ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕ ವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು.’
ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ.

೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು ಮಾಡುವುದು ಉಚಿತವಲ್ಲ; ಆದರೆ ಆರತಿಯ ಮೊದಲು ಮಾಡುವ ಶಂಖನಾದವು ಯೋಗ್ಯವಾಗಿದೆ ಮತ್ತು ಅದನ್ನು ಅವಶ್ಯವಾಗಿ ಮಾಡಬೇಕು.’
ಶಾಸ್ತ್ರ: ಶಂಖನಾದದಿಂದ ಪ್ರಾಣಾಯಾಮದ ಅಭ್ಯಾಸವಾಗುತ್ತದೆ; ಅಷ್ಟೇ ಅಲ್ಲದೇ ಶಂಖನಾದವು ಎಲ್ಲಿಯ ವರೆಗೆ ಕೇಳಿಸುತ್ತದೆಯೋ, ಅಲ್ಲಿಯ ವರೆಗಿನ ಪರಿಸರದಲ್ಲಿ ಭೂತ, ಮಾಟ ಇತ್ಯಾದಿ ದುಷ್ಟಶಕ್ತಿಗಳ ತೊಂದರೆಯಾಗುವುದಿಲ್ಲ.

೩. ‘ಶಿವನಿಗೆ ತುಳಸಿಯನ್ನು ಅರ್ಪಿಸುವುದಿಲ್ಲ; ಆದರೆ ಸಾಲಿಗ್ರಾಮಕ್ಕೆ ಅಥವಾ ವಿಷ್ಣುವಿನ ಮೂರ್ತಿಗೆ ಅರ್ಪಿಸಿದ ತುಳಸಿಯನ್ನು ಶಿವನಿಗೆ ಅರ್ಪಿಸಬಹುದು.’
ಶಾಸ್ತ್ರ: ಶಿವನು ಶ್ರೀ ವಿಷ್ಣುವನ್ನು ಗುರು ರೂಪದಲ್ಲಿ ನೋಡುತ್ತಾನೆ. ಶಿವನು ವಿಷ್ಣು ಭಕ್ತನಾಗಿದ್ದಾನೆ; ಆದುದರಿಂದ ವಿಷ್ಣುವಿಗೆ ಅರ್ಪಿಸಿರುವ ತುಳಸಿಯು ಶಿವನಿಗೆ ಪ್ರಿಯವಾಗಿರುತ್ತದೆ.

೪. ‘ಜ್ಯೇಷ್ಠ ಕೃಷ್ಣ ಅಷ್ಟಮಿಯಂದು ಶಂಕರನ ಪೂಜೆಯನ್ನು ಮತ್ತು ಚತುರ್ದಶಿಯಂದು ರೇವತಿಯ ಪೂಜೆಯನ್ನು ನೀಲಿ ಹೂವುಗಳಿಂದ ಮಾಡಬೇಕು. ಶಿವನಿಗೆ ಕೇದಗೆಯ ತುರಾಯಿಯನ್ನು ಮಹಾಶಿವರಾತ್ರಿಯ ವ್ರತದ ಉದ್ಯಾಪನೆಯ ಸಮಯದಲ್ಲಿಯೇ ಅರ್ಪಿಸಬೇಕು.’
ಶಾಸ್ತ್ರ: ಕಾಲಕ್ಕನುಸಾರ ದೇವತೆಗಳ ಪೂಜೆಯ ಸಾಮಗ್ರಿಗಳಲ್ಲಿ ಬದಲಾವಣೆಯಾಗುತ್ತದೆ, ಉದಾ.ಜ್ಯೇಷ್ಠ ಕೃಷ್ಣ ಅಷ್ಟಮಿಯ ದಿನ ನೀಲಿ ಬಣ್ಣದಲ್ಲಿ ಹಸಿರು ಬಿಲ್ವಪತ್ರೆಯಂತೆ ಶಿವತತ್ತ್ವವನ್ನು ಗ್ರಹಿಸುವ ಕ್ಷಮತೆ ಬರುತ್ತದೆ. ಆದುದರಿಂದ ಆ ದಿನ ಶಿವನಿಗೆ ನೀಲಿ ಹೂವುಗಳನ್ನು ಅರ್ಪಿಸುತ್ತಾರೆ.


