ವ್ರತಗಳು

೧. ಉತ್ಪತ್ತಿ ಮತ್ತು ಅರ್ಥ

ಅ. ‘ವ್ರತ’ ಎಂಬ ಶಬ್ದವು ‘ವೃ’ ಧಾತುವಿನಿಂದ ಉಂಟಾಗಿದೆ. ವರಿಸುವುದು, ಸಂಕಲ್ಪ, ಇಚ್ಛೆ, ಆeಪಾಲನೆ, ಉಪಾಸನೆ, ಪ್ರತಿe ಹೀಗೆ ಈ ಶಬ್ದದ ಅನೇಕ ಅರ್ಥಗಳಿವೆ.
ಆ. ವಿಶಿಷ್ಟ ಕಾಲಕ್ಕಾಗಿ ಅಥವಾ ಆಮರಣ ಆಚರಿಸಲ್ಪಡುವ ವಿಶಿಷ್ಟ ನೇಮಧರ್ಮವೆಂದರೆ ‘ವ್ರತ’.
ಇ. ‘ವಿಶಿಷ್ಟ ತಿಥಿಯಂದು, ವಾರದಂದು, ತಿಂಗಳಿನಲ್ಲಿ ಅಥವಾ ಇತರ ಪರ್ವಕಾಲದಲ್ಲಿ ವಿಶಿಷ್ಟ ದೇವತೆಯ ಉಪಾಸನೆಯನ್ನು ಮಾಡಿ ನಮ್ಮ ಮನೋಕಾಮನೆಗಳ ಪೂರ್ತಿಗಾಗಿ ಆಹಾರಸೇವನೆಯಲ್ಲಿ ಮತ್ತು ಇತರ ಆಚರಣೆಗಳಲ್ಲಿ ನಿರ್ಬಂಧವನ್ನು ಪಾಲಿಸುವುದೆಂದರೆ ವ್ರತವನ್ನು ಮಾಡುವುದು.’
ಈ. ಅನೇಕ ಬಾರಿ ‘ವ್ರತವೈಕಲ್ಯ’ ಎಂಬ ಶಬ್ದಪ್ರಯೋಗವನ್ನು ಮಾಡುತ್ತಾರೆ. ಇದರಲ್ಲಿನ ‘ವೈಕಲ್ಯ’ ಶಬ್ದದ ಅರ್ಥವು ‘ಕೊರತೆ ಅಥವಾ ದೋಷ’ ಎಂದಾಗಿದೆ. ಪುರಾಣದಲ್ಲಿಯೂ ಎಲ್ಲೆಡೆ ‘ವ್ರತವೈಕಲ್ಯ’ ಎಂಬ ಶಬ್ದಪ್ರಯೋಗವನ್ನು ವ್ರತದಲ್ಲಿ ಉಳಿದ ದೋಷ ಅಥವಾ ಕೊರತೆಯನ್ನು ತೋರಿಸಲು ಉಪಯೋಗಿಸಲಾಗಿದೆ. ಆದ್ದರಿಂದ ‘ವ್ರತವೈಕಲ್ಯ’ ಶಬ್ದವನ್ನು ಉಪಯೋಗಿಸದೇ ಕೇವಲ ‘ವ್ರತ’ ಎಂಬ ಶಬ್ದವನ್ನೇ ಉಪಯೋಗಿಸಬೇಕು.

೨. ಇತಿಹಾಸ ಮತ್ತು ನಿರ್ಮಿತಿ

ಅ. ಮಾನವನನ್ನು ನಿರ್ಮಿಸುವ ಮೊದಲೇ ಈಶ್ವರನು ಮಾನವನ ಆಚಾರಸಂಹಿತೆಯನ್ನು ನಿರ್ಮಿಸಿದನು. ಅದನ್ನೇ ನಾವು ‘ಅಪೌರುಷೇಯ ವೇದ’ ಎನ್ನುತ್ತೇವೆ. ವೇದಧರ್ಮವನ್ನು ವರ್ಣಾಶ್ರಮಕ್ಕನುಸಾರ ಪಾಲಿಸಿದರೆ ಮಾನವನಿಗೆ, ಜನ್ಮದಿಂದ ಮೃತ್ಯುವಿನವರೆಗೆ ದುಃಖವಂತೂ ಬರುವುದೇ ಇಲ್ಲ, ಇದರ ಬದಲು ಸುಖವು ಲಭಿಸುತ್ತದೆ. ಸುಖವೂ ಮಿಥ್ಯವೇ (ಸುಳ್ಳು) ಆಗಿದೆ, ಆದರೆ ಮಿಥ್ಯವಾದರೂ ಅವನಿಗೆ ಅದು ಸಿಗಬೇಕೆನ್ನುವ ಅಪೇಕ್ಷೆಯಿರುತ್ತದೆ. ಇಂತಹ ಮಿಥ್ಯಾಸುಖವನ್ನು ಪಡೆಯುತ್ತಾ ಆ ಸುಖದ ಬಗ್ಗೆ ವೈರಾಗ್ಯವು ಬಂದು ಅವನು ಮೋಕ್ಷಕ್ಕೆ ಪಾತ್ರನಾಗಬೇಕು ಎನ್ನುವ ರೀತಿಯಲ್ಲಿ ಧರ್ಮದ ರಚನೆಯನ್ನು ಮಾಡಲಾಗಿದೆ. ಅಂದರೆ ಐಹಿಕ ಸುಖದ ಎಲ್ಲ ಭೋಗಗಳನ್ನು ಭೋಗಿಸುತ್ತಾ ಅವನಿಗೆ ಮೋಕ್ಷವು ಲಭಿಸಬೇಕೆಂದು ಈಶ್ವರನು ಧರ್ಮಸಂಹಿತೆಯನ್ನು ನಿರ್ಮಿಸಿದ್ದಾನೆ. ಆದುದರಿಂದ ಭಗವದ್ಗೀತೆಯ ಮೂರನೆಯ ಅಧ್ಯಾಯವನ್ನು ‘ಕರ್ಮಯೋಗ’ ಎನ್ನಲಾಗಿದೆ. ನಿಷ್ಕಾಮ ಭಾವನೆಯಿಂದ ಧರ್ಮಾಚರಣೆ ಮಾಡುವುದನ್ನೇ ಕರ್ಮಯೋಗ ಎನ್ನುತ್ತಾರೆ. ನಮ್ಮ ಧರ್ಮವು ಸಕಾಮ ಭಕ್ತಿಯನ್ನು ಅಪೇಕ್ಷಿಸುವುದಿಲ್ಲ. ಆದರೆ ಕಾಲಪ್ರವಾಹದಲ್ಲಿ ಮಾನವನಲ್ಲಿ ಧರ್ಮದ ಬಗೆಗಿನ ಈ ಮೂಲ ಧೋರಣೆಯು ನಾಶವಾಗುತ್ತಾ ಹೋಯಿತು. ಇದರಿಂದ ಅವನ ಧರ್ಮಾಚರಣೆಯಲ್ಲಿ ದಿನೇದಿನೇ ನ್ಯೂನತೆ ಉಂಟಾಗತೊಡಗಿತು; ಆಗ ವ್ರತಗಳು ನಿರ್ಮಾಣವಾದವು.

