ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ-ಉಪಾಸನೆಗೆ ದೇವರ ಕೋಣೆ ಇದ್ದೇ ಇರುತ್ತದೆ. ಆದರೆ ಹೆಚ್ಚಾಗಿ ದೇವರಕೋಣೆ ಹೇಗಿರುತ್ತದೆ? ದೇವರಕೋಣೆಯೆಂದರೆ ದೇವರ ಮೂರ್ತಿ ಅಥವಾ ಭಾವಚಿತ್ರಗಳನ್ನು ಅಡ್ಡಾದಿಡ್ಡಿಯಾಗಿ ಮನಸ್ಸಿಗೆ ಬಂದಂತೆ ಇಡುವ ಒಂದು ಜಾಗವಾಗಿರುತ್ತದೆ. ಕುಟುಂಬದ ಸದಸ್ಯರು ಯಾವ ಯಾವ ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆಯೋ, ಆ ತೀರ್ಥಕ್ಷೇತ್ರದಲ್ಲಿನ ದೇವರ ಚಿತ್ರ ಅಥವಾ ಸಣ್ಣಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವುದು ನಮ್ಮ ಹವ್ಯಾಸವಾಗಿ ಹೋಗಿದೆ. ಇದರಿಂದ ದೇವರಕೋಣೆಯ ನಿಜವಾದ ಉದ್ದೇಶವು ಸಫಲವಾಗಬಹುದೇ?
ದೇವರಕೋಣೆಯೆದುರು ಕುಳಿತರೆ ನಮ್ಮ ಮನಸ್ಸು ಶಾಂತವಾಗಬೇಕು, ಉತ್ಸಾಹವೆನಿಸಬೇಕು, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು. ದೇವಸ್ಥಾನವು ಹೇಗೆ ಇಡೀ ಗ್ರಾಮ ಅಥವಾ ಊರಿಗೆ, ಶಕ್ತಿ ಅಥವಾ ಚೈತನ್ಯವನ್ನು ಪೂರೈಸುತ್ತದೆಯೋ, ಅದೇ ರೀತಿ ದೇವರಕೋಣೆಯು ಇಡೀ ಮನೆಗೆ ಶಕ್ತಿ, ಚೈತನ್ಯವನ್ನು ಪೂರೈಸಬೇಕು, ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು. ಆದರೆ ನಾವು ಮಾಡುವ ದೇವರ ಜೋಡಣೆಯಿಂದ ಇದು ಸಾಧ್ಯವಾಗಬಹುದು ಎಂದು ನಮಗೆ ಅನಿಸುತ್ತದೆಯೇ? ಹಾಗಾದರೆ ಈಗ ಶಾಸ್ತ್ರೀಯವಾಗಿ ದೇವರನ್ನು ಹೇಗೆ ಜೋಡಿಸಬೇಕು ಎಂದು ತಿಳಿದುಕೊಳ್ಳೋಣ.
ಶಂಕುವಿನ ಆಕಾರದಲ್ಲಿ (ಕೋನಾಕಾರ) ರಚನೆ
ದೇವರಕೋಣೆ/ಮಂಟಪದಲ್ಲಿ ದೇವತೆಗಳ ಜೋಡಣೆಯನ್ನು ಶಂಕುವಿನ ಆಕಾರದಲ್ಲಿ ಮಾಡಬೇಕು. ಪೂಜಕನ ಎದುರಿಗೆ ಅಂದರೆ ಶಂಕುವಿನ ಮಧ್ಯಭಾಗದಲ್ಲಿ (ಶಂಕುವಿನ ತುದಿಯಲ್ಲಿ) ಶ್ರೀಗಣಪತಿಯನ್ನು ಇಡಬೇಕು. ಪೂಜೆಯನ್ನು ಮಾಡುವವರ ಬಲಗಡೆಗೆ ಸ್ತ್ರೀ ದೇವತೆಗಳನ್ನಿಡಬೇಕು. ದೇವತೆಗಳನ್ನಿಡುವಾಗ ಮೊದಲು ಕುಲದೇವಿಯನ್ನಿಡಬೇಕು. ಕುಲದೇವಿಯ ನಂತರ ಉಚ್ಚದೇವತೆಗಳ ಉಪರೂಪಗಳಿದ್ದಲ್ಲಿ ಅವುಗಳನ್ನಿಡಬೇಕು. ಅನಂತರ ಆಯಾ ಉಚ್ಚ ದೇವತೆಗಳನ್ನಿಡಬೇಕು. ಪೂಜಕನ ಎಡಗಡೆಗೆ ಇದೇ ರೀತಿಯಲ್ಲಿ ಪುರುಷ ದೇವರು, ಅಂದರೆ ಮೊದಲು ಕುಲದೇವರು, ಅನಂತರ ಉಚ್ಚದೇವರ ಉಪರೂಪಗಳು ಮತ್ತು ಕೊನೆಯಲ್ಲಿ ಉಚ್ಚದೇವತೆಗಳನ್ನಿಡಬೇಕು.
