Showing posts with label ಧಾರ್ಮಿಕ ವಿಧಿ. Show all posts
Showing posts with label ಧಾರ್ಮಿಕ ವಿಧಿ. Show all posts

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವವರೆಗೆ ಮಾಡಬಹುದು !


೧. ಶ್ರಾದ್ಧವನ್ನು ಮಾಡದಿದ್ದರೆ ಅದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನೂ ಸಹಿಸಿಕೊಳ್ಳಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ

ಸಹೋದರರೆಲ್ಲರೂ ಒಂದೇ ಕುಟುಂಬದಲ್ಲಿದ್ದರೆ ಹಿರಿಯ ಸಹೋದರನು ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ (ಉದಾ. ಶಾರೀರಿಕ ತೊಂದರೆ) ಹಿರಿಯ ಸಹೋದರನಿಗೆ ಮಾಡಲು ಸಾಧ್ಯವಾಗದಿದ್ದರೆ ಇತರ ಸಹೋದರರಲ್ಲಿ ಯಾರಾದರೂ ಮಾಡಬಹುದು; ಏಕೆಂದರೆ ಶ್ರಾದ್ಧವನ್ನು ಮಾಡದಿರುವುದರಿಂದಾಗುವ ತೊಂದರೆಯನ್ನು ಪ್ರತಿಯೊಬ್ಬ ಸಹೋದರನು ಸಹ ಅನುಭವಿಸಬೇಕಾಗುವುದರಿಂದ ಕಡಿಮೆ ಪಕ್ಷ ಒಬ್ಬ ಸಹೋದರನಾದರೂ ಶ್ರಾದ್ಧ ಮಾಡಿದರೆ ಅದು ಪೂರ್ವಜರನ್ನು ತೃಪ್ತಿಗೊಳಿಸಲು ಉಪಯೋಗವಾಗುವುದರಿಂದ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ. ಸಹೋದರರೆಲ್ಲರೂ ವಿಭಕ್ತ ಕುಟುಂಬದಲ್ಲಿದ್ದರೆ ಪ್ರತಿಯೊಬ್ಬರೂ ಶ್ರಾದ್ಧ ವಿಧಿಯನ್ನು ಮಾಡಬಹುದು.

೨. ಮಹಾಲಯ ಶ್ರಾದ್ಧದಲ್ಲಿ ತಂದೆ-ತಾಯಿಯ ಜೊತೆಗೆ ಇತರ ಆಪ್ತರು ಸಹ ಬರುವುದರಿಂದ ಅವರಿಗೂ ಪಿಂಡ ನೀಡಲು ಸಾಧ್ಯವಾಗುತ್ತದೆ

ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ. ಇದರಲ್ಲಿ ತಂದೆಯ ಶ್ರಾದ್ಧವಿದ್ದರೆ ತಂದೆ, ಅಜ್ಜ, ಮುತ್ತಜ್ಜ ಹಾಗೂ ತಾಯಿಯದ್ದಾಗಿದ್ದರೆ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿ ಪಿತೃಗಳು ಬರುತ್ತಾರೆ. ಮಹಾಲಯ ಶ್ರಾದ್ಧದಲ್ಲಿ ಮಾತ್ರ ಅವರೊಂದಿಗೆ ಚಿಕ್ಕಪ್ಪ, ಮಾವ, ಅತ್ತೆ, ಸಹೋದರಿ, ಚಿಕ್ಕಮ್ಮ, ಇನ್ನೂ ಇತರ ಬಂಧುಗಳು ಹೀಗೆ ತುಂಬ ಪಿತೃಗಳು ಬರುತ್ತಿರುತ್ತಾರೆ. ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು. ಕಾರಣಾಂತರಗಳಿಂದ ಪಿತೃಪಕ್ಷದಲ್ಲಿ ಮಹಾಲಯವನ್ನು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನು ತುಲಾ ರಾಶಿಯಲ್ಲಿರುವ ವರೆಗೆ ಮಹಾಲಯ ಶ್ರಾದ್ಧವನ್ನು ಮಾಡಬಹುದು.

೩. ಸಾಧಕರು ಸನಾತನದ ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ) ಈ ಧ್ವನಿಚಿತ್ರಸುರುಳಿಯನ್ನು ನೋಡಿ ಅದರಂತೆ ಶ್ರಾದ್ಧವಿಧಿಯನ್ನು ಮಾಡಬೇಕು !

ಅ. ಸಾಧಕರು ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ಸನಾತನದ "ಪಿತೃಪಕ್ಷ ಹಾಗೂ ಮಹಾಲಯ ಶ್ರಾದ್ಧ (ಶಾಸ್ತ್ರ ಹಾಗೂ ಶ್ರಾದ್ಧದಲ್ಲಿನ ವಿಧಿಗಳ ಪರಿಚಯ)" ಎಂಬ ಧ್ವನಿಚಿತ್ರಸುರುಳಿಯನ್ನು ನೋಡಿ ಹಾಗೂ ತಾವು ಯಾವ ಪುರೋಹಿತರಿಂದ ಶ್ರಾದ್ಧವನ್ನು ಮಾಡಿಸಿಕೊಳ್ಳುವವರಿರುವಿರೋ ಆ ಪುರೋಹಿತರಿಗೂ ಈ ಧ್ವನಿಚಿತ್ರಸುರುಳಿಯನ್ನು ಅವಶ್ಯಕತೆಗನುಸಾರ ನೋಡಲು ವಿನಂತಿಸಿಕೊಳ್ಳಿರಿ.

ಆ. ನಮಗೆ ಇದೇ ರೀತಿ ವಿಧಿ ಮಾಡಬೇಕೆಂದು ಹೇಳಿ ಹಾಗೂ ಅದರಲ್ಲಿರುವಂತೆ ಶ್ರಾದ್ಧವನ್ನು ಮಾಡಿರಿ.

ಇ. ಶ್ರಾದ್ಧವಿಧಿಯನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕೆಂಬುದು ಎಲ್ಲರಿಗೂ ತಿಳಿಯಲೆಂದು ಧ್ವನಿಚಿತ್ರಸುರುಳಿಯಲ್ಲಿ ಭೋಜನಕ್ಕಾಗಿ ಪ್ರತ್ಯಕ್ಷವಾಗಿ ಬ್ರಾಹ್ಮಣರನ್ನು ಕೂರಿಸಿ ವಿಧಿ ಮಾಡಲಾಗಿದೆ. ಬ್ರಾಹ್ಮಣ ಭೋಜನ ಸಾಧ್ಯವಿಲ್ಲದ್ದಿದ್ದರೆ ಬ್ರಾಹ್ಮಣರ ಜಾಗದಲ್ಲಿ ದರ್ಬೆಯಿಟ್ಟು ಚಟಶ್ರಾದ್ಧವನ್ನು ಮಾಡಬಹುದು.

ಈ. ವಿಧಿಯ ಪೌರೋಹಿತ್ಯ ಮಾಡಲು ಮಾತ್ರ ಒಬ್ಬ ಬ್ರಾಹ್ಮಣರ ಆವಶ್ಯಕತೆಯಿರುತ್ತದೆ.

೪. ಯಾವ ಸಾಧಕರು ಈ ವರ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲಿಲ್ಲವೋ, ಅವರು ೧೫.೧೧.೨೦೧೬ ರ ವರೆಗೆ ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಮಾಡಿರಿ.

ಸನಾತನ ಪಂಚಾಂಗದಲ್ಲಿ ಈ ವರ್ಷ ಅಂದರೆ ನವೆಂಬರ್ ೨೦೧೬ ರಲ್ಲಿ ಮಹಾಲಯ ಸಮಾಪ್ತಿ ಎಂದು ನೀಡಲಾಗಿದೆ. ಆ ದಿನದ ವರೆಗೆ ಮಹಾಲಯ ಶ್ರಾದ್ಧವನ್ನು ಯಾವುದೇ ತಿಥಿಯಂದು ಮಾಡಬಹುದು. ಆದ್ದರಿಂದ ಯಾರು ಪಿತೃಪಕ್ಷದ ಸಮಯದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲಿಲ್ಲವೋ ಅವರು ಈ ವರ್ಷದ ೧೫.೧೧.೨೦೧೬ ರ ವರೆಗೆ ಶಾಸ್ತ್ರೋಕ್ತವಾಗಿ ಮಹಾಲಯ ಶ್ರಾದ್ಧವನ್ನು ಆಚರಿಸಿ ಪೂರ್ವಜರ ತೊಂದರೆಯಿಂದ ತಮ್ಮನ್ನು ಮುಕ್ತಗೊಳಿಸಿಕೊಳ್ಳಿರಿ.

– ಶ್ರೀ. ದಾಮೋದರ ವಝೇ ಗುರೂಜಿ (ಸನಾತನ ಸಾಧಕ-ಪುರೋಹಿತ ಪಾಠಶಾಲೆಯ ಸಂಚಾಲಕರು), ಫೋಂಡಾ, ಗೋವಾ.

(ಆಧಾರ : ಸಾಪ್ತಾಹಿಕ ಪತ್ರಿಕೆ 'ಸನಾತನ ಪ್ರಭಾತ')

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳುನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?

ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?

ಪತಿಯ ನಿಧನಕ್ಕಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು (ಅವಿಧವಾ ನವಮಿ ಅಥವಾ ಮುತ್ತೈದೆ ನವಮಿಯಂದೇ) ಏಕೆ ಮಾಡಬೇಕು?

‘ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ರಜೋಗುಣೀ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಕಾರ್ಯನಿರತವಾಗಿರುವ ಶಿವಲಹರಿಗಳ ಪ್ರವಾಹವು ಆಯಾಯ ಲಿಂಗದೇಹಗಳಿಗೆ ಅವಶ್ಯಕವಿರುವ ಲಹರಿಗಳನ್ನು ಸೆಳೆದುಕೊಳ್ಳಲು ಪೋಷಕ ಮತ್ತು ಪೂರಕವಾಗಿರುತ್ತವೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ತ್ವವು ಸೂಕ್ಷ್ಮಶಿವತತ್ತ್ವದೊಂದಿಗೆ ಬೇಗನೇ ಸಂಯೋಗವಾಗುವುದರಿಂದ ಮುತ್ತೈದೆಯರ (ಅವಿಧವೆಯ) ಲಿಂಗದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.

