ಹಿಂದೂಗಳೇ, ಅರ್ಥಹೀನ ’ವೆಲೆಂಟೈನ ಡೇ’ ನಮಗೆ ಬೇಡ!


ಫೆಬ್ರವರಿ ೧೪ ರಂದು ’ವ್ಯಾಲೆಂಟೈನ್ ಡೇ’ ಅಂದರೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಯುವಪೀಳಿಗೆಯೇ ನಿಜವಾದ ಪ್ರೇಮ ಕೇವಲ ಒಂದು ದಿನ ಇರುತ್ತದೆಯೇ? ಮಹಾವಿದ್ಯಾಲಯಗಳಲ್ಲಿನ ’ಡೇ’ ಸಂಸ್ಕೃತಿಯೆಂದರೆ ಪಾಶ್ಚಾತ್ಯರ ಅನೈತಿಕತೆಯ ಭೋಗವಾದದ ಅನುಕರಣೆಯಾಗಿದೆ! ’ವ್ಯಾಲೆಂಟೈನ್ ಡೇ’ ಅಂದರೆ ಸಭ್ಯತೆ ಮತ್ತು ನೈತಿಕತೆಯನ್ನು ಅಪಮಾನಗೊಳಿಸುವ ಒಂದು ’ಕಪ್ಪು’ ದಿನವಾಗಿದೆ! ಭಾರತೀಯ ಮಹಾನ್ ಸನಾತನ ಸಂಸ್ಕೃತಿಯ ಮೇಲೆ ಆಘಾತ ಮಾಡುವ ಸಮಸ್ಯೆಯಾಗಿದೆ. ವ್ಯಾವಹಾರಿಕ ಲಾಭಕ್ಕಾಗಿ ಆಧುನಿಕ ಪ್ರಸಾರ ಮಾಧ್ಯಮಗಳು ಮತ್ತು ಶುಭೇಚ್ಛಾಪತ್ರಗಳನ್ನು ಮಾರಾಟ ಮಾಡುವ ಸಂಸ್ಥೆಗಳು (ಕಂಪನಿಗಳು) ’ವ್ಯಾಲೆಂಟೈನ್ ಡೇ’ಯನ್ನು ಉತ್ಸಾಹದಿಂದ ಪ್ರಸಾರ ಮಾಡುತ್ತವೆ. ಇದರಿಂದ ಹಿಂದೂಗಳ ಸಾಂಸ್ಕೃತಿಕ ಮತಾಂತರಕ್ಕೆ ಒಂದು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ ಮತ್ತು ದೇಶದ ಯುವ ಪೀಳಿಗೆಯು ತಪ್ಪು ದಾರಿಗೆ ಹೋಗುತ್ತದೆ.  ವೃತ್ತಿಯು ಸಾತ್ವಿಕವಾಗಿ ನೀತಿವಂತ, ನೈತಿಕ ಮತ್ತು ಸಂಯಮೀ ಜೀವನ ನೆಡೆಸಲು ಹಬ್ಬ, ಉತ್ಸವ, ವ್ರತಗಳನ್ನು ಮತ್ತು ಧಾರ್ಮಿಕ ಕೃತಿಗಳನ್ನು ಆಚರಿಸಲು ಹೇಳುವ ಸನಾತನ ಧರ್ಮದ ಹಿಂದೂಗಳು ಪಾಶ್ಚಾತ್ಯರಂತೆ ’ವ್ಯಾಲೆಂಟೈನ್ ಡೇ’ಯ ಉದಾತ್ತೀಕರಣ ಮಾಡುವುದು ಸನಾತನ ಧರ್ಮದ ಮೇಲಿನ ಹಾನಿಯೇ ಆಗಿದೆ.

ಯಾರು ಈ ವ್ಯಾಲೆಂಟೈನ್ ?

