Showing posts with label ಆಹಾರ. Show all posts
Showing posts with label ಆಹಾರ. Show all posts

ಚೈನೀಸ್ ಆಹಾರಪದಾರ್ಥಗಳು : ಭಾರತೀಯರ ಮನಸ್ಸಿಗೆ ಬಿಟ್ಟ ವಿಷಕಾರಿ ಚೀನಿ ಡ್ರ್ಯಾಗನ್‌ !


ಒಂದು ಮೂತ್ರಪಿಂಡ ನಿಷ್ಕ್ರಿಯಗೊಂಡ ರೋಗಿಯ ಅಧ್ಯಯನ ಮಾಡುವಾಗ, ಚೀನಿ ಆಹಾರಪದಾರ್ಥಗಳ ವಿಷಕಾರಿ ಗುಣಧರ್ಮದ ಅರಿವಾಯಿತು. ಡಯಾಲಿಸಿಸ್‌ಗಾಗಿ ಆಸ್ಪತ್ರೆಗಳಿಗೆ ಸುತ್ತಾಡುವ, ಯುವ ವಯಸ್ಸಿನ,  ದೃಢಕಾಯ ಶರೀರವಿರುವ  ಈ ರೋಗಿ ನಮ್ಮ ದೂರದ ಸಂಬಂಧಿಕನಾಗಿದ್ದಾನೆ. ಅವನ ರೋಗದ ಅಧ್ಯಯನ  ಮಾಡುವಾಗ ಅವನಿಗೆ  ಚೈನೀಸ್ ಆಹಾರಪದಾರ್ಥಗಳನ್ನು ತಿನ್ನುವ ಭಯಾನಕ ರೂಢಿಯಿತ್ತು ಎಂಬುದು ಗಮನಕ್ಕೆ ಬಂದಿತು. ಆದುದರಿಂದ ಅವನ ಈ ಆಹಾರದ ಅಭ್ಯಾಸವು ಅವನ ಮೂತ್ರಪಿಂಡಗಳ ಮೇಲೆ ಏನಾದರೂ ಪರಿಣಾಮವನ್ನು  ಮಾಡಿರಬಹುದು ಎಂದು ಗಮನಕ್ಕೆ ಬಂದಿತು.
ಆದರೆ ಕೇವಲ ಈ ಒಬ್ಬ ರೋಗಿ ಇದಕ್ಕೆ ಸಾಕ್ಷಿಯಾಗಲು ಸಾಧ್ಯವಿರಲಿಲ್ಲ; ಆದುದರಿಂದ ಮೂತ್ರಪಿಂಡ ನಿಷ್ಕ್ರಿಯವಾಗಿರುವ ಪ್ರತಿಯೊಬ್ಬ ರೋಗಿಗೆ ನಾನು ಈ ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿದೆ; ಆಶ್ವರ್ಯವೆಂದರೆ ಯುವ ವಯಸ್ಸಿನಲ್ಲಿ ಮೂತ್ರಪಿಂಡಗಳ ನಿಷ್ಕ್ರಿಯವಾದ ರೋಗಿಗಳಲ್ಲಿ  ಶೇ. ೭೦ ರಿಂದ ೮೦ ರೋಗಿಗಳು ಸತತವಾಗಿ ಚೈನೀಸ್  ಆಹಾರವನ್ನು ಸೇವಿಸುವವರಾಗಿದ್ದರು.
ನಮ್ಮ ಮೇಲೆ  ಇಷ್ಟೊಂದು ವಿಷಕಾರಿ ಪರಿಣಾಮವಾಗಲು ಚೈನೀಸ್ ಆಹಾರದಲ್ಲಿ ಅಂತಹದ್ದೇನಿದೆ ? ಉದಾಹರಣೆ ಎಂದು ನಾವು ಸೋಯಾ ಸಾಸ್ ಮತ್ತು ಅಜಿನೋಮೋಟೊದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.....

೧. ಸೋಯಾ ಸಾಸ್

ಚೀನಾದಲ್ಲಿ ಸೋಯಾಬೀನ  ಮತ್ತು ಗೋದಿಯನ್ನು ಒಂದು ವರ್ಷ ಕೊಳೆಸಿ ಸೋಯಾ ಸಾಸ್‌ವನ್ನು ತಯಾರಿಸುತ್ತಾರೆ. https://www.youtube.com/watch?v=queVIA4xLgl ಈ ಲಿಂಕ್‌ಗೆ ಹೋಗಿ ತಾವು ಈ ಪ್ರಕ್ರಿಯೆಯನ್ನು ನೋಡಬಹುದು. ಯಾವುದೇ ದೀರ್ಘಕಾಲದ ವರೆಗೆ  ಕೊಳೆಸಿದ ಪದಾರ್ಥವನ್ನು ತಿಂದರೆ, ಮನುಷ್ಯನ ಶರೀರದಲ್ಲಿನ ಓಜಸ್ಸು ಮತ್ತು ತೇಜಸ್ಸು ಅಲ್ಪವಾಗುತ್ತದೆ. ಪಚನ ವ್ಯವಸ್ಥೆ ಹಾಳಾಗಿ ಬೇಗನೆ ವೃದ್ಧಾಪ್ಯ ಬರುತ್ತದೆ. ಸೋಯಾ ಸಾಸ್‌ನಲ್ಲಿ ಯಕೃತ್ತಿಗೆ ಹಾನಿಯನ್ನುಂಟು ಮಾಡುವ ಉಪ್ಪಿನ ಪ್ರಮಾಣ ಆವಶ್ಯಕತೆಗಿಂತ ಹೆಚ್ಚಿರುತ್ತದೆ.

ಇದಕ್ಕಿಂತ  ದೊಡ್ಡ ಸಂಕಟವೆಂದರೆ ಭಾರತದಲ್ಲಿ ಯಾವ ಸೋಯಾ ಸಾಸ್ ಸಿಗುತ್ತದೆಯೋ, ಅದನ್ನು ಒಂದು ವರ್ಷದ ವರೆಗೆ ಕೊಳೆಸುವ ತಾಳ್ಮೆ ಯಾರಿಗೂ ಇರುವುದಿಲ್ಲ;  ಆದುದರಿಂದ ಬೇರೆ ಬೇರೆ ರಸಾಯನಿಕಗಳನ್ನು ಬಳಸಿ ಕೃತಕ ಪದ್ಧತಿಯಿಂದ ಈ ಸಾಸ್‌ವನ್ನು ತಯಾರಿಸುತ್ತಾರೆ. ಇದರಿಂದ ಮೊದಲಿನ ವಿಷಕಾರಿ ಸೋಯಾ ಸಾಸ್‌ನ ವಿಷಕಾರಿ ಗುಣಧರ್ಮಗಳು ಇನ್ನೂ ಅನೇಕ ಪಟ್ಟು ಹೆಚ್ಚಾಗುತ್ತವೆ.

೨. ಅಜಿನೋಮೋಟೊ

ಅಜಿನೋಮೋಟೊ, ಇದು ತರಕಾರಿಗಳನ್ನು ಮೃದು ಮಾಡುವ ಒಂದು ಪದಾರ್ಥವಾಗಿದೆ. ಸಾಧಾರಣ ಉಪ್ಪಿನಂತೆ ಎಂದು ಹೇಳಬಹುದು. ಇತ್ತೀಚೆಗಿನ ಸಂಶೋಧನೆಗನುಸಾರ ಈ ಪದಾರ್ಥವು ಅರ್ಬುದರೋಗಕ್ಕೆ ಖಂಡಿತವಾಗಿಯೂ ಕಾರಣವಾಗಿದೆ. ಇದು ಆಹಾರದ ರುಚಿ ಮತ್ತು ಬಣ್ಣವನ್ನು ಕೃತಕ ರೀತಿಯಲ್ಲಿ ಹೆಚ್ಚಿಸುವ ಪದಾರ್ಥವಾಗಿದ್ದು  ತರಕಾರಿಗಳ ಬಣ್ಣವನ್ನು ಹೆಚ್ಚಿಸುತ್ತದೆ ಮತ್ತು ಅವು ಆಕರ್ಷಕವಾಗುತ್ತವೆ. ಇದು ಎಂತಹ  ವಿಚಿತ್ರ ಪದಾರ್ಥವಾಗಿದೆ ಎಂದರೆ,  ಒಬ್ಬ ವ್ಯಕ್ತಿಯ ಪಲ್ಯದಲ್ಲಿ ಒಂದು ಚಿಟಿಕೆಯಷ್ಟು ಅಜಿನೋಮೋಟೊ ಸಾಕಾದರೆ, ಹತ್ತು ವ್ಯಕ್ತಿಗಳ ಪಲ್ಯಕ್ಕೂ ಒಂದು ಚಿಟಿಕೆಯಷ್ಟೇ ಅಜಿನೋಮೋಟೊ ಸಾಕಾಗುತ್ತದೆ; ಇದರಿಂದ ಅದರ ಹಾನಿಕರ ಗುಣಧರ್ಮದ ಕಲ್ಪನೆ ಬರಬಹುದು.

ಹೀಗೆಯೇ ಬೃಹತ್ ಪ್ರಮಾಣದಲ್ಲಿ  ಪದಾರ್ಥಗಳನ್ನು ಉಪಯೋಗಿಸಿ ನಮ್ಮ ಆರೋಗ್ಯಕ್ಕೆ ಹಾನಿಕರವಾಗಿರುವ ಚೈನೀಸ್  ಪದಾರ್ಥಗಳನ್ನು ತಯಾರಿಸಲಾಗುತ್ತದೆ.

ಅರ್ಧಹಸಿ ತರಕಾರಿ ಮತ್ತು ಮಾಂಸದ ಪ್ರಮಾಣವು ಚೈನೀಸ್ ಆಹಾರದಲ್ಲಿ ಬಹಳಷ್ಟಿರುತ್ತದೆ. ನಮಗೆ ಸಿಗುವ ಚೈನೀಸ್ ಪದಾರ್ಥಗಳೆಂದರೆ ಮೇಘಾಲಯ ಮತ್ತು ಮಣಿಪೂರದಲ್ಲಿನ ಜನರು ವಿಚಿತ್ರ ಬದಲಾವಣೆ ಮಾಡಿದ ಒಂದು ವ್ಯಂಜನವಾಗಿದೆ.
ಇದರ ಒಂದು ಉದಾಹರಣೆ ಎಂದರೆ ಮಂಚಾವ ಸೂಪ, ನಮಗೆ ಸಿಗುವ  ಮಂಚಾವ ಸೂಪ ಚೈನೀಸ್ ಪದಾರ್ಥವೇ ಅಲ್ಲ ಮತ್ತು ಆಹಾರ ಹಾಗೂ ತರಕಾರಿಯನ್ನು ಹುರಿಯುವ ಪದ್ಧತಿಯು ಚೀನಿಯರದ್ದಾಗಿರದೇ, ಅದೂ ಸಹ ಅತ್ಯಂತ ದೋಷಯುಕ್ತ  ಮೇಘಾಲಯದ ಕೊಡಗೆಯಾಗಿದೆ. - ಡಾ. ಸಚಿನ ಜಾಧವ, ಸುಖಾಯು ಹೆಲ್ತಕೇರ್, ಕೆನಡಾ ಕಾರ್ನರ್, ನಾಸಿಕ.