ಈ ದಿನ ಶಿವಲಹರಿಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಮುತ್ತೈದೆಗೆ ಸೂಕ್ಷ್ಮ ಶಿವತತ್ತ್ವದ ಬಲವು ಪ್ರಾಪ್ತವಾಗಿ ಪೃಥ್ವಿಯ ಮೇಲಿನ ಅವಳ ಪತಿಗೆ ಸಂಬಂಧಿಸಿದ ಆಸಕ್ತಿಯುಕ್ತ ಬಂಧನಗಳು ಕಡಿಮೆಯಾಗಿ ಅವಳು ಪತಿಯ ಬಂಧನದಿಂದ ಮುಕ್ತಳಾಗುತ್ತಾಳೆ. ಆದುದರಿಂದ ಶಕ್ತಿರೂಪಕ್ಕೆ ಸಂಬಂಧಿಸಿದ ಮುತ್ತೈದೆಯ ಶ್ರಾದ್ಧವನ್ನು ಮಹಾಲಯದಲ್ಲಿನ ಶಿವಲಹರಿಗಳ ಬಾಹುಳ್ಯವಿರುವ ನವಮಿಯಂದು ಮಾಡುತ್ತಾರೆ. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೮.೨೦೦೬, ಮಧ್ಯಾಹ್ನ ೧೨.೪೦)

(ಆಧಾರ : ಸನಾತನ ಸಂಸ್ಥೆಯ ಗ್ರಂಥಮಾಲಿಕೆ "ಶ್ರಾದ್ಧ")

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

ನಾಗದೇವತೆಗೆ ಪ್ರಿಯವಾದ ಆಶ್ಲೇಷಾ ಬಲಿ

ಪೀಠಿಕೆ:
    ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ., ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.


ನಾಗಾಲಯಗಳು - ಆಶ್ಲೇಷಾ ಬಲಿ:
    ಆಶ್ಲೇಷಾ ಬಲಿ ಎಂಬ ಪದಗಳನ್ನು ಕೇಳಿದೊಡನೆಯೇ ಶ್ರೀ ಪರಶುರಾಮ ಸೃಷ್ಟಿಯ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯ, ಗುತ್ತಿಗಾರು ಸಮೀಪದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಮಂಗಳೂರು ತಾಲೂಕಿನ ಕುಡುಪು, ಕಾಸರಗೋಡು ತಾಲೂಕಿನ ಮಂಜೇಶ್ವರ, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ವಾಸುಕಿ ಸನ್ನಿಧಿ, ಆರ್ಯಾಪು ಗ್ರಾಮದ ಕಾರ್ಪಾಡಿ ಇಂತಹ ನಾಗಾಲಯಗಳಲ್ಲಿ ವಿಶೇಷವಾಗಿ ಆಶ್ಲೇಷ ನಕ್ಷತ್ರದ ತಿಥಿಯಂದು ಈ ಆರಾಧನೆ ನಡೆಯುತ್ತದೆ. ಪಂಚಮೀ ಅಥವಾ ಷಷ್ಠೀ ತಿಥಿಯಿದ್ದರೂ ಈ ಆರಾಧನೆಗೆ ಪ್ರಶಸ್ತವೆಂಬ ನಂಬಿಕೆಯಿದೆ.
    ಆಶ್ಲೇಷ ನಕ್ಷತ್ರವು ತಾರಾ ಮಂಡಲದಲ್ಲಿ ಗುರುತಿಸಲಾದ ಇಪ್ಪತ್ತೇಳು ಮಹಾ ನಕ್ಷತ್ರಗಳಲ್ಲಿ ಒಂಭತ್ತನೆಯದು. ಜ್ಯೋತಿಷ್ಯ ಶಾಸ್ತ್ರಾಧಾರದಂತೆ ಪ್ರತಿನಕ್ಷತ್ರಕ್ಕೂ ಒಂದೊಂದು ನಕ್ಷತ್ರ ದೇವತೆ. ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತ್ತಕ್ಕಾಗಿ, ನಾಗದೇವತೆಯ ಅನುಗ್ರಹಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷಾ ಬಲಿ.

ನಾಗನಿಗೇಕೀ ಮಹತ್ವ?:
        ನಾಗನು ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಆದುದರಿಂದ ಸರ್ಪಗಳಿಗೆ ಹಾನಿಯುಂಟು ಮಾಡಿದವನಿಗೆ ಸರ್ಪಶಾಪದಿಂದ ಕಷ್ಟಕಾರ್ಪಣ್ಯಗಳು ಸತತವಾಗಿ ಬಾಧಿಸುತ್ತಲೇ ಇರುತ್ತವೆ ಎಂಬುದು ಆಸ್ತಿಕರ ಅಚಲ ನಂಬಿಕೆ.

ಸರ್ಪಗಳ ಜನ್ಮ, ಸರ್ಪ ಸಂಕುಲ:
    ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ೫೨ ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು.    ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಅನುಭವಿಕರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ. ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಈ ಪೂಜೆ ನಡೆಯುತ್ತದೆ.

ಸರ್ಪ ಶಾಪ ಬರುವುದು ಹೇಗೆ?:
    ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಯಾ ಪೂರ್ವಜರಿಂದ ನಡೆದ ಸರ್ಪವಧೆ,  ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಲೇ ಇರುವುದು ಅನಿವಾರ್ಯವಾಗಿದೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ಆಶ್ಲೇಷಾ ಬಲಿಯನ್ನು ನೀಡಲಾಗುತ್ತದೆ.

ಆಶ್ಲೇಷಾ ಬಲಿ ವಿಧಾನ:
    ಆಶ್ಲೇಷಾ ಬಲಿಗೆ ಪ್ರಶಸ್ತವಾದ ಶುಭದಿನದಂದು ಕುಟುಂಬದ ಯಜಮಾನನು ಕುಟುಂಬದ ಸದಸ್ಯರೊಡಗೂಡಿ ಶುಚಿರ್ಭೂತನಾಗಿ, ಉಪವಾಸವಿದ್ದು, ಕ್ಷೇತ್ರ ವಿಧಿಗನುಸಾರವಾಗಿ, ವೇದ ಪಾರಂಗತರಾದ ನಿಷ್ಠಾವಂತ ವಿಪ್ರೋತ್ತಮರ ದ್ವಾರಾ ಆಶ್ಲೇಷಾ ಬಲಿಯನ್ನು ನೀಡಬೇಕು. ಸಾಮೂಹಿಕವಾಗಿ ಈ ಪೂಜೆ ನಡೆಸುವುದೂ ಇದೆ. ವ್ಯಕ್ತಿಗತವಾಗಿ ನಡೆಸುವ ಪದ್ಧತಿಯೂ ಉಂಟು. ಶ್ರೀ ಗುರು ಗಣಪತಿ, ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷಾ ಬಲಿ ವಿಧಾನ ಆರಂಭವಾಗುತ್ತದೆ. ತಳಿರು ತೋರಣಗಳಿಂದ ಅಲಂಕೃತವಾದ ನಾಗ ಸನ್ನಿಧಿಯಲ್ಲಿ ಹರಿದ್ರಾ, ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ಆಕರ್ಷಕವಾಗಿ ಬರೆಯಲಾಗುತ್ತದೆ. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ  ಅಗ್ರಸ್ಥಾನ. ಉಳಿದ ಅಷ್ಟ ಪದಗಳಲ್ಲಿ ಅಷ್ಟಕುಲ ಸಂಜಾತರಾದ ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ ಅವರ ಆವಾಹನೆ. ಆಶ್ಲೇಷಾ ಬಲಿ ಮಂಡಲದ ೫೨ ಪದಗಳು ಸರ್ಪಕುಲದ ೫೨ ಮಂದಿ ಸರ್ಪ ಶ್ರೇಷ್ಟರ ಆವಾಹನೆಗಾಗಿವೆ. ಸರ್ಪಗಳ ಪತ್ನಿಯರು, ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳ ಸಹಿತ ಸರ್ಪ ಸಂಕುಲವನ್ನೂ ಇಂದ್ರಾದಿ ಅಷ್ಟದಿಕ್ಪಾಲಕರನ್ನೂ ದೇವಗಣಗಳನ್ನೂ ನಾಗಗಣಗಳನ್ನೂ ಅವಾಹಿಸಲಾಗುತ್ತದೆ.

