ಶ್ರೀ ಗಣೇಶ : ಚತುರ್ಥಿ ಮಹತ್ವ

ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ವಿಧಗಳು
ಶುಕ್ಲ ಪಕ್ಷದಲ್ಲಿನ ಚತುರ್ಥಿಗೆ ವಿನಾಯಕೀ ಮತ್ತು ಕೃಷ್ಣ ಪಕ್ಷದಲ್ಲಿನ ಚತುರ್ಥಿಗೆ ಸಂಕಷ್ಟಿ ಎನ್ನುತ್ತಾರೆ.

ಅ. ವಿನಾಯಕೀ: ಈ ದಿನದ ಪೂಜಾವಿಧಿಯಲ್ಲಿ ಸಂಕಷ್ಟಿಯಂತೆ ಚಂದ್ರದರ್ಶನ ಮತ್ತು ಚಂದ್ರಪೂಜೆ ಇರುವುದಿಲ್ಲ. ದಿನವಿಡೀ ಉಪವಾಸ ಮಾಡಿ ಮರುದಿನ ಪಾರಣೆ (ಊಟ) ಮಾಡುತ್ತಾರೆ. ಈ ವ್ರತದ ದೇವತೆ ‘ಶ್ರೀ ಸಿದ್ಧಿವಿನಾಯಕ’ನಾಗಿದ್ದು, ಎಲ್ಲವೂ ಒಳ್ಳೆಯದಾಗಬೇಕೆಂದು ವಿನಾಯಕೀಯನ್ನು ಮಾಡುತ್ತಾರೆ.

ಆ. ಸಂಕಷ್ಟಿ: ಸಂಕಷ್ಟವೆಂದರೆ ಸಂಕಟ. ನಾವು ಪೃಥ್ವಿಯಿಂದ ಬರುವ ೩೬೦ ಲಹರಿಗಳಿಂದ ಆವರಿಸಲ್ಪಟ್ಟಿರುತ್ತೇವೆ, ಇದರಿಂದ ಶರೀರದಲ್ಲಿನ ಪ್ರವಾಹಗಳು ಬಂಧಿತವಾಗುತ್ತವೆ. ಇದನ್ನೇ ಸಂಕಟ ಎನ್ನುತ್ತಾರೆ. ಕೃಷ್ಣ ಪಕ್ಷದಲ್ಲಿ ಈ ೩೬೦ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದರಿಂದ ಶರೀರದಲ್ಲಿನ ಎಲ್ಲ ನಾಡಿಗಳಲ್ಲಿನ ಪ್ರವಾಹವು ಬಂಧಿತವಾಗುತ್ತವೆ. ಈ ಸಂಕಟದ ನಿವಾರಣೆಗಾಗಿ ಸಂಕಷ್ಟಿಯನ್ನು ಮಾಡುತ್ತಾರೆ. ೩೬೦ ಲಹರಿಗಳ ಮೇಲೆ ಗಣಪತಿಯ ಅಧಿಪತ್ಯವಿದೆ; ಅವನ ಉಪಾಸನೆಯಿಂದ ೩೬೦ ಲಹರಿಗಳ ಸಂಕಟದಿಂದ ಮುಕ್ತಿ ಸಿಗುತ್ತದೆ.

ಈ ದಿನ ದಿನವಿಡೀ ಉಪವಾಸ ಮಾಡಬೇಕು. ಸಂಪೂರ್ಣ ನಿರಾಹಾರಿಯಾಗಿರಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆಯ ಸಿದ್ಧತೆಯನ್ನು ಮಾಡಬೇಕು. ರಾತ್ರಿ ಚಂದ್ರದರ್ಶನದ ನಂತರ, ಮನೆಯಲ್ಲಿ ಶ್ರೀ ಗಣೇಶನ ವಿಗ್ರಹವಿದ್ದರೆ ಅದಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ವಿಗ್ರಹವಿಲ್ಲದಿದ್ದರೆ ಅಕ್ಷತೆಯ ಮೇಲೆ ಬಟ್ಟಲಡಿಕೆಯನ್ನಿಟ್ಟು ಅದೇ ರೀತಿ ಪೂಜೆಯನ್ನು ಮಾಡಬೇಕು. ಅಥರ್ವಶೀರ್ಷದ ಇಪ್ಪತ್ತೊಂದು ಆವರ್ತನಗಳನ್ನು ಹೇಳಬೇಕು. ಚಂದ್ರನಿಗೆ ಅರ್ಘ್ಯವನ್ನು ಕೊಡಬೇಕು ಮತ್ತು ಅವನ ದಿಕ್ಕಿಗೆ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾರಿಸಿ ನಮಸ್ಕಾರ ಮಾಡಬೇಕು. ಚತುರ್ಥಿಯ ತಿಥಿಗೆ ಹರಿವಾಣದಲ್ಲಿ ಅರ್ಘ್ಯವನ್ನು ಕೊಡಬೇಕು. ಕೊನೆಗೆ ಮಹಾನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ‘ಶ್ರೀ ವಿಘ್ನವಿನಾಯಕ’ನು ಈ ವ್ರತದ ದೇವನಾಗಿದ್ದಾನೆ.

