ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ

ಮೂರ್ತಿವಿಜ್ಞಾನ

ಪ್ರತಿಯೊಂದು ದೇವತೆ ಎಂದರೆ ಒಂದು ತತ್ತ್ವವಾಗಿದೆ. ಈ ತತ್ತ್ವವು ಎಲ್ಲ ಯುಗಗಳಲ್ಲಿ ಇದ್ದೇ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಿರುವ ಸಗುಣರೂಪದಲ್ಲಿ ಪ್ರಕಟವಾಗುತ್ತದೆ. ಉದಾ. ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಮಾನವನು ಕಾಲಕ್ಕನುಸಾರ ದೇವತೆಗಳನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ.

ಶಿವನ ಮೂರ್ತಿಯಲ್ಲಿ ಕಾಲಕ್ಕನುಸಾರ ಮುಂದೆ ಕೊಟ್ಟಿರುವಂತೆ ಬದಲಾವಣೆಯಾಗುತ್ತಾ ಹೋಯಿತು. ಈ ವಿಷಯವನ್ನು ಓದುವಾಗ ‘ಶಿವನು ಲಯದ ದೇವತೆಯಾಗಿರುವಾಗ ಶಿವನ ಶಿಶ್ನ, ನಂದಿ, ಲಿಂಗ-ಭಗ ರೂಪದಲ್ಲಿನ ಶಿವಲಿಂಗ ಮುಂತಾದ ಉತ್ಪತ್ತಿಯ ಸಂದರ್ಭದಲ್ಲಿನ ಮೂರ್ತಿಗಳನ್ನು ಏಕೆ ತಯಾರಿಸಲಾಯಿತು’ ಎಂಬ ಪ್ರಶ್ನೆಯು ಯಾರಿಗಾದರೂ ಬರುವ ಸಾಧ್ಯತೆಯಿದೆ. ಅದರ ಉತ್ತರವು ಹೀಗಿದೆ - ಶೈವ ಸಂಪ್ರದಾಯಕ್ಕನುಸಾರ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಸ್ಥಿತಿಗಳ ದೇವರು ಶಿವನೇ ಆಗಿದ್ದಾನೆ. ತ್ರಿಮೂರ್ತಿ ಸಂಕಲ್ಪನೆಯಲ್ಲಿ (ದತ್ತ ಸಂಪ್ರದಾಯದಲ್ಲಿ) ಶಿವನು ಕೇವಲ ಲಯದ ದೇವತೆಯಾಗಿದ್ದಾನೆ. ಮನಃಶಾಸ್ತ್ರದ ದೃಷ್ಟಿಯಿಂದಲೂ ಉತ್ಪತ್ತಿ ಮತ್ತು ಸ್ಥಿತಿಗೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಹೆಚ್ಚಿನ ಜನರಿಗೆ ಸುಲಭವಾಗುತ್ತದೆ ಮತ್ತು ಲಯಕ್ಕೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಕಠಿಣವಾಗುತ್ತದೆ. ಆದುದರಿಂದ ಶೈವ ಸಂಪ್ರದಾಯದಲ್ಲಿ ಶಿವನು ಉತ್ಪತ್ತಿಗೂ ಸಂಬಂಧಿಸಿದ್ದಾನೆ.’

ಪಿಂಡರೂಪ (ಲಿಂಗರೂಪ)

