ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?

ವ್ಯಕ್ತಿಯಲ್ಲಿನ ತ್ರಿಗುಣಗಳ (ಸತ್ತ್ವ, ರಜ, ತಮ) ಪ್ರಮಾಣವು ಅವನ ಪ್ರತಿಯೊಂದು ಜೀವಕೋಶದಲ್ಲಿ ಇರುತ್ತವೆ. ಜೀವಕೋಶದಲ್ಲಿನ ತ್ರಿಗುಣಗಳ ಮೇಲೆ ಆಗುವ ಪರಿಣಾಮವು ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮಾಂತ್ರಿಕರು ಈ ನ್ಯಾಯದ ಜಾಣತನವನ್ನು ಉಪಯೋಗಿಸಿಕೊಂಡು ವ್ಯಕ್ತಿಯ ಕೂದಲುಗಳ ಮೇಲೆ ಮಾಟವನ್ನು ಮಾಡುತ್ತಾರೆ ಮತ್ತು ಅದರಲ್ಲಿನ ತ್ರಿಗುಣಗಳ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡಿ ಅವುಗಳಲ್ಲಿ ಅಸಮತೋಲನವನ್ನು ನಿರ್ಮಿಸುತ್ತಾರೆ. ಅನಂತರ ಅಘೋರಿ ಮಂತ್ರವನ್ನು ಹೇಳಿ ಮತ್ತು ಅಘೋರಿ ವಿಧಿಯನ್ನು ಮಾಡಿ ಅಸಂತುಲಿತವಾದ ತ್ರಿಗುಣಗಳನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳುವುದು ಅವರಿಗೆ ಸುಲಭವಾಗುತ್ತದೆ. ಅವರು ಹಾಗೆ ಮಾಡಿ ಕೂದಲುಗಳ ಜೀವಕೋಶದಲ್ಲಿನ ತಮೋಗುಣದ ಪ್ರಮಾಣವನ್ನು ಹೆಚ್ಚಿಸುತ್ತಾರೆ. ತಮ್ಮ ಬಳಿಯಿರುವ ಕಪ್ಪು ಶಕ್ತಿಯನ್ನು ಕೂದಲುಗಳ ಜೀವಕೋಶದ ಮೇಲೆ ಬಿಟ್ಟು ತ್ರಿಗುಣಗಳ ಮೇಲೆ ಕಪ್ಪು ಶಕ್ತಿಯ ದಟ್ಟವಾದ ಆವರಣವನ್ನು ನಿರ್ಮಿಸುತ್ತಾರೆ ಮತ್ತು ಕೂದಲುಗಳಲ್ಲಿ ಕಪ್ಪು ಶಕ್ತಿಯ ಸ್ಥಾನಗಳನ್ನು ನಿರ್ಮಿಸುತ್ತಾರೆ. ಕೂದಲುಗಳಲ್ಲಿ ಹೆಚ್ಚಳವಾಗಿರುವ ತಮೋಗುಣದ ಕಡೆಗೆ ಕಪ್ಪು ಶಕ್ತಿಯ ಲಹರಿಗಳು ಸಹಜವಾಗಿ ಆಕರ್ಷಿತವಾಗುತ್ತವೆ. ಮಾಂತ್ರಿಕರು ಮಂತ್ರಸಹಿತ ಅಘೋರಿ ವಿಧಿಗಳನ್ನು ಮಾಡಿ ಕೂದಲುಗಳ ಜೀವಕೋಶಗಳಲ್ಲಿ ಸೂಕ್ಷ್ಮ-ಯಂತ್ರಗಳನ್ನು ಕೂರಿಸಿ ಸಂಕಲ್ಪದಿಂದ ಅವುಗಳನ್ನು ಕಾರ್ಯನಿರತಗೊಳಿಸುತ್ತಾರೆ.

ಕೂದಲು ಮತ್ತು ಉಗುರುಗಳು ಎಷ್ಟು ಪ್ರಮಾಣದಲ್ಲಿ ರಜ-ತಮಾತ್ಮಕ ಲಹರಿಗಳನ್ನು ಗ್ರಹಿಸುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಅವು ಪ್ರಕ್ಷೇಪಣೆಯನ್ನೂ ಮಾಡುತ್ತವೆ.

(ಈ ಅಸಮತೋಲನವಾದ ತ್ರಿಗುಣಗಳನ್ನು ಆಧ್ಯಾತ್ಮಿಕ ಸಾಧನೆಯಿಂದಲೇ ಸರಿಪಡಿಸಬಹುದು ಮತ್ತು ನಮ್ಮಲ್ಲಿ ಸತ್ತ್ವ ಗುಣವನ್ನೂ ಹೆಚ್ಚಿಸಿ ಎಲ್ಲ ಕೆಟ್ಟ ಶಕ್ತಿಗಳ ತೊಂದರೆಗಳಿಂದ ಬಿಡುಗಡೆಯಾಗಬಹುದು. ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸನಾತನ ಸಂಸ್ಥೆಯ ಸತ್ಸಂಗವನ್ನು ಸಂಪರ್ಕಿಸಿರಿ.)

