ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು (ಇಳಿ ಕೊಡಬೇಕು) ಎನ್ನುತ್ತಾರೆ, ಇದರ ಕಾರಣವೇನು?
ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರೀಣಾಂ ಶೂದ್ರಜನಸ್ಯ ಚ ||
ಆತುರಸ್ಯ ಯದಾ ಪ್ರಾಣಾನ್ ನಯಂತಿ ವಸುಧಾತಲೆ |
ಲವಣಂ ತು ತದಾ ದೇಯಂ ದ್ವಾರಸ್ಯೋದ್ಘಾಟನಂ ದಿವಃ ||
- ಗರುಡಪುರಾಣ, ಅಂಶ ೩, ಅಧ್ಯಾಯ ೧೯, ಶ್ಲೋಕ ೩೧, ೩೨
ಭಾವಾರ್ಥ: ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನ ಮಾಡಿಸಬೇಕು. ಹೀಗೆ ಮಾಡುವುದೆಂದರೆ, ಆ ವ್ಯಕ್ತಿಗಾಗಿ ಸ್ವರ್ಗದ ಬಾಗಿಲು ತೆರೆದಂತೆಯೇ ಆಗಿದೆ.
ಉಪ್ಪಿನ ದಾನ ಮಾಡುವುದು ಒಂದು ಪದ್ಧತಿಯಾಯಿತು. ಎರಡನೆಯ ಪದ್ಧತಿ ಎಂದರೆ ಉಪ್ಪು-ರೊಟ್ಟಿಯ ಇಳಿ ಕೊಡುವುದು (ನಿವಾಳಿಸುವುದು). ಈ ಎರಡೂ ಪದ್ಧತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.
ಬಹಳಷ್ಟು ಸಲ ಮೃತ್ಯುವಿನ ಸಮಯದಲ್ಲಿ ಕೆಟ್ಟ ಶಕ್ತಿಗಳು ಮರಣೋನ್ಮುಖ ವ್ಯಕ್ತಿಯ ಲಿಂಗದೇಹದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಅವುಗಳ ಜಗಳದಿಂದಾಗಿ ಅಥವಾ ಪೈಪೋಟಿಯಿಂದಾಗಿ ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದೆ ದೇಹದಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದಾಗಿ ಮರಣೋನ್ಮುಖ ವ್ಯಕ್ತಿಗೆ ಬಹಳಷ್ಟು ಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ಉಪ್ಪಿನಿಂದ ಹರಡುವ ರಜ-ತಮಾತ್ಮಕ ಸೂಕ್ಷ್ಮ ವಾಯುವು ಕೆಟ್ಟ ಶಕ್ತಿಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಈ ವಾಯುವು ಅತ್ಯಂತ ಹಗುರವಾಗಿರುತ್ತದೆ ಮತ್ತು ಅದು ಕೆಟ್ಟ ಶಕ್ತಿಗಳ ಸುತ್ತಲಿರುವ ವಾಯುಕೋಶಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಆದುದರಿಂದ ಮರಣೋನ್ಮುಖ ವ್ಯಕ್ತಿಯ ಕೈಯಿಂದ ಉಪ್ಪಿನ ದಾನ ಮಾಡಿಸಬೇಕು ಅಥವಾ ಅವನಿಗೆ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು. ಇದರಿಂದ ಕೆಲವು ಸಮಯದ ವರೆಗೆ ಆ ವ್ಯಕ್ತಿಯ ಮೇಲಿರುವ ಕೆಟ್ಟ ಶಕ್ತಿಗಳ ಹಿಡಿತವು ಕಡಿಮೆಯಾಗುತ್ತದೆ ಮತ್ತು ಆ ವ್ಯಕ್ತಿಯ ಪ್ರಾಣವು ದೇಹದಿಂದ ಸುಲಭವಾಗಿ ಹೊರಗೆ ಹೋಗುತ್ತದೆ. ಯಾವ ಕುಟುಂಬದಲ್ಲಿ ಪೂರ್ವಜರ ಲಿಂಗದೇಹಗಳ ತೊಂದರೆಯು ತೀವ್ರ ಪ್ರಮಾಣದಲ್ಲಿ ಇರುತ್ತದೆಯೋ, ಆ ಕುಟುಂಬದಲ್ಲಿನ ವ್ಯಕ್ತಿಗಳ ಪ್ರಾಣವು ಹೋಗುವಾಗ ಈ ರೀತಿಯ ತೊಂದರೆಗಳಾಗುತ್ತವೆ. ಇಂತಹ ಕುಟುಂಬದವರು ದತ್ತನ ಉಪಾಸನೆಯನ್ನು ಮಾಡಿ ಪೂರ್ವಜರ ತೊಂದರೆಯಿಂದ ಮುಕ್ತರಾಗಬಹುದು. ಅಂದರೆ ಕೊನೆಗೆ ಸಾಧನೆಗೆ ಪರ್ಯಾಯವಿಲ್ಲ.
