ಅ. ಆದಷ್ಟು ಅಶುಭ ದಿನ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಯ ಹೊತ್ತು ಕೂದಲುಗಳನ್ನು ಕತ್ತರಿಸದಿರುವುದರ ಹಿಂದಿನ ಶಾಸ್ತ್ರ
೧. ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ.
೨. ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ.
೩. ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ; ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವ ಕೃತಿಯನ್ನು ಮಾಡಬಾರದು.
೪. ಆದಷ್ಟು ಸಾಯಂಕಾಲದ ಸಮಯ ಅಥವಾ ರಾತ್ರಿ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನದ ಹೊತ್ತಿನಲ್ಲಿ ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ಕಾಲವೂ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸುವಂತಹದ್ದಾಗಿದೆ.
ಆ. ರಾಮನವಮಿ, ಹನುಮಾನಜಯಂತಿಗಳಂತಹ ಉತ್ಸವಗಳ ದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ರಾಮನವಮಿ, ಹನುಮಾನಜಯಂತಿ ಇವುಗಳಂತಹ ಉತ್ಸವಗಳ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ವಾಯು ಮಂಡಲದಲ್ಲಿ ಸಾತ್ತ್ವಿಕ ಲಹರಿಗಳ ಪ್ರಮಾಣವು ಅಧಿಕವಿರುತ್ತದೆ. ಇಂತಹ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಅಶುಭ ಕೃತಿಯನ್ನು ಮಾಡಿ ವಾಯುಮಂಡಲದಲ್ಲಿ ರಜ-ತಮವನ್ನು ಪಸರಿ ಸುವ ಕಾರ್ಯವನ್ನು ಮಾಡುವುದರಿಂದ ಜೀವಕ್ಕೆ ಸಮಷ್ಟಿ ಪಾಪವನ್ನು ಎದುರಿಸಬೇಕಾಗುತ್ತದೆ.
ಇ. ಜನ್ಮವಾರ ಮತ್ತು ಜನ್ಮತಿಥಿಯಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ಜನ್ಮವಾರ ಮತ್ತು ಜನ್ಮತಿಥಿಯಂದೂ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ನಮ್ಮ ಪ್ರಕೃತಿಗೆ ಸಂಬಂಧಿಸಿದ ಗ್ರಹ, ನಕ್ಷತ್ರ, ಹಾಗೆಯೇ ತಾರಾಮಂಡಲದಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸುವ ನಮ್ಮ ಕ್ಷಮತೆಯು ಕಡಿಮೆಯಾಗಿ ಉಪಾಸ್ಯ ದೇವತೆಯಿಂದ ಸಿಗುವ ಚೈತನ್ಯದ ಲಾಭವು ಕಡಿಮೆಯಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ನಮಗೆ ಹಾನಿಯಾಗುತ್ತದೆ. ಹಾಗೆಯೇ ಇತರರ ಆಶೀರ್ವಾದದಿಂದ ಸಿಗುವ ಶುಭಫಲವೂ ಕಡಿಮೆಯಾಗುತ್ತದೆ.
ಈ. ನಿಷ್ಕರ್ಷ: ಶುಭದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಇಂತಹ ದಿನ ಅಶುಭ ಕೃತಿಯನ್ನು ಮಾಡಿದುದರ ಸಮಷ್ಟಿ ಪಾಪ ತಗಲುತ್ತದೆ, ಹಾಗೆಯೇ ಅಶುಭ ದಿನಗಳಂದೂ ಇಂತಹ ಕೃತಿಯನ್ನು ಮಾಡಬಾರದು; ಏಕೆಂದರೆ ಈ ಕೃತಿಯಿಂದ ರಜ-ತಮಾತ್ಮಕ ಲಹರಿಗಳು ದೇಹದಲ್ಲಿ ಬರುವ ಪ್ರಮಾಣವು ಅಧಿಕವಾಗಿರುತ್ತದೆ. ಇತರ ಸಮಯದಲ್ಲಿ ಅಶುಭ ಸಮಯವನ್ನು ಬಿಟ್ಟು ಕೂದಲುಗಳನ್ನು ಕತ್ತರಿಸಿಕೊಳ್ಳಲು ಧರ್ಮವು ಅನುಮತಿ ನೀಡಿದೆ.
