Showing posts with label ಮಾರ್ಗದರ್ಶನ. Show all posts
Showing posts with label ಮಾರ್ಗದರ್ಶನ. Show all posts

ಶವವನ್ನು ಪಾರಂಪರಿಕ ಪದ್ಧತಿಯಿಂದ ದಹನಸಂಸ್ಕಾರ ಮಾಡದೆ ಸಿ.ಎನ್.ಜಿ. ಅಥವಾ ವಿದ್ಯುತ್ ಚಿತಾಗಾರವನ್ನು ಉಪಯೋಗಿಸುವುದು ಯೋಗ್ಯವೇ?

ಹಿಂದೂಗಳ ಧಾರ್ಮಿಕ ಪರಂಪರೆಗಳ ವಿಷಯದಲ್ಲಿ ತೀರ್ಪು ನೀಡುವಾಗ ನ್ಯಾಯಾಲಯವು ಅದರ ಹಿಂದಿನ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಬೇಕೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಶವವನ್ನು ಪಾರಂಪರಿಕ ಪದ್ಧತಿಯಿಂದ ದಹನಸಂಸ್ಕಾರ ಮಾಡದೆ ಸಿ.ಎನ್.ಜಿ. ಅಥವಾ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಿಂದೂಗಳು ಕಳೆದ ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆಯಿಂದ ಶವಸಂಸ್ಕಾರ ಮಾಡುತ್ತಿದ್ದಾರೆ; ಆದರೆ ಮಾಲಿನ್ಯದ ಸಮಸ್ಯೆ ಹಿಂದೆಂದೂ ನಿರ್ಮಾಣವಾಗಿಲ್ಲ. ಅದು ಕಳೆದ ೧೦೦ ವರ್ಷಗಳಲ್ಲಿ ನಿರ್ಮಾಣವಾಗಿದೆ, ಅಂದರೆ ಈ ಸಮಸ್ಯೆಯ ಮೂಲವು ಕಟ್ಟಿಗೆಯಿಂದ ಶವಸಂಸ್ಕಾರ ಮಾಡುವ ಹಿಂದೂಗಳ ಧರ್ಮಾಚರಣೆಯಲ್ಲಿರದೆ ಮಿತಿಮೀರಿದ ವಿಜ್ಞಾನದ ಉಪಯೋಗದಿಂದಾಗಿದೆ. ಹಿಂದೂ ಧರ್ಮದಲ್ಲಿನ ಶವಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನದಿಂದ ವಿಚಾರ ಮಾಡಿದರೆ ಕಟ್ಟಿಗೆಯ ಚಿತೆಯ ಮೇಲಿನ ದಹನಸಂಸ್ಕಾರವನ್ನಲ್ಲ, ಇನ್ನಿತರ ಘಟಕಗಳಿಂದ (ಔದ್ಯೋಗಿಕ ಪ್ರದೂಷಣೆ, ತ್ಯಾಜ್ಯ ನೀರು ಇತ್ಯಾದಿ) ಆಗುವ ಪ್ರದೂಷಣೆಯನ್ನು ನಿಯಂತ್ರಿಸುವುದು ಆವಶ್ಯಕವಾಗಿದೆ. ಹೀಗಾದರೆ ಹಿಂದೂಗಳಿಗೆ ಅವರ ಧರ್ಮಪರಂಪರೆಯನ್ನು ಪಾಲಿಸುವುದು ಸುಲಭವಾಗಬಹುದು.

೧. ಮೃತದೇಹಕ್ಕೆ ಅಗ್ನಿ ನೀಡುವುದರ ಹಿಂದಿನ ಶಾಸ್ತ್ರವೇನು?

ಮೃತದೇಹಕ್ಕೆ ಮಂತ್ರೋಚ್ಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡಿದ ನಂತರ ಮೃತದೇಹದಿಂದ ಗರಿಷ್ಠ  ಪ್ರಮಾಣದಲ್ಲಿ ಅಶುದ್ಧ ವಾಯು ಉತ್ಸರ್ಜಿತವಾಗಿ ಅದು ಅಗ್ನಿಯಲ್ಲಿ ವಿಘಟನೆಯಾಗುತ್ತದೆ. ಅಗ್ನಿಯು ತೇಜತತ್ತ್ವಕ್ಕೆ ಸಂಬಂಧಿಸಿದೆ, ಅಂತ್ಯವಿಧಿಯ ಸಮಯದಲ್ಲಿ ಮಾಡಿದ ಮಂತ್ರೋಚ್ಚಾರದಿಂದ ನಿರ್ಮಾಣವಾಗುವ ನಾದಶಕ್ತಿಯ ಆಧಾರದಲ್ಲಿ ಅಗ್ನಿಯಿಂದ ಪ್ರಕ್ಷೇಪಣೆಯಾಗುವ ಲಹರಿಗಳು ಗತಿಮಾನವಾಗುತ್ತವೆ. ಇದರಿಂದ ತೇಜತತ್ತ್ವಕ್ಕೆ ಆಕಾಶತತ್ತ್ವವು ಜೋಡಿಸಲ್ಪಟ್ಟು ಉತ್ಪನ್ನವಾಗುವ ಸಂಯುಕ್ತ ಲಹರಿಗಳು ಮೃತದೇಹದ ಸುತ್ತಲೂ ತಮ್ಮ ಅಭೇದ್ಯವಾದ ಸೂಕ್ಷ ್ಮ ಕವಚವನ್ನು ನಿರ್ಮಾಣ ಮಾಡುತ್ತವೆ. ಇದರಿಂದ ಲಿಂಗದೇಹವು ವಾತಾವರಣ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವಾಗಲೇ ಅದಕ್ಕೆ ಕೆಟ್ಟ ಶಕ್ತಿಯಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ ಹಾಗೂ ಸಂಯುಕ್ತ ಲಹರಿಗಳಿಂದ ಸೂಕ ಇಂಧನವು ನಿರ್ಮಾಣವಾಗಿ ಲಿಂಗದೇಹಕ್ಕೆ ಅಲ್ಪಾವಧಿಯಲ್ಲಿ ಪೃಥ್ವಿಯ ವಾತಾವರಣ ಕಕ್ಷೆಯನ್ನು ಭೇದಿಸಿ ಮುಂದೆ ಹೋಗಲು ಸಾಧ್ಯವಾಗುತ್ತದೆ. ಮೃತ ವ್ಯಕ್ತಿಯನ್ನು ಹೂಳುವುದು ಅಥವಾ ಇನ್ನಿತರ ಮಾರ್ಗಗಳನ್ನು ಅವಲಂಬಿಸುವುದಕ್ಕಿಂತ ಅದನ್ನು ದಹನ ಮಾಡಿದರೆ ಆ ಜೀವಕ್ಕೆ ಕೆಟ್ಟ ಶಕ್ತಿಯ ತೊಂದರೆಯಾಗುವುದಿಲ್ಲ. ಅದರ ಮುಂದಿನ ಪ್ರವಾಸಕ್ಕೂ ದಹನಸಂಸ್ಕಾರವು ಪೂರಕವಾಗಿರುತ್ತದೆ; ಆದ್ದರಿಂದ ಮಂತ್ರೋಪಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ನೀಡುವ ಅಗ್ನಿಗೆ ಅತ್ಯಂತ ಮಹತ್ವವಿದೆ. - ಶ್ರೀ ಗುರುತತ್ತ್ವ (೨೪.೬.೨೦೦೫, ಮಧ್ಯಾಹ್ನ ೪.೦೩) (ಪೂಜ್ಯ (ಸೌ.) ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ, ಶ್ರೀ ಗುರುತತ್ತ್ವ ಈ ಬರಹನಾಮದಿಂದಲೂ ಲೇಖನಗಳನ್ನು ಬರೆಯುತ್ತಾರೆ.)