ಮರಣೋನ್ಮುಖ ವ್ಯಕ್ತಿಯ ಪ್ರಾಣವು ಬೇಗನೆ ಹೋಗದಿದ್ದರೆ, ಅವನ ಕೈಯಿಂದ ಉಪ್ಪನ್ನು ಯಾರಿಗೆ ದಾನ ಮಾಡಬೇಕು ಮತ್ತು ಮುಂದೆ ಆ ದಾನವನ್ನು ಏನು ಮಾಡಬೇಕು?
ಉಪ್ಪನ್ನು ಯಾರಿಗಾದರೂ ದಾನ ಮಾಡಬಹುದು. ಆದರೆ ಅದರಲ್ಲಿ ತ್ಯಾಗದ ಭಾವ, ಅಂದರೆ ‘ತನ್ನ (ದಾನ ನೀಡುವ ವ್ಯಕ್ತಿಯ) ಮಾಧ್ಯಮದಿಂದ ಈಶ್ವರನೇ ಆ ಮರಣೋನ್ಮುಖ ವ್ಯಕ್ತಿಯ ಕಲ್ಯಾಣವನ್ನು ಮಾಡುತ್ತಿದ್ದಾನೆ’ ಎಂಬ ಭಾವವನ್ನಿಟ್ಟು ಕೊಂಡಿರಬೇಕು (ದಾನವನ್ನು ಯಾರು ಬೇಕಾದರೂ, ಅಂದರೆ ಮರಣೋನ್ಮುಖ ವ್ಯಕ್ತಿ ಅಥವಾ ಇತರ ವ್ಯಕ್ತಿಯು ನೀಡುತ್ತಿದ್ದಲ್ಲಿ ಆ ದಾನವನ್ನು ಈಶ್ವರನೇ ನೀಡುತ್ತಿದ್ದಾನೆ ಎಂಬ ಭಾವವಿರಬೇಕು) ಮತ್ತು ದಾನವನ್ನು ತೆಗೆದುಕೊಳ್ಳುವ ವ್ಯಕ್ತಿಯು ‘ಈ ದಾನದ ಮಾಧ್ಯಮದಿಂದ ಈಶ್ವರನು ನನ್ನ ಮೇಲೆ ಅನಂತ ಉಪಕಾರ ಮಾಡುತ್ತಿದ್ದಾನೆ’ ಎಂಬ ಭಾವವನ್ನಿಟ್ಟುಕೊಳ್ಳಬೇಕು; ಇದರಿಂದ ದಾನ ಸ್ವೀಕರಿಸುವವನಲ್ಲಿ ಮತ್ತು ದಾನವನ್ನು ಮಾಡುವವನಲ್ಲಿ ಆದರಭಾವವು ಉತ್ಪನ್ನವಾಗಿ ಈಶ್ವರೀ ಶಕ್ತಿಯಿಂದ ಇಬ್ಬರಿಗೂ ಕೆಟ್ಟ ಶಕ್ತಿಗಳ ತೊಂದರೆಯಾಗುವುದಿಲ್ಲ. ದಾನವನ್ನು ತೆಗೆದು ಕೊಳ್ಳುವ ವಿಧಿಯು ಮುಗಿದ ಬಳಿಕ ‘ಆ ದಾನವು ಆಯಾ ಶಕ್ತಿಗಳನ್ನು ಸಂತುಷ್ಟಪಡಿಸಲಿ’ ಎಂದು ಪ್ರಾರ್ಥಿಸಿ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. - ಶ್ರೀಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೩.೨೦೦೫, ರಾತ್ರಿ ೯.೫೫ ಮತ್ತು ೫.೩.೨೦೦೬, ಸಾಯಂ.೫.೧೮)

(ಮೇಲಿನ ವಿಷಯದೊಂದಿಗೆ ಇನ್ನೂ ಅನೇಕ ಸೂಕ್ಷ್ಮ ಸ್ತರದ ವಿಷಯಗಳು ಗ್ರಂಥದಲ್ಲಿವೆ.)