ಉಚ್ಚದೇವತೆಗಳ ಜೋಡಣೆಯನ್ನು ಮಾಡುವ ಕ್ರಮ: ಏಳು ಉಚ್ಚದೇವತೆಗಳಲ್ಲಿ ಬ್ರಹ್ಮ (ಇಚ್ಛಾ), ವಿಷ್ಣು (ಕ್ರಿಯಾ) ಮತ್ತು ಮಹೇಶ (ಜ್ಞಾನ) ಅಂದರೆ ಉತ್ಪತ್ತಿ, ಸ್ಥಿತಿ ಮತ್ತು ಲಯಕ್ಕೆ ಸಂಬಂಧಿಸಿದ ದೇವತೆಗಳಿಗಿಂತ ಮೊದಲು ಉಳಿದ ದೇವತೆಗಳನ್ನು ಅನುಕ್ರಮವಾಗಿ ಇಚ್ಛೆ, ಕ್ರಿಯಾ ಮತ್ತು ಜ್ಞಾನ ಲಹರಿಗಳಿಗನುಸಾರ ಇಡಬೇಕು.
ದೇವತೆಗಳ ಜೋಡಣೆಯನ್ನು ಶಂಕುವಿನಂತೆ ರಚಿಸುವುದರ ವೈಶಿಷ್ಟ್ಯಗಳು ಮತ್ತು ಮಹತ್ವ
ಅ. ಶಂಕುವಿನಂತೆ ರಚನೆಯನ್ನು ಮಾಡುವುದರ ವೈಶಿಷ್ಟ್ಯವೇನೆಂದರೆ, ಶಂಕುವಿನ ಮಧ್ಯಭಾಗ ಅಥವಾ ತುದಿ ಅಂದರೆ ಸಗುಣದಲ್ಲಿ ಬಂದು ಕಾರ್ಯ ಮಾಡುವ ಶಕ್ತಿ ಹಾಗೂ ಅದರ ಮೇಲಿನ ತ್ರಿಕೋನದ ಭಾಗವೆಂದರೆ ಆನಂದ ಮತ್ತು ಶಾಂತಿ ಅಂದರೆ ನಿರ್ಗುಣ ರೂಪವನ್ನು ತೋರಿಸುತ್ತದೆ. ಮಧ್ಯದಲ್ಲಿ ಗಣಪತಿ, ಆಮೇಲೆ ಆಯಾ ದೇವತೆಗಳ ಉಪರೂಪಗಳು ಮತ್ತು ನಂತರ ಮೂಲ ಉಚ್ಚದೇವತೆಗಳು, ಈ ಕ್ರಮವು ಜೀವದ ಸಗುಣದಿಂದ ನಿರ್ಗುಣದ ಕಡೆಗಿನ ಪ್ರಯಾಣವನ್ನು ತೋರಿಸುತ್ತದೆ. ಶಂಕುವಿನ ದೊಡ್ಡದಾಗುತ್ತಾ ಹೋಗುವ ಭಾಗವು ನಿರ್ಗುಣದ ವ್ಯಾಪ್ತಿಯನ್ನು ದರ್ಶಿಸುತ್ತದೆ.
ಆ. ಗಣಪತಿಯು ಯಾವಾಗಲೂ ಮಧ್ಯದಲ್ಲಿರುತ್ತಾನೆ. ನಾವು ಮಾತನಾಡುವ ನಾದಭಾಷೆಯನ್ನು ಶ್ರೀಗಣಪತಿಯು ತಿಳಿದು ಕೊಳ್ಳಬಲ್ಲನು; ಆದುದರಿಂದಲೇ ಅವನು ಬೇಗನೇ ಪ್ರಸನ್ನನಾಗುವ ದೇವನಾಗಿದ್ದಾನೆ. ಶ್ರೀಗಣಪತಿಯು ನಾದಭಾಷೆಯನ್ನು ಪ್ರಕಾಶ ಭಾಷೆಗೆ ಮತ್ತು ಪ್ರಕಾಶಭಾಷೆಯನ್ನು ನಾದಭಾಷೆಗೆ ರೂಪಾಂತರ ಮಾಡುವ ದೇವನಾಗಿದ್ದಾನೆ. ಇತರ ದೇವತೆಗಳಿಗೆ ಹೆಚ್ಚಾಗಿ ಪ್ರಕಾಶಭಾಷೆ ಮಾತ್ರ ತಿಳಿಯುತ್ತದೆ. ಹಾಗೆಯೇ ಶ್ರೀಗಣಪತಿಯು ಇಚ್ಛಾಲಹರಿಗಳಿಗೆ ಸಂಬಂಧಿಸಿದ ದೇವನಾಗಿದ್ದರಿಂದ ಭಕ್ತರ ಇಚ್ಛೆಗಳನ್ನು ಅಥವಾ ಭಕ್ತರು ದೇವತೆಗಳ ಚರಣಗಳಲ್ಲಿ ಮಾಡಿದ ಬೇಡಿಕೆಗಳನ್ನು ಬೇಗನೇ ಕುಲದೇವರಿಗೆ ತಲುಪಿಸುತ್ತಾನೆ. ಆಮೇಲೆ ಕುಲದೇವರು ಆಯಾ ಜೀವಗಳಿಗೆ ಸಹಾಯ ಮಾಡಲು