ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕೆಯ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?

ಪೂಜೆಯಲ್ಲಿ ಯಾವ ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವು ಆ ದೇವತೆಗೆ ಇಷ್ಟವಾಗಿದೆ ಎಂದು ಹೇಳುತ್ತಾರೆ. ಉದಾ. ಗಣಪತಿಗೆ ಕೆಂಪು ಹೂವು, ಶಿವನಿಗೆ ಬಿಲ್ವಪತ್ರೆ ಮತ್ತು ವಿಷ್ಣುವಿಗೆ ತುಳಸಿ. ಪ್ರತ್ಯಕ್ಷದಲ್ಲಿ ಶಿವ, ವಿಷ್ಣು, ಗಣಪತಿ ಇಂತಹ ಉಚ್ಚದೇವತೆಗಳಿಗೆ ಯಾವುದಾದರೊಂದು ವಸ್ತುವಿನ ಬಗ್ಗೆ ಇಷ್ಟವಿದೆ ಅಥವಾ ಇಷ್ಟವಿಲ್ಲದಿರುವುದು ಎಂದು ಇರುವುದಿಲ್ಲ. ವಿಶಿಷ್ಟ ವಸ್ತುವನ್ನು ವಿಶಿಷ್ಟ ದೇವತೆಗೆ ಅರ್ಪಿಸುವ ಕಾರಣವು ಮುಂದಿನಂತಿದೆ.


ಮೂರ್ತಿಯಲ್ಲಿ ಚೈತನ್ಯ ನಿರ್ಮಾಣವಾಗಬೇಕು ಹಾಗೂ ಅದು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ನಾವು ಪೂಜೆಯನ್ನು ಮಾಡುತ್ತೇವೆ. ಚೈತನ್ಯವನ್ನು ನಿರ್ಮಾಣ ಮಾಡಲು ದೇವತೆಗೆ ಯಾವ ವಸ್ತುವನ್ನು ಅರ್ಪಿಸುತ್ತಾರೆಯೋ, ಆ ವಸ್ತುವಿನಲ್ಲಿ ಆ ದೇವತೆಯ ಮಹಾಲೋಕದವರೆಗೂ ಹರಡಿರುವ ಪವಿತ್ರಕಗಳನ್ನು (ಆ ದೇವತೆಯ ಸೂಕ್ಷ್ಮಾತಿ ಸೂಕ್ಷ್ಮಕಣ) ಆಕರ್ಷಿಸುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುತ್ತದೆ. ಕೆಂಪು ಹೂವುಗಳಲ್ಲಿ ಗಣಪತಿಯ, ಬಿಲ್ವಪತ್ರೆಯಲ್ಲಿ ಶಿವನ, ತುಳಸಿಯಲ್ಲಿ ವಿಷ್ಣುವಿನ ಮತ್ತು ಎಣ್ಣೆ, ಸಿಂಧೂರ ಹಾಗೂ ಎಕ್ಕದ ಎಲೆಗಳಲ್ಲಿ ಮಾರುತಿಯ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿರುತ್ತದೆ; ಆದುದರಿಂದ ಮಾರುತಿಗೆ ಎಣ್ಣೆ, ಸಿಂಧೂರ ಮತ್ತು ಎಕ್ಕದ ಎಲೆಗಳನ್ನು ಅರ್ಪಿಸುತ್ತಾರೆ.

(ಆಧಾರ: ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ)

ಸಂಬಂಧಿತ ಲೇಖನಗಳು
ಮಾರುತಿ
ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

2 comments:

  1. Is there any book written on these topics?
    If so where can i buy it?
    Please let me know.

    My mail id ramesh.043@outlook.com

    ReplyDelete
    Replies
    1. ನಮಸ್ಕಾರ, ಈ ವಿಷಯ ಸನಾತನ ಸಂಸ್ಥೆಯು ಪ್ರಕಟಿಸಿದ 'ಮಾರುತಿ' ಎಂಬ ಕಿರುಗ್ರಂಥದಲ್ಲಿದೆ. ಗ್ರಂಥ ಬೇಕಾಗಿದ್ದಲ್ಲಿ ತಾವು 8951937332 ಈ ಸಂಖ್ಯೆಗೆ ಕರೆ ಮಾಡಿ. ಧನ್ಯವಾದಗಳು.

      Delete

Note: only a member of this blog may post a comment.