೫. ‘ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆ, ಬಿಳಿ ಹೂವು ಮತ್ತು ನೈವೇದ್ಯವನ್ನು ಸ್ವೀಕರಿಸಬಾರದು.’
ಶಾಸ್ತ್ರ: ಶಿವನು ವೈರಾಗ್ಯದ ದೇವತೆಯಾಗಿದ್ದಾನೆ. ಸಾಮಾನ್ಯ ವ್ಯಕ್ತಿಯು ಶಿವನಿಗೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ಅವನಿಗೆ ವೈರಾಗ್ಯ ಬರುವ ಸಾಧ್ಯತೆಯಿರುತ್ತದೆ. ಸಾಮಾನ್ಯ ವ್ಯಕ್ತಿಗೆ ವೈರಾಗ್ಯ ಬೇಕಾಗಿರುವುದಿಲ್ಲ. ಆದುದರಿಂದ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ.ಶೇ. ೫೦ ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಮಟ್ಟವು ಹೆಚ್ಚಿರುವುದರಿಂದ ವೈರಾಗ್ಯ ಲಹರಿಗಳ ಪರಿಣಾಮವು ಅವನ ಮೇಲಾಗುವುದಿಲ್ಲ. ಅವನಲ್ಲಿ ಮಾಯೆಯಿಂದ ದೂರ ಹೋಗುವ ವಿಚಾರಗಳು ಆಗಲೇ ಪ್ರಾರಂಭವಾಗಿರುತ್ತವೆ. ಅದರಂತೆ ಶೇ. ೫೦ ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಯು ಸ್ಥೂಲ ಕರ್ಮಕಾಂಡದ ಆಚೆಗೆ ಹೋಗಿರುವುದರಿಂದ ಅವನಲ್ಲಿ ಮಾನಸ-ಉಪಾಸನೆಯು ಪ್ರಾರಂಭವಾಗಿರುತ್ತದೆ. ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ‘ಶಿವನಿಗೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬೇಕು’ ಎಂಬ ಕರ್ಮಕಾಂಡದ ವಿಚಾರಗಳು ಬರುವ ಸಾಧ್ಯತೆಗಳೇ ಕಡಿಮೆಯಿರುತ್ತವೆ.

೬. ‘ಶೈವರು, ಕಾಪಾಲಿಕರು, ಗೋಸಾವಿಗಳು, ವೀರಶೈವ ಇತ್ಯಾದಿ ಸಂಪ್ರದಾಯ ದವರು ತಮ್ಮ-ತಮ್ಮ ಸಂಪ್ರದಾಯಕ್ಕನುಸಾರ ಪಾರ್ಥಿವಲಿಂಗ, ಕಂಠಸ್ಥಲಿಂಗ (ಕೊರಳಿನಲ್ಲಿ ಧರಿಸಿರುವ ಬೆಳ್ಳಿಯ ಪೆಟ್ಟಿಗೆಯಲ್ಲಿನ ಲಿಂಗ), ಸ್ಫಟಿಕಲಿಂಗ, ಬಾಣಲಿಂಗ, ಪಂಚಸೂತ್ರಿಲಿಂಗ, ಪಾಷಾಣಲಿಂಗ ಇಂತಹ ವಿಧದ ಲಿಂಗಗಳನ್ನು ಶಿವಪೂಜೆಯಲ್ಲಿ ಉಪಯೋಗಿಸುತ್ತಾರೆ.’

(ಆಧಾರ: ಸನಾತನ ನಿರ್ಮಿತ ಆಧ್ಯಾತ್ಮಿಕ ಗ್ರಂಥ ‘ಶಿವ’)

ಸಂಬಂಧಿತ ಲೇಖನಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