ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ


ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆ - ಕುಲದೇವರ ನಾಮಜಪ

ನಮಗೆ ಪೂಜೆ, ಆರತಿ, ಭಜನೆ ಇತ್ಯಾದಿ ಉಪಾಸನೆಗಳಿಂದ ದೇವತೆಯ ತತ್ತ್ವದ ಲಾಭವಾಗುತ್ತದೆ; ಆದರೆ ಈ ಎಲ್ಲ ಉಪಾಸನೆಗಳಿಗೆ ಮಿತಿಯಿರುವುದರಿಂದ (ಸಮಯ ಮತ್ತು ಸ್ಥಳದ ಮಿತಿ) ದೊರಕುವ ಲಾಭವೂ ಒಂದು ಮಿತಿಯೊಳಗಿರುತ್ತದೆ. ದೇವತೆಯ ತತ್ತ್ವದ ಲಾಭವು ಸತತವಾಗಿ ದೊರಕಲು ದೇವತೆಯ ಉಪಾಸನೆಯನ್ನೂ ಸತತವಾಗಿ ಮಾಡಬೇಕಾಗುತ್ತದೆ. ಈ ರೀತಿ ಸತತವಾಗಿ ಆಗುವಂತಹ ಏಕೈಕ ಉಪಾಸನೆಯೆಂದರೆ ‘ನಾಮಜಪ’. ಕಲಿಯುಗಕ್ಕಾಗಿ ನಾಮಜಪವು ಸುಲಭ ಮತ್ತು ಸರ್ವೋತ್ತಮ ಉಪಾಸನೆಯಾಗಿದೆ. ನಾಮಜಪವು ಗುರುಕೃಪಾಯೋಗಾನುಸಾರ ಸಾಧನೆಯ ಅಡಿಪಾಯವಾಗಿದೆ.

‘ಕುಲದೇವತೆ’ ಉಪಾಸನೆಯ ಇತಿಹಾಸ : ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು.

ವ್ಯುತ್ಪತ್ತಿ ಮತ್ತು ಅರ್ಥ: ಕುಲ ಎಂದರೆ ಮೂಲಾಧಾರ ಚಕ್ರ, ಶಕ್ತಿ ಅಥವಾ ಕುಂಡಲಿನಿ. ಕುಲ + ದೇವತೆ ಅಂದರೆ ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ.

೧. ಕುಲದೇವತೆಯ ನಾಮಜಪದ ಮಹತ್ವ: ಗುರುಪ್ರಾಪ್ತಿಯಾಗಿದ್ದರೆ ಮತ್ತು ಗುರುಗಳು ಗುರುಮಂತ್ರವನ್ನು ಕೊಟ್ಟಿದ್ದರೆ ಗುರುಮಂತ್ರವನ್ನೇ ಜಪಿಸಬೇಕು, ಇಲ್ಲದಿದ್ದಲ್ಲಿ ಈಶ್ವರನ ಅನೇಕ ಹೆಸರುಗಳ ಪೈಕಿ ಕುಲದೇವತೆಯ ನಾಮಜಪವನ್ನು ಮುಖ್ಯವಾಗಿ ಮುಂದಿನ ಎರಡು ಕಾರಣಗಳಿಗಾಗಿ ಪ್ರತಿದಿನ ಕನಿಷ್ಠ ೧ ರಿಂದ ೨ ಗಂಟೆಗಳ ಕಾಲ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು.
ಅ. ಯಾವ ಕುಲದ ಕುಲದೇವತೆಯು, ಅಂದರೆ ಕುಲದೇವಿ ಅಥವಾ ಕುಲದೇವ, ಇವರು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ.
ಆ. ಕೊನೆಯ ಶ್ವಾಸದವರೆಗೂ ಪ್ರತಿಯೊಬ್ಬರ ಜೊತೆಗಿರುವ ಪ್ರಾರಬ್ಧದ ತೀವ್ರತೆಯು ಕುಲದೇವತೆಯ ನಾಮಜಪದಿಂದಲೇ ಕಡಿಮೆಯಾಗುತ್ತದೆ.

ಕುಲದೇವತೆಯು ಪೃಥ್ವಿತತ್ತ್ವದ ದೇವತೆಯಾಗಿರುವುದರಿಂದ ಅವಳ ನಾಮಜಪದಿಂದಲೇ ಸಾಧನೆಯನ್ನು ಆರಂಭಿಸುವುದರಿಂದ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. ಕ್ಷಮತೆಯಿಲ್ಲದೇ ಮೊದಲು ತೇಜತತ್ತ್ವದ (ಉದಾ. ಗಾಯತ್ರೀ ಮಂತ್ರದ) ಉಪಾಸನೆಯನ್ನು ಮಾಡಿದರೆ ತೊಂದರೆಗಳಾಗಬಹುದು.

೨. ಕುಲದೇವತೆಯ ನಾಮಜಪ ಮಾಡುವ ಪದ್ಧತಿ: ಕುಲದೇವತೆಯ ಹೆಸರಿಗೆ ಪ್ರಾರಂಭದಲ್ಲಿ ‘ಶ್ರೀ’ ಸೇರಿಸಬೇಕು. ಹೆಸರಿಗೆ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಸೇರಿಸಿ, ಕೊನೆಗೆ ‘ನಮಃ’ ಎನ್ನಬೇಕು. ಉದಾಹರ‍ಣೆಗಾಗಿ, ಕುಲದೇವತೆಯು ‘ಗಣೇಶ’ ಆಗಿದ್ದರೆ ‘ಶ್ರೀ ಗಣೇಶಾಯ ನಮಃ|’, ಕುಲದೇವಿಯು ‘ಭವಾನಿ’ ಆಗಿದ್ದರೆ ‘ಶ್ರೀ ಭವಾನಿದೇವ್ಯೈ ನಮಃ|’ ಎಂದು ಹೇಳಬೇಕು. ಚತುರ್ಥಿ ಪ್ರತ್ಯಯದ ಅರ್ಥವು ‘ಗೆ’ ಎಂದಾಗಿದೆ. ಯಾವ ದೇವತೆಯ ನಾಮಜಪವನ್ನು ಮಾಡುತ್ತೇವೆಯೋ, ಆ ‘ದೇವತೆಗೆ ನಮಸ್ಕಾರ’ ಎಂದು ಇದರ ಅರ್ಥವಾಗಿದೆ.