ಆ. ಧಾರ್ಮಿಕ ಆಚಾರ ಅಥವಾ ಉಪಾಸನೆಗಳ ಪ್ರಾರಂಭ: ‘ಸಾಮರ್ಥ್ಯವಿರುವ ಅಥವಾ ಅಧಿಕಾರರೂಢರಾಗಿರುವ ವ್ಯಕ್ತಿಯ ಇಚ್ಛೆಯನ್ನೇ ಇತರರಿಗೆ ಆಜ್ಞೆ ಅಥವಾ ನಿಯಮವೆಂದು ಪಾಲಿಸಬೇಕಾಗುತ್ತದೆ. ‘ದೇವರು ತನಗಾಗಿ ಮತ್ತು ಪ್ರಾಣಿಮಾತ್ರರಿಗಾಗಿ ಕೆಲವು ವಿಶಿಷ್ಟ ಆಜ್ಞೆಗಳನ್ನು ಮಾಡಿದ್ದಾನೆ’, ಎಂದು ಶ್ರದ್ಧೆಯುಳ್ಳ ಜನರ ವಿಚಾರವಾಗಿದೆ. ಯಾವಾಗ ಇಂತಹ ಆಜ್ಞೆ ಅಥವಾ ಕರ್ತವ್ಯಗಳನ್ನು ದೀರ್ಘಕಾಲ ಪಾಲಿಸಲಾಗುತ್ತದೆಯೋ, ಆಗ ಅವುಗಳಿಗೆ ರೂಢಿ ಅಥವಾ ನಡತೆಗಳ ಸ್ವರೂಪವು ಪ್ರಾಪ್ತವಾಗುತ್ತದೆ. ‘ದೇವರು ನಿಯಮಿಸಿದ ವಿಶಿಷ್ಟ ಕೃತಿಗಳನ್ನು ನಾವು ಮಾಡಲೇಬೇಕು’, ಎಂಬ ಶ್ರದ್ಧೆ ಜನರಲ್ಲಿ ಉತ್ಪನ್ನವಾದಾಗ ಆ ಕೃತಿಗಳಿಗೆ ಧಾರ್ಮಿಕ ಆಚಾರ ಅಥವಾ ಉಪಾಸನೆಯ ಅರ್ಥವು ಪ್ರಾಪ್ತವಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಆಚಾರಗಳ ಮೇಲೆ ಅಥವಾ ಆಹಾರ ಮುಂತಾದವುಗಳ ಮೇಲೆ ದೇವರ ಕೃಪೆಗಾಗಿ ನಿರ್ಬಂಧ ಹಾಕಿದಾಗ, ಆ ನಿರ್ಬಂಧಗಳಿಗೆ ಪವಿತ್ರ ಪ್ರತಿಜ್ಞೆ ಅಥವಾ ಧಾರ್ಮಿಕ ಕರ್ತವ್ಯದ ಸ್ವರೂಪವು ಪ್ರಾಪ್ತವಾಗುತ್ತದೆ. ಈ ಎಲ್ಲವುಗಳಿಂದ ವ್ರತ ಎಂಬ ಶಬ್ದದ ಸುತ್ತಲೂ ಆಜ್ಞೆ, ಆಜ್ಞಾಪಾಲನೆ, ಧಾರ್ಮಿಕ ಕರ್ತವ್ಯ, ದೇವತೆಗಳ ಉಪಾಸನೆ, ನೈತಿಕ ಆಚರಣೆ, ವಿಧಿಯುಕ್ತ ಪ್ರತಿಜ್ಞೆ, ಅಂಗೀಕೃತ ಕಾರ್ಯ ಎಂಬ ವಿವಿಧ ಅರ್ಥಗಳು ಒಟ್ಟುಗೂಡುತ್ತದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು')

ಸಂಬಂಧಿತ ವಿಷಯಗಳು
ವ್ರತಗಳ ವಿಧಗಳು 

1 comment:

Note: only a member of this blog may post a comment.