ಆಹಾರದ ವಿಷಯದ ಲೇಖನಗಳು

ಈ ಬ್ಲಾಗ್‌ನಲ್ಲಿರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ನಮ್ಮ ಅನುಮತಿ ಪಡೆದು, ಆಧಾರಗ್ರಂಥವನ್ನು ಉಲ್ಲೇಖಿಸಬೇಕು ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ - dharma.granth0@gmail.com

ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು; ಹೆಸರುವಾಸಿಯಾಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಆಯಾ ಧರ್ಮಶಿಕ್ಷಣದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ನೀವು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. - ಧರ್ಮಗ್ರಂಥ (ಸನಾತನ ಸಂಸ್ಥೆ)

ಆಹಾರದ ವಿಷಯದ ಲೇಖನಗಳು
  1. ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ
  2. ಆಹಾರದ ವಿಧಕ್ಕನುಸಾರ ಸ್ವಭಾವವೈಶಿಷ್ಟ್ಯಗಳು ನಿರ್ಮಾಣವಾಗುವುದು
  3. ಉಪವಾಸದ ಬಗ್ಗೆ ವೈಜ್ಞಾನಿಕ ಸಂಶೋಧಕರ ನಿಷ್ಕರ್ಷ
  4. ಚಹಾ, ಕಾಫಿ ಇವುಗಳ ದುಷ್ಪರಿಣಾಮಗಳು
  5. ಬೆಲ್ಲದಿಂದಾಗುವ ಲಾಭಗಳು
  6. ಸಕ್ಕರೆಯ ದುಷ್ಪರಿಣಾಮಗಳು
  7. ಫಾಸ್ಟ್ ಫುಡ್’ನ ದುಷ್ಪರಿಣಾಮಗಳು
  8. ಋತುಗಳಿಗನುಸಾರ ಆಹಾರದ ನಿಯಮಗಳು
  9. ಸಾಯಂಕಾಲ ಹಾಲು, ಬೆಳಗ್ಗೆ ನೀರು ಮತ್ತು ಊಟದ ಕೊನೆಗೆ ಮಜ್ಜಿಗೆ ಕುಡಿಯುವುದರ ಮಹತ್ವ
  10. ‘ಚಿಕನ್ ಬರ್ಗರ್’ನ ಸೂಕ್ಷ್ಮ-ಪರಿಣಾಮಗಳು
  11. ಊಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು?
  12. ಮದ್ಯಪಾನದ ದುಷ್ಪರಿಣಾಮ
  13. ಆಹಾರ ಮತ್ತು ಕಪ್ಪು ಶಕ್ತಿ ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ
  14. ಎಂಜಲನ್ನವನ್ನು ಏಕೆ ತಿನ್ನಬಾರದು?
  15. ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
  16. ಪುರುಷರು ಮತ್ತು ಸ್ತ್ರೀಯರು ಊಟಕ್ಕೆ ಕುಳಿತುಕೊಳ್ಳುವ ಪದ್ಧತಿ
  17. ಎಡಗೈಯಿಂದ ಊಟ ಏಕೆ ಮಾಡಬಾರದು? ಬಲಗೈಯಿಂದ ಏಕೆ ಮಾಡಬೇಕು?
  18. ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
  19. ರಾತ್ರಿ ಮೊಸರನ್ನು ಏಕೆ ತಿನ್ನಬಾರದು?
  20. ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?
  21. ಚೈನೀಸ್ ಆಹಾರಪದಾರ್ಥಗಳು : ಭಾರತೀಯರ ಮನಸ್ಸಿಗೆ ಬಿಟ್ಟ ವಿಷಕಾರಿ ಚೀನಿ ಡ್ರ್ಯಾಗನ್‌ !

ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?


ಅ. ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು. (ಮಹಾಭಾರತ, ಅನುಶಾಸನಪರ್ವ, ಅಧ್ಯಾಯ ೯೦, ಶ್ಲೋಕ ೧೯)

ಆ. ಅತೃಪ್ತ ಆತ್ಮಗಳಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣಕ್ಕೆ ಮುಖ ಮಾಡಿ ಊಟಕ್ಕೆ ಕುಳಿತುಕೊಳ್ಳಬಾರದು : ದಕ್ಷಿಣ ದಿಕ್ಕಿನಲ್ಲಿ ಯಮಲಹರಿಗಳ ಪ್ರಭಾವವು ಹೆಚ್ಚಿಗಿರುವುದರಿಂದ, ಈ ರಜ-ತಮಾತ್ಮಕ ಲಹರಿಗಳ ಅಶುದ್ಧ ಕಕ್ಷೆಯಲ್ಲಿ ಕುಳಿತುಕೊಂಡು ಅನ್ನವನ್ನು ದೂಷಿತಗೊಳಿಸಬಾರದು ಎಂದು ಹೇಳಲಾಗಿದೆ. ಯಮಲಹರಿಗಳ ಪ್ರಭಾವದಿಂದ ಕೂಡಿದ ಅನ್ನವನ್ನು ಸೇವಿಸುವುದರಿಂದ ಅನೇಕ ಅತೃಪ್ತ ಆತ್ಮಗಳಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಅಶುಭ ದಕ್ಷಿಣ ದಿಕ್ಕಿನ ಕಡೆಗೆ ಮುಖ ಮಾಡಿ ಊಟಕ್ಕೆ ಕುಳಿತುಕೊಳ್ಳಬಾರದು ಎಂಬ ನಿಯಮವಿದೆ.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಮಾಘ ಕೃಷ್ಣ ಚತುರ್ದಶಿ, ಕಲಿಯುಗ ವರ್ಷ ೫೧೦೯ ೬.೩.೨೦೦೮ ಬೆಳಗ್ಗೆ ೧೦.೫೧)

ಪೂರ್ವಕ್ಕೆ ಮುಖ ಮಾಡಿ ಊಟ ಮಾಡಬೇಕು

ಪ್ರಾಂಗ್ಮುಖೋನ್ನಾನಿ ಬುಂಜೀತ್ತೋಚ್ಚರೇದ್‌ದಕ್ಷಿಣಾಮುಖಃ |
ಉದಂಗ್ಮುಖೋ ಮೂತ್ರಂ ಕುರ್ಯಾತ್ಪ್ರತ್ಯಕ್ಪಾದಾವನೇಜನಮಿತಿ ||
- ಆಪಸ್ತಂಬಧರ್ಮಸೂತ್ರ, ಪ್ರಶ್ನೆ ೧, ಪಟಲ ೧೧, ಕಾಂಡಿಕಾ ೩೧, ಸೂತ್ರ ೧

ಅರ್ಥ: ಪೂರ್ವಕ್ಕೆ ಮುಖ ಮಾಡಿ ಊಟವನ್ನು ಮಾಡಬೇಕು, ದಕ್ಷಿಣಕ್ಕೆ ಮುಖ ಮಾಡಿ ಮಲ ವಿಸರ್ಜನೆ ಮಾಡಬೇಕು, ಉತ್ತರಕ್ಕೆ ಮುಖ ಮಾಡಿ ಮೂತ್ರ ವಿಸರ್ಜನೆ ಮಾಡಬೇಕು ಮತ್ತು ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಳ್ಳಬೇಕು.

ಅ. ಊಟವನ್ನು ಪೂರ್ವಕ್ಕೆ ಮುಖ ಮಾಡಿ ಏಕೆ ಮಾಡಬೇಕು?: ಧರ್ಮಾಚಾರದ ಪ್ರಕಾರ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡುವುದರಿಂದ, ವಾಯುಮಂಡಲದ ಸ್ವಾಸ್ಥ್ಯವು ಕೆಡದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪಿ ವೇಗಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಪೂರ್ವ ದಿಕ್ಕು ತೇಜಕ್ಕೆ ಪೂರಕವಾಗಿದೆ. ಅನ್ನವನ್ನು ಸೇವಿಸುವುದು ಒಂದು ಯಜ್ಞಕರ್ಮವಾಗಿದೆ. ಈ ಯಜ್ಞಕರ್ಮವನ್ನು ಪೂರ್ವ ದಿಕ್ಕಿನಲ್ಲಿನ ತೇಜಸ್ಸಿನ ಶಕ್ತಿಯಿಂದ ಪಿಂಡದಲ್ಲಿ ಸಂಕ್ರಮಿತಗೊಳಿಸಿದರೆ ಊಟವನ್ನು ಮಾಡುವ ಕೃತಿಗೆ ವೇಗವನ್ನು ಕೊಡಲು ಸಾಧ್ಯವಾಗುತ್ತದೆ.

ಆಯಾ ದಿಕ್ಕಿಗೆ ಮುಖ ಮಾಡಿ ಆಯಾ ಲಹರಿಗಳ ಸ್ಪರ್ಶದ ಸ್ತರದಲ್ಲಿ ಆಯಾ ಕರ್ಮಗಳನ್ನು ಮಾಡುವುದರಿಂದ ಪಾಪವು ಪರಿಹಾರವಾಗಿ ಪುಣ್ಯ ಸಂಚಯವಾಗಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧.೫೯)

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
ಎಡಗೈಯಿಂದ ಊಟ ಏಕೆ ಮಾಡಬಾರದು? ಬಲಗೈಯಿಂದ ಏಕೆ ಮಾಡಬೇಕು?
Dharma Granth

ಮದ್ಯಪಾನದ ದುಷ್ಪರಿಣಾಮ


ಮದ್ಯಪಾನದಿಂದ ತ್ವಚೆಯಲ್ಲಿ ದಾಹ ಉತ್ಪನ್ನವಾಗುವುದರಿಂದ ಸೇವಿಸುವವರ ಮೇಲೆ ಘಾತಕ ಪರಿಣಾಮವಾಗುತ್ತದೆ

‘ಮದ್ಯದಲ್ಲಿ ಯಾವುದೇ ವಸ್ತುವಿನಲ್ಲಿನ ನೀರಿನ ಅಂಶವನ್ನು ಹೀರಿಕೊಳ್ಳುವ ಗುಣವಿದೆ. ಆದುದರಿಂದ ಮದ್ಯವು ದೇಹದ ಯಾವ ಭಾಗವನ್ನು ಸ್ಪರ್ಶಿಸಿದರೂ, ಅಲ್ಲಿ ದಾಹ ಉಂಟಾಗುತ್ತದೆ. ಕೆಲವೊಮ್ಮೆ ಚರ್ಮವು ಸುಡುತ್ತದೆ. ಇದರಿಂದ ‘ಹೊಟ್ಟೆಯೊಳಗಿನ ಅತಿಸಂವೇದನಾಶೀಲ ತ್ವಚೆಯ ಮೇಲೆ ಎಂತಹ ಪರಿಣಾಮವಾಗ ಬಹುದು’ ಎಂಬುದನ್ನು ಊಹಿಸಿ. - ಹ.ಭ.ಪ.ಸುಧಾತಾಯಿ ಧಾಮಣಕರ (೨೦)

ಸಕ್ಕರೆ ಮತ್ತು ಉಪ್ಪಿಗಿಂತ ೪೦೦೦ ಪಟ್ಟು ವೇಗದಿಂದ ಮದ್ಯವು ರಕ್ತದಲ್ಲಿ ಬೆರೆಯುತ್ತದೆ

ಮದ್ಯದ ಸೇವನೆಯಿಂದ ಸ್ಪರ್ಶಜ್ಞಾನವಿಲ್ಲದಂತಾಗುತ್ತದೆ. ತನ್ನ ಸ್ವಂತದ ಕೈ ಸ್ಪರ್ಶವೂ ತನಗೆ ಬೇರೆಯವರದ್ದಾಗಿದೆ ಎಂದೆನಿಸುತ್ತದೆ. ಸಕ್ಕರೆ ಮತ್ತು ಉಪ್ಪಿಗಿಂತ ೪೦೦೦ ಪಟ್ಟು ವೇಗದಿಂದ ಮದ್ಯವು ರಕ್ತದಲ್ಲಿ ಬೆರೆಯುತ್ತದೆ. ಹಾಗೆಯೇ ಮದ್ಯವು ರಕ್ತದಲ್ಲಿ ಇಂಗಾಲ ಡೈಆಕ್ಸೈಡ್ ಮತ್ತು ಪ್ರಾಣವಾಯುಗಳಿಗಿಂತ ೨೦೦ ಪಟ್ಟು ಹೆಚ್ಚು ಇಂಗುತ್ತದೆ. ಮದ್ಯದ ಕಣಗಳು ಪ್ರತ್ಯಕ್ಷ ಅಡ್ಡ ಲಂಬಗೋಲಾಕಾರವಾಗಿರುತ್ತವೆ, ಆದರೆ ರಕ್ತದಲ್ಲಿ ಹರಿಯುವಾಗ ಅವು ಎರಡು ಉದ್ದ ಲಂಬಗೋಲ ಒಟ್ಟಿಗೆಯಿರುವ ಆಕೃತಿಯಂತೆ ಹರಿಯುತ್ತವೆ.

