ವಟಪೂರ್ಣಿಮೆ (ವಟಸಾವಿತ್ರಿ ವ್ರತ)



೧. ತಿಥಿ : ಜ್ಯೇಷ್ಠ ಹುಣ್ಣಿಮೆ

೨. ಉದ್ದೇಶ : ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಬೇಕೆಂದು ಸ್ತ್ರೀಯರು ಈ ವ್ರತವನ್ನು ಪ್ರಾರಂಭಿಸಿದರು.

೩. ಸಾವಿತ್ರಿಯ ಮಹತ್ವ : ಭರತಖಂಡದಲ್ಲಿ ಪ್ರಸಿದ್ಧಿ ಹೊಂದಿರುವ ಪತಿವ್ರತೆಯರಲ್ಲಿ ಸಾವಿತ್ರಿಯು ಆದರ್ಶಳಾಗಿದ್ದಾಳೆ; ಹಾಗೆಯೇ ಅವಳನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.

೪. ವ್ರತದ ದೇವತೆ : ಈ ವ್ರತದ ಪ್ರಧಾನ ದೇವತೆ ಸಾವಿತ್ರಿಸಹಿತ ಬ್ರಹ್ಮದೇವ. ಸತ್ಯವಾನ, ಸಾವಿತ್ರಿ, ನಾರದ ಮತ್ತು ಯಮಧರ್ಮ ಇವರು ಉಪ (ಗೌಣ) ದೇವತೆಗಳಾಗಿದ್ದಾರೆ.

೫. ವಟವೃಕ್ಷದ ಮಹತ್ವ: ಯಮಧರ್ಮನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿಯು ಯಮಧರ್ಮನೊಂದಿಗೆ ಸತತವಾಗಿ ಮೂರು ದಿನ ಶಾಸ್ತ್ರಚರ್ಚೆಯನ್ನು ಮಾಡಿದಳು. ಆಗ ಯಮಧರ್ಮನು ಪ್ರಸನ್ನನಾಗಿ ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಶಾಸ್ತ್ರಚರ್ಚೆಯು ವಟವೃಕ್ಷದ ಕೆಳಗೆ ನಡೆಯಿತು. ಆದುದರಿಂದ ವಟವೃಕ್ಷದೊಂದಿಗೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು.
ಅ. ‘ಪ್ರಳಯವಾದರೂ ವಟವೃಕ್ಷವು ಇದ್ದೇ ಇರುತ್ತದೆ. ಅದು ಯುಗಾಂತ್ಯದ ಸಂಗಾತಿಯಾಗಿದೆ.
ಆ. ಬಾಲ ಮುಕುಂದನು ಪ್ರಳಯಕಾಲದಲ್ಲಿ ವಟದ ಎಲೆಯ ಮೇಲೆ ಮಲಗಿದ್ದನು.
ಇ. ಪ್ರಯಾಗದ ಅಕ್ಷಯ ವಟದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆಯರು ವಿಶ್ರಮಿಸಿದ್ದರು.
ಈ. ವಟವೃಕ್ಷವು ಬ್ರಹ್ಮ, ಶ್ರೀವಿಷ್ಣು, ಮಹೇಶ, ನೃಸಿಂಹ, ನೀಲ ಮತ್ತು ಮಾಧವರ ನಿವಾಸಸ್ಥಾನವಾಗಿದೆ.
ಉ. ವಟ, ಅಶ್ವತ್ಥ, ಅತ್ತಿ ಮತ್ತು ಶಮಿ (ಬನ್ನಿ) ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ ಎಂದು ಹೇಳಲಾಗಿದೆ. ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಕೊಂಬೆಗಳಿಂದ ನೆಲದ ವರೆಗೆ ಬರುವ ಬೇರುಗಳಿಂದ ಇದು ತುಂಬಾ ವಿಸ್ತಾರವಾಗುತ್ತದೆ.
ಊ. ವಟದ ರಸದಲ್ಲಿ ಹತ್ತಿಯನ್ನು ಅರೆದು ಅದರ ಅಂಜನವನ್ನು ಕಣ್ಣಿನಲ್ಲಿ ಹಾಕಿದರೆ ಕಣ್ಣಿನ ಪೊರೆ (ಮೋತಿಬಿಂದು) ಗುಣವಾಗುತ್ತದೆ.

ವ್ರತವನ್ನು ಆಚರಿಸುವ ಪದ್ಧತಿ
ಅ. ಸಂಕಲ್ಪ : ಪ್ರಾರಂಭದಲ್ಲಿ ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯಸಂಪನ್ನ ದೀರ್ಘಾಯುಷ್ಯ ದೊರೆಯಲಿ’, ಎಂದು ಸಂಕಲ್ಪ ಮಾಡಬೇಕು.
ಆ. ಪೂಜೆ : ವಟಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪೂಜೆಯಲ್ಲಿ ಅಭಿಷೇಕವಾದ ನಂತರ ವಟಕ್ಕೆ ದಾರವನ್ನು ಸುತ್ತಬೇಕು, ಅಂದರೆ ವಟದ ಕೊಂಬೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು. ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ, ಪ್ರತಿಯೊಂದು ಜನ್ಮದಲ್ಲಿ ಈ ಪತಿಯೇ ಲಭಿಸಲಿ, ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ’, ಎಂದು ಸಾವಿತ್ರೀಸಹ ಬ್ರಹ್ಮದೇವನಿಗೆ ಪ್ರಾರ್ಥಿಸುತ್ತಾರೆ.
ಇ.ಉಪವಾಸ: ಸ್ತ್ರೀಯರು ಸಂಪೂರ್ಣ ದಿನ ಉಪವಾಸವನ್ನು ಮಾಡಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

ಸಂಬಂಧಿತ ವಿಷಯಗಳು
ಕಾರ್ತಿಕ ಏಕಾದಶಿ
ಸಹೋದರ ಬಿದಿಗೆ (ಯಮದ್ವಿತೀಯಾ)
ಬಲಿಪಾಡ್ಯ (ದೀಪಾವಳಿ ಪಾಡ್ಯ)
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ
ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ದೀಪಾವಳಿ
ಗೋವತ್ಸ ದ್ವಾದಶಿ
ವ್ರತಗಳ ವಿಧಗಳು
ಶ್ರೀ ಗಣೇಶ : ಚತುರ್ಥಿ ಮಹತ್ವ
ಮಕರ ಸಂಕ್ರಾಂತಿ
ಗಣೇಶ ಜಯಂತಿ
ಮಹಾಶಿವರಾತ್ರಿ
ಹೋಳಿ ಉತ್ಸವ ಆಚರಿಸುವ ಪದ್ಧತಿ
ಹಿಂದೂಗಳ ಹೊಸ ವರ್ಷಾರಂಭ - ಯುಗಾದಿ
ಯುಗಾದಿಯಂದು ಏರಿಸುವ ಬ್ರಹ್ಮಧ್ವಜ
ಬೇವಿನ ಪ್ರಸಾದ
ಶ್ರೀರಾಮನವಮಿ
ಅಕ್ಷಯ ತೃತೀಯಾ (ತದಿಗೆ)
Dharma Granth

No comments:

Post a Comment

Note: only a member of this blog may post a comment.