಯನ್ನು ಸಹಿಸುತ್ತೇವೆಯೋ, ಹಾಗೆಯೇ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಉಪಾಯಗಳ ಪರಿಣಾಮವೆಂದು ಸ್ವಲ್ಪ ತೊಂದರೆಯಾದರೆ ಅದನ್ನೂ ಸಹಿಸಬೇಕು. ಹೀಗೆ ತೊಂದರೆಗಳಾಗುತ್ತಿದ್ದಲ್ಲಿ ಅಥವಾ ಅಡಚಣೆಗಳು ಉಂಟಾದಲ್ಲಿ ಉಪಾಯಗಳನ್ನು ಜಿಗುಟುತನದಿಂದ ಮಾಡಬೇಕು. ದೃಢನಿಶ್ಚಯದಿಂದ ಉಪಾಯಗಳನ್ನು ಮಾಡುತ್ತಾ ಹೋದರೆ ನಿಧಾನವಾಗಿ ನಮಗಾಗುವ ಸೂಕ್ಷ್ಮದಲ್ಲಿನ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗತೊಡಗುತ್ತವೆ ಮತ್ತು ಜೀವನದಲ್ಲಿನ ಸಮಸ್ಯೆಗಳ ಮೇಲೆ ವಿಜಯ ಸಾಧಿಸುವುದು ಸುಲಭವಾಗುತ್ತದೆ.
ಆ. ಯಾವುದಾದರೊಂದು ಉಪಾಯವನ್ನು ಮಾಡುವಾಗ ಉಪಾಯದ ಪರಿಣಾಮವೆಂದು ಅಸಹನೀಯ ತೊಂದರೆಯಾಗುತ್ತಿದ್ದಲ್ಲಿ (ಉದಾ. ತಲೆ ತುಂಬಾ ನೋಯುತ್ತಿದ್ದಲ್ಲಿ) ಸ್ವಲ್ಪ ಹೊತ್ತು ಆ ಉಪಾಯವನ್ನು ಮಾಡಬಾರದು. ತೊಂದರೆ ಕಡಿಮೆಯಾದ ನಂತರ ಮತ್ತೊಮ್ಮೆ ಉಪಾಯ ಮಾಡಿ ನೋಡಬೇಕು. ಆ ಉಪಾಯದಿಂದ ತೊಂದರೆಯು ಹಾಗೆಯೇ ಆಗುತ್ತಿದ್ದರೆ, ಇತರ ಯಾವುದಾದರೊಂದು ಉಪಾಯ ಮಾಡಿ ನೋಡಬೇಕು. ಪ್ರತಿಯೊಂದು ಉಪಾಯದ ಸಮಯದಲ್ಲಿ ತೀವ್ರ ತೊಂದರೆಯಾಗುತ್ತಿದ್ದಲ್ಲಿ ಅದರ ಬಗ್ಗೆ ತಿಳಿದವರಿಗೆ ಅಥವಾ ಸಂತರನ್ನು ಕೇಳಬೇಕು.

ಸೂಚನೆ : ಸನಾತನದ ಸಾತ್ತ್ವಿಕ ಉತ್ಪಾದನೆಗಳಿಂದ ಆಧ್ಯಾತ್ಮಿಕ ಉಪಾಯವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ತಮ್ಮ ಸಮೀಪದ ಸನಾತನದ ಸತ್ಸಂಗವನ್ನು ಅಥವಾ ಸನಾತನದ ಸಾಧಕರನ್ನು ಸಂಪರ್ಕಿಸಿರಿ.

(ವಿವರವಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ "ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) - ಭಾಗ ೨")

ಸಂಬಂಧಿತ ಲೇಖನಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
‘ದೃಷ್ಟಿ ತಗಲುವುದು’ ಎಂದರೇನು?ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
Dharma Granth

ಯುವತಿಯನ್ನು ‘ಲವ್ ಜಿಹಾದ್’ನಿಂದ ರಕ್ಷಿಸಲು ಮಾಡಬೇಕಾದ ಕೆಲವು ಆಧ್ಯಾತ್ಮಿಕ ಉಪಾಯಗಳು

ಯುವತಿಯನ್ನು ‘ಲವ್ ಜಿಹಾದ್’ನ ಮೂಲಕ ವಶಪಡಿಸಿಕೊಳ್ಳಲು ಮಾಡಲಾದ ವಶೀಕರಣದ ಅಥವಾ ಮಾಟ-ಮಂತ್ರಗಳ ಪ್ರಭಾವವನ್ನು ನಾಶಗೊಳಿಸಲು ಮಾಡಬೇಕಾದ ಕೆಲವು ಆಧ್ಯಾತ್ಮಿಕ ಉಪಾಯಗಳು

ಒಂದು ವೇಳೆ ಯಾವುದಾದರೊಂದು ಪ್ರಕರಣದಲ್ಲಿ ಓರ್ವ ಯುವತಿಯ ಮೇಲೆ ವಶೀಕರಣವಾಗಿದೆ ಎಂಬುದು ಗಮನಕ್ಕೆ ಬಂದರೆ, ಅವಳಿಗೆ ಈ ಮುಂದಿನಂತೆ ಆಧ್ಯಾತ್ಮಿಕ ಉಪಾಯ ಮಾಡಬೇಕು.