ಊಟ ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದರೆ ತಟ್ಟೆಯಲ್ಲಿ ಅನ್ನವನ್ನು ಏಕೆ ಬಡಿಸಿಡಬಾರದು?

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುವುದರಿಂದ ಊಟವನ್ನು ಮಾಡುವ ವ್ಯಕ್ತಿಯು ಉಪಸ್ಥಿತನಿಲ್ಲದಿದ್ದಾಗ ಅವನಿಗೆ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬಾರದು. - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೮.೬.೨೦೦೬, ಸಾಯಂ. ೭.೪೭)

ಸಂಕಲನಕಾರರು: ಓರ್ವ ವ್ಯಕ್ತಿಯು ಊಟಕ್ಕೆ ಕುಳಿತಾಗ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಪ್ರಕ್ಷೇಪಣೆ ಆಗುವುದಿಲ್ಲವೇನು? ಓರ್ವ ವ್ಯಕ್ತಿಯು ಮಣೆಯ ಮೇಲೆ ಊಟಕ್ಕೆ ಕುಳಿತಾಗಲೂ ಕೆಟ್ಟ ಶಕ್ತಿಯು ಆಕರ್ಷಿತವಾಗಬಹುದೇನು?
ಓರ್ವ ಜ್ಞಾನಿ: ವ್ಯಕ್ತಿಯು ಮಣೆಯ ಮೇಲೆ ಕುಳಿತುಕೊಳ್ಳುವುದೆಂದರೆ ಪ್ರತ್ಯಕ್ಷ ಕರ್ತಾತ್ಮಕ ಸ್ವರೂಪದಿಂದ ಉತ್ಪನ್ನವಾಗಿರುವ ಭೋಗಿಸಲು ನಿರ್ಮಾಣವಾದ ರೂಪವೇ ಆಗಿದೆ. ಆದುದರಿಂದ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳ ಪ್ರಕ್ಷೇಪಣೆಯು ಹೆಚ್ಚಿನ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿನೆಡೆಗೆ ಆಗದೇ, ಜೀವದ ಪ್ರತ್ಯಕ್ಷ ವಾಸನೆಯ ಬಲದಿಂದ ನಿರ್ಮಾಣವಾದ ಭೋಗಾಸಕ್ತ ಕೃತಿಯ ಕಡೆಗೆ ಆಗುತ್ತದೆ. ಆದುದರಿಂದ ತಟ್ಟೆಯಲ್ಲಿ ಬಡಿಸಿರುವ ಅನ್ನದಿಂದ ಪ್ರಕ್ಷೇಪಿತವಾಗುವ ಗಂಧ ಮತ್ತು ಆಪತತ್ತ್ವಾತ್ಮಕ ಲಹರಿಗಳು ಅತ್ಯಲ್ಪ ಪ್ರಮಾಣದಲ್ಲಿ ಊರ್ಧ್ವ ದಿಕ್ಕಿಗೆ ಹೋಗುತ್ತವೆ. ಈ ಲಹರಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಕೆಟ್ಟ ಶಕ್ತಿಗಳ ವಾಸನೆ ಜಾಗೃತವಾಗುವುದು ಹೆಚ್ಚುಕಡಿಮೆ ಅಸಾಧ್ಯವೇ ಆಗಿದೆ.

ಕೆಲವೊಮ್ಮೆ ವ್ಯಕ್ತಿಗೆ ತೊಂದರೆಗಳನ್ನು ಕೊಡಲು ದೊಡ್ಡ ಕೆಟ್ಟ ಶಕ್ತಿಗಳು ಅನ್ನದ ಮಾಧ್ಯಮದಿಂದ ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತವೆ. ಹಿಂದೂ ಸಂಸ್ಕೃತಿಯಂತೆ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನು ಹಾಕಿ, ಆಪತತ್ತ್ವಾತ್ಮಕ ಕವಚವನ್ನು ನಿರ್ಮಾಣ ಮಾಡಿ ಅನ್ನವನ್ನು ಸ್ವೀಕರಿಸುವ ವ್ಯಕ್ತಿಗೆ, ಇತರ ವ್ಯಕ್ತಿಗಳ ತುಲನೆಯಲ್ಲಿ ಮೈಯಲ್ಲಿ ಸೇರುವುದು ಅಥವಾ ವ್ಯಕ್ತಿಯ ಮೇಲೆ ಹಿಡಿತ ಸಾಧಿಸಲು ಕೆಟ್ಟ ಶಕ್ತಿಗಳಿಗೆ ಶೇ.೨೦ರಷ್ಟು ಹೆಚ್ಚು ಕಠಿಣವಾಗಿರುತ್ತದೆ. (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೮.೬.೨೦೦೬, ಸಾಯಂ.೭.೪೭)

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು

ಆಹಾರ ಮತ್ತು ಕಪ್ಪು ಶಕ್ತಿ ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ


ಜಠರಾಗ್ನಿ ಮಂದವಾದಾಗ (ಅಗ್ನಿಮಾಂದ್ಯ) ಜಡ ಆಹಾರವನ್ನು ಸೇವಿಸುವುದರಿಂದ ಆಮದೋಷಗಳ (ವಾಯುದೋಷಗಳ) ನಿರ್ಮಿತಿಯಾಗುವುದು: ‘ಶರೀರದಲ್ಲಿನ ಅಗ್ನಿಯು ಮಂದವಾಗಿದ್ದಾಗ ಲಘು ಆಹಾರವನ್ನು ತೆಗೆದುಕೊಳ್ಳಬೇಕು. ಜಠರಾಗ್ನಿ ಮಂದವಾದಾಗ ವಾತವನ್ನು ಹೆಚ್ಚಿಸುವ, ಜಡ, ಎಣ್ಣೆಯ ಪದಾರ್ಥಗಳನ್ನು ಸೇವಿಸಿದರೆ ಅಗ್ನಿಯು ಇನ್ನಷ್ಟು ದುರ್ಬಲವಾಗಿ ಶರೀರದಲ್ಲಿ ಆಮದೋಷ (ಅಜೀರ್ಣವಾಗಿ ವಿಷಸಮಾನವಾದ ಘಟಕಗಳ) ಉತ್ಪನ್ನವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ.

ಅಸಮತೋಲ ಆಹಾರದಿಂದ ಶರೀರದಲ್ಲಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಯಲ್ಲಿ ನಾಲ್ಕು ಘಟಕಗಳು ಕಾರ್ಯ ಮಾಡುತ್ತವೆ. ಅವು ಮನಸ್ಸು, ನಾಲಿಗೆ, ಅಗ್ನಿ ಮತ್ತು ಜಠರ. ಈ ಎಲ್ಲ ಘಟಕಗಳ ವಿಚಾರ ಮಾಡಿ ಸಮತೋಲ ಮತ್ತು ಆವಶ್ಯಕ ಆಹಾರವನ್ನು ಸೇವಿಸಬೇಕು, ಆದರೆ ಈಗ ಹೆಚ್ಚಿನ ಜನರ ಒಲವು ಆಹಾರದ ಪೌಷ್ಟಿಕತೆಗಿಂತ ರುಚಿಯ ಕಡೆಗಿರುವುದು ಕಂಡುಬರುತ್ತದೆ. ಇದರಿಂದ ಜಠರ ಮತ್ತು ಅಗ್ನಿಯ ವಿಚಾರವನ್ನು ಮಾಡದೇ ಮನಸ್ಸು ಮತ್ತು ನಾಲಿಗೆಯ ವಿಚಾರ ಮಾತ್ರ ಆಗುತ್ತದೆ. ಇಂತಹ ಆಹಾರವನ್ನು ಸೇವಿಸಿದರೆ ಅದು ಪ್ರಾಣಶಕ್ತಿಯನ್ನು ಕೊಡದೇ, ಶರೀರದಲ್ಲಿ ಆಮವನ್ನು (ಕಪ್ಪು ಶಕ್ತಿಯನ್ನು) ನಿರ್ಮಿಸುತ್ತದೆ. ಈ ಕಪ್ಪು ಶಕ್ತಿಯು ಅಪಾನ ವಾಯುವಿನ ಮೂಲಕ ಮಸ್ತಕದವರೆಗೆ (ತಲೆಯವರೆಗೆ) ಹೋಗಿ ನಮಗೆ ತೊಂದರೆಯನ್ನು ಕೊಡುತ್ತದೆ.

ಸಮತೋಲ ಆಹಾರದಿಂದ ಅನ್ನವು ಜೀರ್ಣವಾಗಿ (ಪಚನವಾಗಿ) ಪ್ರಾಣಶಕ್ತಿಯು ಹೆಚ್ಚುವುದು, ಮತ್ತು ಅಸಮತೋಲ ಆಹಾರದಿಂದ ಅಜೀರ್ಣವಾಗಿ ಅಪಾನ ವಾಯುವಿನ ವಿಕೃತಿಯಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುವುದು: ಆಹಾರಶಾಸ್ತ್ರಕ್ಕನುಸಾರ ಹೊಟ್ಟೆಯ ಅರ್ಧ ಭಾಗದಷ್ಟು ಮಾತ್ರ ಆಹಾರವನ್ನು ಸೇವಿಸಬೇಕು, ಕಾಲು ಭಾಗದಷ್ಟು ನೀರು ಕುಡಿಯಬೇಕು ಮತ್ತು ಉಳಿದ ಕಾಲು ಭಾಗವನ್ನು ಖಾಲಿ ಬಿಡಬೇಕು. ಇದರಿಂದ ಆಹಾರವು ಜೀರ್ಣವಾಗಲು ಸಾಕಷ್ಟು ಜಾಗವಿರುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಆಹಾರವನ್ನು ಸೇವಿಸಿದರೆ ಮುಂದಿನ ಪ್ರಕ್ರಿಯೆ ನಡೆಯುತ್ತದೆ.

