ಆಧ್ಯಾತ್ಮಿಕ ಸಂಜ್ಞೆಗಳು

ವಿಷಯಗಳಲ್ಲಿ ಉಪಯೋಗಿಸಲಾಗುವ ಕೆಲವು ಶಬ್ದಗಳ ಭಾವಾರ್ಥ

ಬ್ರಹ್ಮಾಂಡಲ್ಲಿನ (ಸೃಷ್ಟಿಯಲ್ಲಿನ) ಪ್ರತಿಯೊಂದು ವಸ್ತು ಸತತವಾಗಿ ಏನಾದರೊಂದು ಸ್ಪಂದನಗಳನ್ನು ಹೊರಹೊಮ್ಮಿಸುತ್ತಿರುತ್ತದೆ. ಆ ಸ್ಪಂದನಗಳು ಒಳ್ಳೆಯದಾಗಿರಬಹುದು ಅಥವಾ ತ್ರಾಸದಾಯಕ (ಕೆಟ್ಟ) ವಾಗಿರಬಹುದು. ಇಂತಹ ಸ್ಪಂದನಗಳನ್ನು ಅವುಗಳ ಕಾರ್ಯಕ್ಕನುಸಾರ ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಅಂತಹ ವರ್ಗೀಕರಣ ಮಾಡಲಾದ ಸ್ಪಂದನಗಳನ್ನು ಶಕ್ತಿ, ಚೈತನ್ಯ, ಮಾರಕ, ತಾರಕ ಶಕ್ತಿ, ಕೆಟ್ಟ ಶಕ್ತಿ, ಲಹರಿಗಳು, ಪವಿತ್ರಕಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.
ಈ ಕೆಳಗಿನ ಶಬ್ದಗಳ ಭಾವಾರ್ಥಗಳನ್ನು ಅರಿತುಕೊಳ್ಳುವುದರಿಂದ ಸನಾತನ ಸಂಸ್ಥೆಯ ಗ್ರಂಥಗಳಲ್ಲಿ ಅಥವಾ ಈ ಬ್ಲಾಗ್‌ನಲ್ಲಿ ಕೊಟ್ಟಿರುವ ವಿಷಯಗಳನ್ನು ತಿಳಿದುಕೊಳ್ಳಲು ವಾಚಕರಿಗೆ / ಸಾಧಕರಿಗೆ ಸುಲಭವಾಗುವುದು.

ಸತ್ತ್ವ, ರಜ ಮತ್ತು ತಮ ಗುಣಗಳು ಎಂದರೇನು? - ಕ್ಲಿಕ್ ಮಾಡಿ

ಲಹರಿ - ದೇವತೆಗಳ ತತ್ತ್ವಗಳ ಸೂಕ್ಷ್ಮತರ ಸ್ಪಂದನಗಳ ಸಮೂಹಕ್ಕೆ ‘ಲಹರಿ’ ಎನ್ನುತ್ತಾರೆ

ಪವಿತ್ರಕ - ಸಗುಣದ ಪ್ರಮಾಣ ಹೆಚ್ಚಿರುವ ಲಹರಿಗಳನ್ನು ‘ಪವಿತ್ರಕಗಳು’ ಎನ್ನುತ್ತಾರೆ. ಪವಿತ್ರಕಗಳು ಲಹರಿಗಳಿಗಿಂತ ಸ್ಥೂಲವಾಗಿರುತ್ತವೆ.

ಶಕ್ತಿ
೧. ಅಪ್ರಕಟ ಶಕ್ತಿ - ಸಂತರ ಮತ್ತು ದೇವತೆಗಳ ಅಕಾರ್ಯನಿರತ ಶಕ್ತಿ
೨. ಪ್ರಕಟ ಶಕ್ತಿ - ಕಾರ್ಯನಿರತ ಶಕ್ತಿ
೩. ತಾರಕ ಶಕ್ತಿ - ಸಾಧನೆಯಲ್ಲಿ ಸಹಾಯ ಮಾಡುವ ಮತ್ತು ಸಂಕಟಗಳಿಂದ ಕಾಪಾಡುವ ಶಕ್ತಿ
೪. ಮಾರಕ ಶಕ್ತಿ - ತೊಂದರೆಗಳನ್ನು ದೂರಗೊಳಿಸುವ ಶಕ್ತಿ
೫. ಪ್ರಾಣಶಕ್ತಿ - ದೇಹಕ್ಕೆ ಚೇತನವನ್ನು ಕೊಡುವ ಶಕ್ತಿ
೬. ವಿಘಟನ ಶಕ್ತಿ - ಕೆಟ್ಟ ಶಕ್ತಿ / ರಜ-ತಮಗಳನ್ನು ವಿಘಟಿಸುವ ಶಕ್ತಿ