೧. ಯುವತಿಯ ಬಳಿ ಇರುವ ತಾಯಿತ, ಮಂತ್ರಿಸಿದ ದಾರ, ವಿಭೂತಿ ಇತ್ಯಾದಿ ವಸ್ತುಗಳನ್ನು ಅವಳಿಂದ ತೆಗೆದು ಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕುವುದು: ಮೊತ್ತಮೊದಲು ಯುವತಿಯ ವಶೀಕರಣಕ್ಕಾಗಿ ಅವಳಿಗೆ ಕಟ್ಟಿದ ತಾಯಿತ, ಮಂತ್ರಿಸಿದ ದಾರ, ಪರ್ಸ್‌ನಲ್ಲಿ ಇಡಲಾದ ಇಂತಹ ವಸ್ತುಗಳನ್ನು ಅವಳಿಂದ ತೆಗೆದುಕೊಳ್ಳಬೇಕು. ಆ ವಶೀಕರಣದ ವಸ್ತುಗಳನ್ನು ಅಗ್ನಿಗೆ ಹಾಕಿ ನಾಶಗೊಳಿಸಬೇಕು. ಅವಳಲ್ಲಿರುವ ಎಲ್ಲ ವಸ್ತುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು.

೨. ಆ ಯುವತಿಯ ತಲೆಯ ಮೇಲೆ ಕೈಯಿಟ್ಟು ಅರ್ಧ ಗಂಟೆ ಅವಳ ಕುಲದೇವತೆಯ ನಾಮಜಪ ಮಾಡಬೇಕು.

೩. ಲಿಂಬೆ ಮತ್ತು ಊದುಬತ್ತಿಯ ವಿಭೂತಿಯಿಂದ ನಿವಾಳಿಸುವುದು: ಆ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ನಿವಾಳಿಸುವ ವ್ಯಕ್ತಿ ತನ್ನ ಎರಡೂ ಕೈಗಳನ್ನು ಒಟ್ಟು ಮಾಡಿ ಅದರಲ್ಲಿ ಪೂರ್ಣ ಲಿಂಬೆ ಮತ್ತು ವಿಭೂತಿಯನ್ನು ತೆಗೆದುಕೊಂಡು ಅದನ್ನು ಆ ಪೀಡಿತ ಯುವತಿಯ ಮುಂದೆ ಹಿಡಿಯಬೇಕು. ಅನಂತರ ‘ಈ ಯುವತಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯು ಈ ನಿವಾಳಿಸುವಿಕೆಯಿಂದ ದೂರವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ತಮ್ಮ ಕೈಯಲ್ಲಿರುರುವ ಲಿಂಬೆ ಮತ್ತು ವಿಭೂತಿಯಿಂದ ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಕೊನೆಗೆ ಆ ವಸ್ತುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ನಿವಾಳಿಸುವ ವ್ಯಕ್ತಿಯು ಆ ವಸ್ತುಗಳನ್ನು ವಿಸರ್ಜನೆ ಮಾಡುವ ವರೆಗೆ ಮನಸ್ಸಿನಲ್ಲಿ ತನ್ನ ಉಪಾಸ್ಯದೇವತೆಯ ನಾಮಜಪ ಮಾಡಬೇಕು ಹಾಗೂ ಅನಂತರ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು. ಆ ಯುವತಿಗೂ ಕೈ-ಕಾಲುಗಳನ್ನು ತೊಳೆದುಕೊಳ್ಳಲು ಹೇಳಬೇಕು. ಅನಂತರ ತನ್ನ ಹಾಗೂ ಅವಳ ಮೈಮೇಲೆ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸ ಬೇಕು. ಯುವತಿಯ ಹಣೆಗೆ ದೇವರ ಎದುರಿಗೆ ಇರುವ ಅಥವಾ ಪವಿತ್ರ ಸ್ಥಾನದ ವಿಭೂತಿಯನ್ನು ಹಚ್ಚಬೇಕು.

೪. ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಅದನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದು ಅಥವಾ ಅಗ್ನಿಗೆ ಅರ್ಪಿಸುವುದು: ಈ ಮೇಲಿನ ಉಪಾಯದ ನಂತರವೂ ಆ ಯುವತಿಯ ಮೇಲಿನ ವಶೀಕರಣದ ಪ್ರಭಾವ ಕಡಿಮೆಯಾಗದೆ ಅವಳು ಭ್ರಮಿಷ್ಟಳಾಗಿ ವರ್ತಿಸುತ್ತಿದ್ದರೆ ಅಥವಾ ಅವಳನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿದ ಮುಸಲ್ಮಾನನನ್ನು ಸ್ಮರಿಸುತ್ತಿದ್ದರೆ, ತೆಂಗಿನಕಾಯಿಯಿಂದ ಅವಳ ದೃಷ್ಟಿ ನಿವಾಳಿಸಬೇಕು. ದೃಷ್ಟಿ ನಿವಾಳಿಸುವುದರಿಂದ ಯುವತಿಯಲ್ಲಿ ಮಾಟ-ಮಂತ್ರದ ದೋಷವಿದ್ದರೆ ದೂರವಾಗುತ್ತದೆ. ಈ ಪದ್ಧತಿಯಲ್ಲಿ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ದೃಷ್ಟಿ ನಿವಾಳಿಸಲು ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಳ್ಳ ಬೇಕು. ದೃಷ್ಟಿ ನಿವಾಳಿಸುವವರು ಈ ತೆಂಗಿನಕಾಯಿಯನ್ನು ಬೊಗಸೆಯಲ್ಲಿ ಹಿಡಿದುಕೊಂಡು ಆ ಯುವತಿಯ ಎದುರು ನಿಂತುಕೊಳ್ಳಬೇಕು. ತೆಂಗಿನಕಾಯಿಯ ಜುಟ್ಟು ಯುವತಿಯ ಎದುರು ಇರುವಂತೆ ಹಿಡಿದುಕೊಂಡು ‘ಹೇ ಮಾರುತಿರಾಯಾ, ನೀನು ಈ ಯುವತಿಯ ದೇಹದಲ್ಲಿ ಮತ್ತು ದೇಹದ ಹೊರಗಿರುವ ತೊಂದರೆದಾಯಕ ಸ್ಪಂದನಗಳನ್ನು ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ಅವುಗಳನ್ನು ಸಂಪೂರ್ಣವಾಗಿ ನಾಶಗೊಳಿಸು’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ಆ ತೆಂಗಿನಕಾಯಿಯನ್ನು ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಅನಂತರ ಆ ಯುವತಿಯ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುವಾಗ ತೆಂಗಿನಕಾಯಿಯ ಜುಟ್ಟು ಯುವತಿಯ ಕಡೆಗಿರಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು ಅಥವಾ ಬೆಂಕಿಗೆ ಅರ್ಪಿಸಬೇಕು. ಆಗ ‘ಹನುಮಂತನಿಗೆ ವಿಜಯವಾಗಲಿ!’, ಎಂದು ಜಯಘೋಷ ಮಾಡಬೇಕು. (‘ಲವ್ ಜಿಹಾದ್’ನಲ್ಲಿ ಸಿಲುಕಿದ ಯುವತಿ ಹಿಂತಿರುಗಿ ಬರದಿದ್ದರೂ, ಅವಳ ಮೇಲಿನ ವಶೀಕರಣ ಅಥವಾ ಮಂತ್ರ-ತಂತ್ರದ ತೊಂದರೆಯನ್ನು ಹೋಗಲಾಡಿಸಲು ಅವಳ ಛಾಯಾಚಿತ್ರವನ್ನಿಟ್ಟು ಕೂಡ ಈ ಮೇಲಿನಂತೆ ದೃಷ್ಟಿ ತೆಗೆಯಬಹುದು.)

