‘ಸನಾತನ ಪಂಚಾಂಗ 2013’ (ಜನರಿಗೆ ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಕೃತಿಶೀಲಗೊಳಿಸುವ ಪಂಚಾಂಗ)

ಉದ್ದೇಶ :
ಜನರು ದಿನದರ್ಶಿಕೆಯನ್ನು ಕೇವಲ ದಿನವನ್ನು ನೋಡಲು ಬಳಸುತ್ತಾರೆ. ಆದರೆ ಸನಾತನ ಪಂಚಾಂಗದ ವೈಶಿಷ್ಟ್ಯವೆಂದರೆ ಅದು ಕೇವಲ ಪಂಚಾಂಗ ಮಾತ್ರವಲ್ಲ ಹಿಂದೂಗಳಿಗೆ ಧರ್ಮಾಚರಣೆಯ ಬಗ್ಗೆ ತಿಳಿಸುವ ಕೈಗನ್ನಡಿಯಾಗಿದೆ. ಅಂದರೆ ಇದು ಕೇವಲ ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗವಾಗಿದೆ. ಹಿಂದೂಗಳಿಗೆ ಎಲ್ಲಿಯೂ ಸಿಗದಿರುವಂತಹ ಧರ್ಮಶಿಕ್ಷಣವನ್ನು ಈ ಪಂಚಾಂಗವು ನೀಡುತ್ತಿದೆ. ಉದಾ : ಧಾರ್ಮಿಕ ಹಬ್ಬವನ್ನು ಹೇಗೆ ಆಚರಿಸಬೇಕು, ಭಾರತೀಯ ಸಂಸ್ಕ ತಿಯಂತೆ ಆಚರಣೆ ಮಾಡುವ ಮಹತ್ವ, ಜಾತ್ರೆ-ಉತ್ಸವಗಳಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟುವುದು ಇತ್ಯಾದಿ.

ಪಂಚಾಂಗ
ಪ್ರತಿದಿನದ ಪಂಚಾಂಗದೊಂದಿಗೆ ಶುಭ-ಅಶುಭ ದಿನ, ವಿವಾಹ ಮುಹೂರ್ತ, ಉಪನಯನ ಮುಹೂರ್ತ, ಸಂಕಷ್ಟ ಚತುರ್ಥಿ, ಚಂದ್ರೋದಯ, ಗ್ರಹಣದ ಮಾಹಿತಿ, ಮಳೆ ನಕ್ಷತ್ರ, ಬೀಜ ಬಿತ್ತನೆ ಹಾಗೂ ಕೊಯ್ಲಿನ ಮುಹೂರ್ತವನ್ನೂ ಕೊಡಲಾಗಿದೆ.

ಹಿಂದೂ ರಾಷ್ಟ್ರ,ಅಂದರೆ ಈಶ್ವರೀ ರಾಜ್ಯದ ಸ್ಥಾಪನೆ
ಇಂದು ದೇಶವು ಎಲ್ಲ ದಿಕ್ಕಿನಿಂದ ಅರಾಜಕತೆಯತ್ತ ಹೊರಳಿದೆ. ಶಾಂತಿ ನೆಮ್ಮದಿ ಇಲ್ಲವಾಗಿದೆ. ದೇಶಕ್ಕೆ ಕಾಡುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಅತಿ ದೊಡ್ಡ ಸಮಸ್ಯೆಯಾಗಿದೆ.  ಭ್ರಷ್ಟಾಚಾರ ನಿರ್ಮೂಲನೆ, ಕಲಬೆರಕೆ, ತೂಕದಲ್ಲಾಗುವ ಅವ್ಯವಹಾರ ಮುಂತಾದವುಗಳ ಬಗ್ಗೆ ಜನಜಾಗೃತಿ ಹಾಗೂ ಅದರ ನಿರ್ಮೂಲನೆಗಾಗಿನ ಮಾರ್ಗದರ್ಶನವು ಈ ಪಂಚಾಂಗದ ಒಂದು ವೈಶಿಷ್ಟ್ಯವಾಗಿದೆ. ಈ ಮೂಲಕ ಒಂದು ಸಮೃದ್ಧ ರಾಮ ರಾಜ್ಯವನ್ನು, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮೈಲುಗಲ್ಲಾಗಿದೆ.