ಅತಿಯಾದ ಆಹಾರವನ್ನು ಸೇವಿಸಿದರೆ ಹೊಟ್ಟೆಯಲ್ಲಿ ಆಮ (ವಾಯು) ಸಂಚಯವಾಗುತ್ತದೆ ಮತ್ತು ಆಹಾರದ ಜೀರ್ಣಪ್ರಕ್ರಿಯೆಯು ಕೆಡುತ್ತದೆ. ಆಮದೋಷದಿಂದ ವಿಕೃತ ವಾಯು (ಕಪ್ಪು ಶಕ್ತಿ) ನಿರ್ಮಾಣವಾಗಿ ಅಜೀರ್ಣವಾಗುತ್ತದೆ. ಇದರಿಂದ ಆಹಾರದಲ್ಲಿನ ಎಲ್ಲ ಪೋಷಕಾಂಶಗಳು ಹೀರಲ್ಪಡುವುದಿಲ್ಲ ಮತ್ತು ಬಹಳಷ್ಟು ಪೋಷಕ ಘಟಕಗಳು ಮಲದ ಮೂಲಕ ಹೊರಬೀಳುತ್ತವೆ. ಹೇಗೆ ಬೀಸುವ ಕಲ್ಲಿನಲ್ಲಿ ಸ್ವಲ್ಪ ಸ್ವಲ್ಪ ಧಾನ್ಯ ಹಾಕಿದರೆ ಹಿಟ್ಟು ಸರಿಯಾಗಿ ಬರುತ್ತದೆಯೋ ಮತ್ತು ಹೆಚ್ಚು ಧಾನ್ಯವನ್ನು ಹಾಕಿದರೆ ರವೆಯಂತಹ ಹಿಟ್ಟು ಸಿಗುತ್ತದೆಯೋ, ಹಾಗೆಯೇ ಸಮತೋಲ ಆಹಾರವನ್ನು ಸೇವಿಸಿದರೆ ಅದರಲ್ಲಿನ ಎಲ್ಲಾ ಪೋಷಕಾಂಶಗಳು ಹೀರಲ್ಪಟ್ಟು ಪ್ರಾಣಶಕ್ತಿಯು ಸಿಗುತ್ತದೆ ಮತ್ತು ಅತಿಯಾಗಿ ಆಹಾರವನ್ನು ಸೇವಿಸಿದರೆ ಅದು ಪೂರ್ಣವಾಗಿ ಜೀರ್ಣವಾಗದೇ ಮಲದ್ವಾರದಿಂದ ಹೊರಬೀಳುತ್ತದೆ. ಅದರೊಂದಿಗೆ ಅಪಾನ ವಾಯುವಿನ ಪ್ರಕೋಪವಾಗಿ ಕಪ್ಪು ಶಕ್ತಿಯು ನಿರ್ಮಾಣವಾಗುತ್ತದೆ. ಕಪ್ಪು ಶಕ್ತಿಯನ್ನು ಹೋಗಲಾಡಿಸಲು ಅದರ ಮೂಲ ಕಾರಣವಾದ ಆಮದೋಷವನ್ನು ನಿವಾರಿಸಬೇಕು. ಔಷಧದಿಂದ ತಾತ್ಕಾಲಿಕ ಉಪಾಯವಾಗುತ್ತದೆ, ಅದಕ್ಕೆ ನಿತ್ಯದ ಉಪಾಯವೆಂದರೆ ಸಮತೋಲ ಆಹಾರ.
- ಪ.ಪೂ.ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು

ಎಂಜಲನ್ನವನ್ನು ಏಕೆ ತಿನ್ನಬಾರದು?


ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು

೧. ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶದಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗಿರುತ್ತದೆ.
೨. ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇವಿಸುವ ವ್ಯಕ್ತಿಯ ವಾಸನೆಯು ಅನ್ನದ ಮೇಲೆ ಮೂಡಿರುತ್ತದೆ. ಆದುದರಿಂದ ಎಂಜಲನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣವೂ ಹೆಚ್ಚಿರುತ್ತದೆ, ಹಾಗೆಯೇ ಕೆಲವು ಕೆಟ್ಟ ಶಕ್ತಿಗಳು ಎಂಜಲನ್ನವನ್ನು ಸೂಕ್ಷ್ಮದಲ್ಲಿ ಗ್ರಹಿಸುತ್ತವೆ.
- ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೫.೧೧.೨೦೦೭, ರಾತ್ರಿ ೮.೨೫)

ಎಂಜಲನ್ನವನ್ನು ಏಕೆ ತಿನ್ನಬಾರದು, ಇದರ ಹಿಂದಿನ ಶಾಸ್ತ್ರ

೧. ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಮಾಘ ಕೃಷ್ಣ ದ್ವಾದಶಿ (೪.೩.೨೦೦೮) ಸಾಯಂಕಾಲ ೭.೧೫)

೨. ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ. ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ. - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೨೦.೬.೨೦೦೭, ಸಾಯಂ.೭.೪೩)
(ಉನ್ನತರ ಅಥವಾ ಸಂತರ ಉಚ್ಛಿಷ್ಟವನ್ನು ಪ್ರಸಾದವೆಂದು ತಿಂದರೆ ತೊಂದರೆಯಾಗುವುದಿಲ್ಲ, ಅದರಿಂದ ಚೈತನ್ಯವೇ ಸಿಗುತ್ತದೆ. - ಸಂಕಲನಕಾರರು)

ಉಚ್ಛಿಷ್ಟ (ಎಂಜಲು) ಅನ್ನವನ್ನು ತಿನ್ನಬಾರದು

‘ಬಹುತೇಕ ರೋಗಗಳು ಕಲುಷಿತ ಆಹಾರ ಸೇವನೆಯಿಂದ ಆಗುತ್ತವೆ’ ಎಂದು ಆಧುನಿಕ ವೈದ್ಯಕೀಯಶಾಸ್ತ್ರವು ಹೇಳುತ್ತದೆ. ಆಧುನಿಕ ಪಾಶ್ಚಾತ್ಯ ವೈದ್ಯರು ‘ಉಚ್ಛಿಷ್ಟ ಅನ್ನದ ದೋಷ’ಗಳನ್ನು ಹೇಳುತ್ತಾರೆ; ಆದರೂ ಇಂದಿಗೂ ಉಪಾಹಾರಗೃಹಗಳಲ್ಲಿ ಈ ಎಂಜಲು ಅನ್ನವನ್ನು ಉಪಯೋಗಿಸುತ್ತಾರೆ. ಚಿತ್ರಮಂದಿರ, ವಿಹಾರಸಂಘ (ಕ್ಲಬ್) ಇತ್ಯಾದಿ ಮನರಂಜನೆಯ ಸ್ಥಳಗಳಲ್ಲಿ ತಟ್ಟೆಯಲ್ಲಿನ ಉಚ್ಛಿಷ್ಟ ಅನ್ನವನ್ನು ಜನರಿಗೆ ಕೊಡುತ್ತಾರೆ, ಇದು ಮಹಾಪಾಪವಾಗಿದೆ. ಇದನ್ನು ಯಾರೂ ವಿರೋಧಿಸುವುದಿಲ್ಲ.’ - ಗುರುದೇವ ಡಾ.ಕಾಟೇಸ್ವಾಮೀಜಿ

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳ ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
Dharma Granth

ಎಡಗೈಯಿಂದ ಊಟ ಏಕೆ ಮಾಡಬಾರದು? ಬಲಗೈಯಿಂದ ಏಕೆ ಮಾಡಬೇಕು?


ಎಡಗೈಯಿಂದ ಊಟ ಏಕೆ ಮಾಡಬಾರದು?

೧. ಎಡಗೈಯಿಂದ ಊಟವನ್ನು ಮಾಡುವುದರಿಂದ, ಎಡಗೈಯಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಬ್ರಹ್ಮಾಂಡದಲ್ಲಿನ ಉಚ್ಚದೇವತೆಗಳ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವದ ಶರೀರದಲ್ಲಿನ ಇಚ್ಛಾಶಕ್ತಿಯು ಕಾರ್ಯನಿರತವಾಗುತ್ತದೆ.

೨. ಎಡಗೈಯಿಂದ ಊಟವನ್ನು ಮಾಡುವುದರಿಂದ, ಜೀವದ ಚಂದ್ರನಾಡಿಯು ಜಾಗೃತವಾಗುವುದರಿಂದ ಈ ನಾಡಿಯ ಕಾರ್ಯಶಕ್ತಿಯಿಂದ ಉಪಪ್ರಾಣಗಳ ಕಾರ್ಯವು ಹೆಚ್ಚುತ್ತದೆ. ಉಪಪ್ರಾಣಗಳ ಕಾರ್ಯವು ಹೆಚ್ಚಾಗುವುದರಿಂದ ಅನ್ನವು ಸರಿಯಾಗಿ ಜೀರ್ಣವಾಗುವುದಿಲ್ಲ. ಎಡಗೈಯಿಂದ ಊಟವನ್ನು ಮಾಡುವುದರಿಂದ ಉಪಪ್ರಾಣಗಳು ಕಾರ್ಯನಿರತವಾಗಿ ಅನ್ನದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳ ಲಾಭವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೩. ಬಲನಾಡಿಯು ಕ್ರಿಯಾಶೀಲ ಮತ್ತು ಮಾರಕತತ್ತ್ವವನ್ನು ಪ್ರತಿನಿಧಿಸುತ್ತದೆ; ಆದುದರಿಂದ ಶುಭಕಾರ್ಯವನ್ನು ಮಾಡಲು ಇದಕ್ಕೆ ಅಗ್ರಸ್ಥಾನವನ್ನು ಕೊಡಲಾಗಿದೆ. ಬಲನಾಡಿಯು ಕ್ರಿಯೆಯಲ್ಲಿ ಶಿವಸ್ವರೂಪವಾಗಿದೆ. ಎಡಗೈಯನ್ನು ಅಶುಭ ಕರ್ಮಗಳನ್ನು ಮಾಡುವುದರ ಪ್ರತೀಕವೆಂದು ಪರಿಗಣಿಸಲಾಗಿದೆ, ಏಕೆಂದರೆ ಎಡಗೈಯಿಂದ ಮಾಡುವ ಕೃತಿಗಳಿಂದ ದೇಹದಲ್ಲಿನ ಉಪಪ್ರಾಣಗಳು ಜಾಗೃತವಾಗಿ, ಅವುಗಳ ವೇಗವಾದ ತಳ್ಳುವಿಕೆಯಿಂದ ಶರೀರದಲ್ಲಿನ ಇತರ ತ್ಯಾಜ್ಯವಾಯುಗಳೂ ಜಾಗೃತವಾಗುತ್ತವೆ. ಇದರಿಂದ ದೇಹವು ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಹೋಗುತ್ತದೆ, ಆದುದರಿಂದ ಎಡಗೈಯಿಂದ ಊಟ ಮಾಡುವುದನ್ನು ನಿಷೇಧಿಸಲಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)

೪. ಎಡಗೈಯಿಂದ ಮಾಡಿದ ಕೃತಿಗಳನ್ನು ಅಶುಭದ ಪ್ರತೀಕವೆಂದು ತಿಳಿಯಲಾಗಿದೆ, ಏಕೆಂದರೆ ಎಡಗೈಯಿಂದ ಮಾಡಿದ ಕೃತಿಗಳಲ್ಲಿ ತೇಜತತ್ತ್ವದ ಅಧಿಷ್ಠಾನವು ಬಲಗೈಯ ತುಲನೆಯಲ್ಲಿ ಕಡಿಮೆ ಇರುವುದರಿಂದ, ಈ ಕೃತಿಗಳಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವಾಗುವ ಪ್ರಮಾಣವು ಹೆಚ್ಚಿರುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜೇಷ್ಠ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೨ ೪.೭.೨೦೧೦ ಬೆಳಗ್ಗೆ ೧೧.೧೯)

ಬಲಗೈಯಿಂದ ಏಕೆ ಊಟವನ್ನು ಮಾಡಬೇಕು?

