ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ!


ಶ್ರೀ ಗಣೇಶ ಮೂರ್ತಿಯನ್ನು ನೀರಿನ ಟ್ಯಾಂಕಿಯಲ್ಲಿ ವಿಸರ್ಜಿಸಬೇಡಿ!

ಇತ್ತೀಚೆಗೆ ಶ್ರೀ ಗಣೇಶ ಮೂರ್ತಿಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀಗಣೇಶ ಮೂರ್ತಿಯನ್ನು ಹರಿಯುವ ನೀರು/ಜಲಾಶಯಗಳಲ್ಲಿ ವಿಸರ್ಜಿಸುವುದು ಆವಶ್ಯಕ ವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಪ್ರದೂಷಣೆ, ನೀರಿನ ಕೊರತೆ ಇತ್ಯಾದಿ ಗಳಿಂದಾಗಿ ಕೆಲವು ಜನರು ಮೂರ್ತಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯುತ್ತಾರೆ. ಇದಕ್ಕೆ ಉಪಾಯವೆಂದು ರಾಜ್ಯ ಸರಕಾರವು ನೀರಿನ ಟ್ಯಾಂಕ್‌ವುಳ್ಳ ಲಾರಿಯನ್ನು ಮೂರ್ತಿ ವಿಸರ್ಜನೆಗೆ ಒದಗಿಸಿತ್ತು. ಇದು ಅಶಾಸ್ತ್ರೀಯ ಹಾಗೂ ಅಯೋಗ್ಯವಾಗಿದೆ. ಏಕೆಂದರೆ ಮೂರ್ತಿಯನ್ನು ಜಲಾಶಯದಲ್ಲಿಯೇ ವಿಸರ್ಜನೆ ಮಾಡಬೇಕು.

೧. ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂರ್ತಿಯು ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ!: ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂರ್ತಿ ಶಾಸ್ತ್ರಕ್ಕನುಸಾರ ಶ್ರೀಗಣೇಶನ ಮೂರ್ತಿಯು ಜೇಡಿಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣಗಳನ್ನು ಹಚ್ಚಿದ್ದಿರಬೇಕು. ಅದು ಪರಿಸರ ಸ್ನೇಹಿಯಾಗಿರುತ್ತದೆ.

೨. ಇಂತಹ ಮೂರ್ತಿ ವಿಸರ್ಜನೆಯಿಂದ ಜಲಪ್ರದೂಷಣೆಯಾಗದೇ ಆಧ್ಯಾತ್ಮಿಕ ಲಾಭವಾಗುವುದು: ಮೂರ್ತಿಯಲ್ಲಿರುವ ಚೈತನ್ಯದಿಂದ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಹರಿಯುವ ನೀರಿನಿಂದಾಗಿ ಈ ಪವಿತ್ರಕಗಳು ದೂರದ ವರೆಗೆ ಹೋಗಿ ಅನೇಕರಿಗೆ ಅದರ ಲಾಭ ವಾಗುತ್ತದೆ. ಈ ನೀರಿನ ಬಾಷ್ಪೀಭವನ ಆಗುವುದರಿಂದ ವಾತಾವರಣ ಸಾತ್ತ್ವಿಕವಾಗುತ್ತದೆ.

ಆಪತ್ಕಾಲದಲ್ಲಿ ಗಣೇಶನ ಮೂರ್ತಿಯನ್ನು ಹೇಗೆ ವಿಸರ್ಜಿಸಬೇಕು?: ಕೆಲವೊಂದು ಸ್ಥಳಗಳಲ್ಲಿ ಜಲಾಶಯಗಳಲ್ಲಿ (ಬಾವಿ, ಕೆರೆ, ನದಿ ಇತ್ಯಾದಿಗಳಲ್ಲಿ) ಗಣೇಶ ಮೂರ್ತಿಯ ವಿಸರ್ಜನೆಗೆ ಬೇಕಾಗುವಷ್ಟು ನೀರು ಇರುವುದಿಲ್ಲ ಅಥವಾ ಕಲುಷಿತವಾಗಿರುತ್ತದೆ. ಆಗ ಮುಂದಿನ ಉಪಾಯ ಮಾಡಬೇಕು.