ಹಿಂದೂ ಸಂಸ್ಕೃತಿ ರಕ್ಷಣೆ ಹಾಗೂ ಭಾಷಾಭಿಮಾನ ಹೆಚ್ಚಳ
ಇಂದು ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ ಮಹಾನ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನವಾಗುತ್ತಿದೆ. ಅದರಿಂದಾಗಿ ಸಮಾಜ ಪಾಶ್ಚಾತ್ಯರ ಕುಸಂಸ್ಕೃತಿಯತ್ತ ವಾಲುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇದರಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಉದಾ. ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ ೫ ರಂದಲ್ಲ ಗುರುಪೂರ್ಣಿಮೆಯಂದು ಆಚರಿಸಬೇಕು ಇತ್ಯಾದಿ. ಅಲ್ಲದೇ ಪಾಶ್ಚಾತ್ಯರ ‘ಡೇ’ ಸಂಸ್ಕೃತಿಗೆ ಮಾರು ಹೋಗದಂತೆಯೂ ಮಾಹಿತಿ ನೀಡಲಾಗಿದೆ. ಇಂದು ಆಂಗ್ಲಭಾಷೆಯ ಪ್ರಭಾವದಿಂದಾಗಿ ಮಾತೃಭಾಷೆಯತ್ತ ದುರ್ಲಕ್ಷವಾಗುತ್ತಿದೆ. ಮಾತೃಭಾಷೆಯ ಜೋಪಾಸನೆಯೆಂದರೆ ರಾಷ್ಟ್ರಾಭಿಮಾನದ ಜೋಪಾಸನೆಯಾಗಿದೆ. ಹಾಗಾಗಿ ಮಾತೃಭಾಷೆಯ ಮಹತ್ವವನ್ನು ಇದರಲ್ಲಿ ತಿಳಿಯಪಡಿಸಿದ್ದೇವೆ. ದೇವಭಾಷೆ ಸಂಸ್ಕೃತದ ಮಹತ್ವದ ಬಗ್ಗೆಯೂ ಮಾಹಿತಿ ಇದೆ.

ಹಿಂದೂ ಧರ್ಮದ ಮೇಲಿನ ಆಘಾತದ ಬಗ್ಗೆ ತಿಳುವಳಿಕೆ
ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ಮತಾಂತರವಾಗುತ್ತಿದ್ದಾರೆ. ಅಲ್ಲದೇ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಿ ಒಂದು ರೀತಿ ವೈಚಾರಿಕ ಮತಾಂತರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ಸಿಗಲೆಂದು ಮಾರ್ಗದರ್ಶಕ ಲೇಖನಗಳನ್ನೂ ಅಳವಡಿಸಲಾಗಿದೆ. ಗೋವು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ. ಅದರ ರಕ್ಷಣೆ ಎಂದರೆ ಹಿಂದೂ ಧರ್ಮದ ರಕ್ಷಣೆಯೇ ಆಗಿದೆ. ಈ ಕುರಿತು ಪಂಚಾಂಗದಲ್ಲಿ ಗೋಹತ್ಯೆ ತಡೆಯುವ ಹಾಗೂ ಅದರ ಮಹತ್ವದ ಬಗ್ಗೆ  ಮಾಹಿತಿ ನೀಡಲಾಗಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಸ್ತುತ ಕೃತಿಶೀಲರಾಗಿರುವವರ ಹಾಗೂ ಶಾಲಾಕಾಲೇಜುಗಳಲ್ಲಿಯೂ ನಮ್ಮ ರಾಷ್ಟ್ರಪುರುಷರ, ಕ್ರಾಂತಿಕಾರರ ಬಗ್ಗೆ ಮಾಹಿತಿ ಇಲ್ಲದ್ದರಿಂದ ಅದನ್ನು ಇದರಲ್ಲಿ ಅಳವಡಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗಿದೆ.

