ಮಾತೃಭಾಷಾಭಿಮಾನವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಡಿಪಾಯವಾಗಿದೆ!

‘ನಾನು ಫ್ರೈಡೆ ನನ್ನ ಕಸಿನ್‌ನ ಮನೆಗೆ ಹೋಗುತ್ತೇನೆ; ಆದುದರಿಂದ ಸ್ಕೂಲಿಗೆ ಬರುವುದಿಲ್ಲ’, ಇಂತಹ ಆಂಗ್ಲಮಿಶ್ರಿತ ವಾಕ್ಯಗಳನ್ನು ಇಂದಿನ ಮಕ್ಕಳು ಸಹಜವಾಗಿ ಮಾತನಾಡುತ್ತಾರೆ. ಶಿಕ್ಷಣ ಪಡೆಯುವಾಗ ಆಂಗ್ಲ ಭಾಷೆ ಅಗತ್ಯವಾಗಿದ್ದರೆ ಸರಿ; ಆದರೆ ಇತರ ಸಮಯದಲ್ಲಿ ಮಾತೃಭಾಷೆಯಲ್ಲಿ ಮಾತನಾಡುವಾಗ ನಾವೇಕೆ ಆಂಗ್ಲವನ್ನು ಉಪಯೋಗಿಸುತ್ತೇವೆ? ನಮ್ಮ ಮಾತೃಭಾಷೆಯು ಸಮೃದ್ಧವಾಗಿಲ್ಲವೇ? ಈಗ ನಿಮಗೆ, ‘ಆಂಗ್ಲವನ್ನು ಉಪಯೋಗಿಸಿದರೆ ಏನಾಯಿತು?’ ಎಂದು ಅನಿಸಬಹುದು, ಆದರೆ ಗಮನದಲ್ಲಿಟ್ಟುಕೊಳ್ಳಿ, ‘ನಮ್ಮ ಉದ್ದೇಶವು ಆಂಗ್ಲವನ್ನು ದ್ವೇಷಿಸುವುದಾಗಿರದೇ, ಮಾತೃಭಾಷಾಭಿಮಾನವನ್ನು ಜೋಪಾನ ಮಾಡುವುದಾಗಿದೆ.’

ಅ. ಈಶ್ವರನ ಕಡೆಗೆ ಹೋಗುವ ಮಾರ್ಗವನ್ನು ತೋರಿಸುವ ನಮ್ಮ ಸಂತರಾದ ಕನಕದಾಸರು, ಪುರಂದರದಾಸರು ಯಾವ ಭಾಷೆಯಲ್ಲಿ ಭಕ್ತಿಗೀತೆಗಳನ್ನು ಬರೆದಿದ್ದಾರೆ ಎಂದು ನಿಮಗೆ ಗೊತ್ತಿರಬಹುದು.

ಆ. ಮಾತೃಭಾಷಾಭಿಮಾನದಿಂದ ರಾಷ್ಟ್ರಾಭಿಮಾನ ನಿರ್ಮಾಣವಾಗುತ್ತದೆ: ಸದ್ಯ ಮನೆಮನೆಗಳಲ್ಲಿ ಹಿರಿಯರು ಮಾತೃಭಾಷೆಯಲ್ಲಿ ಮಾತಾಡುವಾಗ ಸಹಜವಾಗಿ ಆಂಗ್ಲ ಶಬ್ದಗಳನ್ನು ಉಪಯೋಗಿಸುತ್ತಾರೆ. ಕರ್ನಾಟಕದ ಉದಾಹರಣೆಯನ್ನು ತೆಗೆದುಕೊಂಡರೆ, ಸದ್ಯ ಕರ್ನಾಟಕದಿಂದ ಪ್ರಸಾರವಾಗುವ ದೂರದರ್ಶನ ಮತ್ತು ಆಕಾಶವಾಣಿ ಇವುಗಳ ಕಾರ್ಯಕ್ರಮಗಳಲ್ಲಿ; ಹಾಗೆಯೇ ಕರ್ನಾಟಕದ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ನಟ-ನಟಿಯರ ಕನ್ನಡದಲ್ಲಿ ಮಾತನಾಡುವಾಗ ನಡುನಡುವೆ ಆಂಗ್ಲ ಶಬ್ದಗಳನ್ನು ಅನಾವಶ್ಯಕವಾಗಿ ಉಪಯೋಗಿಸುತ್ತಾರೆ. ಹೀಗೆ ಪರಕೀಯ ಶಬ್ದಗಳನ್ನು ಉಪಯೋಗಿಸುವುದನ್ನು ಪ್ರತಿಷ್ಠೆಯೆಂದು ತಿಳಿಯಲಾಗುತ್ತದೆ. ಮಕ್ಕಳು ಇದನ್ನು ಅನುಕರಿಸುತ್ತಾರೆ. ಈ ಚಿತ್ರಣವು ಹಿಂದೂಸ್ಥಾನದ ಎಲ್ಲ ರಾಜ್ಯಗಳಲ್ಲಿ ಕಾಣಿಸುತ್ತದೆ.

