‘ದೃಷ್ಟಿ ತಗಲುವುದು’ ಎಂದರೇನು?


ಅ. ‘ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು, ಇನ್ನೊಂದು ಜೀವದ ಮೇಲೆ ದುಷ್ಪರಿಣಾಮವನ್ನು ಮಾಡುವುದಕ್ಕೆ ದೃಷ್ಟಿ ತಗಲುವುದು ಎನ್ನುತ್ತಾರೆ.’

  • ಇದರ ಒಂದು ಉದಾಹರಣೆಯೆಂದರೆ, ಮಗುವಿಗೆ ದೃಷ್ಟಿ ತಗಲುವುದು. ನಗುವ ಅಥವಾ ಮುದ್ದಾದ ಮಗುವನ್ನು ನೋಡಿ ಕೆಲವು ಜನರ ಮನಸ್ಸಿನಲ್ಲಿ ಅವರಿಗೆ ಅರಿವಾಗದೇ, ಒಂದು ರೀತಿಯ ಆಸಕ್ತಿಯುಕ್ತ ವಿಚಾರಗಳು ಬರುತ್ತವೆ. ಆಸಕ್ತಿಯುಕ್ತ ವಿಚಾರಗಳು ಯಾವಾಗಲೂ ರಜ-ತಮಾತ್ಮಕವಾಗಿರುತ್ತವೆ. ಮಗುವಿನ ಸೂಕ್ಷ್ಮದೇಹವು ಅತ್ಯಂತ ಸಂವೇದನಾಶೀಲವಾಗಿರುವುದರಿಂದ, ಈ ರಜ-ತಮಾತ್ಮಕ ಸ್ಪಂದನಗಳಿಂದ ಅದರ ಮೇಲೆ ಕೆಟ್ಟ ಪರಿಣಾಮವಾಗುತ್ತದೆ; ಅಂದರೆ ಮಗುವಿಗೆ ದೃಷ್ಟಿ ತಗಲುತ್ತದೆ.

ಆ. ಕೆಲವೊಮ್ಮೆ ಯಾವುದಾದರೊಬ್ಬ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಬಗ್ಗೆ ಯಾವುದಾದರೊಬ್ಬ ವ್ಯಕ್ತಿ ಅಥವಾ ಕೆಟ್ಟ ಶಕ್ತಿಯ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬರುತ್ತವೆ ಅಥವಾ ಅವರಿಗೆ ಒಳಿತಾಗುವುದನ್ನು ಆ ವ್ಯಕ್ತಿಗೆ ಅಥವಾ ಕೆಟ್ಟ ಶಕ್ತಿಗೆ ಸಹಿಸಲಾಗುವುದಿಲ್ಲ. ಇದರಿಂದ ನಿರ್ಮಾಣವಾಗುವ ಕೆಟ್ಟ ಸ್ಪಂದನಗಳು ಆ ವ್ಯಕ್ತಿ, ಪ್ರಾಣಿ ಅಥವಾ ವಸ್ತುವಿನ ಮೇಲೆ ಪರಿಣಾಮವನ್ನು ಬೀರುವುದಕ್ಕೆ ‘ದೃಷ್ಟಿ ತಗಲುವುದು’ ಎನ್ನುತ್ತಾರೆ.

  • ‘ಯಾವುದಾದರೊಂದು ಜೀವದ ಮನಸ್ಸಿನಲ್ಲಿ, ಇನ್ನೊಂದು ಜೀವದ ಬಗ್ಗೆ ತೀವ್ರ ಮತ್ಸರ ಅಥವಾ ದ್ವೇಷಯುಕ್ತ ವಿಚಾರಗಳ ಪ್ರಮಾಣವು ಶೇ. ೩೦ ಕ್ಕಿಂತ ಹೆಚ್ಚಿಗಿದ್ದರೆ, ಆ ಜೀವದ ದೃಷ್ಟಿಯು ಇನ್ನೊಂದು ಜೀವಕ್ಕೆ ತೀವ್ರವಾಗಿ ತಗಲಬಹುದು. ಈ ರೀತಿಯ ದೃಷ್ಟಿ ತಗಲಿದಾಗ ದೃಷ್ಟಿ ತಗಲಿದ ಜೀವಕ್ಕೆ ಶಾರೀರಿಕಕ್ಕಿಂತ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೆ ‘ಸೂಕ್ಷ್ಮ-ಸ್ತರದಲ್ಲಿ ತೀವ್ರ ದೃಷ್ಟಿ ತಗಲುವುದು’ ಎನ್ನುತ್ತಾರೆ.’