ಧರ್ಮ ಶಿಕ್ಷಣ
ಹಿಂದೂ ಧರ್ಮದಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಆಯಾ ಹಬ್ಬಗಳನ್ನು ಹೇಗೆ ಆಚರಿಸಬೇಕು, ಆಚರಣೆಯ ಹಿಂದಿನ ಅಧ್ಯಾತ್ಮಶಾಸ್ತ್ರ, ಸಾರ್ವಜನಿಕ ಗಣೇಶೋತ್ಸವದಲ್ಲಾಗುವ ತಪ್ಪು ಆಚರಣೆಗಳು, ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಹೀಗೆ ಅನೇಕ ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಹಿಂದೂಗಳಿಗೆ ಹಬ್ಬ ಆಚರಣೆಯ ಕುರಿತು ಮಾಹಿತಿ ದೊರೆತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ನಾಮಜಪದ ಮಹತ್ವ, ಪ್ರಾರ್ಥನೆಯ ಮಹತ್ವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ದೇವಸ್ಥಾನಗಳ ಮಾಹಿತಿ
ಕೆಲವು ಮಹತ್ವದ ದೇವಸ್ಥಾನಗಳ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗಿದೆ. ಅದಲ್ಲದೇ ದೇವಸ್ಥಾನದಲ್ಲಿ ದೇವರ ದರ್ಶನ ಹೇಗೆ ಪಡೆಯಬೇಕು, ಶೃಂಗದರ್ಶನದ ಮಹತ್ವ  ತೀರ್ಥಸ್ಥಳಗಳ ಮಹತ್ವವನ್ನೂ ತಿಳಿಸಲಾಗಿದೆ.

ದೇವರ ಹಾಗೂ ಸಂತರ ಸಾತ್ತ್ವಿಕ ಚಿತ್ರಗಳು
ಸನಾತನವು ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ತಯಾರಿಸಿದೆ. ಸಂತರ ಮಾರ್ಗದರ್ಶನದಲ್ಲಿ ತಯಾರಿಸಲಾದ ಈ ಚಿತ್ರಗಳಿಂದ ಆಯಾ ದೇವತೆಯ ಸ್ಪಂದನವು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಕಲಿಯುಗದಲ್ಲಿ ಈಗಿನ ದೇವತೆಯ ಚಿತ್ರಗಳಲ್ಲಿ ಹೆಚ್ಚೆಂದರೆ ಶೇ.೧-೨ರಷ್ಟೇ ಸಾತ್ತ್ವಿಕ ಸ್ಪಂದನಗಳಿರುತ್ತವೆ. ಆದರೆ ಸನಾತನದ ಪಂಚಾಂಗದಲ್ಲಿನ ಚಿತ್ರಗಳಲ್ಲಿ ಶೇ.೨೮ ಕ್ಕೂ ಹೆಚ್ಚು ಸಾತ್ತ್ವಿಕತೆ ಇರುವುದರಿಂದ ಪಂಚಾಂಗ ಇರುವಲ್ಲಿನ ಸ್ಥಳದ ವಾಸ್ತುವಿನ ಶುದ್ಧೀಕರಣವೂ ಆಗುತ್ತದೆ. ಅಲ್ಲದೇ ವಿವಿಧ ಸಂತರ ಚಿತ್ರಗಳನ್ನೂ ಆಯಾ ಪುಣ್ಯತಿಥಿ, ಜಯಂತಿಯಂದು ಹಾಕಲಾಗಿದೆ. ಅಲ್ಲದೇ ಕೃತಿಶೀಲ ಸಂತರ ಮಾರ್ಗದರ್ಶನವನ್ನೂ ಮುದ್ರಿಸಲಾಗಿದೆ. ಇವೆಲ್ಲದರಿಂದ ಪಂಚಾಂಗದ ಸಾತ್ತ್ವಿಕ ಸ್ಪಂದನಕ್ಕೆ ಇನ್ನೂ ಹೆಚ್ಚಿನ ಮೆರುಗು ಸಿಕ್ಕಿದೆ.