    ಆಶ್ಲೇಷಾ ಬಲಿ ವಿಧಾನದಂತೆ ಶ್ರೀ ವಾಸುಕೀ ನಾಗರಾಜನನ್ನೂ ಆತನ ಸರ್ಪ ಸಂಕುಲವನ್ನೂ ಧ್ಯಾನಿಸಲಾಗುತ್ತದೆ. ಅನಂತರ ಕಲ್ಪೋಕ್ತವಾಗಿ ಆಸನ, ಸ್ವಾಗತ, ಪಾದ್ಯ, ಅರ್ಘ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ವಂದನೆಗಳೆಂಬ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಗುತ್ತದೆ. ಸಮಸ್ತ ಸರ್ಪಶಾಪ ಪರಿಹಾರಕ್ಕಾಗಿ ಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಮಂಡಲಗಳ ಪದಗಳಲ್ಲಿರಿಸಿ, ಸಮರ್ಪಿಸಲಾಗುತ್ತದೆ. ದೇವತೆಗಳಿಗೆ ಪ್ರಿಯವಾಗುವಂತೆ ಜ್ಯೋತಿಗಳನ್ನು ಬೆಳಗಿಸಿ ದೇದಿಪ್ಯವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಮಹಾಮಂಗಳಾರತಿಯನ್ನು ಬೆಳಗಿ ಮಂತ್ರ ಪುಷ್ಪಾಂಜಲಿಯನ್ನು ಸಮರ್ಪಿಸಲಾಗುತ್ತದೆ. ಆನಂತರ ಪ್ರದಕ್ಷಿಣೆ ಗೈದು, ಸಾಷ್ಟಾಂಗ ನಮಸ್ಕಾರ ಮಾಡಿ, ನಾಗದೇವತೆಯನ್ನು  ಪ್ರಸನ್ನಗೊಳಿಸಿ,ಮಹಾಮಹಿಮರಾದ ಸರ್ಪಗಳೇ, ಶ್ರದ್ಧಾ ಭಕ್ತಿಯಿಂದ ಯಥಾಶಕ್ತಿಯಾಗಿ ನಡೆಸಿದ ಈ ಪೂಜೆಯನ್ನು ಅಂಗೀಕರಿಸಿ, ಬಲಿದಾನವನ್ನು ಸ್ವೀಕರಿಸಿರಿ. ಸುಪ್ರೀತರಾಗಿರಿ, ಯಜಮಾನನಿಂದ, ಆತನ ಕುಟುಂಬದವರಿಂದ, ಪೂರ್ವಜರಿಂದ ನಿಮಗಾಗಿರ ಬಹುದಾದ ಸಕಲ ಹಾನಿಯನ್ನು, ಅಪಚಾರಗಳನ್ನು ಮನ್ನಿಸಿ, ಯಜಮಾನನನ್ನು, ಆತನ ಕುಟುಂಬವನ್ನು ಸಕಲ ದುರಿತಗಳಿಂದ ರಕ್ಷಿಸಿರಿ, ಅವರಿಗುಂಟಾಗಿರುವ ಸರ್ಪ ಶಾಪವನ್ನು ನಿವೃತ್ತಿ ಪಡಿಸಿ ಅನುಗ್ರಹಿಸಿರಿ. ಕುಷ್ಠಾದಿ ರೋಗಗಳನ್ನು ನಾಶಗೊಳಿಸಿರಿ. ಆಯುಷ್ಮಂತರಾದ ಪುತ್ರ ಪೌತ್ರರ ಉತ್ತಮ ಸಂತಾನ ಭಾಗ್ಯವನ್ನು ಅನುಗ್ರಹಿಸಿ ಉತ್ತರೋತ್ತರ ಅಭಿವೃದ್ಧಿಯಾಗುವಂತೆ ಆಶಿರ್ವದಿಸಿ, ಅಷ್ಟ್ಯೆಶ್ವರ್ಯಗಳನ್ನು ದಯಪಾಲಿಸುವ ಕೃಪೆ ಮಾಡಿರಿ ಇಂತು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಅರ್ಘ್ಯದಾನ, ಮತ್ತು ವಾಯನಗಳ ದಾನ ನೀಡಲಾಗುತ್ತದೆ. ಪ್ರಸಾದವನ್ನು ವಿತರಿಸಿ, ವಿಸರ್ಜನ ಪೂಜೆಯನ್ನು ನೆರವೇರಿಸಿ ಆಶ್ಲೇಷಾ ಬಲಿ ವಿಧಾನವನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ.

    ಅನಂತರ ಪೂಜೆಯನ್ನು ನೆರವೇರಿಸಿದ ಆಚಾರ್ಯರನ್ನು ಫಲ, ತಾಂಬೂಲ ಯಥಾಶಕ್ತಿ ದಕ್ಷಿಣೆ ನೀಡಿ ನಮಸ್ಕರಿಸಿ, ಆರ್ಶಿರ್ವಾದ ಪಡೆಯುವುದೊಂದಿಗೆ ಆಶ್ಲೇಷಾ ಬಲಿ ಪೂಜೆಯು ಮುಕ್ತಾಯವಾಗುತ್ತದೆ.

ಸಂಕಲನ : 
ಬಿ. ರಾಮಭಟ್, ಹಿಂದೂ ಜನಜಾಗೃತಿ ಸಮಿತಿ,
ನಿವೃತ್ತ ಉಪತಹಶೀಲ್ದಾರರು, ಸುಳ್ಯ ದ.ಕ. ದೂ.ಕ್ರ : ೯೪೮೧೭೫೬೦೨೮

ಸರ್ಪ ಸಂಸ್ಕಾರ


ಮಾನವನನ್ನು ಅನೇಕ ಸಮಸ್ಯೆಗಳು ಸುತ್ತುವರಿದಾಗ, ಆತನು ತನ್ನ ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ ಅವುಗಳನ್ನು ಉಪಯೋಗಿಸಿ ಅವುಗಳಿಂದ ಹೊರಬರಲು ಶತಪ್ರಯತ್ನ ಮಾಡುತ್ತಾನೆ. ಅವುಗಳು ನಿಷ್ಫಲವಾದಾಗ ಆತನು ಜ್ಯೋತಿಷಿಗಳ ಮೊರೆ ಹೋಗುವುದು, ಅವರು ಸೂಚಿಸಿದಂತೆ ತೀರ್ಥಯಾತ್ರೆ, ಪೂಜೆ ಪುನಸ್ಕಾರಗಳು, ಹೋಮ ಹವನಗಳು, ಧಾರ್ಮಿಕ ವಿಧಿಗಳನ್ನು ನೆರವೇರಿಸುವುದು ಸರ್ವೇ ಸಾಮಾನ್ಯ.

ಮಾನವನಿಗೆ ಬರುವ ಸುಖ – ದುಃಖದ ವಿಧಗಳೆಂದರೆ (1) ಆಧಿಭೌತಿಕ (ಪಂಚ ಮಹಾಭೌತಿಕ ವಿಷಯಗಳಿಂದ ಉದಾ: ನಿಸರ್ಗ ಮತ್ತು ಪ್ರಾಣಿಗಳಿಂದ) (2) ಆಧಿದೈವಿಕ (ದೇವತೆಗಳ ಕೃಪೆಯಿಂದ ಸುಖ - ಶಾಪದಿಂದ ದುಃಖ) ಮತ್ತು ಆಧ್ಯಾತ್ಮಿಕ (ಅಂದರೆ ವಾತ, ಪಿತ್ತ, ಕಫಗಳೆಂಬ ಧಾತುಗಳ ಸಮಸ್ಥಿತಿಯಿಂದ ಶಾರೀರಿಕ ಸುಖ, ವಿಷಮಸ್ಥಿತಿಯಿಂದ ಬರುವ ರೋಗಗಳಿಂದ ದುಃಖ ಹಾಗೂ ಅರಿಷಡ್ವರ್ಗಗಳ ದೆಸೆಯಿಂದ ಬರುವ ಮಾನಸಿಕ ರೂಪದ ಕಾಯಿಲೆಗಳಿಂದ ದುಃಖ) ಆಧಿಭೌತಿಕ ಮತ್ತು ಆಧಿದೈವಿಕ ದುಃಖಗಳು ಬಾಹ್ಯಉಪಾಯಗಳಿಂದ (ಅಂದರೆ ಔಷಧೋಪಚಾರ ಇತ್ಯಾದಿಗಳಿಂದ ಹಾಗೂ ದೇವ ದೇವತೆಗಳ ಪೂಜೆ ಪುನಸ್ಕಾರದಿಂದ) ಹಾಗೂ ಮಾನಸಿಕ ದುಃಖವು ಅಂತರೋಪಾಯಗಳಿಂದ ನಿವಾರಣೆಯಾಗುತ್ತದೆ. ಆಧ್ಯಾತ್ಮಿಕ ತೊಂದರೆಗಳು ಆಧ್ಯಾತ್ಮಿಕ ಸಾಧನೆಯಿಂದ ನಿವಾರಣೆಯಾಗುತ್ತವೆ ಎಂಬುದು ಜನ ಸಾಮಾನ್ಯರಿಗೆ ತಿಲಿದಿರುವುದಿಲ್ಲ.

ಇತ್ತೀಚೆಗಿನ ಒಂದೆರಡು ದಶಕಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರ ಮಾಡಿಸಿ ಹರಿಕೆ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಕೇವಲ ಭಕ್ತಿ ಭಾವದಿಂದಲ್ಲ - ಬದಲಾಗಿ ತಮಗೊದಗಿರುವ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ - ಸಕಾಮ ಸಾಧನೆಗಾಗಿ. ಅದರಲ್ಲೂ ಜ್ಯೋತಿಷಿಗಳ ಸಲಹೆ ಸೂಚನೆಯಂತೆ ಕುಕ್ಕೆ ಸುಬ್ರಹ್ಮಣ್ಯದಂತಹ ನಾಗಕ್ಷೇತ್ರಗಳಿಗೆ ತೆರಳಿ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆಯಂತಹ ವಿಧಿಗಳನ್ನು ಅತಿ ಹೆಚ್ಚು ಭಕ್ತರು ನೆರವೇರಿಸುತ್ತಾರೆ. ಆದರೆ ಅಂತಹ ವಿಧಿಗಳನ್ನು ಮಾಡುವವರಿಗೆ ಅವುಗಳ ಉದ್ದೇಶ, ಮಹತ್ವ ಮತ್ತು ವಿಧಾನ ತಿಳಿದಿರುವುದಿಲ್ಲ. ಆದುದರಿಂದ ಅವರು ವಿಧಿಗಳನ್ನು ಮಾಡುವ ಮೊದಲು ಆಚಾರ್ಯರನ್ನು ಕಂಡು ಅವರ ಬಿಡುವಿನ ಸಮಯ ಅರಿತುಕೊಂಡು ಅವರಲ್ಲಿಗೆ ಹೋಗಿ ಈ ವಿಧಿಯು ಫಲಕಾರಿಯಾಗಲು ತಾವು ಅನುಸರಿಸಬೇಕಾದ ವಿಧಿವಿಧಾನಗಳನ್ನು (ಉದಾ: ತೀರ್ಥಸ್ನಾನ ಮಾಡುವುದು, ನಿಗದಿತ ವೇಳೆಯಲ್ಲಿ ಸಾತ್ವಿಕ ಆಹಾರ ಸೇವಿಸಿ ನಿಷ್ಟೆಯಿಂದಿದ್ದು ನಾಗಾಲಯಕ್ಕೆ ಅಥವಾ ದೇವಸ್ಥಾನಕ್ಕೆ ಪ್ರದಕ್ಷಿಣೆಗಳನ್ನು ಶ್ರದ್ಧಾ ಭಕ್ತಿ ಪೂರ್ವಕ ಮಾಡುವುದು ಇತ್ಯಾದಿ) ತಿಳಿದುಕೊಂಡು ಅದರಂತೆ ಕ್ರಿಯಾಕರ್ಮದಲ್ಲಿ  ಭಾಗವಹಿಸಿ ಸನ್ಮಾರ್ಗಕ್ಕೆ ದಾರಿ ತೋರುವ ಗುರುಸ್ಥಾನದಲ್ಲಿರುವ ಆಚಾರ್ಯರ ಆಶೀರ್ವಾದ ಪಡೆದುಕೊಂಡು ಕೃತಾರ್ಥರಾಗಬೇಕು ಹಾಗೂ ಮುಂದಿನ ಆಚರಣೆಗಳ ಬಗ್ಗೆ ತಿಳಿದುಕೊಂಡು ಆಚರಿಸಿದರೆ ಮಾತ್ರ ವಿಧಿಯ ಪೂರ್ಣ ಫಲ ದೊರೆಯುವುದು. ಕ್ರಿಯಾ ಕರ್ತೃವಿಗೆ ವಿಧಿಯ ಪೂರ್ಣ ಫಲ ದೊರೆಯುವುದು ಆತನ ಶ್ರದ್ಧಾಭಕ್ತಿ, ಆಚರಣೆ ಹಾಗೂ ಆಚಾರ್ಯರ ಮತ್ತು ದೇವರ ಪೂರ್ಣ ಆಶೀರ್ವಾದ ಇವುಗಳನ್ನು ಅವಲಂಬಿಸಿರುತ್ತದೆ.