೧. ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ನಾಭಿಯ ಸುತ್ತಲೂ ಇರುವ ಪಂಚಪ್ರಾಣಗಳು ಕಾರ್ಯನಿರತವಾಗುತ್ತವೆ. ಈ ಪಂಚಪ್ರಾಣಗಳ ಕಾರ್ಯದಿಂದ ಪ್ರಾಣಶಕ್ತಿಯು ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ಅನ್ನವು ಸೂಕ್ಷ್ಮ-ಸ್ತರದಲ್ಲಿ ಚೆನ್ನಾಗಿ ಜೀರ್ಣವಾಗಿ ಜೀವದ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ. ಆದುದರಿಂದ ಎಡಗೈಗಿಂತ ಬಲಗೈಯಿಂದ ಊಟವನ್ನು ಮಾಡುವುದು ಹೆಚ್ಚು ಫಲದಾಯಕವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೨. ಬಲಗೈಯಿಂದ ಊಟವನ್ನು ಮಾಡುವಾಗ ಜೀವಕ್ಕೆ ಬಲ, ಅಂದರೆ ಸೂರ್ಯನಾಡಿಯಿಂದ ಕಾರ್ಯನಿರತವಾದ ತೇಜತತ್ತ್ವದ ಸ್ಪಂದನಗಳ ಲಾಭವಾಗಲು ಸಹಾಯವಾಗುತ್ತದೆ. ಬೆರಳುಗಳಿಂದ ಪ್ರಕ್ಷೇಪಿತವಾಗುವ ತೇಜದ ಸ್ಪರ್ಶದಿಂದ ಅನ್ನದ ತುತ್ತುಗಳಲ್ಲಿನ ರಜ-ತಮಯುಕ್ತ ಸ್ಪಂದನಗಳು ನಾಶವಾಗುತ್ತವೆ. ಈ ರೀತಿಯಲ್ಲಿ ತುತ್ತು ಹೊಟ್ಟೆಯಲ್ಲಿ ಹೋಗುವುದಕ್ಕಿಂತ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಾಗಲು ಸಹಾಯವಾಗುತ್ತದೆ, ಆದುದರಿಂದ ಬಲಗೈಯಿಂದ ಊಟವನ್ನು ಮಾಡಬೇಕೆಂದು ಹೇಳಲಾಗಿದೆ. ಇದು ಯೋಗ್ಯ ಆಚಾರವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಅಧಿಕ ವೈಶಾಖ ಕೃಷ್ಣ ಪಕ್ಷ ಅಷ್ಟಮಿ, ಕಲಿಯುಗ ವರ್ಷ ೫೧೧೨ (೬.೫.೨೦೧೦) ಮಧ್ಯಾಹ್ನ ೪.೨೭)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
Dharma Granth

‘ಚಿಕನ್ ಬರ್ಗರ್’ನ ಸೂಕ್ಷ್ಮ-ಪರಿಣಾಮಗಳು

೧. ‘ಚಿಕನ್ ಬರ್ಗರ್’ನಲ್ಲಿ ಕಪ್ಪು ಶಕ್ತಿಯು ಕಾರ್ಯನಿರತವಾಗಿರುತ್ತದೆ: ಕೋಳಿಯನ್ನು ಸಾಯಿಸಿ ಅದರ ಮಾಂಸದಿಂದ ‘ಬರ್ಗರ್’ವನ್ನು ತಯಾರಿಸುವಾಗ ಅದರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಪ್ಪು ಶಕ್ತಿಯು ಬರುತ್ತದೆ. ಕೋಳಿಯ ಮಾಂಸದಲ್ಲಿನ ಈ ಕಪ್ಪು ಶಕ್ತಿಯು ಬರ್ಗರ್‌ನಲ್ಲೂ ಕಾರ್ಯನಿರತವಾಗಿರುತ್ತದೆ.

೨. ಬರ್ಗರ್‌ನಲ್ಲಿ ಕಪ್ಪು ಶಕ್ತಿಯು ಕಾರ್ಯನಿರತವಾಗಿರುವುದರಿಂದ, ಅದನ್ನು ತಿನ್ನಲು ಆಕರ್ಷಿಸುವುದಕ್ಕಾಗಿ ಅದರಲ್ಲಿ ಭಾಸಾತ್ಮಕ, ಆಸೆಯನ್ನು ಹುಟ್ಟಿಸುವ ಮತ್ತು ಕಂಪನಗಳಂತಹ ನಕಲಿ ಚೈತನ್ಯವು ಸಹಜ ನಿರ್ಮಾಣವಾಗುತ್ತದೆ.

ಪುರುಷರು ಮತ್ತು ಸ್ತ್ರೀಯರು ಊಟಕ್ಕೆ ಕುಳಿತುಕೊಳ್ಳುವ ಪದ್ಧತಿ


ಪುರುಷರು ಊಟಕ್ಕೆ ಕಾಲುಗಳನ್ನು ಮಡಚಿಕೊಂಡು ಏಕೆ ಕುಳಿತುಕೊಳ್ಳಬೇಕು?
ಅ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನ ಜೀರ್ಣವಾಗಲು ಸಹಾಯವಾಗುತ್ತದೆ: ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನವು ಸರಿಯಾಗಿ ಜೀರ್ಣವಾಗುತ್ತದೆ. ಸುಖಾಸನದ ವಿಶಿಷ್ಟ ಅವಸ್ಥೆಯಿಂದ ಅನ್ನವು ಹೊಟ್ಟೆಯಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತದೆ. ಮುಂದಕ್ಕೆ ಬಾಗಿ ಊಟವನ್ನು ಮಾಡಬೇಕಾಗುವುದರಿಂದ ಹೊಟ್ಟೆಯ ಸ್ನಾಯುಗಳು ಪದೇಪದೇ ಕುಗ್ಗುತ್ತವೆ ಮತ್ತು ಹಿಗ್ಗುತ್ತವೆ. ಇದರಿಂದ ಜೀರ್ಣವಾಗಲು ಆವಶ್ಯಕವಾದ ರಕ್ತದ ಪೂರೈಕೆಯು ಹೆಚ್ಚುತ್ತದೆ. ಹಾಗೆಯೇ ಅನ್ನವನ್ನು ಸೇವಿಸುವಾಗ ನಿರ್ಮಾಣವಾಗುವ ವಾಯು (ಗ್ಯಾಸ್) ಹೊರ ಬೀಳಲು ಸಹಾಯವಾಗುತ್ತದೆ.

ಆ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತುಕೊಳ್ಳುವುದರಿಂದ ಭೋಜನದಲ್ಲಿನ ಸಾತ್ತ್ವಿಕತೆಯು ಜೀವದ ಸಂಪೂರ್ಣ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಡುತ್ತದೆ: ಊಟವನ್ನು ಮಾಡುವಾಗ ಪುರುಷರು ಸುಖಾಸನದಲ್ಲಿ (ಕಾಲುಗಳನ್ನು ಮಡಚಿ) ಕುಳಿತುಕೊಳ್ಳಬೇಕು. ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ಜೀವದ ದೇಹದಲ್ಲಿನ ಸೂಕ್ಷ್ಮವಾಯು ಮತ್ತು ಅವುಗಳ ಪ್ರವಾಹವು ಸರಾಗವಾಗಿ ಕಾರ್ಯನಿರತವಾಗುತ್ತವೆ. ಹಾಗೆಯೇ ಜೀವದ ದೇಹದಲ್ಲಿರುವ ತ್ರಿಗುಣಗಳೂ ಕೆಲವು ಪ್ರಮಾಣದಲ್ಲಿ ಸ್ಥಿರವಾಗುತ್ತವೆ. ಇದರಿಂದ ಜೀವವು ಸೇವಿಸಿದ ಭೋಜನದಲ್ಲಿನ ಸಾತ್ತ್ವಿಕತೆಯು ಅದರ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಟ್ಟು ಸ್ಥೂಲದೇಹ ಮತ್ತು ಪ್ರಾಣದೇಹಕ್ಕೆ ಆವಶ್ಯಕ ಪ್ರಮಾಣದಲ್ಲಿ ಇಂಧನದ ಪೂರೈಕೆಯಾಗುತ್ತದೆ. - ಶ್ರೀ ಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೦.೬.೨೦೦೭, ಮಧ್ಯಾಹ್ನ ೩.೩೫)

ಸ್ತ್ರೀಯರು ಊಟಕ್ಕೆ ಬಲಮಂಡಿಯನ್ನು ಹೊಟ್ಟೆಗೆ (ಮೈಗೆ) ತಗಲಿಸಿಕೊಂಡು ಏಕೆ ಕುಳಿತುಕೊಳ್ಳಬೇಕು?
ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುವುದರಿಂದ ಮಣಿಪುರಚಕ್ರವು (ನಾಭಿಸ್ಥಾನ) ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಸ್ಥಿತಿಯಿಂದ ಜೀವದ ದೇಹದ ರಜೋಗುಣಿ ವಿಚಾರಗಳ ವೇಗದ ಮೇಲೆಯೂ ನಿಯಂತ್ರಣವುಂಟಾಗಿ ಊಟ ಮಾಡುವ ಕ್ರಿಯೆಯಲ್ಲಿ ಯಾವುದೇ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುವುದಿಲ್ಲ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಸ್ತ್ರೀಯರು ತಮ್ಮಲ್ಲಿನ ರಜೋಗುಣಿ ಕಾರ್ಯಕಾರಿ ಶಕ್ತಿಯನ್ನು ನಿಯಂತ್ರಣದಲ್ಲಿಡಲು ಪೂಜೆಯನ್ನು ಮಾಡುವಾಗ ಅಥವಾ ಊಟಕ್ಕೆ ಕುಳಿತುಕೊಳ್ಳುವಾಗ ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುತ್ತಿದ್ದರು. 

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?

ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಮಹತ್ವ

ಆಧ್ಯಾತ್ಮಿಕ ದೃಷ್ಟಿಕೋನದಿಂದ - ಸಾಯಂಕಾಲ (ಮಲಗುವ ಮೊದಲು) ಹಾಲು ಕುಡಿಯುವುದು, ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯುವುದು ಮತ್ತು ಊಟದ ಕೊನೆಗೆ ಮಜ್ಜಿಗೆ ಕುಡಿಯುವುದು ಇವುಗಳ ಮಹತ್ವ

    ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ|
    ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್|| - ಸುಭಾಷಿತ

ಅರ್ಥ: ಸಾಯಂಕಾಲ (ಅಂದರೆ ಮಲಗುವ ಮುನ್ನ) ಹಾಲು ಕುಡಿಯಬೇಕು ಮತ್ತು ಬೆಳಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿಯಬೇಕು (ಉಷಃಪಾನ), ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿಯಬೇಕು; ಹೀಗೆ ಮಾಡಿದರೆ ವೈದ್ಯನಿಗೇನು ಕೆಲಸ?