ತತ್ತ್ವ
೧. ಗುರುತತ್ತ್ವ - ಸಾಧಕರಿಗೆ ಮಾರ್ಗದರ್ಶನ ಮಾಡುವ ಈಶ್ವರೀ ಶಕ್ತಿ
೨. ದೇವತಾತತ್ತ್ವ (ಉದಾ. ಗಣೇಶ ತತ್ತ್ವ) - ದೇವತೆಯ ತತ್ತ್ವ

ಕೆಟ್ಟ ಶಕ್ತಿ
೧. ತ್ರಾಸದಾಯಕ ಶಕ್ತಿ - ತೊಂದರೆಗಳನ್ನು ಅನುಭವಿಸಬಹುದಾದಂತಹ ಶಕ್ತಿ
೨. ಕಪ್ಪು ಶಕ್ತಿ - ಕೆಟ್ಟ ಶಕ್ತಿಗಳಿಂದ ಬರುವ ಶಕ್ತಿ
೩. ಆಕರ್ಷಣ ಶಕ್ತಿ - ವಾತಾವರಣದಲ್ಲಿನ ಕೆಟ್ಟ ಶಕ್ತಿ ಅಥವಾ ಒಳ್ಳೆಯ ಶಕ್ತಿಯನ್ನು ಆಕರ್ಷಿಸುವ ಶಕ್ತಿ
೪. ಮಾಯಾವೀ ಶಕ್ತಿ - ಮೋಸಗೊಳಿಸುವ ಶಕ್ತಿ
೫. ಮೋಹಿನೀ ಶಕ್ತಿ - ಇತರರನ್ನು ಆಕರ್ಷಿಸುವ ಕೆಟ್ಟ ಶಕ್ತಿ

ತಿರ್ಯಕ ಲಹರಿಗಳು - ತೊಂದರೆದಾಯಕ ರಜ-ತಮ ಲಹರಿಗಳು

ಪ್ರಕಟೀಕರಣ - ಪ್ರತ್ಯಕ್ಷ ಮುದ್ರೆಗಳ ಸಹಾಯದಿಂದ, ಮಾತನಾಡುವುದರಿಂದ ಅಥವಾ ಮುಖದ ಅನೈಸರ್ಗಿಕ ಹಾವಭಾವಗಳ ಸಹಾಯದಿಂದ ದೇಹದ ಮಾಧ್ಯಮದಿಂದ ಪ್ರತ್ಯಕ್ಷ ಪ್ರಕಟ ಚಲನವಲನದಿಂದ ಕಪ್ಪು ಶಕ್ತಿಯನ್ನು ಪ್ರಕ್ಷೇಪಿಸುವುದೆಂದರೆ ಕೆಟ್ಟ ಶಕ್ತಿ ಅಥವಾ ಮಾಂತ್ರಿಕರ ಸ್ಥೂಲದಲ್ಲಿನ ಪ್ರಕಟೀಕರಣ.

ವಶೀಕರಣ - ‘ಮಂತ್ರ, ಯಂತ್ರ, ಭಸ್ಮ ಮತ್ತು ವಿವಿಧ ತರಹದ ಔಷಧದ್ರವ್ಯಗಳ ಸಹಾಯದಿಂದ ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ವಶೀಕರಣ ಅಥವಾ ಮೋಹಿತಗೊಳಿಸಬಹುದು ಹಾಗೂ ಆ ವ್ಯಕ್ತಿಯ ಮೇಲೆ ಬೇಕಾದಂತೆ ಪ್ರಭಾವ ಬೀರಬಹುದು’, ಇಂತಹ ತಾಂತ್ರಿಕ ವಿದ್ಯೆಗೆ ‘ವಶೀಕರಣ’ವೆನ್ನುತ್ತಾರೆ. ಅಲ್ಲದೇ ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಮಾಡಿದ ಮಾಟ, ಮಂತ್ರ-ತಂತ್ರ ಇತ್ಯಾದಿ ದುಷ್ಕೃತ್ಯಗಳಿಗೆ ಕರಣಿ ಎನ್ನುತ್ತಾರೆ.

ಕಪ್ಪು ಶಕ್ತಿಯ ಆವರಣ - ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯನ್ನು ಪ್ರಕ್ಷೇಪಿಸುವುದರಿಂದ ವ್ಯಕ್ತಿಯ ಮನಸ್ಸು ಮತ್ತು ಬುದ್ಧಿಯ ಮೇಲೆ ತ್ರಾಸದಾಯಕ ಸ್ಪಂದನಗಳ ಸೂಕ್ಷ್ಮ ಹೊದಿಕೆಯು ನಿರ್ಮಾಣವಾಗುತ್ತದೆ. ಅದಕ್ಕೆ ‘ಕಪ್ಪು ಶಕ್ತಿಯ ಆವರಣ’ ಎನ್ನುತ್ತಾರೆ.