ಆಶ್ಲೇಷಾ ಬಲಿಯ ಉದ್ದೇಶ, ಮಹತ್ವ, ಕಾರ್ಯವಿಧಾನ, ಫಲಶ್ರುತಿ ಇತ್ಯಾದಿಗಳ ಬಗ್ಗೆ ಈ ಹಿಂದೆ ಈ ಲೇಖನದ ಸಂಕಲನಕಾರನು ಬರೆದ ಲೇಖನವನ್ನು ಪತ್ರಿಕೆಗಳಲ್ಲಿ ಓದಿದ ಅನೇಕ ಓದುಗರು ಮೆಚ್ಚಿ ಪ್ರಶಂಸಿಸಿ ಸರ್ಪ ಸಂಸ್ಕಾರದ ಬಗ್ಗೆ ಲೇಖನ ಬರೆಯಲು ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಅನೇಕ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು ಸಂಕಲನ ರೂಪದಲ್ಲಿ ಈ ಲೇಖನ ಹೊರಬರುತ್ತಿದೆ. ಇದರಲ್ಲಿ ಗಹನವಾದ ತಪ್ಪುಗಳೇನಾದರೂ ಬಂದಿದ್ದರೆ - ಧಾರ್ಮಿಕ ಆಚಾರ್ಯರು ಅವುಗಳನ್ನು ಸೂಚಿಸಿದರೆ ಈ ಲೇಖನದ ಉದ್ದೇಶ ಈಡೇರಿದಂತಾದೀತು.

ಸರ್ಪ ಸಂಸ್ಕಾರದ ಉದ್ದೇಶ, ಮಹತ್ವ, ಮಾನವನಿಗೆ ವಿವಿಧ ರೀತಿಗಳಿಂದ ತಗಲುವ ಪಾಪಗಳು ಇತ್ಯಾದಿಗಳು. “ಪ್ರಾಯಶ್ಚಿತ್ತ ಸಂಕಲ್ಪ”ದ ಭಾಗವನ್ನು ಓದಿದಾಗ ತಿಳಿಯುವುವು.

ನಾಗನಿಗೇಕೀ ಮಹತ್ವ? :

ನಮ್ಮ ಶಾಸ್ತ್ರ ಪುರಾಣಗಳಲ್ಲಿ ನಾವು ವಾಸಿಸುವ ಪ್ರಥ್ವಿಯನ್ನು ಮಹಾಶೇಷನೆಂಬ ಸರ್ಪವು ಧರಿಸಿಕೊಂಡಿರುತ್ತದೆ ಎಂದು ಪರಿಗಣಿಸಲಾಗಿದೆ. ಸರ್ಪನೇ ಮಹಾವಿಷ್ಣುವಿಗೆ ಶಯ್ಯೆಯಾಗಿದ್ದಾನೆ. ಮಹಾವಿಷ್ಣುವು ಶ್ರೀ ರಾಮಚಂದ್ರನಾಗಿ ಅವತಾರವೆತ್ತಿದಾಗ, ಆತನ ಸಹೋದರ ಲಕ್ಷ್ಮಣನಾಗಿ, ಆತನನ್ನು  ನೆರಳಿನಂತೆ ಹಿಂಬಾಲಿಸಿ, ಆತನಿಗೆ ಬೆಂಗಾವಲಾಗಿ ನಿಂತು ಶ್ರೀ ರಾಮಚಂದ್ರನ ಪ್ರೀತಿಪಾತ್ರನಾದವನೂ ಅವನೇ ಎಂಬ ಪ್ರತೀತಿ. ಕೃಷ್ಣಾವತಾರದಲ್ಲಿ ಶ್ರೀ ಕೃಷ್ಣನು ಸೆರೆಮನೆಯಲ್ಲಿ  ಜನ್ಮತಾಳಿ, ತಂದೆ ವಸುದೇವನಿಂದ ನಂದಗೋಕುಲಕ್ಕೆ ಒಯ್ಯಲ್ಪಡುತ್ತಿದ್ದಾಗ ಸುರಿದ ಮುಸಲ ಧಾರಾವರ್ಷದ ಒಂದು ಹನಿ ಜಲವೂ ಆ ಶಿಶುವಿಗೆ ತಗಲದಂತೆ ತನ್ನ ಹೆಡೆಯನ್ನು ಛತ್ರದೋಪಾದಿಯಲ್ಲಿ ಹಿಡಿದು ಉಪಕರಿಸಿದವನೂ ಆತನೇ. ಮಹಾವಿಷ್ಣುವಿಗೆ ಪ್ರಿಯನಾದ ಮಹಾಶೇಷ, ಮಹಾಮಹಿಮನಾದ ಪರಶಿವನಿಗೂ ಪ್ರೀತಿಪಾತ್ರನಾಗಿ ಕಂಠಾಭರಣನಾದ. ಸಮುದ್ರ ಮಥನದಲ್ಲಿ ಉದ್ಭವಿಸಿದ ಹಾಲಾಹಲವೆಂಬ ಭಯಂಕರ ವಿಷವನ್ನು ಪಾನಮಾಡಿ ಶಿವನು ವಿಷ ಕಂಠನೆನಿಸಿದಾಗ ಆ ಮಹೇಶನ ಕಂಠವನ್ನು ಸುತ್ತಿಕೊಂಡು ಭಯಂಕರವಾದ ಉರಿಯನ್ನು ತಣಿಸಿದ. ಪಾರ್ವತೀ ಪುತ್ರನಾದ ಮಹಾಗಣಪತಿಗೆ ಕಟಿ ಬಂಧವಾಗಿಯೂ ಗಣೇಶನಿಗೆ ಪ್ರಿಯನಾದ. ಪಾರ್ವತೀ ಪರಮೇಶ್ವರರ ಪ್ರಿಯಪುತ್ರ ದೇವ ಸೇನಾನಿ ಸುಬ್ರಹ್ಮಣ್ಯನೊಡನೆ ಸಮೀಕರಿಸಲ್ಪಟ್ಟು ಪೂಜೆಗೊಳ್ಳುತ್ತಲೂ ಬಂದಿದ್ದಾನೆ. ಸಮುದ್ರ ಮಥನಕ್ಕೆ ಕಡಗೋಲಾಗಿದ್ದ ಮಂದರಗಿರಿಗೂ ರಜ್ಜುವಾಗಿ ಮಣಿದವನು ತ್ರಿಪುರ ಮಥನ ಕಾಲಕ್ಕೆ ಶಿವನ ಮಹಾ ಧನುಸ್ಸಿಗೂ ಹೆದೆಯಾಗಿ ಸೆಟೆದುನಿಂತು - ಹಾವು ಹಗ್ಗವಾಗಿ – ದೇವತೆಗಳಿಗೆ ಉಪಕರಿಸಿದನೀತ. ಕುಂಡಲಿನೀ ಎಂಬ ಪ್ರಾಣಾಕಾರ ಜೀವಶಕ್ತಿಯ ದಿವ್ಯ ಸಂಕೇತವೂ ಆತನೇ. ಕೃಷಿಕರಿಗೆ ಆತ ಕೃಷಿ ಪ್ರಧಾನ ದೇವತೆ. ಸಕಾಲದಲ್ಲಿ ಮಳೆ ಬೆಳೆಗಳನ್ನು ಅನುಗ್ರಹಿಸುವಾತ. ಸಂತಾನವಿಲ್ಲದೆ ಕೊರಗುವವರಿಗೆ ಸಂತಾನ ಭಾಗ್ಯ ಕರುಣಿಸಬಲ್ಲ ಮಹಾಮಹಿಮ, ಕರುಣಾಳು. ರೋಗ ರುಜಿನಗಳನ್ನು ತಡೆಯಬಲ್ಲ ವಿಶ್ವ ವೈದ್ಯನೀತ. ಈ ಲೋಕದ ರಜತಮಗಳನ್ನು ಹೀರಿ ವಿಷದ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡು ಭಕ್ತರಿಗೆ ರಕ್ಷಣೆ ನೀಡುವಾತ. ರೈತಾಪಿ ಜನರು ತಮ್ಮಲ್ಲಿರುವ ಧನಕನಕಗಳನ್ನು ಸಂರಕ್ಷಿಸಿಕೊಳ್ಳಲು ಭಧ್ರವಾದ ತಿಜೋರಿಗಳಿಲ್ಲದ ಕಾಲದಲ್ಲಿ ಅವುಗಳನ್ನು ಕುಡಿಕೆಗಳಲ್ಲಿ ತುಂಬಿಸಿ ಭೂಮಿಯಲ್ಲಿ ಹೂತಿಟ್ಟುದನ್ನು ರಕ್ಷಿಸುವ ನಿಧಿಸಂರಕ್ಷಕನೀತ. ನಾಗದೇವನ ಮಹಿಮೆಯನ್ನು ಏನೆಂದು ಬಣ್ಣಿಸಲಿ!