ಋತುಗಳಿಗನುಸಾರ ಆಹಾರದ ನಿಯಮಗಳು

ಪ್ರತಿಯೊಂದು ಋತುವಿಗನುಸಾರ ವಾತಾವರಣವು ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಮನುಷ್ಯನಿಗೆ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಭೂಮಿಯ ಮೇಲೆ ಬೇಸಿಗೆಗಾಲ ಮತ್ತು ಚಳಿಗಾಲ ಈ ಎರಡೇ ಋತುಗಳಿವೆ. ಹಿಂದೂಸ್ಥಾನದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಮತ್ತೆ ೨ ಋತುಗಳಲ್ಲಿ ವಿಭಾಜನೆಯಾಗುತ್ತದೆ. ಈ ವಿಭಾಜನೆಯಾಗಿರುವ ಪ್ರತಿಯೊಂದು ಋತುವಿನಲ್ಲಿ ೨ ತಿಂಗಳುಗಳಿರುತ್ತವೆ. ೬ ಋತುಗಳು ಸೇರಿ ಒಂದು ವರ್ಷವಾಗುತ್ತದೆ.

ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?

೧. ಅನ್ನವು ‘ಪೂರ್ಣಬ್ರಹ್ಮ’ವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.

೨. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ.

೩. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗಬಹುದು, ಆದುದರಿಂದ ಊಟದ ತಟ್ಟೆಯನ್ನು ತೊಡೆಗಳ ಮೇಲೆ ಇಟ್ಟುಕೊಂಡು ಊಟವನ್ನು ಮಾಡಬಾರದು.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
Dharma Granth

'ಫಾಸ್ಟ್ ಫುಡ್’ನ ದುಷ್ಪರಿಣಾಮಗಳು

ಆಧುನಿಕ (ಪಾಶ್ಚಾತ್ಯ) ಪದ್ಧತಿಯ ಆಹಾರಪದಾರ್ಥಗಳು: ಕುಟುಂಬದಲ್ಲಿನ ತಾಯಿ-ಸಹೋದರಿಯರು ತಯಾರಿಸಿದ ಊಟ, ಉಪಾಹಾರ, ಖಾದ್ಯ ಅಥವಾ ಪಾನೀಯಗಳನ್ನು ಸೇವಿಸುವುದನ್ನು ಬಿಟ್ಟು, ಇತ್ತೀಚೆಗೆ ಹೊರಗಿನ ಖಾದ್ಯ ಪದಾರ್ಥಗಳನ್ನು ಉದಾ. ‘ಫಾಸ್ಟ್ ಫುಡ್’ ಹೊರಗೆ ಹೋಗಿ ಅಥವಾ ಮನೆಗೆ ತಂದು ತಿನ್ನುವ ಪದ್ಧತಿಯು ಎಲ್ಲ ಕಡೆ ಬೆಳೆದಿದೆ. ನಾಲಿಗೆಯ ಚಪಲವನ್ನು ತೀರಿಸುವ ಪಾಶ್ಚಾತ್ಯರ ಆಹಾರ ಪದ್ಧತಿಯು ಕ್ಷಣಿಕ ಸುಖವನ್ನು ಕೊಟ್ಟರೂ ಕೊನೆಗೆ ಮಾನವೀ ಶರೀರಕ್ಕೆ ಅಹಿತಕಾರಿಯೇ ಆಗಿದೆ.

ಹಿಂದೂ ಸಂಸ್ಕೃತಿಯನ್ನು ನಾಶಗೊಳಿಸಿ ಅಸುರೀ ಜೀವನ ಪದ್ಧತಿಯನ್ನು ಪ್ರಾರಂಭಿಸಿದ ಪಾಶ್ಚಾತ್ಯರ ಆಹಾರ ಪದ್ಧತಿ: ‘ಈಗಿನ ಕಾಲದಲ್ಲಿ ಕ್ರಮೇಣವಾಗಿ ಮಡಿ-ಮೈಲಿಗೆಗಳು ನಾಶವಾಗುತ್ತಿವೆ. ಈಗ ಕಾಲುಗಳನ್ನು ತೊಳೆದುಕೊಂಡು ಒದ್ದೆ ಕಾಲುಗಳಿಂದ ಊಟ ಮಾಡುವುದು, ಪ್ರಾರ್ಥನೆ ಮಾಡಿ ಊಟ ಮಾಡುವುದು, ಸಾತ್ತ್ವಿಕ ಊಟವನ್ನು ಮಾಡುವುದು ಕಡಿಮೆಯಾಗಿ ಪಾಶ್ಚಾತ್ಯ ಪದ್ಧತಿಯ ಊಟವನ್ನು ಮಾಡುವುದು, ಮಾಂಸಾಹಾರ ಊಟ ಮಾಡುವುದು, ತಿನ್ನುವಾಗ ಬೆರಳುಗಳ ಬದಲು ಚಮಚ-ಮುಳ್ಳುಚಮಚಗಳನ್ನು ಉಪಯೋಗಿಸುವುದು, ಊಟ ಮಾಡುವಾಗ ಪರಸ್ಪರರು ಅಶ್ಲೀಲವಾಗಿ ಮಾತನಾಡುವುದು, ಹಾಗೆಯೇ ಮನೆಯಲ್ಲೂ ಬೂಟು-ಚಪ್ಪಲಿಗಳನ್ನು ಉಪಯೋಗಿಸುವುದು, ಇವುಗಳಿಂದ ಹಿಂದೂ ಸಂಸ್ಕೃತಿಯು ನಾಶವಾಗಿ ಅಸುರೀ ಜೀವನ ಪದ್ಧತಿಯು ಉದಯವಾಗುತ್ತಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೭.೨೦೦೫, ಬೆಳಗ್ಗೆ ೧೦.೫೦)

ಸಕ್ಕರೆಯ ದುಷ್ಪರಿಣಾಮಗಳು

ಸಕ್ಕರೆಯನ್ನು ಶುದ್ಧೀಕರಿಸುವಾಗ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ: ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್), ಎಮಿನೋ ಆಸಿಡ್ಸ, ತಂತು (ಫೈಬರ್) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್ ಮಾತ್ರ!

ಬೆಲ್ಲದಿಂದಾಗುವ ಲಾಭಗಳು

ಅ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು (ನೆಲಗಡಲೆ) ಕೊಟ್ಟರೆ ಅವರ ಶಾರೀರಿಕ ವಿಕಾಸವು ಬೇಗನೇ ಆಗಿ ಮೂಳೆಗಳು ಗಟ್ಟಿಯಾಗುತ್ತವೆ: ಬೆಲ್ಲದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸಣ್ಣ ಮಕ್ಕಳಿಗೆ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ, ಆದರೆ ಅದನ್ನು ಯೋಗ್ಯ ಪ್ರಮಾಣದಲ್ಲಿಯೇ ಕೊಡಬೇಕು (ಮಿತವಾಗಿರಬೇಕು). ಏಕೆಂದರೆ ಹೆಚ್ಚು ತಿಂದರೆ ಹುಳಗಳಾಗುವ (ಹೊಟ್ಟೆಯಲ್ಲಿ ಸಣ್ಣ ದೊಡ್ಡ ಜಂತುಗಳಾಗುವ) ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು ಕೊಟ್ಟರೆ ಅವರ ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಬಲವಾಗುತ್ತದೆ.

ಆ. ಮಹಿಳೆಯರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಲೋಹತತ್ತ್ವದ ಕೊರತೆಯು ತುಂಬಿ ಬರುತ್ತದೆ: ಮಹಿಳೆಯರಲ್ಲಿ ಸಾಧಾರಣವಾಗಿ ಲೋಹತತ್ತ್ವದ (ಕಬ್ಬಿಣ) ಕೊರತೆಯು ಕಂಡುಬರುತ್ತದೆ. ಮಾಸಿಕ ಸರದಿಯ (ಮುಟ್ಟು) ನೈಸರ್ಗಿಕ ಚಕ್ರದಿಂದ ಈ ಕೊರತೆಯಾಗುತ್ತದೆ. ಅವರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಈ ಕೊರತೆಯು ತುಂಬಿ ಬರುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ.

ಇ. ಹೃದಯರೋಗಿಗಳಿಗೆ ‘ಬೆಲ್ಲ’ವು ಉತ್ತಮ ಔಷಧವಾಗಿದೆ ಮತ್ತು ಬೆಲ್ಲದ ಸೇವನೆಯಿಂದ ಹಿಮೋಗ್ಲೋಬಿನ್‌ನ ಪ್ರಮಾಣ ಸರಿಸಮಾನವಾಗುತ್ತದೆ (Normal): ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟಾಶಿಯಮ್ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ. ಇದರ ಅರ್ಥವೇನೆಂದರೆ ಹೃದಯರೋಗಿಗಳಿಗೆ ‘ಬೆಲ್ಲ’ವು ಒಂದು ಉತ್ತಮ ಔಷಧಿಯಾಗಿದೆ. ಪಾಂಡುರೋಗ (ಎನಿಮಿಯಾ) (ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಪ್ರಮಾಣ ಕಡಿಮೆಯಾಗುವುದು) ಹಾಗೆಯೇ ಅಧಿಕ ರಕ್ತಸ್ರಾವದಿಂದ ರಕ್ತದಲ್ಲಿ ಕಡಿಮೆಯಾದ ಹಿಮೋಗ್ಲೋಬಿನ್ ಪ್ರಮಾಣವು ಬೆಲ್ಲದ ಸೇವನೆಯಿಂದ ಸರಿಸಮಾನವಾಗುತ್ತದೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