ಇ. ಅಘೋರಿ ವಿಧಿಗಳನ್ನು ಮಾಡುವವರಿಂದ ಯಾವುದಾದರೊಬ್ಬ ವ್ಯಕ್ತಿಯ ಮೇಲೆ ಮಾಟದಂತಹ ವಿಧಿಗಳನ್ನು ಮಾಡಿಸಿಕೊಂಡಿದ್ದರೂ ಆ ವ್ಯಕ್ತಿಗೆ ದೃಷ್ಟಿ ತಗಲುತ್ತದೆ.

ಇ೧. ಮಾಟದ ವೈಶಿಷ್ಟ್ಯಗಳು

ಇ೧ಅ. ‘ಮಾಟವನ್ನು ಒಂದು ವಿಶಿಷ್ಟ ಉದ್ದೇಶಕ್ಕಾಗಿ ಮಾಡುತ್ತಾರೆ.

ಇ೧ಆ. ದೃಷ್ಟಿ ತಗಲಬೇಕಾದರೆ ಯಾವುದಾದರೊಂದು ಜೀವದ ಕಪಟ ವಾಸನೆಯು ಶೇ.೩೦ರಷ್ಟಿರಬೇಕಾಗುತ್ತದೆ, ಆದರೆ ಮಾಟ ತಗಲಬೇಕಾದರೆ ಈ ಕಪಟ ವಾಸನೆಯು ಶೇ. ೩೦ ಕ್ಕಿಂತಲೂ ಹೆಚ್ಚು ತೀವ್ರ, ಅಂದರೆ ಉಗ್ರರೂಪವನ್ನು ತಾಳಬೇಕಾಗುತ್ತದೆ.

ಇ೧ಇ. ದೃಷ್ಟಿಯ ಸ್ಪಂದನಗಳು ಶೇ.೩೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ತ್ರಾಸದಾಯಕವಾದರೆ, ಅದು ಮಾಟದಲ್ಲಿ ರೂಪಾಂತರವಾಗುತ್ತದೆ.’

(ಮಾಟದ ಬಗೆಗಿನ ವಿವರವಾದ ಶಾಸ್ತ್ರೀಯ ಜ್ಞಾನವನ್ನು ಇನ್ನೊಂದು ಗ್ರಂಥದಲ್ಲಿ ಪ್ರಕಟಿಸಲಾಗುವುದು.)

ಈ. ಕೆಟ್ಟ ಶಕ್ತಿಗಳು ಹರಡುವ ಕಪ್ಪು ಶಕ್ತಿಯಿಂದ ಯಾವುದಾದರೊಂದು ಜೀವಕ್ಕೆ ತೊಂದರೆಯಾಗುವುದಕ್ಕೂ ‘ಜೀವಕ್ಕೆ ಆ ಕೆಟ್ಟ ಶಕ್ತಿಯ ದೃಷ್ಟಿ ತಗಲಿತು’, ಎನ್ನುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಮತ್ತು ಪರಿಹಾರೋಪಾಯಕ್ಕಾಗಿ ಓದಿ ಸನಾತನದ ಗ್ರಂಥ: ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ)

ಈ ಲೇಖನವನ್ನು ಆಂಗ್ಲದಲ್ಲಿ ಓದಲು ಕ್ಲಿಕ್ ಮಾಡಿ.
Dharma Granth

11 comments:

  1. what is the meaning of ರಜ-ತಮಾತ್ಮ

    ReplyDelete
    Replies
    1. ನಮಸ್ಕಾರ, ಸತ್ತ್ವ, ರಜ, ತಮ ತಿಳಿದುಕೊಳ್ಳಲು ಆಂಗ್ಲ ಭಾಷೆಯಲ್ಲಿರುವ ಈ ಲೇಖನವನ್ನು ಓದಿ http://www.spiritualresearchfoundation.org/articles/id/spiritualresearch/spiritualscience/sattva_raja_tama

      Delete
  2. HI
    what is the cost of dharma grantha??

    ReplyDelete
    Replies
    1. ನಮ್ಮ ಸಂಸ್ಥೆಯ ವತಿಯಿಂದ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದೇವೆ. ಧರ್ಮಗ್ರಂಥ ಎಂಬ ಒಂದೇ ಹೆಸರಿನ ಗ್ರಂಥವಿಲ್ಲ. ಸಾಧನೆಯಿಂದ ಹಿಡಿದ ಧಾರ್ಮಿಕ ಕೃತಿ, ವಿಧಿ, ಆಚಾರಧರ್ಮ ಹೀಗೆ ಒಟ್ಟು 110 ಗ್ರಂಥಗಳನ್ನು ಮುದ್ರಿಸಿದ್ದೇವೆ. ಒಂದೊಂದು ಗ್ರಂಥದ ಬೇರೆ ಬೇರೆ ಬೆಲೆಯಿದೆ. 40 ರಿಂದ 120 ರವರೆಗೆ ಬೇರೆ ಬೇರೆ ಇದೆ. ನಿಮ್ಮ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳಲು ಮೇಲೆ ನೀಡಿದ ಸಂಖ್ಯೆಗೆ ಸಂಪರ್ಕಿಸಿ.