    ಈ ಜಗತ್ತಿನಲ್ಲಿ ವಿದ್ಯಾವಂತ, ನಿಷ್ಠಾವಂತ, ಆಚಾರವಂತ, ಸದ್ಗುಣಿ ಹಾಗೂ ಧಾರ್ಮಿಕ ಶ್ರದ್ಧೆಯಿಂದ ಧರ್ಮಪಾಲನೆ ಮತ್ತು ಧರ್ಮ ರಕ್ಷಣೆಯ ಕಾರ್ಯದಲ್ಲಿ ಸದಾ ನಿರತರಾಗಿರುವ ಗುರುವರ್ಯರು, ಋಷಿಮುನಿಗಳು, ಯತಿಗಳು, ಸಾಧುಸಂತರು, ದಾಸವರೇಣ್ಯರು ಹಾಗೂ ದೈವಿಕ ಬ್ರಾಹ್ಮಣ ವರ್ಣದವರು ಪೂಜನೀಯ ಮಾನವ ಶ್ರೇಷ್ಠರು. ವೃಕ್ಷಗಳಲ್ಲಿ ಅಶ್ವತ್ಥ, ವಟ (ಗೋಳಿ), ಔದುಂಬರ (ಅತ್ತಿ), ಶಮಿ, ಪಾಲಾಶ, ಅಪಾಮಾರ್ಗ (ಉತ್ತರಣೆ), ಬಿಲ್ವ, ಖದಿರ, ಆಮಲಕ (ನೆಲ್ಲಿ) ಅರ್ಕ (ಎಕ್ಕೆ), ದರ್ಭೆ, ತುಳಸಿ, ದೂರ್ವೆ(ಗರಿಕೆ) ಇತ್ಯಾದಿಗಳಲ್ಲಿ ದೈವಿಕ ಗುಣಗಳಿದ್ದು ಪೂಜನೀಯವಾಗಿವೆ.  ಅಂತೆಯೇ ಗೋವು, ಬಸವ, ಸರ್ಪ, ಗಜ, ಮಯೂರ, ಗರುಡ ಇತ್ಯಾದಿಗಳು ಪೂಜನೀಯ ಪ್ರಾಣಿ - ಪಕ್ಷಿಗಳು. ಇವುಗಳಲ್ಲಿ ಸರ್ಪ ರಾಜನಿಗೆ ಮೇಲೆ ಹೇಳಿದ ಕಾರಣಗಳಿಂದ  ಉನ್ನತ ಸ್ಥಾನವಿದೆ. ಸರ್ಪರಾಜನಾದ ವಾಸುಕಿಯು ಶ್ರೀ ಸುಬ್ರಹ್ಮಣ್ಯನೊಂದಿಗೆ ಸಮೀಕರಿಸಲ್ಲಟ್ಟು ಎಲ್ಲೆಡೆ ಪೂಜೆಗೊಳ್ಳುತ್ತಾನೆ. ಕೇವಲ ಹುಲು ಮಾನವನು ಮೃತಪಟ್ಟಾಗ ಔಧ್ರ್ವದೈಹಿಕ ಕ್ರಿಯಾಕರ್ಮಗಳನ್ನು ನೆರವೇರಿಸುವಂತೆಯೇ ಸರ್ಪ ನಾಶವಾದಾಗಲೂ ಯೋಗ್ಯವಾಗಿ ದೋಷ ಪರಿಹಾರಾತ್ಮಕ ಕ್ರಿಯಾಕರ್ಮಗಳನ್ನು ಮಾಡುವುದು ಮಾನವನ ಕರ್ತವ್ಯವಾಗಿದೆ.

ಸರ್ಪಗಳ ಜನ್ಮ, ಸರ್ಪ ಸಂಕುಲ:

    ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರು ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ 52 ಮಂದಿ ಸರ್ಪಶ್ರೇಷ್ಠರೂ, ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪ ಇವು ಸರ್ಪಗಳ ಮುಖ್ಯ ಲಕ್ಷಣಗಳು. ನಂಬಿ ಪೂಜಿಸಿದವರಿಗೆ ಅವು ತಾರಕ ಶಕ್ತಿಗಳು - ನಂಬದೆ ಹಾನಿಯುಂಟು ಮಾಡಿದವರಿಗೆ ಮಾರಕ ಶಕ್ತಿಗಳಾಗಿ ಪರಿಣಮಿಸುತ್ತವೆ. ಅದಕ್ಕಾಗಿಯೇ “ಹಾವಿನ ದ್ವೇಷ ಹನ್ನೆರಡು ವರುಷ” ಎಂಬ ನಾಣ್ಣುಡಿ ಪ್ರಚಲಿತವಾಗಿದೆ.

ಸರ್ಪಸಂಸ್ಕಾರಕ್ಕೆ ಮೊದಲು ಪ್ರಾಯಶ್ಚಿತ್ತ ಸಂಕಲ್ಪ

    ಸರ್ಪ ಸಂಸ್ಕಾರ ಮಾಡಲು ಸಂಕಲ್ಪ ಮಾಡಿರುವ ಮಾನವನು ನಿತ್ಯ ವಿಧಿಗಳನ್ನು ತೀರಿಸಿ, ತೀರ್ಥಸ್ನಾನ ಮಾಡಿ, ಶುಭ್ರವಸ್ತ್ರಧಾರಿಯಾಗಿ, ದೇವದರ್ಶನಗೈದು, ಪ್ರಾರ್ಥಿಸಿ, ಆಚಾರ ಸಂಪನ್ನರೂ, ವಿದ್ಯಾವಂತರೂ, ದೈವಿಕ ಬ್ರಾಹ್ಮಣ ವರ್ಣದವರೂ ಆಗಿರುವ ವಿಪ್ರರ ಎದುರಲ್ಲಿ ನತಮಸ್ತಕನಾಗಿ ನಿಂತು ಪಾಪಗಳ ಪ್ರಾಯಶ್ಚಿತ್ತವೆಂದು ಈ ರೀತಿ ಅವರಲ್ಲಿ ಪ್ರಾರ್ಥಿಸುತ್ತಾನೆ:

“ಪೂಜ್ಯರಾದ ವಿಪ್ರವರ್ಯರೆ, ನನ್ನ ವಿಜ್ಞಾಪನೆಯನ್ನು ಆಲಿಸಿ ನನ್ನಿಂದ ಸಮರ್ಪಿಸಲ್ಪಟ್ಟ ಸುವರ್ಣಮಯವಾದ ಈ ಕಿಂಚಿತ್ ದಕ್ಷಿಣೆಯನ್ನು ಯಥಾಯೋಗ್ಯವಾಗಿ ಸ್ವೀಕರಿಸಿ .................. ಗೋತ್ರದ ........... ನಕ್ಷತ್ರದ ................ ರಾಶಿಯ ............... ಎಂಬ ಹೆಸರಿನ ನಾನು ಮತ್ತು ನನ್ನ ಕುಟುಂಬದವರು ಈ ಜನ್ಮದಲ್ಲಿ, ಜನ್ಮ ಜನ್ಮಾಂತರಗಳಲ್ಲಿ ಕಾಮ, ಕ್ರೋಧವೇ ಮೊದಲಾದ ಅರಿಷಡ್ವರ್ಗಗಳಿಂದ ಮಾಡಿರಬಹುದಾದ ಸರ್ಪ, ಗಿಳಿ, ಶಾರಿಕಾ(ಮೈನಾಹಕ್ಕಿ), ಮಾರ್ಜಾಲ(ಬೆಕ್ಕು) ಮೊದಲಾದವುಗಳ ಪ್ರಾಣಿ ಹಿಂಸೆ, ಗರ್ಭಪಾತಕ್ಕಾಗಿ ನೀಡಿರಬಹುದಾದ ಔಷಧಗಳು, ಬೇರೆಯವರ ಮನೆಯನ್ನು ನಮ್ಮದೆಂದು ದಾನಮಾಡಿದ ದೋಷ, ಹುತ್ತದ ನಾಶ, ವೃಕ್ಷನಾಶ, ಸರ್ಪಗಳ ವಾಸಸ್ಥಳಗಳ (ನಾಗಬನ ಇತ್ಯಾದಿಗಳ) ನಾಶ, ಮನೆಯಲ್ಲಿ ಸರ್ಪವಧೆ, ಸರ್ಪದಹನ, ವಿಷಪೂರಿತ ಚೂರ್ಣಾದಿ ಅಭಿಚಾರ ಪ್ರಯೋಗಗಳಿಂದ ಗರ್ಭ ಪ್ರತಿಬಂಧನ, ಕಾಗೆಗೆ, ಬಾಳೆ ಗಿಡಕ್ಕೆ ಬಂಜೆತನ ಬರುವಂತೆ ಮಾಡಿರಬಹುದಾದ ಕೃತ್ಯಗಳು ಇತ್ಯಾದಿಗಳಿಂದ ಬಂದ ದೋಷಗಳು, ಸ್ತ್ರೀರಜಸ್ವಲಾದೋಷ (ಮುಟ್ಟುದೋಷ), ಮಕ್ಕಳಿಲ್ಲದಿರುವುದು, ಗರ್ಭಸ್ರಾವ, ಶಿಶುಹತ್ಯಾದೋಷ, ಕ್ರಿಮಿಕೀಟಗಳ ನಾಶ, ಅಧಿಕ ರಕ್ತಸ್ರಾವ, ಭೂತಗ್ರಹ, ಪ್ರೇತಗ್ರಹ, ವಿಶಾಚ ಗ್ರಹ, ಬ್ರಹ್ಮರಾಕ್ಷಸಗ್ರಹ, ಕೃತ್ರಿಮ ಗ್ರಹಗಳಿಂದ ಉಂಟಾದ ಮೋಹಿನಿ ಸ್ವರೂಪದ ದೋಷ, ಸಂಭೋಗದಲ್ಲಿ ತಲ್ಲೀನವಾದ ಜೋಡಿಯ ವಿಘಟನೆ ಇತ್ಯಾದಿಗಳಿಂದ ಬಂದಿರಬಹುದಾದ ಸಮಸ್ತ ದೋಷಗಳ ನಿವಾರಣೆಗಾಗಿ, ಶೀಘ್ರ ವೀರ್ಯ ಸ್ಖಲನ, ಶುಕ್ಲವು ನೀರಿನಂತೆ ತೆಳುವಾಗುವುದು ಇಂತಹ ದೋಷಗಳು ತಿಳಿದೋ ತಿಳಿಯದೆಯೋ ನಡೆದಿದ್ದರೆ  ಅಂತಹ ದೋಷಗಳ ನಿವಾರಣೆಗಾಗಿ, ಪಿತೃಶಾಪ, ದೇವಶಾಪ, ಶತ್ರುಶಾಪ, ವಿಷ್ಣುಶಾಪ, ಸ್ತ್ರೀಶಾಪ, ಮಾತೃಶಾಪ, ಸರ್ಪಶಾಪ, ಬ್ರಹ್ಮಶಾಪ, ಬ್ರಾಹ್ಮಣಶಾಪ, ಅಣ್ಣ, ತಮ್ಮ, ಜೀವದ ಗೆಳೆಯ, ಆಪ್ತ ಸಂಬಂಧಿಕರ ಶಾಪ, ಮಾತುಲ(ಸೋದರ ಮಾವ)ಶಾಪ, ಪತ್ನಿಶಾಪ, ಪ್ರೇತಶಾಪ ಇವುಗಳ ನಿವಾರಣೆಗಾಗಿ, ಭ್ರೂಣಹತ್ಯೆ, ಸ್ತ್ರೀಪುರುಷರ ಬಂಜೆತನ, ಅನ್ಯರ ಕುಟುಂಬವನ್ನು ನಾಶ ಮಾಡಿದ ದೋಷ, ದೇವತಾಗ್ರಹಗಳ ನಾಶ ಇತ್ಯಾದಿ ಸಕಲ ದೋಷಗಳು ನಿವೃತ್ತಿಯಾಗಿ ಆಯುಷ್ಮಂತರಾದ ಸಂತಾನ ಪ್ರಾಪ್ತಿಗಾಗಿ, ದೃಢಗರ್ಭ ಮತ್ತು ಶಿಶು ಸಂರಕ್ಷಣೆಗಾಗಿ, ಸುಪುತ್ರರ ಜನನದ ಮುಖಾಂತರ ವಂಶಾಭಿವೃದ್ಧಿಗಾಗಿ, ಮೂಕ(ಬಾಯಿ ಬಾರದ), ಸ್ತಬ್ಧ(ಅತ್ತಿತ್ತ ಚಲಿಸಲಾರದ), ಬಧಿರ(ಕಿವುಡ), ಮೂಢ(ಮೂರ್ಖ) ಅಪಸ್ಮಾರ ರೋಗಿಯಾದ, ಬುದ್ಧಿಹೀನ, ಅಂಗಹೀನ, ಸದಾರೋಗಿಯಾಗಿರುವ, ವಿಚಿತ್ರಾಂಗಗಳೊಂದಿಗೆ ಜನಿಸಿದ, ವಿಕಾರರೂಪದ, ಕೈಕಾಲುಗಳಿಲ್ಲದೆ ಜನಿಸಿದ, ಹುಟ್ಟುಕುರುಡನಾಗಿ ಜನಿಸಿದ, ಕಣ್ಣುಗಳಲ್ಲಿ ಹೂ ಬಂದಿರುವ, ಬಾಲ್ಯದಲ್ಲಿ, ತಾರುಣ್ಯದಲ್ಲಿ ಅಂಗವೈಕಲ್ಯ, ಅಕಾಲ ಮರಣ, ಅಲ್ಪಾಯುಷ್ಯ, ಬಾಲಗ್ರಹ ಪೀಡೆ, ಅಷ್ಟದಾರಿದ್ರ್ಯ, ಆಜನ್ಮರೋಗ, ಜನಿಸುವಾಗಲೇ ದಾರಿದ್ರ್ಯ ಮೊದಲಾದ ಸಕಲ ದೋಷ ನಿವಾರಣೆಗಾಗಿ, ಸರ್ಪದೋಷ, ಸರ್ಪಶಾಪ ನಿವಾರಣೆಗಾಗಿ, ಪುತ್ರ ಸಂತಾನ ಪ್ರಾಪ್ತಿಗಾಗಿ, ಸಮಸ್ತ ಪಾಪ ನಿವಾರಣೆಗಾಗಿ, ನವನಾಗಗಳ ಪ್ರೀತಿಗಾಗಿ, ಕುಟುಂಬದ ಎಲ್ಲರ ಪಾಪ ಪರಿಹಾರಕ್ಕಾಗಿ, ದೇವತೆಗಳ, ಬ್ರಾಹ್ಮಣರ ಅನುಗ್ರಹಕ್ಕಾಗಿ, ಆತ್ಮಶುದ್ಧಿಗಾಗಿ, ನಾಗದೇವತಾ ಪೂಜೆಯ ಅಧಿಕಾರ ಸಿದ್ಧಿಗಾಗಿ, ಅಷ್ಟದಾರಿದ್ರ್ಯ ನಿವಾರಣೆಗಾಗಿ, ಸರ್ಪ ಪ್ರಾಯಶ್ಚಿತ್ತವಾಗಿ ಈ ಕಿಂಚಿತ್ ದಕ್ಷಿಣೆಯನ್ನು ಸ್ವೀಕರಿಸಿ ಸರ್ಪದೇವತಾ ಪೂಜೆಯನ್ನು ಮಾಡುವ ಅಧಿಕಾರ ಪ್ರಾಪ್ತಿಗಾಗಿ ನನ್ನನ್ನು ನೀವು ಅನುಗ್ರಹಿಸಿರಿ” ಎಂದು ಹೇಳಿ ಶಕ್ತ್ಯಾನುಸಾರ ದಕ್ಷಿಣೆ ನೀಡಿ ನಮಸ್ಕರಿಸುತ್ತಾನೆ.

    ಅನಂತರ ಆಚಾರ್ಯರಿಂದ ಅನುಗ್ರಹಿತನಾಗಿ ಪೂಜಾ ವಿಧಿಯ ಸಂಕಲ್ಪವನ್ನು ಕ್ರಿಯಾಕರ್ತೃವು ಈ ಕೆಳಗಿನಂತೆ ಮಾಡುತ್ತಾನೆ.