೨. ಶಾಸ್ತ್ರಕ್ಕನುಸಾರ ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿಯೇ ಅಗ್ನಿ ನೀಡುವುದು ಏಕೆ ಯೋಗ್ಯವಾಗಿದೆ ?

ವೈಜ್ಞಾನಿಕ ಪ್ರಗತಿಯ ಅತಿರೇಕದಿಂದ ಹಿಂದೂ ಸಮಾಜವು ಅಮೂಲ್ಯವಾದ ಅನೇಕ ಪ್ರಾಚೀನ ಶಾಸ್ತ್ರಗಳನ್ನು ತ್ಯಾಗ ಮಾಡಿದೆ. ಅದರಿಂದ ಅದು ಈಶ್ವರನಿಂದ ದೂರ ಹೋಗಿದೆ. ಅಂತ್ಯಸಂಸ್ಕಾರದ ವಿಧಿಯಲ್ಲಿಯೂ ವಿಜ್ಞಾನವು ನುಸುಳಿದೆ; ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆ, ಬೆರಣಿ, ನೀರು ಇತ್ಯಾದಿ ಸಾತ್ತ್ವಿಕ ಘಟಕಗಳ ಮೂಲಕ ಆಗುವ ಅಂತ್ಯಸಂಸ್ಕಾರವು ಇಂದು ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಸೀಮೆ ಎಣ್ಣೆ , ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮಾಡಲ್ಪಡುತ್ತಿದೆ. ಹಿಂದೂ ಧರ್ಮದಲ್ಲಿ ಒಲೆಯಲ್ಲಿ ಅಡುಗೆ ಮಾಡುವುದು, ಯಜ್ಞಯಾಗ ಇತ್ಯಾದಿಗಳಿಂದ ಅಂತ್ಯಸಂಸ್ಕಾರದವರೆಗಿನ ಎಲ್ಲ ಪ್ರಸಂಗಗಳಲ್ಲಿಯೂ ಕಟ್ಟಿಗೆಗೆ ಧಾರ್ಮಿಕದೃಷ್ಟಿಯಿಂದ ಮಹತ್ವ ನೀಡಲಾಗಿದೆ; ಏಕೆಂದರೆ ಕಟ್ಟಿಗೆ ಸತ್ತ್ವಗುಣಿಯಾಗಿದೆ; ಆದ್ದರಿಂದ ಅಂತ್ಯಸಂಸ್ಕಾರದ ಸಮಯದಲ್ಲಿ ಆತ್ಮಕ್ಕೆ ಗತಿ(ಚಾಲನೆ)ಸಿಗಬೇಕೆಂದು ಕಟ್ಟಿಗೆಯನ್ನೇ ಉಪಯೋಗಿಸಬೇಕು.

೩. ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯಿಂದ ಆತ್ಮಕ್ಕೆ ಸದ್ಗತಿ ಸಿಗುವುದು !

ಕಟ್ಟಿಗೆಯಲ್ಲಿ ಸೂಕ್ಷ್ಮ ಸ್ವರೂಪದಲ್ಲಿ ಅಗ್ನಿತತ್ತ್ವವು ಇದ್ದೇ ಇರುತ್ತದೆ; ಆದ್ದರಿಂದ ಕಟ್ಟಿಗೆಯು ಮೂಲತಃ ಶುದ್ಧಿಕಾರಕವಾಗಿದೆ. ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡುವುದರಿಂದ ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯು ಮೃತದೇಹದ ಅಶುದ್ಧತೆಯನ್ನು (ರಜ-ತಮ) ನಾಶಗೊಳಿಸುತ್ತದೆ. ಆದ್ದರಿಂದ ಮೃತದೇಹವು ಹಗುರವಾಗಿ ಅದಕ್ಕೆ ಸದ್ಗತಿ ದೊರೆಯಲು ಸಹಾಯವಾಗುತ್ತದೆ.