ಪಂಚಾಂಗದ ಅತುಲನೀಯ ಗುಣಮಟ್ಟ
ಇತರ ಪಂಚಾಂಗದಲ್ಲಿ ಸಾಮಾನ್ಯವಾಗಿ ದಿನಾಂಕಗಳಿದ್ದು ಕೇವಲ ೬ ಪುಟಗಳಲ್ಲಿ ೧೨ ತಿಂಗಳ ಮಾಹಿತಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ರೂ. ೩೦ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಸನಾತನ ಪಂಚಾಂಗವನ್ನು ನಾವು ರಾಷ್ಟ್ರ ಮತ್ತು ಧರ್ಮದ ಪ್ರಬೋಧನೆಯ ದೃಷ್ಟಿಯಿಂದ ಮಾಡಿದ್ದರಿಂದ ಮತ್ತು ೧೨ ಪುಟಗಳಲ್ಲಿ ಮೇಲ್ಕಂಡ ವಿವರವಾದ ಮಾಹಿತಿಗಳನ್ನು ಕೊಟ್ಟು ಕೇವಲ ರೂ.೩೦ರ ಅರ್ಪಣೆ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯ ಮಾಡಿಕೊಡುತ್ತಿದ್ದೇವೆ ಹಾಗೂ ಸಗಟು ಖರೀದಿಯಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದನ್ನು ಗ್ಲಾಸಿ ಪೇಪರ್‌ನಲ್ಲಿ ಮುದ್ರಿಸಿದ್ದರಿಂದ ಈ ಪಂಚಾಂಗಗಳನ್ನು ಬಹುಕಾಲದ ತನಕ ಕಾಪಾಡಿಕೊಂಡು ಇಡಬಹುದು ಹಾಗೂ ಇತರರಿಗೂ ಧರ್ಮಾಚರಣೆಯ ದೃಷ್ಟಿಯಿಂದ ತೋರಿಸಬಹುದು.

ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಇರಬೇಕಾದಂತಹ ಪಂಚಾಂಗ!
ಈಗಾಗಲೇ ಲಕ್ಷಾಂತರ ಪ್ರತಿಗಳ ಮಾರಾಟವಾಗಿವೆ. ಸಂಗ್ರಹ ಮುಗಿಯುವ ಮೊದಲೇ ಖರೀದಿಸಿ.

ಅರ್ಪಣೆ ಬೆಲೆ ಕೇವಲ ರೂ. 30/-

ಪಂಚಾಂಗಕ್ಕಾಗಿ ಸಂಪರ್ಕ :
ಬೆಂಗಳೂರು - 72040 82609
ಉತ್ತರ ಕರ್ನಾಟಕ - 72040 82725
ದಕ್ಷಿಣ ಕನ್ನಡ - 93430 17001
ಶಿವಮೊಗ್ಗ - 72040 82673

21 comments:

  1. sir,
    I need 5 calenders... i am residing at Bidar city..
    Please let me know how to get it...
    me at: 9448956565, santosh.matti1984@gmail.com

    ReplyDelete
    Replies
    1. ಸಂತೋಷ ಮಟ್ಟಿಯವರೇ, ನಿಮಗೆ ನಾಳೆ ದೂರವಾಣಿ ಕರೆ ಮಾಡುತ್ತೇವೆ.

      Delete
  2. nange 3 calander beku bangalorenalli elli siguthe?

    ReplyDelete
  3. i want 3 caledender where will i get it in bangalore.

    ReplyDelete
    Replies
    1. ಧನುಶ್‌ರವರೇ, ಬೆಂಗಳೂರಿನಲ್ಲಿ ಈ ಸಂಖ್ಯೆಗೆ ಸಂಪರ್ಕಿಸಿ 72040 82609

      Delete
    2. ನಿಮ್ಮ ದೂರವಾಣಿ ಸಂಖ್ಯೆ ಇ-ಮೇಲ್ ಮಾಡಿದರೂ ನಿಮಗೆ ಕರೆ ಮಾಡುತ್ತೇವೆ.

      Delete
  4. ಮೈಸೂರಿನಲ್ಲಿ ದೊರೆಯುವ ಸ್ಥಳವನ್ನು ತಿಳಿಸಿ.

    ReplyDelete
    Replies
    1. ನಮಸ್ಕಾರ, ಮೈಸೂರಿನಲ್ಲಿ 7204082633 ಈ ಸಂಖ್ಯೆಗೆ ಸಂಪರ್ಕಿಸಿ. ಅಥವಾ ನಿಮ್ಮ ದೂರವಾಣಿ ಮತ್ತು ವಿಳಾಸವನ್ನು ನಮ್ಮ ವಿ-ಅಂಚೆಗೆ ಕಳುಹಿಸಿದರೂ, ನಿಮ್ಮನ್ನು ಸಂಪರ್ಕಿಸುವೆವು.