ಸಂಬಂಧಿತ ಲೇಖನಗಳು
ಸಕ್ಕರೆಯ ದುಷ್ಪರಿಣಾಮಗಳು

ಚಹಾ, ಕಾಫಿ ಇವುಗಳ ದುಷ್ಪರಿಣಾಮಗಳು


ಚಹಾ, ಕಾಫಿಗಳಲ್ಲಿ ಹತ್ತು ವಿಧದ ವಿಷಗಳಿರುತ್ತವೆ.
೧. ‘ಟ್ಯಾನಿನ್’ ಎಂಬ ವಿಷವು ಶೇ.೧೮ರಷ್ಟಿರುತ್ತದೆ. ಇದು ಹೊಟ್ಟೆಯಲ್ಲಿ ಛಿದ್ರಗಳನ್ನು ಮತ್ತು ವಾಯುವನ್ನು ನಿರ್ಮಾಣ ಮಾಡುತ್ತದೆ.
೨. ‘ಥಿನ್’ ಎಂಬ ವಿಷವು ಶೇ.೩ರಷ್ಟಿರುತ್ತದೆ. ಇದರಿಂದ ಹುಚ್ಚುತನ ಬರುತ್ತದೆ. ಹಾಗೆಯೇ ಈ ವಿಷವು ಶ್ವಾಸಕೋಶ (ಪುಪ್ಪುಸ) ಮತ್ತು ಮೆದುಳಿನಲ್ಲಿ ಜಡತ್ವವನ್ನು ನಿರ್ಮಿಸುತ್ತದೆ.
೩. ‘ಕೆಫಿನ್’ ಎಂಬ ವಿಷವು ಶೇ.೨.೭೫ರಷ್ಟಿರುತ್ತದೆ. ಇದರಿಂದ ಮೂತ್ರಪಿಂಡಗಳು ದುರ್ಬಲಗೊಳ್ಳುತ್ತವೆ.
೪. ‘ವ್ಯಾಲಾಟೈಲ್’ ಎಂಬ ವಿಷವು ಕರುಳಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
೫. ‘ಕಾರ್ಬೋನಿಕ್ ಆಮ್ಲ’ದಿಂದ ಆಮ್ಲಪಿತ್ತ (ಆಸಿಡಿಟಿ) ಹೆಚ್ಚಾಗುತ್ತದೆ.
೬. ‘ಪ್ಯಾಮಿನ್’ನಿಂದ ಜೀರ್ಣಶಕ್ತಿಯು ದುರ್ಬಲವಾಗುತ್ತದೆ.
೭. ‘ಆರೋಮೋಲಿಕ್’ ಕರುಳಿನ ಮೇಲೆ ಹಾನಿಕಾರಕ ಪ್ರಭಾವವನ್ನು ಬೀರುತ್ತದೆ.
೮. ‘ಸಾಯನೋಜನ್’ವು ನಿದ್ರಾಹೀನತೆ ಮತ್ತು ಪಾರ್ಶ್ವವಾಯುವಿನಂತಹ ಭಯಾನಕ ರೋಗಗಳನ್ನು ಉಂಟುಮಾಡುತ್ತದೆ.
೯. ‘ಆಕ್ಸೆಲಿಕ್ ಆಮ್ಲ’ವು ಶರೀರಕ್ಕೆ ಅತ್ಯಂತ ಹಾನಿಕರವಾಗಿದೆ.
೧೦. ‘ಸ್ಟಿನಾಯಿಲ್’ವು ರಕ್ತವಿಕಾರ ಮತ್ತು ನಪುಂಸಕತೆಯನ್ನು ನಿರ್ಮಿಸುತ್ತದೆ. ಆದುದರಿಂದ ಚಹಾ ಅಥವಾ ಕಾಫಿಯನ್ನು ಎಂದಿಗೂ ಕುಡಿಯಬಾರದು.

ಚಹಾದ ಮಾಧ್ಯಮದಿಂದ ರಜ-ತಮಗಳನ್ನು ಹೆಚ್ಚಿಸಲು ಅಸುರೀ ಶಕ್ತಿಗಳ ಪ್ರಯತ್ನ!
ಅ. ಚಹಾ ಒಳ್ಳೆಯ ಪೇಯ ಆಗದೇ ಇದ್ದರೂ ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾದ ಇಚ್ಛೆಯನ್ನು ಕಪ್ಪು ಶಕ್ತಿಯ ಆಧಾರದಲ್ಲಿ ನಿರ್ಮಿಸುವುದು ಮತ್ತು ವ್ಯಸನವನ್ನು ತಗಲಿಸಿ ಚಹಾ ಸಂಸ್ಕೃತಿಯನ್ನು ನಿರ್ಮಾಣ ಮಾಡುವುದು: ಮಾಂತ್ರಿಕರ ಯೋಜನೆಯು ಹೇಗಿರುತ್ತದೆ ಎಂಬುದಕ್ಕೆ ಚಹಾ ಒಂದು ಉತ್ತಮ ಉದಾಹರಣೆಯಾಗಿದೆ. ಚಹಾ ಭಾರತೀಯ ಪೇಯವಲ್ಲ. ಕಪ್ಪು ಶಕ್ತಿಯನ್ನು ತೆಗೆದುಕೊಂಡು ಬಂದ ಆಂಗ್ಲರು ಇಲ್ಲಿ ಚಹಾ ಸಂಸ್ಕೃತಿಯನ್ನು ತಂದರು, ಅದರ ಬೀಜವನ್ನು ಬಿತ್ತಿದರು ಮತ್ತು ನಮಗೆ ತಿಳಿಯದಂತೆ ಅದರ ಪ್ರಚಾರವನ್ನು ಮಾಡಿದರು. ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾ ಒಂದು ಉತ್ತಮ ಪೇಯವಾಗದೇ ಇದ್ದರೂ, ಕಪ್ಪು ಶಕ್ತಿಯ ಆಧಾರದ ಮೇಲೆ ಚಹಾದ ಇಚ್ಛೆಯನ್ನು ಜನರ ಮನಸ್ಸಿನಲ್ಲಿ ನಿರ್ಮಿಸಲಾಯಿತು. ನಂತರ ನಮಗೆ ಅದರ ವ್ಯಸನವನ್ನು ತಗಲಿಸಲಾಯಿತು ಮತ್ತು ಚಹಾ ಸಂಸ್ಕೃತಿಯು ಭಾರತದಲ್ಲಿ ನಿರ್ಮಾಣವಾಯಿತು.

ಆ. ಪರಿಸ್ಥಿತಿಯನ್ನು ಬದಲಾಯಿಸುವುದು ಕಠಿಣವಾಗಿದ್ದು, ಅದು ಈಶ್ವರನ ಕೃಪೆ ಮತ್ತು ಅಧಿಷ್ಠಾನದಿಂದಲೇ ಸಾಧ್ಯವಾಗುವುದು: ಕೆಟ್ಟ ಶಕ್ತಿಗಳು ಯಾವುದಾದರೊಂದು ವಿಷಯದ ಆಯೋಜನೆಯನ್ನು ಎಷ್ಟು ವಿಚಾರಪೂರ್ವಕವಾಗಿ ಮಾಡುತ್ತವೆ ಎಂಬುದು ಮೇಲಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅದರ ಪರಿಣಾಮ ಎಷ್ಟು ಮಹತ್ತರವಾಗಿರುತ್ತದೆ ಎಂದರೆ ಪರಿಸ್ಥಿತಿಯನ್ನು ಸಹಜವಾಗಿ ಬದಲಾಯಿಸುವುದೂ ಕಠಿಣವಾಗಿರುತ್ತದೆ. ಅದು ಈಶ್ವರನ ಕೃಪೆ ಮತ್ತು ಅಧಿಷ್ಠಾನದಿಂದಲೇ ಬದಲಾಗುತ್ತದೆ.
- ಒಂದು ಅಜ್ಞಾತ ಶಕ್ತಿ (ಕು.ರಂಜನಾ ಗಾವಸರವರ ಮಾಧ್ಯಮದಿಂದ, (೨೯.೪.೨೦೧೦) ಮಧ್ಯಾಹ್ನ ೧೨)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

ಸಂಬಂಧಿತ ಲೇಖನಗಳು
ಸಕ್ಕರೆಯ ದುಷ್ಪರಿಣಾಮಗಳು
'ಫಾಸ್ಟ್ ಫುಡ್’ನ ದುಷ್ಪರಿಣಾಮಗಳು
ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ
ಆಹಾರದ ವಿಧಕ್ಕನುಸಾರ ಸ್ವಭಾವವೈಶಿಷ್ಟ್ಯಗಳು ನಿರ್ಮಾಣವಾಗುವುದು
ಉಪವಾಸದ ಬಗ್ಗೆ ವೈಜ್ಞಾನಿಕ ಸಂಶೋಧಕರ ನಿಷ್ಕರ್ಷ

ಉಪವಾಸದ ಬಗ್ಗೆ ವೈಜ್ಞಾನಿಕ ಸಂಶೋಧಕರ ನಿಷ್ಕರ್ಷ

೧. ರಷ್ಯಾದ ಜೀವಶಾಸ್ತ್ರಜ್ಞ ವ್ಲಾದಿಮೀರ ನಿಕಿತಿನ: ‘ಇವರು ಇಲಿಗಳ ಮೇಲೆ ಪ್ರಯೋಗವನ್ನು ಮಾಡಿದರು. ‘ಉಪವಾಸದಿಂದ ಇಲಿಗಳ ಎರಡೂವರೆ ವರ್ಷಗಳ ಆಯಸ್ಸು ೪ ವರ್ಷಗಳ ವರೆಗೆ ಹೆಚ್ಚಾಗುತ್ತದೆ’ ಎಂದು ಅವರು ಪ್ರಯೋಗದಿಂದ ಸಿದ್ಧಪಡಿಸಿದ್ದಾರೆ. ಅವರು ಹೇಳುವುದೇನೆಂದರೆ, ‘ಉಪವಾಸದಿಂದ ತಾರುಣ್ಯವು ಚಿರಕಾಲ ಉಳಿಯುತ್ತದೆ. ವೃದ್ಧರೂ ತರುಣರಾಗಬಲ್ಲರು. ಅನಾವಶ್ಯಕವಾಗಿ ತಿನ್ನುವುದರಿಂದಲೇ ಸಾವು ಹತ್ತಿರ ಬರುತ್ತದೆ.’ ಅವರ ಸಂಶೋಧನೆಯಲ್ಲಿನ ವೈಜ್ಞಾನಿಕ ಸ್ಪಷ್ಟೀಕರಣ ಹೀಗಿದೆ, ನಮ್ಮ ಆಹಾರ ಮತ್ತು ಶರೀರದಲ್ಲಿನ ಉದ್ವೇಗಕಾರಕ ಗ್ರಂಥಿಗಳು (ಸುಪ್ರಾರೀನಲ್ ಗ್ಲ್ಯಾಂಡಸ್) ವೃದ್ಧಾಪ್ಯದ ಪ್ರಕ್ರಿಯೆಯ ಕಾರ್ಯವನ್ನು ಮಾಡುತ್ತಿರುತ್ತವೆ. ಕಾಲಾಂತರ ದಲ್ಲಿ ಮೇದೋಜೀರಕ ಗ್ರಂಥಿಯಲ್ಲಿ (‘ಪ್ಯಾನ್ಕ್ರಿಯಾಜ್’ನಲ್ಲಿ) ಅಸಾಧಾರಣ ಪರಿವರ್ತನೆಯಾಗಿ ಅದರ ಹಾರ್ಮೋನ್‌ನ ಉತ್ಪಾದನೆಯ ಕ್ಷಮತೆಯು ಕುಂಠಿತವಾಗುತ್ತಾ ಹೋಗುತ್ತದೆ. ಈ ಹಾರ್ಮೋನ್‌ವು ಶರೀರದಲ್ಲಿನ ಪೋಷಕ ತತ್ತ್ವಕ್ಕೆ ಸಂಬಂಧಿಸಿದ ಜೀವಕೋಶಗಳ ಗುಂಪಿಗೆ (ಟಿಶ್ಯೂಗಳಿಗೆ) ಸಹಾಯಕವಾಗಿರುತ್ತದೆ; ಆದರೆ ಉದ್ವೇಗಕಾರಕ ಗ್ರಂಥಿಗಳು ವಿಭಿನ್ನ ರೀತಿಯ ಹಾರ್ಮೋನುಗಳನ್ನು ಉತ್ಪಾದನೆಮಾಡಿ ಉದ್ವೇಗಕಾರಕ ಗ್ರಂಥಿಗಳ ಉತ್ಪಾದನೆಯ ಕ್ಷಮತೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದುದರಿಂದ ಅವು ಆಯುಷ್ಯವೃದ್ಧಿಯ ಕಾರ್ಯವನ್ನು ಮಾಡಲಾರವು. ನಿಕಿತಿನ ಹೇಳುವುದೇನೆಂದರೆ, ‘ಈ ರೀತಿ ಈ ಹಾರ್ಮೋನವು ಎರಡು ಕಾರ್ಯಗಳಲ್ಲಿ ಸಮತೋಲನವನ್ನು ತಪ್ಪಿಸುತ್ತದೆ ಮತ್ತು ಇದರಿಂದಲೇ ಆಯುಷ್ಯವು ಕಡಿಮೆಯಾಗುತ್ತದೆ. ಈ ಸಮತೋಲನವನ್ನು ವ್ಯವಸ್ಥಿತವಾಗಿಡುವ ಕಾರ್ಯವು ಉಪವಾಸದಿಂದ ಆಗುತ್ತದೆ. ಉಪವಾಸದಿಂದ ಉದ್ವೇಗಕಾರಕ ಗ್ರಂಥಿಗಳಿಂದ ಉತ್ಪನ್ನವಾಗುವ ಅನಿಷ್ಟ ಹಾರ್ಮೋನ್‌ಗಳ ವೃದ್ಧಿಯು ಕುಂಠಿತವಾಗುತ್ತದೆ ಮತ್ತು ದುಷ್ಪರಿಣಾಮಗಳು ತಪ್ಪುತ್ತವೆ. ಇದರಿಂದ ತಾರುಣ್ಯವು ಸ್ಥಿರವಾಗಿ ಉಳಿಯುತ್ತದೆ ಮತ್ತು ವೃದ್ಧಾಪ್ಯದ ಪ್ರಕ್ರಿಯೆ ನಿಲ್ಲುತ್ತದೆ. ಉಪವಾಸ ಮಾಡುವಾಗ ಶುದ್ಧ ನೀರು ಮತ್ತು ಯೋಗ್ಯ ಹಣ್ಣಿನ ರಸವನ್ನು ಯಥೇಚ್ಛವಾಗಿ ಕುಡಿಯಬೇಕು.