೪. ವಿದ್ಯುತ್, ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮೃತದೇಹಕ್ಕೆ ಅಗ್ನಿಯನ್ನು ನೀಡುವುದರಿಂದ ಆತ್ಮಕ್ಕೆ ದುರ್ಗತಿ ಪ್ರಾಪ್ತಿಯಾಗುವುದು !

ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಡೀಸೆಲ್ ಇತ್ಯಾದಿಗಳನ್ನು ಉಪಯೋಗಿಸುವ ಚಿತಾಗಾರಗಳು ರಜ-ತಮಯುಕ್ತವಾಗಿರುವುದರಿಂದ ಮೃತದೇಹವು ದಹನವಾಗುವಾಗ ಅದರಿಂದ ರಜ-ತಮವು ಪ್ರಕ್ಷೇಪಣೆಯಾಗುತ್ತದೆ. ಅದರಿಂದ ವಾಯುಮಂಡಲ ಮತ್ತು ಮೃತದೇಹವೂ ಕಲುಷಿತವಾಗುತ್ತದೆ. ಇಂತಹ ಕಲುಷಿತ ಮೃತದೇಹದ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ ಹಾಗೂ ಆ ಮೃತದೇಹವನ್ನು ವಶಪಡಿಸಿಕೊಳ್ಳುತ್ತವೆ. ಆದ್ದರಿಂದ ಆತ್ಮಕ್ಕೆ ಮುಂದಿನ ಗತಿ ಸಿಗದೆ ಅದು ಭುವರ್ಲೋಕದಲ್ಲಿಯೇ ಸಿಲುಕುತ್ತದೆ. ಅಲ್ಲಿ ಅದು ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆತ್ಮಕ್ಕೆ ಸದ್ಗತಿ ಸಿಗದೆ ದುರ್ಗತಿಯೇ ಸಿಗುತ್ತದೆ !

೫. ಬಾಂಧವರೇ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ !

ಅ. ವ್ಯಕ್ತಿ ಜೀವಂತ ಇರುವಾಗ ಮಾತ್ರವಲ್ಲ, ಮೃತ್ಯುವಿನ ನಂತರವೂ ಅವನ ಮುಂದಿನ ಪ್ರವಾಸವು ಸುಖವಾಗಿ ಆಗಲಿ ಎಂಬುದಕ್ಕಾಗಿ ಹಿಂದೂ ಧರ್ಮದಲ್ಲಿ ವಿವಿಧ ವಿಧಿಗಳನ್ನು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಹೇಳಿದಂತೆ ಅಗ್ನಿಸಂಸ್ಕಾರ ಮಾಡಿ ಮೃತ ವ್ಯಕ್ತಿಯ ಮರಣದ ನಂತರದ ಪ್ರವಾಸವನ್ನು ಸುಖದಾಯಕಗೊಳಿಸುವುದು, ಆ ಮೃತ ವ್ಯಕ್ತಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗುತ್ತದೆ !

ಆ. ಪೆಟ್ರೋಲಿಯಮ್ ಗ್ಯಾಸ್, ಬಾಯೋ-ಗ್ಯಾಸ್, ವಿದ್ಯುತ್ ಇತ್ಯಾದಿ ಕೃತಕ ಘಟಕಗಳನ್ನು ಅಗ್ನಿಸಂಸ್ಕಾರಕ್ಕಾಗಿ ಉಪಯೋಗಿಸುವುದೆಂದರೆ, ಒಂದು ರೀತಿಯಲ್ಲಿ ಮೃತ ದೇಹದ ಸುತ್ತಲೂ ರಜ-ತಮದ ಆಚ್ಛಾದನೆಯನ್ನು ಹಾಕಿದಂತೆ ಆಗಿದೆ ! ಹೀಗೆ ಮಾಡಿ ನಮ್ಮವರಿಗೇ ಮರಣದ ನಂತರದ ಪ್ರವಾಸದಲ್ಲಿ ಅಡಚಣೆಯನ್ನುಂಟು ಮಾಡುವಂತಹ ಪಾಪದಲ್ಲಿ ಪಾಲುದಾರರಾದಂತಾಗುತ್ತದೆ.

ಇತರ ಘಟಕಗಳ ತುಲನೆಯಲ್ಲಿ ಹಿಂದೂಗಳ ದಹನಸಂಸ್ಕಾರದಲ್ಲಿ ಬೇಕಾಗುವ ಕಟ್ಟಿಗೆಯ ಹಾಗೂ ಅದರಿಂದ ಆಗುವ ಮಾಲಿನ್ಯದ ಪ್ರಮಾಣವು ಅತ್ಯಲ್ಪ, ಬಹುಶಃ ನಗಣ್ಯವೆನ್ನಬಹುದು, ಆದರೂ ಹಿಂದೂಗಳ ದಹನಸಂಸ್ಕಾರದ ವಿಷಯದಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಇದರಿಂದ ಜಾತ್ಯತೀತತೆಯ ರಾಜ್ಯಪದ್ಧತಿಯಿಂದ ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಧರ್ಮಾಚರಣೆ ಮಾಡುವುದು ಎಷ್ಟು ಕಠಿಣವಾಗಬಹುದು, ಎಂಬುದು ಅರಿವಾಗುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಆವಶ್ಯಕವಾಗಿದೆ !

 - ಪ.ಪೂ. ಡಾ. ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ.

ಪೂಜೆ ಮಾಡುವಾಗ ಹೀಗೆ ಭಾವಪೂರ್ಣವಾಗಿ ಮಾಡಿ!