೩. ಕುಲದೇವತೆಯು ಗೊತ್ತಿಲ್ಲದಿದ್ದರೆ ಯಾವ ನಾಮಜಪ ಮಾಡಬೇಕು?: ಕುಲದೇವತೆಯ ಗೊತ್ತಿಲ್ಲದಿದ್ದರೆ ಇಷ್ಟದೇವತೆಯ ಅಥವಾ ‘ಶ್ರೀ ಕುಲದೇವತಾಯೈ ನಮಃ|’ ಎಂದು ನಾಮಜಪ ಮಾಡಬೇಕು. ಅದು ಪೂರ್ಣವಾದ ನಂತರ ಕುಲದೇವತೆಯ ಹೆಸರು ಹೇಳುವವರು ಭೇಟಿಯಾಗುತ್ತಾರೆ. ಕುಲದೇವತೆಯ ನಾಮಜಪ ಪೂರ್ಣವಾದ ನಂತರ ಗುರುಗಳು ಸ್ವತಃ ಸಾಧಕನ ಜೀವನದಲ್ಲಿ ಬಂದು ಗುರುಮಂತ್ರವನ್ನು ಕೊಡುತ್ತಾರೆ. (ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಸನಾತನದ ಸತ್ಸಂಗಗಳಲ್ಲಿ ಸಿಗುತ್ತದೆ.)

ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ಕುಲದೇವಿಯ ನಾಮಜಪವನ್ನು ಮಾಡಬೇಕೋ?

ಅ. ಕೇವಲ ಕುಲದೇವರು ಇದ್ದರೆ ಕುಲದೇವರ ನಾಮಜಪವನ್ನು ಮಾಡಬೇಕು ಮತ್ತು ಕೇವಲ ಕುಲದೇವಿ ಇದ್ದರೆ ಕುಲದೇವಿಯ ನಾಮಜಪವನ್ನು ಮಾಡಬೇಕು.
ಆ. ಯಾರಾದರೊಬ್ಬರಿಗೆ ಕುಲದೇವರು ಮತ್ತು ಕುಲದೇವಿ ಹೀಗೆ ಇಬ್ಬರೂ ಇದ್ದರೆ ಅವರು ಮುಂದಿನ ಕಾರಣಗಳಿಗಾಗಿ ಕುಲದೇವಿಯ ನಾಮಜಪವನ್ನು ಮಾಡಬೇಕು. ಚಿಕ್ಕವರಾಗಿದ್ದಾಗ ತಂದೆ-ತಾಯಿ ಇಬ್ಬರೂ ಇದ್ದರೂ ನಾವು ತಾಯಿಯಲ್ಲಿಯೇ ಹೆಚ್ಚು ಹಠ ಮಾಡುತ್ತೇವೆ. ಏಕೆಂದರೆ ತಾಯಿಯು ಬೇಗನೇ ಹಠವನ್ನು ಪೂರೈಸುತ್ತಾಳೆ. ಹಾಗೆಯೇ ಕುಲದೇವರಿಗಿಂತಲೂ ಕುಲದೇವಿಯು ಬೇಗನೇ ಪ್ರಸನ್ನಳಾಗುತ್ತಾಳೆ.
ಇ. ಯಾರಾದರೊಬ್ಬರ ಕುಲದೇವರು ಗಣೇಶಪಂಚಾಯತನ ಅಥವಾ ವಿಷ್ಣುಪಂಚಾಯತನ ಈ ಪ್ರಕಾರ ಇದ್ದರೆ ಆ ಪಂಚಾಯತನದಲ್ಲಿನ ಪ್ರಮುಖ ದೇವತೆಗಳಾದ ಶ್ರೀ ಗಣೇಶ ಅಥವಾ ಶ್ರೀವಿಷ್ಣು ಇವರನ್ನು ಕುಲದೇವರೆಂದು ತಿಳಿದುಕೊಳ್ಳಬೇಕು.
ಈ. ಕುಲದೇವರು ಗೊತ್ತಿಲ್ಲದಿದ್ದರೆ ಕುಟುಂಬದಲ್ಲಿನ ಹಿರಿಯ ವ್ಯಕ್ತಿಗಳು, ಬಂಧುಗಳು, ಜಾತಿಬಾಂಧವರು, ಹಳ್ಳಿಗಳಲ್ಲಿನ ಹಿರಿಯ ವ್ಯಕ್ತಿಗಳು, ಪುರೋಹಿತರು ಮುಂತಾದವರಿಂದ ಕುಲದೇವರು ಯಾರು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಉ. ಸ್ತ್ರೀಯು ವಿವಾಹವಾದ ನಂತರ ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ ಅಥವಾ ತವರು ಮನೆಯ ಕುಲದೇವರ ನಾಮಜಪವನ್ನು ಮಾಡಬೇಕೋ?: ಸಾಮಾನ್ಯವಾಗಿ ವಿವಾಹದ ನಂತರ ಸ್ತ್ರೀಯರ ಹೆಸರು ಬದಲಾಗುತ್ತದೆ. ತವರು ಮನೆಯ ಎಲ್ಲವನ್ನೂ ತ್ಯಾಗ ಮಾಡಿ ಸ್ತ್ರೀಯು ಅತ್ತೆ ಮನೆಗೆ ಬರುತ್ತಾಳೆ. ಒಂದು ಅರ್ಥದಲ್ಲಿ ಅದು ಅವಳ ಪುನರ್ಜನ್ಮವೇ ಆಗಿರುತ್ತದೆ; ಆದುದರಿಂದ ಮದುವೆಯಾದ ಮೇಲೆ ಸ್ತ್ರೀಯು ಅತ್ತೆ ಮನೆಯ ಕುಲದೇವರ ನಾಮಜಪವನ್ನು ಮಾಡಬೇಕು. ಆದರೆ ಯಾರಾದರೊಬ್ಬ ಸ್ತ್ರೀಯು ಚಿಕ್ಕಂದಿನಿಂದಲೇ ನಾಮಜಪವನ್ನು ಮಾಡುತ್ತಿದ್ದರೆ ಅಥವಾ ಉನ್ನತ ಸಾಧಕಳಾಗಿದ್ದರೆ ಅವಳು ತನ್ನ ಮೊದಲಿನ ನಾಮಜಪವನ್ನೇ ಮಾಡಬೇಕು. ಮದುವೆಗಿಂತ ಮೊದಲು ಅವಳಿಗೆ ಗುರುಗಳು ನಾಮಜಪವನ್ನು ಕೊಟ್ಟಿದ್ದರೆ ಆ ಜಪವನ್ನೇ ಮಾಡಬೇಕು.