೫. ಯುವತಿಗೆ ಉಪ್ಪು ನೀರಿನಲ್ಲಿ ಸ್ನಾನ ಮಾಡಲು ಹೇಳುವುದು: ಪೀಡಿತ ಯುವತಿಯ ದೃಷ್ಟಿ ನಿವಾಳಿಸಿದ ನಂತರ ಅಥವಾ ತೆಂಗಿನಕಾಯಿಯಿಂದ ಅವಳ ದೃಷ್ಟಿ ತೆಗೆದ ನಂತರ ಒಂದು ಬಾಲ್ದಿ ನೀರಿಗೆ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ಅವಳಿಗೆ ಆ ನೀರಿನಿಂದ ಸ್ನಾನ ಮಾಡಲು ಹೇಳಬೇಕು.

೬. ನಾಮಜಪ ಮಾಡಲು ಹಾಗೂ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಪಠಣ ಮಾಡಲು ಹೇಳುವುದು: ಯುವತಿಗೆ ಪುನಃ ವಶೀಕರಣ ಅಥವಾ ಮಂತ್ರ-ತಂತ್ರಗಳ ತೊಂದರೆಯಾಗದಿರಲು ಅವಳಿಗೆ ದೇವರಿಗೆ ಪ್ರಾರ್ಥನೆ ಮಾಡಲು ಹಾಗೂ ಒಂದು ಗಂಟೆ ಅವಳ ಕುಲದೇವತೆ ಅಥವಾ ಉಪಾಸ್ಯ ದೇವತೆಯ ನಾಮಜಪ ಮಾಡಲು ಹೇಳಬೇಕು. ಅವಳಿಗೆ ದಿನನಿತ್ಯ ೧ಬಾರಿ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಹೇಳಲು ಹೇಳಬೇಕು. ಹಾಗೆಯೇ ಅವಳಿಗೆ ಪ್ರತಿದಿನ ಈ ಉಪಾಸನೆಯನ್ನು ಮಾಡಲು ಹೇಳಬೇಕು.

೭. ಗಾಣಗಾಪುರದಂತಹ ಜಾಗೃತ ತೀರ್ಥಕ್ಷೇತ್ರದಲ್ಲಿ ಅಥವಾ ಸಂತರ ಆಶ್ರಮದಲ್ಲಿ ಸ್ವಲ್ಪ ಸಮಯ ಹೋಗಿ ವಾಸಿಸಬೇಕು.

ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು? ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?

ವ್ಯಕ್ತಿಯಲ್ಲಿನ ತ್ರಿಗುಣಗಳ (ಸತ್ತ್ವ, ರಜ, ತಮ) ಪ್ರಮಾಣವು ಅವನ ಪ್ರತಿಯೊಂದು ಜೀವಕೋಶದಲ್ಲಿ ಇರುತ್ತವೆ. ಜೀವಕೋಶದಲ್ಲಿನ ತ್ರಿಗುಣಗಳ ಮೇಲೆ ಆಗುವ ಪರಿಣಾಮವು ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮಾಂತ್ರಿಕರು ಈ ನ್ಯಾಯದ ಜಾಣತನವನ್ನು ಉಪಯೋಗಿಸಿಕೊಂಡು ವ್ಯಕ್ತಿಯ ಕೂದಲುಗಳ ಮೇಲೆ ಮಾಟವನ್ನು ಮಾಡುತ್ತಾರೆ ಮತ್ತು ಅದರಲ್ಲಿನ ತ್ರಿಗುಣಗಳ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡಿ ಅವುಗಳಲ್ಲಿ ಅಸಮತೋಲನವನ್ನು ನಿರ್ಮಿಸುತ್ತಾರೆ. ಅನಂತರ ಅಘೋರಿ ಮಂತ್ರವನ್ನು ಹೇಳಿ ಮತ್ತು ಅಘೋರಿ ವಿಧಿಯನ್ನು ಮಾಡಿ ಅಸಂತುಲಿತವಾದ ತ್ರಿಗುಣಗಳನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳುವುದು ಅವರಿಗೆ ಸುಲಭವಾಗುತ್ತದೆ. ಅವರು ಹಾಗೆ ಮಾಡಿ ಕೂದಲುಗಳ ಜೀವಕೋಶದಲ್ಲಿನ ತಮೋಗುಣದ ಪ್ರಮಾಣವನ್ನು ಹೆಚ್ಚಿಸುತ್ತಾರೆ. ತಮ್ಮ ಬಳಿಯಿರುವ ಕಪ್ಪು ಶಕ್ತಿಯನ್ನು ಕೂದಲುಗಳ ಜೀವಕೋಶದ ಮೇಲೆ ಬಿಟ್ಟು ತ್ರಿಗುಣಗಳ ಮೇಲೆ ಕಪ್ಪು ಶಕ್ತಿಯ ದಟ್ಟವಾದ ಆವರಣವನ್ನು ನಿರ್ಮಿಸುತ್ತಾರೆ ಮತ್ತು ಕೂದಲುಗಳಲ್ಲಿ ಕಪ್ಪು ಶಕ್ತಿಯ ಸ್ಥಾನಗಳನ್ನು ನಿರ್ಮಿಸುತ್ತಾರೆ. ಕೂದಲುಗಳಲ್ಲಿ ಹೆಚ್ಚಳವಾಗಿರುವ ತಮೋಗುಣದ ಕಡೆಗೆ ಕಪ್ಪು ಶಕ್ತಿಯ ಲಹರಿಗಳು ಸಹಜವಾಗಿ ಆಕರ್ಷಿತವಾಗುತ್ತವೆ. ಮಾಂತ್ರಿಕರು ಮಂತ್ರಸಹಿತ ಅಘೋರಿ ವಿಧಿಗಳನ್ನು ಮಾಡಿ ಕೂದಲುಗಳ ಜೀವಕೋಶಗಳಲ್ಲಿ ಸೂಕ್ಷ್ಮ-ಯಂತ್ರಗಳನ್ನು ಕೂರಿಸಿ ಸಂಕಲ್ಪದಿಂದ ಅವುಗಳನ್ನು ಕಾರ್ಯನಿರತಗೊಳಿಸುತ್ತಾರೆ.

