ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

‘ದೇವತೆಗಳಿಗೆ ಜನಿವಾರವನ್ನು ಅರ್ಪಿಸುವುದು (ಹಾಕುವುದು), ಎಂದರೆ ದೇವತೆಗಳ ವ್ಯಾಪಕ ಪ್ರಕಾಶವನ್ನು ಜನಿವಾರದೊಳಗಿನ ನೂಲಿನ ವಲಯದಲ್ಲಿ ಸೀಮಿತಗೊಳಿಸಿ ದ್ವೈತದಲ್ಲಿನ ಕಾರ್ಯವನ್ನು ಮಾಡಲು ದೇವತೆಗಳನ್ನು ಆಹ್ವಾನಿಸುವುದು. ಜನಿವಾರವು ನೂಲಿನಿಂದ ತಯಾರಿಸಲ್ಪಟ್ಟಿದ್ದು, ಮಂತ್ರಶಕ್ತಿಯಿಂದ ಯುಕ್ತಸಂಪನ್ನವಾಗಿರುತ್ತದೆ. ಇದರಿಂದ ಪ್ರಕ್ಷೇಪಿತವಾಗುವಂತಹ ನಾದಲಹರಿಗಳಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ನಿರ್ಗುಣ ತತ್ತ್ವವು ಜಾಗೃತವಾಗಿ ಜೀವದ ಈಶ್ವರನ ಬಗೆಗಿರುವ ಭಾವದಂತೆ, ಜೀವಕ್ಕಾಗಿ ಸಗುಣಲಹರಿಗಳ ಮಾಧ್ಯಮದಿಂದ ಕಾರ್ಯ ಮಾಡುತ್ತದೆ. ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ. ಜನಿವಾರವನ್ನು ಅರ್ಪಿಸುವುದು, ಇದು ದ್ವೈತ ಮತ್ತು ಅದ್ವೈತದ ಅನುಸಂಧಾನವನ್ನು ಸಾಧಿಸುವ ಮಹತ್ವದ ಪ್ರಕ್ರಿಯೆಯಾಗಿದೆ. ಪೂಜೆಯ ನಂತರ ಶರೀರದ ಮೇಲಿನ ಜನಿವಾರವನ್ನು ವಿಸರ್ಜಿಸಿ, ದೇವತೆಗೆ ಅರ್ಪಿಸಿದ ಜನಿವಾರವನ್ನು ಧರಿಸುವುದರಿಂದ ಜೀವಕ್ಕೆ ದೇವತೆಯ ಚೈತನ್ಯದ ಲಾಭವು ದೊರಕುತ್ತದೆ. 
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೨.೪.೨೦೦೫, ಮಧ್ಯಾಹ್ನ ೨.೪೫)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಪೂಜಾಸಾಮಗ್ರಿಗಳ ಮಹತ್ವ')

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

1 comment:

  1. ಗೌರೀ ವ್ರತದ ಬಗ್ಗೆ ತಿಳಿಸಿ

    ReplyDelete

Note: only a member of this blog may post a comment.