ಬೇಗನೇ ಬರುತ್ತಾರೆ. ಅಲ್ಲದೇ ಕುಲದೇವರು ಜೀವಗಳ ಇಚ್ಛೆಯನ್ನು ಪೂರ್ಣಗೊಳಿಸಲು ಉಚ್ಚ ದೇವತೆಗಳಲ್ಲಿ ಬೇಡಿಕೊಳ್ಳುತ್ತಾರೆ. ಇದರಿಂದ ಉಚ್ಚದೇವತೆಗಳ ತತ್ತ್ವವು ಬೇಗನೆ ಕಾರ್ಯನಿರತವಾಗಿ ಜೀವಗಳಿಗಾಗಿ ಕಾರ್ಯ ಮಾಡುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೮.೧೦.೨೦೦೪, ರಾತ್ರಿ ೮.೩೦)
ಕೆಲವು ಇತರ ಸೂಚನೆಗಳು
೧. ಕೆಲವೊಮ್ಮೆ ದೇವತೆಗಳ ಚಿತ್ರಗಳಲ್ಲಿ ಭಗವಂತನು ಶಕ್ತಿಯೊಂದಿಗೆ ಇರುತ್ತಾನೆ. ಅಂತಹ ದೇವರ ಚಿತ್ರ ಅಥವಾ ಮೂರ್ತಿಯನ್ನು ಹೇಗೆ ಜೋಡಿಸಬೇಕು? : ಕೆಲವೊಮ್ಮೆ ದೇವತೆಗಳ ಚಿತ್ರಗಳಲ್ಲಿ ಭಗವಂತನು ಶಕ್ತಿಯೊಂದಿಗೆ ಇರುತ್ತಾನೆ. ಉದಾ. ಸೀತಾರಾಮ, ಲಕ್ಷ್ಮೀನಾರಾಯಣ ಇತ್ಯಾದಿ. ಯಾವಾಗ ದೇವಿಯನ್ನು ದೇವರ ಎಡಬದಿಯಲ್ಲಿ ತೋರಿಸಲಾಗಿರುತ್ತದೆಯೋ, ಆಗ ಅವಳು ತನ್ನ ಸ್ವಾಮಿಯೊಂದಿಗೆ ಭಕ್ತರಿಗೆ ಆಶೀರ್ವಾದ ನೀಡುತ್ತಿರುತ್ತಾಳೆ. ಎಡಬದಿಯು ಚಂದ್ರನಾಡಿಯದ್ದಾಗಿದ್ದು ಅದು ಶೀತಲ ಮತ್ತು ಆನಂದದಾಯಕವಾಗಿದೆ. ಇದು ಶಕ್ತಿಯ ತಾರಕರೂಪವಾಗಿದೆ. ಇಂತಹ ಚಿತ್ರಗಳಲ್ಲಿ ಪುರುಷ ದೇವರನ್ನು ಪ್ರಧಾನದೇವತೆಯೆಂದು ತಿಳಿದುಕೊಂಡು ಅವುಗಳನ್ನು ಗಣಪತಿಯ ಬಲಬದಿಗೆ ಇಡಬೇಕು. ಕೆಲವೊಂದು ಚಿತ್ರಗಳಲ್ಲಿ ದೇವಿಯರನ್ನು ದೇವರ ಬಲಬದಿಯಲ್ಲಿ ತೋರಿಸಲಾಗಿರುತ್ತದೆ. ಬಲಬದಿಯು ಸೂರ್ಯನಾಡಿಯದ್ದಾಗಿದ್ದು ಅದು ತೇಜಸ್ವೀ ಮತ್ತು ಶಕ್ತಿದಾಯಕವಾಗಿದೆ. ಇದು ಶಕ್ತಿಯ ಮಾರಕರೂಪವಾಗಿದೆ. ಕಾಳೀ ವಿಲಾಸತಂತ್ರದಲ್ಲಿ ಕಾಳಿಯು ಶಿವನ ಹೃದಯದ ಮೇಲೆ ನಿಂತು ನೃತ್ಯ ಮಾಡುತ್ತಾಳೆ ಎಂದು ಹೇಳಲಾಗಿದೆ. ಇಲ್ಲಿ ಶಕ್ತಿಯು ಶಿವನಿಗಿಂತ ಪ್ರಬಲಳಾಗಿದ್ದಾಳೆ. ಯಾವಾಗ ಚಿತ್ರದಲ್ಲಿ ದೇವಿಯನ್ನು ದೇವರ ಬಲಬದಿಯಲ್ಲಿ ತೋರಿಸಲಾಗಿರುತ್ತದೆಯೋ, ಆಗ ಅವಳು ಕ್ರಿಯಾಶೀಲಳಾಗಿರುವುದರಿಂದ ಅವಳನ್ನು ಪ್ರಧಾನ ದೇವತೆಯೆಂದು ತಿಳಿದುಕೊಂಡು ಚಿತ್ರವನ್ನು ಶ್ರೀಗಣಪತಿಯ ಎಡಬದಿಯಲ್ಲಿಡಬೇಕು.