ಕೂದಲು ಮತ್ತು ಉಗುರುಗಳು ಎಷ್ಟು ಪ್ರಮಾಣದಲ್ಲಿ ರಜ-ತಮಾತ್ಮಕ ಲಹರಿಗಳನ್ನು ಗ್ರಹಿಸುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಅವು ಪ್ರಕ್ಷೇಪಣೆಯನ್ನೂ ಮಾಡುತ್ತವೆ.

(ಈ ಅಸಮತೋಲನವಾದ ತ್ರಿಗುಣಗಳನ್ನು ಆಧ್ಯಾತ್ಮಿಕ ಸಾಧನೆಯಿಂದಲೇ ಸರಿಪಡಿಸಬಹುದು ಮತ್ತು ನಮ್ಮಲ್ಲಿ ಸತ್ತ್ವ ಗುಣವನ್ನೂ ಹೆಚ್ಚಿಸಿ ಎಲ್ಲ ಕೆಟ್ಟ ಶಕ್ತಿಗಳ ತೊಂದರೆಗಳಿಂದ ಬಿಡುಗಡೆಯಾಗಬಹುದು. ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸನಾತನ ಸಂಸ್ಥೆಯ ಸತ್ಸಂಗವನ್ನು ಸಂಪರ್ಕಿಸಿರಿ.)

ಮಾಂತ್ರಿಕರ ಅಘೋರಿ ಯಜ್ಞದಲ್ಲಿ ಇತರ ವಸ್ತುಗಳ ತುಲನೆಯಲ್ಲಿ ಕೂದಲುಗಳನ್ನು ಬಹಳಷ್ಟು ಪ್ರಮಾಣದಲ್ಲಿ ಉಪಯೋಗಿಸುವುದು: ಮಾಂತ್ರಿಕರು ಅಘೋರಿ ಯಜ್ಞದಲ್ಲಿ ಆಹುತಿಯ ಸಾಮಗ್ರಿಗಳೆಂದು ಮೂಳೆ, ತಲೆಬುರುಡೆ, ಉಗುರು, ರಕ್ತ, ಕೊಳೆತ ಮಾಂಸ, ದಂತಪಂಕ್ತಿ ಮತ್ತು ಕೂದಲುಗಳನ್ನು ಉಪಯೋಗಿಸುತ್ತಾರೆ. ಇತರ ಸಾಮಗ್ರಿಗಳಿಗಿಂತ ಕೂದಲು ಕ್ಷಣಮಾತ್ರದಲ್ಲಿ ಉರಿದು ತಾಮಸಿಕ ಆಕೃತಿಯನ್ನು ನಿರ್ಮಿಸುವ ಮತ್ತು ಪ್ರಚಂಡ ಪ್ರಮಾಣದಲ್ಲಿ ತಾಮಸಿಕ ಗಂಧ ಅಥವಾ ದುರ್ಗಂಧವನ್ನು ನಿರ್ಮಾಣ ಮಾಡುವುದರಿಂದ ವಾತಾವರಣದಲ್ಲಿನ ತಾಮಸಿಕ ಸ್ಪಂದನಗಳು ಯಜ್ಞದ ಕಡೆಗೆ ಆಕರ್ಷಿಸಲು ಸಹಾಯವಾಗುತ್ತದೆ. ಕೂದಲು ಉರಿದ ನಂತರ ಅವು ಬೂದಿಯಲ್ಲಿ ರೂಪಾಂತರವಾಗದೇ ಜಿಗುಟು ಆಕೃತಿಗಳು ನಿರ್ಮಾಣವಾಗುತ್ತವೆ. ಆದುದರಿಂದ ಮಾಂತ್ರಿಕರ ಅಘೋರಿ ಯಜ್ಞದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕೂದಲುಗಳನ್ನು ಉಪಯೋಗಿಸಲಾಗುತ್ತದೆ. 

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳ ಸಮಸ್ಯೆಗಳು ಮತ್ತು ಅದರ ಮೇಲಿನ ಉಪಾಯಗಳು’)

ವಾಸ್ತುಗೆ ದೃಷ್ಟಿ ತಗಲುತ್ತದೆ ಎಂದರೆ ಏನಾಗುತ್ತದೆ?