ಪೂಜೆ ಮಾಡುವಾಗ ದೇವತೆ, ಸಂತರು ಅಥವಾ ಗುರುಗಳು ಪ್ರತ್ಯಕ್ಷ ಎದುರಿಗಿದ್ದಾರೆ ಎಂಬ ಭಾವವಿಟ್ಟು ಅವರ ಪೂಜೆ ಮಾಡಿರಿ!

ಪ.ಪೂ.ಡಾ.ಜಯಂತ ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ

೧. ಪೂಜೆಯ ಸಮಯದಲ್ಲಾಗುವ ಅಯೋಗ್ಯ ಕೃತಿ

‘ಪೂಜೆ ಮಾಡುವಾಗ ಮನೆಮನೆಗಳಲ್ಲಿ ಮುಂದಿನ ಅಯೋಗ್ಯ ಕೃತಿಗಳಾಗುವುದು ಕಂಡು ಬರುತ್ತದೆ.
ಅ. ದೇವತೆಯ ಚಿತ್ರ ಅಥವಾ ಮೂರ್ತಿಯನ್ನು ತಲೆಯ ಬದಿಯಿಂದ ಒಂದು ಕೈಯಿಂದ ಎತ್ತುವುದು ಮತ್ತು ತೂಗಾಡುವಂತೆ ಹಿಡಿಯುವುದು.
ಆ. ದೇವತೆಯ ಚಿತ್ರ/ಮೂರ್ತಿ ಅಥವಾ ಸಂತರ/ಗುರುಗಳ ಛಾಯಾಚಿತ್ರವನ್ನು ಒಟ್ಟಾರೆ ಒರೆಸುತ್ತಾರೆ.
ಇ. ಗಂಧ, ಕುಂಕುಮ ಹೇಗೇಗೋ ಹಚ್ಚುತ್ತಾರೆ. ಅದು ದೇವತೆಯ ಕಣ್ಣುಗಳಲ್ಲಿ ಹೋಗಿರುತ್ತದೆ ಅಥವಾ ಕುಂಕುಮದಿಂದ, ಗಂಧದಿಂದ ದೇವತೆಯ ಮುಖ ಮುಚ್ಚಲ್ಪಡುತ್ತದೆ.
ಈ. ಹೂವುಗಳನ್ನು ಹೇಗೇಗೋ ಅರ್ಪಿಸುತ್ತಾರೆ. ಅವು ಚಿತ್ರ ಅಥವಾ ಮೂರ್ತಿಗೆ ತಕ್ಕಂತಹ ಆಕಾರದ್ದಿರುವುದಿಲ್ಲ. ಇದರಿಂದ ಚಿತ್ರ ಅಥವಾ ಮೂರ್ತಿ ಮುಚ್ಚಲ್ಪಡುತ್ತದೆ.
ಉ. ಪೂಜೆ ಮಾಡುವಾಗ ಇತರೆಡೆ ಗಮನವಿರುತ್ತದೆ ಅಥವಾ ಇತರರೊಂದಿಗೆ ಅನಾವಶ್ಯಕವಾಗಿ ಮಾತನಾಡುತ್ತಾರೆ.

ಇವೆಲ್ಲವು ಪೂಜೆ ಮಾಡಬೇಕೆಂದು ಮಾಡುವುದು ಮತ್ತು ಭಾವದ ಅಭಾವದ ಲಕ್ಷಣಗಳ ಉದಾಹರಣೆಗಳಾಗಿವೆ. ಇದರಿಂದ ಪೂಜೆ ಮಾಡುವ ಆಧ್ಯಾತ್ಮಿಕ ಲಾಭವಂತೂ ಸಿಗುವುದೇ ಇಲ್ಲ, ತದ್ವಿರುದ್ಧ ದೇವರ ಅವಕೃಪೆಯಾಗುತ್ತದೆ. ಇದರಿಂದ ಹಿಂದೂಗಳಿಗೆ ಇಂತಹ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಧರ್ಮ ಶಿಕ್ಷಣ ನೀಡುವುದು ಎಷ್ಟು ಆವಶ್ಯಕತೆಯಿದೆ ಎಂಬುದು ಗಮನಕ್ಕೆ ಬರುತ್ತದೆ!