೨. ಯಾರಾದರೊಬ್ಬರ ದೇವರಕೋಣೆಯಲ್ಲಿ ದೇವತೆಗಳ ಸಂಖ್ಯೆಯು ಕಡಿಮೆಯಿದ್ದಲ್ಲಿ ಉದಾ.ದೇವತೆಗಳ ಉಪರೂಪಗಳಿದ್ದು, ಉಚ್ಚದೇವತೆಗಳ ರೂಪಗಳಿಲ್ಲದಿದ್ದಲ್ಲಿ ದೇವತೆಗಳ ಜೋಡಣೆಯನ್ನು ಮಾಡುವಾಗ ಶಂಖದ ರಚನೆಯಲ್ಲಿ ಹೇಳಿದಂತೆ ಉಚ್ಚದೇವತೆಗಳ ರೂಪಗಳನ್ನು ಸಹ ಹೊಸದಾಗಿ ತಂದು ಇಡಬೇಕೇನು?: ಹೊಸದಾಗಿ ದೇವತೆಗಳನ್ನು ತಂದಿಡುವ ಆವಶ್ಯಕತೆ ಯಿಲ್ಲ. ಮನೆಯಲ್ಲಿರುವ ದೇವತೆಗಳನ್ನೇ ಶಂಕುವಿನ ಆಕಾರದಲ್ಲಿಡಬೇಕು. ಮುಖ್ಯವಾಗಿ ಶ್ರೀಗಣಪತಿ ಮತ್ತು ಕುಲದೇವರನ್ನು (ಕುಲದೇವ ಅಥವಾ ಕುಲದೇವಿ) ದೇವರಕೋಣೆಯಲ್ಲಿ ಇಟ್ಟರೆ ಸಾಕಾಗುತ್ತದೆ; ಏಕೆಂದರೆ ಇತರ ದೇವತೆಗಳ ತುಲನೆಯಲ್ಲಿ ನಮ್ಮ ಕುಲದೇವರ ಬಗ್ಗೆ ಭಾವಜಾಗೃತಿಯು ಬೇಗನೇ ಆಗುತ್ತದೆ. ಮೇಲಿನ ನಿಯಮವು ಕರ್ಮಕಾಂಡಕ್ಕೆ ಸಂಬಂಧಿಸಿದ್ದು ಅದು ದೇವತೆಗಳ ಸಗುಣ ರೂಪಗಳಿಗೆ ಸಂಬಂಧಿಸಿದೆ. ಸಗುಣ ಸಾಧನೆಯನ್ನು ಮಾಡುವಾಗ ಅನೇಕದಿಂದ ಏಕಕ್ಕೆ ಹೋಗುವುದಕ್ಕೆ ಅಂದರೆ ಅದ್ವೈತದ ಕಡೆಗೆ ಹೋಗುವುದಕ್ಕೆ ಹೆಚ್ಚು ಮಹತ್ವವಿರುತ್ತದೆ. ದೇವತೆಗಳ ಸಗುಣ ಮೂರ್ತಿಯಿಂದ ಆಯಾ ದೇವತೆಗಳ ಅನೇಕ ಸಗುಣ-ನಿರ್ಗುಣ ತತ್ತ್ವಗಳ ಕಡೆಗೆ ಮತ್ತು ಅದರಿಂದ ಇವೆಲ್ಲವುಗಳನ್ನೂ ತನ್ನಲ್ಲಿ ಸಮಾವೇಶಮಾಡಿಕೊಳ್ಳುವಂತಹ ಮತ್ತು ಸಂಪೂರ್ಣ ನಿರ್ಗುಣ ನಾದ ಈಶ್ವರನ ಕಡೆಗೆ ನಮಗೆ ಹೋಗಬೇಕಾಗಿರುತ್ತದೆ.
೩. ಯಾರಾದರೊಬ್ಬರ ದೇವರಕೋಣೆಯಲ್ಲಿ ದೇವರ ಸಂಖ್ಯೆಯು ಹೆಚ್ಚಿದ್ದಲ್ಲಿ, ಉದಾ.ದೇವತೆಗಳ ಎರಡು ಉಪರೂಪಗಳಿದ್ದಲ್ಲಿ ಜೋಡಣೆಯನ್ನು ಮಾಡುವಾಗ ಎರಡನ್ನೂ ಇಡಬೇಕೋ ಅಥವಾ ಎರಡರಲ್ಲಿ ಒಂದನ್ನು ಇಡಬೇಕು?: ಎರಡು ಉಪರೂಪಗಳಿದ್ದಲ್ಲಿ ಒಂದೇ ಉಪರೂಪವನ್ನು ಇಡುವುದರ ಕಡೆಗೆ ಜೀವದ ಒಲವಿರಬೇಕು. ನಮಗೆ ಅನೇಕದಿಂದ ಏಕದ ಕಡೆಗೆ ಹೋಗಬೇಕಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಅದಕ್ಕನುಸಾರ ಈಶ್ವರನ ಬಗ್ಗೆ ಶ್ರದ್ಧೆಯನ್ನು ನಿರ್ಮಿಸುವ ಧ್ಯೇಯವನ್ನಿಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ನಾವು ಸಗುಣ ಸಾಧನೆಯಿಂದ ನಿರ್ಗುಣ ಸಾಧನೆಯ ಕಡೆಗೆ ಹೋಗಬಹುದು.