ವ್ಯಕ್ತಿಗೆ ಹೇಗೆ ದೃಷ್ಟಿ ತಗಲುತ್ತದೆಯೇ, ಹಾಗೆಯೇ ವಾಸ್ತುಗೂ ದೃಷ್ಟಿ ತಗಲುತ್ತದೆ. ವಾಸ್ತುಗೆ ದೃಷ್ಟಿ ತಗಲುವುದರಿಂದ ವಾಸ್ತುವಿನಲ್ಲಿ ವಾಸಿಸುವವರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ಮನೆಯಲ್ಲಿ ಅಸ್ವಸ್ಥವೆನಿಸುವುದು, ನಕಾರಾತ್ಮಕ ವಿಚಾರಗಳ ಪ್ರಮಾಣ ಹೆಚ್ಚಾಗುವುದು, ಸಣ್ಣಪುಟ್ಟ ಕಾರಣಗಳಿಗೆ ಮನೆಯಲ್ಲಿ ವಾದವಿವಾದಗಳಾಗುವುದು, ಅರ್ಥಿಕ ಹಾನಿಯಾಗುವುದು, ಸತತವಾಗಿ ಯಾರಾದರೂ ಅನಾರೋಗಿಗಳಾಗುವುದು ಇವುಗಳಂತಹ ವಿವಿಧ ಸಮಸ್ಯೆಗಳು ಈ ತೊಂದರೆಯ ಲಕ್ಷಣಗಳಾಗಿವೆ. ವಾಸ್ತುವಿಗೆ ದೃಷ್ಟಿಯೇ ತಗಲಬಾರದು ಎಂಬುದಕ್ಕಾಗಿ ಮೊದಲಿನಿಂದಲೇ ಪ್ರಯತ್ನಿಸುವುದು ಯಾವಾಗಲೂ ಒಳ್ಳೆಯದು. ವ್ಯಕ್ತಿಗಿಂತ ವಾಸ್ತುವಿಗೆ ಬೇಗನೇ ದೃಷ್ಟಿ ಏಕೆ ತಗಲುತ್ತದೆ, ಈ ಸಂದರ್ಭದಲ್ಲಿನ ಪ್ರಕ್ರಿಯೆ ಮತ್ತು ವಾಸ್ತುವಿನಲ್ಲಿನ ತೊಂದರೆಗಳ ಸಂದರ್ಭದಲ್ಲಿ ಆ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಗಳ ಸಾಧನೆಯ ಮಹತ್ವ ಇಂತಹ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.

೧. ಒಬ್ಬ ವ್ಯಕ್ತಿಯನ್ನು ತ್ರಾಸದಾಯಕ ಸ್ಪಂದನಗಳಿಂದ ಬಾಧಿಸುವುದಕ್ಕಿಂತ (ತೊಂದರೆಯನ್ನು ಕೊಡುವುದು) ಯಾವುದಾದರೊಂದು ವಾಸ್ತುವನ್ನು ಬಾಧಿಸುವುದು ಸುಲಭವಾಗಿರುವುದರ ಕಾರಣಗಳು

ಅ. ಪವಿತ್ರ ವಾಸ್ತುವನ್ನು ಬಾಧಿಸುವುದು ಕಠಿಣವಾಗಿದೆ

ಪವಿತ್ರ ವಾಸ್ತುವನ್ನು (ಉದಾ.ದೇವಸ್ಥಾನವನ್ನು) ತ್ರಾಸದಾಯಕ ಸ್ಪಂದನಗಳಿಂದ ಬಾಧಿಸುವುದು (ತೊಂದರೆಗೀಡು ಮಾಡುವುದು) ಕಠಿಣವಾಗಿರುತ್ತದೆ; ಏಕೆಂದರೆ ಅದರ ವಾಯುಮಂಡಲದಲ್ಲಿ ಚೈತನ್ಯವಿರುತ್ತದೆ, ಹಾಗೆಯೇ ಅಲ್ಲಿ ಸಾತ್ತ್ವಿಕ ಲಹರಿಗಳ ಕಾರ್ಯಕಾರೀ ಲಹರಿಗಳ ಭ್ರಮಣವಿರುವುದರಿಂದ ಇಂತಹ ವಾಸ್ತುಗಳಲ್ಲಿ ಕೆಟ್ಟ ಶಕ್ತಿಗಳಿಗೆ ಸೇರಿಕೊಳ್ಳುವುದು ಕಠಿಣವಾಗಿರುತ್ತದೆ.

ಆ. ತ್ರಾಸದಾಯಕ (ಕೆಟ್ಟ) ಕರ್ಮಗಳನ್ನು ಮಾಡುವ ವ್ಯಕ್ತಿಗಳಿರುವ ವಾಸ್ತುವನ್ನು ಬಾಧಿಸುವುದು ಸುಲಭವಾಗಿರುತ್ತದೆ

ಯಾವ ವಾಸ್ತುವಿನಲ್ಲಿ ತ್ರಾಸದಾಯಕ (ಕೆಟ್ಟ) ಕರ್ಮ ಗಳನ್ನು ಮಾಡುವ ವ್ಯಕ್ತಿಗಳು ವಾಸಿಸುತ್ತಾರೆಯೋ, ಅಲ್ಲಿ ಸತತವಾಗಿ ಅವರ ಕೆಟ್ಟ ವಿಚಾರಗಳಲ್ಲಿನ ತಮೋಗುಣೀ ಸ್ಪಂದನಗಳು ಘನೀಭೂತವಾಗಿ ಆ ವಾಸ್ತುವು ತ್ರಾಸದಾಯಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆ. ಹೀಗೆ ಸತತವಾಗಿ ಕೆಲವು ವರ್ಷಗಳ ವರೆಗೆ ಆಗುತ್ತಿದ್ದರೆ ವಾಸ್ತುವು ಪೂರ್ಣತಃ ಬಾಧಿತಗೊಳ್ಳುತ್ತದೆ. ತಮೋಗುಣೀ ವಿಚಾರಗಳ ವ್ಯಕ್ತಿಗಳಿರುವ ವಾಸ್ತುವಿನ ತುಲನೆಯಲ್ಲಿ ಸತ್ವಗುಣೀ ವಿಚಾರಗಳ ವ್ಯಕ್ತಿಗಳಿರುವ ವಾಸ್ತುವನ್ನು ಬಾಧಿಸುವುದು ಕಠಿಣವಾಗಿರುತ್ತದೆ.

