Showing posts with label ಹಿಂದೂ ಸಂಸ್ಕೃತಿ. Show all posts
Showing posts with label ಹಿಂದೂ ಸಂಸ್ಕೃತಿ. Show all posts

ಪೂರ್ವ ಅಥವಾ ಉತ್ತರ ದಿಕ್ಕಿಗೆ ತಲೆ ಹಾಕಿ ಏಕೆ ಮಲಗಬೇಕು ?

ಶಾಂತ ನಿದ್ರೆ ಮತ್ತು ಆರೋಗ್ಯಕ್ಕಾಗಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದರ ಮಹತ್ವ

(ಅಧ್ಯಾತ್ಮ ಶಾಸ್ತ್ರದ ವಿಶ್ಲೇಷಣೆ)

ನಮ್ಮ ಹಿರಿಯರು ಯಾವಾಗಲೂ "ಪೂರ್ವಕ್ಕೆ ತಲೆ ಮಾಡಿ ಮಲಗು" ಅಥವಾ "ಉತ್ತರ ದಿಕ್ಕಿಗೆ" ತಲೆ ಮಾಡಿ ಮಲಗಬಾರದು" ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಇದು ಕೇವಲ ಒಂದು ಸಂಪ್ರದಾಯವಲ್ಲ, ಬದಲಾಗಿ ಇದರ ಹಿಂದೆ ಮಾನವನ ಸೂಕ್ಷ್ಮದೇಹ ಮತ್ತು ಬ್ರಹ್ಮಾಂಡದ ಶಕ್ತಿಗಳ ನಡುವಿನ ಆಳವಾದ ವಿಜ್ಞಾನ ಅಡಗಿದೆ. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದರಿಂದ ಆಗುವ ಲಾಭಗಳೇನು? ಇದರ ಹಿಂದಿನ ಶಾಸ್ತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

೧. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದು ಎಂದರೇನು?

ಮಲಗುವಾಗ ನಮ್ಮ ತಲೆಯು ಪೂರ್ವ ದಿಕ್ಕಿಗೆ ಮತ್ತು ಕಾಲುಗಳು ಪಶ್ಚಿಮ ದಿಕ್ಕಿಗೆ ಇರುವಂತೆ ಮಲಗುವುದೇ ಅತ್ಯಂತ ಯೋಗ್ಯವಾದ ಪದ್ಧತಿಯಾಗಿದೆ.

೨. ಪೂರ್ವ ದಿಕ್ಕಿಗೆ ತಲೆ ಮಾಡುವುದರಿಂದ ಆಗುವ ಲಾಭಗಳು

ಅ. ಸಪ್ತಚಕ್ರಗಳ ಯೋಗ್ಯ ಪರಿಭ್ರಮಣೆ: ಪೂರ್ವ ದಿಕ್ಕಿನಿಂದ ಸದಾ ಆಹ್ಲಾದದಾಯಕವಾದ 'ಸಪ್ತತರಂಗ'ಗಳು ಬರುತ್ತಿರುತ್ತವೆ. ನಾವು ಪೂರ್ವಕ್ಕೆ ತಲೆ ಮಾಡಿ ಮಲಗಿದಾಗ, ಈ ತರಂಗಗಳು ನಮ್ಮ ಶರೀರದಲ್ಲಿರುವ ಸಪ್ತಚಕ್ರಗಳ (ಮೂಲಾಧಾರ, ಮಣಿಪುರ ಮುಂತಾದ ಏಳು ಚಕ್ರಗಳು) ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಚಕ್ರಗಳು ವಿರುದ್ಧ ದಿಕ್ಕಿನಲ್ಲಿ ತಿರುಗದೆ, ಯೋಗ್ಯ ದಿಕ್ಕಿನಲ್ಲಿ ತಿರುಗಲು ಸಹಾಯವಾಗುತ್ತದೆ. ತಲೆಯನ್ನು ಪೂರ್ವಕ್ಕೆ ಮಾಡುವುದರಿಂದ ಶೇ. ೧೦ ರಷ್ಟು ಹೆಚ್ಚು ಪ್ರಮಾಣದಲ್ಲಿ ಈ ಸಕಾರಾತ್ಮಕ ಶಕ್ತಿಯನ್ನು ನಮ್ಮ ಚಕ್ರಗಳು ಗ್ರಹಿಸುತ್ತವೆ.

ಆ. 'ಬೆಳ್ಳಿ ಬಣ್ಣದ ದಾರ' (Silver Cord) ಮತ್ತು ಶಾಂತ ನಿದ್ರೆ: ಜೀವದ ಸ್ಥೂಲದೇಹ ಮತ್ತು ಸೂಕ್ಷ್ಮದೇಹವನ್ನು ಜೋಡಿಸಲು ಒಂದು 'ಬೆಳ್ಳಿ ಬಣ್ಣದ ದಾರ'ವಿರುತ್ತದೆ. ನಾವು ನಿದ್ರಿಸಿದಾಗ ನಮ್ಮ ಸೂಕ್ಷ್ಮದೇಹವು ಸ್ಥೂಲದೇಹದಿಂದ ಹೊರಬಂದು ಸಂಚರಿಸಿದರೂ, ಈ ದಾರದ ಮೂಲಕ ಸಂಪರ್ಕದಲ್ಲಿರುತ್ತದೆ. ಪೂರ್ವಕ್ಕೆ ತಲೆ ಮಾಡಿ ಮಲಗಿದಾಗ ನಿರ್ಮಾಣವಾಗುವ ಸಾತ್ವಿಕ ವಾತಾವರಣದಿಂದಾಗಿ, ನಿದ್ರೆಯಲ್ಲಿ ಈ ಬೆಳ್ಳಿ ದಾರದ ಮೂಲಕ ಆಗುವ ಮನಸ್ಸಿನ ಪ್ರವಾಸಕ್ಕೆ ಯಾವುದೇ ಅಡಚಣೆ ಬರುವುದಿಲ್ಲ. ಪರಿಣಾಮವಾಗಿ ಮನುಷ್ಯನಿಗೆ ಗಾಢ ಮತ್ತು ಶಾಂತ ನಿದ್ರೆ ಪ್ರಾಪ್ತವಾಗುತ್ತದೆ.

೩. ದೇಹಶುದ್ಧಿ ಪ್ರಕ್ರಿಯೆ ಮತ್ತು ಪಶ್ಚಿಮ ದಿಕ್ಕು

ದಿನವಿಡೀ ನಾವು ಕೆಲಸ ಮಾಡುವಾಗ ನಮ್ಮ ದೇಹದಲ್ಲಿ 'ರಜ-ತಮ' ಕಣಗಳು (ನಕಾರಾತ್ಮಕ ಶಕ್ತಿ) ಉತ್ಪತ್ತಿಯಾಗುತ್ತವೆ. ಇವು ದೇಹದಿಂದ ಹೊರಹೋಗುವುದು ಅವಶ್ಯಕ.


  • ನಮ್ಮ ಕಾಲಿನ ಬೆರಳುಗಳಲ್ಲಿ 'ದೇಹಶುದ್ಧಿ ಚಕ್ರ'ಗಳಿರುತ್ತವೆ. ರಾತ್ರಿಯ ಸಮಯದಲ್ಲಿ ಇವು ತೆರೆದುಕೊಳ್ಳುತ್ತವೆ.
  • ಪಶ್ಚಿಮ ದಿಕ್ಕು 'ಅಸ್ತ'ವಾಗುವ (ಮುಳುಗುವ) ದಿಕ್ಕಾಗಿದೆ.
  • ನಾವು ಪಶ್ಚಿಮಕ್ಕೆ ಕಾಲು ಚಾಚಿ ಮಲಗಿದಾಗ, ದೇಹದ ರಜ-ತಮ ಕಣಗಳು ಕಾಲಿನ ಬೆರಳುಗಳ ಮೂಲಕ ಹೊರಬಂದು, ಪಶ್ಚಿಮ ದಿಕ್ಕಿನ ಕಡೆಗೆ ಹರಿದು ಹೋಗಿ ಅಸ್ತವಾಗುತ್ತವೆ (ನಾಶವಾಗುತ್ತವೆ).

೪. ಮುಂಜಾನೆಯ ಚೈತನ್ಯ

ಮುಂಜಾನೆ ಪೂರ್ವ ದಿಕ್ಕಿನಿಂದ ಸಾತ್ತ್ವಿಕ ಲಹರಿಗಳು (Sattva Waves) ಪ್ರಕ್ಷೇಪಿತವಾಗುತ್ತವೆ. ನಾವು ಪೂರ್ವಕ್ಕೆ ತಲೆ ಮಾಡಿ ಮಲಗಿದ್ದಾಗ, ಬ್ರಹ್ಮರಂಧ್ರದ ಮೂಲಕ ಈ ಸಾತ್ವಿಕ ಶಕ್ತಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ದಿನದ ಆರಂಭವು ಅತ್ಯಂತ ಉತ್ಸಾಹ ಮತ್ತು ಸಾತ್ವಿಕತೆಯಿಂದ ಕೂಡ್ರುತ್ತದೆ.

 

ವಿಷ್ಣು ಪುರಾಣ, ವಾಮನ ಪುರಾಣ, ಪದ್ಮಪುರಾಣ ಮುಂತಾದ ಪುರಾಣಗಳಲ್ಲಿ ಮತ್ತು ಮಹಾಭಾರತದಂತಹ ಧರ್ಮಗ್ರಂಥಗಳಲ್ಲಿಯೂ ಮನುಷ್ಯನು ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಬೇಕು ? ಅದರಿಂದಾಗುವ ಲಾಭ ಅಥವಾ ಹಾನಿ ಏನು ಎಂಬುದನ್ನೂ ವಿವರಿಸಿದ್ದಾರೆ. ಇವುಗಳಲ್ಲಿ ಓದುಗರಿಗೆ ಇಲ್ಲಿ ಕೇವಲ ವಿಷ್ಣು ಪುರಾಣ ಶ್ಲೋಕದ ವಿವರಣೆ ನೀಡಲಾಗಿದೆ. ಇದು ನಮ್ಮ ಆರೋಗ್ಯ ಮತ್ತು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಅತ್ಯಂತ ಉಪಯುಕ್ತವಾದ ಶ್ಲೋಕವಾಗಿದೆ. ನಾವು ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬುದನ್ನು ಇದು ತಿಳಿಸುತ್ತದೆ.

ಶ್ಲೋಕ ಮತ್ತು ಆಕರ

ಪ್ರಾಚ್ಯಾಂ ದಿಶಿ ಶಿರಃ ಶಸ್ತಂ ಯಾಮ್ಯಾಯಾಮಥ ವಾ ನೃಪ |
ಸದೈವ ಸ್ವಪತಃ ಪುಂಸೋ ವಿಪರೀತಂ ತು ರೋಗದಮ್ ||
– ವಿಷ್ಣುಪುರಾಣ, ತೃತೀಯ ಅಂಶ, ಅಧ್ಯಾಯ ೧೧, ಶ್ಲೋಕ ೧೧೩

 ಶ್ಲೋಕದ ಅರ್ಥ

ಮನುಷ್ಯನು ಮಲಗುವಾಗ ಯಾವಾಗಲೂ ತನ್ನ ತಲೆಯನ್ನು ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ಇಟ್ಟು ಮಲಗುವುದು ಶ್ರೇಷ್ಠ. ಇದಕ್ಕೆ ವಿರುದ್ಧವಾಗಿ (ಅಂದರೆ ಪಶ್ಚಿಮಕ್ಕೆ ಅಥವಾ ಉತ್ತರಕ್ಕೆ) ತಲೆ ಇಟ್ಟು ಮಲಗಿದರೆ ಅದು ರೋಗವನ್ನು ತರುತ್ತದೆ.

ಶ್ಲೋಕದ ಪೂರ್ಣ ಕನ್ನಡ ಅರ್ಥ ಮತ್ತು ಸಂದೇಶ

ನಮ್ಮ ಹಿರಿಯರು "ಉತ್ತರಕ್ಕೆ ತಲೆ ಹಾಕಿ ಮಲಗಬೇಡ" ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಅದಕ್ಕೆ ಆಧಾರ ಇಲ್ಲಿದೆ.

 

  1. ಪೂರ್ವ ದಿಕ್ಕು (East): ಪೂರ್ವವು ಸೂರ್ಯ ಹುಟ್ಟುವ ದಿಕ್ಕು ಮತ್ತು ದೇವತೆಗಳ ದಿಕ್ಕು. ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ವಿದ್ಯೆ, ಬುದ್ಧಿಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ನಂಬಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಅತ್ಯಂತ ಒಳ್ಳೆಯದು.
  1. ದಕ್ಷಿಣ ದಿಕ್ಕು (South): ಇದು ಯಮನ ದಿಕ್ಕು ಎಂದು ಕರೆಯಲ್ಪಟ್ಟರೂ, ಮಲಗಲು ಇದು ಅತ್ಯಂತ ಶ್ರೇಷ್ಠ. ದಕ್ಷಿಣಕ್ಕೆ ತಲೆ ಹಾಕಿ ಮಲಗುವುದರಿಂದ ಗಾಢವಾದ ನಿದ್ರೆ ಬರುತ್ತದೆ, ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಆರೋಗ್ಯ ಚೆನ್ನಾಗಿರುತ್ತದೆ. ಭೂಮಿಯ ಆಯಸ್ಕಾಂತೀಯ ಕ್ಷೇತ್ರಕ್ಕೆ (Magnetic Field) ಇದು ಹೊಂದಿಕೆಯಾಗುತ್ತದೆ.
  1. ವಿಪರೀತಂ ತು ರೋಗದಮ್ (ಉತ್ತರ/ಪಶ್ಚಿಮ ಬೇಡ):
    • ಉತ್ತರ (North): ಮನುಷ್ಯನ ದೇಹಕ್ಕೂ ಕಾಂತೀಯ ಶಕ್ತಿ ಇದೆ (ತಲೆ ಉತ್ತರ ಧ್ರುವವಿದ್ದಂತೆ). ಭೂಮಿಯ ಉತ್ತರ ಧ್ರುವ ಮತ್ತು ನಮ್ಮ ತಲೆ (ಉತ್ತರ) ಒಂದೇ ಕಡೆ ಬಂದರೆ, ವಿಕರ್ಷಣೆ (Repulsion) ಉಂಟಾಗಿ ರಕ್ತ ಸಂಚಾರದಲ್ಲಿ ಏರುಪೇರಾಗುತ್ತದೆ. ಇದರಿಂದ ಮೆದುಳಿಗೆ ತೊಂದರೆ, ಕೆಟ್ಟ ಕನಸುಗಳು ಅಥವಾ ನಿದ್ರಾಹೀನತೆ ಉಂಟಾಗಬಹುದು. ಅದಕ್ಕೇ ಶಾಸ್ತ್ರವು ಉತ್ತರ ದಿಕ್ಕನ್ನು ನಿಷೇಧಿಸಿದೆ.
    • ಪಶ್ಚಿಮ (West): ಪಶ್ಚಿಮಕ್ಕೆ ತಲೆ ಹಾಕಿದರೆ ಚಿಂತೆಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ.


ಪ್ರಮುಖ ತಾತ್ಪರ್ಯ

ಈ ಶ್ಲೋಕವು 'ದಿನಚರಿ' ಮತ್ತು 'ಸ್ವಾಸ್ಥ್ಯ ರಕ್ಷಣೆ'ಯನ್ನು ಬೋಧಿಸುತ್ತದೆ:


  • ಆರೋಗ್ಯ ಸೂತ್ರ: ಕೇವಲ ಔಷಧಿಯಿಂದ ಮಾತ್ರವಲ್ಲ, ಮಲಗುವ ಭಂಗಿಯಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು.
  • ವೈಜ್ಞಾನಿಕ ಹಿನ್ನೆಲೆ: ಭೂಮಿಯ ಗುರುತ್ವಾಕರ್ಷಣೆ ಮತ್ತು ಕಾಂತೀಯ ಶಕ್ತಿಗೆ ಅನುಗುಣವಾಗಿ ನಮ್ಮ ದೇಹವನ್ನು ಇಟ್ಟುಕೊಳ್ಳುವುದು ಮುಖ್ಯ.
  • ಸರಳ ನಿಯಮ: ಪೂರ್ವಕ್ಕೆ ತಲೆ - ವಿದ್ಯೆ; ದಕ್ಷಿಣಕ್ಕೆ ತಲೆ - ಸಂಪತ್ತು/ಆರೋಗ್ಯ.

ಶವವನ್ನು ಪಾರಂಪರಿಕ ಪದ್ಧತಿಯಿಂದ ದಹನಸಂಸ್ಕಾರ ಮಾಡದೆ ಸಿ.ಎನ್.ಜಿ. ಅಥವಾ ವಿದ್ಯುತ್ ಚಿತಾಗಾರವನ್ನು ಉಪಯೋಗಿಸುವುದು ಯೋಗ್ಯವೇ?

ಹಿಂದೂಗಳ ಧಾರ್ಮಿಕ ಪರಂಪರೆಗಳ ವಿಷಯದಲ್ಲಿ ತೀರ್ಪು ನೀಡುವಾಗ ನ್ಯಾಯಾಲಯವು ಅದರ ಹಿಂದಿನ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಬೇಕೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಶವವನ್ನು ಪಾರಂಪರಿಕ ಪದ್ಧತಿಯಿಂದ ದಹನಸಂಸ್ಕಾರ ಮಾಡದೆ ಸಿ.ಎನ್.ಜಿ. ಅಥವಾ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಿಂದೂಗಳು ಕಳೆದ ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆಯಿಂದ ಶವಸಂಸ್ಕಾರ ಮಾಡುತ್ತಿದ್ದಾರೆ; ಆದರೆ ಮಾಲಿನ್ಯದ ಸಮಸ್ಯೆ ಹಿಂದೆಂದೂ ನಿರ್ಮಾಣವಾಗಿಲ್ಲ. ಅದು ಕಳೆದ ೧೦೦ ವರ್ಷಗಳಲ್ಲಿ ನಿರ್ಮಾಣವಾಗಿದೆ, ಅಂದರೆ ಈ ಸಮಸ್ಯೆಯ ಮೂಲವು ಕಟ್ಟಿಗೆಯಿಂದ ಶವಸಂಸ್ಕಾರ ಮಾಡುವ ಹಿಂದೂಗಳ ಧರ್ಮಾಚರಣೆಯಲ್ಲಿರದೆ ಮಿತಿಮೀರಿದ ವಿಜ್ಞಾನದ ಉಪಯೋಗದಿಂದಾಗಿದೆ. ಹಿಂದೂ ಧರ್ಮದಲ್ಲಿನ ಶವಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನದಿಂದ ವಿಚಾರ ಮಾಡಿದರೆ ಕಟ್ಟಿಗೆಯ ಚಿತೆಯ ಮೇಲಿನ ದಹನಸಂಸ್ಕಾರವನ್ನಲ್ಲ, ಇನ್ನಿತರ ಘಟಕಗಳಿಂದ (ಔದ್ಯೋಗಿಕ ಪ್ರದೂಷಣೆ, ತ್ಯಾಜ್ಯ ನೀರು ಇತ್ಯಾದಿ) ಆಗುವ ಪ್ರದೂಷಣೆಯನ್ನು ನಿಯಂತ್ರಿಸುವುದು ಆವಶ್ಯಕವಾಗಿದೆ. ಹೀಗಾದರೆ ಹಿಂದೂಗಳಿಗೆ ಅವರ ಧರ್ಮಪರಂಪರೆಯನ್ನು ಪಾಲಿಸುವುದು ಸುಲಭವಾಗಬಹುದು.

೧. ಮೃತದೇಹಕ್ಕೆ ಅಗ್ನಿ ನೀಡುವುದರ ಹಿಂದಿನ ಶಾಸ್ತ್ರವೇನು?

ಮೃತದೇಹಕ್ಕೆ ಮಂತ್ರೋಚ್ಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡಿದ ನಂತರ ಮೃತದೇಹದಿಂದ ಗರಿಷ್ಠ  ಪ್ರಮಾಣದಲ್ಲಿ ಅಶುದ್ಧ ವಾಯು ಉತ್ಸರ್ಜಿತವಾಗಿ ಅದು ಅಗ್ನಿಯಲ್ಲಿ ವಿಘಟನೆಯಾಗುತ್ತದೆ. ಅಗ್ನಿಯು ತೇಜತತ್ತ್ವಕ್ಕೆ ಸಂಬಂಧಿಸಿದೆ, ಅಂತ್ಯವಿಧಿಯ ಸಮಯದಲ್ಲಿ ಮಾಡಿದ ಮಂತ್ರೋಚ್ಚಾರದಿಂದ ನಿರ್ಮಾಣವಾಗುವ ನಾದಶಕ್ತಿಯ ಆಧಾರದಲ್ಲಿ ಅಗ್ನಿಯಿಂದ ಪ್ರಕ್ಷೇಪಣೆಯಾಗುವ ಲಹರಿಗಳು ಗತಿಮಾನವಾಗುತ್ತವೆ. ಇದರಿಂದ ತೇಜತತ್ತ್ವಕ್ಕೆ ಆಕಾಶತತ್ತ್ವವು ಜೋಡಿಸಲ್ಪಟ್ಟು ಉತ್ಪನ್ನವಾಗುವ ಸಂಯುಕ್ತ ಲಹರಿಗಳು ಮೃತದೇಹದ ಸುತ್ತಲೂ ತಮ್ಮ ಅಭೇದ್ಯವಾದ ಸೂಕ್ಷ ್ಮ ಕವಚವನ್ನು ನಿರ್ಮಾಣ ಮಾಡುತ್ತವೆ. ಇದರಿಂದ ಲಿಂಗದೇಹವು ವಾತಾವರಣ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವಾಗಲೇ ಅದಕ್ಕೆ ಕೆಟ್ಟ ಶಕ್ತಿಯಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ ಹಾಗೂ ಸಂಯುಕ್ತ ಲಹರಿಗಳಿಂದ ಸೂಕ ಇಂಧನವು ನಿರ್ಮಾಣವಾಗಿ ಲಿಂಗದೇಹಕ್ಕೆ ಅಲ್ಪಾವಧಿಯಲ್ಲಿ ಪೃಥ್ವಿಯ ವಾತಾವರಣ ಕಕ್ಷೆಯನ್ನು ಭೇದಿಸಿ ಮುಂದೆ ಹೋಗಲು ಸಾಧ್ಯವಾಗುತ್ತದೆ. ಮೃತ ವ್ಯಕ್ತಿಯನ್ನು ಹೂಳುವುದು ಅಥವಾ ಇನ್ನಿತರ ಮಾರ್ಗಗಳನ್ನು ಅವಲಂಬಿಸುವುದಕ್ಕಿಂತ ಅದನ್ನು ದಹನ ಮಾಡಿದರೆ ಆ ಜೀವಕ್ಕೆ ಕೆಟ್ಟ ಶಕ್ತಿಯ ತೊಂದರೆಯಾಗುವುದಿಲ್ಲ. ಅದರ ಮುಂದಿನ ಪ್ರವಾಸಕ್ಕೂ ದಹನಸಂಸ್ಕಾರವು ಪೂರಕವಾಗಿರುತ್ತದೆ; ಆದ್ದರಿಂದ ಮಂತ್ರೋಪಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ನೀಡುವ ಅಗ್ನಿಗೆ ಅತ್ಯಂತ ಮಹತ್ವವಿದೆ. - ಶ್ರೀ ಗುರುತತ್ತ್ವ (೨೪.೬.೨೦೦೫, ಮಧ್ಯಾಹ್ನ ೪.೦೩) (ಪೂಜ್ಯ (ಸೌ.) ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ, ಶ್ರೀ ಗುರುತತ್ತ್ವ ಈ ಬರಹನಾಮದಿಂದಲೂ ಲೇಖನಗಳನ್ನು ಬರೆಯುತ್ತಾರೆ.)

೨. ಶಾಸ್ತ್ರಕ್ಕನುಸಾರ ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿಯೇ ಅಗ್ನಿ ನೀಡುವುದು ಏಕೆ ಯೋಗ್ಯವಾಗಿದೆ ?