1. ಕುಲದೇವರ ನಾಮಜಪವನ್ನು ಮಾಡಿ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿ ಹೊಂದಿದ ಇತಿಹಾಸದ ದೊಡ್ಡ ಉದಾಹರಣೆಯೆಂದರೆ ಛತ್ರಪತಿ ಶಿವಾಜಿ ಮಹಾರಾಜರು. ಭವಾನಿದೇವಿಯು ಶಿವಾಜಿ ಮಹಾರಾಜರ ಕುಲದೇವಿಯಾಗಿದ್ದಳು. ಗುರುಪ್ರಾಪ್ತಿಯಾದ ನಂತರವೂ ಸಮರ್ಥ ರಾಮದಾಸಸ್ವಾಮಿಗಳು ಶಿವಾಜಿ ಮಹಾರಾಜರಿಗೆ ಅದೇ ನಾಮಜಪವನ್ನು ಗುರುಮಂತ್ರವನ್ನಾಗಿ ಕೊಟ್ಟಿದ್ದರು.
2. ಸಂತ ತುಕಾರಾಮ ಮಹಾರಾಜರು ಯಾವ ಪಾಂಡುರಂಗನ ಅನನ್ಯಭಕ್ತಿ ಮಾಡಿ ಸದೇಹ ಮುಕ್ತಿ ಹೊಂದಿದರೋ, ಆ ಪಾಂಡುರಂಗನು ಅವರ ಕುಲದೇವನಾಗಿದ್ದನು.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು
ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.
 
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ನಾಮಸಂಕೀರ್ತನಯೋಗ')

ಸಂಬಂಧಿತ ವಿಷಯಗಳು
Dharma Granth

71 comments:

  1. This is nice but i have heard that by chanting om namo narayanaya or om namah shiva the best as these two represent panchakshari mantra and ashtakshari mantre. Kuladevata japa i have never herd before from my ancestors too this is something new to me. Can you please clear my confusion on what to chant

    ReplyDelete
    Replies
    1. ನಮಸ್ಕಾರ, ಮೇಲಿನ ವಿಷಯವನ್ನು ಪುನಃ ಸ್ವಲ್ಪ ಅಪಡೇಟ್ ಮಾಡಿದ್ದೇನೆ. ಮತ್ತೊಮ್ಮೆ ಓದಿ. ಈಗ ಕುಲದೇವರ ನಾಮಜಪ ಮಾಡುವುದೇ ಒಳ್ಳೆಯದು. ನಾರಾಯಣನ ಜಪ ಅಥವಾ ಶಿವನ ನಾಮಜಪವು ನಿರ್ದಿಷ್ಟ ಆಧ್ಯಾತ್ಮಿಕ ಸ್ತರಕ್ಕೆ ಅನುಕೂಲವಾಗಿರುತ್ತದೆ. ಇದರ ಬಗ್ಗೆ ತುಂಬಾ ವಿವರಣೆಯಿದೆ. ಆದರೆ ಇಲ್ಲಿ ಬರೆಯುವುದಿದ್ದರೆ ತುಂಬಾ ಬರೆಯಬೇಕಾಗುತ್ತದೆ. ಹಾಗಾಗಿ ತಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನಮ್ಮ ದೂರವಾಣಿಗೆ ಸಂಪರ್ಕಿಸಬಹುದು.

      Delete
  2. Bhala Chenagide... gothillada vishayagalannella thilide........dhanyvada

    ReplyDelete
  3. ಜೈ ಗುರುಭ್ಯೋ ನಮಃ
    ಗುರುಗಳೇ ನಮ್ಮ ಮನೆ ದೇವರು ಶ್ರೀ ಆಂಜನೇಯ ಸ್ವಾಮಿ, ಆಂಜನೇಯ ಸ್ವಾಮಿಗೆ ಮಾರುತಿ, ಹನುಮಂತ ಈ ರೀತಿಯಾಗಿ ಹಲವಾರು ಹೆಸರುಗಳಿವೆ, ಮತ್ತು perticular ಆಗಿ ಹೇಳಬೇಕೇಂದರೆ ನಮ್ಮ ಮನೇ ದೇವರು ಬಯಲಾಂಜನೇಯ ಸ್ವಾಮಿ, ದಯಮಾಡಿ ಯಾವ ರೀತಿಯಾಗಿ ನಾನು ಕುಲದೇವತೆಯ ಜಪ ಮಾಡಬೇಕೆಂದು ತಿಳಿಸುವಿರಾ?? ಮತ್ತು ಮನೆಯ ಹೆಣ್ಣು ದೇವತೆ ಯಾರು ಎಂಬುದು ನಿಖರವಾಗಿ ಯಾರಿಗೂ ಗೊತ್ತಿಲ್ಲ, ಹೀಗೆ ಇರಬೇಕಾದರೆ ಯಾವ ಹೆಣ್ಣು ದೇವರನ್ನು ನಾವು ಪೂಜಿಸುವುದರಿಂದ ಮನಶ್ಶಾಂತಿ ಲಭಿಸುತ್ತದೆ. ದಯಮಾಡಿ ನಿಮ್ಮ ಉತ್ತರವನ್ನು ತಿಳಿಸುವಿರಾ??

    ReplyDelete
    Replies
    1. ನಮಸ್ಕಾರ ಹೇಮಂತ ಕುಮಾರ್ ಇವರಿಗೆ,
      ನೀವು ಆಂಜನೇಯನ ಜಪವನ್ನು "ಶ್ರೀ ಹನುಮತೇ ನಮಃ" ಎಂದು ಮಾಡಿ. ಸ್ತ್ರೀ ದೇವರು ಕುಲದೇವರಾಗಿದ್ದರೆ ಮಾತ್ರ ಪೂಜಿಸಿ. ಇಲ್ಲದಿದ್ದರೆ ಆಂಜನೆಯ ಉಪಾಸನೆ ಮತ್ತು ನಾಮಜಪವನ್ನು ಸತತವಾಗಿ ಮಾಡಿದರೆ ಖಂಡಿತ ಮನಃಶಾಂತಿ ಲಭಿಸುತ್ತದೆ. ಧನ್ಯವಾದಗಳು.