ಮಾತೃಭಾಷೆಯಲ್ಲಿ ಮಾತನಾಡುವಾಗ ತಿಳಿಯದೇ ಬಾಯಿಯಿಂದ ಪರಕೀಯ ಶಬ್ದಗಳು ಬಂದರೂ ಅದರಿಂದ ದುಃಖವಾಗದಿರುವುದು ಅಥವಾ ಪರಕೀಯ ಶಬ್ದಗಳನ್ನು ಉಪಯೋಗಿಸಲು ಇಷ್ಟವಾಗುವುದರಿಂದ ನಿಧಾನವಾಗಿ ರಾಷ್ಟ್ರಾಭಿಮಾನವು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ತದ್ವಿರುದ್ಧವಾಗಿ ಮಾತೃಭಾಷೆಯ ಶಬ್ದಗಳ ಅಭಿಮಾನವನ್ನೇ ಇಟ್ಟುಕೊಂಡರೆ ರಾಷ್ಟ್ರಾಭಿಮಾನವು ಹೆಚ್ಚಾಗತೊಡಗುತ್ತದೆ.

ಇ. ಮಾತೃಭಾಷಾಭಿಮಾನದಿಂದ ಸಂಸ್ಕೃತಿಯ ರಕ್ಷಣೆಯಾಗಿ ಧರ್ಮಾಭಿಮಾನ ಜಾಗೃತವಾಗುತ್ತದೆ: ಮಕ್ಕಳೇ, ಹೇಗೆ ಭಾಷೆ ಮತ್ತು ರಾಷ್ಟ್ರಾಭಿಮಾನಕ್ಕೆ ಸಂಬಂಧವಿದೆಯೋ, ಹಾಗೆಯೇ ಭಾಷೆ ಮತ್ತು ಧರ್ಮಾಭಿಮಾನಕ್ಕೂ ಹತ್ತಿರದ ಸಂಬಂಧವಿದೆ. ಇಬ್ಬರು ಮಾತೃಭಾಷಾಭಿಮಾನಿ ಕನ್ನಡ ಭಾಷಿಗರು ಭೇಟಿಯಾದ ಕೂಡಲೇ ಕೈ ಮುಗಿದು ಪರಸ್ಪರರಿಗೆ ‘ನಮಸ್ಕಾರ’ ಅಥವಾ ‘ರಾಮ ರಾಮ’ ಎಂದು ಹೇಳುತ್ತಾರೆ. ಈ ಸಂವಾದದಿಂದ ‘ತಮ್ಮಲ್ಲಿ ನಮ್ರತೆಯನ್ನು ತರುವುದು ಅಥವಾ ಇತರರಲ್ಲಿ ರಾಮ (ದೇವರು) ನನ್ನು ನೋಡುವುದು’, ಎಂಬ ಬೋಧನೆ ಸಿಗುತ್ತದೆ. ಈಗ ನೋಡಿ! ಮಾತೃಭಾಷಾಭಿಮಾನ ಇಲ್ಲದಿರುವ ಯಾರಾದರೂ ಇಬ್ಬರು ಪರಸ್ಪರ ಭೇಟಿಯಾದರೆ ಅವರು ‘ಹೆಲೋ’ ಎಂದು ಹೇಳಿ ಪರಕೀಯ ರೂಢಿಯಂತೆ ಹಸ್ತಲಾಘವ (ಶೇಕ್‌ಹ್ಯಾಂಡ್) ಮಾಡುತ್ತಾರೆ. ಈ ‘ಹೆಲೋ’ ಶಬ್ದಕ್ಕೆ ಏನಾದರೂ ಅರ್ಥವಿದೆಯೇ? ಇಲ್ಲವಲ್ಲ; ಆದರೆ ‘ನಮಸ್ಕಾರ’ ಅಥವಾ ‘ರಾಮ ರಾಮ’ ಎಂದು ಹೇಳಿದರೆ ಹಿಂದೂ ಸಂಸ್ಕೃತಿಯ ರಕ್ಷಣೆಯಾಗುತ್ತದೆ ಮತ್ತು ಧರ್ಮಾಭಿಮಾನ ಜಾಗೃತವಾಗುತ್ತದೆ.

(ಆಧಾರಗ್ರಂಥ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳಾಗಿರಿ!’)

3 comments:

Note: only a member of this blog may post a comment.