ವೈಜ್ಞಾನಿಕ ಪ್ರಗತಿಯ ಅತಿರೇಕದಿಂದ ಹಿಂದೂ ಸಮಾಜವು ಅಮೂಲ್ಯವಾದ ಅನೇಕ ಪ್ರಾಚೀನ ಶಾಸ್ತ್ರಗಳನ್ನು ತ್ಯಾಗ ಮಾಡಿದೆ. ಅದರಿಂದ ಅದು ಈಶ್ವರನಿಂದ ದೂರ ಹೋಗಿದೆ. ಅಂತ್ಯಸಂಸ್ಕಾರದ ವಿಧಿಯಲ್ಲಿಯೂ ವಿಜ್ಞಾನವು ನುಸುಳಿದೆ; ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆ, ಬೆರಣಿ, ನೀರು ಇತ್ಯಾದಿ ಸಾತ್ತ್ವಿಕ ಘಟಕಗಳ ಮೂಲಕ ಆಗುವ ಅಂತ್ಯಸಂಸ್ಕಾರವು ಇಂದು ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಸೀಮೆ ಎಣ್ಣೆ , ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮಾಡಲ್ಪಡುತ್ತಿದೆ. ಹಿಂದೂ ಧರ್ಮದಲ್ಲಿ ಒಲೆಯಲ್ಲಿ ಅಡುಗೆ ಮಾಡುವುದು, ಯಜ್ಞಯಾಗ ಇತ್ಯಾದಿಗಳಿಂದ ಅಂತ್ಯಸಂಸ್ಕಾರದವರೆಗಿನ ಎಲ್ಲ ಪ್ರಸಂಗಗಳಲ್ಲಿಯೂ ಕಟ್ಟಿಗೆಗೆ ಧಾರ್ಮಿಕದೃಷ್ಟಿಯಿಂದ ಮಹತ್ವ ನೀಡಲಾಗಿದೆ; ಏಕೆಂದರೆ ಕಟ್ಟಿಗೆ ಸತ್ತ್ವಗುಣಿಯಾಗಿದೆ; ಆದ್ದರಿಂದ ಅಂತ್ಯಸಂಸ್ಕಾರದ ಸಮಯದಲ್ಲಿ ಆತ್ಮಕ್ಕೆ ಗತಿ(ಚಾಲನೆ)ಸಿಗಬೇಕೆಂದು ಕಟ್ಟಿಗೆಯನ್ನೇ ಉಪಯೋಗಿಸಬೇಕು.

೩. ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯಿಂದ ಆತ್ಮಕ್ಕೆ ಸದ್ಗತಿ ಸಿಗುವುದು !

ಕಟ್ಟಿಗೆಯಲ್ಲಿ ಸೂಕ್ಷ್ಮ ಸ್ವರೂಪದಲ್ಲಿ ಅಗ್ನಿತತ್ತ್ವವು ಇದ್ದೇ ಇರುತ್ತದೆ; ಆದ್ದರಿಂದ ಕಟ್ಟಿಗೆಯು ಮೂಲತಃ ಶುದ್ಧಿಕಾರಕವಾಗಿದೆ. ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡುವುದರಿಂದ ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯು ಮೃತದೇಹದ ಅಶುದ್ಧತೆಯನ್ನು (ರಜ-ತಮ) ನಾಶಗೊಳಿಸುತ್ತದೆ. ಆದ್ದರಿಂದ ಮೃತದೇಹವು ಹಗುರವಾಗಿ ಅದಕ್ಕೆ ಸದ್ಗತಿ ದೊರೆಯಲು ಸಹಾಯವಾಗುತ್ತದೆ.

೪. ವಿದ್ಯುತ್, ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮೃತದೇಹಕ್ಕೆ ಅಗ್ನಿಯನ್ನು ನೀಡುವುದರಿಂದ ಆತ್ಮಕ್ಕೆ ದುರ್ಗತಿ ಪ್ರಾಪ್ತಿಯಾಗುವುದು !

ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಡೀಸೆಲ್ ಇತ್ಯಾದಿಗಳನ್ನು ಉಪಯೋಗಿಸುವ ಚಿತಾಗಾರಗಳು ರಜ-ತಮಯುಕ್ತವಾಗಿರುವುದರಿಂದ ಮೃತದೇಹವು ದಹನವಾಗುವಾಗ ಅದರಿಂದ ರಜ-ತಮವು ಪ್ರಕ್ಷೇಪಣೆಯಾಗುತ್ತದೆ. ಅದರಿಂದ ವಾಯುಮಂಡಲ ಮತ್ತು ಮೃತದೇಹವೂ ಕಲುಷಿತವಾಗುತ್ತದೆ. ಇಂತಹ ಕಲುಷಿತ ಮೃತದೇಹದ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ ಹಾಗೂ ಆ ಮೃತದೇಹವನ್ನು ವಶಪಡಿಸಿಕೊಳ್ಳುತ್ತವೆ. ಆದ್ದರಿಂದ ಆತ್ಮಕ್ಕೆ ಮುಂದಿನ ಗತಿ ಸಿಗದೆ ಅದು ಭುವರ್ಲೋಕದಲ್ಲಿಯೇ ಸಿಲುಕುತ್ತದೆ. ಅಲ್ಲಿ ಅದು ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆತ್ಮಕ್ಕೆ ಸದ್ಗತಿ ಸಿಗದೆ ದುರ್ಗತಿಯೇ ಸಿಗುತ್ತದೆ !

೫. ಬಾಂಧವರೇ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ !

ಅ. ವ್ಯಕ್ತಿ ಜೀವಂತ ಇರುವಾಗ ಮಾತ್ರವಲ್ಲ, ಮೃತ್ಯುವಿನ ನಂತರವೂ ಅವನ ಮುಂದಿನ ಪ್ರವಾಸವು ಸುಖವಾಗಿ ಆಗಲಿ ಎಂಬುದಕ್ಕಾಗಿ ಹಿಂದೂ ಧರ್ಮದಲ್ಲಿ ವಿವಿಧ ವಿಧಿಗಳನ್ನು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಹೇಳಿದಂತೆ ಅಗ್ನಿಸಂಸ್ಕಾರ ಮಾಡಿ ಮೃತ ವ್ಯಕ್ತಿಯ ಮರಣದ ನಂತರದ ಪ್ರವಾಸವನ್ನು ಸುಖದಾಯಕಗೊಳಿಸುವುದು, ಆ ಮೃತ ವ್ಯಕ್ತಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗುತ್ತದೆ !

ಆ. ಪೆಟ್ರೋಲಿಯಮ್ ಗ್ಯಾಸ್, ಬಾಯೋ-ಗ್ಯಾಸ್, ವಿದ್ಯುತ್ ಇತ್ಯಾದಿ ಕೃತಕ ಘಟಕಗಳನ್ನು ಅಗ್ನಿಸಂಸ್ಕಾರಕ್ಕಾಗಿ ಉಪಯೋಗಿಸುವುದೆಂದರೆ, ಒಂದು ರೀತಿಯಲ್ಲಿ ಮೃತ ದೇಹದ ಸುತ್ತಲೂ ರಜ-ತಮದ ಆಚ್ಛಾದನೆಯನ್ನು ಹಾಕಿದಂತೆ ಆಗಿದೆ ! ಹೀಗೆ ಮಾಡಿ ನಮ್ಮವರಿಗೇ ಮರಣದ ನಂತರದ ಪ್ರವಾಸದಲ್ಲಿ ಅಡಚಣೆಯನ್ನುಂಟು ಮಾಡುವಂತಹ ಪಾಪದಲ್ಲಿ ಪಾಲುದಾರರಾದಂತಾಗುತ್ತದೆ.

ಇತರ ಘಟಕಗಳ ತುಲನೆಯಲ್ಲಿ ಹಿಂದೂಗಳ ದಹನಸಂಸ್ಕಾರದಲ್ಲಿ ಬೇಕಾಗುವ ಕಟ್ಟಿಗೆಯ ಹಾಗೂ ಅದರಿಂದ ಆಗುವ ಮಾಲಿನ್ಯದ ಪ್ರಮಾಣವು ಅತ್ಯಲ್ಪ, ಬಹುಶಃ ನಗಣ್ಯವೆನ್ನಬಹುದು, ಆದರೂ ಹಿಂದೂಗಳ ದಹನಸಂಸ್ಕಾರದ ವಿಷಯದಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಇದರಿಂದ ಜಾತ್ಯತೀತತೆಯ ರಾಜ್ಯಪದ್ಧತಿಯಿಂದ ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಧರ್ಮಾಚರಣೆ ಮಾಡುವುದು ಎಷ್ಟು ಕಠಿಣವಾಗಬಹುದು, ಎಂಬುದು ಅರಿವಾಗುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಆವಶ್ಯಕವಾಗಿದೆ !

 - ಪ.ಪೂ. ಡಾ. ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ.

ಗೌರವಯುತ ಜ್ಞಾನಕೇಂದ್ರ : ನಾಲಂದಾ

ಈಗಿನ ಧನಸಂಪನ್ನ ಮತ್ತು ಜ್ಞಾನಸಂಪನ್ನ ದೇಶಗಳು ಭೂತಕಾಲದಲ್ಲಿ ಯಾವಾಗ ಹಿಂದುಳಿದ ಅರಣ್ಯ ಜೀವನವನ್ನು ನಡೆಸುತ್ತಿದ್ದರೋ ಆಗ ಭಾರತದಲ್ಲಿ ಉಚ್ಚ ಸ್ತರದ ಸಾಂಸ್ಕೃತಿಕ ಕೇಂದ್ರಗಳ ಮತ್ತು ವಿದ್ಯಾಪೀಠಗಳ ವಿಕಾಸವಾಗಿತ್ತು. ಪ್ರಾಚೀನ ಭಾರತದ ಅನೇಕ ಪ್ರತಿಷ್ಠಿತ ಕೇಂದ್ರಗಳಲ್ಲಿ ನಾಲಂದಾ ವಿಶ್ವವಿದ್ಯಾಲಯವು ಒಂದು ಪ್ರಮುಖ ಕೇಂದ್ರವಾಗಿತ್ತು. ಮಗಧ ದೇಶದ ಸಾಮ್ರಾಟನಾದ ಕುಮಾರ ಗುಪ್ತನು ಇ.ಸ. ೪೧೪ ರ ಸುಮಾರಿಗೆ ಶಿಕ್ಷಣದ ಪ್ರಸಾರ ಮತ್ತು ಜ್ಞಾನದ ವಿಕಾಸಕ್ಕಾಗಿ ನಾಲಂದಾದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದನು. ಅದೇ ರೀತಿ ಬೌದ್ಧರ ಕಾಲದಲ್ಲಿಯೂ ನಾಲಂದಾವು ಒಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇದರ ಲಿಖಿತ ಪುರಾವೆಗಳಿವೆ, ಆದರೆ ಆ ಸಮಯದಲ್ಲಿ ನಾಲಂದಾದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯಾಗಿರಲಿಲ್ಲ.

ಚೀನಾದ ಪ್ರವಾಸಿಗ ಹ್ಯೂ-ಎನ್-ತ್ಸಾಂಗ್‌ನ ಪ್ರವಾಸದ ವರ್ಣನೆಯಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾನ್ ಸಾಂಸ್ಕೃತಿಕ ಕೇಂದ್ರದ ಸ್ವರೂಪದಲ್ಲಿ ನಾಲಂದಾದ ಸತ್ಯವರ್ಣನೆಯು ನೋಡಲು ಸಿಗುತ್ತದೆ. ಈ ಚೀನಾದ ಜಿಜ್ಞಾಸು ಪ್ರವಾಸಿಗನು ಅನೇಕ ವರ್ಷಗಳ ಕಾಲ ದೇಶದ ಬೇರೆ-ಬೇರೆ ನಗರಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿ ನೀಡಿದ್ದನು. ಅವನು ಕನೌಜನ ಚಕ್ರವರ್ತಿ ಹರ್ಷವರ್ಧನನ ಆಸ್ಥಾನದಲ್ಲಿ ಅನೇಕ ವರ್ಷಗಳ ಕಾಲ ವಾಸ ಮಾಡಿ ಸಂಸ್ಕೃತ ಮತ್ತು ಪಾಲಿ ಭಾಷೆಯ ಜ್ಞಾನವನ್ನು ಪ್ರಾಪ್ತ ಮಾಡಿಕೊಂಡಿದ್ದನು. ಅನಂತರ ಅವನು ವೈಶಾಲಿ, ಬೌದ್ಧಗಯಾ ಹೀಗೆ ಪ್ರವಾಸ ಮಾಡುತ್ತ ನಾಲಂದಾಗೆ ಬಂದನು. ಇ.ಸ. ೬೩೫ ರ ಸುಮಾರಿಗೆ ಹ್ಯೂ-ಎನ್- ತ್ಸ್ಯಾಂಗನು ನಾಲಂದಾದಲ್ಲಿ ಅಧ್ಯಯನ ಮಾಡಿದನು. ಅವನು ೫ ವರ್ಷಗಳ ನಂತರ ನಾಲಂದಾಗೆ ಮರಳಿ ಬಂದು ೨-೩ ವರ್ಷಗಳ ಕಾಲ ವಾಸ್ತವ್ಯವಿದ್ದು ವೈದಿಕ ಸಾಹಿತ್ಯ ಮತ್ತು ಬೌದ್ಧ ಧರ್ಮಗ್ರಂಥಗಳನ್ನು ಚೀನಿ ಭಾಷೆಯಲ್ಲಿ ಅನುವಾದಿಸಿದ್ದನು.

ಅವನ ನೊಂದಣಿಯಂತೆ, ನಾಲಂದಾ ವಿಶ್ವವಿದ್ಯಾಲಯದ ಪರಿಸರವು ಅತ್ಯಂತ ಭವ್ಯವಾಗಿತ್ತು. ಈ ಪರಿಸರದಲ್ಲಿ ೫ ಬಹು ದೊಡ್ಡ ಕಟ್ಟಡಗಳಿದ್ದವು. ಸಾಮ್ರಾಟ ಹರ್ಷವರ್ಧನನು ಸಹ ಇಂತಹದ್ದೇ ಒಂದು ಭವ್ಯ ಕಟ್ಟಡದ ನಿರ್ಮಾಣ ಮಾಡುತ್ತಿದ್ದನು. ಈ ಭವ್ಯ ಪರಿಸರದ ಸುತ್ತಲು ತಡೆಗೋಡೆ ಇತ್ತು. ಇವೆಲ್ಲವುದರ ಮಧ್ಯಭಾಗದಲ್ಲಿ ವಿದ್ಯಾಪೀಠವಿತ್ತು. ಆಯತಾಕಾರದಲ್ಲಿ ರಚಿಸಲಾದ ಎಂಟು ಸಭಾಗೃಹಗಳಿದ್ದವು. ಈ ಸಭಾಗೃಹಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿತ್ತು ಮತ್ತು ಆಚಾರ್ಯರು ಭಾಷಣವನ್ನು ಮಾಡುತ್ತಿದ್ದರು. ಇನ್ನೊಂದು ಕಡೆಯಲ್ಲಿ ವೇಧಶಾಲೆ (ಹವಾಮಾನ ನಿರ್ಧರಿಸುವ ಸಂಸ್ಥೆ) ಮತ್ತು ಕಾರ್ಯ ಶಾಲೆಯ ಅನೇಕ ಕಟ್ಟಡಗಳಿದ್ದವು. ಈ ಕಟ್ಟಡಗಳಲ್ಲಿ ವಿವಿಧ ಪ್ರಕಾರದ ಯಂತ್ರಗಳಿದ್ದವು. ಅವುಗಳ ಸಹಾಯದಿಂದ ಹವಾಮಾನ ಮತ್ತು ಮಳೆಯನ್ನಷ್ಟೇ ಅಲ್ಲದೇ ಗ್ರಹ-ನಕ್ಷತ್ರಗಳ ಅಭ್ಯಾಸ ಮಾಡಲಾಗುತ್ತಿತ್ತು.

ಅಲ್ಲದೇ ವಿದ್ಯಾರ್ಥಿಗಳಿಗಾಗಿ ಸ್ವತಂತ್ರ ನಾಲ್ಕು ಮಹಡಿಗಳ ವಸತಿಗೃಹದ ಕಟ್ಟಡವಿತ್ತು. ಈ ವಸತಿಗೃಹದಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದರು. ನಾಲಂದಾ ವಿಶ್ವವಿದ್ಯಾಲಯದಲ್ಲಿ ವೇದಪುರಾಣ, ಬೌದ್ಧತತ್ತ್ವಜ್ಞಾನ, ಗಣಿತ, ಜ್ಯೋತಿಷ್ಯ, ಆಯುರ್ವೇದ, ಚಿಕಿತ್ಸಾಶಾಸ್ತ್ರ, ನ್ಯಾಯದರ್ಶನ ಮತ್ತು ಚಿತ್ರಕಲೆ ಇತ್ಯಾದಿಗಳ ಶಿಕ್ಷಣ ನೀಡಲು ೧,೫೦೦ ಕ್ಕೂ ಹೆಚ್ಚು ವಿದ್ವಾಂಸರು, ಆಚಾರ್ಯರು ಮತ್ತು ಪ್ರಾಚಾರ್ಯರಿದ್ದರು. ಆ ಕಾಲದ ಖ್ಯಾತವಿದ್ವಾಂಸರಾದ ಶೀಲಭದ್ರರು ವಿಶ್ವವಿದ್ಯಾಲಯದ ಮುಖ್ಯ ಆಚಾರ್ಯರಾಗಿದ್ದರು. ೧೬ ಭಾಷೆಗಳ ಜ್ಞಾನವಿದ್ದ ಶೀಲಭದ್ರರು ಅನೇಕ ವಿದ್ಯೆಗಳಲ್ಲಿ ಪಾರಂಗತರಾಗಿದ್ದರು. ಇಂದಿಗೂ ಯಾರ ಕೀರ್ತಿಯನ್ನು ಹೊಗಳುತ್ತೇವೆಯೋ ಅಂತಹ ಅನೇಕ ತತ್ತ್ವಜ್ಞಾನಿಗಳಿಗೆ ಈ ವಿಶ್ವವಿದ್ಯಾಲಯವು ತರಬೇತಿಯನ್ನು ನೀಡಿತ್ತು. ಇಂತಹ ವಿದ್ವಾಂಸರಲ್ಲಿ ಅಶ್ವಘೋಷ, ನಾಗಾರ್ಜುನ, ಪ್ರಭಾಕರ ಮಿತ್ರ, ಅಸಂಗ ಶೀಲಭದ್ರ, ರಾಹುಲ ಶೀಲಭದ್ರ, ಪದ್ಮ ಸಂಭವ, ವಸುಬಂಧು ಇವರ ಸಮಾವೇಶವಿದೆ.

ಈ ವಿಶಾಲವಾದ ವಿಶ್ವವಿದ್ಯಾಲಯದಲ್ಲಿ ಆಚಾರ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರೆಲ್ಲ ಸೇರಿ ೧೦ ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಮಗಧ ದೇಶದ ಸಾಮ್ರಾಟನು ಅವರ ನಿವಾಸ ಮತ್ತು ಭೋಜನದ ವಿಶೇಷ ಸೌಲಭ್ಯವನ್ನು ಮಾಡಿದ್ದನು. ನಾಲಂದಾದ ಸುತ್ತಮುತ್ತಲಿನ ೧೦೦ ಗ್ರಾಮಗಳ ಉತ್ಪನ್ನದಿಂದ ಈ ವಿಶ್ವವಿದ್ಯಾಲಯದ ಖರ್ಚನ್ನು ನಿಭಾಯಿಸಲಾಗುತ್ತಿತ್ತು. ಹ್ಯೂ-ಎನ್-ತ್ಸ್ಯಾಂಗ್ ನಂತರ ಇತ್ಸಿಂಗ್ ಈ ಚೀನಾದ ಪ್ರವಾಸಿಗನು ನಾಲಂದಾಕ್ಕೆ ಬಂದಿದ್ದನು. ಅವನು ಇಲ್ಲಿ ಶಿಕ್ಷಣ ಮತ್ತು ಪ್ರಾವೀಣ್ಯತೆಯನ್ನು ಪ್ರಾಪ್ತ ಮಾಡಿಕೊಂಡನು. ಅವನು ನಾಲಂದಾ ವಿದ್ಯಾಪೀಠದಲ್ಲಿರುವ ಪ್ರಮುಖ ಗ್ರಂಥಾಲಯದ ವಿಶೇಷ ಉಲ್ಲೇಖವನ್ನು ಮಾಡಿದ್ದಾನೆ. ರತ್ನಸಾಗರ, ರತ್ನೋದಧಿ ಮತ್ತು ರತ್ನರಂಜನ ಈ ಹೆಸರಿನ ಪ್ರಮುಖ ಗ್ರಂಥಾಲಯಗಳಿದ್ದವು. ಇವುಗಳಲ್ಲಿ ರತ್ನೋದಧಿ ಗ್ರಂಥಾಲಯವು ಅತಿ ದೊಡ್ಡದಾಗಿತ್ತು ಮತ್ತು ಅದರಲ್ಲಿ ೯ ಖಂಡಗಳಿದ್ದವು. ಈ ವಿಭಾಗದಲ್ಲಿ ನೂರಾರು ಅಮೂಲ್ಯವಾದ ಗ್ರಂಥಗಳನ್ನು ಮತ್ತು ಪ್ರಾಚೀನ ಲಿಪಿಗಳನ್ನು ಕ್ರಮಬದ್ಧವಾಗಿ ಜೋಡಿಸ ಲಾಗಿತ್ತು. ಈ ಗ್ರಂಥಾಲಯದಲ್ಲಿ ಅನೇಕ ಭಿಕ್ಷು ಮತ್ತು ವಿದ್ಯಾರ್ಥಿಗಳು ಪ್ರಾಚೀನ ಲಿಪಿ ಮತ್ತು ಪುಸ್ತಕಗಳ ಪ್ರತಿಗಳನ್ನು ತಯಾರು ಮಾಡುತ್ತಿದ್ದರು. ಹ್ಯೂ-ಎನ್-ತ್ಸ್ಯಾಂಗ್‌ನು ನಾಲಂದಾದಲ್ಲಿ ವಾಸಿಸುತ್ತಿದ್ದಾಗ ಸುಮಾರು ೭೦೦ ಪುಸ್ತಕಗಳ ನಕಲು ಪ್ರತಿಗಳನ್ನು ಬರೆದಿದ್ದನು ಮತ್ತು ಅವುಗಳನ್ನ್ನು ಸಾಂಸ್ಕ ತಿಕ ಖಜಾನೆಯೆಂದು ಚೀನಾಗೆ ತೆಗೆದುಕೊಂಡು ಹೋದನು. ಇದೇ ರೀತಿ ಇತ್ಸಿಂಗನು ಸಹ ನಕಲು ಪ್ರತಿಗಳನ್ನು ಬರೆದು, ವೈದಿಕ ಹಾಗೂ ಬೌದ್ಧ ಸಾಹಿತ್ಯಗಳ ೪೦೦ ಪ್ರತಿಗಳನ್ನು ಚೀನಾಗೆ ತೆಗೆದುಕೊಂಡು ಹೋದನು.