೨. ಅಮೇರಿಕಾದ ವಿಜ್ಞಾನಿ ಬರ್ನೇರ್ ಮ್ಯಾಕಫರ್ಡ್: ಇವರು ಆಯುಷ್ಯವಿಡೀ ಯೌವನ ಮತ್ತು ಆಹಾರದ ಬಗ್ಗೆ ಸಂಶೋಧನೆಯನ್ನು ಮಾಡಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅವರು ಹೇಳುವುದೇನೆಂದರೆ, ‘ಗ್ರೀಕ್ ಮತ್ತು ರೋಮನ್ ಸಂಸ್ಕ್ಕೃತಿಯು ಉಚ್ಚ ಮಟ್ಟದಲ್ಲಿತ್ತು, ಆಗ ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿಯಿತ್ತು. ಎರಡು ಊಟಗಳ ನಡುವೆ ಕನಿಷ್ಠ ೧೨ ಗಂಟೆಗಳ ಅಂತರವಿರುತ್ತಿತ್ತು. ಆಗ ಇಡೀ ವಿಶ್ವದಲ್ಲೇ ಅವರ ಆಯುಷ್ಯವು ಎಲ್ಲಕ್ಕಿಂತ ಹೆಚ್ಚಿಗೆ ಇತ್ತು.

೩. ಪ್ಯೂರಿಂಗ್ಟನ್ : ಈ ವಿಜ್ಞಾನಿಯು ಹೇಳುವುದೇನೆಂದರೆ, ‘ಹುಟ್ಟಿದಾಗಿನಿಂದ ೧೫ ದಿನಕ್ಕೊಮ್ಮೆ ಒಂದು ದಿನ ಪೂರ್ಣ ಉಪವಾಸ ಮಾಡಿದರೆ ವೃದ್ಧಾಪ್ಯವೇ ಬರುವುದಿಲ್ಲ.’ - ಹ.ಭ.ಪ. ಸುಧಾತಾಯಿ ಧಾಮಣಕರ

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

ಆಹಾರಕ್ಕೆ ಸಂಬಂಧಿತ ವಿಷಯಗಳು

ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಅ. ಆಹಾರ ಮತ್ತು ಶರೀರ

ಅ೧. ‘ಶುದ್ಧ ಆಹಾರದ ಪರಿಣಾಮವು ಸ್ಥೂಲ ಮತ್ತು ಸೂಕ್ಷ್ಮ ಈ ಎರಡೂ ದೇಹಗಳ ಮೇಲೆ ಆಗುತ್ತಿರುತ್ತದೆ.’

ಅ೨. ಖಾದ್ಯ ಮತ್ತು ಪಾನೀಯಗಳಲ್ಲಿ ಸೂಕ್ಷ್ಮ ವ್ಯತ್ಯಾಸವಾದರೂ ಶರೀರದ ಮೇಲೆ ಪರಿಣಾಮವಾಗಬಲ್ಲದು: ನಮಗೆ ರೋಗಗಳು ಬರುತ್ತವೆ, ಅಂದರೆ ಶರೀರದಲ್ಲಿನ ವ್ಯವಸ್ಥೆಯು ಕೆಡುತ್ತದೆ. ಅದು ಸರಿಯಾಗಲು ನಾವು ಔಷಧಗಳನ್ನು ತೆಗೆದುಕೊಳ್ಳುತ್ತೇವೆ. ಔಷಧವು ಹೊಟ್ಟೆ ಯೊಳಗೆ ಹೋದ ಮೇಲೆ ರಕ್ತದ ಮೂಲಕ ಶರೀರವಿಡೀ ಹರಡುತ್ತದೆ ಮತ್ತು ಅವ್ಯವಸ್ಥೆಯನ್ನು ಮಾಡುವ ಪರಮಾಣುಗಳ ಪ್ರವೃತ್ತಿಯನ್ನು ಅದು ತೆಗೆದುಬಿಡುತ್ತದೆ. ಇದರಿಂದ ಆರೋಗ್ಯವು ಲಭಿಸುತ್ತದೆ. ಕಣ್ಣುಗಳು ಉರಿಯುತ್ತಿದ್ದರೂ ಹೊಟ್ಟೆಯಲ್ಲಿ ಔಷಧಿ ತೆಗೆದುಕೊಂಡರೆ ಗುಣವಾಗುತ್ತದೆ. ಆಕಳು ಮಳೆಯಲ್ಲಿ ನೆನೆದರೆ ಅದರ ಹಾಲನ್ನು ಕುಡಿಯುವ ಮಗುವಿನ ಆರೋಗ್ಯವು ಕೆಡುತ್ತದೆ ಎಂಬ ಅನುಭವವಿದೆ. ಈ ಅನುಭವದ ತಾತ್ಪರ್ಯವೇನೆಂದರೆ, ಖಾದ್ಯ ಮತ್ತು ಪಾನೀಯಗಳಲ್ಲಿ ಸೂಕ್ಷ್ಮ ವ್ಯತ್ಯಾಸವಾದರೂ, ಅದರ ಪರಿಣಾಮವು ಶರೀರದ ಮೇಲಾಗುತ್ತದೆ.

ಆಹಾರದ ವಿಧಕ್ಕನುಸಾರ ಸ್ವಭಾವವೈಶಿಷ್ಟ್ಯಗಳು ನಿರ್ಮಾಣವಾಗುವುದು

ಯಾವ ಅನ್ನದಿಂದ ಶರೀರವು ತಯಾರಾಗುತ್ತದೆಯೋ, ಆ ಅನ್ನದ ಗುಣಗಳು ಆ ವ್ಯಕ್ತಿ ಅಥವಾ ಪ್ರಾಣಿಯಲ್ಲಿ ಬರುತ್ತವೆ. ಇದರ ಬಗ್ಗೆ ವಿಜ್ಞಾನಿಗಳು ಪ್ರಯೋಗವನ್ನು ಮಾಡಿದ್ದಾರೆ.

ಅ. ಶಾಕಾಹಾರ ಮತ್ತು ಮಾಂಸಾಹಾರ: ವಿಜ್ಞಾನಿಗಳು ಒಂದು ಹುಲಿಮರಿಗೆ ಪ್ರತಿನಿತ್ಯ ಕೇವಲ ಚಪಾತಿ ಇತ್ಯಾದಿ ಶಾಕಾಹಾರವನ್ನು ಕೊಟ್ಟು ಬೆಳೆಸಿದರು ಮತ್ತು ಒಂದು ಹಸುವಿಗೆ ಪ್ರತಿನಿತ್ಯ ಮಾಂಸವನ್ನು ಬೇಯಿಸಿ ಮಾಂಸಾಹಾರವನ್ನು ಕೊಟ್ಟು ಬೆಳೆಸಿದರು. ಹೀಗೆ ಮೂರು-ನಾಲ್ಕು ವರ್ಷ ಮಾಡಿದ ಮೇಲೆ ಆ ಹುಲಿಯು ಅತ್ಯಂತ ದೀನವಾಯಿತು ಮತ್ತು ಹಸುವು ಅತ್ಯಂತ ಕೋಪಿಷ್ಠ ಮತ್ತು ಸಿಟ್ಟಿನದಾಯಿತು. ಇದರಿಂದ ‘ಮಾಂಸಾಹಾರದಿಂದ ಪ್ರಾಣಿಗಳು ಕ್ರೋಧಿ, ಕೋಪಿಷ್ಠವಾಗುತ್ತವೆ ಮತ್ತು ಶಾಕಾಹಾರದಿಂದ ಪ್ರಾಣಿಗಳು ಶಾಂತವಾಗುತ್ತವೆ’ ಎಂಬ ಸಿದ್ಧಾಂತವನ್ನು ಅವರು ಕಂಡುಹಿಡಿದರು.

ಆ. ಹಸಿ ಮತ್ತು ಬೇಯಿಸಿದ ಮಾಂಸ: ಮುಂದೆ ಅವರು ಒಂದು ನಾಯಿಯ ೨ ಮರಿ ಗಳಲ್ಲಿ ಒಂದಕ್ಕೆ ಹಸಿ ಮಾಂಸವನ್ನು, ಇನ್ನೊಂದಕ್ಕೆ ಬೇಯಿಸಿದ ಮಾಂಸವನ್ನು ಹಾಕಿ ಬೆಳೆಸಿದರು. ಹೀಗೆ ಮೂರು-ನಾಲ್ಕು ವರ್ಷಗಳ ನಂತರ, ಹಸಿ ಮಾಂಸ ತಿಂದ ಪ್ರಾಣಿಯು ಹೆಚ್ಚು ಕ್ರೂರ ವಾಯಿತು ಮತ್ತು ಬೇಯಿಸಿದ ಮಾಂಸವನ್ನು ತಿಂದ ಪ್ರಾಣಿಯು ಮಧ್ಯಮ ಕ್ರೂರವಾಗಿರುವುದು ಕಂಡುಬಂದಿತು.

ಇ. ಬೇಯಿಸಿದ ಅನ್ನವನ್ನು ತಿನ್ನುವವರ ತುಲನೆಯಲ್ಲಿ ಪಕ್ವ ಹಣ್ಣು ಮತ್ತು ಸೊಪ್ಪನ್ನು ತಿನ್ನುವವರು ಹೆಚ್ಚು ತೇಜಸ್ವಿಗಳಾಗುತ್ತಾರೆ.

ಹೀಗೆ ಬೇರೆ ಬೇರೆ ಅನ್ನವನ್ನು ವಿಭಿನ್ನ ರೀತಿಯಲ್ಲಿ ತಯಾರಿಸಿದರೆ, ಅದರಲ್ಲಿ ವಿಭಿನ್ನ ಗುಣಗಳನ್ನು ಉತ್ಪನ್ನ ಮಾಡುವ ಶಕ್ತಿಯು ಬರುತ್ತದೆ.