‘ಭಗ’ದ ಪ್ರತೀಕವಾಗಿರುವ ‘ಪಾಣಿಪೀಠ’ ಮತ್ತು ಲಿಂಗದ ಪ್ರತೀಕವಾಗಿರುವ ‘ಲಿಂಗ’ ಇವೆರಡೂ ಸೇರಿ ಶಿವಲಿಂಗವು ತಯಾರಾಯಿತು. ಭೂಮಿ ಎಂದರೆ ಸೃಜನ ಮತ್ತು ಶಿವ ಎಂದರೆ ಪಾವಿತ್ರ್ಯ, ಹೀಗೆ ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದರೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀರ್ಯದಿಂದ) ಆಗದೇ ಶಿವನ ಸಂಕಲ್ಪದಿಂದಾಯಿತು. ಈ ರೀತಿ ಶಿವ-ಪಾರ್ವತಿಯರು ಜಗತ್ತಿನ ತಂದೆ-ತಾಯಿಯಾಗಿದ್ದಾರೆ. ಕನಿಷ್ಕನ ಮಗನಾದ ಹುಇಷ್ಕನು ಎರಡನೆಯ ಶತಮಾನದಿಂದ ಶಿವಲಿಂಗ ಪೂಜೆಯನ್ನು ಪ್ರಾರಂಭಿ ಸಿದನು. ಶಕ್ತಿ ಇಲ್ಲದೇ ಶಿವನು ಏನೂ ಮಾಡಲಾರನು; ಆದುದರಿಂದ ಶಿವನ ಜೊತೆಯಲ್ಲಿ ಶಕ್ತಿಯ ಪೂಜೆಯು ಪ್ರಾರಂಭವಾಯಿತು. ಪಿಂಡರೂಪದಲ್ಲಿರುವ ಶಿವಲಿಂಗವು ಇಂಧನಶಕ್ತಿಯ ಪ್ರತೀಕವಾಗಿದೆ. ಇತ್ತೀಚಿನ ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತೆಯೇ ಇರುತ್ತದೆ.

ಶಿವಲಿಂಗದ ವಿಧಗಳನ್ನು ಈ ಕೊಂಡಿಯಲ್ಲಿ ಓದಿ.

ಲಿಂಗ

ಅ. ಲಿಂಗವೆಂದರೆ ಯಾವುದಾದರೊಂದು ವಸ್ತುವಿನ ಅಥವಾ ಭಾವನೆಯ ಚಿಹ್ನೆ ಅಥವಾ ಪ್ರತೀಕ. ಮೇದಿನಿಕೋಶದಲ್ಲಿ ಲಿಂಗ ಶಬ್ದದ ಅರ್ಥವನ್ನು ಮುಂದಿನಂತೆ ಹೇಳಲಾಗಿದೆ.
ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾವಪಿ |
ಶಿವಮೂರ್ತಿವಿಶೇಷೇ ಚ ಮೆಹನೇಪಿ ನಪುಂಸಕಮ್ ||
ಅರ್ಥ: ಲಿಂಗ ಶಬ್ದವು ಚಿಹ್ನೆ, ಅನುಮಾನ, ಸಾಂಖ್ಯಶಾಸ್ತ್ರದಲ್ಲಿನ ಪ್ರಕೃತಿ, ಶಿವಮೂರ್ತಿ ವಿಶೇಷ ಮತ್ತು ಶಿಶ್ನ ಎಂಬ ಅರ್ಥಗಳಲ್ಲಿದ್ದು ಅದು ನಪುಂಸಕವಾಗಿದೆ; ಆದರೆ ಸಾಮಾನ್ಯವಾಗಿ ಲಿಂಗ ಎಂಬ ಶಬ್ದವನ್ನು ‘ಶಿವನ ಪ್ರತೀಕ’ವೆಂದೇ ಅರ್ಥೈಸಲಾಗುತ್ತದೆ.
ಆ. ಪ್ರಳಯಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗುತ್ತದೆ ಮತ್ತು ಸೃಷ್ಟಿಕಾಲದಲ್ಲಿ ಮತ್ತೆ ಅದರಿಂದಲೇ ಸಾಕಾರವಾಗುತ್ತದೆ; ಆದುದರಿಂದ ಅದನ್ನು ಲಿಂಗ ಎನ್ನಲಾಗಿದೆ.
ಇ. ಮಹಾಲಿಂಗಕ್ಕೆ ಮೂರು ಕಣ್ಣುಗಳಿರುತ್ತವೆ. ಅವು ಉತ್ಪತ್ತಿ, ಸ್ಥಿತಿ ಮತ್ತು ಲಯ, ಹಾಗೆಯೇ ತಮ (ವಿಸ್ಫುಟಿತ), ರಜ (ತಿರ್ಯಕ್), ಸತ್ತ್ವ (ಸಮ್ಯಕ್) ಲಹರಿಗಳ ಸಂಕೇತವಾಗಿವೆ.

