ಗಣೇಶಭಕ್ತ "ಮೋರಯಾ ಗೋಸಾವಿ"


ಗಣಪತಿ ಬಪ್ಪಾ ಮೋರಯಾ, ಮಂಗಲಮೂರ್ತಿ ಮೋರಯಾ ಎಂಬ ಜಯಘೋಷದಲ್ಲಿ "ಮೋರಯಾ" ಎನ್ನುವುದು ಮೋರಯಾ ಗೋಸಾವಿ ಎಂಬ ಶ್ರೀ ಗಣೇಶನ ಭಕ್ತನ ಹೆಸರಾಗಿದೆ. ಭಕ್ತ ಮತ್ತು ಭಗವಂತನೊಂದಿಗೆ ಸಂಬಂಧವನ್ನು ಈ ಜಯಘೋಷವು ತೋರಿಸುತ್ತದೆ.

ಸಂಕ್ಷಿಪ್ತ ಚರಿತ್ರೆ
ಅ. ಜನ್ಮ : ಮೋರಯಾ ಗೋಸಾವಿ ಇವರ ಮನೆತನವು ಕರ್ನಾಟಕ ರಾಜ್ಯದಲ್ಲಿನ ಶಾಲಿ ಎಂಬ ಹಳ್ಳಿಯಲ್ಲಿತ್ತು. ಅವರ ತಂದೆಯ ಹೆಸರು ವಾಮನಭಟ್ಟ ಮತ್ತು ತಾಯಿಯ ಹೆಸರು ಪಾರ್ವತಿಬಾಯಿಯಾಗಿತ್ತು. ವಾಮನಭಟ್ಟರು ಗಣೇಶನ ಉಪಾಸಕರಾಗಿದ್ದರು. ಅವರು ಉಪಾಸನೆಗಾಗಿ ಮೋರಗಾವ ಎಂಬ ಊರಿನಲ್ಲಿ (ಮಹಾರಾಷ್ಟ್ರದ ಪುಣೆ ಜಿಲ್ಲೆ) ಗಣಪತಿ ಇರುವಲ್ಲಿ ಬಂದು ವಾಸಿಸಿದರು. ಅಲ್ಲಿ ೧೩೭೫ ರಲ್ಲಿ ಮೋರಯಾನ ಜನ್ಮವಾಯಿತು.

ಆ. ಕಠಿಣ ಸಾಧನೆ : ಮೋರಯಾನಿಗೆ ಎಂಟನೇ ವಯಸ್ಸಿನಲ್ಲಿ ಉಪನಯನವಾಯಿತು. ಉಪನಯನದ ನಂತರ ಅಧ್ಯಯನ ಮತ್ತು ಉಪಾಸನೆ ನಡೆಯುತ್ತಿರುವಾಗ ಮೋರಯಾ ಗೋಸಾವಿಗೆ ಸಿದ್ಧ ಯೋಗಿರಾಜ ಎಂಬ ಸದ್ಗುರುಗಳ ಭೇಟಿಯಾಯಿತು. ಅವರ ಉಪದೇಶದಂತೆ ಮೋರಯಾ ಥೇವೂರಿಗೆ (ಪುಣೆ ಜಿಲ್ಲೆ, ಮಹಾರಾಷ್ಟ್ರ) ಬಂದು ಕಠಿಣ ತಪಶ್ಚರ್ಯ ಮಾಡಿದನು. ೪೨ ದಿನಗಳ ಅಖಂಡ ನಾಮಜಪದ ನಂತರ ಶ್ರೀ ಗಣಪತಿಯು ಮೋರಯಾನಿಗೆ ದೃಷ್ಟಾಂತ ನೀಡಿದನು. ಅದರ ನಂತರ ಅವನು ಮೋರಗಾವಗೆ ಹಿಂತಿರುಗಿದನು.

ಇ. ಕೌಟುಂಬಿಕ ಜೀವನ : ತಂದೆ-ತಾಯಿಯರ ನಿಧನದ ನಂತರ ಅವರು ಮೋರಗಾವವನ್ನು ಬಿಟ್ಟು ಚಿಂಚವಡ (ಪುಣೆ ಜಿಲ್ಲೆ, ಮಹಾರಾಷ್ಟ್ರ) ದಲ್ಲಿ ವಾಸ್ತವ್ಯಕ್ಕಾಗಿ ಬಂದರು. ಅಲ್ಲಿ ಗೋವಿಂದರಾವ ಕುಲಕರ್ಣಿಯವರ ಮಗಳಾದ ಉಮಾ ಎಂಬ ಸುಲಕ್ಷಣ ಕನ್ಯೆಯೊಂದಿಗೆ ವಿವಾಹವಾಯಿತು. ನಂತರ ಅವರಿಗೆ ಪುತ್ರ ಪ್ರಾಪ್ತಿಯಾಯಿತು. ಮೋರಯಾ ಇವರು ಮಗನಿಗೆ ‘ಚಿಂತಾಮಣಿ’ ಎಂಬ ಹೆಸರನ್ನಿಟ್ಟರು.