ಮೂರನೆಯ ಶತಮಾನದಲ್ಲಿ ರೋಮ್ ರಾಜನಾದ ಕ್ಲೌಡಿಯಸ್‌ನು (ದ್ವಿತೀಯ) ಯುವಕರು ವಿವಾಹವಾಗದೇ ಸೇನೆಯಲ್ಲಿ ಸೇರಬೇಕು ಎಂಬ ಆದೇಶ ಹೊರಡಿಸಿದನು. ಈ ಆದೇಶಕ್ಕೆ ಬಗ್ಗದೇ ’ವ್ಯಾಲೆಂಟೈನ್’ ಎಂಬ ಕ್ರೈಸ್ತ ಧರ್ಮ ಗುರುವು ಯುವಕ-ಯುವತಿಯರಿಗೆ ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನಿಗೆ ಈ ವಿಷಯ ತಿಳಿದಾಗ ಧರ್ಮಗುರುವನ್ನು ಸೆರಮನೆಗೆ ತಳ್ಳಿದನು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಿದನು. ಸೆರಮನೆಯಲ್ಲಿ ಈ ತಥಾಕಥಿತ ಅನೈತಿಕತೆ ಪೋಷಣೆ ಮಾಡುವ ಸಂತನು ಸೆರಮನೆಯ ಅಧಿಕಾರಿಯ ಪುತ್ರಿಯನ್ನು ಪ್ರೇಮಿಸ ತೊಡಗಿದನು. ಗಲ್ಲು ಶಿಕ್ಷೆಯ ಹಿಂದಿನ ದಿನ ಅವನು ಆ ಯುವತಿಗೆ ’ನಿನ್ನ ವ್ಯಾಲೆಂಟೈನ್’ ಎಂದು ಬರೆದ ಪತ್ರವನ್ನು ಕಳುಹಿಸಿದನು.

ವ್ಯಾಲೆಂಟೈನ್ ಡೇಯನ್ನು ಕ್ಯಾಲೆಂಡರ್‌ನಿಂದ ಕಿತ್ತು ಹಾಕಿದ ರೋಮ್‌ನ ಕ್ಯಾಥೋಲಿಕ್ ಇಗರ್ಜಿ.

ಮತ್ತೊಂದು ಐತಿಹಾಸಿಕ ದಾಖಲೆಯ ಪ್ರಕಾರ ಪ್ರಾಚೀನ ರೋಮ್‌ನಲ್ಲಿ ಮೂರ್ತಿ ಪೂಜಕ (ಪ್ಯಾಗನ್) ಸಂಸ್ಕೃತಿಯಲ್ಲಿ ’೧೩ ರಿಂದ ೧೫ ಫೆಬ್ರವರಿ’ ಈ ಸಮಯದಲ್ಲಿ ’ಲ್ಯೂಪರಕ್ಯಾಲಿಯಾ’ ಎಂಬ ’ಪ್ರಜನ ಉತ್ಸವ’ ಆಚರಿಸಲಾಗುತ್ತದೆ. ಮೂರ್ತಿಪೂಜಕರನ್ನು ಕ್ರೈಸ್ತರನ್ನಾಗಿಸಲು ’ಪೋಪ್ ಗೆಲಾಸಿಸ್ (ಪ್ರಥಮ)’ ಇವನು ಫೆಬ್ರವರಿ ೧೪ ಕ್ಕೆ ’ವೆಲೆಂಟೈನ್ ಡೇ’ಯನ್ನು ಆಚರಿಸಲು ಪ್ರಾರಂಭಿಸಿದರು. ೧೪ ನೇ ಶತಕದವರೆಗೆ ’ವ್ಯಾಲೆಂಟೈನ್ ಡೇ’ ಮತ್ತು ’ಪ್ರೇಮ’ಕ್ಕೆ ಸಂಬಂಧವಿರಲಿಲ್ಲ. ಆದುದರಿಂದ ರೋಮ್‌ನ ಕ್ಯಾಥೋಲಿಕ್ ಇಗರ್ಜಿಯು ’ವ್ಯಾಲೆಂಟೈನ್ ಡೇ’ಯನ್ನು ತನ್ನ ಕ್ಯಾಲೆಂಡರ್‌ನಿಂದ ತೆಗೆದು, ಆಚರಣೆಯನ್ನು ಕೈ ಬಿಟ್ಟಿತ್ತು.