      Delete
  4. Namaskara
    Namage kevala kula devra hesaru matra gothu. Adene madabahudalva. Nama mane devaru tirupathi srinivasa. kuladevi gothilla. Agu nivu rashi adhi pathi devaranu puje madabahuda?

    ReplyDelete
    Replies
    1. ನಮಸ್ಕಾರ, ನಿಮ್ಮ ಕುಲದೇವರ ಜಪವನ್ನೇ ಮಾಡಿ. ಕುಲದೇವ ಮತ್ತು ಕುಲದೇವಿ ಇಬ್ಬರೂ ಇದ್ದರೆ ಮಾತ್ರ ಕುಲದೇವಿಯ ಜಪ ಮಾಡಬೇಕು. ಹಾಗಾಗಿ ಕುಲದೇವಿಯ ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಕುಲದೇವರ ಜಪ ಮಾಡಿ. ರಾಶಿ ಅಧಿಪತಿಯ ಬದಲು ಕುಲದೇವರ ಜಪವನ್ನೇ ಮಾಡಿ.

      Delete
  5. Namaskara
    This kind of Information is Very Very useful of Human life I have followed your, how to do the Namaskara In front of God , Arranging the Gods in Manttapa & Dasavala Flower Mahathme

    Namskara
    Hariharan

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಸತತ ನಾಮಸ್ಮರಣೆ ಮಾಡಿ ಮತ್ತು ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಸಿ.

      Delete
  6. nanna atte mane kula devathe Kateelu Durga parameshwari, aadre, namma jaathi sangha books nalli (vasista gothra davarige) mane devaru mahamai durga parameshwari (goa), namma attege kelidre avara prakara,hinde namma hiri talemarinavaru yaro jathi bitti bere jathi sambanda madidha karana, namma jathi yavaru nammannu hathira serisuthiralilla addrinda, namma hiri talemarinavaru kateelu durgaparameshwari deviyannu mane devarendu pooje madi kondu baruthidhare endu atthe helidharu. aadhre nanage confuse nanna thai mane kade pakka jathiyavaru, aadhre gothilade maduve (berake jana) madidharu, namma nentarige kateelu durga parameshwari mane devaru endu helidhre, adhu hege sadya ? endu kelthare. iega nanu yava devathe kula devathe yagi pooje madabeku? dayavittu tilisi daily confuse nalle pooje maduthidene, eradu devara photo ittu kondidene.

    ReplyDelete
    Replies
    1. ನಿಮ್ಮ ಪ್ರಶ್ನೆ ಚೆನ್ನಾಗಿದೆ. ನಿಜ ಹೇಳಬೇಕೆಂದರೆ ನೀವು ಹೇಳಿದ ಜಾತಿ ಹಿಂದೂ ಧರ್ಮದಲ್ಲಿಲ್ಲ. ಜನರು ಮಾತ್ರ ಜಾತಿಜಾತಿ ಎಂದು ಸಿಲುಕಿಕೊಂಡಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ಕೇವಲ ವರ್ಣಾಶ್ರಮ ವ್ಯವಸ್ಥೆಯಿದೆ. ಅಂದರೆ ನಮ್ಮ ಜನ್ಮದಿಂದಲ್ಲದೇ ನಾವು ಮಾಡುವ ಕೆಲಸ-ಕಾರ್ಯ-ಆಚರಣೆಗಳಿಂದ ನಮ್ಮ ಜಾತಿ ಅಂದರೆ ವರ್ಣ ನಿರ್ಧರಿಸಲ್ಪಡುತ್ತದೆ. ಹಾಗಾಗಿ ಕಲಿಯುಗದಲ್ಲಿ ಈ ರೀತಿ ಹೆಚ್ಚಾಗಿ ವರ್ಣಸಂಕರವಾಗಿದೆ. ಅದರ ವಿಚಾರ ಮಾಡದೇ ನೀವು ತಲೆಮಾರುಗಳಿಂದ ನಂಬಿ ಬಂದ ದೇವರನ್ನೇ ಅಂದರೆ ಕಟೀಲು ದುರ್ಗಾಪರಮೇಶ್ವರಿಯ ನಾಮಜಪ ಮಾಡಬಹುದು. ನೀವು ಶ್ರೀ ದುರ್ಗಾಪರಮೇಶ್ವರಿದೇವ್ಯೈ ನಮಃ ಎಂದು ನಾಮಜಪ ಮಾಡಿ. ಗೊಂದಲದಿಂದ ಪೂಜೆ ಮಾಡದೇ ಶಾಂತಚಿತ್ತದಿಂದ ಮಾಡಿ. ಗೊಂದಲದ ಪೂಜೆ ದೇವರಿಗೆ ತಲುಪುವುದಿಲ್ಲ.

      Delete
  7. Om Namo bhagavathe .... nanna hesaru chandrashekar nannu Aadhyathmika sadhane madabeku antha prayathnapaduthidhenne dhaya madi thilisi kodi nanna 6 chakra galu matthu nanna sukshma shariravannu thilidhu kollalu sahaaya madi ..
    inthi ...chandru

    ReplyDelete
    Replies
    1. ನಮಸ್ಕಾರ, ಇಲ್ಲಿ ನೀಡಿರುವಂತೆ ಕುಲದೇವರ ನಾಮಸ್ಮರಣೆ ಮತ್ತು "ಶ್ರೀ ಗುರುದೇವ ದತ್ತ" ಎಂಬ ನಾಮಸ್ಮರಣೆಯಿಂದ ನಿಮ್ಮ ಆಧ್ಯಾತ್ಮಿಕ ಪ್ರವಾಸವನ್ನು ಪ್ರಾರಂಭಿಸಿ. 6 ಚಕ್ರ ಮತ್ತು ಸೂಕ್ಷ್ಮಶರೀರವು ಎಲ್ಲರಿಗೂ ಒಂದೇ ರೀತಿ ಇರುತ್ತದೆ. ಆದರೆ 6 ಚಕ್ರ ಮತ್ತು ಸೂಕ್ಷ್ಮಶರೀರ ಎಷ್ಟು ಶುದ್ಧವಾಗಿದೆ ಎಂಬುದು ಮುಖ್ಯ. ಹಾಗಾಗಿ ಸಾಧನೆ ಮಾಡಿ ಮುಂದಿನ ಹಂತ ನಿಮಗೆ ಸಿಗುವುದು

      Delete
  8. Replies
    1. ಕುಟುಂಬದವರು ಕೆಲವೊಮ್ಮೆ ನಮ್ಮ ಇಷ್ಟ ಪೂರೈಸಿದರು ಎಂದು ಒಂದು ದೇವರನ್ನು ಪೂಜಿಸಿಕೊಂಡು ಬಂದಿರುತ್ತಾರೆ, ಆ ದೇವರಿಗೆ ಮನೆದೇವರು ಎನ್ನುತ್ತಾರೆ. ಕುಲದೇವರ ಬಗ್ಗೆ ಮೇಲೆ ಈಗಾಗಲೇ ವಿವರಿಸಲಾಗಿದೆ.