ಮಾಂತ್ರಿಕರ ಅಘೋರಿ ಯಜ್ಞದಲ್ಲಿ ಇತರ ವಸ್ತುಗಳ ತುಲನೆಯಲ್ಲಿ ಕೂದಲುಗಳನ್ನು ಬಹಳಷ್ಟು ಪ್ರಮಾಣದಲ್ಲಿ ಉಪಯೋಗಿಸುವುದು: ಮಾಂತ್ರಿಕರು ಅಘೋರಿ ಯಜ್ಞದಲ್ಲಿ ಆಹುತಿಯ ಸಾಮಗ್ರಿಗಳೆಂದು ಮೂಳೆ, ತಲೆಬುರುಡೆ, ಉಗುರು, ರಕ್ತ, ಕೊಳೆತ ಮಾಂಸ, ದಂತಪಂಕ್ತಿ ಮತ್ತು ಕೂದಲುಗಳನ್ನು ಉಪಯೋಗಿಸುತ್ತಾರೆ. ಇತರ ಸಾಮಗ್ರಿಗಳಿಗಿಂತ ಕೂದಲು ಕ್ಷಣಮಾತ್ರದಲ್ಲಿ ಉರಿದು ತಾಮಸಿಕ ಆಕೃತಿಯನ್ನು ನಿರ್ಮಿಸುವ ಮತ್ತು ಪ್ರಚಂಡ ಪ್ರಮಾಣದಲ್ಲಿ ತಾಮಸಿಕ ಗಂಧ ಅಥವಾ ದುರ್ಗಂಧವನ್ನು ನಿರ್ಮಾಣ ಮಾಡುವುದರಿಂದ ವಾತಾವರಣದಲ್ಲಿನ ತಾಮಸಿಕ ಸ್ಪಂದನಗಳು ಯಜ್ಞದ ಕಡೆಗೆ ಆಕರ್ಷಿಸಲು ಸಹಾಯವಾಗುತ್ತದೆ. ಕೂದಲು ಉರಿದ ನಂತರ ಅವು ಬೂದಿಯಲ್ಲಿ ರೂಪಾಂತರವಾಗದೇ ಜಿಗುಟು ಆಕೃತಿಗಳು ನಿರ್ಮಾಣವಾಗುತ್ತವೆ. ಆದುದರಿಂದ ಮಾಂತ್ರಿಕರ ಅಘೋರಿ ಯಜ್ಞದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕೂದಲುಗಳನ್ನು ಉಪಯೋಗಿಸಲಾಗುತ್ತದೆ. 

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳ ಸಮಸ್ಯೆಗಳು ಮತ್ತು ಅದರ ಮೇಲಿನ ಉಪಾಯಗಳು’)

17 comments:

 1. thank u for u r information....Jai Shree Ram.

  ReplyDelete
 2. THANK U FOR U R INFORMATION.....JAI SREE RAM

  ReplyDelete
 3. ಗುರುಗಳೆ ನಮಸ್ಕಾರ. ನಮಗೆ ಮಾಟವನ್ನು ಮಾಡಿಸಿದ್ದಾರೆ ಎಂದು ಹೇಗೆ ತಿಳಿದುಕೊಳ್ಳಬೇಕು ? ಹಾಗೂ ಅಂಜನದ ಮುಖಾಂತರ ನಮ್ಮ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯುತ್ತಾರೆ ಎಂದು ದಯವಿಟ್ಟು ತಿಳಿಸಿ.

  ReplyDelete
 4. Thanks for valuable information.

  ReplyDelete
 5. Is there some high lights you can give about Aghori ?. Aghori's are hard to understand. I heard they can do some thing if they wish and change what Brahma has written i us.
  I know it is hard to write on them when their numbers are diminishiing. But, interesting read about Aghori and Suphis.

  ReplyDelete
 6. ಗುರುಗಳೆ ನಮಸ್ಕಾರ. ನಮಗೆ ಮಾಟವನ್ನು ಮಾಡಿಸಿದ್ದಾರೆ ಎಂದು ಹೇಗೆ ತಿಳಿದುಕೊಳ್ಳಬೇಕು ? ಹಾಗೂ ಅಂಜನದ ಮುಖಾಂತರ ನಮ್ಮ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯುತ್ತಾರೆ ಎಂದು ದಯವಿಟ್ಟು ತಿಳಿಸಿ.

  ReplyDelete
 7. GURUJI Namage yaude mata manthra thagadanthe yecchara vahisudu heage dayavittu uttharisi .

  ReplyDelete
 8. hellow dharmagrantha, can you please send me the article on why we should not cut the nails in the night

  ReplyDelete
  Replies
  1. http://dharmagranth.blogspot.in/2012/09/blog-post_18.html ಈ ಲಿಂಕ್‌ನಲ್ಲಿ ಕೂದಲಿನ ಬಗ್ಗೆ ಕೊಟ್ಟಿರುವ ವಿವರಣೆಗಳು ಉಗುರುಗಳಿಗೂ ಅನ್ವಯಿಸುತ್ತದೆ.

   Delete
 9. ಗುರುಗಳೆ ನಮಸ್ಕಾರ. ನಮಗೆ ಮಾಟವನ್ನು ಮಾಡಿಸಿದ್ದಾರೆ ಎಂದು ಹೇಗೆ ತಿಳಿದುಕೊಳ್ಳಬೇಕು ? ಹಾಗೂ ಅಂಜನದ ಮುಖಾಂತರ ನಮ್ಮ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯುತ್ತಾರೆ ಎಂದು ದಯವಿಟ್ಟು ತಿಳಿಸಿ.

  ReplyDelete

Note: only a member of this blog may post a comment.