    “............ ಗೋತ್ರದ............ ನಕ್ಷತ್ರದ ............... ರಾಶಿಯ .................. ಎಂಬ ಹೆಸರಿನ ನಾನು ವಿವಾಹಕ್ಕೆ ತಡೆಯುಂಟುಮಾಡುವ ದೋಷಗಳ ನಿವಾರಣೆಗಾಗಿ, ಕುಜ(ರಾಹು)ದೋಷ ನಿವಾರಣೆ, ಆದಿತ್ಯಾದಿ ನವಗ್ರಹರ ಪ್ರೀತ್ಯರ್ಥವಾಗಿ ಜನ್ಮ ನಕ್ಷತ್ರ, ಜನ್ಮ ರಾಶಿ, ನಾಮ ನಕ್ಷತ್ರ, ನಾಮರಾಶಿ, ಗೋಚಾರ ದೋಷ ನಿವಾರಣೆಗಾಗಿ, ವರ್ಗಜ, ರೂಪಜ, ಬಲಾಬಲ ಭಾವಗಳಲ್ಲಿ ಯಾವ ಗ್ರಹರು ಅರಿಷ್ಠ ಸ್ಥಾನದಲ್ಲಿರುವರೋ ಆ ಗ್ರಹದಿಂದ ಶುಭಫಲ ಪ್ರಾಪ್ತಿಗಾಗಿ, ಶುಭಸ್ಥಾನಗಳಲ್ಲಿರುವ ಶುಭಗ್ರಹರಿಂದ ಶುಭಫಲ ಪ್ರಾಪ್ತಿಗಾಗಿ, ಜನ್ಮಲಗ್ನದೋಷ, ನಾಮ ಲಗ್ನದೋಷ, ಅಂಶಲಗ್ನ ದೋಷ, ಮಹದಶಾಧಿಪತಿ ದೋಷ, ಮಹಾಭುಕ್ತಿನಾಥ ದೋಷ, ಷಡ್ಬಲ ವೇಧ ದೋಷ, ಗೋಚಾರ ವೇಧ ದೋಷ, ವಾಮವೇಧ ದೋಷ, ತ್ರಿವಿಧಿ ಶಾಸ್ತೋಕ್ತ ವೇಧ ದೋಷ, ಕಾಲಚಕ್ರದೋಷ, ಸರ್ವತೋಭದ್ರ ಚಕ್ರ ದೋಷ, ಅಷ್ಟಕ ವರ್ಗದೋಷ, ಅಂಗಗ್ರಹ ದೋಷ, ಭಾವಗ್ರಹ ದೋಷ, ಪಕ್ಷಗ್ರಹ ದೋಷ, ಭೂತಗ್ರಹ ದೋಷ, ಇವುಗಳಿಂದಾಗಿ ಫಲವೃಕ್ಷಗಳನ್ನು ಕಡಿದುದರಿಂದ, ಹುತ್ತವನ್ನು ನಾಶಪಡಿಸಿದುದರಿಂದ, ದೇವತೆಗಳ, ಬ್ರಾಹ್ಮಣರ ಸೊತ್ತನ್ನು ಅಪಹರಿಸಿದುದರಿಂದ, ವ್ಯಾಪಾರದಲ್ಲಿ ಮಾಡಿದ ಮೋಸದಿಂದ, ಪರಸ್ತ್ರೀಗಮನದಿಂದ, ದುಮಾರ್ಗದಿಂದ ಗಳಿಸಿದ ಸಂಪತ್ತಿನಿಂದ ಮಾಡಿದ ಅನ್ನದಾನದಿಂದ, ಗುರುವಿಗೆ ಅರ್ಪಿಸಿದುದನ್ನು ಮರಳಿ ವಶಪಡಿಸಿಕೊಳ್ಳುವುದರಿಂದ, ಧರ್ಮ ಗ್ರಂಥಗಳನ್ನ ಮರೆಯುವುದರಿಂದ, ಹೆಣ್ಣು ಕೊಟ್ಟ ಮಾವನನ್ನು ನಿಂದಿಸಿದುದರಿಂದ, ಹೀನ ಕರ್ಮದಿಂದ, ಬ್ರಾಹ್ಮಣ, ವೈಶ್ಯ, ಕ್ಷತ್ರಿಯರ ಹಾಸಿಗೆಯೇ ಮೊದಲಾದ ಭೋಗ ವಸ್ತುಗಳನ್ನು ಕದಿಯುವುದರಿಂದ, ತಿಳಿದೋ ತಿಳಿಯದೆಯೋ ಪಾದರಕ್ಷೆಗಳ ಅಪಹರಣದಿಂದ, ಸುಳ್ಳು ಸಾಕ್ಷಿ ನುಡಿಯುವುದರಿಂದ, ದೇವ ಪಿತೃ ಕಾರ್ಯಗಳ ನಿಂದನೆಯಿಂದ, ಇನ್ನೊಬ್ಬರ ಜಾಗದ ಅಪಹರಣದಿಂದ, ಸ್ವಾರ್ಥದ ಭೋಗಕ್ಕಾಗಿ ಮಾಡಿದ ಅನ್ಯಾಯದಿಂದ ಉಂಟಾದ ದೋಷಗಳ ಪರಿಹಾರಾರ್ಥವಾಗಿ, ಸಮಸ್ತ ದಶಾಧಿಪತಿ, ಭುಕ್ತಿನಾಥ, ಅಂತರನಾಥ, ಪ್ರಾಣದಶಾ, ಸೂಕ್ಷ್ಮದಶಾದಿ ಗ್ರಹದೋಷ ನಿವಾರಣೆಗಾಗಿ, ಯತ್ನಿಸಿದ ಕಾರ್ಯದ ವಿಘ್ನ ನಿವಾರಣೆಗಾಗಿ, ಶುಭ ಕಾರ್ಯಕ್ಕೆ ಉಂಟಾಗುವ ಪ್ರತಿಬಂಧಕ ನಿವಾರಣೆಗಾಗಿ, ವಾದ – ವಿವಾದಗಳಲ್ಲಿ ಜಯಪ್ರಾಪ್ತಿಗಾಗಿ, ದಾರಿದ್ರ್ಯ ನಿವಾರಣೆಗಾಗಿ, ನವನಾಗರ ಪ್ರೀತಿಗಾಗಿ ಸರ್ಪಸಂಸ್ಕಾರವನ್ನು ಮಾಡುತ್ತೇನೆ”.

    ಈ ರೀತಿ ಸಂಕಲ್ಪ ಮಾಡಿದ ಬಳಿಕ ಶಾಸ್ತ್ರೀಯವಾಗಿ ಸರ್ಪ ಸಂಸ್ಕಾರ ವಿಧಿಯನ್ನು ಆರಂಭಿಸಿ ಪೂರ್ತಿಗೊಳಿಸಬೇಕು. ಸರ್ಪಸಂಸ್ಕಾರ ವಿಧಿಯನ್ನು ಮಾಡಬಲ್ಲವರಾದರೆ ಅವರೇ ಮಾಡಿದರೆ ವಿಶೇಷ ಫಲ ಸಿಗುತ್ತದೆ. ಸ್ವತಃ ಸರ್ಪ ಸಂಸ್ಕಾರ ಮಾಡಿದರೆ ಬ್ರಾಹ್ಮಣರಿಗೆ ದಾನಗಳನ್ನು ಕೊಡಬೇಕು. ತನಗೆ ವಿಧಿ ಮಾಡುವುದು ತಿಳಿದಿಲ್ಲವಾದರೆ ಆಚಾರ್ಯ ಮುಖೇನ ವಿಧಿಯನ್ನು ಮಾಡಿಸಬೇಕು.

ಕಟ್ಟುಕಟ್ಟಳೆಗಳ ಪಾಲನೆ :   

ಈ ವಿಧೀಯನ್ನು ಆಶ್ವಲಾಯನ ಸೂತ್ರ, ಬೋಧಾಯನ ಸೂತ್ರ ಅಥವಾ ಆಪಸ್ತಂಭ ಸೂತ್ರ ಪ್ರಕಾರ ಆಯಾಯ ಶಾಖೆಯವರು ಮಾಡಬಹುದು/ ಮಾಡಿಸಬಹುದು. ಆದರೆ ಅವರು ಆಚರಿಸುವ ವಿಧಿ ವಿಧಾನಗಳಲ್ಲಿ ದೇಶ ಕಾಲ ಪರಿಸರ ಇವುಗಳನ್ನನುಸರಿಸಿ ಅಲ್ಪ ಸ್ವಲ್ಪ ಬದಲಾವಣೆಗಳಿರಬಹುದು. ಆದರೆ ಆಯಾಯ ಸೂತ್ರದ ಋಷಿ ಮುನಿಗಳ ಸಂಕಲ್ಪದಂತೆ ಅದನ್ನು ಮಾಡಿದವರಿಗೆ ಫಲವು ನಿಶ್ಚಿತವಾಗಿಯೂ ದೊರೆಯುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಚರಿಸುವ ವಿಧಿವಿಧಾನಗಳಲ್ಲಿ ವ್ಯತ್ಯಾಸವಿದ್ದರೂ ಆಯಾಯ ಕ್ಷೇತ್ರದ ಮಹಿಮೆಯಿಂದ ಕ್ರಿಯಾ ಕರ್ತೃವಿಗೆ ವಾಂಛಿತ ಫಲ ಸಿಗುವುದರಲ್ಲಿ ಅನುಮಾನವಿಲ್ಲ. ಈ ವಿಧಿಯನ್ನು ಮಾಡುವಾಗ ಆಯಾಯ ಕ್ಷೇತ್ರದ ಕಟ್ಟು ಕಟ್ಟಳೆಗಳನ್ನು ಅವಶ್ಯಕವಾಗಿ ಪಾಲಿಸಬೇಕು. ಹಾಗೂ ಅಲ್ಲಿನ ಆಚಾರ್ಯರ ಸೂಚನೆಗಳಂತೆ ನಡೆದುಕೊಳ್ಳಬೇಕು. ಸರ್ಪ ಸಂಸ್ಕಾರ ಮಾಡಿದ ದಿನ ಮಧ್ಯಾಹ್ನ ಭೋಜನ ಪ್ರಸಾದವನ್ನು ಸ್ವೀಕರಿಸಿ, ಸಂಜೆ ಫಲಹಾರ ಸ್ವೀಕರಿಸಬೇಕು. ರಾತ್ರಿ ಊಟ ನಿಷಿದ್ಧವಾಗಿದೆ. ಸರ್ಪ ಸಂಸ್ಕಾರ ಪ್ರಾರಂಭಿಸಿದ ನಂತರ ಆ ದಿನ ದೇವಸ್ಥಾನದ ಒಳಾಂಗಣವನ್ನು ಪ್ರವೇಶಿಸಬಾರದು. ಮುಂದಿನ ದಿನ ನಾಗಪ್ರತಿಷ್ಠೆ, ಆಶ್ಲೇಷ ಬಲಿ ಬಗ್ಗೆ ಆಚಾರ್ಯರಿಂದ ಮಾರ್ಗದರ್ಶನ ಪಡೆದು ಅಂತೆಯೇ ನಡೆದುಕೊಳ್ಳಬೇಕು.

ಈ ವಿಧಿಯನ್ನು ಯಾರು, ಯಾವಾಗ ಮಾಡಿಸಬಹುದು?:

    ಸರ್ಪ ಸಂಸ್ಕಾರ ವಿಧಿಯನ್ನು ಯಾರೂ ಮಾಡಿಸಬಹುದು. ಯಾವುದೇ ಗ್ರಹ ಅಸ್ತವಾಗಿದ್ದಾಗಲೂ ಮಾಡಿಸಬಹುದು. ಶುಭಕಾರ್ಯಕ್ಕೆ ಗುರುಬಲ ಇಲ್ಲದವರು ಸರ್ಪಸಂಸ್ಕಾರ ಮಾಡಿ ಗುರುಪೂಜೆ ಮಾಡಿದಲ್ಲಿ ಗುರುಬಲವೂ ಪ್ರಾಪ್ತಿಯಾಗುತ್ತದೆ. ತೀವ್ರತರದ ಕಾಯಿಲೆಗಳಿಗಾಗಿ ಆಪರೇಷನ್‍ಗೆ ಒಳಗಾಗುವ ವ್ಯಕ್ತಿಯಿಂದ ಈ ವಿಧಿ ಮಾಡಿಸಿದಲ್ಲಿ ಚಿಕಿತ್ಸೆ ಬೇಗನೇ ಫಲಕಾರಿಯಾಗುತ್ತದೆ. ಆದರೆ ಕಲಹ, ಅಶಾಂತಿಯ ಸಮಯದಲ್ಲಿ ಈ ವಿಧಿ ಮಾಡಿಸುವುದು ಯೋಗ್ಯವಲ್ಲ. ಅಪಘಾತದಿಂದ ಮನೆಯಲ್ಲಿ ದುರ್ಮರಣ ಸಂಭವಿಸಿದ್ದರೆ ಇದನ್ನು ಸುದರ್ಶನ ಹೋಮದೊಂದಿಗೆ ಮಾಡುವುದು ಶ್ರೇಯಸ್ಕರವಾಗಿದೆ.