(ವಾಸ್ತುವಿನಲ್ಲಿರುವ ವ್ಯಕ್ತಿಗಳ ವಿಚಾರಸರಣಿ, ಗುಣ-ದೋಷಗಳು ಮತ್ತು ಅವರ ಸಾಧನೆ ಈ ವಿಷಯಗಳು ಆ ವಾಸ್ತುವಿನಲ್ಲಿ ನಿರ್ಮಾಣವಾಗುವ ಒಳ್ಳೆಯ-ಕೆಟ್ಟ ಸ್ಪಂದನಗಳಿಗೆ ಕಾರಣೀಭೂತವಾಗಿರುತ್ತವೆ. ಆದುದರಿಂದ ವ್ಯಕ್ತಿಯು ಯೋಗ್ಯ ಮಾರ್ಗದಿಂದ ಆಧ್ಯಾತ್ಮಿಕ ಸಾಧನೆ ಮಾಡುವುದು ಜೀವನದಲ್ಲಿನ ಪ್ರತಿಯೊಂದು ಸಮಸ್ಯೆಯ ಮೇಲಿನ ಎಲ್ಲಕ್ಕಿಂತ ಮಹತ್ವದ ಉಪಾಯವಾಗಿದೆ. - ಸಂಕಲನಕಾರರು (ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ನಾಮಸಂಕೀರ್ತನಯೋಗ’))

ಇ. ವಾಸ್ತುವು ನಿರ್ಜೀವವಾಗಿರುವುದರಿಂದ ಅದರಲ್ಲಿ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಕ್ಷಮತೆ ಇರುವುದಿಲ್ಲ

ವಾಸ್ತುವು ನಿರ್ಜೀವವಾಗಿರುವುದರಿಂದ ಮತ್ತು ಅದು ಸಾಧನೆಯನ್ನು ಮಾಡಿ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ತನ್ನ ಕ್ಷಮತೆಯನ್ನು ಹೆಚ್ಚಿಸುವುದು ಸಾಧ್ಯವಿಲ್ಲದಿರುವುದರಿಂದ, ಹಾಗೆಯೇ ಅದು ಭಾವದ ಸ್ತರದಲ್ಲಿ ಹೋರಾಡುವುದು ಸಾಧ್ಯವಿಲ್ಲ ದಿರುವುದರಿಂದ ಅದನ್ನು ಬಾಧಿಸುವುದು, ಒಬ್ಬ ವ್ಯಕ್ತಿಗಿಂತ ಸುಲಭವಾಗಿದೆ; ಆದರೆ ವ್ಯಕ್ತಿಯು ತಮೋಗುಣೀಯಾಗಿದ್ದರೆ, ಅವನನ್ನು ಬಾಧಿಸುವುದು ಸತ್ತ್ವಗುಣೀ ವ್ಯಕ್ತಿಗಿಂತ ಸುಲಭವಾಗಿರುತ್ತದೆ.

೨. ವಾಸ್ತುವಿಗೆ ದೃಷ್ಟಿ ತಗಲುವ ಪ್ರಕ್ರಿಯೆ ಮತ್ತು ಪರಿಣಾಮ

ಅ. ವಾಸ್ತುವು ಸ್ವತಃ ನಿರ್ಜೀವವಾಗಿರುವುದರಿಂದ ಮತ್ತು ಅದು ಸಾಧನೆ ಮಾಡದಿರುವುದರಿಂದ ಅದಕ್ಕೆ ಅದರಲ್ಲಿನ ತ್ರಾಸದಾಯಕ (ಕೆಟ್ಟ) ಸ್ಪಂದನಗಳನ್ನು ತೆಗೆಯುವುದು ಕಠಿಣವಾಗಿದೆ; ಆದುದರಿಂದ ವಾಸ್ತುವಿನ ಮೇಲೆ ತ್ರಾಸದಾಯಕ ಕೆಟ್ಟ ಸ್ಪಂದನಗಳ ಪ್ರಭಾವವು ಬೀಳತೊಡಗಿ ತೆಂದರೆ, ಆ ಸ್ಪಂದನಗಳು ಕಾಲಾಂತರದಲ್ಲಿ ಆ ವಾಸ್ತುವಿನಲ್ಲಿ ಘನೀಭೂತವಾಗತೊಡಗುತ್ತವೆ.

ಆ. ವಾಸ್ತುವಿನ ಆಯುಷ್ಯವು ಮನುಷ್ಯನ ಆಯುಷ್ಯಕ್ಕಿಂತ ಹೆಚ್ಚಿರುತ್ತದೆ; ಆದುದರಿಂದ ತ್ರಾಸದಾಯಕ ವಾಸ್ತುವು ಅಧಿಕ ಕಾಲದವರೆಗೆ ತ್ರಾಸದಾಯಕ ಸ್ಪಂದನಗಳ ಮಾಧ್ಯಮದಿಂದ ಕಾರ್ಯವನ್ನು ಮಾಡಬಹುದು.