      Delete
  9. ನಮಸ್ಕಾರ, ನಮ್ಮ ಕುಲದೇವರು ಶ್ರೀ ವೆಂಕಟರಮಣ. ದಯವಿಟ್ಟು ಕುಲದೇವರ ಮಂತ್ರವನ್ನು ತಿಳಿಸಿ.
    ವಂದನೆಗಳೊಂದಿಗೆ
    ಮಂಜುನಾಥ ಈಳಿ

    ReplyDelete
    Replies
    1. "ಶ್ರೀ ವೆಂಕಟೇಶಾಯ ನಮಃ" ಎಂದು ನಾಮಜಪ ಮಾಡಿ.
      ಧನ್ಯವಾದಗಳು

      Delete
    2. kashamisi...adu "ಶ್ರೀ ವೆಂಕಟೇಶಾಯ ನಮಃ" alla.adu tappu .hage.helabaradu..
      ವೆಂಕಟೇಶಾ alla ವೇಂಕಟೇಶ ....ವೆಂಕ alla,,ವೇಂಕ
      Thanks and Regards
      Aravinda Shastry

      Delete
  10. Om namho Bhagavathe vaasudevaya,,,,!

    Gurugale namm mane devaru Shri Veerabhadreshwar, nannadu Lingayth dharma, nann rashi ya prakaar nann devru Ganapathi, aadre nanu Yella devra naam smarane maduttene....!

    Ganapathi, Narayana, Hanumanth matte Mahadev,,! yav devara naamsmarane matte yavag maadbeku?????

    Please suggest the answer

    ReplyDelete
  11. Om Namho Bhagavathe Vaasudevaya....

    Gurugale Namma Mane Devaru, Shri Veerabhadreshwar. Nanu Langayath Dharmadavanu

    Nann Rashi Prakar nann Guru Ganapathi,

    Aadre nanu Mahadev, Narayana, Ganapathi, Hanumanth, yella Devi Aaradhane madthini.

    Nanage yaav devara aaradhane, Yavaag Madbeku anth suggest madi.....!

    nann age 25, meena rashi

    ReplyDelete
    Replies
    1. ಮೇಲೆ ವಿಷಯದಲ್ಲಿ ವಿವರಿಸಿದಂತೆ ಕುಲದೇವರ ನಾಮಸ್ಮರಣೆಯನ್ನೇ ಮಾಡಲು ಪ್ರಯತ್ನಿಸಿ.
      ಧನ್ಯವಾದಗಳು.

      Delete
  12. namsthe namma kuladevaru lakshmivenkateshvara nanu hanumananu haradane maduth hidene nima salahe

    ReplyDelete
    Replies
    1. ನಮಸ್ಕಾರ,
      ನಿಮ್ಮ ಕುಲದೇವರ ನಾಮಸ್ಮರಣೆಯನ್ನೇ ಮಾಡಿ. ಅಂದರೆ "ಶ್ರೀ ಲಕ್ಷ್ಮೀವೆಂಕಟೇಶ್ವರಾಯ ನಮಃ".

      Delete
    2. sir nannage jevana anodu bhalstu negudavagi kannatha eade dayavitu nannage yavaduru dari torisi please nemmage kai mugithini please

      Delete
    3. halo namaskara nama mane devaru thirupathi vekateshvara hege nama japa maduvudu thilisi

      Delete
  13. what happens after we die. do soul can see us crying for them or do they understand we think of them. do they bless us. my father expired during pitra paksha . just one week before he had done rudrabhisheka pooja in shiva temple . he was pure veg, and lived in discipline, .has his soul again born or still he is loving us . what happens to last breath? plz reply

    ReplyDelete
    Replies
    1. ನಮಸ್ಕಾರ, ನಿಮ್ಮ ಎಲ್ಲ ಪ್ರಶ್ನೆಗಳು ಅತ್ಯುತ್ತಮವಾಗಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಂಡರೆ ನಮಗೆ ಆಧ್ಯಾತ್ಮಿಕ ಸಾಧನೆ ಮಾಡುವ ಮಹತ್ವ ತಿಳಿಯುತ್ತದೆ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ನಮ್ಮ ಬಳಿ ಉತ್ತರವಿದೆ. ಇವೆಲ್ಲವೂ ಆಂಗ್ಲದಲ್ಲಿದೆ. ಅದನ್ನು ಓದಿ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಆರಂಭಿಸಿ - http://www.spiritualresearchfoundation.org/spiritualresearch/spiritualscience/afterdeath

      Delete
  14. Namma Kula devaru Subramanya Swamy. Navu enendu nama japa madabeku thilisi gurugale

    ReplyDelete
    Replies
    1. ನಮಸ್ಕಾರ, ನೀವು "ಶ್ರೀ ಸುಬ್ರಹ್ಮಣ್ಯಾಯ ನಮಃ" ಎಂದು ಸತತವಾಗಿ ನಾಮಜಪವನ್ನು ಮಾಡಿ. ಧನ್ಯವಾದಗಳು.

      Delete
  15. Poojyare,
    IN Dakshina kannada and Udupi districts, there is practice of ALIYA KATTU, where married women continue to show faith to her maternal Kuladevatha and her husband will be loyal to his maternal deity. Is it correct or what is correct?

    ReplyDelete
  16. ನಮಸ್ಕಾರಗಳು,

    ನಮ್ಮ ಕುಲದೇವರು ವಡ್ಡಗೆರೆ ಶ್ರೀ ವೀರನಾಗಮ್ಮ ದೇವಿ ಹಾಗೂ ನಾನು ಶ್ರೀ ರಾಘವೇಂದ್ರ ಸ್ವಾಮಿಗಳವರನ್ನು ಪೂಜಿಸುತ್ತೇನೆ.
    ನಾನು ಏನೆಂದು ಜಪ ಮಾಡಿದರೆ ಸೂಕ್ತ. ದಯವಿಟ್ಟು ತಿಳಿಸಿ.