೧. ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡದೇ ಅಡಿಕೆಯನ್ನು ಇಟ್ಟು ಪೂಜೆ ಮಾಡಬೇಕು. ಅಡಿಕೆಯನ್ನು ಸ್ವಲ್ಪ ನೀರಿರುವ ಬಾವಿ ಅಥವಾ ಹಳ್ಳದಲ್ಲಿ ವಿಸರ್ಜಿಸಬಹುದು.

೨. ಶ್ರೀ ಗಣೇಶ ಚತುರ್ಥಿಗಾಗಿ ಧಾತುವಿನ (ಲೋಹದ) ಒಂದು ಹೊಸ ಮೂರ್ತಿಯನ್ನು ತಂದು ಅದಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು. ವಿಸರ್ಜನೆ ಸಮಯದಲ್ಲಿ ಇಂತಹ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆ ಇರುವುದಿಲ್ಲ, ಉತ್ತರ ಪೂಜೆಯಾದ ನಂತರ ಗಣಪತಿಯ ಕೈಯ ಮೇಲೆ ಅಕ್ಷತೆಯನ್ನು ಹಾಕಿ ಮೂರ್ತಿಯನ್ನು ಬಲಗೈಯಿಂದ ಆ ಸ್ಥಳದಿಂದ ಸ್ವಲ್ಪ ಸರಿಸಬೇಕು. ಅನಂತರ ಮೂರ್ತಿಯನ್ನು ಮನೆಯಲ್ಲಿನ ಯಾವುದಾದರೊಂದು ಪವಿತ್ರ ಸ್ಥಳದಲ್ಲಿ ಇಡಬೇಕು. ಉತ್ತರಪೂಜೆಯ ನಂತರ ಆ ಮೂರ್ತಿಯ ಲ್ಲಿನ ದೈವತ್ವವೂ ವಿಸರ್ಜಿಸಲ್ಪಡುತ್ತದೆ. ಆದುದರಿಂದ ಇಂತಹ ಮೂರ್ತಿಯ ಪೂಜೆ ಯನ್ನು ಪ್ರತಿದಿನ ಮಾಡಬೇಕಾಗಿಲ್ಲ. ಮುಂದಿನ ವರ್ಷ ಮತ್ತೆ ಈ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ಪೂಜಿಸಬಹುದು.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಗಣಪತಿ’)

ಬರಪೀಡಿತ ಪ್ರದೇಶಗಳಲ್ಲಿ ಶ್ರೀ ಗಣೇಶಮೂರ್ತಿಯನ್ನು ವಿಸರ್ಜಿಸುವ ಬಗೆಗಿನ ಪರ್ಯಾಯಗಳು

ಅನೇಕ ಸ್ಥಳಗಳಲ್ಲಿ ಮಳೆಯಾಗದಿರುವುದರಿಂದ ನದಿ ಹಾಗೂ ಸರೋವರಗಳು ಬತ್ತಿ ಹೋಗುತ್ತವೆ. ಆದ್ದರಿಂದ ಶ್ರೀ ಗಣೇಶಮೂರ್ತಿಗಳನ್ನು ಧರ್ಮಶಾಸ್ತ್ರಕ್ಕನುಸಾರ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲು ಅಡಚಣೆಯುಂಟಾಗಬಹುದು. ಆಪತ್ಕಾಲ ನಡೆಯುತ್ತಿರುವುದರಿಂದ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದಲ್ಲಿನ ತತ್ತ್ವಕ್ಕನುಸಾರ ಮಾಡಿದರೆ ಧರ್ಮಶಾಸ್ತ್ರ ಸಮ್ಮತವಾಗುತ್ತದೆ. ಆದ್ದರಿಂದ ಸದ್ಯದ ಬರಗಾಲದಲ್ಲಿ ಶ್ರೀ ಗಣೇಶಮೂರ್ತಿಯ ವಿಸರ್ಜನೆಗಾಗಿ ಈ ಮುಂದಿನ ಪರ್ಯಾಯಗಳನ್ನು ಅವಲಂಬಿಸಬಹುದು.