ಪ್ರತಿಯೊಂದು ಅಭಿವೃದ್ಧಿಯ ಹಿಂದೆ ಒಂದು ಪರಾಭವವು ಇದ್ದೇ ಇರುತ್ತದೆ. ಸಂಪೂರ್ಣ ಜಗತ್ತಿನಲ್ಲಿ ಜ್ಞಾನ ಪ್ರಸಾರ ಮಾಡುತ್ತಿದ್ದ ಈ ಕೇಂದ್ರವು ಒಮ್ಮೆಲೆ ಪತನವಾಯಿತು. ಇ.ಸ.೧೨೦೦ರಲ್ಲಿ ಮಹಮ್ಮದ್ ಬಖ್ತಿಯಾರ್ ಖಿಲ್ಜಿಯು ಬಿಹಾರದ ಮೇಲೆ ಆಕ್ರಮಣ ಮಾಡಿದನು. ಆಗ ಅನೇಕ ದೇವಸ್ಥಾನಗಳು, ಮಠ ಮತ್ತು ಬೌದ್ಧವಿಹಾರಗಳನ್ನು ಅವನು ಧ್ವಂಸ ಮಾಡಿದನು. ಈ ಆಕ್ರಮಣದಲ್ಲಿ ನಾಲಂದಾ ಮಹಾವಿಹಾರ ಮತ್ತು ವಿದ್ಯಾಪೀಠಗಳನ್ನು ಸಹ ಅವನು ನಾಶ ಮಾಡಿದನು. ಇಷ್ಟೇ ಅಲ್ಲದೇ ಮೂರ್ತಿಪೂಜೆಯನ್ನು ವಿರೋಧಿಸುತ್ತಿದ್ದ ಖಿಲ್ಜಿಯ ಸೈನಿಕರು ಗ್ರಂಥಾಲಯಗಳನ್ನು ಸಹ ಬಿಡಲಿಲ್ಲ. ಅವರು ಗ್ರಂಥಾಲಯಗಳಿಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ಪುಸ್ತಕಗಳು ಅನೇಕ ತಿಂಗಳುಗಳ ವರೆಗೆ ಉರಿಯುತ್ತಿದ್ದವು.


ಇದೇ ರೀತಿ ಅಲ್ಲಿ ಪುನರ್‌ನಿರ್ಮಾಣದ ಸ್ಥಿತಿಯು ಉಂಟಾಗತೊಡಗಿತು. ಪ್ರಸಿದ್ಧ ಪುರಾತನ ಸ್ಮಾರಕಗಳ ಸಂಶೋಧಕರಾದ ಸರ್ ಕನ್ನಿಂಗ್ ಧಮ್‌ರವರು ಈ ಪ್ರಾಚೀನ ವಿದ್ಯಾಪೀಠದ ಸ್ಥಳವನ್ನು ಹುಡುಕಿ ತೆಗೆದರು. ವಿದ್ವಾನ್ ಇತಿಹಾಸಕಾರರಾದ ಪಂಡಿತ್ ಹಿರಾನಂದ ಶಾಸ್ತ್ರೀಯವರು ತಮ್ಮ ಪರಿಶ್ರಮಗಳಿಂದ ಉತ್ಖನನೆಯನ್ನು ಮಾಡಿ ನಾಲಂದಾ ವಿದ್ಯಾಪೀಠದ ವಿಧ್ವಂಸವಾದ ಅವಶೇಷಗಳನ್ನು ಪತ್ತೆ ಹಚ್ಚಿದರು. ಆಗಿನಿಂದ ಈ ಸ್ಥಳವನ್ನು ನಾಲಂದಾದ ಭಗ್ನಾವಶೇಷವೆಂದು ಕರೆಯಲಾಗುತ್ತದೆ.

೧೯೫೧ರಲ್ಲಿ ನವನಾಲಂದಾ ಮಹಾವಿಹಾರದಲ್ಲಿ ಬೌದ್ಧ ತತ್ತ್ವಜ್ಞಾನ, ಪಾಲೀ ಭಾಷೆ ಮತ್ತು ಸಾಹಿತ್ಯದ ಸಂಶೋಧನೆಯ ಕಾರ್ಯವನ್ನು ಪ್ರಾರಂಭಿಸ ಲಾಯಿತು. ಅನಂತರ ಜಪಾನ್, ಚೀನಾ, ಶ್ರೀಲಂಕಾ ಮತ್ತು ಇಂಡೋನೇಶಿಯಾ ದೇಶಗಳು ಈ ಕಾರ್ಯ ದಲ್ಲಿ ತಮ್ಮಿಂದಾದ ಸಹಾಯವನ್ನು ನೀಡಿದರು. ಪ್ರಸ್ತುತ ನವನಾಲಂದಾ ವಿಹಾರಕ್ಕೆ ವಿದ್ಯಾಪೀಠಕ್ಕೆ ಸಮನಾದ ದರ್ಜೆಯನ್ನು ನೀಡಲಾಗಿದೆ. ಭಾರತ ಸರಕಾರದ ವತಿಯಿಂದ ಅಲ್ಲಿ ಭವ್ಯ ಕಟ್ಟಡ ಮತ್ತು ಸುಂದರ ಗ್ರಂಥಾಲಯವನ್ನು ಕಟ್ಟಲಾಗಿದೆ.

ನವನಾಲಂದಾವು ಈಗ ಕೇವಲ ಪ್ರಾಚೀನ ವಿದ್ಯಾಪೀಠದ ಭಗ್ನಾವಶೇಷವಷ್ಟೇ ಆಗಿರದೆ ಅದು ಒಂದು ಸುಂದರ ಪ್ರವಾಸಿಕೇಂದ್ರವೂ ಆಗಿದೆ. ಅಲ್ಲಿ ದೇಶ-ವಿದೇಶದಿಂದ ಬರುವಂತಹ ಪ್ರವಾಸಿಗರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಪಾಟ್ನಾದಿಂದ ೧೧೦ ಕಿ.ಮೀ.ದೂರದಲ್ಲಿರುವ ನವನಾಲಂದಾವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.

(ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ)

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಮೊದಲಿನ ಹೆಸರು ’ನರೇಂದ್ರ’. ಮುಂದೆ ಅವರು ಸ್ವಾಮಿ ವಿವೇಕಾನಂದರಾದರು.

ನರೇಂದ್ರ ಚಿಕ್ಕವನಿದ್ದಾಗ ಆಟದಲ್ಲಿ ಮುಳುಗಿ ಬಿಡುತ್ತಿದ್ದನೆಂದು ಅಪ್ಪ ಚಿಂತಿಸುತ್ತಿದ್ದರು
ನರೇಂದ್ರರ ತಂದೆ ಕಲಕತ್ತಾದಲ್ಲಿ ಒಬ್ಬ ಪ್ರಸಿದ್ಧ ವಕೀಲರಾಗಿದ್ದರು. ಒಂದು ಸಲ ಅವರಿಗೆ ನ್ಯಾಯಾಲಯದಿಂದ ಮನೆಗೆ ಬರಲು ತಡವಾಯಿತು. ಆಗಲೂ ನರೇಂದ್ರ ಹೊರಗೇ ಆಡುತ್ತಿದ್ದ. ಇದನ್ನು ನೋಡಿ ಅವರು ತಮ್ಮ ಪತ್ನಿಯನ್ನು ಕರೆದು ಹೇಳಿದರು, "ನಿಮಗೆ ಇವನ ಬಗ್ಗೆ ಕಾಳಜಿ ಇದೆ ಎಂದು ನನಗನಿಸುವುದಿಲ್ಲ. ಇದ್ದಿದ್ದರೆ ನೀವು ಇವನನ್ನು ಇಷ್ಟು ಹೊತ್ತಿನಲ್ಲಿ ಹೀಗೆ ಹೊರಗೆ ಬಿಡುತ್ತಿರಲಿಲ್ಲ". ಇದನ್ನು ಕೇಳಿ ತಾಯಿಯು ನರೇಂದ್ರನನ್ನು ಮನೆಯ ಒಳಗೆ ಕರೆದುಕೊಂಡು ಹೋದರು.

ಧರ್ಮ-ಅಧರ್ಮದ ಯುದ್ಧದಲ್ಲಿ ಶ್ರೀಕೃಷ್ಣನಂತೆ ಸಾರಥಿಯಾಗಬೇಕೆಂದು ತಾಯಿಯು ಮಗನಿಗೆ ತಿಳಿಸುವುದು
ರಾತ್ರಿ ಊಟವಾದ ನಂತರ ಎಲ್ಲರು ಮಲಗಿದರು. ನರೇಂದ್ರ ಮತ್ತು ಅವನ ತಾಯಿ ಮಾತ್ರ ಎದ್ದಿದ್ದರು. ಏನೂ ಹೇಳದೆ ತಾಯಿಯು ನರೇಂದ್ರನನ್ನು, ಗೀತೋಪದೇಶ ಮಾಡುತ್ತಿರುವ ಕೃಷ್ಣನ ದೊಡ್ಡ ಚಿತ್ರದ ಮುಂದೆ ಕರೆದುಕೊಂಡು ಹೋದರು. ಅರ್ಜುನನಿಗೆ ಗೀತೆಯನ್ನು ಉಪದೇಶ ಮಾಡುತ್ತಿರುವ ಚಿತ್ರ ಅವಳಿಗೆ ತುಂಬಾ ಆಧಾರವೆನಿಸುತ್ತಿತ್ತು. ತಾಯಿಯು ನರೇಂದ್ರನನ್ನು ಕೇಳಿದರು, "ಮಗು ನಿನಗೆ ಇವರಿಬ್ಬರಲ್ಲಿ ಯಾರಂತೆ ಆಗಬೇಕೆಂದು ಅನಿಸುತ್ತದೆ?" ಆಗ ನರೇಂದ್ರ ಉತ್ತರಿಸಿದನು, "ಟಾಂಗ ಓಡಿಸುವವನಂತೆ". ಆಗ ತಾಯಿಯು ಹೇಳಿದರು, "ಮಗನೇ ನಿನಗೆ ಟಾಂಗಾ ಓಡಿಸುವವನಂತೆ ಆಗಬೇಕೆಂಬ ಇಚ್ಛೆ ಇದೆ ಅಲ್ಲವೇ ಹಾಗಿದ್ದರೆ ನೋಡು ಭಗವಾನ ಶ್ರೀಕೃಷ್ಣನು ಸಹ ಸಾರಥಿಯೇ ಆಗಿದ್ದಾರೆ ಆದರೆ ಯಾರದ್ದು? ಅಧರ್ಮ ನಾಶಕ್ಕಾಗಿ ಸಜ್ಜಾಗಿ ನಿಂತ ಅರ್ಜುನನದ್ದು."

ತಾಯಿಯ ವ್ಯಾಪಕ ಉದ್ದೇಶವು ನರೇಂದ್ರನ ಮನದಲ್ಲಿ ಅಚ್ಚೊತ್ತುವುದು ಮತ್ತು ತಾಯಿಯ ಆರ್ತತೆಯ ಅರಿವಾಗುವುದು
ತಾಯಿಯು ಹೇಳಿದಳು, "ಮಗನೇ ಕೇವಲ ವ್ಯಾಪಕ ಧ್ಯೇಯವಷ್ಟೇ ಇದ್ದರೆ ಸಾಲದು ಅದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಶಿಕ್ಷಣವೂ ಅಷ್ಟೇ ಮುಖ್ಯವಾಗಿದೆ. ಶಿಕ್ಷಣವಿಲ್ಲದೆ ಕಲಿಯುವುದು ಹೇಗೆ ಸಾಧ್ಯ? ಹಾಗಿದ್ದರೆ ಈಗ ಮುಖ್ಯವೇನೆಂದರೆ ಸತತವಾಗಿ ನಮ್ಮ ಧ್ಯೇಯದ ಕಡೆ ಲಕ್ಷ್ಯವಿರುವುದು. ನಿನ್ನ ಧ್ಯೇಯದ ಅರಿವು ಸದಾ ನಿನ್ನ ಮನಸ್ಸಿನಲ್ಲಿರಲಿ. ಈಗ ನೀನು ನಿನ್ನ ಸಂಪೂರ್ಣ ಲಕ್ಷ್ಯ ಅಭ್ಯಾಸದ ಕಡೆ ನೀಡು. ತಾಯಿ ಹೇಳುವುದು ನರೇಂದ್ರನಿಗೆ ಅರ್ಥವಾಗಲಿಲ್ಲ ಆದರೆ ಅದರ ಹಿಂದಿನ ಆರ್ತತೆಯ ಅರಿವಾಯಿತು. ತಾಯಿಯು ನರೇಂದ್ರನ ಮನದಲ್ಲಿ ವ್ಯಾಪಕ ಧ್ಯೇಯದ ಚಿತ್ರ ಮೂಡಿಸಿದ್ದರು. ಕಾಲಾಂತರದಲ್ಲಿ ನರೇಂದ್ರನ ವಿದ್ಯಾಭ್ಯಾಸವು ಸಂಪೂರ್ಣವಾಯಿತು. ಕೆಲಸಕ್ಕಾಗಿ ಅವರು ತುಂಬಾ ಹುಡುಕಾಡಿದರು ಆದರೆ ಮನಸ್ಸಿಗೆ ಇಷ್ಟವಾಗುವಂತ ಕೆಲಸ ಸಿಗಲಿಲ್ಲ.

ನರೇಂದ್ರನು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ಧರ್ಮಪ್ರಸಾರ ಮತ್ತು ಕೇವಲ ಹಿಂದೂಸ್ಥಾನದಲ್ಲಿ ಅಲ್ಲದೇ ಸಪ್ತಸಾಗರದಾಚೆಗೂ ’ಸನಾತನ ಧರ್ಮ’ದ ಧ್ವಜವನ್ನು ಹಾರಿಸುವಂತಾಗುವುದು
ಒಂದು ಸಲ ನರೇಂದ್ರನ ಸ್ನೇಹಿತನು ಅವನನ್ನು ರಾಮಕೃಷ್ಣ ಪರಮಹಂಸರ ಕಡೆ ಕರೆದುಕೊಂಡು ಹೋದರು. ನರೇಂದ್ರನನ್ನು ನೋಡಿದ ತಕ್ಷಣ ರಾಮಕೃಷ್ಣರು ಹೇಳಿದರು, "ಎಲ್ಲಿದ್ದೆ ನೀನು ಇಷ್ಟು ದಿವಸ? ಯಾವಾಗದಿಂದ ನಾನು ನಿನ್ನ ದಾರಿ ಕಾಯುತ್ತಿದ್ದೆ." ರಾಮಕೃಷ್ಣರು ಅವರ ಮೇಲೆ ಕೃಪೆಯ ಮಳೆಯನ್ನೇ ಸುರಿಸಿದರು. ಧರ್ಮಪ್ರಸಾರದ ದೊಡ್ಡ ಜವಬ್ದಾರಿಯನ್ನು ಅವರು ನರೇಂದ್ರನಿಗೆ ವಹಿಸಿದರು. ಭಾರತದಲ್ಲಿ ಮಾತ್ರವಲ್ಲದೇ ಸಪ್ತಸಾಗರದ ಆಚೆ ನರೇಂದ್ರನು ’ಸನಾತನ ಧರ್ಮ’ದ ಧ್ವಜವನ್ನು ಹಾರಿಸಿದನು.

- ಶ್ರೀ. ಪ್ರಸಾದ ಮ್ಹೆಸಕರ

ಆಧಾರ - ಬಾಲಸಂಸ್ಕಾರ

ಹಿಂದೂಗಳೇ, ಒಂದು ದಿನದ ಮತಾಂತರವು ನಿಮಗೆ ಒಪ್ಪಿಗೆಯಿದೆಯೇ?

ಜನವರಿ ೧ ಅಲ್ಲ, ಯುಗಾದಿಯೇ ಹಿಂದೂಗಳಿಗೆ ಹೊಸವರ್ಷ!

ಹಿಂದೂಗಳಿಗೆ ಡಿಸೆಂಬರ್ ೩೧ರ ರಾತ್ರಿ ಎಂದರೆ ಪಾಶ್ಚಾತ್ಯ ಸಂಸ್ಕೃತಿಯ ಅತಿರೇಕದ ಮತ್ತು ಭೋಗವಾದದ ಪರಾಕಾಷ್ಠೆಯ ದಿನವಾಗಿದೆ. ಹಾಗಾಗಿ ಈ ರಾತ್ರಿಯಂದು ಮದ್ಯಪಾನ, ಮಾಂಸಾಹಾರ ಮತ್ತು ನೃತ್ಯ ಗಾಯನಗಳಂತಹ ನೈತಿಕತೆಗೆ ಮಸಿಬಳಿಯುವಂತಹ ಭೋಗವಾದಿ ಘಟನೆಗಳು ಸಾರಾಸಗಟಾಗಿ ನಡೆಯುತ್ತವೆ.

ಯಾರಾದರೊಬ್ಬ ವ್ಯಕ್ತಿಯು ಮತಾಂತರಗೊಂಡ ನಂತರ ಹೊಸ ಧರ್ಮದಲ್ಲಿನ ರೂಢಿ-ಪರಂಪರೆಗಳನ್ನು ಮತ್ತು ಉತ್ಸವಗಳನ್ನು ಆಚರಿಸುತ್ತಾನೆ. ಅದೇ ರೀತಿ ವಿಶ್ವದಲ್ಲಿನ ಶಕ್ತಿಗಳಿಗೆ (ಗ್ರಹ ಹಾಗೂ ನಿಸರ್ಗ) ಹಾಗೂ ಈ ಮಣ್ಣಿನೊಂದಿಗೆ ಯಾವುದೇ ಸಂಬಂಧವಿಲ್ಲದ ಜನವರಿ ೧ನ್ನು ಹಿಂದೂ ಧರ್ಮೀಯರಾದ ನಾವು ಪಾಶ್ಚಾತ್ಯರಂತೆ ಆಚರಿಸುತ್ತೇವೆ ಎಂದರೆ ಇದು ಒಂದು ದಿನದ ಮತಾಂತರವೇ ಆಗಿದೆ.

ಡಿಸೆಂಬರ್ ೩೧ರಂದು ರಾತ್ರಿ ಎಲ್ಲೆಡೆಗಳಲ್ಲಿ ಹಾಡುಕುಣಿತ ಮತ್ತು ಪಟಾಕಿಗಳ ಅಬ್ಬರ ಮತ್ತು ಜನವರಿ ೧ರಂದು ಒಡೆದ ಶರಾಬು ಬಾಟಲಿಗಳು ಮತ್ತು ಪಟಾಕಿಗಳ ಚೂರಾದ ಕಾಗದಗಳಿಂದ ಇಡೀ ವಾತಾವರಣವು ಭಯಾನಕವಾಗಿ ಕಾಣಿಸುತ್ತದೆ. ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಭಗವಂತನ ಅಧಿಷ್ಠಾನವನ್ನಿಟ್ಟುಕೊಂಡು ತ್ಯಾಗದ ಮತ್ತು ಸಂಯಮೀ ಜೀವನವನ್ನು ಸಾಗಿಸುವ ಹಿಂದೂಗಳಿಗೆ ಇಂತಹ ಬೀಭತ್ಸ ಮತ್ತು ಅಸುರೀ ಭೋಗವಾದವು ಶೋಭಿಸಲಾರದು. ಹಾಗಾಗಿ ಎಲ್ಲ ಕ್ಷೇತ್ರಗಳಿಂದಾಗುವ ಪಾಶ್ಚಾತ್ಯರ ಅಂಧಾನುಕರಣೆಯನ್ನು ನಾವು ತಡೆಗಟ್ಟಬೇಕಾಗಿದೆ. ಹಿಂದೂಗಳ ಭಾವೀ ಪೀಳಿಗೆಯು ಪಾಶ್ಚಾತ್ಯರಂತೆ ಭೋಗವಾದಿ ಮತ್ತು ಅನಾಗರಿಕವಾಗಬಾರದೆಂದು ಅನೇಕ ಹಿಂದೂಗಳಿಗೆ ಅನಿಸುತ್ತದೆ. ಹಾಗಾಗಿ ಜನವರಿ ೧ರಂದು ನಡೆಯುವ ಸಂಸ್ಕೃತಿಯ ನಾಶವನ್ನು ತಡೆಗಟ್ಟಲು ಹಿಂದೂಗಳು ಪ್ರಯತ್ನಿಸಲೇಬೇಕು. ಇದನ್ನು ಮುಂದಿನ ಕೃತಿಗಳಿಂದ ಪ್ರಾರಂಭಿಸೋಣ.

ಹಿಂದೂಗಳೇ, ಹೊಸವರ್ಷವನ್ನು ಯುಗಾದಿಯಂದೇ ಆಚರಿಸಿ!
ಚೈತ್ರ ಶುಕ್ಲ ಪಾಡ್ಯ (ಯುಗಾದಿ)ವು ಸೃಷ್ಟಿಯ ನಿರ್ಮಿತಿಯ ದಿನವಾಗಿದೆ. ಹಾಗಾಗಿ ಈ ದಿನ ನಿಜವಾದ ವರ್ಷಾರಂಭದ ದಿನವಾಗಿದೆ. ಆದರೆ ಪಾಶ್ಚಾತ್ಯರ ಅಂಧಾನುಕರಣೆಯಂತೆ ಯಾವುದೇ ಆಧ್ಯಾತ್ಮಿಕ ಅಡಿಪಾಯವಿಲ್ಲದ ಜನವರಿ ೧ ರಂದು ಹೊಸವರ್ಷವನ್ನು ಆಚರಿಸುವುದೆಂದರೆ ಹಿಂದೂಗಳ ಒಂದು ದಿನದ ಮತಾಂತರವೇ ಆಗಿದೆ. ಪಾಶ್ಚಾತ್ಯರ ಭೋಗವಾದದ ಉದಾತ್ತೀಕರಣ ಮತ್ತು ಧರ್ಮ ಮತ್ತು ಸಂಸ್ಕೃತಿಯ ಮೇಲಾಗುವ ಹಾನಿಯನ್ನು ತಡೆಗಟ್ಟಲು -

೧. ಜನವರಿ ೧ ರಂದು ಯಾವುದೇ ಹಿಂದೂವಿಗೆ ಹೊಸವರ್ಷದ ಶುಭಾಶಯಗಳನ್ನು ನೀಡಬೇಡಿ !
೨. ಯುಗಾದಿಯಂದು ಆದಷ್ಟು ಹೆಚ್ಚು ಹಿಂದೂಗಳಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ಎಸ್.ಎಮ್.ಎಸ್.) ಮುಂತಾದವುಗಳ ಮೂಲಕ ಹೊಸವರ್ಷದ ಶುಭಾಶಯಗಳನ್ನು ನೀಡಿ !
೩. ಈ ದಿನ ಶುಭಸಂಕಲ್ಪ ಮಾಡಿದರೆ ಅದು ಹೆಚ್ಚು ಫಲಪ್ರದವಾಗಿರುತ್ತದೆ. ಹಾಗಾಗಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಪ್ರತಿದಿನ ೧ ಗಂಟೆ ನೀಡುವ ಸಂಕಲ್ಪ ಮಾಡಿ !
೪. ಹಿಂದುತ್ವವಾದಿ ಸಂಘಟನೆ, ಸಂಘ-ಸಂಸ್ಥೆಗಳಿಗೂ ಮೇಲಿನ ವಿಷಯಗಳ ಬಗ್ಗೆ ಹಿಂದೂಗಳಿಗೆ ಪ್ರಬೋಧನೆ ಮಾಡಲು ಮತ್ತು ಕೃತಿಯಲ್ಲಿ ತರಲು ಹೇಳಿ !

ಗುರು ಗೋವಿಂದಸಿಂಹ

೧೬೯೯ರ ವೈಶಾಖ ಪಾಡ್ಯದ ದಿನ. ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.

ಕ್ಷಣಕಾಲ ಇಡೀ ಸಭೆಯಲ್ಲಿ ಸಿಡಿಲು ಬಿದ್ದಂತಾಯಿತು. ಅನಂತರ ಲಾಹೋರಿನ ದಯಾರಾಮ ಎಂಬ ಸಿಖ್ಖನು ಮುಂದೆ ಬಂದು ಕೈಜೋಡಿಸಿ, ತಲೆಬಾಗಿ ನಿಂತ. “ನನ್ನ ಈ ತಲೆ ಎಂದೆಂದಿಗೂ ನಿಮ್ಮದೇ. ತಾವು ಅದನ್ನು ಸ್ವೀಕರಿಸಿದಲ್ಲಿ  ನನ್ನ ಬದುಕು ಬಂಗಾರವಾದಂತೆ” ಎಂದ.