    ವಂದನೆಗಳೊಂದಿಗೆ,
    ನಾಗರಾಜು

    ReplyDelete
    Replies
    1. ನಮಸ್ಕಾರ ಶ್ರೀ.ನಾಗರಾಜುರವರಿಗೆ
      ನೀವು ಶ್ರೀ ವೀರನಾಗಮ್ಮದೇವ್ಯೈ ನಮಃ ಎಂದು ನಾಮಜಪವನ್ನು ಮಾಡಿ.

      Delete
  17. namaskaragalu

    namma maneyalli Anjanaiah swamy puje madutiddeve kuladevaru hesaru gotilla nanu anjanaiah swamy na puje madtayiddini
    nanu enendu japa madidare sukta mattu dinakke eshtu sala nama smarane madabeku idara bagge tilisi dayavittu.

    ReplyDelete
    Replies
    1. ನಮಸ್ಕಾರ ಶ್ರೀ.ವೆಂಕಟೇಶ್‌ ರವರೇ,
      ನಿಮ್ಮ, ಹಿರಿಯರು, ಊರಿನವರು ಯಾರಿಗಾದರೂ ಕೇಳಿ ನೋಡಿ. ತಿಳಿಯದೇ ಇದ್ದರೆ "ಶ್ರೀ ಕುಲದೇವತಾಯೈ ನಮಃ" ಎಂದು ನಾಮಜಪ ಮಾಡಿ. ಕೆಲವು ತಿಂಗಳಲ್ಲೇ ನಿಮ್ಮ ಕುಲದೇವರು ಯಾರೆಂದು ಹೇಳುವವರು ಸಿಗಬಹುದು. ಪ್ರತಿದಿನ ಕನಿಷ್ಠ 15 ನಿಮಿಷದಿಂದ ಆರಂಭಿಸಿ, ಆಮೇಲೆ ದಿನದ 24 ಗಂಟೆ ಆಗುವ ತರಹ ನಮ್ಮ ಪ್ರಯತ್ನ ಇರಬೇಕು. ನಾಮಜಪ ಹೇಗೆ ಹೆಚ್ಚಿಸಬೇಕು ಎಂದು ಈ ಲಿಂಕ್‌ನಲ್ಲಿ ಓದಿ - http://dharmagranth.blogspot.in/2012/12/blog-post_21.html

      Delete
  18. Which adhyaatma books are released by DHARMA GRANTHA? How can I purchased them? Can I purchase them through internet?

    ReplyDelete
    Replies
    1. ನಮಸ್ಕಾರ, ನಮ್ಮ ಸಂಸ್ಥೆಯ ವತಿಯಿಂದ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದೇವೆ. ಆಧ್ಯಾತ್ಮಿಕ ಸಾಧನೆ, ಧಾರ್ಮಿಕ ಕೃತಿ, ಧಾರ್ಮಿಕ ವಿಧಿ, ಆಚಾರಧರ್ಮ ಹೀಗೆ ಒಟ್ಟು 210ಕ್ಕೂ ಹೆಚ್ಚು ಗ್ರಂಥಗಳನ್ನು 13 ಭಾಷೆಗಳಲ್ಲಿ ಮುದ್ರಿಸಿದ್ದೇವೆ. ನಿಮ್ಮ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳಲು 8951937332 ಈ ಸಂಖ್ಯೆಗೆ ಸಂಪರ್ಕಿಸಿ.

      Delete
  19. My kuladeva is REVANNA SIDDESWARA SWAMY. I am chanting as 'Om Jagadguru Sri. Reveanna siddeswaraya namah' Is it right? I am Bhakta of Shiva, Udupi Krishna and also Marutu. Shall I first chant my kuludevata mantra and after all my favourite Gods?

    ReplyDelete
    Replies
    1. ನಮಸ್ಕಾರ
      "ಶ್ರೀ ರೇವಣ್ಣ ಸಿದ್ಧೇಶ್ವರಾಯ ನಮಃ" ಎಂದು ಮಾಡಿದರೂ ಸಾಕಾಗುತ್ತದೆ. ಈಗ ಇಷ್ಟದೇವರಿಗಿಂತ ಕುಲದೇವರ ನಾಮಸ್ಮರಣೆ ಮಾಡುವುದೇ ಸೂಕ್ತ. ಏಕೆಂದರೆ ಇಷ್ಟದೇವರು ನಮ್ಮ ಮನಸ್ಸಿಗೆ ಇಷ್ಟವಾಗುವವರು ಮಾತ್ರ, ಆದರೆ ಕುಲದೇವರು ನಮಗೆ ಬೇಕಾದುದನ್ನು ಕೊಡುವವರು ಅಂದರೆ ಆಧ್ಯಾತ್ಮಿಕ ಮತ್ತು ವ್ಯಾವಹಾರಿಕ ಉನ್ನತಿ ಮಾಡಿಸಿಕೊಡುವ ದೇವರಾಗಿರುತ್ತಾರೆ. ಉದಾಹರಣೆಗೆ, ಜ್ವರ ಬಂದಾಗ ನಾವು ಗ್ಯಾಸ್ಟ್ರಿಕ್ ಮಾತ್ರೆ ಇಷ್ಟವೆಂದು ತೆಗೆದುಕೊಂಡರೆ ಹೇಗೆ ಗುಣವಾಗುವುದಿಲ್ಲವೋ, ಅದೇ ರೀತಿಯಾಗುತ್ತದೆ. ಧನ್ಯವಾದಗಳು.

      Delete
    2. Thanks for the valuable information and early reply

      Delete
  20. Kuladevatha nama japa prathi dina yelli bekadaru madabahude?

    ReplyDelete
    Replies
    1. ನಾಮಜಪ ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ಯಾವುದೇ ಸಮಯ ಅಥವಾ ಸ್ಥಳದ ಬಂಧನವಿಲ್ಲ. ಇದೇ ನಾಮಜಪದ ಶ್ರೇಷ್ಠತೆ. ಬೇರೆ ಯಾವುದೇ ಉಪಾಸನೆ ಮಾಡಲು ಏನಾದರೂ ಬಂಧನವಿರುತ್ತದೆ. ನಾಮಜಪವನ್ನು ಸತತವಾಗಿ ಮಾಡುವುದರಿಂದ ಸತತವಾಗಿ ದೇವರ ಉಪಾಸನೆ ಮಾಡಿದ ಹಾಗೆ ಆಗುತ್ತದೆ.