(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಮೃತ್ಯು ಮತ್ತು ಮೃತ್ಯುವಿನ ನಂತರದ ಕ್ರಿಯಾಕರ್ಮಗಳು")
ನಿಮ್ಮ ಈ ಲೇಖನದಿಂದ ಹೊಸ ವಿಷಯ ತಿಳಿದಂತಾಯಿತು :)
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
DeleteNimma ee lekhanadinda nanage ondu mahonnatha vishaya thiliyithu danyavaadagalu
ReplyDeleteನಿಮ್ಮ ಅನಿಸಿಕೆಗೆ ಧನ್ಯವಾದಗಳು. ಹಿಂದೂ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಸಿ, ಆಗಲೇ ನಾವು ಪಡೆದ ಜ್ಞಾನ ಸಾರ್ಥಕ
Deleteಕೆಲವರು ಮಕ್ಕಳಿಗೂ ಕೂಡ ನಿವಾಲಿಸುತಾರೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ReplyDeleteನಮಸ್ಕಾರ!
Deleteಹೌದು. ಮಕ್ಕಳಿಗೂ, ಹಿರಿಯರಿಗೂ, ತೊಂದರೆಯಾಗುತ್ತಿರುವವರೆಲ್ಲರಿಗೂ ನಿವಾಳಿಸುತ್ತಾರೆ. ಆದರೆ ನಿವಾಳಿಸುವ ಉದ್ದೇಶ ಬೇರೆಬೇರೆಯಾಗಿರುತ್ತದೆ ಮತ್ತು ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಯಾಗಿರುತ್ತದೆ.
ದಾನವನ್ನು ಸ್ವೀಕರಿಸಲು ಮುಂದಾಗುವ ವ್ಯಕ್ತಿ ಭಯಗೊಂಡರೆ ಅಲ್ಲಿ ಗೊಂದಲಮಯವಾಗವುದಿಲ್ಲವೇ..?
ReplyDeleteDHARMA GRANTHA ACHUKATTAGI VITHARISALAGUTHIDDE DHANYAVADAGALU !!
ReplyDeleteEega obba vyakthi ( maneyalli hiriya) saththare Alana karya maaduvudharalli janaralli Kadeem aaguththide. Idharinda aaguva parinaavenendu dhayavittu thiluhisi. Dhanyavaadagalu.
ReplyDeleteಯಾವ ಪ್ರಮಾಣದಲ್ಲಿ ಉಪ್ಪನ್ನು ದಾನ ಮಾಡಬೇಕು.
ReplyDeletesaamaanyavaagi mushti daana endu hELuttaare
DeleteWhere would i get the books suggested in various posts of this blog. Please help. thanks :)
ReplyDeletenamma maneyalli tondare kadutide adanu nivarisalu nimma granthadalii enadaru salahe idare kodutiira
ReplyDeleteನಮ್ಮ ಇಮೇಲ್ ವಿಳಾಸಕ್ಕೆ ನೀವು ನಿಮ್ಮ ತೊಂದರೆ ಬರೆದು ಕಳುಹಿಸಿ. ಆಧ್ಯಾತ್ಮಿಕವಾಗಿದ್ದರೆ ಪ್ರಯತ್ನಿಸೋಣ. ಅಥವಾ ಮೇಲೆ ಕೊಟ್ಟ ದೂರವಾಣಿಗೆ ಕರೆ ಮಾಡಿ.
DeleteThis is true and a fact. I had tried this on a experimental way on my ailing Grand mother 2.5 yrs ago and it worked.I used crystal salt to take out the negativity at 4.05 pm and she left her body with ease by 4.25 pm. Thank you Dharmagranth and HJS for sharing the information.