೨. ಪೂಜೆಯ ಸಮಯದಲ್ಲಿ ಮಾಡಬೇಕಾದ ಯೋಗ್ಯ ಕೃತಿಗಳು

ಮುಂದಿನಂತೆ ಪೂಜೆ ಮಾಡಿದ್ದಲ್ಲಿ ನಿಶ್ಚಿತವಾಗಿಯೂ ಪೂಜೆಯ ಲಾಭವಾಗುತ್ತದೆ.
ಅ. ದೇವತೆಯ ಚಿತ್ರ ಅಥವಾ ಮೂರ್ತಿಗಳನ್ನು ಎರಡೂ ಕೈಗಳಿಂದ, ನಿಧಾನವಾಗಿ ಮತ್ತು ಮಧ್ಯಭಾಗದಲ್ಲಿ ಹಿಡಿದು ಎತ್ತಬೇಕು.
ಆ. ದೇವತೆ, ಸಂತರು ಅಥವಾ ಗುರುಗಳನ್ನು ಒರೆಸುವಾಗ ಅವರು ಪ್ರತ್ಯಕ್ಷ ಅಲ್ಲಿದ್ದಾರೆಂಬ ಭಾವವಿಟ್ಟು ಮತ್ತು ನಾವು ಒರೆಸುತ್ತಿದ್ದೇವೆ ಎಂದು ಅವರಿಗೆ ಹೇಳಿ ಮೇಲಿನಿಂದ ಕೆಳಗಿನ ವರೆಗೆ ಅವರ ಒಂದೊಂದು ಅವಯವಗಳನ್ನು ನಿಧಾನವಾಗಿ ಒರೆಸಬೇಕು. ತಾಯಿಯು ಮಗುವಿಗೆ ಹೇಗೆ ಸ್ನಾನ ಮಾಡಿಸುತ್ತಾಳೆ ? "ಈಗ ನಿನಗೆ ಸ್ನಾನ ಮಾಡಿಸುತ್ತೇನೆ ಆಯಿತಾ, ನೀನು ಕಣ್ಣು ಮುಚ್ಚಿಕೋ, ಆಗ ಕಣ್ಣುಗಳಲ್ಲಿ ನೀರು ಹೋಗುವುದಿಲ್ಲ" ಎಂದು ಮಗುವಿಗೆ ಹೇಳುತ್ತಾಳೆ. ಮಗುವಿನೊಂದಿಗೆ ಮಾತನಾಡುತ್ತಾ, ಅದರ ಕಲ್ಪನೆ ನೀಡಿ ಮಗುವಿನ ಕಾಳಜಿ ವಹಿಸುತ್ತಾ ಸ್ನಾನ ಮಾಡಿಸುತ್ತಾಳೆ. ಅದೇ ರೀತಿಯಲ್ಲಿ ನಾವು ಕೂಡಾ ದೇವತೆಯ ಚಿತ್ರ/ಮೂರ್ತಿ ಅಥವಾ ಸಂತರು/ಗುರುಗಳ ಛಾಯಾಚಿತ್ರವನ್ನು ಒರೆಸಬೇಕು. ಆ ಕೃತಿಯು ಭಾವಪೂರ್ಣ ವಾಗಿರಬೇಕು. ಚಿತ್ರ ಅಥವಾ ಛಾಯಾಚಿತ್ರವನ್ನು ಒರೆಸುವಾಗ ಅದರಲ್ಲಿಯ ದೇವತೆ, ಸಂತರು ಅಥವಾ ಗುರುಗಳನ್ನು ಮೊದಲು ಒರೆಸಬೇಕು ಮತ್ತು ನಂತರ ಅದರಲ್ಲಿನ ಇತರ ಭಾಗವನ್ನು ಒರೆಸಬೇಕು.
ಇ. ದೇವತೆಗೆ ಅಥವಾ ಗುರುಗಳಿಗೆ ಗಂಧ, ಕುಂಕುಮವನ್ನು ಹಚ್ಚುವಾಗ ಅದನ್ನು ಸರಿಯಾಗಿ ಹಣೆಯ ಮೇಲೆ ಮತ್ತು ಕಣ್ಣುಗಳಿಗೆ ಹೋಗದಂತೆ ಯೋಗ್ಯ ಆಕಾರದಲ್ಲಿ ಹಚ್ಚಬೇಕು. ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಲಿಕ್ಕಿದ್ದರೆ ಅದನ್ನು ಚರಣಗಳಲ್ಲಿ ಹಾಕಬೇಕು.
ಈ. ಯೋಗ್ಯವಾದ ಮತ್ತು ಯೋಗ್ಯ ಆಕಾರದ ಹೂವುಗಳನ್ನು ಅರ್ಪಿಸಬೇಕು. ಅವುಗಳ ರಚನೆ ಸಾತ್ತ್ವಿಕವಿರಬೇಕು.
ಉ. ಪೂಜೆ ಮಾಡುವಾಗ ಇತರೆಡೆ ಗಮನವಿರಬಾರದು. ತಲ್ಲೀನರಾಗಿ ಮನೋಭಾವದಿಂದ ಪೂಜೆ ಮಾಡಬೇಕು.
ಹೀಗೆ ಮಾಡಿದರೆ ಮಾತ್ರ ಆ ದೇವತೆ, ಸಂತರು ಅಥವಾ ಗುರುಗಳ ತತ್ತ್ವ ಜಾಗೃತವಾಗಿ ನಮಗೆ ಅದರ ಲಾಭವಾಗುತ್ತದೆ.
- ಪ.ಪೂ. ಡಾ. ಜಯಂತ ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ (೨೦.೧.೨೦೧೪)

ನಿಜವಾದ ಕ್ಷಮೆಯಾಚನೆ !

ಪೂಜೆಯ ಕೊನೆಗೆ ಕ್ಷಮೆಯಾಚನೆ ಮಾಡುವಾಗ ಮುಂದಿನ ಶ್ಲೋಕವನ್ನು ಹೇಳುತ್ತಾರೆ,

ಅಪರಾಧಸಹಸ್ರಾಣಿ ಕ್ರಿಯಂತೇರ್ನಿಶಂ ಮಯಾ|
ದಾಸೋಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ||
ಅರ್ಥ: ಹೇ ಭಗವಂತಾ, ನಾನು ಪ್ರತಿದಿನ ಸಾವಿರಾರು ಅಪರಾಧಗಳನ್ನು ಮಾಡುತ್ತಿರುತ್ತೇನೆ. ಹೇ ಪರಮೇಶ್ವರಾ, ನಾನು ನಿನ್ನ ದಾಸನಾಗಿದ್ದೇನೆ ಎಂದು ತಿಳಿದು ನನ್ನನ್ನು ಕ್ಷಮಿಸು!