      Delete
  5. Panchangadalli KANNADA snkegalannu balasidare innu chennagi irutittu. Nanu Dharwadnalli irutene nanage ee panchanga beku yav sankege kare madabeku?

    ReplyDelete
    Replies
    1. ನಮಸ್ಕಾರ ಅರಳೀಮಟ್ಟಿಯವರೇ, ನಮ್ಮ ವಿಚಾರವೂ ಕನ್ನಡ ಸಂಖ್ಯೆಗಳನ್ನೇ ಬಳಸಬೇಕು ಎಂದೇ ಇತ್ತು. ಆದರೆ ಇನ್ನೂ ಅನೇಕ ಕನ್ನಡಿಗರಿಗೆ ಕನ್ನಡ ಸಂಖ್ಯೆಗಳ ಗೊಂದಲವಾಗುತ್ತದೆ ಎಂದು ತಿಳಿದುಬಂದಿತು. ಹಾಗಾಗಿ ಆಂಗ್ಲದಲ್ಲಿ ಹಾಕಿದ್ದೇವೆ. ಅದೂ ಅಲ್ಲದೇ ಪಾಶ್ಚಾತ್ಯರ ಪದ್ಧತಿಯಂತೆ ಜನವರಿಯಂದು ಪಂಚಾಂಗವನ್ನು ಆರಂಭಿಸದೇ, ಹಿಂದೂ ಸಂಸ್ಕೃತಿಯಂತೆ ಯುಗಾದಿಯಿಂದಲೇ ಪಂಚಾಂಗವನ್ನು ಆರಂಭಿಸಬೇಕು ಎಂಬ ವಿಚಾರವೂ ಇದೆ. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಧಾರವಾಡದಲ್ಲಿ ಈ ಸಂಖ್ಯೆಗೆ ಸಂಪರ್ಕಿಸಿ - 7204082728

      Delete
  6. sir hi sir even i need 2 copies ,,, and my numbers is 9060184832
    and even i need a book to

    ReplyDelete
    Replies
    1. ನಮಸ್ಕಾರ, ನಿಮ್ಮ ದೂರವಾಣಿಗೆ ಕರೆ ಮಾಡಿ ಮಾತನಾಡುತ್ತೇವೆ.

      Delete
  7. sir i am facing so much problem in life regarding some black magic and all plz guid me to get solve of it i pray u

    ReplyDelete
    Replies
    1. ನಮಸ್ಕಾರ, ನಿಮ್ಮ ದೂರವಾಣಿಗೆ ಕರೆ ಮಾಡಿ ಮಾತನಾಡುತ್ತೇವೆ.

      Delete
  8. I want 2 calenders i am residing at sirsi, kindly know where will available in sirsi city...

    ReplyDelete
    Replies
    1. ಹಿರೇಮಠರವರೇ, ಶಿರಸಿಯಲ್ಲಿ ಶ್ರೀ.ಅಶೋಕ ಕುಡಾಲಕರ 7204082674 ಇವರನ್ನು ಸಂಪರ್ಕಿಸಿ.

      Delete
  9. I need 5 nos of Calenders.. Pls help me to get it in Bangalore... As suggested I tried to reach Bangalore contact No, but could not get any response... I can be reached on my mobile - 97391 57999.
    Thanks, Ravikumar N B

    ReplyDelete
    Replies
    1. ಇವತ್ತೇ ನಿಮ್ಮನ್ನು ಸಂಪರ್ಕಿಸುತ್ತೇವೆ. ಧನ್ಯವಾದ.

      Delete
    2. Thank You.... I got call.. and got the address from where I can collect these calenders.
      Thanks Again.

      Delete
  10. i want three calenders and i am residing at chintamani. my mobile no 9448886373. my email id is liconwheels@rediffmail.com kindly let me know the availability of this calender pls.

    ReplyDelete
    Replies
    1. ನಾವೇ ನಿಮ್ಮನ್ನು ಸಂಪರ್ಕಿಸುತ್ತೇವೆ. ಧನ್ಯವಾದ.

      Delete

Note: only a member of this blog may post a comment.