ಪಾಶ್ಚ್ಯಾತ್ಯರ ದಾಸರಾದ ಭಾರತೀಯರು

ಆಧುನಿಕತೆ ಹೆಸರಿನಲ್ಲಿ ಇಂದಿನ ಯುವಜನತೆಯು ಪಾಶ್ಚಾತ್ಯರ ’ವ್ಯಾಲೆಂಟೈನ್ ಡೇ’, ’ರೋಜ್ ಡೇ’, ’ಫಾದರ‍್ಸ್ ಡೇ’, ’ಮದರ‍್ಸ್ ಡೇ’ ಅಂತಹ ಅರ್ಥಹೀನ ದಿನಾಚರಣೆಗಳನ್ನು ಆಚರಿಸುತ್ತಿದೆ. ಇಂತಹ ಆಚರಣೆಗಳ ಮೂಲಕ ಯುವಕರು ಮದ್ಯಪಾನ ಮಾಡುವುದು, ಮಾದಕ ವಸ್ತುಗಳ ಸೇವನೆ ಮಾಡುವುದು, ಪಬ್‌ಗೆ ಹೋಗಿ ಲಿಂಗ ಭೇದವಿಲ್ಲದೆ ಕುಣಿಯುವುದು, ಯುವತಿಯರನ್ನು ಪೀಡಿಸುವುದು, ಅತ್ಯಾಚಾರ, ಬಲಾತ್ಕಾರಗಳಂತಹ ಘಟನೆಗಳಾಗುತ್ತಿವೆ. ಯುವಕರನ್ನು ದಾರಿ ತಪ್ಪಿಸಲು ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಯುವಕರು ವ್ಯಸನಿಗಳಾಗುತ್ತಿದ್ದಾರೆ, ಆತ್ಮಹತ್ಯೆ, ಅಪಘಾತಕ್ಕೀಡಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಯುವಜನತೆ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ.

ಆರ್ಥಿಕ ಲಾಭವನ್ನು ಗಳಿಸುವ ನೀತಿಹೀನ ಉದ್ಯೋಗಪತಿಗಳು

ಒಂದು ಅಂಕಿ ಅಂಶದ ಪ್ರಕಾರ ಕಳೆದ ವರ್ಷ ದೇಶವ್ಯಾಪಿ ಪ್ರೇಮಿಗಳ ದಿನಾಚರಣೆಯ ದಿನ ೨೦೨ ಅತ್ಯಾಚಾರ ಪ್ರಕರಣಗಳು ಜರುಗಿದೆ. ಮದ್ಯಸೇವನೆಯಿಂದ ೩೧೮ ಅಪಘಾತಗಳು ನಡೆದಿದೆ. ೬೫ ಕೋಟಿ ರೂಪಾಯಿಗಳ ಕಾಂಡೋಮ್ ವಿತರಣೆ ಆಗಿದೆ. ೩೧೮ ಯುವತಿಯರು ನಾಪತ್ತೆ ಆಗಿದ್ದಾರೆ. ೩೧೮ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೧೩ ಕೋಟಿ ರೂಗಳ ವ್ಯವಹಾರ ನಡೆದಿದೆ. ೫೬ ಯುವತಿಯರ ಅಪಹರಣ ಆಗಿದೆ ಮತ್ತು ೨೮೦೦ ಕೋಟಿ ರೂಗಳ ಸರಾಯಿ ಮಾರಾಟವಾಗಿದೆ. ೩೬೦೦ ಕೋಟಿ ಮಾದಕ ಪದಾರ್ಥಗಳ ವಿತರಣೆ ಆಗಿದೆ. ಇದನ್ನು ಮಾನ್ಯ ಪ್ರಮೋದ ಮುತಾಲಿಕರವರು ಪತ್ರಿಕಾ ಪರಿಷತ್‌ನಲ್ಲಿ ತಿಳಿಸಿದ್ದಾರೆ ಮತ್ತು ಇದರ ಇರುದ್ದ ಹಿಂದೂ ಜನಜಾಗೃತಿ ಸಮಿತಿ ಸೇರಿ ಅನೇಕ ಹಿಂದೂ ಪರ ಸಂಘಟನೆಗಳು ಹೋರಾಟವನ್ನು ಮಾಡುತ್ತಿದ್ದಾರೆ.

ಶ್ರೇಷ್ಠ ಪರಂಪರೆಯ ಪಾವಿತ್ರ್ಯ ಕಾಪಾಡಲು, ವ್ಯಾಲೆಂಟೈನ್ ಡೇಯನ್ನು  ಬಹಿಷ್ಕರಿಸೋಣ

ನಮ್ಮ ಸಾವಿರಾರು ವರ್ಷಗಳ ಶ್ರೇಷ್ಠ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ಆಚರಣೆಗಳ ಶಾಸ್ತ್ರವನ್ನು ಅರಿತುಕೊಂಡು ಅವುಗಳನ್ನು ಆಚರಣೆಗೆ ತಂದಲ್ಲಿ ಅವುಗಳಿಂದ ನಮ್ಮ ರಕ್ಷಣೆಯಾಗುವುದು. ಸನಾತನ ಧರ್ಮವು ಇಡೀ ವಿಶ್ವವೇ ನಮ್ಮ ಮನೆ ಎಂಬ ವಿಶಾಲಮನೋಭಾವದಿಂದ ಪೃಕೃತಿ, ಪ್ರಾಣಿ-ಪಕ್ಷಿಗಳಲ್ಲಿ ನೀರಪೇಕ್ಷ ಪ್ರೀತಿ ಮಾಡಲು ಕಲಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೇಳಿದ ಕುಂಕುಮ ಹಚ್ಚಿಕೊಳ್ಳುವುದರಿಂದ ಸ್ತ್ರೀಯ ರಕ್ಷಣೆಯ ಜೊತೆಗೆ, ಪತಿಯ ಆಯುಷ್ಯವು ವೃಧ್ಧಿಸುತ್ತದೆ. ಯುವಕರು ತಿಲಕವನ್ನು ಹಚ್ಚುವುದರಿಂದ ಶಿವನ ತತ್ತ್ವವನ್ನು ಪಡೆಯಬಹುದು. ಈ ರೀತಿ ನಾವು ಧರ್ಮದ ಆಚರಣೆಯನ್ನು ಮಾಡುವುದರಿಂದ ನಮ್ಮ, ಕುಂಟುಂಬ ಮತ್ತು ರಾಷ್ಟ್ರ ಹಾಗೂ ಧರ್ಮದ ರಕ್ಷಣೆಯಾಗುವುದು. ಅದಕ್ಕಾಗಿ ಇಂತಹ ಅರ್ಥಹೀನ ಕೃತಿಗಳನ್ನು ದೂರಮಾಡೋಣ ಮತ್ತು ನಾವು ವೆಲೆಂಟೈನ್ ಡೇ ನಿಲ್ಲಿಸಿ ರಾಷ್ಟ್ರಪುರುಷರ ದಿನವನ್ನು ಆಚರಿಸೋಣ.
ಲೇಖನ:  ಶ್ರೀ. ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ.

‘ವ್ಯಾಲೆಂಟೈನ್ ಡೇ’ ಗೆ ಹೂವು ಮತ್ತು ಉಡುಗೊರೆಗಳಿಗಿಂತ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟದಲ್ಲಿ ಹೆಚ್ಚಳ!
ಪಾಶ್ಚಾತ್ಯರ ಅಂಧಾನುಕರಣೆಯ ದುಷ್ಪರಿಣಾಮ!

ನವ ದೆಹಲಿ: ‘ವ್ಯಾಲೆಂಟೈನ್ ಡೇ’ ಯಂದು ಗುಲಾಬಿ ಹೂವು ಮತ್ತು ಉಡುಗೊರೆಗಳಿಗಿಂತ ನಿರೋಧ (ಕಾಂಡೋಮ್) ಮತ್ತು ಗರ್ಭನಿರೋಧಕ ಮಾತ್ರೆಗಳು ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿರುವುದು ವರದಿಯೊಂದರಿಂದ ಸ್ಪಷ್ಟವಾಗಿದೆ. ಒಂದು ಸ್ವಯಂಸೇವಾ ಸಂಸ್ಥೆ ಮಾಡಿದ ಸಮೀಕ್ಷೆಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ.

ಈ ಸಂಸ್ಥೆಯ ವರದಿಯಲ್ಲಿ ಹೇಳಿದ ಅಂಶವೆಂದರೆ,

೧. ಈ ವರ್ಷ ಅನೇಕ ಯುವಕ-ಯುವತಿಯರು ದುಬಾರಿ ಹೂವು ಮತ್ತು ಉಡುಗೊರೆಗಳನ್ನು ಖರೀದಿಸುವುದಕ್ಕಿಂತ ಸುರಕ್ಷಿತ ಶಾರೀರಿಕ ಸಂಬಂಧಕ್ಕಾಗಿ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಖರೀದಿಗೆ ಹೆಚ್ಚು ಖರ್ಚು ಮಾಡಿದರು.

೨. ಅನೇಕರು ಪ್ರೇಮ ವ್ಯಕ್ತಪಡಿಸಲು ಶಾರೀರಿಕ ಸಂಬಂಧಗಳಿಗೆ ಆದ್ಯತೆ ನೀಡಿದರು.