ನಾನು ಭಗವಂತನ ದಾಸನಾಗಿದ್ದೇನೆ ಎಂಬ ಉತ್ಕಟ ಅರಿವಿನೊಂದಿಗೆ ಅಪರಾಧಿ ಭಾವಜಾಗೃತವಾಗಿ ಅಹಂಭಾವ ಕಡಿಮೆಯಾದರೆ ಮಾತ್ರ ನಿಜವಾದ ಅರ್ಥದಿಂದ ಕ್ಷಮೆ ಕೇಳಿದಂತಾಗುತ್ತದೆ ಮತ್ತು ಅದೇ ಸಮಯದಲ್ಲಿ ಈಶ್ವರನೂ ಕ್ಷಮಿಸುತ್ತಾನೆ. ಇಲ್ಲದಿದ್ದರೆ ಕ್ಷಮೆ ಕೇಳುವುದು ಕೇವಲ ಶಬ್ದದಲ್ಲಿ ತೋರಿಕೆಗೆ ಮಾತ್ರ ಇರುತ್ತದೆ. - ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೧.೧.೨೦೧೪)

ಇತರ ವಿಷಯಗಳು
ಪ್ರಾಯಶ್ಚಿತ್ತದ ನಿಜವಾದ ಅರ್ಥ
ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ!
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳ ಬೇಡವಾಗಿರುವ ಚಿತ್ರಗಳನ್ನು ವಿಸರ್ಜಿಸಿ ದೇವತೆಗಳ ವಿಡಂಬನೆ ತಡೆಗಟ್ಟಿ!
ದೇವಸ್ಥಾನಗಳನ್ನು ಧರ್ಮಜಾಗೃತಿಯ ಕೇಂದ್ರಗಳನ್ನಾಗಿ ಮಾಡೋಣ!
Dharma Granth

ಪ್ರಾಯಶ್ಚಿತ್ತದ ನಿಜವಾದ ಅರ್ಥ

ರಾಜಾ ಪರೀಕ್ಷಿತ: ಪ್ರಾಯಶ್ಚಿತ್ತ, ರಾಜದಂಡ ಮತ್ತು ನರಕಕ್ಕೆ ಹೋಗಿಯೂ ಜನರು ಪುನಃ ಪುನಃ ಪಾಪ ಕೃತ್ಯಗಳನ್ನೇಕೆ ಮಾಡುತ್ತಾರೆ?
ಶುಕದೇವ: ಕರ್ಮಗಳ ಮೂಲಕ ಕರ್ಮಗಳ ಮೂಲ ಬೀಜವು ನಾಶವಾಗುವುದಿಲ್ಲ, ಏಕೆಂದರೆ ಕರ್ಮಗಳ ಮೂಲವು ಅಜ್ಞಾನದಲ್ಲಿ ಇರುತ್ತದೆ. ಅಜ್ಞಾನವಿರುವವರೆಗೆ ಪಾಪವಾಸನೆಯು ಸಂಪೂರ್ಣ ನಾಶವಾಗುವುದಿಲ್ಲ; ಆದುದರಿಂದ ಜ್ಞಾನವೇ ನಿಜವಾದ ಪ್ರಾಯಶ್ಚಿತ್ತವಾಗಿದೆ.

ಅಂಗೀರಸನು ಪ್ರಾಯಶ್ಚಿತ್ತದ ಯೌಗಿಕ ಅರ್ಥವನ್ನು ಮುಂದಿನಂತೆ ಹೇಳಿದ್ದಾನೆ
ಪ್ರಾಯೋ ನಾಮ ತಪಃ ಪ್ರೋಕ್ತಂ ಚಿತ್ತಂ ನಿಶ್ಚಯ ಉಚ್ಯತೆ |
ತಪೋನಿಶ್ಚಯಸಂಯುಕ್ತಂ ಪ್ರಾಯಶ್ಚಿತ್ತಮಿತಿ ಸ್ಮೃತಮ್ ||
ಅರ್ಥ: ಪ್ರಾಯಃ ಅಂದರೆ ತಪಸ್ಸು ಮತ್ತು ಚಿತ್ತ ಅಂದರೆ ನಿಶ್ಚಯ. ತಪಸ್ಸು ಮತ್ತು ನಿಶ್ಚಯಗಳಿಂದ ಕೂಡಿದ ಕರ್ಮಗಳಿಗೆ ಪ್ರಾಯಶ್ಚಿತ್ತ ಎನ್ನಬೇಕು.

ಪಶ್ಚಾತ್ತಾಪ: ಪಶ್ಚಾತ್ತಾಪವಾಗಬೇಕು, ಏಕೆಂದರೆ ಪಶ್ಚಾತ್ತಾಪವಾದರೆ ಮನುಷ್ಯನು ಮತ್ತೊಮ್ಮೆ ಪಾಪಕರ್ಮಗಳನ್ನು ಮಾಡುವುದಿಲ್ಲ. ಪಶ್ಚಾತ್ತಾಪವು ಪ್ರಾಯಶ್ಚಿತ್ತದ ಒಂದು ಅಂಗವೇ ಆಗಿದೆ. ಯಾವುದಾದರೊಂದು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳದಿದ್ದರೆ ಪಾಪದ ಕ್ಷಾಲನೆಯಾಗುವುದಿಲ್ಲ ಎಂದು ಧರ್ಮಶಾಸ್ತ್ರಕಾರರು ಹೇಳುತ್ತಾರೆ. ಜ್ಞಾನದಿಂದ (ತಿಳಿದು) ಮತ್ತು ಅಜ್ಞಾನದಿಂದ (ತಿಳಿಯದೆ) ಎಂಬ ಎರಡು ರೀತಿಯ ಪಾಪಗಳನ್ನು ಮನುವು (೧೧.೪೬) ಹೇಳಿದ್ದಾನೆ. ಅಜ್ಞಾನದಿಂದ ಮಾಡಿದ ಪಾಪಗಳ ಕ್ಷಾಲನವು ಪಶ್ಚಾತ್ತಾಪದಿಂದ ಅಥವಾ ಆ ಪಾಪವನ್ನು ಬಹಿರಂಗವಾಗಿ ಹೇಳುವುದರಿಂದ ಆಗಬಹುದು, ಆದರೆ ‘ಜ್ಞಾನದಿಂದ (ತಿಳಿದೂ) ಮಾಡಿದ ಪಾಪಗಳಿಗೆ ಮಾತ್ರ ಕಠಿಣ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಬೇಕು’ ಎಂದು ಮನುವು ಹೇಳಿದ್ದಾನೆ.