ಪ್ರಯೋಜನಗಳು :

    ಸರ್ಪ ಸಂಸ್ಕಾರ ಮಾಡುವುದರಿಂದ ಆರಂಭದಲ್ಲಿ ಸಂಕಲ್ಪದಲ್ಲಿ ಹೇಳಿದಂತೆ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ. ವಿಶೇಷವಾಗಿ ಸತ್ಸಂತಾನ ಪ್ರಾಪ್ತಿಗಾಗಿ, ಬಾಲಗ್ರಹ ನಿವಾರಣೆಗಾಗಿ, ದಾಂಪತ್ಯದಲ್ಲಿ ಸರಸ ಹಾಗೂ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಗಾಗಿ, ಉದ್ಯೋಗ ವ್ಯಾಪಾರ ಅಭಿವೃದ್ಧಿಗಾಗಿ, ಆರ್ಥಿಕ ಮುಗ್ಗಟ್ಟು ಪರಿಹಾರಕ್ಕಾಗಿ, ಕೋರ್ಟು ಕಛೇರಿಗಳಲ್ಲಿ, ಸುಗಮ ವ್ಯವಹಾರಕ್ಕೆ, ಆರೋಗ್ಯ ಭಾಗ್ಯಕ್ಕೆ ಈ ವಿಧಿಯಿಂದ ವಿಶೇಷ ಪ್ರಯೋಜನ ದೊರೆಯುತ್ತದೆ. ಈ ಲೇಖನವನ್ನು ಓದಿ ಈ ಕ್ರಿಯಾ ಭಾಗದ ಉದ್ದೇಶ, ಮಹತ್ವ ವಿಧಿವಿಧಾನ ಇತ್ಯಾದಿಗಳನ್ನು ಭಕ್ತಜನತೆ ಅರಿತು ಆಚರಿಸಿ ತಮ್ಮ ಪಾಪ ಸಂಚಯದ ನಿವಾರಣೆ ಮಾಡಿಕೊಳ್ಳುವಂತಾಗಲೆಂದು ಶ್ರೀ ವಾಸುಕೀ ನಾಗರಾಜದೇವರ ಚರಣಗಳಲ್ಲಿ ಪ್ರಾರ್ಥನೆ.

ಸಂಕಲನ : ಬಿ. ರಾಮಭಟ್ ಸುಳ್ಯ, ನಿವೃತ್ತ ಉಪತಹಶೀಲ್ದಾರರು ಹಾಗೂ ಸಮನ್ವಯಕಾರರು, ಹಿಂದೂ ಜನ ಜಾಗೃತಿ ಸಮಿತಿ ಸುಳ್ಯ ದ.ಕ ದೂ.ಕ್ರ: 9481756028

ಪಿತೃತರ್ಪಣ

೧. ವ್ಯಾಖ್ಯೆ: ಪಿತೃಗಳನ್ನು ಉದ್ದೇಶಿಸಿ ನೀಡಿದ ನೀರಿಗೆ ಪಿತೃತರ್ಪಣ ಎನ್ನುತ್ತಾರೆ. ತಂದೆಯು ಜೀವಂತವಿರುವಾಗ ಮಗನಿಗೆ ಪಿತೃತರ್ಪಣ ನಿಷಿದ್ಧವಾಗಿದೆ.


೨. ಏಕೆ ಕೊಡಬೇಕು?: ಪಿತೃಗಳಿಗೆ ತನ್ನ ವಂಶಜರಿಂದ ಪಿಂಡದ ಮತ್ತು ಬ್ರಾಹ್ಮಣ ಭೋಜನದ ಅಪೇಕ್ಷೆಯಿರುವಂತೆ ನೀರಿನ (ಉದಕ) ಅಪೇಕ್ಷೆಯೂ ಇರುತ್ತದೆ.

೩. ಮಹತ್ವ: ತರ್ಪಣವನ್ನು ಕೊಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಅಲ್ಲದೇ ತರ್ಪಣ ಕೊಟ್ಟವರಿಗೆ ಆಯುಷ್ಯ, ತೇಜಸ್ಸು, ಬ್ರಹ್ಮವರ್ಚಸ್ಸು, ಸಂಪತ್ತು, ಯಶಸ್ಸು ಮತ್ತು ಅನ್ನಾದ್ಯ ಅಂದರೆ ಭಕ್ಷಿಸಿದ ಅನ್ನವನ್ನು ಜೀರ್ಣ ಮಾಡುವ ಶಕ್ತಿಯನ್ನು ಕೊಟ್ಟು ತೃಪ್ತಗೊಳಿಸುತ್ತಾರೆ.

೪. ಯಾವಾಗ ಕೊಡಬೇಕು?

ಅ. ದೇವರು, ಋಷಿ ಮತ್ತು ಪಿತೃಗಳನ್ನು ಉದ್ದೇಶಿಸಿ ಪ್ರತಿದಿನ ತರ್ಪಣವನ್ನು ಕೊಡಬೇಕು. ಮುಂಜಾನೆ ಸ್ನಾನದ ನಂತರ ತರ್ಪಣವನ್ನು ಕೊಡಬೇಕು. ಪಿತೃಗಳಿಗೆ ಪ್ರತಿದಿನ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಕನಿಷ್ಟಪಕ್ಷ ತರ್ಪಣವನ್ನಾದರೂ ಕೊಡಬೇಕು.

ಆ. ಪಾರ್ವಣ ಶ್ರಾದ್ಧ ಮಾಡಿದ ಮರುದಿನ ಪಿತೃತರ್ಪಣ ಕೊಡಬೇಕು.

೫. ಎಳ್ಳುತರ್ಪಣ: ಪಿತೃತರ್ಪಣಕ್ಕೆ ಎಳ್ಳನ್ನು ತೆಗೆದುಕೊಳ್ಳಬೇಕು. ಎಳ್ಳಿನಲ್ಲಿ ಕಪ್ಪು ಮತ್ತು ಬಿಳಿ ಹೀಗೆ ಎರಡು ಪ್ರಕಾರಗಳಿವೆ. ಶ್ರಾದ್ಧಕ್ಕೆ ಕಪ್ಪು ಎಳ್ಳನ್ನು ಉಪಯೋಗಿಸಬೇಕು. ಎಳ್ಳು ಸಿಗದಿದ್ದರೆ ಬೆಳ್ಳಿ ಅಥವಾ ಬಂಗಾರವನ್ನು ಉಪಯೋಗಿಸಬಹುದು.
ಅ. ‘ಎಳ್ಳು ಮಿಶ್ರಿತ ನೀರಿನಿಂದ ಪಿತೃಗಳಿಗೆ ತರ್ಪಣ ಕೊಡುವುದನ್ನು ಎಳ್ಳುತರ್ಪಣ’ ಎನ್ನುತ್ತಾರೆ.
ಆ. ಎಷ್ಟು ಜನ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧವನ್ನು ಮಾಡಿರುತ್ತಾರೆಯೋ, ಅಷ್ಟು ಜನರಿಗೆ ಮಾತ್ರ ಶ್ರಾದ್ಧಾಂಗ ಎಳ್ಳುತರ್ಪಣವನ್ನು ಕೊಡಬೇಕು.
ಇ. ದರ್ಶಶ್ರಾದ್ಧವಿದ್ದಲ್ಲಿ ಅದಕ್ಕಿಂತ ಮುಂಚೆ ಮತ್ತು ವಾರ್ಷಿಕ ಶ್ರಾದ್ಧವಿದ್ದಲ್ಲಿ ಅದರ ಮರುದಿನ ಎಳ್ಳುತರ್ಪಣ ಮಾಡುತ್ತಾರೆ. ಇತರ ಶ್ರಾದ್ಧಗಳಲ್ಲಿ ಎಳ್ಳುತರ್ಪಣವನ್ನು ಶ್ರಾದ್ಧದ ನಂತರ ಕೂಡಲೇ ಮಾಡುತ್ತಾರೆ.
ಈ. ನಾಂದಿಶ್ರಾದ್ಧ, ಸಪಿಂಡಿಶ್ರಾದ್ಧ ಮುಂತಾದ ಶ್ರಾದ್ಧಗಳಲ್ಲಿ ಎಳ್ಳುತರ್ಪಣ ಮಾಡುವುದಿಲ್ಲ.

೬. ಎಳ್ಳುತರ್ಪಣದ ಮಹತ್ವ
ಅ. ‘ಪಿತೃಗಳಿಗೆ ಎಳ್ಳು ಪ್ರಿಯವಾಗಿರುತ್ತವೆ.
ಆ. ಎಳ್ಳನ್ನು ಉಪಯೋಗಿಸುವುದರಿಂದ ಅಸುರರು ಶ್ರಾದ್ಧವಿಧಿಗಳಲ್ಲಿ ತೊಂದರೆಗಳನ್ನು ಕೊಡುವುದಿಲ್ಲ.
ಇ. ಶ್ರಾದ್ಧದ ದಿನ ಮನೆಯಲ್ಲಿ ಎಲ್ಲ ಕಡೆಗಳಲ್ಲಿ ಎಳ್ಳನ್ನು ಹರಡಬೇಕು. ಆಮಂತ್ರಿತ ಬ್ರಾಹ್ಮಣರಿಗೆ ಎಳ್ಳು ಮಿಶ್ರಿತ ನೀರನ್ನು ಕೊಡಬೇಕು ಹಾಗೂ ಎಳ್ಳನ್ನು ದಾನ ಮಾಡಬೇಕು’. - ಜೈಮಿನೀಗೃಹ್ಯಸೂತ್ರ (ಉತ್ತರಭಾಗ, ಖಂಡ ೧), ಬೌಧಾಯನಧರ್ಮಸೂತ್ರ (ಪ್ರಶ್ನೆ ೨, ಅಧ್ಯಾಯ ೮, ಅಂಶ ೮) ಮತ್ತು ಬೌಧಾಯನಗೃಹ್ಯಸೂತ್ರ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಗ್ರಂಥ ಓದಿ - ‘ಶ್ರಾದ್ಧ (೨ ಭಾಗಗಳು’)