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಧರ್ಮಾಚರಣೆ ಮಾಡಿ ಮತ್ತು ಧರ್ಮಪ್ರಸಾರ ಮಾಡಿ.
DeleteThankyou for it is very informative.....please let me more information on pitru shapa and the measures to solve it..
ReplyDeleteನಮಸ್ಕಾರ,
Deleteಈ ಲಿಂಕ್‌ನಲ್ಲಿರುವ ವಿಷಯವನ್ನು ಒಂದು ಸಲ ಓದಿ - http://dharmagranth.blogspot.in/2012/11/Datta-Jap.html
You are doing a great job. You are giving us very useful information thank you soo much and keep doing this for us
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಬ್ಲಾಗ್‌ನಲ್ಲಿ ನೀಡಿದ ಪ್ರಕಾರ ಧರ್ಮಾಚರಣೆ ಮಾಡಿ ಮತ್ತು ಧರ್ಮಪ್ರಸಾರ ಮಾಡಿ.
DeleteI learned so many matters and very interesting Wonderful information. Thank you so much.
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಬ್ಲಾಗ್‌ನಲ್ಲಿ ನೀಡಿದ ಪ್ರಕಾರ ಧರ್ಮಾಚರಣೆ ಮಾಡಿ ಮತ್ತು ಧರ್ಮಪ್ರಸಾರ ಮಾಡಿ.
Delete3 jana brothers nane big brother. estu dina joint family edde ega saparet aagidivi. nam ebbaru brothers nam mother hatra ertare bt nam manege 1,2, days ge bandu hoktare so nam father ge pitru paksa yaru madbeku and veg or non veg madi pooje madbeka pls thilisi.
ReplyDeleteನಮಸ್ಕಾರ,
Deleteಧರ್ಮಶಾಸ್ತ್ರದಲ್ಲಿ ಮೊದಲನೆಯ ಮಗ ಅಥವಾ ಕಿರಿಯ ಮಗನಿಗೆ ಶ್ರಾದ್ಧ ಮಾಡುವ ಅಧಿಕಾರ ಇದೆ. ಹಾಗಾಗಿ ತಾವು ಶ್ರಾದ್ಧ ಮಾಡಬಹುದು. ಶ್ರಾದ್ಧದಲ್ಲಿ ಮಾಂಸಾಹಾರ ಸಂಪೂರ್ಣ ನಿಷಿದ್ಧ, ಶ್ರಾದ್ಧದಲ್ಲಿ ಮಾಂಸಾಹಾರವನ್ನು ಧರ್ಮಶಾಸ್ತ್ರವು ಕಟುವಾಗಿ ವಿರೋಧಿಸಿದೆ. ದಯವಿಟ್ಟು ಅಂತಹ ಅಶಾಸ್ತ್ರೀಯ ಕೃತಿ ಮಾಡಬೇಡಿ. ನಿಮ್ಮ ತಂದೆಯವರು ತೀರಿ 25 ವರ್ಷವಾಗಿದ್ದರೂ ಪರವಾಗಿಲ್ಲ. ಮಹಾಲಯದಲ್ಲಿ ಶ್ರಾದ್ಧ ಮಾಡಿ. ಹಾಗೆಯೇ ಪ್ರತಿವರ್ಷವೂ ಶ್ರಾದ್ಧವನ್ನು ಮಾಡಲೇ ಬೇಕು. ಈ ಬ್ಲಾಗ್‌ನಲ್ಲಿರುವ ಶ್ರಾದ್ಧದ ಕುರಿತಾದ ಇತರ ವಿಷಯಗಳನ್ನೂ ಓದಿ, ಸಾಧ್ಯವಿದ್ದಲ್ಲಿ ನಾವು (ಸನಾತನ ಸಂಸ್ಥೆಯು) ಮುದ್ರಿಸಿದ ಶ್ರಾದ್ಧದ ಕುರಿತಾದ ೨ ಗ್ರಂಥಗಳನ್ನೂ ಖರೀದಿಸಿ ಓದಿ, ಅದರಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಡಲಾಗಿದೆ. ಧನ್ಯವಾದಗಳು