೧. ಸಣ್ಣ ಮೂರ್ತಿಯನ್ನು ಸ್ಥಾಪಿಸುವುದು
ಅ. ಪ್ರತಿವರ್ಷ ದೊಡ್ಡ ಮೂರ್ತಿಯನ್ನು ಸ್ಥಾಪಿಸುವ ಪರಂಪರೆಯಿದ್ದರೂ, ಬರಗಾಲದ ಪರಿಸ್ಥಿತಿಯಲ್ಲಿ ವಿಸರ್ಜನೆಗೆ ಸುಲಭವಾಗಬೇಕೆಂದು ಸಣ್ಣ (೬-೭ ಇಂಚು) ಮೂರ್ತಿಯನ್ನು ಪೂಜಿಸಬೇಕು.
ಆ. ಉತ್ತರಪೂಜೆಯ ನಂತರ ಈ ಮೂರ್ತಿಯನ್ನು ಮನೆಯ ಹೊರಗೆ ತುಳಸಿ ವೃಂದಾವನದ ಸಮೀಪ ಅಥವಾ ಅಂಗಳದಲ್ಲಿ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ವಿಸರ್ಜಿಸಬಹುದು. ಪಟ್ಟಣದ ಫ್ಲಾಟ್’ಗಳಲ್ಲಿ ವಾಸಿಸುವವರಿಗೆ ಈ ಮೇಲಿನ ಅನುಕೂಲಗಳಿಲ್ಲದಿರುವುದರಿಂದ ಅವರು ಮನೆಯ ಒಳಗೇ ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸಬಹುದು.
ಇ. ಮೂರ್ತಿಯು ನೀರಿನಲ್ಲಿ ಸಂಪೂರ್ಣ ಕರಗಿದ ನಂತರ ಆ ನೀರು ಮತ್ತು ಮಣ್ಣು ಕಾಲಿನಡಿ ಬರದಂತೆ ಮಂದಾರ, ಆಲದ ಮರ, ಅರಳಿಮರ ಇತ್ಯಾದಿ ಸಾತ್ತ್ವಿಕ ಮರಗಳ ಬುಡಕ್ಕೆ ಹಾಕಬೇಕು.

೨. ಸಣ್ಣ ಮೂರ್ತಿಯನ್ನು ಉಪಯೋಗಿಸುವ ಪರ್ಯಾಯ ಸಾಧ್ಯವಿಲ್ಲದಿದ್ದರೆ, ದೊಡ್ಡ ಮೂರ್ತಿಯ ಉತ್ತರಪೂಜೆ ಮಾಡಿ ಅದನ್ನು ಮನೆಯಲ್ಲಿಯೇ ಸಾತ್ತ್ವಿಕ ಸ್ಥಳದಲ್ಲಿ (ಉದಾ. ದೇವರಕೋಣೆಯ ಹತ್ತಿರ) ಇಡಬೇಕು. ಈ ಮೂರ್ತಿಗೆ ಪೂಜೆ ಮಾಡುವ ಅವಶ್ಯಕತೆಯಿಲ್ಲ. ಧೂಳು ಆವರಿಸಬಾರದೆಂದು ಅದನ್ನು ಒಂದು ಪೆಟ್ಟಿಗೆಯಲ್ಲಿ ಮುಚ್ಚಿಡಬೇಕು. ಮುಂದೆ ಹರಿಯುವ ನೀರು ಉಪಲಬ್ಧವಾದಾಗ ಅದನ್ನು ವಿಸರ್ಜಿಸಬೇಕು.

- ಶ್ರೀ.ದಾಮೋದರ ವಝೆ ಗುರೂಜಿ, ಸಂಚಾಲಕರು, ಸನಾತನ ಸಂಸ್ಥೆಯ ಸಾಧಕ-ಪುರೋಹಿತ ಪಾಠಶಾಲೆ.

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.