ಪಾಪಿ ಮನುಷ್ಯರು ಪಶ್ಚಾತ್ತಾಪದಿಂದ ಬೆಂದು ಹೋದರೆ ಮುಕ್ತರಾಗಬಲ್ಲರು. ಇದಕ್ಕೆ ಕಾರಣವೇನೆಂದರೆ ಪಶ್ಚಾತ್ತಾಪವಾದ ಮನುಷ್ಯನಿಗೆ ತನ್ನ ಅಜ್ಞಾನ, ತನ್ನ ದೋಷಗಳು, ಮೋಹಮಾಯೆಯ ಜೀವನದ ದುಷ್ಪರಿಣಾಮ ಇತ್ಯಾದಿ ತಿಳಿಯುತ್ತದೆ. ಆದುದರಿಂದ ತನ್ನೆಡೆಗೆ ಮತ್ತು ಜಗತ್ತಿನ ಕಡೆಗೆ ನೋಡುವ ಅವನ ದೃಷ್ಟಿಕೋನವು ಬದಲಾಗಿರುತ್ತದೆ. ಇಂತಹ ಮನುಷ್ಯರು ಧರ್ಮಪರಾಯಣರಾಗುವ ಮತ್ತು ಸಾಧನೆಯತ್ತ ಹೊರಳುವ ಸಾಧ್ಯತೆಯು ಹೆಚ್ಚಿಗೆ ಇರುತ್ತದೆ. ಇದರ ಫಲವೆಂದು ಅವರಿಗೆ ಮರಣದ ನಂತರ ಸದ್ಗತಿಯು ಸಿಗುತ್ತದೆ. ಈ ಅರ್ಥದಲ್ಲಿ ಪಶ್ಚಾತ್ತಾಪದಿಂದ ಬೆಂದಿರುವವನು ಮುಕ್ತನಾಗುತ್ತಾನೆ ಎಂದು ಹೇಳಲಾಗಿದೆ.

ಮಹತ್ವ: ಪಾಪಮುಕ್ತಿಗಾಗಿ ಪ್ರಾಯಶ್ಚಿತ್ತಗಳಿವೆ.
೧. ಪ್ರಾಯಶ್ಚಿತ್ತಗಳಿಂದ ಪಾಪ ಮಾಡುವ ವ್ಯಕ್ತಿಯು ವ್ರತಬದ್ಧನಾಗುತ್ತಾನೆ ಮತ್ತು ಕಠೋರ ವ್ರತಾಚರಣೆಗಳನ್ನು ಮಾಡಿ ಒಳ್ಳೆಯ ಮನುಷ್ಯನಾಗುತ್ತಾನೆ. ಅಲ್ಲದೇ ಇನ್ನು ಮುಂದೆ ಪಾಪಗಳನ್ನು ಮಾಡುವುದಿಲ್ಲವೆಂದು ನಿರ್ಧಾರ ಮಾಡುತ್ತಾನೆ. ಇದಕ್ಕೆ ವಿರುದ್ಧವಾಗಿ ಕೇವಲ ಅಪರಾಧಗಳನ್ನು ಒಪ್ಪಿಕೊಳ್ಳುವುದರಿಂದ ಅಥವಾ ಶಿಕ್ಷೆಗಳನ್ನು ಭೋಗಿಸುವುದರಿಂದ ತಪ್ಪುಗಳನ್ನು ತಡೆಯಲು ಆಗುವುದಿಲ್ಲ. ಅಪರಾಧಿಗಳು ತಮ್ಮ ಅಪರಾಧಗಳಿಗಾಗಿ ಶಿಕ್ಷೆಯನ್ನು ಭೋಗಿಸುತ್ತಾರೆ, ಆದರೆ ಅವರಲ್ಲಿ ಸುಧಾರಣೆ ಆಗುವುದಿಲ್ಲ; ಏಕೆಂದರೆ ಅವರಿಗೆ ಪಶ್ಚಾತ್ತಾಪವಾಗುವುದಿಲ್ಲ ಮತ್ತು ಅವರಿಗೆ ಅವರು ಮಾಡಿದ ಕೆಟ್ಟ ಕೃತಿಗಳ ಪರಿಣಾಮಗಳ ಅರಿವೂ ಇರುವುದಿಲ್ಲ.
೨. ‘ಪಶ್ಚಾತ್ತಾಪೇನ ಶುದ್ಧ್ಯತಿ’ ಅಂದರೆ ‘ಪಶ್ಚಾತ್ತಾಪದಿಂದ (ಮನುಷ್ಯನು) ಶುದ್ಧನಾಗುತ್ತಾನೆ’ ಎಂಬ ಒಂದು ವಚನವಿದೆ.
೩. ಇತರರಿಗೆ ಕೇಡು ಮಾಡುವುದರಿಂದ ಉಂಟಾದ ಪಾಪಗಳಿಗೆ ರಾಜನು ನೀಡಿದ ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ತನಗೆ ಅಹಿತವಾಗುವ ಪಾಪಗಳಿಂದ (ಉದಾ.ವ್ಯಸನಾಧೀನತೆ) ಮನುಷ್ಯನು ಪ್ರಾಯಶ್ಚಿತ್ತ ಮತ್ತು ಸಾಧನೆಗಳಿಂದ ಮುಕ್ತನಾಗುತ್ತಾನೆ.
೪. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ, ಭಾವನೆಯ ಭರದಲ್ಲಿ ಮಾಡಿದ ತಪ್ಪುಗಳಿಂದ ನಿರ್ಮಾಣವಾದ ಅಪರಾಧೀ ಭಾವನೆಯಿಂದ ವ್ಯಕ್ತಿಯು ಮುಕ್ತನಾಗುತ್ತಾನೆ.
೫. ಪಾಪಗಳ ಪರಿಣಾಮಗಳಿಂದ ನಿರ್ಮಾಣವಾಗುವ ಕರ್ಮವು ಪ್ರಾಯಶ್ಚಿತ್ತಗಳನ್ನು ತೆಗೆದು ಕೊಳ್ಳುವುದರಿಂದ ಸಂಚಿತದಲ್ಲಿ ಸಂಗ್ರಹವಾಗುವುದಿಲ್ಲ. ಆದುದರಿಂದ ಸಂಚಿತವು ಹೆಚ್ಚಾಗುವುದಿಲ್ಲ. ಇದರಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಪ್ರಗತಿಯಲ್ಲಿ ಬರುವ ಅಡಚಣೆಗಳು ದೂರವಾಗುತ್ತವೆ.
೬. ಪ್ರಾಯಶ್ಚಿತ್ತದಿಂದ ಮನಸ್ಸಿಗೆ ಸಮಾಧಾನವು ಸಿಗುತ್ತದೆ.
೭. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದೆ ಎಂಬುದರ ಬಗ್ಗೆ ಇತರರಲ್ಲಿ ವಿಶ್ವಾಸ ಮೂಡುತ್ತದೆ.
೮. ಅನ್ಯಾಯವನ್ನು ಮಾಡುವವನು ತನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೆ, ಯಾರ ಮೇಲೆ ಅನ್ಯಾಯವಾಗಿದೆಯೋ, ಅವನ ಮನಸ್ಸಿನಲ್ಲಿನ ಕ್ರೋಧವು ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ 'ಪುಣ್ಯ-ಪಾಪ ಮತ್ತು ಪಾಪದ ಪ್ರಾಯಶ್ಚಿತ್ತ')