ಮೇಲೆ ಕೊಟ್ಟಂತೆ ದೇವರ ಕೋಣೆಯಲ್ಲಿ ದೇವರ ಜೋಡಣೆ ಮಾಡಿದುದರಿಂದ ಬಂದ ಅನುಭೂತಿ - ದೇವರ ಮಂಟಪದಲ್ಲಿ ದೇವರನ್ನು ಯೋಗ್ಯರೀತಿಯಲ್ಲಿ ಜೋಡಣೆ ಮಾಡಿದ ಬಳಿಕ ಹತ್ತು
ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಸ್ತ್ರೀಯು ಎದ್ದು ನಿಲ್ಲುವುದು: ನಾನು ರಾಯಗಡ
ಜಿಲ್ಲೆಯ ರೋಹಾ ತಾಲೂಕಿನ ಖಾರಪಟ್ಟಿ ಎಂಬ ಊರಿನಲ್ಲಿರುವ ನನ್ನ ಸ್ನೇಹಿತನ ಮನೆಗೆ
ಹೋಗಿದ್ದೆ. ಅವರ ದೇವರ ಮಂಟಪದಲ್ಲಿ ದೇವರನ್ನು ಯೋಗ್ಯರೀತಿಯಲ್ಲಿ ಜೋಡಿಸಿರಲಿಲ್ಲ. ನಾನು
ಅವನಿಗೆ, ‘ಶ್ಯಾಮ, ಏನಿದು? ದೇವರನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿಟ್ಟಿರುವುದರಿಂದ
ನಿನ್ನ ಮನೆಯಲ್ಲಿ ಆಧ್ಯಾತ್ಮಿಕ ತೊಂದರೆಗಳ ಅರಿವಾಗುತ್ತಿದೆ. ಅವಶ್ಯವಿದ್ದಷ್ಟೇ
ದೇವರನ್ನಿಟ್ಟು ಅವುಗಳನ್ನು ಯೋಗ್ಯರೀತಿಯಲ್ಲಿ ಜೋಡಣೆ ಮಾಡು. ಹೆಚ್ಚುವರಿ ದೇವತೆಗಳನ್ನು
ವಿಸರ್ಜನೆ ಮಾಡು’ ಎಂದು ಹೇಳಿದೆ. ನಾನು ಹೇಳಿದ ಕೂಡಲೆ ಶ್ಯಾಮನು ಕೃತಿ ಮಾಡಿದನು. ಅನಂತರ
೧೦ ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಅವರ ತಾಯಿಯು ಗೋಡೆಯನ್ನು ಹಿಡಿದು ಎದ್ದು
ನಿಲ್ಲತೊಡಗಿದಳು. - ಶ್ರೀ.ಅನಂತ ಕೊಕಬಣಕರ, ಘಾಟಕೋಪರ, ಮುಂಬೈ.
ಇದೇ ರೀತಿ ನಿಮ್ಮ ಮನೆಯಲ್ಲಿಯೂ ದೇವರ ಮೂರ್ತಿಯನ್ನು ಜೋಡಿಸಿ ಏನು ಅನುಭವವಾಗುತ್ತದೆ ಎಂದು ನಮಗೆ ಖಂಡಿತವಾಗಿಯೂ ತಿಳಿಸಿ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೋಣೆ ಮತ್ತು ಪೂಜೆಯ ಉಪಕರಣಗಳು’)
ಇದೇ ರೀತಿ ನಿಮ್ಮ ಮನೆಯಲ್ಲಿಯೂ ದೇವರ ಮೂರ್ತಿಯನ್ನು ಜೋಡಿಸಿ ಏನು ಅನುಭವವಾಗುತ್ತದೆ ಎಂದು ನಮಗೆ ಖಂಡಿತವಾಗಿಯೂ ತಿಳಿಸಿ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೋಣೆ ಮತ್ತು ಪೂಜೆಯ ಉಪಕರಣಗಳು’)
ಸಂಬಂಧಿತ ವಿಷಯಗಳು
ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

NAMMA MANE DEVARU HANUMANTHA, DEVARA MANEYALLI TOP CENTER HANUMANTHA PHOTO IDE, ADARA KELAGE CHAMUNDESHWARI PHOTO, ADARA KELAGE GANESHA, LAKSHMI , SARASWATI PHOTO IDE, HAAGU BALAGADE MANJUNATHA SWAMY PHOTO IDE, DAYAVITTU IDU SARI IDEYE ANTA HELUTTIRA SWAMY.
ReplyDeleteನಮಸ್ಕಾರ ರಾಜುರವರೇ, ಈ ವಿಷಯದಲ್ಲಿ ಕೊಟ್ಟಿರುವಂತೆ ತಾವು ಶಾಸ್ತ್ರೀಯವಾಗಿ ದೇವರ ಜೋಡಣೆ ಮಾಡಿದರೆ ತುಂಬಾ ಲಾಭವಾಗುತ್ತದೆ. ಜೋಡಣೆ ಮಾಡುವ ಮೊದಲು ಹನುಮಂತನಿಗೆ ಪ್ರಾರ್ಥನೆ ಮಾಡಿ, 5-6 ನಿಮಿಷ ನಾಮಜಪ ಮಾಡಿ, ಈಗ ಇಟ್ಟಿರುವ ಜೋಡಣೆಯನ್ನು ನೋಡಿ ಮನಸ್ಸಿಗೆ ಏನು ಅನುಭವವಾಗುತ್ತದೆ ಎಂದು ನೋಡಿ. ಅದರ ನಂತರ ಮುಂದೆ ತಿಳಿಸಿದಂತೆ ಶಾಸ್ತ್ರೀಯವಾಗಿ ಜೋಡಣೆ ಮಾಡಿ. ಮಧ್ಯದಲ್ಲಿ ಶ್ರೀಗಣೇಶನನ್ನು ಇಡಿ. ಗಣೇಶನ ಬಲಭಾಗದಲ್ಲಿ ಅಂದರೆ ನಮ್ಮ ಎಡಭಾಗದಲ್ಲಿ ನಿಮ್ಮ ಕುಲದೇವರು ಹನುಮಂತನ ಚಿತ್ರವನ್ನು ಇಡಿ, ನಂತರ ಮಂಜುನಾಥ ಸ್ವಾಮಿಯ ಚಿತ್ರವನ್ನಿಡಿ. ಗಣೇಶನ ಎಡಭಾಗದಲ್ಲಿ ಅಂದರೆ ನಮ್ಮ ಬಲಭಾಗದಲ್ಲಿ ಮೊದಲು ಲಕ್ಷ್ಮೀ ನಂತರ ಸರಸ್ವತಿ, ಚಾಮುಂಡೇಶ್ವರಿ ದೇವಿಯನ್ನು ಇಡಿ. ಈ ರೀತಿ ಮಾಡುವುದರಿಂದ ಒಳ್ಳೆಯ ಪರಿಣಾಮವಾಗುತ್ತದೆ.