ರಾತ್ರಿ ಕೂದಲುಗಳನ್ನು ಏಕೆ ಕತ್ತರಿಸಬಾರದು?
ಅ. ರಾತ್ರಿ ಕೂದಲುಗಳನ್ನು ಕತ್ತರಿಸುವಾಗ ಆಗುವ ರಜ-ತಮಾತ್ಮಕ ನಾದದ ಕಡೆಗೆ ಕೆಟ್ಟ ಶಕ್ತಿಗಳು ಆಕರ್ಷಿಸುವ ಪ್ರಮಾಣವು ಹಗಲಿಗಿಂತ ಹೆಚ್ಚಿರುವುದರಿಂದ ರಾತ್ರಿ ಸಮಯದಲ್ಲಿ ಕೂದಲುಗಳನ್ನು ಕತ್ತರಿಸಬಾರದು!: ‘ರಾತ್ರಿಯ ವಾತಾವರಣವು ರಜ-ತಮಯುಕ್ತವಾಗಿರುವುದರಿಂದ ಕೆಟ್ಟ ಶಕ್ತಿಗಳ ವೇಗವಾದ ರಜ-ತಮೋಗುಣೀ ಸಂಚಾರಕ್ಕೆ ಪೂರಕವಾಗಿರುತ್ತದೆ. ಇಂತಹ ಸಮಯದಲ್ಲಿ ಉಗುರು ಮತ್ತು ಕೂದಲುಗಳನ್ನು ಕತ್ತರಿಸುವಾಗ ಆಗುವ ರಜ-ತಮಾತ್ಮಕ ನಾದದೆಡೆಗೆ ಕೆಟ್ಟ ಶಕ್ತಿಗಳು ಸಹಜವಾಗಿ ಆಕರ್ಷಿಸುವ ಮತ್ತು ಜೀವಕ್ಕೆ ತೊಂದರೆಗಳನ್ನು ಕೊಡುವ ಪ್ರಮಾಣವು ಹಗಲಿಗಿಂತ ಹೆಚ್ಚಿರುವುದರಿಂದ, ರಜ-ತಮಾತ್ಮಕ ಸ್ಪಂದನಗಳನ್ನು ನಿರ್ಮಾಣ ಮಾಡುವ ಕೃತಿಗಳನ್ನು ಸಾಧ್ಯವಾದಷ್ಟು ಅಶುಭ ಕಾಲದಲ್ಲಿ, ಅಂದರೆ ರಾತ್ರಿಯ ಸಮಯದಲ್ಲಿ ಮಾಡಬಾರದು.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩.೧೨.೨೦೦೬, ಮಧ್ಯಾಹ್ನ ೧೨.೦೮)
ಆ. ರಾತ್ರಿಯ ಸಮಯವು ಮಾಂತ್ರಿಕರಿಗೆ ಹೆಚ್ಚು ಫಲದಾಯಕ ಮತ್ತು ಶಕ್ತಿಯ ಅಪವ್ಯಯವನ್ನು ತಪ್ಪಿಸುವಂತಹದ್ದಾಗಿರುತ್ತದೆ, ಮಾಂತ್ರಿಕರಿಗೆ ಮಾಟವನ್ನು ಮಾಡಲು ಅವಕಾಶ ಸಿಗಬಾರದೆಂದು ರಾತ್ರಿಯ ಸಮಯದಲ್ಲಿ ಕೂದಲುಗಳನ್ನು ಕತ್ತರಿಸಬಾರದು!: ‘ರಾತ್ರಿಯ ಕಾಲಕ್ಕೆ ‘ತಾಮಸಿಕ ಕಾಲ’ ಅಥವಾ ‘ಮಹಾಕಾಲ’ ಎಂದು ಹೇಳುತ್ತಾರೆ. ಈ ಕಾಲದಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಸಂಚಾರವು ಅಧಿಕವಾಗಿರುತ್ತದೆ. ತಾಮಸಿಕ ಕಾಲದಲ್ಲಿ ಮಾಡಿದ ಯಾವುದೇ ಕೃತಿಯಿಂದ ಶುಭ ಮತ್ತು ಚೈತನ್ಯಮಯ ಫಲವು ಸಿಗದೇ, ಅಶುಭ ಪರಿಣಾಮಗಳಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ. ಉಗುರು ಮತ್ತು ಕೂದಲುಗಳು ಆಯಾ ಜೀವದ ಸ್ಥೂಲದೇಹದಲ್ಲಿನ ತ್ರಿಗುಣಗಳಿಗೆ ಸರ್ವಾಧಿಕ ಸಾಮ್ಯತೆಯನ್ನು ದರ್ಶಿಸುತ್ತವೆ. ರಾತ್ರಿಯ ಸಮಯದಲ್ಲಿ ಅಂದರೆ ತಾಮಸಿಕ ಕಾಲದಲ್ಲಿ ಇದರ ಲಾಭವನ್ನು ಪಡೆದುಕೊಳ್ಳುವುದು ಮಾಂತ್ರಿಕರಿಗೆ ಹೆಚ್ಚು ಫಲದಾಯಕ ಮತ್ತು ಶಕ್ತಿಯ ಅಪವ್ಯಯವನ್ನು ತಪ್ಪಿಸುವಂತಹದ್ದಾಗಿರುತ್ತದೆ. ಆದುದರಿಂದ ಮಾಂತ್ರಿಕರು ಈ ಸಮಯವನ್ನು ಉಗುರು ಹಾಗೂ ಕೂದಲುಗಳ ಮೇಲೆ ಮಾಟವನ್ನು ಮಾಡಲು ಉಪಯೋಗಿಸುವ ಸಾಧ್ಯತೆಯು ಹೆಚ್ಚಿರುತ್ತದೆ. ಜೀವದ ಮೇಲೆ ವಿಪರೀತ ಪರಿಣಾಮವಾಗುವುದನ್ನು ತಪ್ಪಿಸಲು ರಾತ್ರಿಯ ಸಮಯದಲ್ಲಿ ಉಗುರುಗಳನ್ನು ತೆಗೆಯುವುದು ಮತ್ತು ಕೂದಲುಗಳನ್ನು ಕತ್ತರಿಸುವುದನ್ನು ಮಾಡಬಾರದು.’
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೯.೨.೨೦೦೫, ಮಧ್ಯಾಹ್ನ ೨.೪೦)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)
ಈ ಗ್ರಂಥವನ್ನು ಖರೀದಿಸಲು ಮೇಲೆ ನೀಡಿದ ಸಂಖ್ಯೆಗೆ ಸಂಪರ್ಕಿಸಿ. ಗ್ರಂಥದಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಮನೋಗತವನ್ನು ಓದಿ ಮತ್ತು ಪರಿವಿಡಿ ಡೌನಲೋಡ್ ಮಾಡಿಕೊಳ್ಳಿ. - ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ
ಸಂಬಂಧಿತ ಲೇಖನಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
‘ದೃಷ್ಟಿ ತಗಲುವುದು’ ಎಂದರೇನು? ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು?
ಕೂದಲನ್ನು ಬಿಸಿಲಿನಲ್ಲಿ ಒಣಗಿಸುವುದರಿಂದಾಗುವ ಲಾಭ ಮತ್ತು ಯಂತ್ರದಿಂದ ಒಣಗಿಸುವುದರಿಂದಾಗುವ ಹಾನಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
‘ದೃಷ್ಟಿ ತಗಲುವುದು’ ಎಂದರೇನು? ದೃಷ್ಟಿ ಹೇಗೆ ತಗಲುತ್ತದೆ?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು?