ಇ. ಅಂಗಾರಕ: ಮಂಗಳವಾರ ಚತುರ್ಥಿ ಬಂದರೆ ಅದಕ್ಕೆ ಅಂಗಾರಕ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳಗ್ರಹ ಅಥವಾ ಭೂಮಿ. ಗಣಪತಿಯ ಅಧಿಪತ್ಯವು ಪೃಥ್ವಿಯ ಮೇಲೆ ಇರುವಂತೆ ಮಂಗಳ ಗ್ರಹದ ಮೇಲೂ ಇದೆ. ಗಣಪತಿ ಮತ್ತು ಮಂಗಳ ಗ್ರಹದ ಬಣ್ಣವೂ ಒಂದೇ ಆಗಿದೆ. ಅಂಗಾರಕದ ದಿನ ಪೃಥ್ವಿಯ ಮೇಲೆ ಗಣೇಶನ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಹಾಗೆಯೇ ಮಂಗಳ ಗ್ರಹದಿಂದಲೂ ಗಣೇಶನ ಸ್ಪಂದನಗಳು ಪೃಥ್ವಿಯ ಮೇಲೆ ಬರುತ್ತವೆ. ಇದರಿಂದಾಗಿ ಚಂದ್ರನಿಂದ ಬರುವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ನಾಶವಾಗುತ್ತವೆ; ಆದುದರಿಂದಲೇ ‘ಅಂಗಾರಕ ವಿನಾಯಕೀ’ ಮತ್ತು ‘ಅಂಗಾರಕ ಸಂಕಷ್ಟಿ’ಯ ಫಲವು ವರ್ಷಪೂರ್ತಿ ಮಾಡಿದ ಕ್ರಮವಾಗಿ ವಿನಾಯಕಿ ಮತ್ತು ಸಂಕಷ್ಟಿಗಳಷ್ಟೇ ಇರುತ್ತದೆ.

ಸಂಕಷ್ಟ ಚತುರ್ಥಿ ಅಥವಾ ಗಣೇಶನ ಹಬ್ಬದಂದು ಮಾಡುವ ಗಣೇಶ ಪೂಜಾವಿಧಿಯನ್ನು ಇಲ್ಲಿ ಓದಿ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಶ್ರೀ ಗಣಪತಿ’)

ಶ್ರೀ ಗಣೇಶನ ಕುರಿತು ಲಭ್ಯವಿರುವ ಸನಾತನ ಸಂಸ್ಥೆಯ ಇತರ ಗ್ರಂಥಗಳು
೧. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೨. ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು!
೩. ಶ್ರೀ ಗಣಪತಿ (ಕಿರುಗ್ರಂಥ)
೪. ಶ್ರೀ ಗಣೇಶ ಪೂಜಾವಿಧಿ (ಕೆಲವು ಮಂತ್ರಗಳ ಅರ್ಥಸಹಿತ)

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು - ದೂರ್ವೆ
ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯಂದು ಮಾಡಬೇಕಾದ ಕೃತಿಗಳು
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಇತರ ವಿಷಯಗಳು
Dharma Granth

12 comments:

 1. thanks a lot and keep up the excellent work... GOD bless u team....

  ReplyDelete
 2. Replies
  1. ಧನ್ಯವಾದಗಳು ಸಂತೋಷ್‌ರವರೇ, ಇಲ್ಲಿರುವ ವಿಷಯಗಳನ್ನು ಇತರರಿಗೂ ತಿಳಿಸಿ ಮತ್ತು ಧರ್ಮಾಚರಣೆಯನ್ನು ಮಾಡಿ.

   Delete
 3. thanks alot really Gud info............

  ReplyDelete
  Replies
  1. ಧನ್ಯವಾದಗಳು ಅಮೃತಾರವರೇ, ಇಲ್ಲಿರುವ ವಿಷಯಗಳನ್ನು ಇತರರಿಗೂ ತಿಳಿಸಿ ಮತ್ತು ಧರ್ಮಾಚರಣೆಯನ್ನು ಮಾಡಿ.

   Delete
 4. very good and valuable information it is..............thank you to you and your team

  ReplyDelete
 5. ನಾವು ಮಾಡುವ ಅನೇಕ ಪೂಜಾ ಕಾಯ೯ಗಳಿಗೆ ಇರುವ ಮಹತ್ವ, ಹಿನ್ನಲೆ ತಿಳಿದಿರುವುದೇ ಇಲ್ಲ. ಎಲ್ಲವನ್ನು ತಿಳಿದರೆ ಎಷ್ಟು ಸಮಂಜಸ. ಈ ತರಹ ತಿಳುವಳಿಕೆಗಳಿಗೆ ನಾವೆಲ್ಲಾ ಬದ್ಡರಾಗೋಣ.
  --ಕಾಶೀ ಸುಬ್ರಹ್ಮಣ್ಯಂ,

  ReplyDelete
 6. ಈ ಮಾಹಿತಿಯನ್ನು ಗಣಪತಿ ದೇವಾಲಯಗಳಲ್ಲಿ ಮುದ್ರಿಸಿ ಪ್ರಕಟಿಸಿದರೆ ಸಾಮಾನ್ಯ ಜನರಿಗೂ ಲಭ್ಯವಾಗುತ್ತದೆ.ಧನ್ಯವಾದಗಳು

  ReplyDelete

Note: only a member of this blog may post a comment.