Deleteಜೋಡಣೆ ಮಾಡಿದ ನಂತರ ಪುನಃ ಕುಲದೇವರಿಗೆ ಪ್ರಾರ್ಥನೆ ಮಾಡಿ ಮೇಲೆ ಹೇಳಿದಂತೆ ಜೋಡಣೆ ಮಾಡಿದ್ದರಿಂದ ಏನು ಅನುಭವವಾಗುತ್ತದೆ ಎಂದು ನೋಡಿ. ಆಗ ನಿಮಗೇ ಅದರ ಅರಿವಾಗುತ್ತದೆ.
1) Devarige Mangalarathi madida nanthara,Navu(manushyaru) thegedu kolluva munna arathi yannu arisi,mathe hachi thegedukoluvudu yake?Idu sariyada kramave?
ReplyDelete2) Sankashta chathurthiyalli Belage,sanje 2hothu snana madi,devaranu mutti abisheka madabahuda?
Dayavittu utharisi...
ನಮಸ್ಕಾರ ಮಧುರಾರವರೇ,
Delete೧. ಇದು ಖಂಡಿತಾ ತಪ್ಪು ಕ್ರಮ. ದೇವರಿಗೆ ಆರತಿಯನ್ನು ಬೆಳಗಿಸಿದ ನಂತರ ದೇವರ ಸಾತ್ತ್ವಿಕತೆ ಜ್ಯೋತಿಯಲ್ಲಿ ಬಂದಿರುತ್ತದೆ. ಇಂತಹ ಪವಿತ್ರವಾದ ಜ್ಯೋತಿಯನ್ನು ಆರಿಸಲೇಬಾರದು. ನಾವು ಅದನ್ನು ಸ್ವೀಕರಿಸಿದರೆ ನಮಗೆ ತುಂಬಾ ಲಾಭವಾಗುತ್ತದೆ.
2. ಸ್ನಾನ ಮಾಡಿದ ನಂತರ ದೇವರನ್ನು ಮುಟ್ಟಬಹುದು.
NAMASKAR,
ReplyDeleteNITYA DEVATA POOJA PADDATIYA VIDHANADA VIDEO DAYAVITTU IDDARE UP LOAD MAADI.
Namaskara,
ReplyDeleteNeevu mele thilisiruvudaralli nanage innu swalpa vivarane bekide...
Shankada reethi devara jodane tilisiddiri aadare jodi agi iru devara jodane tilisilla?
udaharanege: Shiva-Parvathi, Lakshmi-Venkateshwara
Dayavittu tilisi :)
ನಮಸ್ಕಾರ ದಿವ್ಯಾರವರೇ, ನಿಮ್ಮ ಸಂದೇಹಕ್ಕನುಸಾರ ಮೇಲಿನ ವಿಷಯದಲ್ಲಿ "ಕೆಲವು ಇತರ ಸೂಚನೆಗಳು" ಎಂಬ ಶೀರ್ಷಿಕೆಯಡಿಯಲ್ಲಿ ವಿಷಯವನ್ನು ಸೇರಿಸಿದ್ದೇವೆ. ದಯವಿಟ್ಟು ಓದಿ ನೋಡಿ.
Deleteಧನ್ಯವಾದಗಳು.
dhanyavadagalu :)
Deleteಗುರುಗಳಿಗೆ ನನ್ನ ಪ್ರಣಾಮಗಳು,
ReplyDeleteನಮ್ಮ ಮನೆಯಲ್ಲಿ ಒಂದೇ ಫೋಟೋದಲ್ಲಿ ಮದ್ಯದಲ್ಲಿ ಶ್ರೀ ಗಣಪತಿ ಹಾಗೂ ಗಣಪತಿಯ ಬಲಬಾಗದಲ್ಲಿ ಮಹಾಲಕ್ಷ್ಮಿ ಹಾಗೂ ಗಣಪತಿಯ ಎಡಬಾಗದಲ್ಲಿ ತಾಯಿ ಸರಸ್ವತಿ ಇದ್ದಾರೆ. ಇದರ ಜೊತೆಗೆ ನಮ್ಮ ಕುಲದೇವತೆಯ, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಹಾಗೂ ತಾಯಿ ಬನಶಂಕರಿ (ನನ್ನ ಸ್ನೇಹಿತನ ಜೊತೆ ರೂಮಿನಲ್ಲಿ ವಾಸವಿದ್ದಾಗ ಬಿಟ್ಟು ಹೋಗಿದ್ದ ಫೋಟೋ) ದೇವಿಯ ತಲಾ ಒಂದೊಂದು ಫೋಟೋಗಳು ಇವೆ. ಇದರ ಜೊತೆಗೆ ನನ್ನ ತಂಗಿಯವರ ಮನೆ ದೇವರ ಕಳಶವಿದೆ.