ಗುರು ಅವನನ್ನು ತನ್ನ ಡೇರೆಯೊಳಕ್ಕೆ ಕರೆದೊಯ್ದ. ’ಕಚ್’ ಎಂದು ಕತ್ತರಿಸಿದ ಸದ್ದಾಯಿತು. ಡೇರೆಯಿಂದ ರಕ್ತದ ಕೋಡಿ ಹರಕ್ಕೆ ಹರಿಯಿತು. ರಕ್ತ ತೊಟ್ಟಿಕ್ಕುತ್ತಿದ್ದ ಕತ್ತಿ ಮೇಲೆತ್ತಿ ಮುಂಚಿಗಿಂತ ಉಗ್ರರೂಪದಲ್ಲಿ ಗುರು ಹೊರಗೆ ಬಂದ. “ನನಗೆ ಇನ್ನೊಂದು ತಲೆ ಬೇಕಾಗಿದೆ” ಎಂದು ಕೂಗಿದ. ಆಗ ದೆಹಲಿಯ ಧರ್ಮದಾಸನೆಂಬ ಇನ್ನೊಬ್ಬ ಶಿಷ್ಯ ಮುಂದೆ ಬಂದ. ಅವನನ್ನೂ ಅದೇ ರೀತಿ ಗುರು ಕರೆದೊಯ್ದ. ಒಳಗಿನಿಂದ ಪುನಃ ಕತ್ತರಿಸಿದ ಸದ್ದು: ರಕ್ತದ ಕೋಡಿ. ಹೊರಗೆ ಬಂದ ಗುರುವಿನಿಂದ ಅದೇ ರೀತಿಯ ಕರೆ.

ಈ ಭಯಂಕರ ದೃಶ್ಯವನ್ನು ನೋಡಲಾರದೆ ಕೆಲವರು ಎದೆ ನಡುಗಿ ಓಡಿದರು. ಗುರುವಿನ ತಲೆಕೆಟ್ಟಿದೆಯೆಂದು ಕೆಲವರು ಹೋಗಿ ಗುರುವಿನ ತಾಯಿಗೆ ದೂರು ಕೊಟ್ಟರು. ಆದರೆ ಗುರು ಆದಾವುದನ್ನೂ ಲೆಕ್ಕಿಸಲಿಲ್ಲ. ಅದೇ ರೀತಿ ಇನ್ನೂ ಮೂರು ಸಲ ಕರೆಕೊಟ್ಟ. ಆಗಲೂ ಪ್ರತಿಬಾರಿಗೂ ಒಬ್ಬೊಬ್ಬ ಮುಂದೆ ಬಂದ. ದ್ವಾರಕೆಯ ಮೊಹಕಂಚಂದ್, ಬಿದರೆಯ ಸಾಹಿಬ್‌ಚಂದ್, ಜಗನ್ನಾಥ ಪುರಿಯ ಹಿಮ್ಮತ್ ಇವರೇ ಆ ಮೂವರು.

ಅನಂತರ ಗುರು ಗೋವಿಂದಸಿಂಹನು ಶಾಂತನಾದ. ಡೇರೆಯೊಳಕ್ಕೆ ಹೋಗಿ ಆ ಐದು ಶಿಷ್ಯರನ್ನು ಸೈನಿಕ ಸಮವಸ್ತ್ರದಲ್ಲಿ ಹೊರತಂದ! ಒಬ್ಬೊಬ್ಬನನ್ನು ಒಳಗಡೆ ಕರೆದೊಯ್ದಾಗಲೂ ಅವರು ಬಲಿಕೊಟ್ಟದ್ದು ಒಂದೊಂದು ಮೇಕೆಯನ್ನು! ಆ ಐದು ಜನರನ್ನು ’ಪಂಚ ಪ್ಯಾರೇ’ (ಐವರು ಪ್ರಾಣಪ್ರಿಯರು) ಎಂದು ಕರೆದು, ಅವರನ್ನು ತನ್ನ ಸೇನಾಪತಿಗಳನ್ನಾಗಿ ನೇಮಿಸಿದ. ಎಲ್ಲರೂ ಕೂಡಿ ಆಕಾಶ ಬಿರಿಯುವಂತೆ ’ಸತ್ ಶ್ರೀ ಆಕಾಲ್’ ಎಂದು ದೇವರ ಜಯಘೋಷ ಮಾಡಿದರು.
 

ಅನಂತರ ಆ ಐವರನ್ನು ಗುರುವು ತನ್ನ ಬಳಿ ಕರೆದು ಅವರಿಗೆ ತೀರ್ಥ ಕೊಟ್ಟ. ಕೊನೆಯಲ್ಲಿ ತಾನೂ ಅವರ ಮುಂದೆ ಕೈಜೋಡಿಸಿ ನಿಂತುಕೊಂಡು ಆ ’ಅಮೃತ’ವನ್ನು ತನಗೂ ನೀಡುವಂತೆ ಶಿಷ್ಯರನ್ನು ಕೇಳಿಕೊಂಡ. ಈ ವಿಚಿತ್ರ ವರ್ತನೆ ನೋಡಿ ಶಿಷ್ಯರು, “ಇದೇನು, ಗುರುವಿಗೆ ನಾವು ತೀರ್ಥ ಕೊಡುವುದೆ?” ಎಂದು ಆಶ್ಚರ್ಯದಿಂದ ಕೇಳಿದರು. ಆಗ ಗುರುವು, “ನಾನು ಈಗ ಹೊಸದೊಂದು ವೀರ ಪಂಥವನ್ನು ಸ್ಥಾಪಿಸುತ್ತಿದ್ದೇನೆ. ಇದರಲ್ಲಿ ಮೇಲು – ಕೀಳು ಯಾರೂ ಇಲ್ಲ. ಇನ್ನು ನಮ್ಮಲ್ಲಿ ಜಾತಿ-ಮತಗಳ ಭೇದವಿಲ್ಲ. ನಾವೆಲ್ಲರೂ ಸೋದರರು. ಭಗವಂತನೊಬ್ಬನೇ ನಮ್ಮ ಒಡೆಯ” ಎಂದು ಸಂದೇಶ ನೀಡಿದ ಅದನ್ನು ಕೇಳಿ ಶಿಷ್ಯರ ಸ್ಫೂರ್ತಿ ಉಕ್ಕಿ ಹರಿಯಿತು.

ಇದೇ ಸಮಯದಲ್ಲಿ ತನ್ನ ಶಿಷ್ಯರು ಸಮರ್ಪಣೆ, ಶುಚಿತ್ವ, ದೈವಭಕ್ತಿ, ಶೀಲ, ಶೌರ್ಯ ಈ ಐದು ಗುಣಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಐದು ಚಿಹ್ನೆಗಳನ್ನು ಅವರಿಗೆ ಕೊಟ್ಟ. ಪ್ರತಿಯೊಬ್ಬ ಸಿಖ್ಖನಿಗೂ ’ಸಿಂಹ’ ಎಂದು ಹೆಸರಿಟ್ಟ.

ಅದೇ ದಿನವೇ ಗುರುವಿನಿಂದ ೨೦ ಸಾವಿರ ಸ್ತ್ರೀ- ಪುರುಷರು ಈ ಹೊಸ ವೀರ ಪಂಥದ ದೀಕ್ಷೆಯನ್ನು ಪಡೆದರು. ಅವರೆಲ್ಲರನ್ನು ಉದ್ದೇಶಿಸಿ ಅವನು, “ಗುಬ್ಬಿಗಳಿಂದ ಗಿಡುಗಗಳನ್ನು ಸೋಲಿಸುವೆ; ನನ್ನ ಒಬ್ಬೊಬ್ಬ ಸೈನಿಕನು ಶತ್ರುವಿನ ಲಕ್ಷ ಸೈನಿಕರೊಡನೆ ಕಾದಾಡುವಂತೆ ಮಾಡುವೆ; ಆಗಲೇ ನನ್ನ ಹೆಸರು ಗುರು ಗೋವಿಂದಸಿಂಹ ಎಂಬುದು ನಿಜ” ಎಂದು ಸಾರಿದ.

ಲೇಖಕರು: ಹೊ.ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್

ದೇವಸ್ಥಾನಗಳನ್ನು ಧರ್ಮಜಾಗೃತಿಯ ಕೇಂದ್ರಗಳನ್ನಾಗಿ ಮಾಡೋಣ!

ದೇವಸ್ಥಾನಗಳು ಭಕ್ತರ ಶ್ರದ್ಧಾಸ್ಥಾನ ಹಾಗೂ ಸಮಾಜದ ದೇವರಕೋಣೆಯಾಗಿವೆ. ಮನಃಶಾಂತಿಯನ್ನು ಬಯಸಿ ಬರುವ ಜನರಿಗೆ ದೇವಸ್ಥಾನಗಳಲ್ಲಿರುವ ಚೈತನ್ಯದಿಂದಾಗಿ ಮನಃಶಾಂತಿಯು ಸಿಗುತ್ತದೆ. ಆದರೆ ದೇವಸ್ಥಾನ ಮತ್ತು ಅದರ ಪರಿಸರದಲ್ಲಿರುವ ಅಸಾತ್ತ್ವಿಕ ವಿಷಯಗಳಿಂದಾಗಿ ದೇವಸ್ಥಾನಗಳಿಂದ ಸಿಗಬೇಕಾದ ಚೈತನ್ಯದ ಮೇಲೆ ಆವರಣವು ಬರುತ್ತದೆ. - ಸಂಕಲನಕಾರರು:ಶ್ರೀ.ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

ದೇವಸ್ಥಾನಗಳ ನಿಜವಾದ ಉದ್ದೇಶ
ನಿಜ ಹೇಳುವುದಾದರೆ ದೇವಸ್ಥಾನಗಳು ಕೇವಲ ಮನಃಶಾಂತಿಯನ್ನು ನೀಡುವುದರೊಂದಿಗೆ ಧರ್ಮಶಿಕ್ಷಣ ಹಾಗೂ ಆಧ್ಯಾತ್ಮಿಕ ಉನ್ನತಿಯ ಮಾರ್ಗದರ್ಶಕ ಕೇಂದ್ರಗಳಾಗಬೇಕು. ಇತರ ಧರ್ಮೀಯರಿಗೆ ಇಗರ್ಜಿ ಅಥವಾ ಮಸೀದಿಗಳಿಂದ ಧರ್ಮಶಿಕ್ಷಣ ನೀಡಲಾಗುತ್ತದೆ. ದೇವಸ್ಥಾನಗಳಿಂದಲೂ ಅದೇ ರೀತಿ ಆಗಬೇಕು. ಇದುವೇ ದೇವಸ್ಥಾನಗಳ ನಿಜವಾದ ಉದ್ದೇಶವಾಗಿದೆ. ಆದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ಅಸಾತ್ತ್ವಿಕತೆಯು ಹೆಚ್ಚಾಗಿರುವುದರಿಂದ ಧರ್ಮಶಿಕ್ಷಣದ ಅಪೇಕ್ಷೆಯನ್ನು ಇಡಲಾಗುವುದಿಲ್ಲ.

ಇಂತಹ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ!!!


ಮೊದಲನೆಯ ಟಿ-ಶರ್ಟ್‌ನಲ್ಲಿ ಶ್ರೀ ಗಣೇಶನ ಚಿತ್ರವಿರುವಂತೆ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುತ್ತವೆ. ಆದರೆ ಇಂತಹ ಬಟ್ಟೆಗಳನ್ನು ನಾವು ಹಾಕಿದ ನಂತರ ಬಟ್ಟೆಯ ಮೇಲಿರುವ ದೇವತ್ವವನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ ಮಾಡುತ್ತೇವೆ, ಇದರಿಂದ ದೇವರ ಮೇಲೆ ಧೂಳು, ಕೊಳೆ ಬರುತ್ತವೆ. ನಂತರ ಬಟ್ಟೆ ಒಗೆಯಲು ಅದನ್ನು ಕಲ್ಲಿನ ಮೇಲೆ ಉಜ್ಜುತ್ತೇವೆ, ಬ್ರಶ್‌ನಿಂದ ಉಜ್ಜುತ್ತೇವೆ ಅಥವಾ ವಾಷಿಂಗ್ ಮೆಶಿನ್‌ಗೆ ಹಾಕಿ ನಮ್ಮ ದೇವರನ್ನು ನಾವೇ ತಿರುಗಿಸುತ್ತೇವೆ, ಒಣಗಿಸಲು ಡ್ರೈಯರ್‌ಗೆ ಹಾಕಿ ಕೊನೆಗೆ ಬಿಸಿಲಿನಲ್ಲಿ ನೇತಾಡಿಸುತ್ತೇವೆ. ಇದರಿಂದ ದೇವರ ಕೃಪೆಯಾಗಬಹುದೇ? ನಾವು ಹಾಕಿರುವ ಉದ್ದೇಶ ಸಫಲವಾಗಬಹುದೇ? ದೇವರಲ್ಲಿ ಭಕ್ತಿಯಿರಬೇಕು, ಧರ್ಮದ ಮೇಲೆ ಶ್ರದ್ಧೆಯಿರಬೇಕು, ಆದರೆ ಅದು ಈ ರೀತಿಯಲ್ಲಿ ಆಗಬಾರದು. ಹಾಗಾಗಿ ದಯವಿಟ್ಟು ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಎಲ್ಲ ಹಿಂದೂ ಬಾಂಧವರಿಗೂ ಈ ರೀತಿ ಮಾಡದಂತೆ ಪ್ರಬೋಧನೆ ಮಾಡಿ.

ಎರಡನೆಯ ಟಿ-ಶರ್ಟ್ ಏಕೆ ಬೇಡ? ಹೇಗೆ ದೇವರ ಚಿತ್ರವಿರುವಲ್ಲಿ ದೇವರ ತತ್ತ್ವ, ಸ್ಪಂದನ, ದೇವರ ಅಸ್ತಿತ್ವವಿರುತ್ತದೆಯೋ, ಹಾಗೆಯೇ ಭೂತ, ಪಿಶಾಚಿ, ಮಾಂತ್ರಿಕರ ಚಿತ್ರ, ತಲೆ ಬುರುಡೆ, ಎಲುಬು ಮುಂತಾದ ಚಿತ್ರಗಳಿರುವ ಬಟ್ಟೆಗಳಲ್ಲಿ ಅಂತಹ ಸ್ಪಂದನಗಳೇ ಆಕರ್ಷಿಸುತ್ತವೆ ಮತ್ತು ನಮಗೆ ತಿಳಿಯದೇ ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯೆನಿಸುವುದು, ಸಿಟ್ಟು, ದ್ವೇಷ, ಹೊಡೆದಾಟ ಮುಂತಾದ ಅನೇಕ ವಿಕಾರಗಳು ಉಂಟಾಗುತ್ತವೆ. ಇಂತಹ ಬಟ್ಟೆಗಳಲ್ಲದೇ ಯಾವುದೇ ಕ್ರೀಡಾಪಟುವಾಗಲಿ, ನಟ-ನಟಿಯರದ್ದಾಗಲಿ ಚಿತ್ರವಿರುವ ಬಟ್ಟೆಗಳನ್ನು ಹಾಕಬೇಡಿ. ಪ್ರತಿಯೊಬ್ಬ ವ್ಯಕ್ತಿಯಿಂದ ಅವನ ವ್ಯಕ್ತಿತ್ವಕ್ಕೆ ತಕ್ಕ ಸ್ಪಂದನಗಳು ಬರುವುದರಿಂದ ಇಂತಹ ಯಾವುದೇ ಬಟ್ಟೆಗಳನ್ನು ಹಾಕದೇ ಸಾತ್ತ್ವಿಕ ಬಟ್ಟೆಗಳನ್ನೇ ಧರಿಸಿ. ಯಾರಾದರೂ ಇಂತಹ ಬಟ್ಟೆಗಳನ್ನು ಧರಿಸಿದ್ದರೆ ಅವರಿಗೆ ಈ ವಿಷಯಗಳನ್ನು ತಿಳಿಸಿಹೇಳಿ.


ಸಾತ್ತ್ವಿಕ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಓದಿ, ಸನಾತನ ಸಂಸ್ಥೆಯ ಗ್ರಂಥ 'ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು?'


ಇತರ ವಿಷಯಗಳು
ಹಿಂದೂಗಳೇ, ಒಂದು ದಿನದ ಮತಾಂತರವು ನಿಮಗೆ ಒಪ್ಪಿಗೆಯಿದೆಯೇ?
ಮಾತೃಭಾಷಾಭಿಮಾನವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಡಿಪಾಯವಾಗಿದೆ!
ರಾಷ್ಟ್ರಭಕ್ತಿ' ಮತ್ತು 'ರಾಷ್ಟ್ರಾಭಿಮಾನ' ಎಂದರೇನು?
ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆ
ಹಿಂದೂ' ಎಂದರೆ ಯಾರು?
ಸ್ವಾಮಿ ವಿವೇಕಾನಂದ
ನೇತಾಜಿ ಸುಭಾಷಚಂದ್ರ ಬೋಸ್ : ಜ್ವಾಜ್ವಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ
ರಾಷ್ಟ್ರಧ್ವಜದ ಗೌರವ ಕಾಪಾಡಿ!
ಯುವಕರೇ, ಅರ್ಥಹೀನ 'ವೆಲೆಂಟೈನ ಡೇ' ಬೇಡ
ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನೀ…
ಗೌರವಯುತ ಜ್ಞಾನಕೇಂದ್ರ : ನಾಲಂದಾ
ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸ!
ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು?
ಗೋಮೂತ್ರ - ಆರೋಗ್ಯವರ್ಧಕ ಹೇಗೆ?
ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

Dharma Granth

ಸೂರ್ಯನಮಸ್ಕಾರ ಮಾಡುವ ಪದ್ಧತಿ

ಸೂರ್ಯನಮಸ್ಕಾರವು ಹತ್ತು ಆಸನಗಳನ್ನು ಒಳಗೊಂಡಿದೆ.
ಪ್ರತಿಸಲ ಸೂರ್ಯನಮಸ್ಕಾರವನ್ನು ಮಾಡುವ ಮೊದಲು "ಓಂ ಮಿತ್ರಾಯ ನಮಃ" ದಿಂದ ಎಲ್ಲ ಹದಿಮೂರು ಜಪಗಳನ್ನೂ ಮಾಡಬೇಕು.


ಸೂರ್ಯನಮಸ್ಕಾರ ಮಾಡುವಾಗ ಪಠಿಸಬೇಕಾದ ನಾಮಗಳು

ಓಂ ಮಿತ್ರಾಯ ನಮಃ
ಓಂ ರವಯೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪೂಷ್ಣೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚ್ಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

ಆಸನ ೧

ಪ್ರಾರ್ಥನಾಸನ : ಎರಡೂ ಕಾಲುಗಳು ಒಂದಕ್ಕೊಂದು ಕೂಡಿಕೊಂಡಿರಲಿ, ಎರಡೂ ಹಸ್ತಗಳನ್ನು ಜೋಡಿಸಿ ನಮಸ್ಕಾರ ಮಾಡುವ ರೀತಿಯಲ್ಲಿ ಎದೆಯ ಮಟ್ಟಕ್ಕೆ ತರಬೇಕು. ಬೆನ್ನು ಮತ್ತು ಕತ್ತು ನೇರವಾಗಿರಲಿ ಹಾಗೂ ನೇರವಾಗಿ ಎದುರಿಗೆ ನೋಡುತ್ತಿರಬೇಕು.
ಪ್ರಾಣಾಯಾಮ : ಕುಂಭಕ
ಲಾಭ : ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಆಸನ ೨

ಆಸನ : ಪ್ರಾರ್ಥನಾಸನದಿಂದ ಮುಂದುವರಿಯುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಬೆನ್ನನ್ನು ಹಿಗ್ಗಿಸುವ ರೀತಿಯಲ್ಲಿ ಹಿಂಬದಿಗೆ ಸ್ವಲ್ಪ ಬಾಗಬೇಕು. ಹಸ್ತಗಳನ್ನು ಜೋಡಿಸಿರಬೇಕು ಮತ್ತು ಮೊಣಕೈಗಳನ್ನು ಮಡಚಬಾರದು. ತಲೆಯನ್ನು ಎರಡೂ ತೋಳುಗಳಮಧ್ಯದಲ್ಲಿರಿಸಿ ಮೇಲಕ್ಕೆ ನೋಡುತ್ತಾ ಸೊಂಟದಿಂದ ಸ್ವಲ್ಪ ಹಿಂದಕ್ಕೆ ಬಾಗಬೇಕು.
ಪ್ರಾಣಾಯಾಮ : ಪೂರಕ (ಮೊದಲ ಆಸನದಿಂದ ಎರಡನೆಯ ಆಸನಕ್ಕೆ ಹೋಗುವಾಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು)
ಲಾಭ : ಎದೆಯ ಮಾಂಸಖಂಡಗಳನ್ನು ನೇರವಾಗಿಸುತ್ತದೆ ಮತ್ತು ಉಸಿರಾಟವು ಯೋಗ್ಯರೀತಿಯಲ್ಲಿ ಆಗುವಂತೆ ಮಾಡುತ್ತದೆ.

ಆಸನ ೩

ಉತ್ಥಾನಾಸನ : ಎರಡನೆಯ ಆಸನದಿಂದ ಮುಂದುವರಿಯುತ್ತಾ ಕೈಗಳನ್ನು ಮೇಲಕ್ಕೆ ಎತ್ತಿರುವಂತೆಯೇ ಮುಂದಕ್ಕೆ ಬಾಗುತ್ತಾ ಕೈಗಳನ್ನು ಪಾದಗಳ ಅಕ್ಕಪಕ್ಕದಲ್ಲಿ ನೆಲಕ್ಕೆ ಊರಬೇಕು. ಮೊಣಕಾಲು ನೇರವಾಗಿರಬೇಕು ಮತ್ತು ತಲೆಯನ್ನು ಮೊಣಕಾಲುಗಳಿಗೆತಾಗಿಸಲು ಪ್ರಯತ್ನಿಸಬೇಕು.
ಪ್ರಾಣಾಯಾಮ : ರೇಚಕ (ಆಸನ ೨ ರಿಂದ ೩ ಕ್ಕೆ ಬರುವಾಗ ನಿಧಾನವಾಗಿ ಉಸಿರನ್ನು ಹೊರಗೆ ಹಾಕಬೇಕು)
ಲಾಭ : ಸೊಂಟ ಮತ್ತು ಬೆನ್ನು ಮೂಳೆಯನ್ನು ಮೆತುವಾಗಿಸುತ್ತದೆ. ಮಾಂಸಖಂಡಗಳು ಬಲಗೊಳ್ಳೂತ್ತವೆ ಮತ್ತು ಯಕೃತ್ತಿನ ಕಾರ್ಯಕ್ಕೆ ಸಹಾಯಕಾರಿಯಾಗುತ್ತದೆ.

ಆಸನ ೪

ಏಕಪಾದಪ್ರಸರಣಾಸನ : ಮೂರನೆಯ ಆಸನದಿಂದ ಮುಂದುವರಿದು ಕೆಳಗೆ ಕುಳಿತುಕೊಳ್ಳುತ್ತಾ ಒಂದು ಕಾಲನ್ನು ಹಿಂದಕ್ಕೆ ನೇರವಾಗಿ ಚಾಚಬೇಕು. ಹಸ್ತಗಳು ಕಾಲುಗಳ ಎರಡೂ ಕಡೆಗಳಲ್ಲಿ ನೆಲಕ್ಕೆ ಊರಿರಬೇಕು. ಇನ್ನೊಂದು ಕಾಲನ್ನು ಮಡಚಿರಬೇಕು.ಎದೆಯ ಭಾರವನ್ನು ಮುಂದಿರುವ ಮೊಣಕಾಲಿನಮೇಲೆ ಹಾಕಬೇಕು, ಕಣ್ಣುಗಳ ದೃಷ್ಟಿಯು ನೇರವಾಗಿ ಮೇಲಕ್ಕೆ ಇರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಕಾಲುಗಳ ಮಾಂಸಖಂಡಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಮತ್ತು ಕತ್ತಿನ ಮಾಂಸಗಳು ಮೆತುವಾಗುತ್ತವೆ.