ಪಾಣಿಪೀಠ (ಲಿಂಗವೇದಿಕೆ)

ಭೂಮಿಯು ದಕ್ಷಪ್ರಜಾಪತಿಯ ಮೊದಲನೆಯ ಕನ್ಯೆಯಾಗಿದ್ದಾಳೆ. ಅದಿತಿ, ಉತ್ತಾನಪಾದಾ, ಮಹೀ ಮತ್ತು ಪಾಣಿಪೀಠವು ಅವಳ ರೂಪ ಗಳಾಗಿವೆ. ಪಾಣೀಪೀಠದ ಮೂಲ ಹೆಸರು ಸುವರ್ಣಶಂಖಿನಿಯಾಗಿದೆ. ಏಕೆಂದರೆ ಶಂಖದ (ಮತ್ತು ಕವಡೆಯ) ಆಕಾರವು ಸ್ತ್ರೀಯ ಸೃಜನೇಂದ್ರಿಯದಂತಿರುತ್ತದೆ. ಪಾಣಿಪೀಠದ ಪೂಜೆಯು ಮಾತೃದೇವತೆಯ ಪೂಜೆಯೇ ಆಗಿದೆ. ಪಾಣಿಪೀಠದ ಒಳಭಾಗದಲ್ಲಿ ಕೆತ್ತಿರುವ ರೇಖೆಗಳು ಮಹತ್ವದ್ದಾಗಿರುತ್ತವೆ. ಅವುಗಳಿಂದ ಲಿಂಗದಲ್ಲಿ ನಿರ್ಮಾಣವಾಗುವ ಸಾತ್ತ್ವಿಕ ಶಕ್ತಿಯು ಲಿಂಗದಲ್ಲಿ ಮತ್ತು ಗರ್ಭಗುಡಿಯಲ್ಲಿಯೇ ಸುತ್ತುತ್ತಲಿರುತ್ತದೆ ಮತ್ತು ವಿನಾಶಕರ ತಮಪ್ರಧಾನ ಶಕ್ತಿಯು ಪಾಣಿಪೀಠದ ಹರಿನಾಳದಿಂದ (ಅಭಿಷೇಕದ ನೀರು ಹೋಗುವ ದಾರಿ) ಹೊರಗೆ ಹೋಗುತ್ತದೆ.


ಅ.ಸುತ್ತಳತೆಗನುಸಾರ ಪಾಣಿಪೀಠದ ವಿಧಗಳು
೧. ಲಿಂಗದ ಸುತ್ತಳತೆಯ ಮೂರು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಅಧಮ.
೨. ಲಿಂಗದ ಸುತ್ತಳತೆಯ ಒಂದೂವರೆ ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಮಧ್ಯಮ.
೩. ಲಿಂಗದ ಸುತ್ತಳತೆಯ ನಾಲ್ಕು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಉತ್ತಮ.

ಆ. ಎತ್ತರ: ಪಾಣಿಪೀಠದ ಎತ್ತರವು ಲಿಂಗದ ವಿಷ್ಣುಭಾಗದಷ್ಟಿರಬೇಕು.

ಇ. ಆಕಾರ: ಪಾಣಿಪೀಠಕ್ಕೆ ೪, ೬, ೮, ೧೨ ಅಥವಾ ೧೬ ಕೋನಗಳನ್ನು ಮಾಡಬಹುದು. ಆದರೆ ಪಾಣಿಪೀಠವು ಹೆಚ್ಚಾಗಿ ವೃತ್ತಾ ಕಾರವೇ ಆಗಿರುತ್ತದೆ.
ಪಾಣಿಪೀಠವು ಉತ್ತರಮುಖಿಯಾಗಿದ್ದರೆ, ಅದರ ಆಕಾರವು ಕೆಳಗಿನ ಆಕೃತಿಯಲ್ಲಿ ತೋರಿಸಿದಂತಾಗುತ್ತದೆ.


ಈ. ವೀರ್ಯಾಣು ಮತ್ತು ಸುವರ್ಣಕಾಂತಿಮಯ ಅಧಃಶಾಯಿ (ಗರ್ಭದಲ್ಲಿ ಪ್ರವೇಶಿಸುವ ಜೀವ) ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಹೀಗೆಯೇ ಕಾಣಿಸುತ್ತವೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

No comments:

Post a Comment

Note: only a member of this blog may post a comment.