ದಯೆಯಿಟ್ಟು ತಿಳಿಸಿ ಹೇಗೆ ಜೋಡಿಸಬೇಕು ಹಾಗೂ ಯಾವುದಾದರೂ ಫೋಟೋಗಳನ್ನು ತೆಗೆಯಬೇಕಾ? ಒಂದುವೇಳೆ ಫೋಟೋಗಳನ್ನು ಹೊರಗೆ ತೆಗೆಯಬೇಕೆಂದಿದ್ದರೆ ಎಲ್ಲಿ ಇಡಬೇಕು ಅಥವಾ ಯಾವ ರೀತಿ ವಿಸರ್ಜನೆ ಮಾಡಬೇಕು?
ಹಾಗೆಯೇ ದೇವರ ಚರಿತ್ರೆಯ, ಶ್ಲೋಕಗಳ ಕೆಲವು ಪುಸ್ತಕಗಳಿವೆ. ಅವುಗಳನ್ನು ಎಲ್ಲಿ ಇಡಬೇಕು?
ನಿಮ್ಮ ಸಲಹೆಗಳ ನಿರೀಕ್ಷೆಯೊಂದಿಗೆ,
ನಮಸ್ಕಾರ,
Deleteಆದಷ್ಟು ಪ್ರತ್ಯೇಕವಾಗಿರುವ, ಅಂದರೆ ಒಂದೇ ಗಣಪತಿಯ ಚಿತ್ರ ಇರುವುದನ್ನು ಮಧ್ಯಭಾಗದಲ್ಲಿಡಿ. ನಂತರ ನಿಮ್ಮ ಕುಲದೇವತೆಯು ಸ್ತ್ರೀದೇವರಾಗಿದ್ದಲ್ಲಿ ಗಣಪತಿಯ ಎಡಬದಿಯಲ್ಲಿಡಿ, ಅನಂತರ ಬನಶಂಕರಿ ದೇವಿ, ಅನಂತರ ಸರಸ್ವತಿಯ ಮತ್ತು ಮಹಾಲಕ್ಷ್ಮೀಯ ಚಿತ್ರವನ್ನಿಡಿ. ಗಣಪತಿಯ ಬಲಬದಿಯಲ್ಲಿ ರಾಘವೇಂದ್ರ ಸ್ವಾಮಿಗಳ ಚಿತ್ರವನ್ನಿಡಿ. ಕಳಶವನ್ನು ದೇವರ ಬಲಭಾಗದಲ್ಲಿ ಪ್ರತ್ಯೇಕವಾಗಿಡಿ. ದೇವರ ಜೊತೆಗೆ ಜೋಡಿಸಬೇಕೆಂದಿಲ್ಲ. ಇದಿಷ್ಟು ನಿಮ್ಮ ಬಳಿ ಈಗಾಗಲೇ ಇರುವ ಚಿತ್ರಗಳ ಜೋಡಣೆಯ ಪದ್ಧತಿ.
ಇದರಲ್ಲಿರುವ ಚಿತ್ರಗಳನ್ನು ವಿಸರ್ಜನೆ ಮಾಡಬಹುದು ಎಂದು ನಿಮಗೆ ಅನಿಸಿದಲ್ಲಿ. ಕೇವಲ ಗಣಪತಿಯ ಚಿತ್ರ ಮತ್ತು ಕುಲದೇವರಚಿತ್ರಗಳನ್ನಿಟ್ಟರೂ ಸಾಕು. ನಮ್ಮ ಆಧ್ಯಾತ್ಮಿಕ ಸಾಧನೆ ಅಥವಾ ವ್ಯಾವಹಾರಿಕ ಪ್ರಗತಿಗಾಗಿ ಇಷ್ಟೇ ಸಾಕಾಗುತ್ತದೆ. ರಾಘವೇಂದ್ರಸ್ವಾಮಿಗಳ ಚಿತ್ರ ಅಥವಾ ಇತರ ದೇವರ ಚಿತ್ರಗಳ ಬಗ್ಗೆ ಮನೆಯಲ್ಲಿರುವವರಿಗೆ ಭಕ್ತಿಭಾವ ಹೆಚ್ಚಿಗೆ ಇದ್ದಲ್ಲಿ, ಅಂತಹ ಚಿತ್ರ ಇಡಬಹುದು. ಇಲ್ಲದಿದ್ದರೆ ಕೇವಲ ಗಣಪತಿ ಮತ್ತು ಕುಲದೇವರ ಚಿತ್ರವನ್ನಿಟ್ಟು, ಉಳಿದವುಗಳನ್ನು ಅಗ್ನಿಯಲ್ಲಿ ಪ್ರಾರ್ಥನೆ ಮಾಡಿ ವಿಸರ್ಜನೆ ಮಾಡಿ.
ದೇವರಿಗೆ ಸಂಬಂಧಪಟ್ಟ ಪುಸ್ತಕಗಳನ್ನು ದೇವರ ಕೋಣೆಯಲ್ಲಿ / ಮಂಟಪದಲ್ಲಿಡಬೇಕೆಂದೇನಿಲ್ಲ. ಕಪಾಟಿನಲ್ಲಿಟ್ಟರೂ ಆಗುತ್ತದೆ. ಬೇಕಾದಾಗ ತೆಗೆದುಕೊಳ್ಳಬಹುದು.