ಆಸನ ೫

ಚತುರಾಂಗ ದಂಡಾಸನ : ಈಗ ನಿಧಾನವಾಗಿ ಮಡಚಿರುವ ಕಾಲನ್ನು ಹಿಂದಕ್ಕೆ ಚಾಚಿ ಈಗಾಗಲೇ ಚಾಚಿರುವ ಕಾಲಿನ ಪಕ್ಕದಲ್ಲಿಡಬೇಕು. ಮೊಣಕಾಲುಗಳು ಸಮಾನಾಂತರವಾಗಿರಲಿ. ಇಡೀ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲಿರಲಿ.ಕಾಲು, ಸೊಂಟ ಮತ್ತು ತಲೆ ಒಂದೇ ರೇಖೆಯಂತೆ ನೇರವಾಗಿರಲಿ.ನೇರವಾಗಿ ನೆಲವನ್ನು ನೋಡುತ್ತಿರಬೇಕು. (ಈ ಆಸನಕ್ಕೆ ಚತುರಾಂಗದಂಡಾಸನವೆಂದು ಏಕೆ ಕರೆಯುತ್ತಾರೆಂದರೆ ಶರೀರದ ಭಾರವು ಹಸ್ತ ಮತ್ತು ಕಾಲುಗಳ ಹೆಬ್ಬೆರಳುಗಳ ಮೇಲೆ ಇರುತ್ತದೆ)
ಪ್ರಾಣಾಯಾಮ : ರೇಚಕ
ಲಾಭ : ತೋಳುಗಳ ಬಲವೃದ್ಧಿಯಾಗುತ್ತದೆ ಮತ್ತು ದೇಹದ ಆಕೃತಿಯು ಸರಿಯಾಗಿ ಬೆಳವಣಿಗೆಯಾಗುತ್ತದೆ.

ಆಸನ ೬

ಅಷ್ಟಾಂಗಾಸನ : ಎದೆಯನ್ನು ನೆಲದಕಡೆಗೆ ತರುತ್ತಾ ಎರಡೂ ಮೊಣಕೈಗಳನ್ನು ಮಡಚಬೇಕು. ಮುಂದೆ ಕೊಟ್ಟಿರುವ ಎಂಟು ಅವಯವಗಳು ನೆಲಕ್ಕೆ ತಾಗಬೇಕು.ಹಣೆ, ಎದೆ, ಎರಡೂ ಹಸ್ತಗಳು, ಎರಡೂ ಮೊಣಕಾಲುಗಳು ಮತ್ತು ಕಾಲಿನ ಹೆಬ್ಬೆರಳುಗಳು. (ಈಆಸನದಲ್ಲಿ ದೇಹದ ಎಂಟು ಅವಯವಗಳು ನೆಲವನ್ನು ಸ್ಪರ್ಷಿಸುತ್ತವೆಯಾದ್ದರಿಂದ ಇದಕ್ಕೆ ಅಷ್ಟಾಂಗಾಸನವೆಂದು ಕರೆಯುತ್ತಾರೆ)
ಪ್ರಾಣಾಯಾಮ : ಕುಂಭಕ (ಬಹಿರ್‌ಕುಂಭಕ)
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತದೆ.

ಆಸನ ೭

ಭುಜಂಗಾಸನ : ಈಗ ಸೊಂಟದ ಮೇಲ್ಭಾಗವನ್ನು ಮೇಲಕ್ಕೆತ್ತಬೇಕು. ಹಿಂದಕ್ಕೆ ಸ್ವಲ್ಪಬಾಗಬೇಕು ಮತ್ತು ಹಿಂದೆ ನೋಡಬೇಕು. ಕಾಲ್ಬೆರಳುಗಳು ಮತ್ತು ತೊಡೆಗಳು ನೆಲಕ್ಕೆ ಸ್ಪರ್ಷಿಸುತ್ತಿರುವಂತೆ ನೋಡಿಕೊಳ್ಳಬೇಕು ಮತ್ತು ಬೆನ್ನು ಅರ್ಧವೃತ್ತಾಕಾರದಲ್ಲಿ ಬಾಗಿದಸ್ಥಿತಿಯಲ್ಲಿರಬೇಕು.
ಪ್ರಾಣಾಯಾಮ : ಪೂರಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟ ಮೆತುವಾಗುತ್ತವೆ ಮತ್ತು ಮಾಂಸಖಂಡಗಳು ಬಲಶಾಲಿಯಾಗುತ್ತವೆ.( ೫, ೬ ಮತ್ತು ೭ನೆಯ ಆಸನಗಳು ಒಟ್ಟಾಗಿ ತೋಳುಗಳನ್ನು ಬಲಶಾಲಿಯನ್ನಾಗಿಸುತ್ತವೆ ಮತ್ತು ಹೊಟ್ಟೆ ಹಾಗೂ ಸೊಂಟದ ಸುತ್ತಲಿನ ಕೊಬ್ಬನ್ನುಕರಗಿಸುತ್ತವೆ)

ಆಸನ ೮

ಅಧೋಮುಖ ಸ್ವನಾಸನ : ಈಗ ಸೊಂಟವನ್ನು ಮೇಲಕ್ಕೆ ಎತ್ತಬೇಕು. ಕೈಗಳು ನೇರವಾಗಿ ಚಾಚಿಕೊಂಡಿರಲಿ,ಹಸ್ತಗಳು ಮತ್ತು ಪಾದಗಳನ್ನು ನೆಲಕ್ಕೆ ಊರಬೇಕು.ಗದ್ದವನ್ನು ಎದೆಗೆ ತಾಗಿಸುವ ಪ್ರಯತ್ನ ಮಾಡಬೇಕು
ಪ್ರಾಣಾಯಾಮ : ರೇಚಕ
ಲಾಭ : ಬೆನ್ನು ಮೂಳೆ ಮತ್ತು ಸೊಂಟದ ಮಾಂಸಖಂಡಗಳಿಗೆ ಉಪಯುಕ್ತ.

ಆಸನ ೯

ಏಕಪಾದ ಪ್ರಸರಣಾಸ : ನಾಲ್ಕನೆಯ ಆಸನದಂತೆ ಮಾಡುವುದು ಆದರೆ ಇಲ್ಲಿ ವಿರುದ್ಧ ಕಾಲು ಹಿಂದೆ ಚಾಚಿಕೊಂಡಿರುತ್ತದೆ.
ಪ್ರಾಣಾಯಾಮ : ಪೂರಕ.

ಆಸನ ೧೦

ಅಷ್ಟಾಂಗಾಸನ : ಮೂರನೆಯ ಆಸನದಂತೆ ಮಾಡಬೇಕು (ಉತ್ಥಾನಾಸನ).
ಪ್ರಾಣಾಯಾಮ : ರೇಚಕ
ಇದರ ನಂತರ ನಿಧಾನವಾಗಿ ಮೊದಲನೆಯ ಆಸನ ಎಂದರೆ ಪ್ರಾರ್ಥನಾಸಕ್ಕೆ ಬರಬೇಕು. ಈ ರೀತಿ ಮಾಡಿದಾಗ ಒಂದು ಸೂರ್ಯನಮಸ್ಕಾರ ಆಯಿತು. ಈ ರೀತಿಯಾಗಿ ಪ್ರತಿದಿನ ಹನ್ನೆರಡುಸಲ ಮಾಡಬೇಕು.

ಸೂಚನೆ : ಕತ್ತಿನಲ್ಲಿ ಸಮಸ್ಯೆ ಇರುವವರು ಸೂರ್ಯನಮಸ್ಕಾರ ಮಾಡುವ ಮೊದಲು ವೃತ್ತಿಪರ ಶಿಕ್ಷಕರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')

ಇತರ ಲೇಖನಗಳು
ವಾಸ್ತು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ದೇವಸ್ಥಾನದಲ್ಲಿ ವಿವಾಹವನ್ನು ಮಾಡಬೇಡಿ!

ಹಿಂದೂ ಸಂಸ್ಕೃತಿಯಲ್ಲಿ ವಿವಾಹಕ್ಕೆ ಹದಿನಾರು ಸಂಸ್ಕಾರಗಳಲ್ಲಿನ ಕೊನೆಯ ಸಂಸ್ಕಾರದ ಮಹತ್ವವಿದೆ. ಆದುದರಿಂದ ಹಿಂದಿನ ಕಾಲದಲ್ಲಿ ಹಿಂದೂಗಳು ವಿವಾಹಗಳನ್ನು ಧಾರ್ಮಿಕ ಪದ್ಧತಿಯಿಂದ ಆಚರಿಸುತ್ತಿದ್ದರು. ಅಲ್ಲದೇ ವಧು-ವರರಿಗೆ ದೇವಸ್ಥಾನಗಳಲ್ಲಿನ ಚೈತನ್ಯದ ಲಾಭವು ಸಿಗಬೇಕೆಂದು ವಿವಾಹ ಸಂಸ್ಕಾರಗಳನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿತ್ತು; ಆದರೆ ಇತ್ತೀಚೆಗೆ ಹಿಂದೂಗಳಿಗೆ ವಿವಾಹವೆಂದರೆ ಒಂದು ಮೋಜು ಮಾಡುವ ಮನೋರಂಜನೆಯ ಕಾರ್ಯಕ್ರಮವಾಗಿದೆ ಎಂದೆನಿಸುತ್ತಿದೆ. ಆದುದರಿಂದ ವಿವಾಹದ ವಿಧಿಗಳು ನಡೆಯುತ್ತಿರುವಾಗ ಅಲ್ಲಿ ಸೇರಿದ ಜನರು ಹರಟೆ ಹೊಡೆಯುವುದರಲ್ಲಿ ಮಗ್ನರಾಗಿರುತ್ತಾರೆ. ಅಲ್ಲದೇ ಅಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾರೆ ಮತ್ತು ಬ್ಯಾಂಡ್‌ಗಳೂ ಸಹ ಇರುತ್ತವೆ. ಈ ಗಲಾಟೆಯಿಂದಾಗಿ ವಿಧಿಗಳಲ್ಲಿನ ಸಾತ್ತ್ವಿಕತೆಯು ಉಳಿಯುವುದಿಲ್ಲ, ಬದಲಾಗಿ ಅದು ಕಡಿಮೆಯಾಗುತ್ತದೆ. ಕೆಲವರು ವಧು-ವರರು ಪರಸ್ಪರರ ಕೊರಳಿಗೆ ಮಾಲೆಯನ್ನು ಹಾಕಿದ ನಂತರ ಹೊರಗೆ ಪಟಾಕಿಗಳನ್ನು ಸಿಡಿಸುತ್ತಾರೆ. ಇದರಿಂದಾಗಿಯೂ ಅಲ್ಲಿನ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ಇಂತಹ ಧಾರ್ಮಿಕವಲ್ಲದ ಮತ್ತು ಸಾಮಾಜಿಕ ಪದ್ಧತಿಯ ವಿವಾಹವನ್ನು ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಿದರೆ ದೇವಸ್ಥಾನದ ಚೈತನ್ಯದ ಲಾಭವು ಯಾರಿಗೂ ಸಿಗುವುದಿಲ್ಲ. ಇದರ ಬದಲಾಗಿ ದೇವಸ್ಥಾನದಲ್ಲಿ ರಜ-ತಮವು ಹರಡುತ್ತದೆ. ಆದುದರಿಂದ ಹಿಂದೂಗಳೇ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿಕೊಂಡು ಅಲ್ಲಿ ವಿವಾಹ ಸಂಸ್ಕಾರವನ್ನು ನೆರವೇರಿಸಿರಿ. ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದ ಹೊರಗೆ ಆಚರಿಸಿರಿ. - ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆ, ಸನಾತನ ಸಂಸ್ಥೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ವಿವಾಹ ಸಂಸ್ಕಾರ')

ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!


ಅಗ್ರಪೂಜೆಯ ದೇವತೆಯಾಗಿರುವ ಗಣಪತಿಯು ಹಿಂದೂಸ್ಥಾನಕ್ಕಷ್ಟೇ ಅಲ್ಲದೇ ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆಯಾಗಿದ್ದರು. ಹಿಂದೆ ಇಸ್ಲಾಂ ರಾಷ್ಟ್ರಗಳಲ್ಲಿಯೂ ಗಣಪತಿಯನ್ನು ಪೂಜಿಸಲಾಗುತ್ತಿದ್ದ ಪುರಾವೆಗಳು ಸಿಕ್ಕಿವೆ. ಕಾಬೂಲನಿಂದ ನೇರ ಕ್ಯಾಸ್ಪಿಯನ್ ಸಮುದ್ರದ ವರೆಗೆ ಭಾರತೀಯ ಸಂಸ್ಕೃತಿ ಪಸರಿಸಿದ್ದರಿಂದ ಆ ಸ್ಥಳಗಳಲ್ಲಿ ಹಿಂದೂ ದೇವಸ್ಥಾನಗಳ ಅಸ್ತಿತ್ವವಿರುವುದು ಸ್ವಾಭಾವಿಕವಾಗಿದೆ. ಹಿಂದೂ ದೇವತೆಗಳಲ್ಲಿ ಶಿವ ಮತ್ತು ಶ್ರೀ ಗಣೇಶನ ಸ್ಥಾನ ಉಚ್ಚವಾಗಿರುವುದರಿಂದ ಇವೆರಡು ದೇವತೆಗಳ ಮೂರ್ತಿಗಳು ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತವೆ.

ಜಗತ್ತಿನ ೬೬ ದೇಶಗಳಲ್ಲಿ ಯಾವುದಾದರೊಂದು ರೂಪದಲ್ಲಿ ಶ್ರೀ ಗಣೇಶ ದೇವಸ್ಥಾನಗಳು ಮತ್ತು ಅದರಲ್ಲಿನ ಶ್ರೀ ಗಣೇಶಮೂರ್ತಿಗಳಿವೆ. ಅದರ ಕೆಲವು ಉದಾಹರಣೆಗಳು -

೧. ಅಫ್ಘಾನಿಸ್ತಾನ
ಇಲ್ಲಿ ಹಿಂದೂ ರಾಜರು ಅನೇಕ ವರ್ಷಗಳ ಕಾಲ ರಾಜ್ಯವಾಳಿದರು. ಈ ಕಾಲಖಂಡದಲ್ಲಿ ಕೇವಲ ದೊಡ್ಡ ದೇವಸ್ಥಾನಗಳಲ್ಲದೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಂದೂ ದೇವತೆಗಳ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಅದರಲ್ಲಿ ಶ್ರೀ ಗಣೇಶ ಮೂರ್ತಿಗಳ ಸಂಖ್ಯೆಯು ಎಲ್ಲಕ್ಕಿಂತ ಹೆಚ್ಚಿದೆ. ಕಾಬೂಲನಲ್ಲಿನ ಪ್ರಖ್ಯಾತ ಸಂಗ್ರಹಾಲಯದಲ್ಲಿ ಶ್ರೀ ಗಣೇಶನಿಗೆ ಸಂಬಂಧಿಸಿದ ಮೂರ್ತಿಗಳ ಸಂಖ್ಯೆಯು ೬೦ ರಷ್ಟಿದೆ.

೧ಅ. ತಾಲಿಬಾನಿನ ರಾಜ್ಯಾಡಳಿತದಲ್ಲಿ ಕಳುವಾಗಿದ್ದ ಶ್ರೀ ಗಣೇಶನ ಗುಪ್ತರ ಕಾಲದ ಸುಂದರ ಮೂರ್ತಿ!: ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಮೂರ್ತಿಗಳ ವಿಧ್ವಂಸ ಪ್ರಾರಂಭಿಸಿದಾಗ ಅಲ್ಲಿ ಶ್ರೀ ಗಣೇಶನ ಗುಪ್ತರ ಕಾಲದ ಎರಡು ಮೂರ್ತಿಗಳು ಅಸ್ತಿತ್ವದಲ್ಲಿದ್ದವು. ಅದರಲ್ಲಿನ ಒಂದು ಮೂರ್ತಿಯ ಕಳುವಾಗಿ ಮಾರಾಟವಾಯಿತು. ಆ ಮೂರ್ತಿಯಲ್ಲಿನ ಶ್ರೀಗಣೇಶನು ಎತ್ತರ ಮತ್ತು ನಾಲ್ಕು ಕೈಗಳುಳ್ಳವನಿದ್ದನು. ಅವನ ನಾಲ್ಕು ಕೈಗಳ ಪೈಕಿ ಒಂದು ಕೈಯಲ್ಲಿ ಕಮಲ ಮತ್ತು ಎರಡನೇ ಕೈಯಲ್ಲಿ ಮೋದಕ ವಿತ್ತು. ಜಗತ್ತಿನಲ್ಲಿ ಅನೇಕ ಸುಂದರ ಶ್ರೀ ಗಣೇಶನ ಮೂರ್ತಿಗಳಿದ್ದವು; ಆದರೆ ಈ ಮೂರ್ತಿಯ ಸೌಂದರ್ಯ ಸೊಬಗು ಬೇರೆಯೇ ಆಗಿತ್ತೆಂದು ಹೇಳಲಾಗುತ್ತದೆ. ಶ್ರೀ ಗಣೇಶನು ಪ್ರತಿಯೊಂದು ಸ್ಥಿತಿಯಲ್ಲಿ ಮತ್ತು ಭಂಗಿಯಲ್ಲಿ ಸುಂದರವಾಗಿರುತ್ತಾನೆ ಎಂದು ಹೇಳಲಾಗುತ್ತಿದ್ದರೂ ಮೇಲೆ ಉಲ್ಲೇಖಿಸಿದ ಶ್ರೀ ಗಣೇಶನ ಮೂರ್ತಿಯಂತಹ ಸೌಂದರ್ಯ ಇತರ ಎಲ್ಲಿಯೂ ನೋಡಲು ದೊರಕುವುದಿಲ್ಲ. ‘ಯಾರು ಈ ಮೂರ್ತಿಯನ್ನು ನೋಡುತ್ತಿದ್ದರೋ ಅವರು ಆ ಮೂರ್ತಿಯನ್ನು ನೋಡುವುದರಲ್ಲಿ ಮಂತ್ರಮುಗ್ದರಾಗುತ್ತಿದ್ದರು’ ಎಂದು ಈ ಮೂರ್ತಿಯ ಬಗ್ಗೆ ಹೇಳಲಾಗುತ್ತದೆ.

೧ಆ. ೨೦೦೧ ರಲ್ಲಿ ತಾಲಿಬಾನಿಗಳಿಂದ ಪೀರರತನನಾಥದಲ್ಲಿ ‘ಮಹಾವಿನಾಯಕ’ ಹೆಸರಿನ ಶ್ರೀ ಗಣೇಶ ಮೂರ್ತಿಯ ವಿಧ್ವಂಸ!: ಪೀರರತನ ನಾಥದಲ್ಲಿ ‘ಮಹಾವಿನಾಯಕ’ ಎಂಬ ಹೆಸರಿನ ಎರಡನೇ ಶ್ರೀ ಗಣೇಶ ಮೂರ್ತಿಯಿದೆ. ಈ ಶ್ರೀ ಗಣೇಶನು ದ್ವಿಭುಜ ಮತ್ತು ಬಲಮುರಿಯಾಗಿದ್ದನು. ಈ ಐತಿಹಾಸಿಕ ಮೂರ್ತಿಯ ಛಾಯಾಚಿತ್ರವು ಪುಣೆಯ ಬುಧವಾರಪೇಠೆಯಲ್ಲಿರುವ ಪ್ರಸಿದ್ಧ ಐತಿಹಾಸಿಕ ಸಂಶೋಧಕ ಶ್ರೀ.ಸಂಜಯ ಗೊಡಬೊಲೆಯವರಿಂದ ದೊರೆಯಿತು. ಶ್ರೀಗಣೇಶಮೂರ್ತಿಯ ಎರಡು ಕೈಗಳನ್ನು ಮುರಿದಿರುವುದು ಈ ಛಾಯಾಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೀ ಗಣೇಶ ಮೂರ್ತಿಯ ಎರಡು ಕೈಗಳನ್ನು ಮುರಿದು ತಾಲಿಬಾನಿಯರಿಗೆ ಸಮಾಧಾನವಾಗಿಲ್ಲ ಎಂದೇನೋ ೨೦೦೧ ರಲ್ಲಿ ತಾಲಿಬಾನ ಮುಖಂಡ ಮುಲ್ಲಾ ಓಮರನ ಆದೇಶದಂತೆ ಈ ಮೂರ್ತಿಯೊಂದಿಗೆ ಎಲ್ಲ ಮೂರ್ತಿಗಳನ್ನು ನಾಶ ಮಾಡಲಾಯಿತು!

೨. ತುರ್ಕಸ್ಥಾನ
ಕೇವಲ ಅಫ್ಘಾನಿಸ್ತಾನದಲ್ಲಷ್ಟೇ ಅಲ್ಲ ಇತರ ಇಸ್ಲಾಂ ರಾಷ್ಟ್ರಗಳಲ್ಲಿಯೂ ಉತ್ಖನನದ ಸಮಯದಲ್ಲಿ ಶ್ರೀ ಗಣೇಶಮೂರ್ತಿಗಳು ದೊರಕುತ್ತವೆ. ತುರ್ಕಸ್ಥಾನದ ಅಂಕಾರಾ ಪಟ್ಟಣದ ಸಮೀಪದಲ್ಲಿ ಉತ್ಖನನದಲ್ಲಿ ದೊರಕಿದ ಮೂರ್ತಿಗಳಲ್ಲಿ ಶ್ರೀಗಣೇಶ ಮೂರ್ತಿಯು ಲುಂಗಿ ಧರಿಸಿ ಕುಳಿತಿರುವ ಮತ್ತು ಮಸ್ತಕದಲ್ಲಿ ಗೊಂಡೆಯಿರುವ ತುರ್ಕಿ ಟೊಪ್ಪಿಗೆ ಧರಿಸಿದ ತುರ್ಕಿ ಉಡುಪಿನಲ್ಲಿದೆ.

೩. ಬಲೂಚಿಸ್ಥಾನ (ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ವಿಭಜಿಸಲಾದ ಭಾಗ)
ಇಲ್ಲಿ ದೊರೆತ ಗಣೇಶ ಮೂರ್ತಿಯು ಬಲುಚಿಯ ಉಡುಪಿನಲ್ಲಿದೆ. ಶ್ರೀ ಗಣೇಶಮೂರ್ತಿಯ ಮಸ್ತಕದಲ್ಲಿ ಬಲುಚಿ ಪಗಡಿಯಿದೆ ಮತ್ತು ಅವನ ಸುತ್ತಲಿನ ಸ್ತ್ರೀಯರು ಪರಂಪರೆಯುಳ್ಳ ಬಲುಚಿ ಲಂಗಗಳನ್ನು ಧರಿಸಿ ಗಣೇಶನ ಆರತಿ ಮಾಡುತ್ತಿರುವಂತೆ ಕಾಣಿಸುತ್ತಾರೆ.

೪. ಇಂಡೋನೇಷ್ಯಾ
ಇದು ಶ್ರೀ ಗಣೇಶಮೂರ್ತಿಯ ವಿಡಂಬನೆಯಾಗದೇ ಇರುವ ಏಕೈಕ ಇಸ್ಲಾಂ ದೇಶವಾಗಿದೆ. ಇಂಡೋನೇಷ್ಯಾದ ಜನತೆಯು ಹಿಂದೂ ದೇವತೆಗಳಿಗೆ ರಾಷ್ಟ್ರೀಯ ಸಾಂಸ್ಕೃತಿಕ ಸ್ಮಾರಕದ ಪ್ರತೀಕವೆನ್ನುತ್ತಾರೆ. ಅವು ಅವರ ಶ್ರದ್ಧೆಯ ದೇವತೆಗಳಾಗಿವೆ. ಅದರಿಂದ ಅವರು ಅವುಗಳನ್ನು ಸಂರಕ್ಷಿಸುವುದೇ ರಾಷ್ಟ್ರೀಯ ಕರ್ತವ್ಯವೆಂದು ತಿಳಿಯುತ್ತಾರೆ. ಇಂಡೋನೇಷ್ಯಾದಲ್ಲಿನ ನಾಣ್ಯ, ನೋಟುಗಳಲ್ಲಿ ಗಣಪತಿಯ ಚಿತ್ರ ಕಾಣುತ್ತದೆ.
‘ನೋಟುಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸುವೆವು ಎಂದು ಇಸ್ಲಾಂ ಪಂಥದ ಇಂಡೋನೇಷ್ಯಾ ಅಭಿಮಾನದಿಂದ ಹೇಳುತ್ತದೆ; ಆದರೆ ಹಿಂದೂ ದೇವತೆಗಳನ್ನು ಪೂಜಿಸಲಾಗುವ ಭಾರತದಲ್ಲಿ ಹೀಗೇಕೆ ಆಗಲು ಸಾಧ್ಯವಿಲ್ಲ?’