ಕೂದಲನ್ನು ಬಿಸಿಲಿನಲ್ಲಿ ಒಣಗಿಸುವುದರಿಂದಾಗುವ ಲಾಭ ಮತ್ತು ಯಂತ್ರದಿಂದ ಒಣಗಿಸುವುದರಿಂದಾಗುವ ಹಾನಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
By Mistake Hair cutting done on Amavasya Poornima Or any Positive days as Subh Divas, then what is the Solution please inform
ReplyDeleteಸರಳ ಉಪಾಯವೆಂದರೆ, ಹೀಗೆ ತಿಳಿದೋ ಅಥವಾ ತಿಳಿಯದೆಯೋ ತಪ್ಪು ಕೃತಿ ಮಾಡಿದಾಗ ರಜ-ತಮ ಹೆಚ್ಚಾಗುವುದು ಅಥವಾ ಹರಡಿದಂತಾಗುವುದು ಎಂದು ಹೇಳಲಾಗಿದೆ. ಆದುದರಿಂದ ಕುಲದೇವರ ನಾಮಸ್ಮರಣೆಯನ್ನು ಹೆಚ್ಚೆಚ್ಚು ಮಾಡಿದರೆ ನಮ್ಮಲ್ಲಿ ಸತ್ತ್ವಗುಣ ಹೆಚ್ಚಾಗುವುದು, ಇದರಿಂದ ಸಹಜವಾಗಿಯೇ ನಮ್ಮ ದೇಹದ ಮತ್ತು ವಾತಾವರಣದ ಶುದ್ಧೀಕರಣವಾಗುವುದು.
Deleteಸಂನ್ಯಾಸಿಗಳು (ಸ್ವಾಮೀಜಿಗಳು) ಸಾಮಾನ್ಯವಾಗಿ ಹುಣ್ಣಿಮೆಯ ದಿನದಂದೇ ಚೌಲ ಕಾರ್ಯವನ್ನು (ತಮ್ಮ ಕೂದಲು ಕತ್ತರಿಸುವುದನ್ನು) ನೆರವೇರಿಸುತ್ತಾರೆ.
ReplyDeleteಕಾರಣ ಏನಿರಬಹುದು ???
ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಸಂನ್ಯಾಸಿಗಳಿಗೆ ಮಾತ್ರ ಕ್ಷೌರಕರ್ಮವನ್ನು ಮಾಡಲು ಹೇಳಲಾಗಿದೆ; ಏಕೆಂದರೆ ಕ್ಷೌರಕರ್ಮದಿಂದ ತಲೆಯ ಮೇಲಿನ ರಜ-ತಮಾತ್ಮಕ ಕೇಶರಾಶಿಯ ಭಾರವನ್ನು ಇಳಿಸಲು ಸಹಾಯವಾಗುತ್ತದೆ. ಹಾಗೆಯೇ ತಲೆಯ ಮೇಲಿನ ಕೇಶರಂಧ್ರಗಳು ಕ್ಷೌರವಿಧಿಯ ಕರ್ಮವನ್ನು ಮಾಡುವಾಗ ಹೇಳಲಾಗುವ ಮಂತ್ರಗಳಿಂದ ಮೂಲದಿಂದ ಶುದ್ಧಿಯಾಗುತ್ತವೆ. ಇದರಿಂದ ಸಂನ್ಯಾಸಿಗಳಲ್ಲಿ ತೇಜತತ್ತ್ವವು ವೃದ್ಧಿಯಾಗುತ್ತದೆ. ಇದು ಸಂನ್ಯಾಸಧರ್ಮದಲ್ಲಿ ಸತತವಾಗಿ ಮಾಡುವ ಮಂತ್ರೋಕ್ತ ಆಚರಣೆಯಿಂದ ಸಾಧ್ಯವಾಗುತ್ತದೆ. ಆದುದರಿಂದ ಸಂನ್ಯಾಸಧರ್ಮದ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಆವಶ್ಯಕವಾಗಿದೆ. ಸಾಮಾನ್ಯಜನರಿಗೆ ಮಾತ್ರ ಈ ನಿಯಮವು ಅನ್ವಯಿಸುವುದಿಲ್ಲ.
Deleteಧನ್ಯವಾದಗಳು.
Deletewat is the price of this book (DHARMA GRANTH)
ReplyDeleteSantosh Katti
ReplyDeleteC/off P R Pujari,Aashirvad,320/9,Dhore Nagar,Lane 1,Sangvi Pune -411027,Maharashtra,
09850912774 pls call me
Hi,
ReplyDeletePlease send me one copy about this, i can also purchase this if you tell me the location
mail id is purushothama.pa@gmail.com, #1376/B, 6th main, gayathrinagar, bangalore-560021
ನಿಮ್ಮ ವಿ-ಅಂಚೆಗೆ ಮಾಹಿತಿ ಕಳುಹಿಸಿದ್ದೇನೆ.