      Delete
  3. Bekku(cat) darige adda bandare olledalla antare... nijana?

    ReplyDelete
  4. ಗುರುಗಳೇ, ನಮ್ಮ ಮನೆಯಲ್ಲಿ ನಾವು ಭಗವಾನ್ ಶ್ರೀ ವಿಷ್ಣು ಮೂರ್ತಿ ದೇವರ ವಿರಾಟ್ ಸ್ವರೂಪ್ ದ ದೊಡ್ಡ ಪೋಟೊ ಸುಮಾರು ೧೫ ವರ್ಷ ದಿ೦ದ ಇಟ್ಟಿದ್ದೆವೆ. ನನ್ನ ಸ್ನೇಹಿತ ಒ೦ದು ಬಾರಿ ಇದನ್ನು ನೋಡಿ ಈ ತರದ ಪೋಟೊಗಳನ್ನು ಮನೆಯಲ್ಲಿ ಇಡಬಾರದು. ಏಕೆ೦ದರೆ ಇದು ವಿಷ್ಣು ವಿನ ವಿರಾಟ್ ಸ್ವರೂಪ್ ದ ಪೋಟೊ, ಇದನ್ನು ಮನೆಯಲ್ಲಿ ಇಟ್ಟರೆ ಮನೆಯಲ್ಲಿ ಯಾವಗಳು ಜಗಳಗಳು ಬರುತ್ತದೆ ಮತ್ತು ಮನೆಯಲ್ಲಿ ಯಶಸ್ಸು ಕೂಡ ಸಿಗುದಿಲ್ಲ ಅ೦ತ ವಿವರಿಸಿದ. ಅ ಪೋಟೊವನ್ನು ತೆಗೆಯಲು ಸೂಚಿಸಿದ. ಆದರೆ ನನ್ನ ತ೦ದೆ ಕ್ರಷ್ಣ್ಣ ಮತ್ತು ವಿಷ್ಣು ವಿನ ದೇವರ ದೊಡ್ಡ ಭಕ್ತರು. ಅವರು ಯಾರ ಮಾತು ಕೇಳುವವರಲ್ಲ.

    ದಯವಿಟ್ಟು ವಿವರಿಸಿ: ವಿಷ್ಣು ವಿನ ವಿರಾಟ್ ಸ್ವರೂಪ್ ದ ಪೋಟೊ ಇಡಬಾರದ ? ಇಡಬಾರದು ಅ೦ದಾದರೆ ಯಾಕೆ ಇಡಬಾರದು ?

    ReplyDelete
    Replies
    1. ಇಡಬಹುದು. ವಿಷ್ಣುವಿನ ವಿರಾಟ್ ಸ್ವರೂಪದ ಚಿತ್ರ ಇಡಬಾರದು ಎಂದು ತಪ್ಪು ಹೇಳಿದ್ದಾರೆ. ಕೆಲವರು ಕೃಷ್ಣಾರ್ಜುನರು ರಥದ ಮೇಲೆ ಕುಳಿತಿರುವ ಚಿತ್ರವನ್ನೂ ಸಹ ಇಡಬಾರದು. ಇಟ್ಟರೆ ಮನೆಯಲ್ಲಿ ಜಗಳವಾಗುತ್ತದೆ, ಮನೆ ಕುರುಕ್ಷೇತ್ರವಾಗುತ್ತದೆ ಎಂದು ಹೇಳುತ್ತಾರೆ. ಇವೆಲ್ಲ ಸುಳ್ಳಾಗಿದೆ. ದೇವರ ಚಿತ್ರ ಇಟ್ಟರೆ ಜಗಳವಾಗುತ್ತದೆ ಒಳಿತಾಗುವುದಿಲ್ಲ ಎಂದು ಹೇಳುವುದು ನೋಡಿದರೆ ಹಿಂದೂಗಳಿಗೆ ಧಾರ್ಮಿಕ ಶಿಕ್ಷಣದ ಅಗತ್ಯ ಎಷ್ಟಿದೆ ಎಂದು ಗೊತ್ತಾಗುತ್ತದೆ.

      Delete
    2. i need SHIVA dharma grantha. where it was available.

      Delete

Note: only a member of this blog may post a comment.