೫. ಏಷ್ಯಾದ ರಾಷ್ಟ್ರಗಳು
೫ಅ. ರಷ್ಯಾ: ತಾಷ್ಕಂದ ಮತ್ತು ಬಾಕು ಎಂಬಲ್ಲಿನ ದೇವಸ್ಥಾನದಲ್ಲಿ ಇಂದಿಗೂ ಶ್ರೀ ಗಣೇಶಮೂರ್ತಿಯ ಅವಶೇಷಗಳು ಕಂಡುಬರುತ್ತವೆ. ಇಲ್ಲಿ ಶಿವಮಂದಿರಗಳು ಹೆಚ್ಚಿನ ಪ್ರಮಾಣದಲ್ಲಿದ್ದರೂ ಅಲ್ಲಿ ಶಿವ-ಪಾರ್ವತಿಯೊಂದಿಗೆ ಶ್ರೀ ಗಣೇಶ ಮೂರ್ತಿಯೂ ಕಾಣುತ್ತದೆ.

೫ಆ. ದಕ್ಷಿಣ-ಪೂರ್ವ ಏಷ್ಯಾದಲ್ಲಿನ ದೇಶಗಳು: ಇಲ್ಲಿ ಶ್ರೀ ಗಣೇಶನು ಅಲ್ಲಿನ ಪಾರಂಪರಿಕ ಕುರ್ತಾ ಮತ್ತು ಟೊಪ್ಪಿಯ ಉಡುಪಿನಲ್ಲಿ ವಿರಾಜಮಾನನಾಗಿರುವುದು ಕಂಡುಬರುತ್ತವೆ. ವಿಯೆಟ್ನಾಮ್, ಚೀನಾ, ಜಪಾನ, ಮಲೇಷ್ಯಾ ಮತ್ತು ಕೋರಿಯಾ ಈ ದೇಶಗಳಲ್ಲಿ ಇಂದಿಗೂ ಶ್ರೀ ಗಣೇಶ ಮೂರ್ತಿಗಳು ಉಪಲಬ್ಧವಾಗಿವೆ. ಚೀನಾ ನಿಲುವಂಗಿ ಧರಿಸಿದ ಶ್ರೀ ಗಣೇಶಮೂರ್ತಿ ಅತ್ಯಂತ ಮನಮೋಹಕವಾಗಿದೆ.

೫ಇ. ಮಧ್ಯ ಏಷ್ಯಾ: ಇಲ್ಲಿ ನಡೆದ ಸಂಶೋಧನೆಯಲ್ಲಿ ಸಂಶೋಧಕರಿಗೆ ಒಂದು ದೊಡ್ಡ ತೈಲಚಿತ್ರವು ದೊರೆಯಿತು. ಆ ಚಿತ್ರದ ಶೈಲಿಯು ‘ಮನಿಚಿಯನ್’ ಆಗಿದೆ. ಈ ಚಿತ್ರವು ಶ್ರೀ ಗಣೇಶನದ್ದಾಗಿದ್ದು, ಇದು ಈ ರೀತಿಯ ಏಕೈಕ ಉಪಲಬ್ಧ ಚಿತ್ರವಾಗಿದೆ. ಅದನ್ನು ಸದ್ಯ ಬರ್ಲಿನ್ (ಜರ್ಮನಿ) ನಲ್ಲಿನ ಒಂದು ಸಂಗ್ರಹಾಲಯದಲ್ಲಿ ಇಡಲಾಗಿದೆ. - ಮುಝಫ್ಫರ ಹುಸೈನ (ದೈ. ಲೋಕಸತ್ತಾ (೧೯.೮.೨೦೦೧))

(ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ"ದಲ್ಲಿ ಮುದ್ರಿತ ಲೇಖನ)

ಧನುರ್ಮಾಸ

ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ ದೇವಾಲಯಗಳಲ್ಲೂ ಆಚರಿಸಲಾಗುವುದು.

ಈ ಕಾಲದಲ್ಲಿ ಧನು ರಾಶಿಯಲ್ಲಿ ರವಿ ಸ೦ಚರಿಸುವ ಮಾಸವಾದ್ದರಿ೦ದ ಧನುರ್ಮಾಸ ಎನ್ನುವರು. ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ತಾನು ಎಲ್ಲೆಲ್ಲಿ ಇದ್ದೇನೆ೦ದೂ ವಿವರಿಸುತ್ತಾ "ಮಾಸಾನಾ೦ ಮಾರ್ಗಶೀರ್ಷೋ" ಎ೦ದಿದ್ದಾನೆ. "ಅ೦ದರೆ ತಿ೦ಗಳುಗಳಲ್ಲಿ ಮಾರ್ಗಶೀರ್ಷ, ನಾನು ಋತುಗಳಲ್ಲಿ ವಸ೦ತ ಋತು" ಎ೦ದಿದ್ದಾನೆ. ಹಾಗಾಗಿ ಮಾರ್ಗಶೀರ್ಷ ತಿ೦ಗಳಿಗೆ ಅಷ್ಟು ಪ್ರಾಮುಖ್ಯತೆ.

ಪಂಚಾಂಗದ ಮೂಲ ಮಾಹಿತಿ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.

ತಿಥಿ
ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನ ಪಾಡ್ಯದಿಂದ ಆರಂಭಿಸಿ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷವೆಂದೂ, ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತಾ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ತಿಥಿಗಳು ಒಟ್ಟು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ.

ಸಮರ್ಥ ಭಾರತಕ್ಕಾಗಿ 1800 ವರ್ಷಗಳ ನಂತರ ನಡೆಯಲಿರುವ "ಅಶ್ವಮೇಧ ಮಹಾಸೋಮಯಾಗ"

ವೇದಮಂತ್ರಗಳ ಘೋಷಣೆಯಿಂದ | ಸಂತ-ಮಹಾತ್ಮರ ವರದಹಸ್ತದಿಂದ| ರಾಷ್ಟ್ರಸಮೃದ್ಧಿಯ ಸಂಕಲ್ಪ||
ಸನಾತನ ಆಶ್ರಮ, ರಾಮನಾಥಿ, ಗೋವಾದಲ್ಲಿ ‘ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ’ದ ಸಂಕಲ್ಪ ಮತ್ತು ಯಜ್ಞದ ಅಶ್ವದ ಪೂಜೆ !
ಸನಾತನ ಆಶ್ರಮ, ರಾಮನಾಥಿ : ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಬಾರ್ಶಿ ತಾಲೂಕಿನ ಕಾಸಾರವಾಡಿ ಎಂಬಲ್ಲಿನ ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ಸಂಸ್ಥಾಪಕರಾದ ಆಹಿತಾಗ್ನಿ ಸೋಮಯಾಜಿ ಶ್ರೀ. ನಾರಾಯಣ (ನಾನಾ) ಕಾಳೆಗುರೂಜಿ (೮೦ ವರ್ಷ) ಇವರು ‘ಭಾರತ ದೇಶ ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ದೇಶದಲ್ಲಿ ಸನಾತನ ನೈತಿಕ ಮೌಲ್ಯಗಳ ಮೇಲಾಧಾರಿತ ಅತ್ಯಂತ ಸಮರ್ಥ ಮತ್ತು ಆದರ್ಶ ಸರಕಾರ ನಿರ್ಮಾಣವಾಗಬೇಕು’ ಎಂಬ ಸಂಕಲ್ಪವಿಟ್ಟುಕೊಂಡು ‘ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ’ವನ್ನು ಆಯೋಜಿಸಿದ್ದಾರೆ. ೨೫ ಏಪ್ರಿಲ್ ೨೦೧೩ ರಿಂದ ೩೧ ಜುಲೈ ೨೦೧೪ ಹೀಗೆ ೧೫ ತಿಂಗಳ ತನಕ ಈ ಯಜ್ಞ ನಡೆಯಲಿದೆ. ಈ ಯಜ್ಞದ ಸಂಕಲ್ಪ ಮತ್ತು ಯಜ್ಞದ ಅಶ್ವಪೂಜೆಯನ್ನು ನಾಶಿಕ ಎಂಬಲ್ಲಿನ ಶಕ್ತಿಪಾತ ಯೋಗದ ಅಧಿಕಾರಿ ಪ.ಪೂ. ನಾರಾಯಣರಾವ ಢೇಕಣೆ ಮಹಾರಾಜರ ಉತ್ತರಾಧಿಕಾರಿ ಪ.ಪೂ. ಶರದರಾವ ಜೋಶಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರ ಸಿದ್ಧಹಸ್ತದಿಂದ ಕಾರ್ತಿಕ ಕೃಷ್ಣ ಪಕ್ಷ ದ್ವಾದಶಿ, ಸೋಮವಾರ, ೧೦ ಡಿಸೆಂಬರ್ ೨೦೧೨ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ನೆರವೇರಿಸಲಾಯಿತು.

ಆರಂಭದಲ್ಲಿ ಯಜ್ಞದ ಅಶ್ವದ ಆಗಮನವಾಯಿತು. ಅದರ ನಂತರ ಪ.ಪೂ. ಶರದರಾವ ಜೋಶಿ ಮತ್ತು ಪ.ಪೂ. ಡಾ. ಜಯಂತ ಆಠವಲೆಯವರ ಶುಭಹಸ್ತದಲ್ಲಿ ಅಶ್ವದ ಕುತ್ತಿಗೆಗೆ ಕಟ್ಟಲಾದ ಚಿನ್ನದ ಗೋಲಾಕೃತಿಯ ಅಲಂಕಾರದಿಂದ ಕೂಡಿದ ಕೆಂಪು ದಾರದಿಂದ ಅಶ್ವಮೇಧ ಯಜ್ಞಕ್ಕಾಗಿ ಅಶ್ವವನ್ನು ಕಟ್ಟಿದರು. ನಂತರ ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದಿಶ್ರಾದ್ಧ, ಅಶ್ವಪೂಜೆ, ಆಚಾರ್ಯವರಣ, ಆಶೀರ್ವಚನ, ಋತ್ವಿಜರಿಗೆ ಸತ್ಕಾರ ಮತ್ತು ಕೊನೆಗೆ ಶಾಂತಿ ಮಂತ್ರಗಳನ್ನು ಪಠಿಸಿ ವಿಧಿಯನ್ನು ಸಂಪನ್ನಗೊಳಿಸಲಾಯಿತು. ವಿಧಿಯ ಯಜಮಾನರಾದ ಪ.ಪೂ. ಡಾಕ್ಟರರ ವತಿಯಿಂದ ಸನಾತನದ ರಾಮನಾಥಿ ಆಶ್ರಮದ ಸಾಧಕರಾದ ಶ್ರೀ. ಭಾನು ಪುರಾಣಿಕ ಮತ್ತು ಅವರ ಧರ್ಮಪತ್ನಿ ಸೌ. ಆರತಿ ಪುರಾಣಿಕ ಇವರು ನಡೆಸಿಕೊಟ್ಟರು. ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ಸಂಸ್ಥಾಪಕರಾದ ‘ಆಹಿತಾಗ್ನಿ ಸೋಮಯಾಜಿ’ ಶ್ರೀ. ನಾರಾಯಣ (ನಾನಾ) ಕಾಳೆಗುರೂಜಿಯವರ ಮಾರ್ಗದರ್ಶನದಂತೆ ವಾಜಪೇಯಿಯಾಜಿ ಶ್ರೀ. ಕೇತನ ಕಾಳೆ ಮತ್ತು ಅವರ ಸಹಕಾರಿಯವರು ಯಜ್ಞದ ಪೌರೋಹಿತ್ಯವನ್ನು ನೆರವೇರಿಸಿದರು. ಭಾರತದ ನೈತಿಕ, ಆಧ್ಯಾತ್ಮಿಕ, ಭೌತಿಕ, ಆರ್ಥಿಕ, ಸಂರಕ್ಷಣೆ, ಆಹಾರ ಮತ್ತು ನೀರು ಇತ್ಯಾದಿಗಳ ಸಮೃದ್ಧಿಗಾಗಿ ನಡೆಯುತ್ತಿರುವ ಮನುಷ್ಯನ ಪ್ರಯತ್ನಗಳಿಗೆ ದೈವಿ ಅಧಿಷ್ಠಾನ ದೊರಕಲು ಈ ಅಶ್ವಮೇಧ ಮಹಾಸೋಮಯಾಗ ನಡೆಯಲಿದೆ. ಸುಮಾರು ೧ ಸಾವಿರ ೮೦೦ ವರ್ಷಗಳ ನಂತರ ಈ ಯಜ್ಞ ನಡೆಯಲಿದೆ.

ಯಜ್ಞದ ಸಂಕಲ್ಪ ನಡೆಯುವಾಗ ಯಜ್ಞದ ಅಶ್ವವು ಮಲವಿಸರ್ಜನೆ ಮಾಡಿತು. ‘ಯಾವಾಗ ಯಜ್ಞದ ಅಶ್ವವು ವಿಧಿಯ ಸಮಯದಲ್ಲಿ ಮಲವಿಸರ್ಜನೆ ಮಾಡುತ್ತದೆಯೋ, ಆಗ ಆ ಯಜ್ಞದ ಸಂಕಲ್ಪವು ನೂರುಪ್ರತಿಶತ ಯಶಸ್ವಿಯಾಗುತ್ತದೆ’, ಎಂದು ಗುರೂಜಿಯವರು ಹೇಳಿದರು. ಈ ಸಂದರ್ಭದಲ್ಲಿ ಗೋವಾದ ಫೋಂಡಾದ ಮತದಾರ ಸಂಘದ ಸಂಸದರಾದ ಶ್ರೀ. ಲವೂ ಮಾಮಲೇದಾರ ಇವರು ಉಪಸ್ಥಿತರಿದ್ದರು.

ಸುಮಾರು ೩ ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುವ ಈ ಅಶ್ವಮೇಧ ಮಹಾಸೋಮಯಾಗಕ್ಕಾಗಿ ಸಹಾಯ ಮಾಡಲು ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ವತಿಯಿಂದ ಮಾಡಿದ ಕರೆ!

ಹಿಂದಿನ ಕಾಲದಲ್ಲಿ ಯಜ್ಞದ ಅಶ್ವವು ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತಿತ್ತು. ಆಗ ತಮ್ಮ ಸಾಮ್ರಾಜ್ಯವನ್ನು ಹೆಚ್ಚಿಸುವ ಉದ್ದೇಶವಿರುತ್ತಿತ್ತು. ಕೆಲವೊಮ್ಮೆ ಯಜ್ಞದ ಅಶ್ವಕ್ಕಾಗಿ ಯುದ್ಧಗಳಾಗುತ್ತಿದ್ದವು. ಈಗಿನ ಕಾಲದಲ್ಲಿ ದೇಶದಾದ್ಯಂತ ಅಶ್ವಮೇಧದ ಶೋಭಾಯಾತ್ರೆ ನಡೆಸಿ ಯಜ್ಞಸಂಸ್ಥೆ ಮತ್ತು ವೇದಗಳ ಮಹತ್ವ, ವೇದದಲ್ಲಿನ ಪರಿಸರ ರಕ್ಷಣೆ, ಕೂಡುಕುಟುಂಬಪದ್ಧತಿ, ವೈದಿಕ ಸಂಸ್ಕಾರಪದ್ಧತಿ, ರಾಷ್ಟ್ರೀಯ ಏಕತೆ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲ ಪ್ರದೇಶದ ಜನರಿಗೆ ಜ್ಞಾನವನ್ನು ಮಾಡಿಕೊಟ್ಟು ಪ್ರಬೋಧಿಸಲಾಗುವುದು. ಈ ಅಶ್ವಶೋಭಾಯಾತ್ರೆಗಾಗಿ ಡಿರೆsಲ್ ಮತ್ತು ಆವಶ್ಯಕ ಸಾಮಗ್ರಿ ಇವುಗಳಿಗಾಗಿ ಬಹಳಷ್ಟು ಆರ್ಥಿಕ ಸಹಾಯ ಬೇಕಾಗಿದೆ.

‘ಈ ಯಜ್ಞಕ್ಕಾಗಿ ೧೨ ಕ್ವಿಂಟಲ್ ದೇಶಿ ಆಕಳಿನ ತುಪ್ಪ, ೧೫ ತಿಂಗಳ ತನಕ ತಗಲುವ ಯಜ್ಞ ವೃಕ್ಷದ ಒಣಗಿದ ಇಂಧನ, ಸಮಿಧೆ, ದರ್ಭೆ, ರೇಶ್ಮಿ ವಸ್ತ್ರಗಳು, ಬೆಳ್ಳಿ ಮತ್ತು ಚಿನ್ನದ ಯಜ್ಞ ಪಾತ್ರೆಗಳು, ಬೃಹತ್ ಯಜ್ಞಶಾಲೆ, ಸಾಮ್ರಾಜ್ಯಭಿಷೇಕದ ಖರ್ಚು, ಋತ್ವಿಜರ ಅಮೂಲ್ಯ ದಕ್ಷಿಣೆ, ಸುವರ್ಣದಾನ, ಗೋದಾನ, ವಸ್ತ್ರದಾನ, ಅನ್ನದಾನ ಇವುಗಳಿಗಾಗಿ ಬಹಳಷ್ಟು ಪ್ರಮಾಣದಲ್ಲಿ ಖರ್ಚು ನಡೆಯಲಿದೆ. ೩ ಕೋಟಿ ರೂಪಾಯಿ ಖರ್ಚು ಮಾಡಿ ದೇಶಕಲ್ಯಾಣಕ್ಕಾಗಿ ಮಾಡುವ ಈ ಅಶ್ವಮೇಧ ಯಜ್ಞಕ್ಕಾಗಿ ಶ್ರದ್ಧಾವಂತರು ಎಲ್ಲ ರೀತಿಯಲ್ಲಿ ಸಹಾಯ ಮಾಡಬೇಕು’, ಎಂದು ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮದ’ ವತಿಯಿಂದ ಕರೆ ನೀಡಲಾಗಿದೆ.

ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನೀ...

ಹಿಂದೂಗಳೇ, ನಾವು ಪ್ರತಿನಿತ್ಯ ಪಠಿಸುವ ಶ್ಲೋಕ ನೆನಪಿದೆಯೇ? 

"ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹೀಮೇ " 
ಇದು ಭಗ್ನಾವಶೇಷವಾಗಿರುವ ಶಾರದಾದೇವಿಯ ಮಂದಿರ. ಕಾಶ್ಮೀರಪುರವಾಸಿನಿಯಾಗಿದ್ದ ದೇವಿ ಮಂದಿರ ಭಗ್ನವಾಗಿದ್ದು ಈಗ ಪಾಕ್ ಆಕ್ರಮಿತ ಆಜಾದ್ ಕಾಶ್ಮೀರ ಜಾಗದಲ್ಲಿದೆ. ಆದಿಶಂಕರಾಚಾರ್ಯರು ಪಂಡಿತರನ್ನು ಸೋಲಿಸಿ ಇಲ್ಲಿಯೇ ಸರ್ವಜ್ಞಪೀಠಾರೋಹಣವನ್ನು ಮಾಡಿದ್ದರು. ಇನ್ನು ನೀವು ಯಾವ ಭಾವದಿಂದ ಈ ಮೇಲಿನ ಶ್ಲೋಕವನ್ನು ಪಠಿಸುತ್ತೀರಿ? ಎಲ್ಲ ಜಡತ್ವವನ್ನು ಬಿಟ್ಟು ಇನ್ನಾದರೂ ಜಾಗೃತರಾಗಿ, ಇಷ್ಟು ಪವಿತ್ರವಾದ, ಮಹತ್ವವಾದ, ಶ್ರೇಷ್ಠವಾದ ಸರಸ್ವತಿ ದೇವಿಯ ಮಂದಿರ ನಮ್ಮ ಜಾಗದಲ್ಲಿಯೇ ಇರಬೇಕು. ಇನ್ನು ಆ ಶ್ಲೋಕ ಪಠಿಸುವುದರೊಂದಿಗೆ ದೇವಿಗೆ ಈ ರೀತಿ ಪ್ರಾರ್ಥನೆ ಮಾಡಿ, "ಹೇ ದೇವಿ, ನೀನಿರುವ ಪವಿತ್ರ ಸ್ಥಾನವನ್ನು ನಾವು ಮರಳಿ ಪಡೆದುಕೊಳ್ಳುವಂತೆ ನಮ್ಮಲ್ಲಿ ಕ್ಷಾತ್ರತೇಜವನ್ನು ತುಂಬು, ನೀನೇ ನಮಗೆ ಶಕ್ತಿಯನ್ನು ನೀಡು."


ಶ್ರೇಷ್ಠವಾದ ಈ ದೇವಸ್ಥಾನದ ಬಗ್ಗೆ ವಿಕಿಪೀಡಿಯಾದ ಮಾಹಿತಿ ಹೀಗಿದೆ.
Location - The temple is located in a village called Sharda, in Neelam Valley, at a distance of 60 miles from Baramulla and about 16 miles from line of control.

The ancient temple of Sree Sharada -
The temple is so ancient that Kashmir State was earlier known as 'Sharada Peeth'. It is at this temple that Sankaracharya received the right to sit on the Sarvanjnanapeetham or Sarvajna peetha (Throne of Wisdom). The temple is at a height of 11000 fom the sea level and is about 70 miles from Shrinagar. The length of the temple is 142 feet and width is 94.6 feet. The outer walls of the temple are 6 ft. wide and 11 ft long. And there are arches with 8 ft. height. It is a very good example of architecture.


ಮೂಲ - ವಿಕಿಪೀಡಿಯಾ

ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸ!