Deletehow to remove the black magic and athma problem...
ReplyDeleteನಮಸ್ಕಾರ ರಾಜೇಶ್‌ರವರೇ, ಈ ಬ್ಲಾಗ್‌ನಲ್ಲಿರುವ ಆಧ್ಯಾತ್ಮಿಕ ಪರಿಹಾರೋಪಾಯ ವಿಭಾಗವನ್ನು ನೋಡಿ. ಇದರಲ್ಲಿರುವ ಆಧ್ಯಾತ್ಮಿಕ ಪರಿಹಾರಗಳನ್ನು ಸತತವಾಗಿ ಹಲವಾರು ದಿನ/ತಿಂಗಳು ಮಾಡಿದರೆ ನಮ್ಮಲ್ಲಿರುವ ಕಪ್ಪು ಆವರಣ ಅಥವಾ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾಗುತ್ತದೆ.
DeleteA very ggod blog. I appreciate your great work. Kepp the good work going. Thanks a lot.
ReplyDeletecan I get e.book of granth on my email/mobile fadnavisjj@gmail.com and mobile no is 09819334985..I am regular follower of ur article on FB
ReplyDeleteJagdish J fadnavis
A 303 NEW GREEN APARTMENT TUREL PAKAHDAI RD MALAD WEST MUMBAI 400064
Fantastic article. Sir, I am living in Singapore, can you kindly send this Dharma Granth to my gmail id, pdeept@gmail.com.
ReplyDeleteRegards,
Pradeep Thyagaraja
ಕ್ಷಮಿಸಿ. ಈಗ ಇ-ಬುಕ್ ಲಭ್ಯವಿಲ್ಲ. ಹಾರ್ಡ್ ಕಾಪಿ ಮಾತ್ರ. ಆದರೆ ಅದು ಕನ್ನಡವಾಗಿರುವುದರಿಂದ ಹೆಚ್ಚಾಗಿ ಕರ್ನಾಟಕದಲ್ಲಿ ಸಿಗುತ್ತದೆ.
Deletegurugale....ee raja tamaka andre enu?
ReplyDeleteಈ ಕೊಂಡಿಯನ್ನು ನೋಡಿ ಇದರಲ್ಲಿ ಎಲ್ಲ ವಿವರಣೆ ಇದೆ. http://dharmagranth.blogspot.in/p/blog-page_7.html
DeleteVery important information about our Hair is given by you. Thank you.
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಪ್ರತಿಯೊಬ್ಬ ಹಿಂದೂಗಳಿಗೆ ಧರ್ಮದ ಶ್ರೇಷ್ಠತೆ ತಿಳಿಸಿ ಮತ್ತು ಧರ್ಮಾಚರಣೆ ಮಾಡಬೇಕಾಗಿ ವಿನಂತಿಸುತ್ತೇವೆ.
Deleteu did a very wonderful work for kannadiga's hats of sir whodid An Amazing task...
ReplyDeleteನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಪ್ರತಿಯೊಬ್ಬ ಹಿಂದೂಗಳಿಗೆ ಧರ್ಮದ ಶ್ರೇಷ್ಠತೆ ತಿಳಿಸಿ ಮತ್ತು ಧರ್ಮಾಚರಣೆ ಮಾಡಬೇಕಾಗಿ ವಿನಂತಿಸುತ್ತೇವೆ.
DeleteSir, The articles published are truly astounding. Upon reading these we feel how much illiterate we are still. You're doing an amazing work. Keep going. God bless you all. Kindly do forward to sunilbandri@kaysaoil.com
ReplyDeleteಹೌದು. ಈಗಿನ ಪೀಳಿಗೆಗೆ ಅಂದರೆ ಯುವಕರಿರಲೀ ಅಥವಾ ಹಿರಿಯರಿರಲಿ ಎಲ್ಲರಿಗೂ ನಮ್ಮ ಧರ್ಮದ ಶ್ರೇಷ್ಠತೆ ಮತ್ತು ಪ್ರತಿಯೊಂದು ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ ತಿಳಿದಿಲ್ಲ. ಅದಕ್ಕಾಗಿ ನಮ್ಮ ಈ ಜ್ಞಾನದಾನದ ಕಾರ್ಯ !!
Deleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಈ ಪುಟದಲ್ಲಿ ನೀಡಿದಂತೆ ಧರ್ಮಾಚರಣೆ ಮಾಡಿ, ಸತತ ನಾಮಸ್ಮರಣೆ ಮಾಡಿ ಮತ್ತು ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಯಲು ಧರ್ಮಪ್ರಸಾರ ಮಾಡಬೇಕಾಗಿ ವಿನಂತಿಸುತ್ತೇವೆ. ನಿಮ್ಮ ವಿ-ಅಂಚೆಗೂ ಕಳುಹಿಸುತ್ತೇವೆ.
೧. ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ. ೨. ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ. ೩. ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ ಸ್ಥಾನಗಳು ನಿರ್ಮಾಣವಾಗುತ್ತವೆ; ಆದುದರಿಂದ ರಜ-ತಮದ ಪ್ರಾಬಲ್ಯವಿರುವ ದಿನಗಳಲ್ಲಿ ಕೂದಲುಗಳನ್ನು ಕತ್ತರಿಸಿಕೊಳ್ಳುವ ಕೃತಿಯನ್ನು ಮಾಡಬಾರದು.
ReplyDeletebut
ಆ. ರಾಮನವಮಿ, ಹನುಮಾನಜಯಂತಿಗಳಂತಹ ಉತ್ಸವಗಳ ದಿನದಂದು ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು!: ರಾಮನವಮಿ, ಹನುಮಾನಜಯಂತಿ ಇವುಗಳಂತಹ ಉತ್ಸವಗಳ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು; ಏಕೆಂದರೆ ಇಂತಹ ದಿನ ವಾಯು ಮಂಡಲದಲ್ಲಿ ಸಾತ್ತ್ವಿಕ ಲಹರಿಗಳ ಪ್ರಮಾಣವು ಅಧಿಕವಿರುತ್ತದೆ. ಇಂತಹ ದಿನ ಕೂದಲುಗಳನ್ನು ಕತ್ತರಿಸಿಕೊಳ್ಳುವಂತಹ ಅಶುಭ ಕೃತಿಯನ್ನು ಮಾಡಿ ವಾಯುಮಂಡಲದಲ್ಲಿ ರಜ-ತಮವನ್ನು ಪಸರಿ ಸುವ ಕಾರ್ಯವನ್ನು ಮಾಡುವುದರಿಂದ ಜೀವಕ್ಕೆ ಸಮಷ್ಟಿ ಪಾಪವನ್ನು ಎದುರಿಸಬೇಕಾಗುತ್ತದೆ.
Dear sir please clarify me,I am really confused. about these two above mentioned Reasons. When hairs are cut, on a bad day's the open hair vestals are suck the bad waves or raja -tamathmathmak laharigalu, but why the same hair when cut on a good day's like (ramnavami/hanumajayanti etc..) will not receive or suck the good waves or satvika laharigalu. and If the raja-tama laharigalu spreading over, when you cut hair on good day's. why it is not spreading the same on normal day's.