ಈ. ಶ್ರೀ ಗಣೇಶನ ಸ್ವಪ್ನದೃಷ್ಟಾಂತ : ಪ್ರತಿಯೊಂದು ಚತುರ್ಥಿಗೆ ಮೋರಯಾ ಗೋಸಾವಿಯವರು ಮೋರಗಾವನಲ್ಲಿನ ಗಣಪತಿಯ ದರ್ಶನಕ್ಕೆ ಹೋಗುತ್ತಿದ್ದರು. ಒಂದು ದಿನ ಮಂಗಲಮೂರ್ತಿಯು ಅವರ ಸ್ವಪ್ನದಲ್ಲಿ ಬಂದು ‘ನೀನು ಇಷ್ಟು ದೂರ ಬರುವುದು ಬೇಡ. ಕನ್ಹಾ ನದಿಯಲ್ಲಿ ನಾನಿದ್ದೇನೆ. ಅಲ್ಲಿಂದ ನನ್ನನ್ನು ಹೊರಗೆ ತೆಗೆದು ನಿನ್ನ ಮನೆಗೆ ತೆಗೆದುಕೊಂಡು ಹೋಗು.’ ಈ ದೃಷ್ಟಾಂತದಂತೆ ಮೋರಯಾರವರು ಕನ್ಹಾ ನದಿಯಿಂದ ಆ ಗಣೇಶಮೂರ್ತಿಯನ್ನು ಚಿಂಚವಡದ ತಮ್ಮ ಮನೆಗೆ ತೆಗೆದುಕೊಂಡು ಹೋದರು ಮತ್ತು ಅದರ ಪ್ರತಿಷ್ಠಾಪನೆಯನ್ನು ಮಾಡಿದರು. ಮೋರಯಾ ಗೋಸಾವಿಯವರ ಸಾಧುತ್ವದ ಕೀರ್ತಿಯು ಎಲ್ಲೆಡೆ ಹರಡಿತು.

ಉ. ಸಮಾಧಿ : ಈ ಶ್ರೇಷ್ಠ ಗಣೇಶಭಕ್ತರು ೧೪೬೧ರಲ್ಲಿ ಚಿಂಚವಡದಲ್ಲಿ ತಮ್ಮ ೮೬ನೇ ವಯಸ್ಸಿನಲ್ಲಿ ಸಮಾಧಿ ತೆಗೆದುಕೊಂಡರು.

೨. ಮೋರಯಾ ಗೋಸಾವಿಯವರಿಗೆ ಶ್ರೀ ಗಣೇಶನೊಂದಿಗಿರುವ ಮುರಿಯಲಾರದ ಸಂಬಂಧವನ್ನು ತೋರಿಸುವ ಅನುಭೂತಿ: ಮಹಾರಾಷ್ಟ್ರದಲ್ಲಿ ‘ಮಂಗಲಮೂರ್ತಿ ಮೋರಯಾ’ ಎಂದು ಶ್ರೀ ಗಣಪತಿಯ ಜಯಘೋಷವನ್ನು ಮಾಡುತ್ತಾರೆ, ಅದರಲ್ಲಿರುವ ‘ಮೋರಯಾ’ ಎಂಬ ಶಬ್ದವನ್ನು ಮೋರಯಾ ಗೋಸಾವಿಯವರ ಹೆಸರಿನಿಂದ ತೆಗೆದುಕೊಂಡಿದ್ದಾರೆ. ಇದರಿಂದ ದೇವರು ಮತ್ತು ಭಕ್ತರ ಮುರಿಯದ ಸಂಬಂಧವು ಗಮನಕ್ಕೆ ಬರುತ್ತದೆ.

‘ಮೋರಯಾ ಗೋಸಾವಿ’ ಇವರ ಚಿತ್ರ ಬಿಡಿಸಲು ಪ್ರಾರಂಭ ಮಾಡಿದಾಗ ನನ್ನ ಕುಲದೇವಿ ರೇಣುಕಾಮಾತೆಯ ನಾಮಜಪ ನಡೆಯುತ್ತಿತ್ತು. ಆದರೆ ಚಿತ್ರ ಬಿಡಿಸಿದ ನಂತರ ನನಗೆ ತಾನಾಗಿಯೇ ‘ಶ್ರೀ ಗಣೇಶಾಯ ನಮಃ|’ ಈ ನಾಮಜಪ ನಡೆಯುತ್ತಿರುವುದರ ಅರಿವಾಯಿತು.
 - ಕು.ಮಧುರಾ ಭೋಸಲೆ, ಸನಾತನ ಸಂಸ್ಥೆ.

(ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಂದೆಡೆ ಇರುತ್ತವೆ ಎಂಬುದು ಅಧ್ಯಾತ್ಮದಲ್ಲಿನ ಸಿದ್ಧಾಂತವಾಗಿದೆ. ಕು.ಮಧುರಾ ಭೋಸಲೆಯವರು ಮೋರಯಾ ಗೋಸಾವಿಯವರ ಚಿತ್ರ, ಅಂದರೆ ರೂಪವನ್ನು ಬಿಡಿಸುತ್ತಿರುವಾಗ ಅವರೊಂದಿಗೆ ಏಕರೂಪವಾಗಿದ್ದರಿಂದ ಅವರಲ್ಲಿ ‘ಶ್ರೀ ಗಣೇಶಾಯ ನಮಃ|’ ಎಂಬ ನಾಮಜಪ ನಡೆಯುತ್ತಿತ್ತು. ಅಂದರೆ ರೂಪದೊಂದಿಗೆ ಶಬ್ದವು ಜೊತೆಯಾಯಿತು. - ಸಂಕಲನಕಾರರು)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ಗಣಪತಿ')

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ

ಸಂಬಂಧಿತ ವಿಷಯಗಳು
ವ್ರತಗಳು
ವ್ರತಗಳ ವಿಧಗಳು 

1 comment:

  1. Can you please post the picture of Ganesh installed in Moraya Gosavi's house....

    ReplyDelete

Note: only a member of this blog may post a comment.