      Delete
  21. Kuladevarannu tiliyuvadu hege? Ghotrada mukantara tiliyabahude?. Jamadhagni ghotrakke yavadu kuladevaru?

    ReplyDelete
    Replies
    1. ನಮಸ್ಕಾರ, ಗೋತ್ರದ ಮೂಲಕ ಕುಲದೇವರ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಹಿರಿಯರಿಗೆ ಕೇಳಬಹುದು. ಅವರಿಗೂ ಗೊತ್ತಿಲ್ಲದಿದ್ದರೆ "ಶ್ರೀ ಕುಲದೇವತಾಯೈ ನಮಃ" ಎಂದು ಮಾಡಿ. ನಂತರ ನಿಮಗೆ ಕುಲದೇವರ ವಿಷಯ ತಿಳಿಸುವವರು ಸಿಗಬಹುದು. ಧನ್ಯವಾದಗಳು.

      Delete
    2. hi good evening sir i want some information about spiritual please can you teach r tel me.

      Delete
  22. namaskara yellarigu nanna vishaya yenendhare sadhaneyannu maduvudhu hege dhayamadi sariyadha margavannu needi

    ReplyDelete
    Replies
    1. ನಮಸ್ಕಾರ ಶ್ರೀ.ಗಿರೀಶರವರೇ, ನಮ್ಮ ಬ್ಲಾಗ್‌ನಲ್ಲಿ ಮೇಲೆ ಕೊಟ್ಟಿರುವ ಸಂಖ್ಯೆಗೆ ದಯವಿಟ್ಟು ಸಂಪರ್ಕಿಸಿ. ನಮ್ಮ ಸಂಸ್ಥೆಯ ಸಾಧಕರು ನಿಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ವಿವರವಾಗಿ ತಿಳಿಸುತ್ತಾರೆ. ಧನ್ಯವಾದಗಳು

      Delete
  23. namma mane devaru badami Banashankari Devi .yava reethi pujisabeku tilisi

    ReplyDelete
    Replies
    1. ನಮಸ್ಕಾರ, ನೀವು ಸತತವಾಗಿ "ಶ್ರೀ ಬನಶಂಕರಿದೇವ್ಯೈ ನಮಃ" ಎಂದು ನಾಮಜಪ ಮಾಡಿ. ಧನ್ಯವಾದಗಳು

      Delete
  24. In your questions and answers can you give me reference in the Scriptures. I mean in which shastra these answers mentioned.
    Thanks

    ReplyDelete
    Replies
    1. ನಮಸ್ಕಾರ, ‘ಕುಲದೇವತೆ’ ಉಪಾಸನೆಯ ಇತಿಹಾಸ : ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು. ಹಾಗಾಗಿಯೇ ಬಹಳ ಹಿಂದಿನಿಂದಲೂ ಪತ್ರ, ವಿವಾಹ ಅಥವಾ ಶುಭಕಾರ್ಯಗಳ ಆಮಂತ್ರಣ ಪತ್ರಿಕೆಯಲ್ಲಿ ಎಲ್ಲಕ್ಕಿಂತ ಮೊದಲು ತಮ್ಮ ಕುಲದೇವರ ನಾಮ ಅಥವಾ "ಶ್ರೀ ಕುಲದೇವತಾ ಪ್ರಸನ್ನ" ಎಂದು ಹಾಕುತ್ತಾರೆ. ಇದನ್ನು ತಾವೂ ನೋಡಿರಬಹುದು.

      Delete
  25. Gurugale Namma Mane Devaru, Mailapur MALLAYYA (Shri Mailarlingeshwar). Nanu Swakul Sali Samaj (Hindu Nekar) Dharmadavanu. Namma Kul Devaru Shree JIVHESHWAR. Nanu yav Naamjap madbeku tilisi.

    ReplyDelete
    Replies
    1. ನಮಸ್ಕಾರ, ನಿಮ್ಮ ಕುಲದೇವರಾದ ಜಿಹ್ವೇಶ್ವರನ ನಾಮಜಪವನ್ನು "ಶ್ರೀ ಜಿಹ್ವೇಶ್ವರಾಯ ನಮಃ" ಎಂದು ಮಾಡಿ.

      Delete
  26. kula devara shaapa eddare adke parihara enu sir?

    ReplyDelete
  27. GOD's name is more powerful than the GOD itself. So you can chant your Kuladevata's name without any doubt and hesitation. If there is shrapa from Kuladevata, that too will be nullified after you start Chanting his/her name with full faith and sharanagati bhav (surrender mode). Dhanyavaad.

    ReplyDelete
  28. ನಮ್ಮ ಕಲದೇವರು
    ಶ್ರೀಲಕ್ಷ್ಮೀರಂಗನಾಥಸ್ವಾಮಿ
    ನಾನು ಹೇಗೆ ನಾಮಜಪವನ್ನು ಮಾಡಲಿ

    ReplyDelete
    Replies
    1. ನಮಸ್ಕಾರ, ಶ್ರೀ ಲಕ್ಷ್ಮೀರಂಗನಾಥಾಯ ನಮಃ ಅಥವಾ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯೇ ನಮಃ ಎಂದು ಮಾಡಬೇಕು.

      Delete
  29. Namma kula devaru SRI MODALAGATTI ANJANEYA SWAMY ya value ritI Japanese madbeku dayamadi tilisi

    ReplyDelete
    Replies
    1. ನಮಸ್ಕಾರ, ಶ್ರೀ ಹನುಮತೇ ನಮಃ ಎಂದು ನಾಮಜಪ ಮಾಡಿ.

      Delete
  30. Namaste. My question is,
    . OM and SHRI what is difference between these two

    ReplyDelete
    Replies
    1. ನಮಸ್ಕಾರ,

      ಶ್ರೀ ಎಂದರೆ ಶಕ್ತಿ, ಸೌಂದರ್ಯ ಸದ್ಗುಣದ ಪ್ರತೀಕವಾಗಿದೆ. ಓಂಕಾರವು ನಿರ್ಗುಣ ತತ್ತ್ದದ ಪ್ರತೀಕವಾಗಿದೆ.