ಹದಿನಾರನೇ ಶತಮಾನವು ಆರಂಭವಾದ ನಂತರ ಯುರೋಪಿನಲ್ಲಿ ‘ಮಸೂರ’ದ ಸಂಶೋಧನೆಯಾದರೆ ಭಾರತದಲ್ಲಿ ಕ್ರಿ.ಪೂ.೮೦೦ರಲ್ಲಿಯೇ ಮಸೂರವು ಬಳಕೆಯಲ್ಲಿತ್ತು!
ಈಗ ಪ್ರಶ್ನೆಯೇನೆಂದರೆ ಆ ಕಾಲದಲ್ಲಿ ‘ಮಸೂರ’ಗಳು ಅಥವಾ ‘ಲೆನ್ಸ್’ ಇದ್ದವೇನು? ಇದರ ಉತ್ತರ ‘ಹೌದು’; ಏಕೆಂದರೆ ಆದಿಶಂಕರಾಚಾರ್ಯರು ‘ಅಪರೋಕ್ಷಾನುಭೂತಿ’ಯಲ್ಲಿನ ೮೧ನೇ ಶ್ಲೋಕದಲ್ಲಿ ಹೀಗೆ ಬರೆದಿದ್ದಾರೆ, ‘ಸೂಕ್ಷ್ಮತ್ವೇ ಸರ್ವ ವಸ್ತೂನಾಂ ಸ್ಥೂಲತ್ವಂ ಚ ಉಪನೇತ್ರತಃ| ತದ್ವತ್ ಆತ್ಮಾನಿ ದೇಹತ್ವಂ ಪಶ್ಯತಿ ಅಜ್ಞಾನಯೋಗತಃ|’ ಇದರ ಅರ್ಥವೇನೆಂದರೆ, ಯಾವ ರೀತಿ ಉಪನೇತ್ರದಿಂದಾಗಿ ಸೂಕ್ಷ್ಮ ವಸ್ತುಗಳೂ ಸ್ಥೂಲದಲ್ಲಿ ಹಾಗೂ ದೊಡ್ಡದಾಗಿ ಕಾಣಿಸುತ್ತವೆಯೋ, ಅದೇ ರೀತಿ ಅಜ್ಞಾನದಿಂದಾಗಿ ನಾವು ನಮ್ಮನ್ನು ದೇಹಸ್ವರೂಪದಿಂದಲೇ ನೋಡುತ್ತೇವೆ. ಶಂಕರಾಚಾರ್ಯರು ಅಧ್ಯಾತ್ಮವನ್ನು ತಿಳಿಸಿ ಹೇಳುವಾಗ ಈ ಉಪಮೆಯನ್ನು ಅತ್ಯಂತ ಸಹಜವಾಗಿ ಉಪಯೋಗಿಸಿದ್ದಾರೆ. ಇದರಿಂದ ‘ಉಪನೇತ್ರ’ ಅಂದರೆ ‘ಕನ್ನಡಕ’ವು ಜನರ ದೈನಂದಿನ ಬಳಕೆಯ ವಸ್ತುವಾಗಿರಬಹುದು ಎಂಬುದು ತಿಳಿದು ಬರುತ್ತದೆ. ಬಹಿರ್ವಕ್ರ ಮಸೂರದಿಂದ ಚಿಕ್ಕ ವಸ್ತುವನ್ನು ದೊಡ್ಡದಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ಆ ಕಾಲದಲ್ಲಿ ಮಸೂರಗಳಿದ್ದವು. ಆದುದರಿಂದ ‘ದೂರದರ್ಶಕ’ ಯಂತ್ರಗಳೂ ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಶಂಕರಾಚಾರ್ಯರ ಕಾಲವನ್ನು ಸುಮಾರು ಕ್ರಿ.ಪೂ. ೮೦೦ ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಆ ಕಾಲದಲ್ಲಿಯೇ ‘ಮಸೂರ’ವನ್ನು ಉಪಯೋಗಿಸಲಾಗುತ್ತಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ‘ಯುರೋಪದಲ್ಲಿ ಮಾತ್ರ ಹದಿನಾರನೇ ಶತಮಾನ ಆರಂಭವಾದ ನಂತರ ಮಸೂರವನ್ನು ಶೋಧಿಸಲಾಯಿತು’. (ವೈದಿಕ ವಿಜ್ಞಾನ ಮತ್ತು ವೇದಕಾಲನಿರ್ಣಯ, ಪುಟ ಕ್ರ. ೧೫೧ ಮತ್ತು ೧೫೨, ಡಾ. ಪದ್ಮಾಕರ ವಿಷ್ಣು ವರ್ತಕ)

ಪ್ರಾಚೀನ ಭಾರತದಲ್ಲಿ ಸೂಕ್ಷ್ಮದರ್ಶಕಗಳಿರುವ ಬಗ್ಗೆ ಮಹಾಭಾರತದಲ್ಲಿ ಪುರಾವೆಗಳಿದ್ದವು!
ಆ ಕಾಲದಲ್ಲಿ ಸೂಕ್ಷ್ಮದರ್ಶಕಗಳಿದ್ದವೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ‘ಹೌದು’ ಎಂದು ಹೇಳಬಹುದು; ಏಕೆಂದರೆ ಮಹಾಭಾರತ, ಶಾಂತಿ ೩೦೮ರ ೧೦ನೇ ಶ್ಲೋಕದಲ್ಲಿ ‘ಅವ್ಯಕ್ತಲೋಚನಃ’ ಮತ್ತು ೧೨ನೇ ಶ್ಲೋಕದಲ್ಲಿ ‘ಅವ್ಯಕ್ತ ದರ್ಶನ’ ಎಂಬ ಶಬ್ದಗಳು ಇವೆ. ‘ವ್ಯಕ್ತವಿಲ್ಲದ್ದನ್ನು ನೋಡುವ ಕ್ಷಮತೆ ಇರುವ ವ್ಯಕ್ತಿಗಳು ಆ ಕಾಲದಲ್ಲಿದ್ದರು’ ಎಂಬುದು ಇದರಿಂದ ಕಂಡುಬರುತ್ತದೆ. ಇವರನ್ನೇ ಇಂದು ‘ಮೈಕ್ರೋಸ್ಕೋಪ್ ಬಳಸುವವರು’ ಎಂದು ಹೇಳಬಹುದು.

(ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ)

ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು?

ನಾವು ಜೀವದ ಸುತ್ತ ಹೊದ್ದಿರುವ ನಮ್ಮ ದೇಹ ಎಂಬ ಚಾದರ ಸಾವಿನ ನಂತರ ನಮ್ಮದಾಗಿ ಉಳಿಯುವುದಿಲ್ಲ. ಹಾಗಾಗಿಯೇ ಸಾವು ನಮಗೆ ಅನಿವಾರ್ಯವಾದರೂ ಅಪ್ರಿಯ. ಪುರಾಣಗಳಲ್ಲಿ ಬರುವ ಕೆಲವು ಘಟನೆಗಳು ಈ ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತವೆ.

ಬಲರಾಮ, ಕೃಷ್ಣರ ಗುರು ಸಾಂದೀಪನಿ ಮುನಿಗಳು. ಶಿಷ್ಯರ ಶಿಕ್ಷಣ ಮುಗಿದಾಗ ಗುರುದಕ್ಷಿಣೆಯಾಗಿ ಪ್ರಭಾಸ ಕ್ಷೇತ್ರದಲ್ಲಿ ಮುಳುಗಿ ಕಳೆದು ಹೋದ ತನ್ನ ಮಗನನ್ನು ಬಯಸಿದರು. ಸಮುದ್ರ ತೀರಕ್ಕೆ ಬಂದು ಅವನಿಗಾಗಿ ಅರಸಿದ ಕೃಷ್ಣ, ಸಮುದ್ರದೇವನ ಹೇಳಿಕೆಯಂತೆ ಸಮುದ್ರದಾಳದಲ್ಲಿ ಶಂಖರೂಪಿಯಾಗಿ ಅಡಗಿದ್ದ ‘ಪಂಚಜನ’ ಎಂಬ ರಕ್ಕಸನನ್ನು ಕೊಂದು ಅವನ ಹೊಟ್ಟೆಯಲ್ಲಿ ಸಿಕ್ಕಿದ ಅಮೂಲ್ಯ ಶಂಖಕ್ಕೆ ‘ಪಾಂಚಜನ್ಯ’ ಎಂದು ಹೆಸರಿಟ್ಟು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ಅವನ ಆಹಾರವಾಗಿ ಸಿಕ್ಕಿ ಈಗಾಗಲೇ ಮೃತ್ಯುಲೋಕಕ್ಕೆ ಸೇರಿರುವ ಗುರುಪುತ್ರನನ್ನು ಅರಸುತ್ತಾ ಯಮನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಯಮಧರ್ಮನನ್ನು ಭೇಟಿಯಾಗಿ, ಗುರುಪುತ್ರನನ್ನು ಮರಳಿ ಭೂಲೋಕಕ್ಕೆ ಒಯ್ಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಅದಕ್ಕೆ ಯಮನು ‘ಒಮ್ಮೆ ಸತ್ತವರನ್ನು ಮರಳಿ ಪಡೆಯುವುದುಂಟೇ? ಲೋಕನಾಥನಾದ ನೀನೇ ಈ ನಿಯಮವನ್ನು ಮೀರಬಹುದೇ?’ ಎಂದು ಪ್ರಶ್ನಿಸುತ್ತಾನೆ.

ಉತ್ತರವಾಗಿ ಕೃಷ್ಣನು ‘ಜೀವನದ ಬಗ್ಗೆ, ಜೀವಿಗಳ ಸಾರ್ಥಕತೆಯ ಬಗ್ಗೆ ಇನ್ನೊಬ್ಬರಿಗೆ ತಿಳಿಹೇಳುವ ನನ್ನ ಗುರುವು ಈಗ ತನಗೆ ತಾನೇ ಮಗನ ಮೇಲಿನ ಮೋಹಪಾಶದಲ್ಲಿ ಬಂಧಿಯಾಗಿದ್ದಾನೆ. ಅವನ ಕಣ್ಣುಗಳನ್ನು ತೆರೆಯಿಸಲು ಬೇರೆ ದಾರಿ ಇಲ್ಲ. ಆದ್ದರಿಂದ ಆತ್ಮರೂಪಿ ಗುರುಪುತ್ರನನ್ನು ನನ್ನೊಂದಿಗೆ ಕಳುಹಿಸು’ ಎಂದು ಕೇಳಿದಾಗ ಯಮನು ಒಪ್ಪಿ ಕಳುಹಿಸುತ್ತಾನೆ.

ಕೃಷ್ಣನು, ತಮ್ಮ ಪುತ್ರನನ್ನು ಕರೆತಂದದ್ದನ್ನು ನೋಡಿ ಸಾಂದೀಪನಿ ಮಹರ್ಷಿ ಮತ್ತು ಅವರ ಮಡದಿ ಬೆರಗಾಗುತ್ತಾರೆ. ತನ್ನ ಪುತ್ರನನ್ನು ‘ಮಗನೇ’ ಎಂದು ಬರಸೆಳೆಯಲು ತಾಯಿ ಮುಂದಾಗುತ್ತಾಳೆ. ಆದರೆ ಆತ್ಮರೂಪಿ ಗುರುಪುತ್ರನು ಇವರನ್ನು ಅಪರಿಚಿತರಂತೆ ಕಾಣುತ್ತಾನೆ. ಆಗ ಕೃಷ್ಣನು ಅವರನ್ನು ಪರಿಚಯಿಸುತ್ತಾ ‘ಇವರೇ ನಿನ್ನ ತಂದೆ, ತಾಯಿ’ ಎನ್ನುತ್ತಾನೆ. ಅದಕ್ಕುತ್ತರವಾಗಿ ಆ ಆತ್ಮವು ದಂಪತಿಗಳಿಗೆ ಕೈ ಮುಗಿದು ‘ನೀವು ನನ್ನ ಯಾವ ಜನ್ಮದ ತಂದೆ ತಾಯಿಗಳೆಂದು ನನಗೆ ತಿಳಿದಿಲ್ಲ. ಯಾಕೆಂದರೆ ‘ನಾನು’ ಎನ್ನುವುದು ಏನೆಂದು ನನಗೆ ಗೊತ್ತಿಲ್ಲ, ಕ್ಷಮಿಸಿ’ ಎಂದಿತು.

ಇದನ್ನು ಕೇಳಿದ ಗುರು ‘ಸಾವಿನ ನಂತರ ಏನೆಂಬುದು ಸತ್ತವರಿಗೂ ಗೊತ್ತಿಲ್ಲ. ಇದ್ದವರಿಗೂ ಗೊತ್ತಿಲ್ಲ. ಇನ್ನು ಮಗನ ವ್ಯಾಮೋಹದಲ್ಲಿ ಇದ್ದೂ ಸತ್ತಂತೆ ಬದುಕುವ ನಮಗೆ ಹೇಗೆ ಅರಿವಿಗೆ ಬಂದೀತು? ಇಲ್ಲಿಯವರೆಗೆ ಯಾವ ದೇಹವನ್ನು ಮನದಲ್ಲಿ ಇಟ್ಟುಕೊಂಡು ಮಗನೆಂದು ಗುರುತಿಸುತ್ತಿದ್ದೆವೋ ಆ ದೇಹ ಅಳಿದ ಮೇಲೆ ಆತ್ಮಕ್ಕೆ ನಮ್ಮ ಜೊತೆ ಸಂಬಂಧ ಇಲ್ಲ ಎಂಬ ಸತ್ಯವನ್ನು ನೀನು ನಮಗೆ ಪರಿಚಯಿಸಿದೆ. ಈ ಅರಿವೇ ನೀನು ನಮಗಿತ್ತ ಗುರುದಕ್ಷಿಣೆ’ ಎಂದು ಹೇಳಿದರು.

- ಅನಿತಾ ನರೇಶ ಮಂಚಿ, ೨೮.೩.೨೦೧೨ರ ಹೊಸದಿಗಂತ

ಹಿಂದೂಗಳೇ, ಅರ್ಥಹೀನ ’ವೆಲೆಂಟೈನ ಡೇ’ ನಮಗೆ ಬೇಡ!


ಫೆಬ್ರವರಿ ೧೪ ರಂದು ’ವ್ಯಾಲೆಂಟೈನ್ ಡೇ’ ಅಂದರೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಯುವಪೀಳಿಗೆಯೇ ನಿಜವಾದ ಪ್ರೇಮ ಕೇವಲ ಒಂದು ದಿನ ಇರುತ್ತದೆಯೇ? ಮಹಾವಿದ್ಯಾಲಯಗಳಲ್ಲಿನ ’ಡೇ’ ಸಂಸ್ಕೃತಿಯೆಂದರೆ ಪಾಶ್ಚಾತ್ಯರ ಅನೈತಿಕತೆಯ ಭೋಗವಾದದ ಅನುಕರಣೆಯಾಗಿದೆ! ’ವ್ಯಾಲೆಂಟೈನ್ ಡೇ’ ಅಂದರೆ ಸಭ್ಯತೆ ಮತ್ತು ನೈತಿಕತೆಯನ್ನು ಅಪಮಾನಗೊಳಿಸುವ ಒಂದು ’ಕಪ್ಪು’ ದಿನವಾಗಿದೆ! ಭಾರತೀಯ ಮಹಾನ್ ಸನಾತನ ಸಂಸ್ಕೃತಿಯ ಮೇಲೆ ಆಘಾತ ಮಾಡುವ ಸಮಸ್ಯೆಯಾಗಿದೆ. ವ್ಯಾವಹಾರಿಕ ಲಾಭಕ್ಕಾಗಿ ಆಧುನಿಕ ಪ್ರಸಾರ ಮಾಧ್ಯಮಗಳು ಮತ್ತು ಶುಭೇಚ್ಛಾಪತ್ರಗಳನ್ನು ಮಾರಾಟ ಮಾಡುವ ಸಂಸ್ಥೆಗಳು (ಕಂಪನಿಗಳು) ’ವ್ಯಾಲೆಂಟೈನ್ ಡೇ’ಯನ್ನು ಉತ್ಸಾಹದಿಂದ ಪ್ರಸಾರ ಮಾಡುತ್ತವೆ. ಇದರಿಂದ ಹಿಂದೂಗಳ ಸಾಂಸ್ಕೃತಿಕ ಮತಾಂತರಕ್ಕೆ ಒಂದು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ ಮತ್ತು ದೇಶದ ಯುವ ಪೀಳಿಗೆಯು ತಪ್ಪು ದಾರಿಗೆ ಹೋಗುತ್ತದೆ.  ವೃತ್ತಿಯು ಸಾತ್ವಿಕವಾಗಿ ನೀತಿವಂತ, ನೈತಿಕ ಮತ್ತು ಸಂಯಮೀ ಜೀವನ ನೆಡೆಸಲು ಹಬ್ಬ, ಉತ್ಸವ, ವ್ರತಗಳನ್ನು ಮತ್ತು ಧಾರ್ಮಿಕ ಕೃತಿಗಳನ್ನು ಆಚರಿಸಲು ಹೇಳುವ ಸನಾತನ ಧರ್ಮದ ಹಿಂದೂಗಳು ಪಾಶ್ಚಾತ್ಯರಂತೆ ’ವ್ಯಾಲೆಂಟೈನ್ ಡೇ’ಯ ಉದಾತ್ತೀಕರಣ ಮಾಡುವುದು ಸನಾತನ ಧರ್ಮದ ಮೇಲಿನ ಹಾನಿಯೇ ಆಗಿದೆ.

ಯಾರು ಈ ವ್ಯಾಲೆಂಟೈನ್ ?

ಮೂರನೆಯ ಶತಮಾನದಲ್ಲಿ ರೋಮ್ ರಾಜನಾದ ಕ್ಲೌಡಿಯಸ್‌ನು (ದ್ವಿತೀಯ) ಯುವಕರು ವಿವಾಹವಾಗದೇ ಸೇನೆಯಲ್ಲಿ ಸೇರಬೇಕು ಎಂಬ ಆದೇಶ ಹೊರಡಿಸಿದನು. ಈ ಆದೇಶಕ್ಕೆ ಬಗ್ಗದೇ ’ವ್ಯಾಲೆಂಟೈನ್’ ಎಂಬ ಕ್ರೈಸ್ತ ಧರ್ಮ ಗುರುವು ಯುವಕ-ಯುವತಿಯರಿಗೆ ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನಿಗೆ ಈ ವಿಷಯ ತಿಳಿದಾಗ ಧರ್ಮಗುರುವನ್ನು ಸೆರಮನೆಗೆ ತಳ್ಳಿದನು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಿದನು. ಸೆರಮನೆಯಲ್ಲಿ ಈ ತಥಾಕಥಿತ ಅನೈತಿಕತೆ ಪೋಷಣೆ ಮಾಡುವ ಸಂತನು ಸೆರಮನೆಯ ಅಧಿಕಾರಿಯ ಪುತ್ರಿಯನ್ನು ಪ್ರೇಮಿಸ ತೊಡಗಿದನು. ಗಲ್ಲು ಶಿಕ್ಷೆಯ ಹಿಂದಿನ ದಿನ ಅವನು ಆ ಯುವತಿಗೆ ’ನಿನ್ನ ವ್ಯಾಲೆಂಟೈನ್’ ಎಂದು ಬರೆದ ಪತ್ರವನ್ನು ಕಳುಹಿಸಿದನು.

ವ್ಯಾಲೆಂಟೈನ್ ಡೇಯನ್ನು ಕ್ಯಾಲೆಂಡರ್‌ನಿಂದ ಕಿತ್ತು ಹಾಕಿದ ರೋಮ್‌ನ ಕ್ಯಾಥೋಲಿಕ್ ಇಗರ್ಜಿ.

ಮತ್ತೊಂದು ಐತಿಹಾಸಿಕ ದಾಖಲೆಯ ಪ್ರಕಾರ ಪ್ರಾಚೀನ ರೋಮ್‌ನಲ್ಲಿ ಮೂರ್ತಿ ಪೂಜಕ (ಪ್ಯಾಗನ್) ಸಂಸ್ಕೃತಿಯಲ್ಲಿ ’೧೩ ರಿಂದ ೧೫ ಫೆಬ್ರವರಿ’ ಈ ಸಮಯದಲ್ಲಿ ’ಲ್ಯೂಪರಕ್ಯಾಲಿಯಾ’ ಎಂಬ ’ಪ್ರಜನ ಉತ್ಸವ’ ಆಚರಿಸಲಾಗುತ್ತದೆ. ಮೂರ್ತಿಪೂಜಕರನ್ನು ಕ್ರೈಸ್ತರನ್ನಾಗಿಸಲು ’ಪೋಪ್ ಗೆಲಾಸಿಸ್ (ಪ್ರಥಮ)’ ಇವನು ಫೆಬ್ರವರಿ ೧೪ ಕ್ಕೆ ’ವೆಲೆಂಟೈನ್ ಡೇ’ಯನ್ನು ಆಚರಿಸಲು ಪ್ರಾರಂಭಿಸಿದರು. ೧೪ ನೇ ಶತಕದವರೆಗೆ ’ವ್ಯಾಲೆಂಟೈನ್ ಡೇ’ ಮತ್ತು ’ಪ್ರೇಮ’ಕ್ಕೆ ಸಂಬಂಧವಿರಲಿಲ್ಲ. ಆದುದರಿಂದ ರೋಮ್‌ನ ಕ್ಯಾಥೋಲಿಕ್ ಇಗರ್ಜಿಯು ’ವ್ಯಾಲೆಂಟೈನ್ ಡೇ’ಯನ್ನು ತನ್ನ ಕ್ಯಾಲೆಂಡರ್‌ನಿಂದ ತೆಗೆದು, ಆಚರಣೆಯನ್ನು ಕೈ ಬಿಟ್ಟಿತ್ತು.

ಪಾಶ್ಚ್ಯಾತ್ಯರ ದಾಸರಾದ ಭಾರತೀಯರು

ಆಧುನಿಕತೆ ಹೆಸರಿನಲ್ಲಿ ಇಂದಿನ ಯುವಜನತೆಯು ಪಾಶ್ಚಾತ್ಯರ ’ವ್ಯಾಲೆಂಟೈನ್ ಡೇ’, ’ರೋಜ್ ಡೇ’, ’ಫಾದರ‍್ಸ್ ಡೇ’, ’ಮದರ‍್ಸ್ ಡೇ’ ಅಂತಹ ಅರ್ಥಹೀನ ದಿನಾಚರಣೆಗಳನ್ನು ಆಚರಿಸುತ್ತಿದೆ. ಇಂತಹ ಆಚರಣೆಗಳ ಮೂಲಕ ಯುವಕರು ಮದ್ಯಪಾನ ಮಾಡುವುದು, ಮಾದಕ ವಸ್ತುಗಳ ಸೇವನೆ ಮಾಡುವುದು, ಪಬ್‌ಗೆ ಹೋಗಿ ಲಿಂಗ ಭೇದವಿಲ್ಲದೆ ಕುಣಿಯುವುದು, ಯುವತಿಯರನ್ನು ಪೀಡಿಸುವುದು, ಅತ್ಯಾಚಾರ, ಬಲಾತ್ಕಾರಗಳಂತಹ ಘಟನೆಗಳಾಗುತ್ತಿವೆ. ಯುವಕರನ್ನು ದಾರಿ ತಪ್ಪಿಸಲು ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಯುವಕರು ವ್ಯಸನಿಗಳಾಗುತ್ತಿದ್ದಾರೆ, ಆತ್ಮಹತ್ಯೆ, ಅಪಘಾತಕ್ಕೀಡಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಯುವಜನತೆ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ.

ಆರ್ಥಿಕ ಲಾಭವನ್ನು ಗಳಿಸುವ ನೀತಿಹೀನ ಉದ್ಯೋಗಪತಿಗಳು

ಒಂದು ಅಂಕಿ ಅಂಶದ ಪ್ರಕಾರ ಕಳೆದ ವರ್ಷ ದೇಶವ್ಯಾಪಿ ಪ್ರೇಮಿಗಳ ದಿನಾಚರಣೆಯ ದಿನ ೨೦೨ ಅತ್ಯಾಚಾರ ಪ್ರಕರಣಗಳು ಜರುಗಿದೆ. ಮದ್ಯಸೇವನೆಯಿಂದ ೩೧೮ ಅಪಘಾತಗಳು ನಡೆದಿದೆ. ೬೫ ಕೋಟಿ ರೂಪಾಯಿಗಳ ಕಾಂಡೋಮ್ ವಿತರಣೆ ಆಗಿದೆ. ೩೧೮ ಯುವತಿಯರು ನಾಪತ್ತೆ ಆಗಿದ್ದಾರೆ. ೩೧೮ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೧೩ ಕೋಟಿ ರೂಗಳ ವ್ಯವಹಾರ ನಡೆದಿದೆ. ೫೬ ಯುವತಿಯರ ಅಪಹರಣ ಆಗಿದೆ ಮತ್ತು ೨೮೦೦ ಕೋಟಿ ರೂಗಳ ಸರಾಯಿ ಮಾರಾಟವಾಗಿದೆ. ೩೬೦೦ ಕೋಟಿ ಮಾದಕ ಪದಾರ್ಥಗಳ ವಿತರಣೆ ಆಗಿದೆ. ಇದನ್ನು ಮಾನ್ಯ ಪ್ರಮೋದ ಮುತಾಲಿಕರವರು ಪತ್ರಿಕಾ ಪರಿಷತ್‌ನಲ್ಲಿ ತಿಳಿಸಿದ್ದಾರೆ ಮತ್ತು ಇದರ ಇರುದ್ದ ಹಿಂದೂ ಜನಜಾಗೃತಿ ಸಮಿತಿ ಸೇರಿ ಅನೇಕ ಹಿಂದೂ ಪರ ಸಂಘಟನೆಗಳು ಹೋರಾಟವನ್ನು ಮಾಡುತ್ತಿದ್ದಾರೆ.

