ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?


೧. ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿಸುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿ ದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.

೨. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆ ಎಂದರೆ ಒಂದು ವಿಶಿಷ್ಟ ತತ್ತ್ವವಾಗಿದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಸಿದ್ಧಾಂತಕ್ಕನುಸಾರ ಮೂರ್ತಿವಿಜ್ಞಾನದಂತೆ ಮೂರ್ತಿಯನ್ನು ತಯಾರಿಸಿದರೆ ಆ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಆಕರ್ಷಿಸುತ್ತದೆ.

‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ವರ್ಣಿಸಿದ ಶ್ರೀ ಗಣೇಶನ ಮೂರ್ತಿವಿಜ್ಞಾನ
‘ಶ್ರೀ ಗಣಪತಿ ಅಥರ್ವಶೀರ್ಷ’ದಲ್ಲಿ ಗಣೇಶನ ರೂಪ (ಮೂರ್ತಿವಿಜ್ಞಾನ) ವನ್ನು ಮುಂದಿನಂತೆ ಕೊಡಲಾಗಿದೆ. - ‘ಏಕದಂತಂ ಚತುರ್ಹಸ್ತಂ...|’ ಅಂದರೆ ‘ಏಕದಂತ, ಚತುರ್ಭುಜ, ಪಾಶ ಮತ್ತು ಅಂಕುಶವನ್ನು ಧರಿಸಿರುವವನು, ಒಂದು ಕೈಯಲ್ಲಿ (ಮುರಿದ) ದಂತವನ್ನು (ಹಲ್ಲು) ಧರಿಸುವವನು ಮತ್ತು ಇನ್ನೊಂದು ಕೈಯು ವರದಮುದ್ರೆಯಲ್ಲಿರುವವನು, ಮೂಷಕ ಚಿಹ್ನೆ ಇರುವ ಧ್ವಜವಿರುವವನು, ರಕ್ತ (ಕೆಂಪು) ವರ್ಣ, ಲಂಬೋದರ, ಮೊರದಂತೆ ಕಿವಿಗಳಿರುವವನು, ರಕ್ತ (ಕೆಂಪು) ವಸ್ತ್ರಗಳನ್ನು ಉಟ್ಟುಕೊಂಡಿರುವವನು, ಮೈಗೆ ರಕ್ತಚಂದನದ ಲೇಪನವನ್ನು ಹಚ್ಚಿಕೊಂಡವನು ಮತ್ತು ರಕ್ತ (ಕೆಂಪು) ಪುಷ್ಪಗಳಿಂದ ಪೂಜಿಸಲ್ಪಡುವವನು.’
ಟಿಪ್ಪಣಿ - ಅಥರ್ವಶೀರ್ಷದಲ್ಲಿ ಶ್ರೀ ಗಣೇಶನು ಒಂದು ಕೈಯಲ್ಲಿ (ಮುರಿದ) ದಂತವನ್ನು ಧರಿಸಿರುವವನಾಗಿದ್ದಾನೆ, ಎಂದು ಅವನ ರೂಪವನ್ನು ಹೇಳಲಾಗಿದೆ. ಶ್ರೀ ಗಣೇಶನು ಮುಖ್ಯವಾಗಿ ಜ್ಞಾನದ (ವಿದ್ಯೆಯ) ದೇವತೆಯಾಗಿದ್ದಾನೆ. ‘ಮೋದಕ’ವು ಜ್ಞಾನದ ಪ್ರತೀಕವಾಗಿದೆ. ಈ ಕಾರಣದಿಂದಾಗಿ ಶ್ರೀ ಗಣೇಶನ ಕೈಯಲ್ಲಿ ಮುರಿದ ಹಲ್ಲಿನ ಬದಲಿಗೆ ಮೋದಕವನ್ನು ತೋರಿಸುವ ಪದ್ಧತಿಯು ಪ್ರಚಲಿತವಾಗಿರಬೇಕು.

(ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು')

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯಂದು ಮಾಡಬೇಕಾದ ಕೃತಿಗಳು
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.