ವಿಸರ್ಜನೆ ಮಾಡುವುದರ ಬಗ್ಗೆ ಕೊಟ್ಟ ಶಾಸ್ತ್ರಾಧಾರವನ್ನು ಈ ಕೊಂಡಿಯಲ್ಲಿ ಓದಿ - http://dharmagranth.blogspot.in/2012/12/blog-post_18.html
ಗುರುಗಳಿಗೆ ಪ್ರಣಾಮಗಳು,
Deleteಹಾಗು ಮೇಲೆ ತಿಳಿಸಿದ ನಿಮ್ಮ ಸಲಹೆಗೆ ದನ್ಯವಾದಗಳು,
ಶ್ರೀ ಗಣಪತಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ಅಮ್ಮನವರು ಮೂರು ದೇವತೆಗಳು ಒಂದೇ ಫೋಟೋದಲ್ಲಿ ಇದ್ದಾರೆ. ಹಾಗೂ ಇದು ದೊಡ್ಡದಾದ ಫೋಟೋ. ಒಂದು ವೇಳೆ ನಾನು ಫೋಟೋವನ್ನು ಮನೆಯ ಹಾಲ್ ನಲ್ಲಿ ಇಡಬಹುದೇ ಮತ್ತು ದೇವರ ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಇಡುವುದಾದರೆ, ಯಾವ ತರಹದ ವಿಗ್ರಹವನ್ನು ಇಡುವುದು ಸೂಕ್ತ? (ಬಲಮುರಿ, ಎಡಮುರಿ, ಎತ್ತರ, ಲೋಹ, ಮರದ ವಿಗ್ರಹ ಇತ್ಯಾದಿ)
ದೇವತೆಗಳ ಚಿತ್ರವನ್ನು ಅಗ್ನಿಯಲ್ಲಿ ಹಾಗೂ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿ ! ಎಂದಷ್ಟೇ ತಿಳಿಸಲಾಗಿದೆ. ಅಗ್ನಿಯಲ್ಲಿ ಹೇಗೆ ವಿಸರ್ಜಿಸುವುದು (ಅಡುಗೆ ಮಾಡುವ ಅಗ್ನಿಯಲ್ಲಿ ಅಥವಾ ಬೇರೆ ಏನಾದರೂ ಕ್ರಮಗಳಿವೆಯೇ) ವಿವರವಾಗಿ ತಿಳಿಸಿಕೊಡಿ.
ದಯೆಯಿಟ್ಟು ತಿಳಿಸಿ ಕೊಡಿ.
ನಿಮ್ಮ ಸಲಹೆಯ ನಿರೀಕ್ಷೆಯೊಂದಿಗೆ
ನಮಸ್ಕಾರ ಶ್ರೀ.ನಾಗರಾಜುರವರಿಗೆ,
Deleteಈ ಬ್ಲಾಗ್‌ನ ಮೇಲ್ಭಾಗದಲ್ಲಿ ಗ್ರಂಥಕ್ಕಾಗಿ ಸಂಪರ್ಕಿಸಿ ಎಂದು ಕೊಟ್ಟಿರುವ ಮೊಬೈಲ್‌ಗೆ ದಯವಿಟ್ಟು ಸಂಪರ್ಕಿಸಿ. ಅವರು ನಿಮಗೆ ವಿವರವಾಗಿ ಉತ್ತರ ಕೊಡುತ್ತಾರೆ.
ಧನ್ಯವಾದಗಳು.
sir iam shashidhara i want to your dharmagranth book and also i wanted plz reply which which book in ur place give me the full details contact me 99455 00051.shashi.143kumar@gmail.com
ReplyDeleteನಮಸ್ಕಾರ ನಿಮ್ಮ ಸಂಖ್ಯೆಗೆ ಸಂಪರ್ಕಿಸುತ್ತೇವೆ. ಧನ್ಯವಾದಗಳು
Deleteಗುರುಗಳಿಗೆ ಪ್ರಣಾಮಗಳu, dayavitta nanage devara maneyalli eshtu deepa yAvagalU uriya bEku. Thilisi kodi.
ReplyDeleteOriginal Post from: http://dharmagranth.blogspot.in/2012/12/devara-jodane.html
© Sanatan Sanstha - All Rights Reserved
ನಮಸ್ಕಾರ ಶ್ರೀ.ಗೋವಿಂದರಾಜುರವರಿಗೆ,
Deleteಬೆಳಗ್ಗೆ ಮತ್ತು ಸಾಯಂಕಾಲ ದೇವರೆದುರು ಒಂದು ದೀಪ ಉರಿಸಿದರೆ ಸಾಕಾಗುತ್ತದೆ. ನಾಮಜಪ ಮಾಡಲು ಅಥವಾ ಬೇರೆ ಏನಾದರೂ ಆಧ್ಯಾತ್ಮಿಕ ಸಾಧನೆ ಮಾಡಲು ಕುಳಿತುಕೊಳ್ಳುವುದಿದ್ದರೂ ದೀಪ ಹಚ್ಚಿ ಪ್ರಾರ್ಥನೆ ಮಾಡಿ ಕುಳಿತುಕೊಳ್ಳಿ.
ಧನ್ಯವಾದಗಳು