ಶ್ರೇಷ್ಠ ಪರಂಪರೆಯ ಪಾವಿತ್ರ್ಯ ಕಾಪಾಡಲು, ವ್ಯಾಲೆಂಟೈನ್ ಡೇಯನ್ನು  ಬಹಿಷ್ಕರಿಸೋಣ

ನಮ್ಮ ಸಾವಿರಾರು ವರ್ಷಗಳ ಶ್ರೇಷ್ಠ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ಆಚರಣೆಗಳ ಶಾಸ್ತ್ರವನ್ನು ಅರಿತುಕೊಂಡು ಅವುಗಳನ್ನು ಆಚರಣೆಗೆ ತಂದಲ್ಲಿ ಅವುಗಳಿಂದ ನಮ್ಮ ರಕ್ಷಣೆಯಾಗುವುದು. ಸನಾತನ ಧರ್ಮವು ಇಡೀ ವಿಶ್ವವೇ ನಮ್ಮ ಮನೆ ಎಂಬ ವಿಶಾಲಮನೋಭಾವದಿಂದ ಪೃಕೃತಿ, ಪ್ರಾಣಿ-ಪಕ್ಷಿಗಳಲ್ಲಿ ನೀರಪೇಕ್ಷ ಪ್ರೀತಿ ಮಾಡಲು ಕಲಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೇಳಿದ ಕುಂಕುಮ ಹಚ್ಚಿಕೊಳ್ಳುವುದರಿಂದ ಸ್ತ್ರೀಯ ರಕ್ಷಣೆಯ ಜೊತೆಗೆ, ಪತಿಯ ಆಯುಷ್ಯವು ವೃಧ್ಧಿಸುತ್ತದೆ. ಯುವಕರು ತಿಲಕವನ್ನು ಹಚ್ಚುವುದರಿಂದ ಶಿವನ ತತ್ತ್ವವನ್ನು ಪಡೆಯಬಹುದು. ಈ ರೀತಿ ನಾವು ಧರ್ಮದ ಆಚರಣೆಯನ್ನು ಮಾಡುವುದರಿಂದ ನಮ್ಮ, ಕುಂಟುಂಬ ಮತ್ತು ರಾಷ್ಟ್ರ ಹಾಗೂ ಧರ್ಮದ ರಕ್ಷಣೆಯಾಗುವುದು. ಅದಕ್ಕಾಗಿ ಇಂತಹ ಅರ್ಥಹೀನ ಕೃತಿಗಳನ್ನು ದೂರಮಾಡೋಣ ಮತ್ತು ನಾವು ವೆಲೆಂಟೈನ್ ಡೇ ನಿಲ್ಲಿಸಿ ರಾಷ್ಟ್ರಪುರುಷರ ದಿನವನ್ನು ಆಚರಿಸೋಣ.
ಲೇಖನ:  ಶ್ರೀ. ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ.

‘ವ್ಯಾಲೆಂಟೈನ್ ಡೇ’ ಗೆ ಹೂವು ಮತ್ತು ಉಡುಗೊರೆಗಳಿಗಿಂತ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟದಲ್ಲಿ ಹೆಚ್ಚಳ!
ಪಾಶ್ಚಾತ್ಯರ ಅಂಧಾನುಕರಣೆಯ ದುಷ್ಪರಿಣಾಮ!

ನವ ದೆಹಲಿ: ‘ವ್ಯಾಲೆಂಟೈನ್ ಡೇ’ ಯಂದು ಗುಲಾಬಿ ಹೂವು ಮತ್ತು ಉಡುಗೊರೆಗಳಿಗಿಂತ ನಿರೋಧ (ಕಾಂಡೋಮ್) ಮತ್ತು ಗರ್ಭನಿರೋಧಕ ಮಾತ್ರೆಗಳು ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿರುವುದು ವರದಿಯೊಂದರಿಂದ ಸ್ಪಷ್ಟವಾಗಿದೆ. ಒಂದು ಸ್ವಯಂಸೇವಾ ಸಂಸ್ಥೆ ಮಾಡಿದ ಸಮೀಕ್ಷೆಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ.

ಈ ಸಂಸ್ಥೆಯ ವರದಿಯಲ್ಲಿ ಹೇಳಿದ ಅಂಶವೆಂದರೆ,

೧. ಈ ವರ್ಷ ಅನೇಕ ಯುವಕ-ಯುವತಿಯರು ದುಬಾರಿ ಹೂವು ಮತ್ತು ಉಡುಗೊರೆಗಳನ್ನು ಖರೀದಿಸುವುದಕ್ಕಿಂತ ಸುರಕ್ಷಿತ ಶಾರೀರಿಕ ಸಂಬಂಧಕ್ಕಾಗಿ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಖರೀದಿಗೆ ಹೆಚ್ಚು ಖರ್ಚು ಮಾಡಿದರು.

೨. ಅನೇಕರು ಪ್ರೇಮ ವ್ಯಕ್ತಪಡಿಸಲು ಶಾರೀರಿಕ ಸಂಬಂಧಗಳಿಗೆ ಆದ್ಯತೆ ನೀಡಿದರು.

೩. ‘ಫೆಬ್ರವರಿ ೧೦ ರಿಂದಲೇ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಬೇಡಿಕೆ ೧೦ ಪಟ್ಟು ಹೆಚ್ಚಾಯಿತು’, ಎಂದು  ದೆಹಲಿಯ ಮಹರೌಲಿ ಮಾರ್ಕೇಟಿನ ಖನ್ನಾ ಮೆಡಿಕಲ್ಸ್‌ನ ಜಸವಿಂದರ್ ಹೇಳಿದ್ದಾರೆ.

೪. ಅದರ ಪರಿಣಾಮದಿಂದ ಅನೇಕ ಔಷಧಗಳ ಅಂಗಡಿಗಳಲ್ಲಿ ಈ ವಸ್ತುಗಳ ದಾಸ್ತಾನು ಮುಗಿದು ಹೋಗಿತ್ತು.

೫. ಕಳೆದ ವರ್ಷ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್‌ಡೀಲ್ ಡಾಟ್ ಕಾಮ್ ಭಾರತದಲ್ಲಿ ‘ವ್ಯಾಲೆಂಟೈನ್ ಡೇ’ಯ ಒಂದೇ ದಿನ ಒಂದುವರೆ ಲಕ್ಷ ನಿರೋಧ್ ಮಾರಾಟ ಮಾಡಿತ್ತು.

೬. ನಿರೋಧ್ ತಯಾರಿಸುವ ಕಂಪನಿಗಳ ವರದಿಗಳಿಗನುಸಾರ ‘ವ್ಯಾಲೆಂಟೈನ್ ಡೇ’ ಅವಧಿಯಲ್ಲಿ ನಿರೋಧದ ಮಾರಾಟ ೨೫ ಪಟ್ಟು ಹೆಚ್ಚಾಗುತ್ತದೆ.

೭. ೧೫ ವರ್ಷಗಳ ಹಿಂದೆ ‘ವ್ಯಾಲೆಂಟೈನ್ ಡೇ’ ಭಾರತದಲ್ಲಿ ಆಚರಿಸಲು ಆರಂಭವಾಯಿತು, ಆಗ ಗುಲಾಬಿ ಹೂವುಗಳ ಮಾರಾಟ ೫ ಪಟ್ಟು ಹೆಚ್ಚಾಗಿತ್ತು. ಸದ್ಯ ಈ ದಿನಗಳಿಗೆ ಭೀಭತ್ಸ ಸ್ವರೂಪ ಬಂದಿರುವುದು ಮೇಲಿನ ಅಂಕಿಅಂಶದಿಂದ ತಿಳಿಯುವುದು.

(ಇದರಿಂದ ಇಂದು ಕೂಡ ಭಾರತದ ಯುವಪೀಳಿಗೆ ಪಾಶ್ಚಾತ್ಯರ ಅಂಧಾನುಕರಣೆಯಿಂದ ತಮ್ಮ ಕಾಲುಗಳಿಗೇ ಕೊಡಲಿಯೇಟು ಹಾಕಿಕೊಳ್ಳುತ್ತಿವೆ. ಇಂದಿನ ರಾಜಕಾರಣಿಗಳು ನಿರ್ಮಿಸಿದ ಸಮಸ್ಯೆಗಳನ್ನು ದುರ್ಲಕ್ಷಿಸಲು ಅವರು ಇಂತಹ ದಿನಗಳಿಗೆ ಪ್ರೋತ್ಸಾಹ ನೀಡಿರುವುದರಿಂದ ಒಂದು ಪೀಳಿಗೆಯು ವಿನಾಶದ ಅಂಚಿನಲ್ಲಿರುವುದು ಕಾಣಿಸುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲಿಕ್ಕಾಗಿಯೇ ಹಿಂದೂ ರಾಷ್ಟ್ರ ಬೇಕು! - ಸಂಪಾದಕರು)

ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಸ್ವೇಚ್ಛಾಚಾರದ ಸಮರ್ಥನೆ ಮಾಡುವ ಇಂತಹ ಸಾಮಾಜಿಕ ಅಧಃಪತನದ ವಿಷಯದ ಹೊಣೆಯನ್ನು ಸ್ವೀಕರಿಸಿ ಯಾವ ಪ್ರಾಯಶ್ಚಿತ್ತ ತೆಗೆದುಕೊಳ್ಳುವರು?

ಆಧಾರ : ವಾರಪತ್ರಿಕೆ ‘ಸನಾತನ ಪ್ರಭಾತ’

ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ!

ದೇವಸ್ಥಾನಗಳೆಂದರೆ ಬ್ರಹ್ಮಾಂಡದಿಂದ ದೈವಿಕ ಲಹರಿಗಳನ್ನು ಆಕರ್ಷಿಸಿ, ಅಧೋದಿಶೆಗೂ, ಅಷ್ಟದಿಕ್ಕುಗಳಿಗೂ, ಊರ್ಧ್ವದಿಶೆಗೂ ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕವಾಗಿಯೂ ಚೈತನ್ಯಮಯವಾಗಿಯೂ ಮಾಡುವ ಪ್ರಚಂಡ ಶಕ್ತಿಯುಳ್ಳ ಹಿಂದೂಗಳ ಶ್ರದ್ಧಾಸ್ಥಾನಗಳಾಗಿವೆ. ಮನುಕುಲಕ್ಕೆ ಮಾರಕವಾದ ಕಪ್ಪು ಶಕ್ತಿಯನ್ನೊಳಗೊಂಡಿರುವ ರಜತಮಾತ್ಮಕ ಲಹರಿಗಳು ಗ್ರಹಣದ ಸಮಯದಲ್ಲಿ ಪ್ರಥ್ವಿಯ ಕಡೆಗೆ ಬರುತ್ತಿರುತ್ತವೆ. ದೇವಸ್ಥಾನಗಳಲ್ಲಿರುವ ದೇವತೆಗಳ ಮೂರ್ತಿಗಳಿಂದಲೂ ಅಲ್ಲಿ ನಡೆಯುವ ಪೂಜೆ, ಹೋಮ ಹವನಾದಿಗಳಿಂದಲೂ ಪ್ರಕ್ಷೇಪಿಸಲ್ಪಡುವ ದೇವತೆಗಳ ಚೈತನ್ಯ, ಸಾತ್ತ್ವಿಕತೆ ಹಾಗೂ ಕೆಟ್ಟ ಶಕ್ತಿಗಳಿಗೆ ಮಾರಕವಾದ ದೈವಿಕ ಲಹರಿಗಳು ಈ ರಜತಮಾತ್ಮಕ ಲಹರಿಗಳನ್ನು ಭೂಮಿಯಿಂದ ೫ ಕಿ.ಮೀ ದೂರವಿರುವಾಗಲೇ ನಾಶಪಡಿಸುತ್ತವೆ. ಇದರಿಂದಾಗಿ ಗ್ರಹಣದ ಸಮಯದಲ್ಲಿ ಪೃಥ್ವಿಯ ಮೇಲಾಗುವ ಅನಿಷ್ಟ ಪರಿಣಾಮಗಳು ಕಡಿಮೆಯಾಗುತ್ತವೆ. ಇಂತಹ ಶ್ರದ್ಧಾಸ್ಥಾನಗಳ ಪಾವಿತ್ಯವನ್ನು ಕಾಪಾಡಿ ಅಲ್ಲಿ ಶಾಂತತೆ ಹಾಗೂ ಸಾತ್ತ್ವಿಕ ವಾತಾವರಣವು ನೆಲಸುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಈ ರೀತಿ ಮಾಡಿರಿ :
  • ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ಐತಿಹ್ಯ, ವಿಶೇಷತೆ, ಕ್ಷೇತ್ರಮಹಿಮೆ ಇರುವುದರಿಂದ ಆಯಾಯ ದೇವಸ್ಥಾನದ ಸಂಪ್ರದಾಯ, ಕಟ್ಟುಪಾಡು, ವಿಧಿನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಎಷ್ಟೇ ಉನ್ನತ ಸ್ಥಾನ ಅಥವಾ ಪದವಿಯಲ್ಲಿದ್ದರೂ ಅವುಗಳ ಉಲ್ಲಂಘನೆ ಮಾಡಬಾರದು. "ದೇವರಿಗಿಂತ ನಾನೇ ದೊಡ್ಡವನು" ಎಂಬ ಅಹಂಭಾವ ಎಂದಿಗೂ ಸಲ್ಲದು.
  • ಸ್ನಾನ ಮಾಡಿದ ನಂತರವೇ ದೇವಸ್ಥಾನವನ್ನು ಪ್ರವೇಶಿಸಿರಿ.
  • ದೇವಸ್ಥಾನದಲ್ಲಿ ಗಲಾಟೆ, ಗದ್ದಲ, ಕೂಗಾಟ, ಜಗಳ ಇತ್ಯಾದಿಗಳಿಂದಾಗಿ ದೇವಸ್ಥಾನದ ಚೈತನ್ಯವು ಕಡಿಮೆಯಾಗದಂತೆ ಶಿಸ್ತಿನಿಂದ ವರ್ತಿಸಿರಿ.
  • ನಮ್ಮ ಸೃಷ್ಟಿಕರ್ತನು ಗರ್ಭಗುಡಿಯಲ್ಲಿ ಉಪಸ್ಥಿತನಿರುವನು ಎಂಬುದನ್ನು ನೆನೆದು ದೇವಸ್ಥಾನದಲ್ಲಿ ಮೌನವನ್ನು ಕಾಪಾಡಿರಿ.
  • ದೇವಸ್ಥಾನದ ವಾತಾವರಣವು ಶಾಂತವಾಗಿದ್ದರೆ ಮಾತ್ರ ಏಕಾಗ್ರತೆಯಿಂದ ದೇವರ ದರ್ಶನ ಪಡೆದು ಮನಃಶಾಂತಿಯನ್ನು ಅನುಭವಿಸಬಹುದು. ಕೆಲವರಿಗೆ ಧ್ಯಾನವೂ ತಗಲಬಹುದು. ಅದರ ಲಾಭವು ಎಲ್ಲರಿಗೂ ಸಿಗುವಂತೆ ನಮ್ಮ  ನಡೆನುಡಿಗಳಿರಲಿ.
  • ದೇವರ ದರ್ಶನ ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿರುವಾಗ ಹರಟೆ ಹೊಡೆಯದೆ, ಮನಸ್ಸು ಸತತವಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳಲ್ಲೇ ತೊಡಗಿರಲಿ.
  • ದೇವಸ್ಥಾನದ ಪ್ರಾಂಗಣದಲ್ಲಿ ಮೊಬೈಲ್‌ಗಳ ಮಾಧ್ಯಮದಿಂದ ಚಿತ್ರಗೀತೆಗಳನ್ನು ಕೇಳುವುದು, ಜೂಜಾಡುವುದು, ಧೂಮಪಾನ, ಮದ್ಯಪಾನ ಮಾಡುವುದು ಸಲ್ಲದು.
  • ಹೊರಗಿನಿಂದ ತಂದ ತಿಂಡಿತೀರ್ಥಗಳನ್ನು ಅಲ್ಲಿ ಸೇವಿಸಬೇಡಿರಿ.
  • ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆ, ಸಿಹಿತಿಂಡಿ ಇತ್ಯಾದಿಗಳನ್ನು ಗರ್ಭಗುಡಿ ಯಾ ಪ್ರಾಂಗಣದಲ್ಲಿ ಚೆಲ್ಲಬೇಡಿರಿ.
  • ಬಾಳೆಹಣ್ಣು ಸಿಪ್ಪೆ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಚೀಲ. ಕಸ ಇತ್ಯಾದಿಗಳನ್ನು ಕೊಂಡೊಯ್ದು ಕಸದ ಗುಂಡಿಯಲ್ಲೇ ಹಾಕಿ ನೈರ್ಮಲ್ಯ ಕಾಪಾಡಿರಿ.
  • ಗರ್ಭಗುಡಿಯ ಗೋಡೆ, ಬಲಿಕಲ್ಲು ಇತ್ಯಾದಿಗಳನ್ನು ಸ್ಪರ್ಶಿಸಬೇಡಿರಿ. ಪ್ರಸಾದ ಪಡೆದ ಬಳಿಕ ಕೈಗೆ ಅಂಟಿಕೊಂಡ ಗಂಧ, ಕುಂಕುಮ ಇತ್ಯಾದಿಗಳನ್ನು ಗೋಡೆಗಳಿಗೆ ಅಥವಾ ಧ್ವಜ ಸ್ತಂಭಕ್ಕೆ ಅಂಟಿಸಬೇಡಿರಿ.
  • ದೇವಸ್ಥಾನದ ಆವರಣದೊಳಗೆ ಭಗ್ನವಾದ ದೇವರ ಮೂರ್ತಿಗಳನ್ನು ಚಿಕ್ಕ ಚಿಕ್ಕ ವಿಗ್ರಹಗಳನ್ನು ತಂದಿರಿಸುವುದರಿಂದ ದೇವಸ್ಥಾನದ ಪಾವಿತ್ರ್ಯ ಕೆಡುತ್ತದೆ ಎಂಬುದು ತಿಳಿದಿರಲಿ.
  • ದೇವಸ್ಥಾನದ ಆವರಣದೊಳಗೆ ಇರುವ ಪರಿವಾರ ದೇವತೆಗಳ ಗುಡಿಗಳ ಬಳಿ ದೀಪಗಳನ್ನು ಉರಿಸಿಟ್ಟು ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಿರಿ. ನೀವು ಅರ್ಪಿಸುವ ಅಕ್ಷತೆ ಕಾಳುಗಳಿಗಾಗಿ ಇರುವೆಗಳು ಬರುವಂತಾದರೆ ವಾತಾವರಣವು ಕಲುಷಿತವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಿರಿ.
  • ದೇವಸ್ಥಾನಗಳ ಆವರಣಗಳಲ್ಲಿನ ಅಶ್ವತ್ಥ, ಶಮಿ, ಔದುಂಬರ (ಅತ್ತಿ ಮರ) ಗೋಳಿ ಇತ್ಯಾದಿ ಪೂಜನೀಯ ವೃಕ್ಷಗಳ ಬುಡದಲ್ಲಿ ಗೆದ್ದಲು ಹಿಡಿದು ಭಾಗಶಃ ನಶಿಸಿ ಹೋದ, ಮಸುಕಾದ ಹಾಗೂ ಒಡೆದ ಗಾಜು ಫ್ರೇಮುಗಳುಳ್ಳ ದೇವರ ಭಾವಚಿತ್ರಗಳನ್ನು ತಂದಿರಿಸಬೇಡಿರಿ. ದೇವಸ್ಥಾನಗಳ ಆವರಣಗಳೆಂದರೆ ನಮ್ಮ ಮನೆಯ ಕಸವನ್ನು ವಿಸರ್ಜಿಸುವ ಕಸದ ತೊಟ್ಟಿಗಳಲ್ಲ ಎಂಬುದು ನೆನಪಿರಲಿ. ಅಂತಹ ಭಾವಚಿತ್ರಗಳ ಫ್ರೇಮ್ ಹಾಗೂ ಕನ್ನಡಿಗಳನ್ನು ಕಳಚಿ ಅಕ್ಷತೆ ಹಾಗೂ ಪುಷ್ಪಗಳೊಂದಿಗೆ ದೇವರ ಚಿತ್ರಗಳನ್ನು ಶುಭ್ರ ವಸ್ತ್ರದಲ್ಲಿ ಸುತ್ತಿ, ಹರಿಯುವ ನೀರಲ್ಲಿ ಜಲದೇವತೆಗೆ ಪ್ರಾರ್ಥನೆ ಮಾಡಿ ವಿಸರ್ಜಿಸಿರಿ. ಹರಿಯುವ ನೀರಿಲ್ಲದಿದ್ದರೆ ಅಗ್ನಿದೇವನಿಗೆ ಪ್ರಾರ್ಥನೆಮಾಡಿ ಅಗ್ನಿಗೆ ಅರ್ಪಿಸಿರಿ. ಇದರಿಂದ ದೇವತೆಗಾಗುವ ಅನಾದರವೂ ತಪ್ಪುತ್ತದೆ.
ಕನ್ನಡಿಯು ಸ್ವಚ್ಛವಿದ್ದಷ್ಟೂ ಪ್ರತಿಬಿಂಬವು ಸ್ಪಷ್ಟವಾಗಿ ಗೋಚರಿಸುವಂತೆ ದೇವಸ್ಥಾನಗಳಲ್ಲಿ ಶಾಂತತೆ, ನೈರ್ಮಲ್ಯ, ಪಾವಿತ್ರ್ಯ ಹೆಚ್ಚಿದಂತೆಲ್ಲ ಭಗವದ್ಭಕ್ತರಿಗೆ ಅದರ ಪೂರ್ತಿ ಲಾಭ ಸಿಗುತ್ತದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?')

ಸತ್ಯಪ್ರೇಮಿ ಮತ್ತು ನೀತಿವಂತ ಹಿಂದೂಗಳೇ ದೇಶದ ಉತ್ಕರ್ಷವನ್ನು ಸಾಧಿಸಲು ಸಾಧ್ಯ!

ಹಿಂದೂಗಳೇ, ಹಿಂದೂ ಸಂಸ್ಕೃತಿಯ ಗತವೈಭವವನ್ನು ಮರಳಿ ಪಡೆಯಲು ಸಂಘಟಿತರಾಗಿ!
ಹಿಂದೂಗಳು ವಿಶ್ವದ ಯಾವುದೇ ದೇಶದಲ್ಲಿ ವಿಹರಿಸುವಾಗ ಮಾನಹಾನಿಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಹಿಂದೂಗಳ ಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಇಂದು ‘ಹಿಂದೂ’ ಎಂದು ಬದುಕುವುದೂ ಅವಮಾನಕಾರಿಯಾಗಿದೆ ಎಂದೆನಿಸುತ್ತದೆ. ಭಾರತವು ವೈಭವಶಾಲಿ ಮತ್ತು ಅತ್ಯುಚ್ಚ ಶಿಖರದಲ್ಲಿದ್ದಾಗ ಇಲ್ಲಿ ವಾಸಿಸುತ್ತಿದ್ದ ಸತ್ಯಪ್ರೇಮಿ ಹಾಗೂ ನೀತಿವಂತ ಹಿಂದೂಗಳ ಬಗ್ಗೆ ಪಾಶ್ಚಾತ್ಯರು ಬಹಳಷ್ಟು ಬರೆದಿಟ್ಟಿದ್ದಾರೆ. ಇಂದಿಗೂ ಹಿಂದೂಗಳಲ್ಲಿ ಅನೇಕ ದೈವೀ ಗುಣಗಳು ಕಾಣಿಸುತ್ತವೆ. ಹಿಂದೂಗಳಿಗೆ ಅವರ ಅದ್ವಿತೀಯ ಗುಣಗಳ ಅರಿವಾಗಬೇಕೆಂದು ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ.