Showing posts with label ಆಧ್ಯಾತ್ಮಿಕ ಸಂಶೋಧನೆ. Show all posts
Showing posts with label ಆಧ್ಯಾತ್ಮಿಕ ಸಂಶೋಧನೆ. Show all posts

ಪೂರ್ವ ಅಥವಾ ಉತ್ತರ ದಿಕ್ಕಿಗೆ ತಲೆ ಹಾಕಿ ಏಕೆ ಮಲಗಬೇಕು ?

ಶಾಂತ ನಿದ್ರೆ ಮತ್ತು ಆರೋಗ್ಯಕ್ಕಾಗಿ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದರ ಮಹತ್ವ

(ಅಧ್ಯಾತ್ಮ ಶಾಸ್ತ್ರದ ವಿಶ್ಲೇಷಣೆ)

ನಮ್ಮ ಹಿರಿಯರು ಯಾವಾಗಲೂ "ಪೂರ್ವಕ್ಕೆ ತಲೆ ಮಾಡಿ ಮಲಗು" ಅಥವಾ "ಉತ್ತರ ದಿಕ್ಕಿಗೆ" ತಲೆ ಮಾಡಿ ಮಲಗಬಾರದು" ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಇದು ಕೇವಲ ಒಂದು ಸಂಪ್ರದಾಯವಲ್ಲ, ಬದಲಾಗಿ ಇದರ ಹಿಂದೆ ಮಾನವನ ಸೂಕ್ಷ್ಮದೇಹ ಮತ್ತು ಬ್ರಹ್ಮಾಂಡದ ಶಕ್ತಿಗಳ ನಡುವಿನ ಆಳವಾದ ವಿಜ್ಞಾನ ಅಡಗಿದೆ. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದರಿಂದ ಆಗುವ ಲಾಭಗಳೇನು? ಇದರ ಹಿಂದಿನ ಶಾಸ್ತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

೧. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗುವುದು ಎಂದರೇನು?

ಮಲಗುವಾಗ ನಮ್ಮ ತಲೆಯು ಪೂರ್ವ ದಿಕ್ಕಿಗೆ ಮತ್ತು ಕಾಲುಗಳು ಪಶ್ಚಿಮ ದಿಕ್ಕಿಗೆ ಇರುವಂತೆ ಮಲಗುವುದೇ ಅತ್ಯಂತ ಯೋಗ್ಯವಾದ ಪದ್ಧತಿಯಾಗಿದೆ.

೨. ಪೂರ್ವ ದಿಕ್ಕಿಗೆ ತಲೆ ಮಾಡುವುದರಿಂದ ಆಗುವ ಲಾಭಗಳು

ಅ. ಸಪ್ತಚಕ್ರಗಳ ಯೋಗ್ಯ ಪರಿಭ್ರಮಣೆ: ಪೂರ್ವ ದಿಕ್ಕಿನಿಂದ ಸದಾ ಆಹ್ಲಾದದಾಯಕವಾದ 'ಸಪ್ತತರಂಗ'ಗಳು ಬರುತ್ತಿರುತ್ತವೆ. ನಾವು ಪೂರ್ವಕ್ಕೆ ತಲೆ ಮಾಡಿ ಮಲಗಿದಾಗ, ಈ ತರಂಗಗಳು ನಮ್ಮ ಶರೀರದಲ್ಲಿರುವ ಸಪ್ತಚಕ್ರಗಳ (ಮೂಲಾಧಾರ, ಮಣಿಪುರ ಮುಂತಾದ ಏಳು ಚಕ್ರಗಳು) ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಚಕ್ರಗಳು ವಿರುದ್ಧ ದಿಕ್ಕಿನಲ್ಲಿ ತಿರುಗದೆ, ಯೋಗ್ಯ ದಿಕ್ಕಿನಲ್ಲಿ ತಿರುಗಲು ಸಹಾಯವಾಗುತ್ತದೆ. ತಲೆಯನ್ನು ಪೂರ್ವಕ್ಕೆ ಮಾಡುವುದರಿಂದ ಶೇ. ೧೦ ರಷ್ಟು ಹೆಚ್ಚು ಪ್ರಮಾಣದಲ್ಲಿ ಈ ಸಕಾರಾತ್ಮಕ ಶಕ್ತಿಯನ್ನು ನಮ್ಮ ಚಕ್ರಗಳು ಗ್ರಹಿಸುತ್ತವೆ.

ಆ. 'ಬೆಳ್ಳಿ ಬಣ್ಣದ ದಾರ' (Silver Cord) ಮತ್ತು ಶಾಂತ ನಿದ್ರೆ: ಜೀವದ ಸ್ಥೂಲದೇಹ ಮತ್ತು ಸೂಕ್ಷ್ಮದೇಹವನ್ನು ಜೋಡಿಸಲು ಒಂದು 'ಬೆಳ್ಳಿ ಬಣ್ಣದ ದಾರ'ವಿರುತ್ತದೆ. ನಾವು ನಿದ್ರಿಸಿದಾಗ ನಮ್ಮ ಸೂಕ್ಷ್ಮದೇಹವು ಸ್ಥೂಲದೇಹದಿಂದ ಹೊರಬಂದು ಸಂಚರಿಸಿದರೂ, ಈ ದಾರದ ಮೂಲಕ ಸಂಪರ್ಕದಲ್ಲಿರುತ್ತದೆ. ಪೂರ್ವಕ್ಕೆ ತಲೆ ಮಾಡಿ ಮಲಗಿದಾಗ ನಿರ್ಮಾಣವಾಗುವ ಸಾತ್ವಿಕ ವಾತಾವರಣದಿಂದಾಗಿ, ನಿದ್ರೆಯಲ್ಲಿ ಈ ಬೆಳ್ಳಿ ದಾರದ ಮೂಲಕ ಆಗುವ ಮನಸ್ಸಿನ ಪ್ರವಾಸಕ್ಕೆ ಯಾವುದೇ ಅಡಚಣೆ ಬರುವುದಿಲ್ಲ. ಪರಿಣಾಮವಾಗಿ ಮನುಷ್ಯನಿಗೆ ಗಾಢ ಮತ್ತು ಶಾಂತ ನಿದ್ರೆ ಪ್ರಾಪ್ತವಾಗುತ್ತದೆ.

೩. ದೇಹಶುದ್ಧಿ ಪ್ರಕ್ರಿಯೆ ಮತ್ತು ಪಶ್ಚಿಮ ದಿಕ್ಕು

ದಿನವಿಡೀ ನಾವು ಕೆಲಸ ಮಾಡುವಾಗ ನಮ್ಮ ದೇಹದಲ್ಲಿ 'ರಜ-ತಮ' ಕಣಗಳು (ನಕಾರಾತ್ಮಕ ಶಕ್ತಿ) ಉತ್ಪತ್ತಿಯಾಗುತ್ತವೆ. ಇವು ದೇಹದಿಂದ ಹೊರಹೋಗುವುದು ಅವಶ್ಯಕ.


  • ನಮ್ಮ ಕಾಲಿನ ಬೆರಳುಗಳಲ್ಲಿ 'ದೇಹಶುದ್ಧಿ ಚಕ್ರ'ಗಳಿರುತ್ತವೆ. ರಾತ್ರಿಯ ಸಮಯದಲ್ಲಿ ಇವು ತೆರೆದುಕೊಳ್ಳುತ್ತವೆ.
  • ಪಶ್ಚಿಮ ದಿಕ್ಕು 'ಅಸ್ತ'ವಾಗುವ (ಮುಳುಗುವ) ದಿಕ್ಕಾಗಿದೆ.
  • ನಾವು ಪಶ್ಚಿಮಕ್ಕೆ ಕಾಲು ಚಾಚಿ ಮಲಗಿದಾಗ, ದೇಹದ ರಜ-ತಮ ಕಣಗಳು ಕಾಲಿನ ಬೆರಳುಗಳ ಮೂಲಕ ಹೊರಬಂದು, ಪಶ್ಚಿಮ ದಿಕ್ಕಿನ ಕಡೆಗೆ ಹರಿದು ಹೋಗಿ ಅಸ್ತವಾಗುತ್ತವೆ (ನಾಶವಾಗುತ್ತವೆ).

೪. ಮುಂಜಾನೆಯ ಚೈತನ್ಯ

ಮುಂಜಾನೆ ಪೂರ್ವ ದಿಕ್ಕಿನಿಂದ ಸಾತ್ತ್ವಿಕ ಲಹರಿಗಳು (Sattva Waves) ಪ್ರಕ್ಷೇಪಿತವಾಗುತ್ತವೆ. ನಾವು ಪೂರ್ವಕ್ಕೆ ತಲೆ ಮಾಡಿ ಮಲಗಿದ್ದಾಗ, ಬ್ರಹ್ಮರಂಧ್ರದ ಮೂಲಕ ಈ ಸಾತ್ವಿಕ ಶಕ್ತಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ದಿನದ ಆರಂಭವು ಅತ್ಯಂತ ಉತ್ಸಾಹ ಮತ್ತು ಸಾತ್ವಿಕತೆಯಿಂದ ಕೂಡ್ರುತ್ತದೆ.

 

ವಿಷ್ಣು ಪುರಾಣ, ವಾಮನ ಪುರಾಣ, ಪದ್ಮಪುರಾಣ ಮುಂತಾದ ಪುರಾಣಗಳಲ್ಲಿ ಮತ್ತು ಮಹಾಭಾರತದಂತಹ ಧರ್ಮಗ್ರಂಥಗಳಲ್ಲಿಯೂ ಮನುಷ್ಯನು ಯಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಬೇಕು ? ಅದರಿಂದಾಗುವ ಲಾಭ ಅಥವಾ ಹಾನಿ ಏನು ಎಂಬುದನ್ನೂ ವಿವರಿಸಿದ್ದಾರೆ. ಇವುಗಳಲ್ಲಿ ಓದುಗರಿಗೆ ಇಲ್ಲಿ ಕೇವಲ ವಿಷ್ಣು ಪುರಾಣ ಶ್ಲೋಕದ ವಿವರಣೆ ನೀಡಲಾಗಿದೆ. ಇದು ನಮ್ಮ ಆರೋಗ್ಯ ಮತ್ತು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಅತ್ಯಂತ ಉಪಯುಕ್ತವಾದ ಶ್ಲೋಕವಾಗಿದೆ. ನಾವು ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬುದನ್ನು ಇದು ತಿಳಿಸುತ್ತದೆ.

ಶ್ಲೋಕ ಮತ್ತು ಆಕರ

ಪ್ರಾಚ್ಯಾಂ ದಿಶಿ ಶಿರಃ ಶಸ್ತಂ ಯಾಮ್ಯಾಯಾಮಥ ವಾ ನೃಪ |
ಸದೈವ ಸ್ವಪತಃ ಪುಂಸೋ ವಿಪರೀತಂ ತು ರೋಗದಮ್ ||
– ವಿಷ್ಣುಪುರಾಣ, ತೃತೀಯ ಅಂಶ, ಅಧ್ಯಾಯ ೧೧, ಶ್ಲೋಕ ೧೧೩

 ಶ್ಲೋಕದ ಅರ್ಥ

ಮನುಷ್ಯನು ಮಲಗುವಾಗ ಯಾವಾಗಲೂ ತನ್ನ ತಲೆಯನ್ನು ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ಇಟ್ಟು ಮಲಗುವುದು ಶ್ರೇಷ್ಠ. ಇದಕ್ಕೆ ವಿರುದ್ಧವಾಗಿ (ಅಂದರೆ ಪಶ್ಚಿಮಕ್ಕೆ ಅಥವಾ ಉತ್ತರಕ್ಕೆ) ತಲೆ ಇಟ್ಟು ಮಲಗಿದರೆ ಅದು ರೋಗವನ್ನು ತರುತ್ತದೆ.

ಶ್ಲೋಕದ ಪೂರ್ಣ ಕನ್ನಡ ಅರ್ಥ ಮತ್ತು ಸಂದೇಶ

ನಮ್ಮ ಹಿರಿಯರು "ಉತ್ತರಕ್ಕೆ ತಲೆ ಹಾಕಿ ಮಲಗಬೇಡ" ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಅದಕ್ಕೆ ಆಧಾರ ಇಲ್ಲಿದೆ.

 

  1. ಪೂರ್ವ ದಿಕ್ಕು (East): ಪೂರ್ವವು ಸೂರ್ಯ ಹುಟ್ಟುವ ದಿಕ್ಕು ಮತ್ತು ದೇವತೆಗಳ ದಿಕ್ಕು. ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ವಿದ್ಯೆ, ಬುದ್ಧಿಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ನಂಬಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಅತ್ಯಂತ ಒಳ್ಳೆಯದು.
  1. ದಕ್ಷಿಣ ದಿಕ್ಕು (South): ಇದು ಯಮನ ದಿಕ್ಕು ಎಂದು ಕರೆಯಲ್ಪಟ್ಟರೂ, ಮಲಗಲು ಇದು ಅತ್ಯಂತ ಶ್ರೇಷ್ಠ. ದಕ್ಷಿಣಕ್ಕೆ ತಲೆ ಹಾಕಿ ಮಲಗುವುದರಿಂದ ಗಾಢವಾದ ನಿದ್ರೆ ಬರುತ್ತದೆ, ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಆರೋಗ್ಯ ಚೆನ್ನಾಗಿರುತ್ತದೆ. ಭೂಮಿಯ ಆಯಸ್ಕಾಂತೀಯ ಕ್ಷೇತ್ರಕ್ಕೆ (Magnetic Field) ಇದು ಹೊಂದಿಕೆಯಾಗುತ್ತದೆ.
  1. ವಿಪರೀತಂ ತು ರೋಗದಮ್ (ಉತ್ತರ/ಪಶ್ಚಿಮ ಬೇಡ):
    • ಉತ್ತರ (North): ಮನುಷ್ಯನ ದೇಹಕ್ಕೂ ಕಾಂತೀಯ ಶಕ್ತಿ ಇದೆ (ತಲೆ ಉತ್ತರ ಧ್ರುವವಿದ್ದಂತೆ). ಭೂಮಿಯ ಉತ್ತರ ಧ್ರುವ ಮತ್ತು ನಮ್ಮ ತಲೆ (ಉತ್ತರ) ಒಂದೇ ಕಡೆ ಬಂದರೆ, ವಿಕರ್ಷಣೆ (Repulsion) ಉಂಟಾಗಿ ರಕ್ತ ಸಂಚಾರದಲ್ಲಿ ಏರುಪೇರಾಗುತ್ತದೆ. ಇದರಿಂದ ಮೆದುಳಿಗೆ ತೊಂದರೆ, ಕೆಟ್ಟ ಕನಸುಗಳು ಅಥವಾ ನಿದ್ರಾಹೀನತೆ ಉಂಟಾಗಬಹುದು. ಅದಕ್ಕೇ ಶಾಸ್ತ್ರವು ಉತ್ತರ ದಿಕ್ಕನ್ನು ನಿಷೇಧಿಸಿದೆ.
    • ಪಶ್ಚಿಮ (West): ಪಶ್ಚಿಮಕ್ಕೆ ತಲೆ ಹಾಕಿದರೆ ಚಿಂತೆಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತದೆ.


ಪ್ರಮುಖ ತಾತ್ಪರ್ಯ

ಈ ಶ್ಲೋಕವು 'ದಿನಚರಿ' ಮತ್ತು 'ಸ್ವಾಸ್ಥ್ಯ ರಕ್ಷಣೆ'ಯನ್ನು ಬೋಧಿಸುತ್ತದೆ:


  • ಆರೋಗ್ಯ ಸೂತ್ರ: ಕೇವಲ ಔಷಧಿಯಿಂದ ಮಾತ್ರವಲ್ಲ, ಮಲಗುವ ಭಂಗಿಯಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು.
  • ವೈಜ್ಞಾನಿಕ ಹಿನ್ನೆಲೆ: ಭೂಮಿಯ ಗುರುತ್ವಾಕರ್ಷಣೆ ಮತ್ತು ಕಾಂತೀಯ ಶಕ್ತಿಗೆ ಅನುಗುಣವಾಗಿ ನಮ್ಮ ದೇಹವನ್ನು ಇಟ್ಟುಕೊಳ್ಳುವುದು ಮುಖ್ಯ.
  • ಸರಳ ನಿಯಮ: ಪೂರ್ವಕ್ಕೆ ತಲೆ - ವಿದ್ಯೆ; ದಕ್ಷಿಣಕ್ಕೆ ತಲೆ - ಸಂಪತ್ತು/ಆರೋಗ್ಯ.

ಅಧ್ಯಾತ್ಮದ ಬಗ್ಗೆ ವೈಜ್ಞಾನಿಕ ಸಂಶೋಧನೆ!


ಸಮಾರಂಭವೊಂದರಲ್ಲಿ ಡಾ.ಗೋಪಾಲಕೃಷ್ಣನ್ (ಇಂಡಿಯನ್ ಕೌನ್ಸಿಲ್ ಆಫ್ ಸೈನ್ಸ್ ರಿಸರ್ಚ್), ಐ.ಎಸ್.ಆರ್.ಒ. ಭಾಗ್ಯನಗರ (ಹೈದರಾಬಾದ) ಈ ಸಂಸ್ಥೆಯ ಡಾ. ಶಶಿಕುಮಾರ ಮತ್ತು ಅನುಜನ ಭಟ್ಟಾಥಿರೀಪಾದ ಇವರು ಈ ಮುಂದಿನ ನಿಷ್ಕರ್ಷವನ್ನು ಸ್ಪಷ್ಟಪಡಿಸಿದರು.

೧. ಒಳ್ಳೆಯ ಶಕ್ತಿಯನ್ನು ಅಳೆಯುವ ಉಪಕರಣವನ್ನು ಮೊತ್ತಮೊದಲು ರಷ್ಯಾದವರು ಕಂಡುಹಿಡಿದರು !

ಭೂಮಿಯ ಅಡಿಯಲ್ಲಿರುವ ಜಲವಾಹಿನಿಯ ನಕಾಶೆ ಕಳೆದು ಹೋಗಿರುವುದರಿಂದ ಅವರು ‘ಎಲ್’ ಈ ಆಂಗ್ಲ ಅಕ್ಷರದ ಆಕಾರದ ೨ ಸರಳುಗಳಿರುವ ಯಂತ್ರವನ್ನು ಕಂಡುಹಿಡಿದರು. ಈ ಯಂತ್ರವನ್ನು ಒಳ್ಳೆಯ ಶಕ್ತಿಯಿರುವ ಸ್ಥಳಕ್ಕೆ ಒಯ್ದಾಗ ಆ ಸರಳುಗಳು ಪರಸ್ಪರ ದೂರವಾಗುತ್ತವೆ. ಹರಿಯುವ ನೀರಿನಲ್ಲಿ ಒಳ್ಳೆಯ ಶಕ್ತಿಯಿರುವುದರಿಂದ ರಷ್ಯಾದ ಜನರಿಗೆ ಈ ಯಂತ್ರದ ಮೂಲಕ ಭೂಮಿಯ ಕೆಳಗಿರುವ ಜಲವಾಹಿನಿಯನ್ನು ಕಂಡು ಹಿಡಿಯಲು ಸುಲಭವಾಯಿತು. ಆದ್ದರಿಂದ ಒಳ್ಳೆಯ ಶಕ್ತಿಯನ್ನು ಅಳೆಯಲು ಇದೊಂದು ಒಳ್ಳೆಯ ಉಪಕರಣವಾಗಿದೆಯೆಂದು ರಷ್ಯಾದ ಸರಕಾರ ಪ್ರಮಾಣಪತ್ರ ನೀಡಿದೆ.
ಆಧಾರ: www.greencrosssociety.com/positive_energy.htm

೨. ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು

ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.
ಆಧಾರ: www.greencrosssociety.com/positive_energy.htm

೩. ರಾತ್ರಿ ತಕ್ಷಣ ಹಾಸಿಗೆಯಲ್ಲಿ ಮಲಗುವುದಕ್ಕಿಂತ ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಪರಿಣಾಮಕಾರಿಯಾಗುವುದು

ಶೇ. ೨೩ ರಷ್ಟು ಜನರಿಗೆ ಮಲಗಿದಾಗ ಅಥವಾ ನಿದ್ರೆಯಲ್ಲಿರುವಾಗ ಹೃದಯಾಘಾತವಾಗುತ್ತದೆ, ಎಂಬುದು ಈಗ ಸಿದ್ಧವಾಗಿದೆ. ಇದರ ಕಾರಣವೆಂದರೆ, ದಿನವಿಡೀ ನಿಂತುಕೊಂಡಿರುವ ವ್ಯಕ್ತಿ ಮಲಗಿದಾಗ ಅವರ ಹೃದಯದ ಬಡಿತ ಅನಿಯಮಿತವಾಗುತ್ತದೆ. ಹೃದಯದ ಬಡಿತವನ್ನು ಸ್ಥಿರಗೊಳಿಸಲು ಹಾಸಿಗೆಯಲ್ಲಿ ಕುಳಿತು ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಶ್ರೇಯಸ್ಕರವೆಂದು ಸಿದ್ಧವಾಗಿದೆ. ಇದೇ ನಿಯಮವು ಹಾಸಿಗೆಯಿಂದ ಏಳುವಾಗಲೂ ಅನ್ವಯಿಸುತ್ತದೆ. (೧೦೮ ಸಲ ‘ನಾರಾಯಣಾಯ ನಮಃ’ ಎಂದು ಹೇಳಲು ೨ ನಿಮಿಷ ತಗಲುತ್ತದೆ) ಆದ್ದರಿಂದ ಮಲಗುವ ಮೊದಲು ಮತ್ತು ನಿದ್ರೆ ಯಿಂದ ಏಳುವಾಗ ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆ ಮಾಡಲು ಹೇಳಲಾಗುತ್ತದೆ.
(ಹಿಂದೂ ಧರ್ಮದಲ್ಲಿ ಬೆಳಗ್ಗೆ ಎದ್ದ ತಕ್ಷಣ ಪ್ರಾರ್ಥನೆ ಮತ್ತು ಶ್ಲೋಕ ಹೇಳುವುದು ಹಾಗೂ ರಾತ್ರಿ ಮಲಗುವಾಗ ದಿನವಿಡೀ ಆಗಿರುವ ತಪ್ಪುಗಳನ್ನು ದೇವರಿಗೆ ಆತ್ಮನಿವೇದನೆ ಮಾಡಿ ಆ ಬಗ್ಗೆ ಕ್ಷಮೆ ಯಾಚಿಸುವುದು ಹಾಗೂ ನಾಮಜಪವನ್ನು ಮಾಡುತ್ತಾ ಮಲಗುವುದು, ಇತ್ಯಾದಿ ಕೃತಿ ಮಾಡಲು ಹೇಳಲಾಗಿದೆ. ಇದರಿಂದ ಪ್ರತಿಯೊಂದು ಒಳ್ಳೆಯ ವಿಷಯದ ಮೂಲ ಹಿಂದೂ ಧರ್ಮದಲ್ಲಿಯೇ ಇದ್ದು ವಿಜ್ಞಾನಿಗಳು ಅಸ್ತಿತ್ವದಲ್ಲಿರುವುದನ್ನೇ ಸಂಶೋಧನೆ ಮಾಡಿ ಅದನ್ನು ‘ನಾವು ಕಂಡುಹಿಡಿದೆವು’ ಎಂದು ಜಗತ್ತಿಗೆ ಹೇಳುತ್ತಾರೆ, ಎಂಬುದು ಇದರಿಂದ ತಿಳಿಯುವುದು. - ಸಂಕಲನಕಾರರು)

ಆಧಾರ : ವಾರಪತ್ರಿಕೆ 'ಸನಾತನ ಪ್ರಭಾತ'

ಸತ್ತ್ವ, ರಜ ಮತ್ತು ತಮ ಎಂದರೇನು?



ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ.

ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು.

  • ‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತಿ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ - ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ. 
  • ‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ.
  • ‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ.

ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು
  • ನಾವು ಪ್ರಸಂಗಗಳನ್ನು ಎದುರಿಸುವ ಬಗೆ
  • ನಾವು ತೆಗೆದುಕೊಳ್ಳುವ ನಿರ್ಧಾರಗಳು
  • ನಮ್ಮ ಆಯ್ಕೆಗಳು
  • ನಮ್ಮ ಜೀವನ ಶೈಲಿ
ಮುಂತಾದವುಗಳನ್ನು ನಿರ್ಧರಿಸುತ್ತದೆ.

ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ.

ಆಂಗ್ಲಭಾಷೆಯಲ್ಲಿ ಇನ್ನೂ ವಿವರವಾಗಿ ಇಲ್ಲಿ ಓದಿ.

ಈ ಜಾಲತಾಣದಲ್ಲಿರುವ ಇನ್ನೂ ಹಲವಾರು ಆಧ್ಯಾತ್ಮಿಕ ಶಬ್ದಗಳ ಭಾವಾರ್ಥವನ್ನು ಇಲ್ಲಿ ಓದಿ.

‘ದೇಜಾ ವು’

‘ದೇಜಾ ವು’ (ಒಂದು ಅನುಭವದ ಭಾಸವಾಗುವುದು)

೧. ‘ದೇಜಾ ವು’ (déjà vu) ಅಂದರೇನು?
ನೀವು ಕೆಲವೊಮ್ಮೆ ಯಾವುದಾದರೂ ಸ್ಥಳಕ್ಕೆ ಜೀವನದಲ್ಲಿ ಮೊದಲನೇ ಬಾರಿ ಹೋಗಿರುತ್ತೀರಿ. ಆದರೂ ನಿಮಗೆ ‘ನಾನಿಲ್ಲಿಗೆ ಹಿಂದೊಮ್ಮೆ ಬಂದಿದ್ದೇನೆ’ ಎಂದೆನಿಸುತ್ತದೆ. ಈ ತರಹದ ಭಾವನೆಗೆ ‘ದೇಜಾ ವು’ ಎನ್ನುತ್ತಾರೆ (ಫ್ರೆಂಚ್ ಭಾಷೆಯಲ್ಲಿ ‘ಮೊದಲೇ ನೋಡಿದ’ ಎಂದರ್ಥ). ಅಂದರೆ ಒಬ್ಬ ವ್ಯಕ್ತಿಗೆ ಅತ್ಯಂತ ಹೊಸ ಪ್ರಸಂಗದಲ್ಲಿಯೂ ಈ ಪ್ರಸಂಗವನ್ನು ಮೊದಲೇ ವೀಕ್ಷಿಸಿದ್ದೇನೆ ಅಥವಾ ಅನುಭವಿಸಿದ್ದೇನೆ ಎಂದೆನಿಸುತ್ತದೆ.

ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು

ಆಧ್ಯಾತ್ಮಿಕ ಸಂಶೋಧನೆ
ಸನಾತನ ಸಂಸ್ಥೆಯು ಅನೇಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಿದೆ. (ಈ ಎಲ್ಲ ಸಂಶೋಧನೆಗಳನ್ನು ಆಂಗ್ಲ ಭಾಷೆಯಲ್ಲಿ http://spiritualresearchfoundation.org/ ಎಂಬ ಸಂಕೇತಸ್ಥಳದಲ್ಲಿ ಇಡಲಾಗಿದೆ.) ಅವುಗಳಲ್ಲಿ ಒಂದು ವಿಷಯವನ್ನು ನೋಡೋಣ. ಅದೇನೆಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು'.

ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳ ಅಸ್ತಿತ್ವ
ಕೆಟ್ಟ ಶಕ್ತಿಗಳು ಮುಖ್ಯವಾಗಿ ಭುವರ್ಲೋಕ ಮತ್ತು ಸಪ್ತಪಾತಾಳಗಳಲ್ಲಿ ಇರುತ್ತವೆ. ಅಲ್ಲಿಂದಲೇ ಅವು ಭೂಲೋಕಕ್ಕೆ ಬಂದು ಮನುಷ್ಯರಿಗೆ ತೊಂದರೆಗಳನ್ನು ಕೊಡುತ್ತವೆ.

ಪೃಥ್ವಿಯಲ್ಲಿ ಕೆಟ್ಟ ಶಕ್ತಿಗಳು ವಿವಿಧ ಕಡೆಗಳಲ್ಲಿ ಕಂಡು ಬರುತ್ತವೆ. ಅವು ನಿರ್ಜೀವ ಅಥವಾ ಸಜೀವ ವಸ್ತುಗಳಲ್ಲಿ ತಮಗಾಗಿ ಸ್ಥಾನಗಳನ್ನು ನಿರ್ಮಿಸುತ್ತವೆ ಮತ್ತು ಅಲ್ಲಿ ಕಪ್ಪುಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಈ ಸ್ಥಾನಗಳ ಮಾಧ್ಯಮದಿಂದಲೇ ಕೆಟ್ಟ ಶಕ್ತಿಗಳು ನಿರ್ಜೀವ ಅಥವಾ ಸಜೀವ ವಸ್ತುಗಳನ್ನು ಪ್ರವೇಶಿಸುತ್ತವೆ. ಈ ಸ್ಥಾನಗಳೆಂದರೆ ಕಪ್ಪುಶಕ್ತಿಯನ್ನು ಪಡೆಯುವ ಅಥವಾ ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳ ಕೇಂದ್ರಗಳಾಗಿರುತ್ತವೆ. ಕೆಟ್ಟ ಶಕ್ತಿಗಳು ಸಾಮಾನ್ಯವಾಗಿ ವ್ಯಕ್ತಿ, ಮರ, ಮನೆ, ಸ್ಮಶಾನ ಮುಂತಾದ ಕಡೆಗಳಲ್ಲಿ ತಮ್ಮ ಸ್ಥಾನಗಳನ್ನು ನಿರ್ಮಿಸುತ್ತವೆ. ಜನರಿಗೆ ತೊಂದರೆ ನೀಡುವುದು ಕೆಟ್ಟ ಶಕ್ತಿಗಳ ಮುಖ್ಯ ಉದ್ದೇಶವಾಗಿರುತ್ತದೆ. ಇದಲ್ಲದೇ ತಮ್ಮ ಅತೃಪ್ತ ಇಚ್ಛೆಗಳನ್ನು ಪೂರ್ಣಗೊಳಿಸಲು (ಉದಾ: ತಿನ್ನುವುದು, ಮದ್ಯಪಾನ, ಧೂಮ್ರಪಾನ, ಲೈಂಗಿಕ ವಾಸನೆ ಮುಂತಾದವುಗಳ ಪೂರ್ತಿಗಾಗಿ) ಅಥವಾ ಕೊಡು-ಕೊಳ್ಳುವ ಲೆಕ್ಕವನ್ನು ತೀರಿಸಲು ಅವು ವ್ಯಕ್ತಿಯ ಶರೀರದಲ್ಲಿ ಸ್ಥಾನಗಳನ್ನು ನಿರ್ಮಿಸುತ್ತವೆ. ಅವು ವಾಯು ರೂಪದಲ್ಲಿರುವುದರಿಂದ ನಮ್ಮ ಕಣ್ಣುಗಳಿಗೆ ಕಾಣಿಸುವುದಿಲ್ಲ; ಆದರೆ ಸೂಕ್ಷ್ಮದೃಷ್ಟಿ ಇರುವವರು ಅವುಗಳನ್ನು ನೋಡಬಲ್ಲರು.

ಕೆಟ್ಟ ಶಕ್ತಿಗಳ ವಾಸ್ತವ್ಯವು ಅವರ ಆಧ್ಯಾತ್ಮಿಕ ಶಕ್ತಿಯ ಮೇಲೆ ಅವಲಂಬಿಸಿರುವುದು: ಕೆಟ್ಟ ಶಕ್ತಿಗಳು ವಿವಿಧ ಸೂಕ್ಷ್ಮಲೋಕಗಳಲ್ಲಿ ವಾಸಿಸುವುದು ಅವರ ಆಧ್ಯಾತ್ಮಿಕ ಶಕ್ತಿ, ಕ್ಷಮತೆ ಇತ್ಯಾದಿಗಳ ಮೇಲೆ ಅವಲಂಬಿಸಿರುತ್ತದೆ. ಆಧ್ಯಾತ್ಮಿಕ ಶಕ್ತಿಯು ಹೆಚ್ಚಾದಂತೆ ಕೆಟ್ಟ ಶಕ್ತಿಗಳು ಹೆಚ್ಚೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತವೆ. ಕಡಿಮೆ ಆಧ್ಯಾತ್ಮಿಕ ಶಕ್ತಿಯಿರುವ ಕೆಟ್ಟ ಶಕ್ತಿಗಳು ಭುವರ್ಲೋಕದಲ್ಲಿ ಇರುತ್ತವೆ. ಅತ್ಯಂತ ಹೆಚ್ಚು ಶಕ್ತಿಶಾಲಿ ಮತ್ತು ಕ್ರೂರ ಕೆಟ್ಟ ಶಕ್ತಿಗಳು ಮುಂದಿನ ಮುಂದಿನ ಪಾತಾಳದಲ್ಲಿರುತ್ತವೆ. ಯಾವುದಾದರೊಂದು ಜೀವದ (ಮನುಷ್ಯನ ಅಥವಾ ಲಿಂಗದೇಹದ) ಸ್ಪಂದನಗಳು ಯಾವ ಲೋಕದ ಸ್ಪಂದನಗಳೊಂದಿಗೆ ಹೊಂದಾಣಿಕೆಯಾಗುತ್ತವೆಯೋ ಆಯಾ ಲೋಕದಲ್ಲಿಯೇ ಆ ಜೀವವು ವಾಸಿಸುತ್ತದೆ. ದುರ್ಜನರು ಯಾವಾಗಲೂ ಇತರ ದುರ್ಜನರೊಂದಿಗೆಯೇ ಇರುತ್ತಾರೆ, ಇದು ಸಹ ಅದೇ ರೀತಿಯದ್ದಾಗಿದೆ.

ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು

ಅ೧. ಮನುಷ್ಯ: ಕೆಟ್ಟ ಶಕ್ತಿಗಳು ತಮ್ಮ ಅತೃಪ್ತ ಇಚ್ಛೆಗಳನ್ನು ಪೂರ್ಣಗೊಳಿಸಿಕೊಳ್ಳಲು, ಸೇಡು ತೀರಿಸಿಕೊಳ್ಳಲು, ಕೊಡು-ಕೊಳ್ಳುವ ಲೆಕ್ಕವನ್ನು ಪೂರ್ಣಗೊಳಿಸಲು ಅಥವಾ ವ್ಯಕ್ತಿಗೆ ತೊಂದರೆ ನೀಡಿ ಸುಖ ಪಡೆಯಲು ವ್ಯಕ್ತಿಯ ಸುತ್ತಲೂ, ವ್ಯಕ್ತಿಯ ಮೈಮೇಲೆ ಅಥವಾ ಅವನ ಶರೀರದೊಳಗೆ ಇರುತ್ತವೆ. ವ್ಯಕ್ತಿಯ ಶರೀರದಲ್ಲಿನ ಯಾವುದಾದರೊಂದು ಅವಯವದಲ್ಲಿ ಅಥವಾ ಮನಸ್ಸು ಅಥವಾ ಬುದ್ಧಿಯಲ್ಲಿ ಅವು ವಾಸಿಸುತ್ತವೆ. ಸರ್ವಸಾಮಾನ್ಯವಾಗಿ ಇದನ್ನೇ ‘ಭೂತಬಾಧೆ’ ಅಥವಾ ‘ದುಷ್ಟ ಶಕ್ತಿಗಳ / ಅನಿಷ್ಟ ಶಕ್ತಿಗಳ ಕಾಟ’ ಎಂದು ಕರೆಯುತ್ತಾರೆ. ಕೆಟ್ಟ ಶಕ್ತಿಯು ಯಾವುದಾದರೊಬ್ಬ ವ್ಯಕ್ತಿಗೆ ಅನೇಕ ವರ್ಷಗಳಿಂದ ಕಾಟ ನೀಡುತ್ತಿರುವ ಸಾಧ್ಯತೆಗಳಿರುತ್ತವೆ. ಬಹಳಷ್ಟು ಜನರಿಗೆ ‘ತಮಗೆ ಕೆಟ್ಟ ಶಕ್ತಿಗಳ ಕಾಟವಿದೆ’ ಅಥವಾ ‘ತಾವು ಕೆಟ್ಟ ಶಕ್ತಿಗಳ ಇಚ್ಛೆಯಂತೆ ವರ್ತಿಸುತ್ತಿದ್ದೇವೆ’ ಎಂಬುದು ತಿಳಿಯುವುದೇ ಇಲ್ಲ. ಕೆಟ್ಟ ಶಕ್ತಿಯು ವ್ಯಕ್ತಿಯ ಶರೀರದಲ್ಲಿ ಇದೆಯೋ ಅಥವಾ ಶರೀರದ ಹೊರಗೆ ಇದೆಯೋ ಎಂಬುದಕ್ಕೆ ಮಹತ್ವವಿಲ್ಲ; ಏಕೆಂದರೆ ಅದು ಇವೆರಡೂ ವಿಧಗಳಿಂದ ವ್ಯಕ್ತಿಯ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಬಹುದಾಗಿದೆ.

ಅ೨. ಪ್ರಾಣಿಗಳು: ಬಹಳಷ್ಟು ಪ್ರಾಣಿಗಳ ಶರೀರದ ಮೇಲೆ ಕೆಟ್ಟ ಶಕ್ತಿಗಳು ಕುಳಿತಿರುತ್ತವೆ; ಅಪರೂಪಕ್ಕೆ ಮಾತ್ರ ಅವು ಪ್ರಾಣಿಗಳ ಶರೀರದೊಳಗೆ ಪ್ರವೇಶಿಸುತ್ತವೆ. ಯಾವುದಾದರೊಂದು ಕೆಟ್ಟ ಶಕ್ತಿಗೆ ಓರ್ವ ವ್ಯಕ್ತಿಗೆ ತೊಂದರೆ ನೀಡುವುದಿದ್ದರೆ ಅದು ಆ ವ್ಯಕ್ತಿಯ ಅಕ್ಕಪಕ್ಕದಲ್ಲಿರುವ ಪ್ರಾಣಿಯ ಶರೀರದಲ್ಲಿ ಪ್ರವೇಶಿಸುತ್ತದೆ. ಈ ರೀತಿ ಕೆಟ್ಟ ಶಕ್ತಿಯ ಹಿಡಿತಕ್ಕೊಳಗಾದ ಪ್ರಾಣಿಯು ಒಮ್ಮೆಲೆ ಆಕ್ರಮಣಕಾರಿಯಾಗುತ್ತದೆ ಮತ್ತು ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಅವನಿಗೆ ಹಾನಿಯುಂಟುಮಾಡುತ್ತದೆ.

ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳು, ಉದಾ: ನಾಯಿ, ಕುದುರೆ, ಗೂಬೆ, ಕಾಗೆ ಮುಂತಾದವು ಕೆಟ್ಟ ಶಕ್ತಿಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಯಾವುದೇ ಸ್ಥೂಲ ಕಾರಣವಿಲ್ಲದೇ ರಾತ್ರಿಯ ಸಮಯದಲ್ಲಿ ನಾಯಿಯು ಅಕಸ್ಮಾತ್ತಾಗಿ ಬೊಗಳುತ್ತಿದ್ದರೆ ಅಥವಾ ಅಳುತ್ತಿದ್ದರೆ ಆ ಜಾಗದಲ್ಲಿ ಕೆಟ್ಟ ಶಕ್ತಿಗಳ ಅಸ್ತಿತ್ವವಿರುವ ಸಾಧ್ಯತೆಯು ಇರುತ್ತದೆ.

ಅ೩. ಗಿಡ-ಮರಗಳು: ಬಹಳಷ್ಟು ಬಾರಿ ಕೆಟ್ಟ ಶಕ್ತಿಗಳು ಮರಗಳ ಕೊಂಬೆಗಳಿಗೆ ನೇತಾಡುತ್ತಿರುತ್ತವೆ. ಕೆಟ್ಟ ಶಕ್ತಿಗಳ ಸ್ಪಂದನಗಳು ಯಾವ ಮರದ ಸ್ಪಂದನದೊಂದಿಗೆ ಹೊಂದಾಣಿಕೆಯಾಗುತ್ತದೆಯೋ ಅಂತಹ ಮರದ ಮೇಲೆಯೇ ಅವು ವಾಸಿಸುತ್ತವೆ. (ಬ್ರಹ್ಮಾಂಡದಲ್ಲಿನ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟ ಸ್ಪಂದನ ಇದೆ. ವಸ್ತುವಿನ ಸುತ್ತಲಿರುವ ಪ್ರಭಾವಲಯವು ಆ ಸ್ಪಂದನಗಳ ಪ್ರಕಟೀಕರಣವಾಗಿರುತ್ತದೆ) ಎಲ್ಲರಿಗೂ ತಿಳಿದಿರುವಂತೆ ಹುಣಸೆ ಮರವು ಕೆಟ್ಟ ಶಕ್ತಿಗಳು ವಾಸಿಸುವ ಒಂದು ಸ್ಥಾನವಾಗಿದೆ. ಕೆಟ್ಟ ಶಕ್ತಿಗಳು ಪವಿತ್ರವಾದಂತಹ ಆಲದ ಮರದಲ್ಲಿಯೂ ವಾಸ ಮಾಡುತ್ತವೆ. ಇಂತಹ ಕೆಟ್ಟ ಶಕ್ತಿಗಳ ಕ್ಷಮತೆಯು ಹೆಚ್ಚಿಗೆ ಇರುತ್ತದೆ.

ವಾಸಿಸುವ ಜಾಗ                               ಕೆಟ್ಟ ಶಕ್ತಿಯ ವಿಧ
೧. ಆಲದ ಮರ                                    ಪುರುಷ ಭೂತ
೨. ಹುಣಸೇ ಮರ                                 ಬೆಕ್ಕಿನ ರೂಪದಲ್ಲಿರುವ ಚೇಟಕಿಣ ಎಂಬ ಕೆಟ್ಟ ಶಕ್ತಿ
೩. ಅರಳಿ ಮರ                                      ಎಲ್ಲ ತರಹದ ಕೆಟ್ಟ ಶಕ್ತಿಗಳು

ಅ೪. ಕೆಟ್ಟ ಶಕ್ತಿಗಳಿಂದ ತುಂಬಿದ ವಸ್ತುಗಳು: ಕೆಲವರು ತಮ್ಮ ಮೃತ್ಯುವಿನ ನಂತರವೂ ತಾವು ಜೀವಂತವಾಗಿದ್ದಾಗ ಅವರಿಗೆ ಇಷ್ಟವಾಗುತ್ತಿದ್ದ ವಸ್ತುಗಳಲ್ಲಿ ಸಿಲುಕಿಕೊಂಡಿರುತ್ತಾರೆ, ಉದಾ.ಇಷ್ಟವಾದ ಕುರ್ಚಿ, ಆಭರಣಗಳು ಇತ್ಯಾದಿ. ಇಂತಹ ವಸ್ತುಗಳ ಸುತ್ತಲೂ ಅವರ ಲಿಂಗದೇಹವು ಸುಳಿದಾಡುತ್ತಿರುತ್ತದೆ, ಉದಾ. ಓರ್ವ ಸ್ತ್ರೀಯು ತನ್ನ ಮೃತ್ಯುವಿನ ನಂತರ ತನಗಿಷ್ಟವಾದ ಆಭರಣದ ಮೇಲೆ ಆಸಕ್ತಿಯನ್ನು ಇಟ್ಟುಕೊಂಡಿದ್ದರೆ ಅವಳ ಮನಸ್ಸು ಸತತವಾಗಿ ಆ ಆಭರಣದ ಸುತ್ತಲೂ ಸುಳಿದಾಡುತ್ತಿರುತ್ತದೆ. ಇಂತಹ ವಸ್ತುಗಳಿಗೆ ‘ಕೆಟ್ಟ ಶಕ್ತಿಗಳಿಂದ ತುಂಬಿದ ವಸ್ತುಗಳು’ ಎಂದು ಹೇಳುತ್ತಾರೆ. ಓರ್ವ ವ್ಯಕ್ತಿಯು ಇಂತಹ ಆಭರಣವನ್ನು ಉಪಯೋಗಿಸಿದರೆ ಮತ್ತು ಅದು ಆ ಲಿಂಗದೇಹಕ್ಕೆ ಇಷ್ಟವಾಗದಿದ್ದಲ್ಲಿ ಆ ಲಿಂಗದೇಹವು ಆ ವ್ಯಕ್ತಿಗೆ ತೊಂದರೆಯನ್ನು ನೀಡುತ್ತದೆ. ಒಂದು ವೇಳೆ ಯಾವುದಾದರೂ ವಸ್ತುವಿನಲ್ಲಿ ಕೆಟ್ಟ ಶಕ್ತಿಯ ವಾಸ್ತವ್ಯವಿದ್ದಲ್ಲಿ ಅಂದರೆ ಆ ವಸ್ತುವು ಕೆಟ್ಟ ಶಕ್ತಿಗಳ ಹಿಡಿತದಲ್ಲಿದ್ದರೆ ಅದರ ಸಂಪರ್ಕಕ್ಕೆ ಬಂದಾಗ ಅದರಲ್ಲಿನ ಕಪ್ಪು ಶಕ್ತಿಯಿಂದಾಗಿ ಬಹಳ ತೊಂದರೆಯಾಗಬಹುದು.

ಅ೫. ಕೆಟ್ಟ ಶಕ್ತಿಗಳ ತೊಂದರೆಯಿರುವ ಜಾಗ: ಯಾವುದಾದರೊಂದು ಜಾಗವನ್ನು ಹಿಂಸಕ ಮಾರ್ಗದಿಂದ ಕಬಳಿಸಿದ್ದಲ್ಲಿ ಮತ್ತು ಆ ಸಂಘರ್ಷದಲ್ಲಿ ಆ ಜಾಗದ ಮಾಲೀಕನ ಮೃತ್ಯುವಾಗಿದ್ದಲ್ಲಿ, ಅವನ ಲಿಂಗದೇಹವು ಅದೇ ಜಾಗದಲ್ಲಿರುತ್ತದೆ. ಆ ಲಿಂಗದೇಹವು ಬೇರೆ ಯಾರಿಗೂ ಆ ಜಾಗದಲ್ಲಿ ಪ್ರವೇಶಿಸಲು ಬಿಡುವುದಿಲ್ಲ. ಆ ಜಾಗದ ಅಕ್ಕಪಕ್ಕದಲ್ಲಿ ತಿರುಗಾಡುವವರಿಗೂ ಆ ಲಿಂಗದೇಹವು ತೊಂದರೆ ನೀಡುತ್ತದೆ. ಇಂತಹ ಜಾಗವನ್ನು ‘ಕೆಟ್ಟ ಶಕ್ತಿಗಳ ಕಾಟವಿರುವ ಜಾಗ’ ಎಂದು ಹೇಳುತ್ತಾರೆ.

ಅ೬. ಕೆಟ್ಟ ಶಕ್ತಿಗಳ ತೊಂದರೆಯಿರುವ ವಾಸ್ತು : ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗದಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಆ ಜಾಗದಲ್ಲಿನ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಯ ಮೃತ್ಯುವಾದರೆ ಅವನ ಲಿಂಗದೇಹವು ಸಹ ಅದೇ ಜಾಗದಲ್ಲಿ ಅಲೆದಾಡುತ್ತಿರುತ್ತದೆ. ಇಂತಹ ವಾಸ್ತುವಿನಲ್ಲಿ ಹೊರಗಿನ ವ್ಯಕ್ತಿಗಳಿಗೂ ಅಮಾವಾಸ್ಯೆ, ಹುಣ್ಣಿಮೆ ಅಥವಾ ಮಧ್ಯರಾತ್ರಿಯ ಸಮಯದಲ್ಲಿ ಕಿರುಚುವುದು ಅಥವಾ ವಿಚಿತ್ರವಾದ ಧ್ವನಿಯು ಕೇಳಿಸುತ್ತದೆ. ಇಂತಹ ವಾಸ್ತುಗಳಿಗೆ ‘ಕೆಟ್ಟ ಶಕ್ತಿಗಳ ತೊಂದರೆ ಇರುವ ವಾಸ್ತು’ ಎಂದು ಹೇಳುತ್ತಾರೆ. ಅದೇ ರೀತಿ ಯಾರಾದರೊಬ್ಬರಿಗೆ ಯಾವುದಾದರೊಂದು ವಾಸ್ತುವಿನ ಬಗ್ಗೆ ಆಸಕ್ತಿ ಇದ್ದು, ಅವರು ಮೃತರಾದರೆ ಅವರ ಲಿಂಗದೇಹವು ಆ ಜಾಗದಲ್ಲಿ ವಾಸಿಸಲು ಬಂದವರಿಗೆ ತೊಂದರೆ ನೀಡುವ ಸಾಧ್ಯತೆ ಇರುತ್ತದೆ.

ಅ೭. ಶಾಪಗ್ರಸ್ತ ಮನೆಗಳು: ಹಿಂದಿನ ಕಾಲದಲ್ಲಿ ಸಾತ್ತ್ವಿಕ ಋಷಿಮುನಿಗಳು ಹಾಗೆಯೇ ಮಹಾಜ್ಞಾನಿ ಪಂಡಿತರೂ ಇದ್ದರು. ಅವರಿಗೆ ತುಂಬಾ ಆದರ-ಸತ್ಕಾರವನ್ನು ಮಾಡಲಾಗುತ್ತಿತ್ತು. ಅವರ ಆಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತಿತ್ತು. ಅದರಲ್ಲಿ ಏನಾದರೂ ತಪ್ಪುಗಳಾದರೆ ಆ ಋಷಿಗಳು ಸಿಟ್ಟಿನಿಂದ ಆ ಮನೆಗೆ ಶಾಪ ಕೊಡುತ್ತಿದ್ದರು, ಉದಾ: ‘ವಂಶವು ಸರ್ವನಾಶ ವಾಗಲಿ’ ಇದರಿಂದಾಗಿ ಆ ವಂಶದಲ್ಲಿನ ವ್ಯಕ್ತಿಯ ಅಪಮೃತ್ಯುವಾಗುವುದರಿಂದ ಜೀವನದಲ್ಲಿ ಅವರ ಇಚ್ಛೆಗಳು ಅತೃಪ್ತವಾಗುವುದರಿಂದ ಆ ಲಿಂಗದೇಹವು ಅ ಮನೆಯಲ್ಲಿಯೇ ಅಲೆದಾಡುತ್ತಿರುತ್ತದೆ. ತನ್ನ ಮುಕ್ತಿಗಾಗಿ ಆ ಮನೆಯವರಿಗೆ ತೊಂದರೆ ನೀಡುತ್ತಿರುತ್ತದೆ. ಆಗ ಅಂತಹ ಮನೆಗೆ ‘ಶಾಪಗ್ರಸ್ತ ಮನೆ’ ಎಂದು ಸಂಬೋಧಿಸುತ್ತಾರೆ.

ಅ೮. ಕೆಟ್ಟ ಶಕ್ತಿಗಳ ಕಾಟವಿರುವ ವಾಹನ: ಯಾವುದಾದರೊಬ್ಬ ವ್ಯಕ್ತಿಯ ಕೊಲೆ ಅಥವಾ ಅಪಮೃತ್ಯುವು ವಾಹನದಲ್ಲಿ ಆದರೆ ಅವನ ಲಿಂಗದೇಹವು ಆ ವಾಹನದಲ್ಲಿಯೇ ಅಲೆದಾಡುತ್ತಿರುತ್ತದೆ. ಪ್ರತಿಯೊಂದು ವಾಹನ ಅಪಘಾತದಲ್ಲಿ ಹೀಗೆಯೇ ಆಗುತ್ತದೆ ಎಂದೇನಿಲ್ಲ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ, ಪ್ರಾರಬ್ಧ, ಚಿತ್ತದಲ್ಲಿನ ಅಯೋಗ್ಯ ಸಂಸ್ಕಾರಗಳ ಪ್ರಮಾಣ, ಅಹಂಭಾವ ಮತ್ತು ಅವನು ತನ್ನ ಜೀವಿತಾವಧಿಯಲ್ಲಿ ಮಾಡಿದ ಕರ್ಮ ಮುಂತಾದ ವಿಷಯಗಳ ಮೇಲೆ ಇದು ಅವಲಂಬಿಸಿರುತ್ತದೆ.

ಯಾವುದಾದರೊಬ್ಬ ವ್ಯಕ್ತಿಗೆ ಯಾವುದಾದರೊಂದು ವಾಹನದಲ್ಲಿ ಪದೇ ಪದೇ ತೊಂದರೆಗಳಾಗುತ್ತಿದ್ದಲ್ಲಿ (ಉದಾ.ವಾಹನವನ್ನು ನಡೆಸುವಾಗ ಭಯವಾಗುವುದು, ವಾಹನದ ಒಳಗೆ ಅಥವಾ ಅಕ್ಕಪಕ್ಕದಲ್ಲಿ ಯಾರಾದರೂ ಸುಳಿದಾಡುತ್ತಿರುವಂತೆ ಭಾಸವಾಗುವುದು ಅಥವಾ ಅನಿರೀಕ್ಷಿತವಾಗಿ ವಾಹನದ ಮೇಲಿನ ನಿಯಂತ್ರಣವು ತಪ್ಪಿಹೋಗುವುದು) ಇಂತಹ ವಾಹನದ ಮೇಲೆ ಕೆಟ್ಟ ಶಕ್ತಿಗಳ ಹಿಡಿತವಿರುವ ಸಾಧ್ಯತೆಗಳು ತುಂಬಾ ಇರುತ್ತವೆ.

ಅ೯. ಕೆಟ್ಟ ಶಕ್ತಿಗಳ ಕಾಟವಿರುವ ರಸ್ತೆಗಳು: ವ್ಯಕ್ತಿಯು ಯಾವ ಸ್ಥಳದಲ್ಲಿ ಅಪಘಾತಕ್ಕೊಳಗಾಗಿ ಸಾಯುತ್ತಾನೆಯೋ ಅದೇ ಸ್ಥಳದಲ್ಲಿ ಅವನ ಲಿಂಗದೇಹವು ಅಲೆದಾಡುತ್ತಿರುತ್ತದೆ. ಅಪಘಾತದಲ್ಲಿ ತನಗಾದ ಮೃತ್ಯುವಿನ ಸಿಟ್ಟಿನಿಂದ ಅವನು ಇತರ ವಾಹನಗಳಿಗೂ ಅಪಘಾತವಾಗುವಂತೆ ಮಾಡುತ್ತಾನೆ. ಈ ರೀತಿ ಅಪಘಾತದಲ್ಲಿ ಮೃತರಾದ ವ್ಯಕ್ತಿಗಳ ಲಿಂಗದೇಹಗಳು ಅಲ್ಲಿಯೇ ಇರುತ್ತವೆ. ಇದರಿಂದಾಗಿ ಆ ಸ್ಥಳದಲ್ಲಿ ಅಂತಹ ಲಿಂಗದೇಹಗಳ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳಾಗುತ್ತವೆ. ಇಂತಹ ಸ್ಥಳಗಳಲ್ಲಿ ಜಾತ್ಯತೀತ ಸರಕಾರದವರು ‘ಅಪಘಾತ ವಲಯ’ ಎಂದು ಸುಮ್ಮನೆ ಒಂದು ಫಲಕವನ್ನು ಹಾಕಿಬಿಡುತ್ತಾರೆ; ಆದರೆ ಅಲ್ಲಿನ ಲಿಂಗದೇಹಗಳ ಮುಕ್ತಿಗಾಗಿ ಏನೂ ಮಾಡುವುದಿಲ್ಲ! ಈ ಲಿಂಗದೇಹಗಳಿಗೆ ಆ ಸ್ಥಾನದ ಆಸಕ್ತಿಯಿಂದ ಮುಕ್ತಗೊಳಿಸಲು ಎಲ್ಲಿಯವರೆಗೆ ಆಧ್ಯಾತ್ಮಿಕ ಪರಿಹಾರವನ್ನು ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಅಪಘಾತಗಳನ್ನು ತಡೆಯಲು ಸ್ಥೂಲದಲ್ಲಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ. ಆದುದರಿಂದಲೇ ಕೆಲವು ಕಡೆಗಳಲ್ಲಿ ರಸ್ತೆಯು ನೇರವಾಗಿದ್ದರೂ ಮತ್ತು ‘ಅಪಘಾತ ವಲಯ’ ಎಂಬ ಸೂಚನಾ ಫಲಕವಿದ್ದರೂ ಆ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತವೆ.

ಕೆಲವು ಜನರು ಅಪಘಾತವಾದ ಸ್ಥಳದ ಹತ್ತಿರ ಮೃತ ವ್ಯಕ್ತಿಯ ಸ್ಮರಣಾರ್ಥ ಸಣ್ಣದಾದ ಸಾಂಕೇತಿಕ ಚಿಹ್ನೆಯನ್ನು ಇಡುತ್ತಾರೆ. ಇದರಿಂದಲೂ ಮೃತವ್ಯಕ್ತಿಯ ಸೂಕ್ಷ್ಮದೇಹವು ಈ ಸ್ಥಳದ ಹತ್ತಿರ ಸುಳಿದಾಡುತ್ತಿರುತ್ತದೆ. ಇದರಿಂದಾಗಿ ಆ ಲಿಂಗದೇಹದ ಕರ್ಮಪ್ರಾರಬ್ಧಕ್ಕನುಸಾರ ಮುಂದಿನ ಲೋಕಗಳಿಗೆ ಹೋಗುವ ಗತಿಯು ಕುಂಠಿತವಾಗುತ್ತದೆ. ಇದರ ಪರಿಣಾಮದಿಂದಾಗಿ ಆ ಲಿಂಗದೇಹವು ತೊಂದರೆಗಳನ್ನೇ ಅನುಭವಿಸುತ್ತಿರುತ್ತದೆ.

ಅ೧೦. ಪೊಲೀಸು ಠಾಣೆ: ಪೊಲೀಸು ಠಾಣೆಯಲ್ಲಿ ಯಾತನೆಗೊಳಗಾಗಿ ಮೃತ್ಯುವಾದ ಅತೃಪ್ತ ಲಿಂಗದೇಹಗಳು ತುಂಬಾ ಪ್ರಮಾಣದಲ್ಲಿ ಅಲೆದಾಡುತ್ತಿರುತ್ತವೆ. ಪೊಲೀಸು ಠಾಣೆಗೆ ಹೋದಾಗ ಒಳ್ಳೆಯದೆನಿಸದಿರಲು ಇದು ಸಹ ಒಂದು ಕಾರಣವಾಗಿದೆ.

ಅ೧೧. ಕಾರಾಗೃಹ: ಅಪರಾಧ ಮಾಡದಿರುವಾಗಲೂ ಗಲ್ಲುಶಿಕ್ಷೆಗೆ ಒಳಗಾದ ಲಿಂಗದೇಹಗಳು ಇಲ್ಲಿ ಇರುತ್ತವೆ.

ಅ೧೨. ಆಸ್ಪತ್ರೆಗಳು: ತುಂಬಾ ತೊಂದರೆಗಳಿಂದ ಮೃತರಾದ ಅನೇಕ ರೋಗಿಗಳ ಲಿಂಗದೇಹಗಳು ಆಸ್ಪತ್ರೆಗಳಲ್ಲಿ ಅಲೆದಾಡುತ್ತಿರುತ್ತವೆ. ಲಿಂಗದೇಹಗಳು ಮತ್ತು ಕೆಟ್ಟ ಶಕ್ತಿಗಳಾಗಿ ರೂಪಾಂತರಿತವಾದ ಲಿಂಗದೇಹಗಳ ಅಸ್ತಿತ್ವದಿಂದಾಗಿ ಅಲ್ಲಿನ ವಾತಾವರಣವು ತೊಂದರೆದಾಯಕವಾಗುತ್ತದೆ. ಇದರ ಪರಿಣಾಮವು ಅಲ್ಲಿನ ರೋಗಿಗಳು, ಅವರ ಶುಶ್ರೂಷೆ ಮಾಡುವವರು ಮತ್ತು ಅವರನ್ನು ನೋಡಲು ಬರುವಂತಹ ಸಂಬಂಧಿಕರ ಮೇಲೂ ಆಗುತ್ತದೆ. ಅದೇ ರೀತಿ ಇವರೆಲ್ಲರಿಗೂ ಮತ್ತು ಆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಗೂ ಕೆಟ್ಟ ಶಕ್ತಿಗಳ ತೊಂದರೆಯು ಆಗಬಹುದು ಅಥವಾ ಅವರು ಕೆಟ್ಟ ಶಕ್ತಿಗಳ ಹಿಡಿತಕ್ಕೊಳಗಾಗಬಹುದು. ಇಂತಹ ತೊಂದರೆದಾಯಕ ವಾತಾವರಣದಿಂದಾಗಿ ರೋಗಿಗಳಿಗೆ ಗುಣಮುಖರಾಗಲು ಹೆಚ್ಚಿನ ಕಾಲಾವಧಿಯು ಬೇಕಾಗುತ್ತದೆ.

ಅ೧೩. ಸ್ಮಶಾನಭೂಮಿ: ಕೆಲವು ವ್ಯಕ್ತಿಗಳ ಅಂತ್ಯಸಂಸ್ಕಾರವು ಸರಿಯಾದ ರೀತಿಯಲ್ಲಿ ಆಗಿರುವುದಿಲ್ಲ. ಅಂತಹ ವ್ಯಕ್ತಿಗಳ ಲಿಂಗದೇಹಗಳು ಸ್ಮಶಾನ ಭೂಮಿಯಲ್ಲಿಯೇ ಅಲೆದಾಡುತ್ತಿರುತ್ತವೆ. ಇಂತಹ ಸ್ಥಳಕ್ಕೆ ಹೋದಾಗ ಬಹಳಷ್ಟು ಜನರಿಗೆ ಅಸ್ವಸ್ಥವೆನಿಸುವುದು, ಶರೀರವು ಭಾರವೆನಿಸುವುದು, ಆಯಾಸವೆನಿಸುವುದು ಮುಂತಾದ ತೊಂದರೆಗಳಾಗುತ್ತವೆ. ಆದರೆ ಬಹಳಷ್ಟು ಸಲ ‘ಈ ಮೇಲಿನ ತೊಂದರೆಗಳು ಮಾನಸಿಕ ಕಾರಣದಿಂದ ಆದವು’ ಎಂದು ಜನರು ತಿಳಿಯುತ್ತಾರೆ.

ಅ೧೪. ಶಿವನ ದೇವಸ್ಥಾನದ ಪರಿಸರ: ಭಕ್ತರ ಸೇವೆ ಮಾಡಬೇಕೆಂದು ಮತ್ತು ಶಿವತತ್ತ್ವವನ್ನು ಪಡೆಯಲು ಒಳ್ಳೆಯ ಆಧ್ಯಾತ್ಮಿಕ ಮಟ್ಟವಿರುವ ಶಿವಭಕ್ತ ಭೂತಗಳು ಅಲ್ಲಿರುತ್ತವೆ. ವ್ಯಕ್ತಿಗಳು ಕೆಟ್ಟ ಶಕ್ತಿಗಳ ತೊಂದರೆ ಇರುವವರ ಸಂರ್ಪಕದಲ್ಲಿ ಬಂದಾಗ ಅವರಿಗೆ ತೊಂದರೆಯಾಗುವ ಅಥವಾ ಅವುಗಳ ಹಿಡಿತಕ್ಕೊಳಗಾಗುವ ಸಾಧ್ಯತೆಗಳಿರುವುದು

ಕೆಲವೊಮ್ಮೆ ನಾವು ಒಬ್ಬ ವ್ಯಕ್ತಿ, ಒಂದು ಸ್ಥಳ ಅಥವಾ ಒಂದು ವಸ್ತು ಇವುಗಳ ಸಂಪರ್ಕದಲ್ಲಿ ಬಂದಾಗ ನಮಗೆ ಪದೇ ಪದೇ ತೊಂದರೆಗಳಾಗುತ್ತವೆ ಮತ್ತು ಈ ತೊಂದರೆಗಳ ಕಾರಣವು ನಮಗೆ ತಿಳಿಯುವುದಿಲ್ಲ. ಇಂತಹ ಸಮಯದಲ್ಲಿ ಆ ವ್ಯಕ್ತಿ, ಸ್ಥಳ ಅಥವಾ ವಸ್ತುಗಳಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುವ ಅಥವಾ ಅವುಗಳನ್ನು ಕೆಟ್ಟ ಶಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಸಾಧ್ಯತೆಗಳಿರುತ್ತದೆ. ಆ ಸಮಯದಲ್ಲಿ ಆಗುವ ತೊಂದರೆಗಳು ಮುಂದಿನಂತಿರಬಹುದು.

೧. ಹೆದರಿಕೆಯಾಗುವುದು.
೨. ಇನ್ನೊಬ್ಬರ ಅಸ್ತಿತ್ವದ ಅರಿವಾಗುವುದು.
೩. ತನ್ನಲ್ಲಿರುವ ಪ್ರಾಣಶಕ್ತಿಯನ್ನು ಯಾರೋ ಹೀರಿಕೊಳ್ಳುತ್ತಿರುವುದರ ಅರಿವಾಗುವುದು.
೪. ಯಾವುದೇ ಸ್ಥೂಲ ಕಾರಣಗಳಿಲ್ಲದೇ ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುವುದು. 

ಮಾನಸಿಕವಾಗಿ ಕುಗ್ಗಿದ ಮತ್ತು ಆಧ್ಯಾತ್ಮಿಕ ಮಟ್ಟವು ಕಡಿಮೆ ಇರುವ ಅಥವಾ ಮೊದಲಿನಿಂದಲೂ ಕೆಟ್ಟ ಶಕ್ತಿಗಳ ತೊಂದರೆಯಿರುವವರು, ತೊಂದರೆಯಿರುವ ವ್ಯಕ್ತಿ, ವಸ್ತು ಅಥವಾ ಸ್ಥಳ ಇವುಗಳ ಸಂರ್ಪಕದಲ್ಲಿ ಬಂದರೆ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆಗಳನ್ನು ಕೊಡುತ್ತವೆ ಅಥವಾ ಅವನನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತವೆ.  ಆರನೆಯ ಇಂದ್ರಿಯ ಜಾಗೃತವಾದವರು ಅಥವಾ ಸೂಕ್ಷ್ಮದ ವಿಷಯಗಳು ತಿಳಿದವರೇ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಅಸ್ತಿತ್ವದ ಬಗ್ಗೆ ಹೇಳಬಹುದು.

ಕೆಟ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಮಾಡಬೇಕಾದ ಉಪಾಯಗಳು
ನಾವು ಕೆಟ್ಟ ಶಕ್ತಿಗಳ ವಿಷಯಗಳಿಂದ ದೂರವಿದ್ದರೆ ನಮಗೆ ಕೆಟ್ಟ ಶಕ್ತಿಗಳ ತೊಂದರೆಯೇ ಆಗುವುದಿಲ್ಲ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಕೆಟ್ಟ ಶಕ್ತಿಗಳ ಅಸ್ತಿತ್ವದ ಬಗ್ಗೆ ಮತ್ತು ‘ಅವುಗಳಿಂದ ರಕ್ಷಣೆಯನ್ನು ಪಡೆಯುವುದರ’ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕವಾಗಿದೆ. ಇದರ ಬಗೆಗಿನ ಅಜ್ಞಾನದಿಂದ ಅಥವಾ ಉಷ್ಟ್ರಪಕ್ಷಿಯಂತಹ ವೃತ್ತಿಯಿಂದ ಕೆಟ್ಟ ಶಕ್ತಿಗಳಿಂದ ನಮಗೆ ಹಾನಿಯಾಗುತ್ತದೆ. ಅಂದರೆ ‘ಕೆಟ್ಟ ಶಕ್ತಿಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದರ ಮಾಹಿತಿ ಇಲ್ಲದಿರುವುದರಿಂದ ಮತ್ತು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನೂ ಮಾಡದಿರುವುದರಿಂದ ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗವನ್ನು ಪ್ರವೇಶಿಸುವ ಮೊದಲು ‘ನನ್ನ ರಕ್ಷಣೆಯಾಗಲಿ’ ಎಂದು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ಸತತ ನಾಮಜಪ ಮಾಡುತ್ತಿದ್ದರೆ ನಮ್ಮ ಸುತ್ತಲೂ ಈಶ್ವರನ ರಕ್ಷಾಕವಚವು ನಿರ್ಮಾಣವಾಗುತ್ತದೆ.


ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಮಾಡಬೇಕಾದ ಆಧ್ಯಾತ್ಮಿಕ ಪರಿಹಾರೋಪಾಯಗಳು ಮತ್ತು ನಾಮಜಪದ ಬಗ್ಗೆ ಇದೇ ಬ್ಲಾಗ್‌ನ ವಿವಿಧ ಅಂಕಣಗಳಲ್ಲಿ ಓದಿ ಮತ್ತು ಅದೇ ರೀತಿ ಸಾಧನೆಯನ್ನು ಮಾಡಿ.

ಸಂಬಂಧಿತ ವಿಷಯಗಳು
ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ?
ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

ಆರನೆಯ ಇಂದ್ರಿಯ : ಆಧ್ಯಾತ್ಮಿಕ ದೃಷ್ಟಿಕೋನ


ಆರನೆಯ ಇಂದ್ರಿಯ ಎಂದರೇನು?

ಸೂಕ್ಷ್ಮದಿಂದ ತಿಳಿದುಕೊಳ್ಳುವ ಕ್ಷಮತೆಯನ್ನು ‘ಆರನೆಯ ಇಂದ್ರಿಯ’ ಎಂದು ಹೇಳುತ್ತಾರೆ. ಈ ಕ್ಷಮತೆಯಿಂದ ಸೂಕ್ಷ್ಮ-ಜಗತ್ತಿನ ಬಗ್ಗೆ, ಉದಾ: ಕೆಟ್ಟ ಶಕ್ತಿಗಳು, ಸಪ್ತಪಾತಾಳ, ಸಪ್ತಲೋಕ, ದೇವತೆಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ನಮ್ಮ ಐದು ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಅರಿವಿನ ಆಚೆಗಿರುವ ಸೂಕ್ಷ್ಮ-ಜಗತ್ತಿನ ಬಗ್ಗೆ ಅಥವಾ ಯಾವುದಾದರೊಂದು ಘಟನೆಯ ಹಿಂದಿನ ಸೂಕ್ಷ್ಮ ಕಾರಣಗಳು, ಪರಿಣಾಮ ಮತ್ತು ಅವುಗಳ ನಡುವಿನ ಸಂಬಂಧ ಇವೆಲ್ಲವುಗಳನ್ನು ಕೇವಲ ಸೂಕ್ಷ್ಮಜ್ಞಾನವಿರುವ ವ್ಯಕ್ತಿಗಳಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯವಿದೆ.

ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ?

ಆಧ್ಯಾತ್ಮಿಕ ಸಂಶೋಧನೆ
ಸನಾತನ ಸಂಸ್ಥೆಯು ಅನೇಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಿದೆ. (ಈ ಎಲ್ಲ ಸಂಶೋಧನೆಗಳನ್ನು ಆಂಗ್ಲ ಭಾಷೆಯಲ್ಲಿ http://spiritualresearchfoundation.org/ ಎಂಬ ಸಂಕೇತಸ್ಥಳದಲ್ಲಿ ಇಡಲಾಗಿದೆ.) ಅವುಗಳಲ್ಲಿ ಒಂದು ವಿಷಯವನ್ನು ನೋಡೋಣ. ಅದೇನೆಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ನೋಡೋಣ.

ಕೆಟ್ಟ ಶಕ್ತಿಗಳೆಂದರೇನು?
ಯಾವಾಗ ಒಬ್ಬ ವ್ಯಕ್ತಿಯು ಮರಣ ಹೊಂದುತ್ತಾನೆಯೋ ಆಗ ಅವನ ಲಿಂಗದೇಹವು ಅವನ ಸ್ಥೂಲದೇಹವನ್ನು ಬಿಟ್ಟು ಬ್ರಹ್ಮಾಂಡದಲ್ಲಿನ ಇತರ ಲೋಕಗಳಿಗೆ ಹೋಗುತ್ತದೆ. ಲಿಂಗದೇಹವು ಪಂಚಸೂಕ್ಷ್ಮಜ್ಞಾನೇಂದ್ರಿಯ, ಪಂಚಸೂಕ್ಷ್ಮಕರ್ಮೇಂದ್ರಿಯ, ಪಂಚಪ್ರಾಣ, ಮನಸ್ಸು (ಬಾಹ್ಯ ಮನಸ್ಸು), ಚಿತ್ತ (ಅಂತರ್ಮನಸ್ಸು), ಬುದ್ಧಿ ಮತ್ತು ಅಹಂ ಇವುಗಳಿಂದ ಆಗಿರುತ್ತದೆ. ಕೆಲವು ಲಿಂಗದೇಹಗಳ ಉದ್ದೇಶವು ಜನರಿಗೆ ತೊಂದರೆಗಳನ್ನು ಕೊಡುವುದೇ ಆಗಿರುವುದರಿಂದ ಅವುಗಳಿಗೆ ‘ಕೆಟ್ಟ ಶಕ್ತಿ’ ಎಂದು ಹೇಳುತ್ತಾರೆ.

ಮೃತ್ಯುವಿನ ನಂತರ  ಪ್ರತಿಯೊಂದು ದೇಹವು ಏನಾಗುತ್ತದೆ?
ಅ. ಸ್ಥೂಲದೇಹವು ಪೃಥ್ವಿಯ ಮೇಲೆಯೇ ಉಳಿಯುತ್ತದೆ. (ಕೆಲವರು ಅದನ್ನು ಸುಡುತ್ತಾರೆ ಮತ್ತು ಇನ್ನು ಕೆಲವರು ಅದನ್ನು ಹೂಳುತ್ತಾರೆ)
ಆ. ಮೃತ್ಯುವಿನ ಸಮಯದಲ್ಲಿ ಸ್ಥೂಲದೇಹ(ಶರೀರ)ದ ಕಾರ್ಯವು ನಿಂತುಹೋಗುವುದರಿಂದ ಸ್ಥೂಲದೇಹದ ಕಾರ್ಯಕ್ಕಾಗಿ ಉಪಯೋಗಿಸಲ್ಪಡುವ ಪ್ರಾಣಶಕ್ತಿಯು ಮುಕ್ತವಾಗುತ್ತದೆ ಮತ್ತು ಪ್ರಾಣದೇಹದಲ್ಲಿನ ಪ್ರಾಣಶಕ್ತಿಯು ಬ್ರಹ್ಮಾಂಡದಲ್ಲಿ ವಿಲೀನವಾಗುತ್ತದೆ.
ಇ. ಮೃತ್ಯುವಿನ ನಂತರ ಮುಕ್ತವಾಗುವ ಪ್ರಾಣಶಕ್ತಿಯಿಂದಾಗಿ ಲಿಂಗದೇಹವು ಭೂಲೋಕದಿಂದ ವಿಶ್ವದಲ್ಲಿ ದೂರದವರೆಗೆ ಎಸೆಯಲ್ಪಡುತ್ತದೆ. ಒಂದು ಅಗ್ನಿಬಾಣವು (Rocket) ಉಪಗ್ರಹವನ್ನು ಅಂತರಿಕ್ಷದಲ್ಲಿ ಎಷ್ಟು ದೂರದವರೆಗೆ ಕೊಂಡೊಯ್ಯಬಹುದು ಎಂಬುದು ಆ ಉಪಗ್ರಹದ ತೂಕದ ಮೇಲೆ ಅವಲಂಬಿಸಿರುತ್ತದೆ. ಅದೇ ರೀತಿ ಶರೀರದಿಂದ ಹೊರಬೀಳುವ ಲಿಂಗದೇಹವು ವಿಶ್ವದಲ್ಲಿ ಎಷ್ಟು ದೂರದವರೆಗೆ ಹೋಗಬಹುದು ಎಂಬುದು ಆ ಲಿಂಗದೇಹದ ಭಾರದ ಮೇಲೆ ಅವಲಂಬಿಸಿರುತ್ತದೆ, ಅಂದರೆ ಅದರ ತಮೋಗುಣದ ಪ್ರಮಾಣದ ಮೇಲೆ (ಪಾಪ-ಪುಣ್ಯಗಳ ಮೇಲೆ) ಅವಲಂಬಿಸಿರುತ್ತದೆ. ತಮೋಗುಣದ ಪ್ರಮಾಣವು ಲಿಂಗದೇಹದಲ್ಲಿ ಹೆಚ್ಚಿಗಿದ್ದರೆ ಲಿಂಗದೇಹದ ಭಾರವು ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ಲಿಂಗದೇಹಕ್ಕೆ ಭುವರ್ಲೋಕದ ಆಚೆಗೆ ಹೋಗಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧವಾಗಿ ಲಿಂಗದೇಹದಲ್ಲಿ ತಮೋಗುಣದ ಪ್ರಮಾಣವು ಕಡಿಮೆಯಿದ್ದರೆ ಅದರ ಭಾರವು ಕಡಿಮೆಯಾಗಿ ಅದು ಸ್ವರ್ಗ, ಮಹಾ, ಜನ ಇತ್ಯಾದಿ ಲೋಕಗಳವರೆಗೆ ಹೋಗಬಹುದು.
ಈ. ವಾಸನಾದೇಹ ಮತ್ತು ಮನೋದೇಹ ಹಾಗೂ ಕಾರಣದೇಹ ಮತ್ತು ಮಹಾಕಾರಣದೇಹ ಇವು ಲಿಂಗದೇಹದ ಸುತ್ತಲೂ ಇರುತ್ತವೆ.

ಮೃತ್ಯುವಿನ ನಂತರ ನಾವು ಯಾವ ಲೋಕಕ್ಕೆ ಹೋಗುತ್ತೇವೆ ಎಂಬುದು ಈ ವಿಷಯಗಳ ಮೇಲೆ ಅವಲಂಬಿಸಿರುತ್ತದೆ
೧. ಚಿತ್ತದ ಮೇಲಿನ ಸಂಸ್ಕಾರಗಳು: ನಾವು ಯಾವ ರೀತಿಯ ಜೀವನವನ್ನು ನಡೆಸಿರುತ್ತೇವೆಯೋ ಅವುಗಳಿಗನುಸಾರ ನಮ್ಮ ಚಿತ್ತದ ಮೇಲೆ ಸಂಸ್ಕಾರಗಳು ನಿರ್ಮಾಣವಾಗಿರುತ್ತವೆ. ಅವುಗಳ ವಿಧಗಳು ಮತ್ತು ಪ್ರಮಾಣಗಳ ಮೇಲೆ ನಾವು ಯಾವ ಲೋಕಕ್ಕೆ ಹೋಗಬೇಕು ಎಂಬುದು ನಿರ್ಧರಿಸಲ್ಪಡುತ್ತದೆ.
೨. ಅಹಂ: ಇಲ್ಲಿ ನಾವು ‘ಅಹಂ’ ಈ ಶಬ್ದವನ್ನು ಪ್ರತಿದಿನ ಉಪಯೋಗಿಸುವ ‘ಕೇವಲ ತಮ್ಮ ವಿಚಾರವನ್ನು ಮಾಡುವುದು’ ಅಥವಾ ‘ಅಹಂಕಾರ’ ಈ ಅರ್ಥದಲ್ಲಿ ಉಪಯೋಗಿಸಿಲ್ಲ. ಅದನ್ನು ಇಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯೋಗಿಸಲಾಗಿದೆ. ‘ಅಹಂ’ ಎಂದರೆ ನಮ್ಮ ಸ್ಥೂಲದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ವಿವಿಧ ಸಂಸ್ಕಾರ ಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನನ್ನು ತಾನು ಇತರರಿಗಿಂತ ಮತ್ತು ಈಶ್ವರನಿಗಿಂತ ಬೇರೆ ಎಂದು ತಿಳಿಯುವುದು.
೩. ಕರ್ಮ: ಜೀವಂತವಿದ್ದಾಗ ನಾವು ಮಾಡಿದ ಕರ್ಮಗಳು
೪. ಸಾಧನೆ: ಜೀವಂತವಿದ್ದಾಗ ನಾವು ಮಾಡಿದ ಸಾಧನೆ, ಅದರ ತೀವ್ರತೆ ಮತ್ತು ವಿಧಗಳು
೫. ಮೃತ್ಯು: ನೈಸರ್ಗಿಕ (Natural) ಮತ್ತು ಶಾಂತರೀತಿಯಲ್ಲಿ ಅಥವಾ ಅಪಘಾತದಿಂದ ಅಥವಾ ತ್ರಾಸದಾಯಕ ಮರಣ
೬. ಪ್ರಾರಬ್ಧ

ಮೃತ್ಯುವಿನ ನಂತರ ವ್ಯಕ್ತಿಯ ಲಿಂಗದೇಹವು ಕೆಟ್ಟ ಶಕ್ತಿಯಾಗಿ ರೂಪಾಂತರಗೊಳ್ಳುವುದು
ಮೃತ್ಯುವಿನ ನಂತರ ಸರ್ವಸಾಮಾನ್ಯ ವ್ಯಕ್ತಿಗಳ ಲಿಂಗದೇಹಗಳು ಕೆಟ್ಟ ಶಕ್ತಿಗಳಾಗಿ ರೂಪಾಂತರವಾಗುವುದರ ಪ್ರಮಾಣವು ಬಹಳಷ್ಟು ಹೆಚ್ಚಿಗೆ ಇರುತ್ತದೆ.
೧. ತಮ್ಮ ಇಚ್ಛೆಗಳನ್ನು ಪೂರ್ತಿಗೊಳಿಸಲು ಕೆಟ್ಟ ಶಕ್ತಿಗಳು ಕೆಟ್ಟ ಕೃತಿಗಳನ್ನು ಮಾಡುತ್ತಾ ಹೋಗುತ್ತವೆ ಮತ್ತು ಇದರಿಂದ ಅವು ಹೆಚ್ಚೆಚ್ಚು ಕಪ್ಪಾಗುತ್ತಾ ಹೋಗುತ್ತವೆ.
೨. ಕೆಟ್ಟ ಶಕ್ತಿಗಳು ಕಪ್ಪು ಬಣ್ಣದ್ದಾಗಿರುತ್ತವೆ; ಏಕೆಂದರೆ ಅವು ಕಪ್ಪುಬಣ್ಣದ ತಮೋಗುಣದಿಂದ ತುಂಬಿಕೊಂಡಿರುತ್ತವೆ.
೩. ಕೆಟ್ಟ ಶಕ್ತಿಗಳ ಆತ್ಮವು ತಮೋಗುಣ ಮತ್ತು ಕಪ್ಪು ಶಕ್ತಿಯ ಆವರಣದಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತದೆ.

ಮೃತ್ಯುವಿನ ನಂತರ ವ್ಯಕ್ತಿಯ ಲಿಂಗದೇಹವು ಕೆಟ್ಟ ಶಕ್ತಿಯಾಗುವುದರ ಕಾರಣಗಳು
ಅ. ಮೃತ್ಯುವಿನ ಸಮಯದಲ್ಲಿ ವ್ಯಕ್ತಿಯ ಅನೇಕ ಇಚ್ಛೆಗಳು ಅತೃಪ್ತವಾಗಿರುವುದು. 
ಆ. ಮೃತ್ಯುವಿನ ಸಮಯದಲ್ಲಿ ವ್ಯಕ್ತಿಗೆ ಬಹಳ ಸಿಟ್ಟು ಬರುವುದು, ದ್ವೇಷ ಬರುವುದು ಮುಂತಾದ ದೋಷಗಳಿರುವುದು.
ಇ. ವ್ಯಕ್ತಿಯ ಮೇಲೆ ಅನೇಕ ಕೆಟ್ಟ ಸಂಸ್ಕಾರಗಳಾಗಿರುವುದು.
ಈ. ತುಂಬಾ ‘ಅಹಂಭಾವ’ ಇರುವುದು.
ಉ. ಜೀವಂತವಿರುವಾಗ ಇತರರಿಗೆ ಬಹಳಷ್ಟು ತೊಂದರೆಗಳನ್ನು ಕೊಟ್ಟಿರುವುದು. 
ಊ. ಈಶ್ವರಪ್ರಾಪ್ತಿಗಾಗಿ ಹಂತಹಂತವಾಗಿ ಮನಸ್ಸು ಮತ್ತು ಬುದ್ಧಿಯನ್ನು ತ್ಯಾಗ ಮಾಡಿ ಸಾಧನೆಯನ್ನು ಮಾಡದಿರುವುದು.

ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಕೆಟ್ಟ ಶಕ್ತಿಗಳು ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಲಿಂಗದೇಹಗಳನ್ನು ಕೆಟ್ಟ ಶಕ್ತಿಗಳನ್ನಾಗಿ ಪರಿವರ್ತಿಸುವುದು: ಯಾವುದಾದರೊಬ್ಬ ಒಳ್ಳೆಯ ವ್ಯಕ್ತಿಯು ಸಾಧನೆಯನ್ನು ಮಾಡದೇ ಇದ್ದರೆ (ಅವನಲ್ಲಿ ಆಧ್ಯಾತ್ಮಿಕ ಬಲವು ಇಲ್ಲದಿದ್ದರೆ) ಕೆಟ್ಟ ಶಕ್ತಿಯಾಗುವ ಸಾಧ್ಯತೆಯು ಬಹಳಷ್ಟು ಇರುತ್ತದೆ. ಏಕೆಂದರೆ ಮೃತ್ಯುವಿನ ನಂತರ ಇಂತಹ ಲಿಂಗದೇಹಗಳನ್ನು ಕೆಟ್ಟ ಶಕ್ತಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆ ಮತ್ತು ಅವುಗಳ ಮನಸ್ಸಿನ ವಿರುದ್ಧ ಕೆಟ್ಟ ಕೃತಿಗಳನ್ನು ಮಾಡಿಸಿಕೊಳ್ಳುತ್ತವೆ. ಸಮಯ ಕಳೆದಂತೆ ಒಳ್ಳೆಯ ವ್ಯಕ್ತಿಗಳ ಲಿಂಗದೇಹಗಳೂ ಕೆಟ್ಟ ಶಕ್ತಿಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಇತರರಿಗೆ ತೊಂದರೆಗಳನ್ನು ಕೊಟ್ಟು ಅಥವಾ ತಮ್ಮ ಇಚ್ಛೆಗಳನ್ನು ಪೂರ್ಣ ಮಾಡಿಕೊಂಡು ಸುಖ ಪಡೆಯುತ್ತವೆ.

ಕೆಟ್ಟ ಶಕ್ತಿಗಳ ವೈಶಿಷ್ಟ್ಯಗಳು
೧. ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿದ್ದು ಭುವರ್ಲೋಕ ಅಥವಾ ಸಪ್ತಪಾತಾಳದಲ್ಲಿ ಇರುತ್ತವೆ.
೨. ತಮ್ಮ ಇಚ್ಛೆಯಂತೆ ಅವು ಭುವರ್ಲೋಕ ಮತ್ತು ಸಪ್ತ ಪಾತಾಳಗಳಿಂದ (ಸೂಕ್ಷ್ಮಲೋಕದಿಂದ) ಭೂಲೋಕಕ್ಕೆ ಬರುತ್ತವೆ. ಆದುದರಿಂದ ಅವುಗಳ  ಅಸ್ತಿತ್ವವು ಭೂಲೋಕದಲ್ಲಿಯೂ ಇರುತ್ತದೆ.
೩. ಸ್ವರ್ಗ, ಮಹಾ, ಜನ, ತಪ, ಸತ್ಯ ಇತ್ಯಾದಿ ಉಚ್ಚಲೋಕಗಳಲ್ಲಿ  ಅವು ಇರುವುದಿಲ್ಲ.
೪. ಅವುಗಳ ಕಾಮವಾಸನೆ, ಸರಾಯಿ ಕುಡಿಯುವುದು, ಸೇಡು ತೀರಿಸುವುದು ಇತ್ಯಾದಿ ವಾಸನೆಗಳು ಅತೃಪ್ತವಾಗಿರುತ್ತವೆ.
೫. ಮಾನವರ ಮೇಲೆ ಅಥವಾ ಲಿಂಗದೇಹಗಳ ಮೇಲೆ ಹಿಡಿತವನ್ನು ಸಾಧಿಸಿ ಅವರಿಗೆ ತೊಂದರೆಗಳನ್ನು ಕೊಟ್ಟು ಅವು ಸುಖ ಪಡೆಯುತ್ತವೆ.
೬. ಸಮಾಜದಲ್ಲಿ ಅಧರ್ಮವನ್ನು ಹೆಚ್ಚಿಸುವುದೇ ಅವುಗಳ ಉದ್ದೇಶವಾಗಿರುತ್ತದೆ.

ಸಾಧಕರ ಲಿಂಗದೇಹಗಳು ಮತ್ತು ಇತರರ ಲಿಂಗದೇಹಗಳು: ಸಾಧನೆಯನ್ನು ಮಾಡಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು (ಟಿಪ್ಪಣಿ ೧) ತಲುಪಿದ ಮತ್ತು ಕಡಿಮೆ ಅಹಂಭಾವವಿರುವ ವ್ಯಕ್ತಿಗಳ ಲಿಂಗದೇಹಗಳು ಮೃತ್ಯುವಿನ ನಂತರ ಶ್ರೇಷ್ಠ ಸ್ವರ್ಗಲೋಕಕ್ಕೆ ಅಥವಾ ಅದರ ಮುಂದಿನ ಉಚ್ಚಲೋಕಗಳಿಗೆ ಹೋಗುತ್ತವೆ. ಆದುದರಿಂದ ಅವು ಕೆಟ್ಟ ಶಕ್ತಿಗಳಾಗುವುದಿಲ್ಲ. ಮೃತ್ಯುವಿನ ನಂತರ ಇತರ ಎಲ್ಲ ವ್ಯಕ್ತಿಗಳ ಲಿಂಗದೇಹಗಳು ಭುವರ್ಲೋಕಕ್ಕೆ ಅಥವಾ ಪಾತಾಳಕ್ಕೆ ಹೋಗುತ್ತವೆ. ಭುವರ್ಲೋಕದಲ್ಲಿನ ಲಿಂಗದೇಹಗಳು ಕೆಟ್ಟ ಶಕ್ತಿಗಳಾಗಿ ರೂಪಾಂತರಗೊಳ್ಳುವ ಸಾಧ್ಯತೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪಾತಾಳದಲ್ಲಿನ ಎಲ್ಲ ಲಿಂಗದೇಹಗಳು ಕೆಟ್ಟ ಶಕ್ತಿಗಳೇ ಆಗಿರುತ್ತವೆ.

ಟಿಪ್ಪಣಿ ೧ - ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿರುತ್ತವೆ. ವ್ಯಕ್ತಿಯು ಸಾಧನೆ, ಅಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನವನ್ನು ಪ್ರಾರಂಭಿಸಿದ ನಂತರ ಅವನಲ್ಲಿನ ರಜ-ತಮ ಗುಣಗಳ ಪ್ರಮಾಣವು ಕಡಿಮೆಯಾಗತೊಡಗುತ್ತದೆ ಮತ್ತು ಸತ್ತ್ವಗುಣದ ಪ್ರಮಾಣ ಹೆಚ್ಚಾಗತೊಡಗುತ್ತದೆ. ಸತ್ತ್ವಗುಣದ ಪ್ರಮಾಣದ ಮೇಲೆ ಆಧ್ಯಾತ್ಮಿಕ ಮಟ್ಟವು ಅವಲಂಬಿಸಿರುತ್ತದೆ. ಸತ್ತ್ವಗುಣದ ಪ್ರಮಾಣವು ಎಷ್ಟು ಹೆಚ್ಚಿರುತ್ತದೆಯೋ, ಆಧ್ಯಾತ್ಮಿಕ ಮಟ್ಟವು ಅಷ್ಟೇ ಹೆಚ್ಚಿರುತ್ತದೆ. ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೨೦ರಷ್ಟಿರುತ್ತದೆ. ಸಾಧನೆ ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವ್ಯಕ್ತಿಗೆ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ. ಶೇ.೬೦ ಮತ್ತು ಅದರ ಮುಂದಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ವ್ಯಕ್ತಿಗೆ ಮೃತ್ಯುವಿನ ನಂತರ ಪುನರ್ಜನ್ಮವಿರುವುದಿಲ್ಲ. ಇಂತಹ ವ್ಯಕ್ತಿಯು ಮುಂದಿನ ಸಾಧನೆಗಾಗಿ ಅಥವಾ ಮಾನವಜಾತಿಯ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯಲ್ಲಿ ಜನಿಸಬಲ್ಲನು. ಶೇ.೭೦ರ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳನ್ನು ಸಂತರೆಂದು ಪರಿಗಣಿಸಲಾಗುತ್ತದೆ. ಅವರಿಗೆ ಜನಲೋಕ ಪ್ರಾಪ್ತವಾಗುತ್ತದೆ. ಮೋಕ್ಷಕ್ಕೆ ಹೋದ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೧೦೦ರಷ್ಟಿರುತ್ತದೆ ಮತ್ತು ಆಗ ಅವನು ತ್ರಿಗುಣಾತೀತನಾಗುತ್ತಾನೆ.

ಮೃತ್ಯುವಿನ ನಂತರ ನಾವು ಕೆಟ್ಟ ಶಕ್ತಿಗಳಾಗಬಾರದೆಂದು ಏನು ಮಾಡಬೇಕು?
೧. ಈಶ್ವರಪ್ರಾಪ್ತಿಯ ಧ್ಯೇಯವನ್ನಿಟ್ಟುಕೊಂಡು ಸಾಧನೆಯನ್ನು ಮಾಡಬೇಕು.
೨. ಚಿತ್ತದ ಮೇಲೆ ಆದಷ್ಟು ಕಡಿಮೆ ಸಂಸ್ಕಾರಗಳಾಗುವಂತೆ ನೋಡಿಕೊಳ್ಳಬೇಕು.
೩. ಸ್ವಭಾವದೋಷ ಮತ್ತು ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಬೇಕು.
೪. ಸಾಧನೆಯನ್ನು ಮಾಡಿ ಕನಿಷ್ಟ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬೇಕು.

ಇಂತಹ ವ್ಯಕ್ತಿಗಳ ಲಿಂಗದೇಹಗಳು ಮೃತ್ಯುವಿನ ನಂತರ ಸ್ವರ್ಗಲೋಕ ಮತ್ತು ಅದರ ಮುಂದಿನ ಉಚ್ಚಲೋಕಗಳಿಗೆ ಹೋಗುತ್ತವೆ. ಆಧ್ಯಾತ್ಮಿಕ ಬಲ ಮತ್ತು ಈಶ್ವರನ ಸಂರಕ್ಷಣೆಯಿಂದಾಗಿ ಕೆಟ್ಟ ಶಕ್ತಿಗಳಿಗೆ ಇಂತಹ ವ್ಯಕ್ತಿಗಳ ಲಿಂಗದೇಹಗಳ ಮೇಲೆ ಹಿಡಿತವನ್ನು ಸಾಧಿಸಲು ಆಗುವುದಿಲ್ಲ.

ಆಧ್ಯಾತ್ಮಿಕ ಮಟ್ಟ ಮತ್ತು ಕೆಟ್ಟ ಶಕ್ತಿಗಳು
ಉಚ್ಚಮಟ್ಟದ ಕೆಟ್ಟ ಶಕ್ತಿಗಳಲ್ಲಿ ಬಹಳಷ್ಟು ಆಧ್ಯಾತ್ಮಿಕ ಶಕ್ತಿ ಇರುತ್ತದೆ. ಅನೇಕ ವರ್ಷಗಳ ಕಾಲ ತೀವ್ರ ಸಾಧನೆ ಮತ್ತು ತಪಶ್ಚರ್ಯವನ್ನು ಮಾಡಿ ಅವು ಈ ಶಕ್ತಿಯನ್ನು ಪ್ರಾಪ್ತಮಾಡಿಕೊಂಡಿರುತ್ತವೆ. ಆಧ್ಯಾತ್ಮಿಕ ಶಕ್ತಿಯು ಹೆಚ್ಚಿಗಿದ್ದು ಅವು ಕೆಟ್ಟ ಶಕ್ತಿಗಳಾಗಿವೆ ಎಂದು ಹೇಳಿದರೆ ಅದು ಸತ್ಯವೆನಿಸುವುದಿಲ್ಲ. ಆದರೆ ಇದು ಸತ್ಯವಾಗಿದೆ. ಶೇ.೭೦ರ ಮಟ್ಟದ ಸಂತರ ಮತ್ತು ೫ನೇ ಪಾತಾಳದ ಮಾಂತ್ರಿಕರ ಆಧ್ಯಾತ್ಮಿಕ ಶಕ್ತಿಯು ಒಂದೇ ಆಗಿರುತ್ತದೆ.
ಶೇ. ೭೦ ರಷ್ಟು ಮಟ್ಟದ ಸಂತರ ಮತ್ತು ೫ ನೇ ಪಾತಾಳದ ಮಾಂತ್ರಿಕರ ನಡುವಿನ ವ್ಯತ್ಯಾಸವನ್ನು ಕೆಳಗಿನ ಕೋಷ್ಟಕದಲ್ಲಿ ಸ್ಪಷ್ಟಪಡಿಸಲಾಗಿದೆ.


ಕೆಟ್ಟ ಶಕ್ತಿಗಳು ತಮ್ಮ ಇಚ್ಛೆಯಂತೆ ಸೂಕ್ಷ್ಮಲೋಕಗಳಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು
ಅ. ಕೆಟ್ಟ ಶಕ್ತಿಗಳಿಗೆ ಸ್ಥೂಲದೇಹವು ಇಲ್ಲದಿರುವುದರಿಂದ, ಭೂಲೋಕದಲ್ಲಿ ನಮಗೆ ಅತೀದೂರವಾಗಿರುವ ಅಂತರಗಳನ್ನು ಅವು ಕ್ಷಣಾರ್ಧದಲ್ಲಿ ಕ್ರಮಿಸಬಹುದು.
ಆ. ಭೂಲೋಕ ಮತ್ತು ಇತರ ಸೂಕ್ಷ್ಮಲೋಕಗಳ ನಡುವಿನ ಅತಿ ದೂರದ ಅಂತರವನ್ನೂ ಸಹ ಅವು ಕೆಲವೇ ಸೆಕೆಂಡುಗಳಲ್ಲಿ ಕ್ರಮಿಸಬಹುದಾಗಿದೆ.
ಇ. ಕೆಟ್ಟ ಶಕ್ತಿಗಳು ತಾವು ನೆಲೆಸಿರುವ ಸೂಕ್ಷ್ಮಲೋಕಗಳಿಗಿಂತ (ಬ್ರಹ್ಮಾಂಡದಲ್ಲಿನ ಸೂಕ್ಷ್ಮಲೋಕಗಳು) ಕಡಿಮೆ ಕ್ರಮಾಂಕದ ಸೂಕ್ಷ್ಮ ಅಥವಾ ಸ್ಥೂಲ ಲೋಕದವರೆಗೆ (ಭೂಲೋಕ) ತಮ್ಮ ಇಚ್ಛೆಯಂತೆ ಹೋಗಬಹುದು. ಉದಾ. ಮೂರನೆಯ ಪಾತಾಳದ ಕೆಟ್ಟ ಶಕ್ತಿಗಳು ಅತ್ಯಂತ ಸಹಜವಾಗಿ ಎರಡನೆಯ ಮತ್ತು ಮೊದಲನೆಯ ಪಾತಾಳ ಹಾಗೆಯೇ ಭುರ್ವರ್ಲೋಕ ಮತ್ತು ಭೂಲೋಕಗಳಿಗೆ ಹೋಗಬಹುದು.

ಕೆಟ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಮಾಡಬೇಕಾದ ಉಪಾಯಗಳು
ನಾವು ಕೆಟ್ಟ ಶಕ್ತಿಗಳ ವಿಷಯಗಳಿಂದ ದೂರವಿದ್ದರೆ ನಮಗೆ ಕೆಟ್ಟ ಶಕ್ತಿಗಳ ತೊಂದರೆಯೇ ಆಗುವುದಿಲ್ಲ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಕೆಟ್ಟ ಶಕ್ತಿಗಳ ಅಸ್ತಿತ್ವದ ಬಗ್ಗೆ ಮತ್ತು ‘ಅವುಗಳಿಂದ ರಕ್ಷಣೆಯನ್ನು ಪಡೆಯುವುದರ’ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕವಾಗಿದೆ. ಇದರ ಬಗೆಗಿನ ಅಜ್ಞಾನದಿಂದ ಅಥವಾ ಉಷ್ಟ್ರಪಕ್ಷಿಯಂತಹ ವೃತ್ತಿಯಿಂದ ಕೆಟ್ಟ ಶಕ್ತಿಗಳಿಂದ ನಮಗೆ ಹಾನಿಯಾಗುತ್ತದೆ. ಅಂದರೆ ‘ಕೆಟ್ಟ ಶಕ್ತಿಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದರ ಮಾಹಿತಿ ಇಲ್ಲದಿರುವುದರಿಂದ ಮತ್ತು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನೂ ಮಾಡದಿರುವುದರಿಂದ ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗವನ್ನು ಪ್ರವೇಶಿಸುವ ಮೊದಲು ‘ನನ್ನ ರಕ್ಷಣೆಯಾಗಲಿ’ ಎಂದು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ಸತತ ನಾಮಜಪ ಮಾಡುತ್ತಿದ್ದರೆ ನಮ್ಮ ಸುತ್ತಲೂ ಈಶ್ವರನ ರಕ್ಷಾಕವಚವು ನಿರ್ಮಾಣವಾಗುತ್ತದೆ.

ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಮಾಡಬೇಕಾದ ಆಧ್ಯಾತ್ಮಿಕ ಪರಿಹಾರೋಪಾಯಗಳು ಮತ್ತು ನಾಮಜಪದ ಬಗ್ಗೆ ಇದೇ ಬ್ಲಾಗ್‌ನ ವಿವಿಧ ಅಂಕಣಗಳಲ್ಲಿ ಓದಿ ಮತ್ತು ಅದೇ ರೀತಿ ಸಾಧನೆಯನ್ನು ಮಾಡಿ.

ಸಂಬಂಧಿತ ವಿಷಯಗಳು
ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು
ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

ಆಧ್ಯಾತ್ಮಿಕ ದೃಷ್ಟಿಕೋನ
ಸನಾತನ ಸಂಸ್ಥೆಯ ಆಧ್ಯಾತ್ಮಿಕ ಸಂಶೋಧನೆಗಳ ಮೇಲಾಧಾರಿತ 'spiritualresearchfoundation.org' ಈ ಸಂಕೇತಸ್ಥಳದಲ್ಲಿ ಜೀವನದ ಅನೇಕ ಅಂಗಗಳ ಮತ್ತು ಸಮಸ್ಯೆಗಳ ಬಗ್ಗೆ ಸನಾತನವು ನಡೆಸಿದ ಆಧ್ಯಾತ್ಮಿಕ ಸಂಶೋಧನೆಗಳ ಸಂದರ್ಭದಲ್ಲಿನ ಮಾಹಿತಿಯನ್ನು ನೀಡಲಾಗುತ್ತಿದೆ. ಅದರಲ್ಲಿನ ಒಂದು ಅಂಕಣವೆಂದರೆ ‘`Spiritual causes of difficulties. ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ.೮೦ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಪ್ರಸ್ತುತ ಅಂಕಣದಲ್ಲಿ ಕೆಟ್ಟ ಶಕ್ತಿಗಳ ಬಗೆಗಿನ ಮಾಹಿತಿಯನ್ನು ನೀಡುತ್ತಿದ್ದೇವೆ

‘ಸ್ಲೀಪ್ ಪ್ಯಾರಲಿಸಿಸ್’

ಆಧ್ಯಾತ್ಮಿಕ ಸಂಶೋಧನೆ
ಸನಾತನವು ಮಾಡಿದ ಆಧ್ಯಾತ್ಮಿಕ ಸಂಶೋಧನೆಗಳ ಮೇಲೆ ಆಧಾರಿತ 'Spiritual Science Research foundation' ಈ ಸಂಸ್ಥೆಯ ಆಸ್ಟ್ರೇಲಿಯಾದಲ್ಲಿನ ಸಂಕೇತಸ್ಥಳದಲ್ಲಿ ಜೀವನದ ಅನೇಕ ಅಂಗಗಳ ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಅದರಲ್ಲಿನ ಒಂದು ಅಂಕಣವೆಂದರೆ 'Spiritual causes of difficulties' ಅಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. 80 ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಕೆಲವೊಮ್ಮೆ ನಮಗಾಗುವ ಶಾರೀರಿಕ ವ್ಯಾಧಿಗಳ ಮೂಲ ಕಾರಣವು ಕೆಟ್ಟ ಶಕ್ತಿಗಳಾಗಿರುತ್ತವೆ. 'Spiritual Research in Physical health' ಅಂದರೆ ‘ಆರೋಗ್ಯಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಸಂಶೋಧನೆ’ ಈ ವಿಷಯಕ್ಕೆ ಸಂಬಂಧಿಸಿದ ‘ಶರೀರದ ಚಲನವಲನ ಮಾಡಲು ಆಗದಿರುವುದು’ (ಸ್ಲೀಪ್ ಪ್ಯಾರಾಲಿಸಿಸ್) ಇದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ. 'Spiritual Science Research foundation' (www.spiritualresearchfoundation.org) ಇವರ ಸೌಜನ್ಯದಿಂದ ಈ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ನಿದ್ದೆಯಿಂದ ಎಚ್ಚರವಾದಾಗ ಶರೀರದ ಚಲನವಲನ ಮಾಡಲು ಆಗದಿರುವುದು
‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರದ ಲಕ್ಷಣಗಳು
ಕೆಲವೊಮ್ಮೆ ನಡುರಾತ್ರಿಯಲ್ಲಿ ನಾವು ನಿದ್ದೆಯಲ್ಲಿರುವಾಗ ಆಕಸ್ಮಿಕವಾಗಿ ಎಚ್ಚರಗೊಳ್ಳುತ್ತೇವೆ ಮತ್ತು ಆಗ ನಮಗೆ ನಮ್ಮ ಶರೀರದ ಯಾವುದೇ ಭಾಗವನ್ನು ಅಲುಗಾಡಿಸಲು ಆಗುವುದಿಲ್ಲ. ಇಂತಹ ಪ್ರಸಂಗಗಳನ್ನು ಬಹಳಷ್ಟು ಜನರು ಅನುಭವಿಸಿರುತ್ತಾರೆ. ಇಂತಹ ಸಮಯದಲ್ಲಿ ನಾವು ಸಂಪೂರ್ಣ ಎಚ್ಚರವಿದ್ದರೂ ಮತ್ತು ನಮ್ಮ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವಿದ್ದರೂ ಸಹ ನಮಗೆ ಅಲುಗಾಡಲು ಆಗುವುದಿಲ್ಲ. ಇಂತಹ ಸಮಯದಲ್ಲಿ ನಮ್ಮ ಮೇಲೆ ಅಥವಾ ನಮ್ಮ ಕೋಣೆಯಲ್ಲಿ ಯಾರಾದರೂ ಇದ್ದಾರೆ ಎಂದು ಅನಿಸುತ್ತದೆ. ಇಂತಹ ಅನುಭವಗಳು ಅತ್ಯಂತ ಭಯಾನಕವಾಗಿದ್ದು ಜನರು ಬಹಳಷ್ಟು ಹೆದರುತ್ತಾರೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ಸ್ಲೀಪ್ ಪ್ಯಾರಾಲಿಸಿಸ್’ ಅಥವಾ ‘ಶರೀರದ ಚಲನವಲನ ಮಾಡಲು ಆಗದಿರುವುದು’ ಎಂದು ಹೇಳುತ್ತಾರೆ.

'ಹಗ್' ಪ್ರಿಯರೇ, ಎಚ್ಚರೆಚ್ಚರ!


ಕರ್ನಾಟಕದ ಒಂದು ಕನ್ನಡ ದೈನಿಕದ ಪುರವಣಿಯಲ್ಲಿ ’ಹಗ್ ಜಮಾನಾ!’ ಎಂಬ ಲೇಖನ ಪ್ರಕಟವಾಗಿದೆ. ಅದರಲ್ಲಿ ಈ ಆಧುನಿಕ ಯುಗಕ್ಕೆ ಸಂಬಂಧಿಸಿದಂತೆ ’ಹಗ್ಗಿಂಗ್’ (ಅಪ್ಪಿಕೊಳ್ಳುವಿಕೆ) ಬಗೆಗಿನ ವಿಚಾರಗಳೊಂದಿಗೆ ’ಹಗ್ಗಿಂಗ್’ನಿಂದ ಪ್ರಯೋಜನವೂ ಇದೆ ಎಂದು ಲೇಖಕಿ ಬರೆದಿದ್ದಾರೆ. ಅಲ್ಲದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾರನ್ನಾದರೂ ಬರಮಾಡಿಕೊಳ್ಳುವಾಗ ಅಥವಾ ಬೀಳ್ಕೊಡುವಾಗ ನಮಸ್ಕಾರ ಎನ್ನುವ ಪದ್ಧತಿ ಇರುವುದರಿಂದ ತುಂಬಾ ಜನರು ’ಹಗ್’ ಬಗ್ಗೆ ಇನ್ನೂ ತಿಳಿದುಕೊಂಡಿಲ್ಲ ಅಷ್ಟೇ! ಎಂದೂ ಬರೆದಿದ್ದಾರೆ.