೩. ತ್ರಾಸದಾಯಕ ವಾಸ್ತುವಿನಿಂದ ವ್ಯಕ್ತಿಯ ಮೇಲಾಗುವ ಪರಿಣಾಮ

ಅ. ವ್ಯಕ್ತಿಯಲ್ಲಿ ಕೆಟ್ಟ ಶಕ್ತಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ

ವಾಸ್ತುವಿನಲ್ಲಿ ಘನೀಭೂತವಾಗಿರುವ ತ್ರಾಸದಾಯಕ ಸ್ಪಂದನಗಳು ಕಾಲಾಂತರದಲ್ಲಿ ಅದರಲ್ಲಿನ ಸೀಮಿತ ವಾಯುಮಂಡಲವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುವುದರಿಂದ ಬಹಳಷ್ಟು ವರ್ಷಗಳವರೆಗೆ ಅಲ್ಲಿ ವಾಸಿಸುವ ವ್ಯಕ್ತಿಗಳ ಮೇಲೆ ಈ ತ್ರಾಸದಾಯಕ ಸ್ಪಂದನಗಳ ಪ್ರಭಾವವು ಬಿದ್ದು ಆ ವ್ಯಕ್ತಿಗಳಲ್ಲಿ ಕೆಟ್ಟ ಶಕ್ತಿಗಳು ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ; ಆದುದರಿಂದ ತ್ರಾಸದಾಯಕ ವಾಸ್ತುವನ್ನು ತ್ಯಜಿಸುವುದು ವ್ಯಕ್ತಿಯ ಐಹಿಕ, ಹಾಗೆಯೇ ಪಾರಮಾರ್ಥಿಕ ಉನ್ನತಿಯ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ.

ಆ. ವ್ಯಕ್ತಿಯ ಸಾಧನೆಯು ವ್ಯಯವಾಗುವುದು

ಸಾಧನೆಯನ್ನು ಮಾಡುವ ವ್ಯಕ್ತಿಯ ಸಾಧನೆಯು ವಾಸ್ತುವಿನಲ್ಲಿನ ತ್ರಾಸದಾಯಕ ಸ್ಪಂದನಗಳನ್ನು ಕಡಿಮೆ ಮಾಡಲು ವ್ಯಯವಾಗುತ್ತದೆ.

ಇ. ವಾಸ್ತುವು ಕೆಟ್ಟ ಶಕ್ತಿಗಳು ವಾಸಿಸುವ ಸ್ಥಾನವಾಗುವುದರಿಂದ ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ವ್ಯಾಪಕ ಸ್ತರದಲ್ಲಿ ತೊಂದರೆಯಾಗುವ ಸಾಧ್ಯತೆ ಇರುವುದು

ತ್ರಾಸದಾಯಕ (ಕೆಟ್ಟ) ವಾಸ್ತುವು ಕಾಲಾಂತರದಲ್ಲಿ ಕೆಟ್ಟ ಶಕ್ತಿಗಳು ವಾಸಿಸುವ ಸ್ಥಾನವಾಗುವುದರಿಂದ ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ಶಾರೀರಿಕ, ಮಾನಸಿಕ, ಹಾಗೆಯೇ ಆಧ್ಯಾತ್ಮಿಕ, ಹೀಗೆ ಎಲ್ಲ ಸ್ತರಗಳಲ್ಲಿ ತೊಂದರೆಯಾಗುವ, ಅಂದರೆ ವ್ಯಾಪಕ ಸ್ತರದಲ್ಲಿ ತೊಂದರೆಗಳಾಗುವ ಸಾಧ್ಯತೆಯಿರುತ್ತದೆ.

- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಆಷಾಢ ಶು.೧೪, ಕಲಿಯುಗ ವರ್ಷ ೫೧೧೧, ೬.೭.೨೦೦೯, ರಾತ್ರಿ ೮.೪೩)

(ಹೆಚ್ಚಿನ ಮಾಹಿತಿ ಮತ್ತು ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ’)

ಸಂಬಂಧಿತ ಲೇಖನಗಳು
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
ದೃಷ್ಟಿ ತಗಲುವುದು ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ

‘ದೃಷ್ಟಿ ತಗಲುವುದು’ ಎಂದರೇನು?


ಅ. ‘ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು, ಇನ್ನೊಂದು ಜೀವದ ಮೇಲೆ ದುಷ್ಪರಿಣಾಮವನ್ನು ಮಾಡುವುದಕ್ಕೆ ದೃಷ್ಟಿ ತಗಲುವುದು ಎನ್ನುತ್ತಾರೆ.’

  • ಇದರ ಒಂದು ಉದಾಹರಣೆಯೆಂದರೆ, ಮಗುವಿಗೆ ದೃಷ್ಟಿ ತಗಲುವುದು. ನಗುವ ಅಥವಾ ಮುದ್ದಾದ ಮಗುವನ್ನು ನೋಡಿ ಕೆಲವು ಜನರ ಮನಸ್ಸಿನಲ್ಲಿ ಅವರಿಗೆ ಅರಿವಾಗದೇ, ಒಂದು ರೀತಿಯ ಆಸಕ್ತಿಯುಕ್ತ ವಿಚಾರಗಳು ಬರುತ್ತವೆ. ಆಸಕ್ತಿಯುಕ್ತ ವಿಚಾರಗಳು ಯಾವಾಗಲೂ ರಜ-ತಮಾತ್ಮಕವಾಗಿರುತ್ತವೆ. ಮಗುವಿನ ಸೂಕ್ಷ್ಮದೇಹವು ಅತ್ಯಂತ ಸಂವೇದನಾಶೀಲವಾಗಿರುವುದರಿಂದ, ಈ ರಜ-ತಮಾತ್ಮಕ ಸ್ಪಂದನಗಳಿಂದ ಅದರ ಮೇಲೆ ಕೆಟ್ಟ ಪರಿಣಾಮವಾಗುತ್ತದೆ; ಅಂದರೆ ಮಗುವಿಗೆ ದೃಷ್ಟಿ ತಗಲುತ್ತದೆ.