ಆಧ್ಯಾತ್ಮಿಕ ಉಪಾಯ: ಸಂತರು ವಾಸಿಸಿದ ವಾಸ್ತುಗಳಲ್ಲಿ, ಉಪಯೋಗಿಸಿದ ವಸ್ತುಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ ಚೈತನ್ಯವಿರುತ್ತದೆ. ಅಲ್ಲಿ ಹೋದಾಗ ನಮ್ಮ ಮೇಲೆ ಆ ಚೈತನ್ಯದ ಪರಿಣಾಮವಾಗುತ್ತದೆ. ಚೈತನ್ಯದಿಂದ ಸಾಧಕರಿಗೆ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ. ಚೈತನ್ಯದಿಂದ ಕೆಟ್ಟ ಶಕ್ತಿಗಳ ತೊಂದರೆಯಿರುವ ಅಥವಾ ತೊಂದರೆಯಾಗಿರುವ ಸಾಧಕರ ತೊಂದರೆಗಳು ಕಡಿಮೆಯಾಗುತ್ತವೆ. ಕೆಲವೊಮ್ಮೆ ಅವರ ಶರೀರದಲ್ಲಿನ ಕಪ್ಪು ಶಕ್ತಿಯು ಆಕಳಿಕೆ ಮತ್ತು ತೇಗುಗಳ ಮೂಲಕ ಹೊರಬೀಳುತ್ತದೆ. ಇದಕ್ಕೆ ಆ ಸಾಧಕರ ಮೇಲೆ ‘ಆಧ್ಯಾತ್ಮಿಕ ಉಪಾಯವಾಗುವುದು’ ಎಂದು ಹೇಳುತ್ತಾರೆ. ಸಾಧಕರು ಮಾಡಿದ ಭಾವಪೂರ್ಣ ನಾಮಜಪ, ಪ್ರಾರ್ಥನೆ ಮತ್ತು ಸೇವೆ, ಅದೇ ರೀತಿ ಸಾತ್ತ್ವಿಕ ಊದುಬತ್ತಿ, ಕರ್ಪೂರ, ಸುಗಂಧದ್ರವ್ಯ (ಅತ್ತರು)ಗಳ ಪರಿಮಳ ಇತ್ಯಾದಿಗಳಿಂದಲೂ ಉಪಾಯವಾಗುತ್ತದೆ.

ಆಧ್ಯಾತ್ಮಿಕ ಮಟ್ಟ: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿರುತ್ತವೆ. ವ್ಯಕ್ತಿಯು ಸಾಧನೆಯನ್ನು, ಅಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನವನ್ನು ಮಾಡಿದಾಗ ಅವನಲ್ಲಿರುವ ರಜ-ತಮ ಗುಣಗಳ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಸತ್ತ್ವಗುಣದ ಪ್ರಮಾಣವು ವೃದ್ಧಿಯಾಗುತ್ತದೆ. ಸತ್ತ್ವಗುಣದ ಪ್ರಮಾಣದ ಮೇಲೆ ಆಧ್ಯಾತ್ಮಿಕ ಮಟ್ಟವು ಅವಲಂಬಿಸಿರುತ್ತದೆ. ಸತ್ತ್ವಗುಣದ ಪ್ರಮಾಣವು ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಆಧ್ಯಾತ್ಮಿಕ ಮಟ್ಟವು ಹೆಚ್ಚಿರುತ್ತದೆ. ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. 20 ರಷ್ಟಿರುತ್ತದೆ ಮತ್ತು ಮೋಕ್ಷಕ್ಕೆ ಹೋದ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. 100 ರಷ್ಟಿರುತ್ತದೆ ಮತ್ತು ಆಗ ಅವನು ತ್ರಿಗುಣಾತೀತನಾಗುತ್ತಾನೆ. ಸಾಧನೆ ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವ್ಯಕ್ತಿಗೆ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ. ಶೇ.೬೦ ಮತ್ತು ಅದರ ಮುಂದಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ವ್ಯಕ್ತಿಗೆ ಮೃತ್ಯುವಿನ ನಂತರ ಪುನರ್ಜನ್ಮವಿರುವುದಿಲ್ಲ. ಇಂತಹ ವ್ಯಕ್ತಿಯು ಮುಂದಿನ ಸಾಧನೆಗಾಗಿ ಅಥವಾ ಮಾನವಜಾತಿಯ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯಲ್ಲಿ ಜನಿಸಬಲ್ಲನು. ಶೇ.೭೦ರ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳನ್ನು ಸಂತರೆಂದು ಪರಿಗಣಿಸಲಾಗುತ್ತದೆ. ಅವರಿಗೆ ಜನಲೋಕ ಪ್ರಾಪ್ತವಾಗುತ್ತದೆ. ಆಂಗ್ಲದಲ್ಲಿ ಇದರ ಬಗ್ಗೆ ವಿವರವಾಗಿ ಇಲ್ಲಿ ತಿಳಿದುಕೊಳ್ಳಿ.

No comments:

Post a Comment

Note: only a member of this blog may post a comment.