೩. ‘ಫೆಬ್ರವರಿ ೧೦ ರಿಂದಲೇ ನಿರೋಧ ಮತ್ತು ಗರ್ಭನಿರೋಧಕ ಮಾತ್ರೆಗಳ ಬೇಡಿಕೆ ೧೦ ಪಟ್ಟು ಹೆಚ್ಚಾಯಿತು’, ಎಂದು  ದೆಹಲಿಯ ಮಹರೌಲಿ ಮಾರ್ಕೇಟಿನ ಖನ್ನಾ ಮೆಡಿಕಲ್ಸ್‌ನ ಜಸವಿಂದರ್ ಹೇಳಿದ್ದಾರೆ.

೪. ಅದರ ಪರಿಣಾಮದಿಂದ ಅನೇಕ ಔಷಧಗಳ ಅಂಗಡಿಗಳಲ್ಲಿ ಈ ವಸ್ತುಗಳ ದಾಸ್ತಾನು ಮುಗಿದು ಹೋಗಿತ್ತು.

೫. ಕಳೆದ ವರ್ಷ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಸ್ನ್ಯಾಪ್‌ಡೀಲ್ ಡಾಟ್ ಕಾಮ್ ಭಾರತದಲ್ಲಿ ‘ವ್ಯಾಲೆಂಟೈನ್ ಡೇ’ಯ ಒಂದೇ ದಿನ ಒಂದುವರೆ ಲಕ್ಷ ನಿರೋಧ್ ಮಾರಾಟ ಮಾಡಿತ್ತು.

೬. ನಿರೋಧ್ ತಯಾರಿಸುವ ಕಂಪನಿಗಳ ವರದಿಗಳಿಗನುಸಾರ ‘ವ್ಯಾಲೆಂಟೈನ್ ಡೇ’ ಅವಧಿಯಲ್ಲಿ ನಿರೋಧದ ಮಾರಾಟ ೨೫ ಪಟ್ಟು ಹೆಚ್ಚಾಗುತ್ತದೆ.

೭. ೧೫ ವರ್ಷಗಳ ಹಿಂದೆ ‘ವ್ಯಾಲೆಂಟೈನ್ ಡೇ’ ಭಾರತದಲ್ಲಿ ಆಚರಿಸಲು ಆರಂಭವಾಯಿತು, ಆಗ ಗುಲಾಬಿ ಹೂವುಗಳ ಮಾರಾಟ ೫ ಪಟ್ಟು ಹೆಚ್ಚಾಗಿತ್ತು. ಸದ್ಯ ಈ ದಿನಗಳಿಗೆ ಭೀಭತ್ಸ ಸ್ವರೂಪ ಬಂದಿರುವುದು ಮೇಲಿನ ಅಂಕಿಅಂಶದಿಂದ ತಿಳಿಯುವುದು.

(ಇದರಿಂದ ಇಂದು ಕೂಡ ಭಾರತದ ಯುವಪೀಳಿಗೆ ಪಾಶ್ಚಾತ್ಯರ ಅಂಧಾನುಕರಣೆಯಿಂದ ತಮ್ಮ ಕಾಲುಗಳಿಗೇ ಕೊಡಲಿಯೇಟು ಹಾಕಿಕೊಳ್ಳುತ್ತಿವೆ. ಇಂದಿನ ರಾಜಕಾರಣಿಗಳು ನಿರ್ಮಿಸಿದ ಸಮಸ್ಯೆಗಳನ್ನು ದುರ್ಲಕ್ಷಿಸಲು ಅವರು ಇಂತಹ ದಿನಗಳಿಗೆ ಪ್ರೋತ್ಸಾಹ ನೀಡಿರುವುದರಿಂದ ಒಂದು ಪೀಳಿಗೆಯು ವಿನಾಶದ ಅಂಚಿನಲ್ಲಿರುವುದು ಕಾಣಿಸುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲಿಕ್ಕಾಗಿಯೇ ಹಿಂದೂ ರಾಷ್ಟ್ರ ಬೇಕು! - ಸಂಪಾದಕರು)

ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಸ್ವೇಚ್ಛಾಚಾರದ ಸಮರ್ಥನೆ ಮಾಡುವ ಇಂತಹ ಸಾಮಾಜಿಕ ಅಧಃಪತನದ ವಿಷಯದ ಹೊಣೆಯನ್ನು ಸ್ವೀಕರಿಸಿ ಯಾವ ಪ್ರಾಯಶ್ಚಿತ್ತ ತೆಗೆದುಕೊಳ್ಳುವರು?

ಆಧಾರ : ವಾರಪತ್ರಿಕೆ ‘ಸನಾತನ ಪ್ರಭಾತ’

9 comments:

Note: only a member of this blog may post a comment.