ನಮಸ್ಕಾರ ಭೀಮೇಶ್ ಇವರೇ, ಒಳ್ಳೆಯ ಪ್ರಶ್ನೆ ಕೇಳಿದ್ದೀರಿ... ನೀವು ಕೇಳಿದ ಪ್ರಶ್ನೆಗೆ 'ನಿಷ್ಕರ್ಷ' ಎಂಬ ಪರಿಚ್ಛೇದದಲ್ಲಿ ಉತ್ತರ ಇದೆ. ಆದರೂ ಸಂಕ್ಷಿಪ್ತವಾಗಿ ಹೇಳುತ್ತೇವೆ. ಮೂಲತಃ ಕೂದಲು ಕತ್ತರಿಸುವುದು ಎಂದರೆ ರಜ-ತಮಾತ್ಮಕ ಕೃತಿಯಾಗಿದೆ. ಕತ್ತರಿಸುವ ನಾದದಿಂದ ಮತ್ತು ಕೂದಲಿನಿಂದ ರಜ-ತಮಗಳು ಹರಡುತ್ತವೆ ಅಥವಾ ಆಕರ್ಷಿಸುತ್ತವೆ. ಅಶುಭ ದಿನಗಳಂದು ಮೊದಲೇ ರಜ-ತಮ ಹೆಚ್ಚಿರುವುದರಿಂದ ನಮಗೆ ಇನ್ನೂ ತೊಂದರೆಯಾಗುತ್ತದೆ. ಶುಭ ದಿನಗಳಂದು ಕತ್ತರಿಸುವುದರಿಂದ ವಾತಾವರಣದಲ್ಲಿರುವ ಸಾತ್ತ್ವಿಕ ಲಹರಿಗಳ ಪ್ರಭಾವ ಕಡಿಮೆ ಮಾಡುತ್ತದೆ. ಸಾಮಾನ್ಯ ದಿನಗಳಲ್ಲಿ ರಜ-ತಮ ಹರಡಿದರೂ ಶುಭ ದಿನಗಳಲ್ಲಿ ಇರುವಂತೆ ದೇವರ ಸಾತ್ತ್ವಿಕ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಇರದೇ ಸಾಮಾನ್ಯವಾಗಿರುವುದರಿಂದ ಇಂತಹ ದಿನಗಳಲ್ಲಿ ಕೂದಲನ್ನು ಕತ್ತರಿಸಲು ಧರ್ಮಶಾಸ್ತ್ರವು ಅನುಮತಿ ನೀಡಿದೆ. ಸಂದೇಹವಿದ್ದರೆ ಕೇಳಿ. ಧನ್ಯವಾದಗಳು
DeleteI stay in bengaluru . i like this blog and i will to take hard copy this book .. please let me now where i will get this. Email : jaga.alt@gmail.com
ReplyDeleteಕೂದಲು ಕತ್ತರಿಸುವುದರಿಂದ ರಜ-ತಮಗಳು ಹರಡುತ್ತವೆ ಎಂದು ಮೇಲಿನ ವಿಷಯಗಳಿಂದ ತಿಳಿದುಕೊಂಡಿದ್ದೇವೆ. ಕೂದಲು ಕತ್ತರಿಸುವಾಗ ಪ್ರಕ್ಷೇಪಿಸುವ ಈ ರಜ-ತಮಗಳು ನಮ್ಮ ದೇಹದ ಸುತ್ತಲೂ ಒಂದು ರೀತಿಯ ಆವರಣವನ್ನು ನಿರ್ಮಿಸುತ್ತವೆ ಮತ್ತು ನಾವು ಹೋದ ಕಡೆ ವಾತಾವರಣವೂ ರಜ-ತಮಗಳಿಂದ ತುಂಬುತ್ತವೆ. ಮನೆಯ ವಾತಾವರಣವೂ ಹಾಳಾಗುತ್ತದೆ. ಹಾಗಾಗಿ ಮನೆಯನ್ನು ಪ್ರವೇಶಿಸದೇ ನೇರವಾಗಿ ಸ್ನಾನ ಮಾಡಿಯೇ ಮನೆಯನ್ನು ಪ್ರವೇಶಿಸಬೇಕು. ನೀರು ನಮ್ಮನ್ನು ರಜ-ತಮಗಳಿಂದ ಶುದ್ಧ ಮಾಡುತ್ತದೆ. ಸುಮ್ಮನೆ ನೀರು ಸುರಿದುಕೊಳ್ಳುವ ಬದಲು ಸ್ನಾನಕ್ಕೂ ಮೊದಲು ಶ್ಲೋಕಪಠಿಸಿ ನಾಮಜಪ ಮಾಡುತ್ತಾ ಸ್ನಾನ ಮಾಡಿದರೆ ಇನ್ನೂ ಒಳ್ಳೆಯದಾಗುತ್ತದೆ.
ReplyDelete