ಆದರೆ ’ಹಗ್’ನಿಂದಾಗುವ ಅಪಾರ ಹಾನಿಯ ಬಗ್ಗೆ ಯಾರೂ ತಿಳಿದುಕೊಂಡಿಲ್ಲ ಎನಿಸುತ್ತದೆ. ’ಹಗ್ಗಿಂಗ್’ನಿಂದ ದೊರೆಯುವ ಪ್ರಯೋಜನಗಳ ಹಾಗೂ ಹಾನಿಯ ಬಗ್ಗೆ ಆಸ್ಟ್ರೇಲಿಯಾದ Spiritual Science Research Foundation (ಮುಂದೆ SSRF ಎಂದು ಕರೆಯಲಾಗುವ) ಆಧ್ಯಾತ್ಮಿಕ ವೈಜ್ಞಾನಿಕ ಸಂಶೋಧನಾ ಪ್ರತಿಷ್ಠಾನವು ಆಳವಾದ ಅನೇಕ ಸೂಕ್ಷ್ಮ ಪ್ರಯೋಗಗಳನ್ನು ಮಾಡಿ ಅತ್ಯಂತ ಉಪಯುಕ್ತವಾದ ಆದರೆ ಜನ ಸಾಮಾನ್ಯರ ಜ್ಞಾನಕ್ಕೆ ಸುಲಭವಾಗಿ ನಿಲುಕದ ವಿಶೇಷ ಮಾಹಿತಿಗಳನ್ನು ಹೊರಗೆಡಹಿದೆ. ಮಾಹಿತಿಗಳು ಈ ಪ್ರತಿಷ್ಠಾನದ ಅಂತರ್ಜಾಲದಲ್ಲಿ http://www.spiritualresearchfoundation.org/hugging-people  ಎಂಬ ಲಿಂಕ್‌ನಲ್ಲಿ ಲಭ್ಯವಿವೆ.  ಜನಸಾಮಾನ್ಯರ ತಿಳುವಳಿಕೆಗಾಗಿ ಅವುಗಳಿಂದ ಆಯ್ದ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ಒದಗಿಸಲಾಗಿದೆ.

ನಮಗರಿಯದ ಸೂಕ್ಷ್ಮ ಜಗತ್ತು

ಭೌತಿಕ ಪ್ರಪಂಚದಲ್ಲಿ ಕೋಟ್ಯವಧಿ  ಜೀವಿಗಳಿರುವಂತೆಯೇ ನಮಗರಿಯದ ಸೂಕ್ಷ್ಮ ಜಗತ್ತನಲ್ಲೂ ಕೂಡಾ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯ ದೈವಿಕ ಶಕ್ತಿಗಳೂ, ನಿರಂತರ ಆಧ್ಯಾತ್ಮಿಕ ಸಾಧನೆ ಮಾಡಿ ದೈವಿಕ ಶಕ್ತಿಯನ್ನು ಸಂಪಾದಿಸಿಕೊಳ್ಳದ ಜನಸಾಮಾನ್ಯರನ್ನು ತಮ್ಮ ಅಂಕೆಯಲ್ಲಿರಿಸಿಕೊಂಡು ಅವರ ಶರೀರವನ್ನು ಆಶ್ರಯಿಸಿಕೊಂಡು ಅವರ ಮೂಲಕ ತಮಗೆ ಹಿತವಾಗದ ಜೀವಗಳಿಗೆ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ನೀಡುವ ಅಥವಾ ತಮ್ಮ ದುಶ್ಚಟಗಳ ತೀಟೆ ತೀರಿಸಿಕೊಳ್ಳುವ ಅಸಂಖ್ಯಾತ ಅನಿಷ್ಟ ಶಕ್ತಿಗಳೂ ಇವೆ. ಅವುಗಳ ಚಿತಾವಣೆಯಿಂದಲೇ ಇಂದು ಅನೇಕ ಕೊಲೆ, ದರೋಡೆ, ಸಾಮೂಹಿಕ ಅತ್ಯಾಚಾರ, ಕಳವು, ಆತ್ಮಹತ್ಯೆ ಇಂತಹ ದುಷ್ಕೃತ್ಯಗಳು ಸಾರಾಸಗಟಾಗಿ ನಡೆಯುತ್ತಲಿವೆ. ಈ ಶಕ್ತಿಗಳಲ್ಲಿ ಪ್ರೇತ, ಪಿಶಾಚಿ, ಬೇತಾಳ, ರಾಕ್ಷಸ, ಮಾಂತ್ರಿಕ, ಮಾಟಗಾರ, ಮಾಟಗಾರ್ತಿ ಕರಿನಾಗ ಇತ್ಯಾದಿ ಬೇರೆ ಬೇರೆ ಸ್ತರದ ಹಲವು ಪ್ರಭೇದಗಳಿವೆ.

ಇವುಗಳು ನೀಡುವ ತೊಂದರೆಯ ಅನುಭವವು ಗ್ರಾಮೀಣ ಜನತೆಗೆ ಆಗಾಗ ಆಗುತ್ತಿರುತ್ತದೆ. ಪೇಟೆ ಪಟ್ಟಣಗಳ ನಾಗರಿಕರಿಗೂ ಅದರ ಅನುಭವವು ಆಗುತ್ತಿರುವುದಾದರೂ ವಿದ್ಯಾವಂತರೆನಿಸಿಕೊಂಡವರು ಅದನ್ನು ಮೂಢನಂಬಿಕೆ ಎಂದು ನಿರ್ಲಕ್ಷಿಸುತ್ತಾ ಉದಾಸೀನದಿಂದಿರುತ್ತಾರೆ. ಹಾಗೂ ಅವುಗಳಿಂದ ಬರುವ ತೊಂದರೆಗಳಿಗೆ ಆಧ್ಯಾತ್ಮಿಕ ಉಪಚಾರಗಳನ್ನು ಮಾಡಿಕೊಳ್ಳದೆ ಅಜ್ಞಾನದಿಂದ ಹಾಗೂ ಅಹಂಭಾವದಿಂದ ಸದಾ ಯಾತನೆ ಪಡುತ್ತಲೇ ಇರುತ್ತಾರೆ. ಇಂತಹ ಸೂಕ್ಷ್ಮ ಪ್ರಪಂಚದ ಅರಿವು ಕೇವಲ ಪಂಚ ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಹಾಗೂ ಮನಸ್ಸು ಮತ್ತು ಬುದ್ಧಿ ಇವುಗಳ ಮಿತಿಗಿಂತ ಆಚೆ ಇರುವ ಅತೀಂದ್ರಿಯ ಜ್ಞಾನ ಪಡೆದ ಸಂತ ಮಹಾತ್ಮರಿಗೆ ಹಾಗೂ ಉನ್ನತ ಸ್ತರದ ಕೆಲವು ಸಾಧಕರಿಗೆ ಮಾತ್ರ ಇರುತ್ತದೆ. SSRF ಸಂಸ್ಥೆಯಲ್ಲಿ ಇಂತಹ ಅತೀಂದ್ರಿಯ ಸೂಕ್ಷ್ಮ ಜ್ಞಾನವಿರುವ ವಿದೇಶೀ ಸಂತರು ಹಾಗೂ ಸಾಧಕರು ಇದ್ದು ಸೂಕ್ಷ್ಮ ಜಗತ್ತಿನ ಕುರಿತು ಸಂಶೋಧನೆಗಳಲ್ಲಿ ಸದಾ ನಿರತರಾಗಿ ಅಮೂಲ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಅನಿಷ್ಟ ಶಕ್ತಿಯ ಒಂದು ತ್ರಾಸದಾಯಕ ಅನುಭವ

    ಸನಾತನ ಸಂಸ್ಥೆಯ ಸಾಧಕನಾದ ನನ್ನ ಹಾಗೂ ನನ್ನ ಪತ್ನಿಯ ಅನುಭವಕ್ಕೆ ಬಂದ ಅನಿಷ್ಟ ಶಕ್ತಿಗಳ ತೊಂದರೆಯ ಅನುಭವದ ಒಂದು ಪ್ರಸಂಗವನ್ನು ಹೇಳಲಿಚ್ಛಿಸುತ್ತೇನೆ. ಒಮ್ಮೆ ಒಂದು ಆಧ್ಯಾತ್ಮಿಕ ಕಾರ್ಯಕ್ರಮದ ಕೊನೆಯಲ್ಲಿ ಓರ್ವ ತರುಣಿಗೆ ಒಮ್ಮಿಂದೊಮ್ಮೆಲೇ ಅತೀವ ತ್ರಾಸವಾಗತೊಡಗಿತು. ಆಕೆಗೆ ಕೆಲವು ಆಧ್ಯಾತ್ಮಿಕ ಉಪಚಾರಗಳನ್ನು ಮಾಡಿಯೂ ಆಕೆಯಲ್ಲಿ ಸುಧಾರಣೆ ಕಂಡು ಬರಲಿಲ್ಲ. ಅದಕ್ಕಾಗಿ ನಾನು ನನ್ನ ಪತ್ನಿಯಲ್ಲಿ ಆ ತರುಣಿಯ  ಕೈಹಿಡಿದುಕೊಂಡು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿ ಜಪ ಮಾಡಲು ಹೇಳಿದೆ. ಸ್ವಲ್ಪ ಹೊತ್ತಿನಲ್ಲಿ ಅದರಿಂದ ಆ ತರುಣಿ ಪೂರ್ತಿ ಸುಧಾರಿಸಿಕೊಂಡಳು. ಆದರೆ ನನ್ನ ಪತ್ನಿಗೆ ಅವಳಂತೆಯೇ ತ್ರಾಸವಾಗತೊಡಗಿ ಅವಳು ಮೊದಲಿನಂತಾಗಲು ಹಲವು ಆಧ್ಯಾತ್ಮಿಕ ಉಪಚಾರಗಳೊಂದಿಗೆ ಎರಡು ದಿನ ಬೇಕಾಯಿತು! ಇಲ್ಲಿ ಆ ತರುಣಿಗೆ ತ್ರಾಸ ನೀಡುತ್ತಿದ್ದ ಅನಿಷ್ಟ ಶಕ್ತಿಯು ಅವಳನ್ನು ಬಿಟ್ಟು ನನ್ನ ಪತ್ನಿಗೆ ತ್ರಾಸ ಕೊಡಲಾರಂಭಿಸಿತ್ತು! ಹಾಗಿದ್ದರೆ ಯಾತನೆ ಪಡುತ್ತಿದ್ದ ಆ ತರುಣಿಗೆ ಸಾಂತ್ವನ ನೀಡಲು ಸಾಧಕಿಯಲ್ಲದ ಇನ್ನೋರ್ವ ಮಹಿಳೆ ಸ್ಪರ್ಶಿಸಿದ್ದರೆ ಏನಾಗಬಹುದಿತ್ತು ಎಂಬುದನ್ನು ಯೋಚಿಸಿ!

’ಹಗ್ಗಿಂಗ್’ ಬಗ್ಗೆ SSRF ಏನು ಹೇಳುತ್ತದೆ?
  • ಜಗತ್ತಿನಾದ್ಯಂತ ’ಹಗ್ಗಿಂಗ್’ ಎಂಬುದು ಅಭಿನಂದನೆಯ, ಸದ್ಭಾವನೆಯ ಅಭಿವ್ಯಕ್ತಿಯ ಪ್ರತೀಕವೆಂದು ಹೇಳಲಾಗಿದೆ. ಆಯಾಯ ದೇಶದ ಸಂಸ್ಕೃತಿ, ಸಂದರ್ಭ ಹಾಗೂ ಸಂಬಂಧದ ನೆಲೆಯಲ್ಲಿ ’ಹಗ್ಗ್’ ಎಂಬುದು ಸಲಿಗೆಯ, ಪ್ರೇಮದ, ವಾತ್ಸಲ್ಯದ ಅಥವಾ ಮೈತ್ರಿಯ ಪ್ರತೀಕವಾಗಿದೆ. ಅಂತೆಯೇ ಒಬ್ಬನು ಮತ್ತೊಬ್ಬನಿಗೆ ಬೆಂಬಲ ಸೂಚಿಸಲು, ಸಮಾಧಾನ ನೀಡಲು ಅಥವಾ ದುಃಖೋಪಶಮನದ ಉದ್ದೇಶದಿಂದ ’ಹಗ್’ ಮಾಡಬಹುದು. ವಿಶೇಷವಾಗಿ ತಮ್ಮ ಪ್ರೀತಿ ಪಾತ್ರರನ್ನು ಆಲಂಗಿಸುವ ಹೆಚ್ಚಿನ ಮಂದಿಗೆ ಅದೊಂದು ಭಾವನಾತ್ಮಕ ಸ್ವಭಾವವೇ ಆಗಿದ್ದರೂ ಅದರಿಂದಾಗುವ ಅಪಾರ ಹಾನಿಯ ಬಗ್ಗೆ ಅವರಿಗೆ ಏನೇನೂ ತಿಳಿಯದು.
  • ’ಹಗ್’ನಿಂದ ಹೆಚ್ಚಿನ ಜನರು ಒಂದಲ್ಲೊಂದು ರೀತಿಯಲ್ಲಿ ಅಪಾರ ದೈಹಿಕ ಹಾಗೂ ಮಾನಸಿಕ ಹಾನಿಯನ್ನು ತಂದುಕೊಳ್ಳುತ್ತಿದ್ದಾರೆ ಎಂಬುದು SSRF ನ ಸೂಕ್ಷ್ಮ ಪ್ರಯೋಗಗಳಿಂದ, ಸಂಶೋಧನೆಗಳಿಂದ ಸಾಬೀತಾಗಿದೆ.
  • ಹಸ್ತ ಲಾಘವದಿಂದಾಗಿ, ಆಲಿಂಗನದಿಂದಾಗಿ ಚರ್ಮದ ಮಾಧ್ಯಮದಿಂದ ಪರಸ್ಪರರಲ್ಲಿ ಮನೆ ಮಾಡಿರುವ ಅನಿಷ್ಟ ಶಕ್ತಿಗಳು ಸುಲಭವಾಗಿ ವರ್ಗಾವಣೆ ಹೊಂದಬಲ್ಲವು. ಹಸ್ತದ ಚುಂಬನದಿಂದಾಗಿ ಅಥವಾ ಕೆನ್ನೆಗೆ ಮುತ್ತಿಕ್ಕುವುದರಿಂದ ಈ ಪ್ರಕ್ರಿಯೆಯು ಇನ್ನೂ ಜೋರಾಗಿ ಆಗಬಲ್ಲದು. ಅದರ ಚುಂಬನದಿಂದಂತೂ ಅನಿಷ್ಟ ಶಕ್ತಿಯ ವಿನಿಮಯವು ಅತೀ ಹೆಚ್ಚು ಪ್ರಮಾಣದಲ್ಲಿ ಜರಗಿ ತೊಂದರೆ ಹೆಚ್ಚುವುದು.

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಆಲಿಂಗಿಸುವುದರಿಂದಾಗುವ ಪರಿಣಾಮಗಳು
  • ಅನಿಷ್ಟ ಸೂಕ್ಷ್ಮ ಶಕ್ತಿಯ ನಿಯಂತ್ರಣದಲ್ಲಿರುವ ಓರ್ವ ವ್ಯಕ್ತಿಯೂ ಅಂತಹನೇ ಇನ್ನೊಬ್ಬನನ್ನು ಆಲಂಗಿಸಿದಾಗ ಜ್ಞಾನ ಶಕ್ತಿಯನ್ನು ಮಸುಕಾಗಿಸುವ ಗಾಢವಾದ ಕಪ್ಪು ಶಕ್ತಿಯ ನಿರ್ಮಾಣದಿಂದ ವಾತಾವರಣದಲ್ಲಿ ಸಹ ರಜ ತಮಗಳ ಆಧಿಕ್ಯದಿಂದ ಪ್ರತಿಕೂಲ ಪರಿಣಾಮ ಉಂಟಾಗುವುದು. ಅವರಿಬ್ಬರ ಅನಾಹತ ಚಕ್ರದ ಮೇಲೆ ಕಪ್ಪು ಶಕ್ತಿಯ ಸಂಗ್ರಹದಿಂದಾಗಿ ಅವರಿಗೆ ಹೆಚ್ಚಿನ ತ್ರಾಸ ಉಂಟಾಗುವುದು.
  • ಅಂತಹ ವ್ಯಕ್ತಿಯು ಇನ್ನೊಬ್ಬ ಜನಸಾಮಾನ್ಯನನ್ನು ಆಲಂಗಿಸಿದಾಗ ಎರಡನೇ ವ್ಯಕ್ತಿಯಲ್ಲಿ ಸುಲಭವಾಗಿ ತ್ರಾಸದಾಯಕ ವಾತಾವರಣ ಉಂಟಾಗಬಹುದು ಮತ್ತು ಎರಡನೇ ವ್ಯಕ್ತಿಯು ದೈಹಿಕ ಹಾಗೂ ಮಾನಸಿಕ ಆಘಾತಕ್ಕೊಳಗಾಗಬಹುದು.
  • ಅನಿಷ್ಟ ಶಕ್ತಿಯಿಂದ ತ್ರಾಸಕ್ಕೊಳಗಾದ ಅಂತಹದೇ ವ್ಯಕ್ತಿಯನ್ನು ಆಲಂಗಿಸಿದಾಗ ಕಪ್ಪು ಶಕ್ತಿಯ ಸಂಕ್ರಮಣದಿಂದ ಹಾಗೂ ಮಾನಸಿಕ ಕೋಶಗಳ ಘರ್ಷಣೆಯಿಂದಾಗಿ ಉಂಟಾಗುವ ತ್ರಾಸದಾಯಕ ರಜ ತಮಯುಕ್ತ ಲಹರಿಗಳಿಂದ ವಾತಾವರಣವೂ ಕೆಡಬಹುದು.
  • ಆಧ್ಯಾತ್ಮಿಕ ಉನ್ನತಿ ಹೊಂದಿ ಸಂತರಾದವರು ಹಾಗೂ ೬೦% ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚಿರುವ ಸಾಧಕರು ಸಾಮಾನ್ಯ ವ್ಯಕ್ತಿಗಳನ್ನು ಆಲಂಗಿಸಿದಾಗ ಇಂತಹ ತೊಂದರೆಗಳಾಗುವ ಬದಲಾಗಿ ಆಧ್ಯಾತ್ಮಿಕ ಉಪಚಾರ ದೊರೆತು ಜನ ಸಾಮಾನ್ಯರಿಗೆ ಸಾತ್ತ್ವಿಕ ಸುಖ ಸಿಗುವುದು. ಇದರ ಜ್ವಲಂತ ಉದಾಹರಣೆಯೆಂದರೆ ಅಮ್ಮ ಎಂದು ಖ್ಯಾತಿ ಪಡೆದ ಪರಮ ಪೂಜ್ಯ ಮಾತಾ ಅಮೃತಾನಂದಮಯೀ ದೇವಿಯವರು ಭಕ್ತರನ್ನು ಅಪ್ಪಿಕೊಂಡು ಸಾಂತ್ವನ ನೀಡುತ್ತಿರುವುದರ ಅನುಭವವನ್ನು ಲಕ್ಷೋಪಲಕ್ಷಮಂದಿ ಅನುಭವಿಸಿದ್ದಾರೆ.