ಆ. ಕೆಲವೊಮ್ಮೆ ಯಾವುದಾದರೊಬ್ಬ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಬಗ್ಗೆ ಯಾವುದಾದರೊಬ್ಬ ವ್ಯಕ್ತಿ ಅಥವಾ ಕೆಟ್ಟ ಶಕ್ತಿಯ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರುತ್ತವೆ ಅಥವಾ ಅವರಿಗೆ ಒಳಿತಾಗುವುದನ್ನು ಆ ವ್ಯಕ್ತಿಗೆ ಅಥವಾ ಕೆಟ್ಟ ಶಕ್ತಿಗೆ ಸಹಿಸಲಾಗುವುದಿಲ್ಲ. ಇದರಿಂದ ನಿರ್ಮಾಣವಾಗುವ ಕೆಟ್ಟ ಸ್ಪಂದನಗಳು ಆ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಮೇಲೆ ಪರಿಣಾಮವನ್ನು ಬೀರುವುದಕ್ಕೆ ‘ದೃಷ್ಟಿ ತಗಲುವುದು’ ಎನ್ನುತ್ತಾರೆ.

  • ‘ಯಾವುದಾದರೊಂದು ಜೀವದ ಮನಸ್ಸಿನಲ್ಲಿ, ಇನ್ನೊಂದು ಜೀವದ ಬಗ್ಗೆ ತೀವ್ರ ಮತ್ಸರ ಅಥವಾ ದ್ವೇಷಯುಕ್ತ ವಿಚಾರಗಳ ಪ್ರಮಾಣವು ಶೇ. ೩೦ ಕ್ಕಿಂತ ಹೆಚ್ಚಿಗಿದ್ದರೆ, ಆ ಜೀವದ ದೃಷ್ಟಿಯು ಇನ್ನೊಂದು ಜೀವಕ್ಕೆ ತೀವ್ರವಾಗಿ ತಗಲಬಹುದು. ಈ ರೀತಿಯ ದೃಷ್ಟಿ ತಗಲಿದಾಗ ದೃಷ್ಟಿ ತಗಲಿದ ಜೀವಕ್ಕೆ ಶಾರೀರಿಕಕ್ಕಿಂತ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ‘ಸೂಕ್ಷ್ಮ-ಸ್ತರದಲ್ಲಿ ತೀವ್ರ ದೃಷ್ಟಿ ತಗಲುವುದು’ ಎನ್ನುತ್ತಾರೆ.’

ಇ. ಅಘೋರಿ ವಿಧಿಗಳನ್ನು ಮಾಡುವವರಿಂದ ಯಾವುದಾದರೊಬ್ಬ ವ್ಯಕ್ತಿಯ ಮೇಲೆ ಮಾಟದಂತಹ ವಿಧಿಗಳನ್ನು ಮಾಡಿಸಿಕೊಂಡಿದ್ದರೂ ಆ ವ್ಯಕ್ತಿಗೆ ದೃಷ್ಟಿ ತಗಲುತ್ತದೆ.

ಇ೧. ಮಾಟದ ವೈಶಿಷ್ಟ್ಯಗಳು

ಇ೧ಅ. ‘ಮಾಟವನ್ನು ಒಂದು ವಿಶಿಷ್ಟ ಉದ್ದೇಶಕ್ಕಾಗಿ ಮಾಡುತ್ತಾರೆ.

ಇ೧ಆ. ದೃಷ್ಟಿ ತಗಲಬೇಕಾದರೆ ಯಾವುದಾದರೊಂದು ಜೀವದ ಕಪಟ ವಾಸನೆಯು ಶೇ.೩೦ರಷ್ಟಿರಬೇಕಾಗುತ್ತದೆ, ಆದರೆ ಮಾಟ ತಗಲಬೇಕಾದರೆ ಈ ಕಪಟ ವಾಸನೆಯು ಶೇ. ೩೦ ಕ್ಕಿಂತಲೂ ಹೆಚ್ಚು ತೀವ್ರ, ಅಂದರೆ ಉಗ್ರರೂಪವನ್ನು ತಾಳಬೇಕಾಗುತ್ತದೆ.

ಇ೧ಇ. ದೃಷ್ಟಿಯ ಸ್ಪಂದನಗಳು ಶೇ.೩೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತ್ರಾಸದಾಯಕವಾದರೆ, ಅದು ಮಾಟದಲ್ಲಿ ರೂಪಾಂತರವಾಗುತ್ತದೆ.’

(ಮಾಟದ ಬಗೆಗಿನ ವಿವರವಾದ ಶಾಸ್ತ್ರೀಯ ಜ್ಞಾನವನ್ನು ಇನ್ನೊಂದು ಗ್ರಂಥದಲ್ಲಿ ಪ್ರಕಟಿಸಲಾಗುವುದು.)

ಈ. ಕೆಟ್ಟ ಶಕ್ತಿಗಳು ಹರಡುವ ಕಪ್ಪು ಶಕ್ತಿಯಿಂದ ಯಾವುದಾದರೊಂದು ಜೀವಕ್ಕೆ ತೊಂದರೆಯಾಗುವುದಕ್ಕೂ ‘ಜೀವಕ್ಕೆ ಆ ಕೆಟ್ಟ ಶಕ್ತಿಯ ದೃಷ್ಟಿ ತಗಲಿತು’, ಎನ್ನುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಮತ್ತು ಪರಿಹಾರೋಪಾಯಕ್ಕಾಗಿ ಓದಿ ಸನಾತನದ ಗ್ರಂಥ: ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ)

ಈ ಲೇಖನವನ್ನು ಆಂಗ್ಲದಲ್ಲಿ ಓದಲು ಕ್ಲಿಕ್ ಮಾಡಿ.
Dharma Granth