      ನಾಮಜಪದ ಆರಂಭದಲ್ಲಿ 'ಶ್ರೀ' ಅಥವಾ 'ಓಂ' : ಸತ್ಯಯುಗದಲ್ಲಿ ಎಲ್ಲಾ ಮಂತ್ರಗಳು 'ಓಂ'ನಿಂದಲೇ ಆರಂಭವಾಗುತ್ತಿದ್ದವು. ಆಗ ಓಂಕಾರವನ್ನು ಸೇರಿಸಿ ನಾಮಜಪ ಮಾಡುವ ಕ್ಷಮತೆ ಎಲ್ಲರಲ್ಲೂ ಇತ್ತು. ಕಾಲಾನುಸಾರ ಸಮಾಜದ ಸಾತ್ತ್ವಿಕತೆ ಕಡಿಮೆಯಾಗುತ್ತಾ ಹೋದಂತೆ ಓಂನ ಬದಲು 'ಶ್ರೀ'ಯ ಉಪಯೋಗ ಆರಂಭವಾಯಿತು. ಕಲಿಯುಗದಲ್ಲಿ 'ಶ್ರೀ'ಯನ್ನು ಸೇರಿಸಿ ನಾಮಜಪ ಮಾಡಲಾಗುತ್ತದೆ. ಕಲಿಯುಗದಲ್ಲಿ ವಿಶಿಷ್ಟ ಕಾರಣಗಳಿಗಾಗಿ, ಉದಾ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಓಂಕಾರವನ್ನು ಸೇರಿಸಿ ನಾಮಜಪ ಮಾಡುವುದು ಉಪಯುಕ್ತವಾಗಿದೆ. (ವಿವರವಾದ ಇನ್ನಿತರ ಮಾಹಿತಿಗೆ - ಸನಾತನದ ಗ್ರಂಥ 'ನಾಮಜಪದ ಯೋಗ್ಯ ಪದ್ಧತಿ' ಓದಿ)

      Delete
  31. Namasthe,i started doing "shri gurudevadatta"japa, the day i started d i have severe headache and i can see my dad { expired} in my dreams trying to say something. I will see black snake ... I am doing it from past 2 years.. now some extent dreams have reduced... but when i dont do, me, my 2 kids or husband falls ill..my question is how will i know my japa is working... and help my ancestors reach sadgathi...

    ReplyDelete
    Replies
    1. ನಮಸ್ಕಾರ, ನೀವು ೨ ವರ್ಷಗಳಿಂದ ನಾಮಜಪ ಮಾಡುತ್ತಿರುವುದರಿಂದಲೇ, ಕೆಲವು ಪ್ರಮಾಣದಲ್ಲಿ ನಿಮಗೆ ಬರುವ ಕನಸುಗಳು ಕಡಿಮೆಯಾಗಿವೆ. ಹಾಗೆಯೇ ನಾಮಜಪ ನಿಲ್ಲಿಸಿದಾಗ ಎಲ್ಲರಿಗೂ ಅನಾರೋಗ್ಯವುಂಟಾಗುತ್ತದೆ ಎಂದು ಹೇಳಿದ್ದೀರಿ ಇವೆಲ್ಲವೂ ನಾಮಜಪ ಪರಿಣಾಮವಾಗುತ್ತಿರುವುದರ ಪರಿಣಾಮ. ಆದರೆ ನೀವು ಒಬ್ಬರೇ ನಾಮಜಪ ಮಾಡಿದರೆ ಸಾಕಾಗುವುದಿಲ್ಲ, ಹಾಗಾಗಿ ಮನೆಯವರೆಲ್ಲ ಪ್ರತಿಯೊಬ್ಬರೂ ದತ್ತನ ನಾಮಜಪ ಮಾಡಬೇಕು, ಅದರೊಂದಿಗೆ ಕುಲದೇವರ ನಾಮಜಪವನ್ನೂ ಮಾಡಬೇಕು. ನೀವು ಪ್ರತಿದಿನ ನಾಮಜಪ ಮಾಡುತ್ತಿದ್ದರೂ ಎಷ್ಟು ಗಂಟೆ ಮಾಡುತ್ತಿದ್ದೀರಿ ಎಂದು ಗೊತ್ತಾಗಲಿಲ್ಲ. ನಿಮ್ಮೆಲ್ಲರಿಗಿರುವ ತೊಂದರೆ ತೀವ್ರತೆಗನುಸಾರ ನಾಮಜಪದ ಅವಧಿಯನ್ನು ಹೆಚ್ಚಿಸಬೇಕು. ದತ್ತನ ನಾಮಜಪದ ಮಹತ್ವದ ಬಗ್ಗೆ ಕೊಟ್ಟಿರುವ ಲೇಖನವನ್ನೊಮ್ಮೆ ಓದಿ. ನಿಮ್ಮ ತಂದೆಯವರು ಕನಸಿನಲ್ಲಿ ಬಂದು ಏನೋ ಹೇಳುತ್ತಿದ್ದಾರೆಂದರೆ ಅವರಿಗೆ ಶ್ರಾದ್ಧವನ್ನು ಸರಿಯಾಗಿ ಮಾಡಲಾಗುತ್ತದೆಯಲ್ಲ ಎಂದು ನೋಡಿ. ಹಾಗಾಗದಿದ್ದರೆ ಇಂತಹ ಕನಸುಗಳು ಬೀಳುತ್ತವೆ.

      Delete
  32. Namaskara nanu 4 tingalininda nama japa madutiddene belegge enda madyanada varege Sri Kuladevtai namaha madyanada nantara Sri Guru Deva datta hige madudaralli yenadaru tondare edeye... Nanu dakshina Kannada udupi yavanu namma jathi billava namma kuladevaru Koti Chennaya nanu hege nama japa madabahudu dayavittu tilisi e tanaka nanu kuladevtai namaha antane nama japa madutiddene

    ReplyDelete
  33. Namaskara HariOm nanna kuladevaru koti chennaya nanna jathi billava nanu hege kuladevara nama japa madabahudu dayavittu tilisu

    ReplyDelete
  34. Namaste.. Namma kuladevaru sri bereshwara swamy .. Nanna esta devaru anjaneya swamy..

    Navu Bus Nalli chalisuvaga Nama japa madabahude tilisikodi

    japisuva samyadalli ketta alochanegalu kaduthade eakagrathe mooduvudilla , Nidde baruthade edakkenu maduvudu...






    ReplyDelete

Note: only a member of this blog may post a comment.