SSRF ಪ್ರಕಟಿಸಿರುವ ಮೇಲಿನ ಲಿಂಕ್‌ನಲ್ಲಿರುವ ಸೂಕ್ಷ್ಮ ಚಿತ್ರವು ಅನಿಷ್ಟ ಶಕ್ತಿಯ ಹಿಡಿತದಲ್ಲಿರುವ ಓರ್ವ ಮಹಿಳೆಯು ಸಾಮಾನ್ಯ ಪುರುಷನನ್ನು ಆಲಂಗಿಸಿ ಆತನ ದೇಹದಲ್ಲಿನ ವಿವಿಧ ಸೂಕ್ಷ್ಮ ಚಕ್ರಗಳ ಮೇಲೆ ಗಾಢವಾದ ಕಪ್ಪು ಶಕ್ತಿಯನ್ನು ಪಸರಿಸಿ, ಆತನ ಸುತ್ತ ಮಾಯಾವೀ ಸ್ಪಂದನಗಳ ಕವಚವನ್ನು ನಿರ್ಮಿಸಿ ಮೋಹಿನೀ ಶಕ್ತಿಯನ್ನು ಬಳಸಿ ಅವನ ಮಾನಸಿಕ ಸಾಮ್ರಾಜ್ಯದ ಮೇಲೆ ತನ್ನ ಆಧಿಪತ್ಯವನ್ನು ಸ್ಥಾಪಿಸಿ ಆತನನ್ನು ಕೈ ವಶಮಾಡಿಕೊಳ್ಳುವುದನ್ನು ತೋರಿಸುತ್ತದೆ. ಬಹುಷಃ ಕೆಲವು ಮಹಿಳಾ ಗೂಢಚಾರಿಣಿಯರು ಶತ್ರು ದೇಶದೊಳಗೆ ನುಸುಳಿ, ಅಲ್ಲಿನ ಉನ್ನತ ಅಧಿಕಾರಸ್ಥರು ಹಾಗೂ ಸೇನಾಧಿಕಾರಿಗಳ ಬಳಿ ಸಾರಿ ಅವರ ದೇಹ ಸಂಪರ್ಕ ಪಡೆದು ಮಾಯಾವೀ ಸ್ಪಂದನಗಳಿಂದ ಅವರನ್ನು ಸಮ್ಮೋಹನಕ್ಕೊಳಪಡಿಸಿ ಭದ್ರತೆಯ ರಹಸ್ಯಗಳನ್ನೆಲ್ಲಾ ಬಯಲಿಗೆಳೆದು ಶತ್ರು ನಾಶಕ್ಕೆ ವೇದಿಕೆಯನ್ನೊದಗಿಸುವ ನೈಜ ಘಟನೆಗಳೂ ಇಂತಹ ಅನಿಷ್ಟ ಶಕ್ತಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ಇನ್ನೂ ಕೆಲವು ಮಾಹಿತಿಗಳು:
  • ಇಬ್ಬರು ವ್ಯಕ್ತಿಗಳು ಪರಸ್ಪರ ಆಲಂಗಿಸಿಕೊಂಡಾಗ ಅವರ ಮಿದುಳುಗಳ ಕೋಶಗಳ ನಡುವೆ ಉಂಟಾಗುವ ಘರ್ಷಣೆಯಿಂದ ನಿರ್ಮಾಣವಾಗುವ ತ್ರಾಸದಾಯಕ ಲಹರಿಗಳನ್ನು ಅನಿಷ್ಟ ಶಕ್ತಿಗಳು ಇತರರಿಗೆ ತೊಂದರೆ ಕೊಡಲು ಬಳಸಿಕೊಳ್ಳುವ ಸಾಧ್ಯತೆಯಿದೆ.
  • ಬೇರೆ ಬೇರೆ ಆಧ್ಯಾತ್ಮಿಕ ಸಾಧನಾ ಮಾರ್ಗಗಳ ಸಾಧಕರಲ್ಲಿನ ಸ್ಪಂದನಗಳು ಬೇರೆ ಬೇರೆ ರೀತಿಯದ್ದಾಗಿರುವುದರಿಂದ ಅವರ ಪರಸ್ಪರ ಆಲಿಂಗನದಿಂದಲೂ ತ್ರಾಸದಾಯಕ ವಾತಾವರಣ ನಿರ್ಮಾಣವಾಗಬಹುದು.
  • ಚಿಂತಾಕ್ರಾಂತನಾದ ಅಥವಾ ತೀರಾ ಕಾಯಿಲೆಯಿಂದ ಬಳಲುವ ವ್ಯಕ್ತಿಯು ತನಗೆ ತಿಳಿಯದೆಯೇ ಅನಿಷ್ಟ ಶಕ್ತಿಗಳನ್ನು ತನ್ನತ್ತ ಆಕರ್ಷಿಸುತ್ತಿರುವುದರಿಂದ ಅಂತಹವರನ್ನು ಸಾಂತ್ವನ ನೀಡುವುದಕ್ಕಾಗಿ ಸಾಮಾನ್ಯ ವ್ಯಕ್ತಿಯು ಆಲಂಗಿಸುವುದೂ ಅಪಾಯಕಾರಿಯೇ ಆಗಿದೆ.
  • ಮಕ್ಕಳ ಕಲ್ಯಾಣಕ್ಕಾಗಿ, ಅವರ ಹಿತಕ್ಕಾಗಿ ಹೆತ್ತವರು ಮಕ್ಕಳನ್ನು ಎತ್ತಿ ಅಪ್ಪಿಕೊಳ್ಳುವುದು, ಮುದ್ದಾಡುವುದು, ಮಕ್ಕಳು ಭಯಭೀತರಾದಾಗ ತಂದೆ ತಾಯಿಯನ್ನು ಅಪ್ಪಿಕೊಳ್ಳುವುದು ಸಹಜವಾದರೂ ಆಧ್ಯಾತ್ಮಿಕ ಸಾಧನೆ ಮಾಡದ ಹೊರತು ಸಾಮಾನ್ಯ ಪರಿಸ್ಥಿತಿಯಲ್ಲಿ ತಮ್ಮಲ್ಲಿನ ಅನಿಷ್ಟ ಶಕ್ತಿಗಳ ಪರಸ್ಪರ ವಿನಿಮಯಕ್ಕೆ ಅವರೂ ಅತೀತರಲ್ಲ. ಆದುದರಿಂದ ಇಂತಹ ಸಂದರ್ಭಗಳಲ್ಲಿ ಮುಂದೆ ಹೇಳಿದಂತಹ ಉಪಚಾರಗಳನ್ನು ಮಾಡಿಕೊಳ್ಳುವುದು ಅಗತ್ಯ.
  • ಹಸ್ತ ಲಾಘವವೂ ಆಲಿಂಗನದಲ್ಲಿರುವಷ್ಟು ಪ್ರಮಾಣದಲ್ಲಿ  ಅಲ್ಲವಾದರೂ ಅನಿಷ್ಟ ಶಕ್ತಿಗಳ ವಿನಿಮಯಕ್ಕೆ ಸಹಕಾರಿಯೇ ಆಗಿದೆ. ಆದುದರಿಂದ ಭಾರತೀಯ ಸಂಸ್ಕೃತಿಯಂತೆ ಗೌರವಪೂರ್ವಕವಾಗಿ ಎರಡೂ ಕೈ ಮುಗಿದು ತಲೆ ಬಾಗಿ ನಮಸ್ಕಾರ ಮಾಡುವುದು ಉತ್ತಮ ಸಂಸ್ಕಾರವಾಗಿದೆ.
  • ಇಷ್ಟೆಲ್ಲ ಅಪಾಯವಿದ್ದರೂ ಆಧುನಿಕ ಜಗತ್ತು ತನಗೆ ಸೂಕ್ಷ್ಮದ ತೊಂದರೆ ಇರಬಹುದು ಯಾ ಇದೆ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಸೂಕ್ಷ್ಮದ ತೊಂದರೆ ಏನೆಂದು ಗೊತ್ತಿದ್ದರೆ ತಾನೇ? ಅಲ್ಲದೆ ಇದು ತನ್ನ ಅಂತಸ್ತಿಗೆ ಒಂದು ಕಪ್ಪು ಚುಕ್ಕಿ ಎಂದು ಭಾವಿಸುತ್ತದೆ. ಆದರೂ ಸೂಕ್ಷ್ಮ ಜಗತ್ತು ಮಾಡುವುದನ್ನು ಮಾಡಿಯೇ ಬಿಡುತ್ತದೆ. ಅನುಭವಿಸುವುದು ಅವರವರ ಹಣೆಬರಹ ಆದುದರಿಂದ ಯಾವುದೇ ಕೆಲಸ ಮಾಡುವಾಗ ಅದರ ಸಾಧಕ ಬಾಧಕ ತಿಳಿದು ಮಾಡುವುದು ಮಾತ್ರ ಬುದ್ಧಿವಂತನ ಲಕ್ಷಣವೇ ಆಗಿದೆ.

ಪರಿಹಾರೋಪಾಯಗಳು

’ಹಗ್ಗಿಂಗ್’ ಮಾಡಲೇ ಬೇಕಾದಾಗ ಈ ಕ್ರಮಗಳನ್ನು ಅವಶ್ಯವಾಗಿ ಅನುಸರಿಸಿರಿ.
  • ’ಹಗ್ಗಿಂಗ್’ನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಿ.
  • ’ಹಗ್ಗಿಂಗ್’ನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗ ಎಂದು ತಿಳಿಯಬೇಡಿ. ಯಾಕೆಂದರೆ ಯಾರಲ್ಲಿ ಎಂತಹ ಅನಿಷ್ಟ ಶಕ್ತಿಯಿದೆಯೋ ಎಂದು ನಮಗೆ ತಿಳಿಯುವುದಿಲ್ಲವಲ್ಲ!
  • ನಿರಂತರ ನಿಮ್ಮ ಉಪಾಸ್ಯದೇವತೆಯ ನಾಮಸ್ಮರಣೆ ಮಾಡುವುದರಿಂದ ನಿಮ್ಮ ಸುತ್ತಲೂ ಅಭೇದ್ಯವಾದ ರಕ್ಷಾಕವಚ ನಿರ್ಮಾಣವಾಗಿ ಅದರಿಂದ ನಿಮ್ಮ ರಕ್ಷಣೆಯಾಗುತ್ತದೆ.
  • ಆಗಾಗ ದೇವರಿಗೆ ಪ್ರಾರ್ಥನೆ ಕೃತಜ್ಞತೆ ಸಲ್ಲಿಸುವುದರಿಂದಲೂ ನಮಗೆ ರಕ್ಷಣೆ ಸಿಗುತ್ತದೆ. ಇದರಿಂದ ನಮಗೆ ದೇವತೆಯ ಕೃಪೆಯುಂಟಾಗಿ ನಮ್ಮ ಜೀವನವು ಆನಂದಮಯವಾಗುತ್ತದೆ. (ಆನಂದವೆಂದರೆ ದುಃಖದ ಜೊತೆಯಿಲ್ಲದ, ನಿರಂತರವಾಗಿ ಸಿಗುವ ಅತ್ಯುಚ್ಚ ಮಟ್ಟದ ಸುಖವಾಗಿದೆ) ನಮ್ಮ ತೊಂದರೆಗಳು ಕಡಿಮೆಯಾಗುತ್ತವೆ. ಪ್ರಾರಬ್ಧವನ್ನು ಸಹಿಸಲು ಶಕ್ತಿಯೂ ದೊರಕುತ್ತದೆ.

ಉಪಸಂಹಾರ

    ’ಹಗ್ಗಿಂಗ್’ನಿಂದ ’ಹಗ್ ಜಮಾನಾ’ ಲೇಖನದಲ್ಲಿ ಹೇಳಿದ ಪ್ರಯೋಜನ ಪಡೆಯುವುದರ ಪ್ರತಿಯಾಗಿ ಅನವಶ್ಯಕ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ದೈಹಿಕ ತೊಂದರೆಗಳನ್ನು ಚಿಕಿತ್ಸೆಯಿಂದ ಪರಿಹರಿಸಿಕೊಳ್ಳಬಹುದು. ಮನಸ್ಸಿಗೆ ಆದ ಆಘಾತವು ಸುಲಭವಾಗಿ ಮಾಯಲಾರದು. ’ಹಗ್ಗಿಂಗ್’ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಆಲಿಂಗನಕ್ಕೆ, ಅಪ್ಪುಗೆಗೆ ತನ್ನದೇ ಆದ ಇತಿಮಿತಿಗಳಿವೆ. ಸ್ಥಳ ಕಾಲಗಳ ನಿಬಂಧನೆ ಇದೆ. ನಾವು ಸದಾಚಾರಿಗಳಾಗಿರೋಣ. ನಮ್ಮ ಗೌರವ ಅಂತಸ್ತುಗಳನ್ನು ಮೆರೆಸಲು ’ಹಗ್ಗಿಂಗ್’ ಒಂದು ಮಾಧ್ಯಮವಾಗದಿರಲಿ. ಸಿನೆಮಾ ಮಂದಿ ಮಾಡುವುದನ್ನೆಲ್ಲ ನಾವು ಸ್ಥಳ ಕಾಲ ಮಿತಿಯ ಪರಿಗಣನೆಯಿಲ್ಲದೆ ಮಾಡಲಾಗದು. ಅದು ಕಾನೂನು ಸಮ್ಮತವೂ ಅಲ್ಲ ಧರ್ಮ ಸಮ್ಮತವೂ ಅಲ್ಲ. ಕಾರ್ಯ ಸಾಧುವೂ ಅಲ್ಲ.  ಕೇವಲ ’ಹಗ್ಗಿಂಗ್’ಗೆ ಪ್ರೋತ್ಸಾಹಿಸುವುದೆಂದರೆ ಜನತೆಯನ್ನು ಅದರಲ್ಲೂ ವಿಶೇಷವಾಗಿ ಯುವ ಜನತೆಯನ್ನು ನರಕ ಕೂಪಕ್ಕೆ ತಳ್ಳಿದಂತೆಯೇ ಸರಿ. ಅಪಾರ ಭಕ್ತವೃಂದವನ್ನು ಹೊಂದಿದು, ನಶಿಸುತ್ತಿರುವ ಸನಾತನ ಧರ್ಮದ ಪುನರುತ್ಥಾನಕ್ಕೆ ಅವಿರತ ಶ್ರಮಿಸುತ್ತಿರುವ ಎಪ್ಪತ್ತೆರಡು ವಯಸ್ಸಿನ ವಯೋವೃದ್ಧರೂ, ಜ್ಞಾನ ವೃದ್ಧರೂ ಆಗಿರುವ ಪರಮ ಪೂಜ್ಯ ಆಸಾರಾಂ ಬಾಪೂರವರು ತನ್ನ ಆಶ್ರಮದಲ್ಲಿ ಬೆಳೆದಿದ್ದ ತನ್ನ ಮೊಮ್ಮಗಳ ಪ್ರಾಯದ ತರುಣಿಯ ಬೆನ್ನಿನ ಮೇಲೆ ವಾತ್ಸಲ್ಯದಿಂದ ಕೈಯಾಡಿಸಿದರೆ ಅದು ಧರ್ಮದ್ರೋಹಿಗಳ ದೃಷ್ಟಿಯಲ್ಲಿ ಅತ್ಯಾಚಾರವೆನಿಸಿ ಮಹಾನ್ ಸಂತರು ಕಂಬಿ ಎಣಿಸುವಂತೆ ಮಾಡುತ್ತದೆ. ಹೀಗಿರುವಾಗ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಸಭ್ಯತೆಯ ಎಲ್ಲೆ ಮೀರಿ ಹೆಣ್ಣು ಗಂಡುಗಳು ಪರಸ್ಪರ ಅಪ್ಪಿಕೊಳ್ಳಲು ಮುಂದಾದರೆ ಏನಾಗಬಹುದು?

ಮನವೆಂಬುದು ಮರ್ಕಟವೆಂಬ ಗಾದೆಯೇ ಇದೆಯಲ್ಲ!
ಮರ್ಕಟಸ್ಯ ಸುರಾಪಾನಂ
ಮಧ್ಯೇ ವೃಶ್ಚಿಕ ದಂಶನಂ
ತನ್ಮಧ್ಯೇ ಭೂತ ಸಂಚಾರೋ
ಯದ್ವಾ ತದ್ವಾ ಭವಿಷ್ಯತೀ
ಎಂಬಂತೆ ಆಗದಿರಲಿ ಎಂಬುದೇ ಈ ಲೇಖನದ ಆಶಯ. ಹೆಚ್ಚಿನ ಮಾಹಿತಿಗೆ ಓದುಗರು ಕೂಡಾ SSRF ಗೆ ಪ್ರಶ್ನೆ ಕೇಳಬಹುದು. ಎರಡು ದಿನಗಳಲ್ಲಿ ಉತ್ತರಿಸುವ ಭರವಸೆ ದೊರೆತಿದೆ.

ಲೇಖನವನ್ನು ಆಂಗ್ಲಭಾಷೆಯಲ್ಲಿ ಓದಲು, ಹಗ್‌ನಿಂದಾಗುವ ದುಷ್ಪರಿಣಾಮಗಳ ಬಗೆಗಿನ ಸೂಕ್ಷ್ಮಚಿತ್ರವನ್ನು ನೋಡಲು ಈ ಕೊಂಡಿಯನ್ನು ನೋಡಿ. - http://www.spiritualresearchfoundation.org/hugging-people

ಸಂಕಲನ: ಶ್ರೀ. ಬಿ. ರಾಮ ಭಟ್, ನಿವೃತ್ತ ಉಪ ತಹಶೀಲ್ದಾರರು ಮತ್ತು ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ, ದ.ಕ. ದೂರವಾಣಿ: 09481756028

© Sanatan Sanstha