ಬ್ರಾಹ್ಮತೇಜದ ಮಹತ್ವ

(ಕ್ಷಾತ್ರತೇಜ ಮತ್ತು ಬ್ರಾಹ್ಮತೇಜದ ಶ್ರೇಷ್ಠ ಉದಾಹರಣೆ - ಪರಶುರಾಮ)

೧. ವಿಷಯಪ್ರವೇಶ

ಸಮಾಜಕ್ಕೆ ಧಾರ್ಮಿಕ ಕರ್ತವ್ಯಗಳ ಅರಿವು ಮಾಡಿಕೊಡುವುದು ಮತ್ತು ಧರ್ಮರಕ್ಷಣೆಯನ್ನು ಮಾಡುವುದು ಹಿಂದಿನ ರಾಜರ ಕರ್ತವ್ಯವಾಗಿತ್ತು; ಆದರೆ ಇಂದಿನ ರಾಜ್ಯದ ಮುಖಂಡರು ಧರ್ಮದ್ರೋಹಿಗಳಾಗಿರುವುದರಿಂದ ಎಲ್ಲ ಹಿಂದೂಗಳು ಸೇರಿ ಧರ್ಮರಕ್ಷಣೆಯ ಶಿವಧನುಸ್ಸನ್ನು ಎತ್ತಬೇಕಾಗಿದೆ. ಇಲ್ಲಿ ‘ಶಿವಧನುಷ್ಯ’ವೆಂದು ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದೆ; ಏಕೆಂದರೆ ಶಿವಧನುಷ್ಯವನ್ನು ಕೇವಲ ಬಾಹುಬಲದಿಂದ ಎತ್ತಲು ಸಾಧ್ಯವಿಲ್ಲ. ಅದಕ್ಕಾಗಿ ದೈವೀ ಸಾಮರ್ಥ್ಯದ ಆವಶ್ಯಕತೆಯಿದೆ. ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಕಾರ್ಯ ಮಾಡುವುದರಿಂದ ಧರ್ಮರಕ್ಷಣೆಯಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಸ್ತರದಲ್ಲಿಯೂ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಂದರೆ ಧರ್ಮರಕ್ಷಣೆಯನ್ನು ಮಾಡಲು ಕ್ಷಾತ್ರತೇಜದೊಂದಿಗೆ ಬ್ರಾಹ್ಮತೇಜವೂ ಆವಶ್ಯಕವಾಗಿರುತ್ತದೆ. ಆ ದೃಷ್ಟಿಯಿಂದ ಬ್ರಾಹ್ಮತೇಜ ಅಂದರೇನು, ಹಿಂದೂಗಳ ಇತಿಹಾಸದಲ್ಲಿ ಬ್ರಾಹ್ಮತೇಜದ ಸ್ಥಾನವೇನಿದೆ, ಹಿಂದೂ ಸಂಘಟನೆಯ ಆವಶ್ಯಕತೆ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.

೨. ಬ್ರಾಹ್ಮತೇಜ ಮತ್ತು ಅದರ ಮಹತ್ವ!

೨ಅ. ಬ್ರಾಹ್ಮತೇಜ ಅಂದರೇನು?

ನಾವು ಪುರಾಣದ ಕಥೆಗಳಲ್ಲಿ ಋಷಿ-ಮುನಿಗಳು ಶಾಪಗಳನ್ನು ನೀಡಿದ ಉದಾಹರಣೆಗಳನ್ನು ಕೇಳುತ್ತೇವೆ. ಈ ಶಾಪವು ಅರ್ಥಾತ್ ಸಂಕಲ್ಪಸಾಮರ್ಥ್ಯವಾಗಿರುತ್ತದೆ. ಈ ಸಂಕಲ್ಪ ಸಾಮರ್ಥ್ಯವು ಸಾಧನೆಯ ಬಲದಿಂದಾಗಿ ಋಷಿ-ಮುನಿಗಳಿಗೆ ಪಾಪ್ತವಾಗಿರುತ್ತದೆ. ಧರ್ಮರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶಾರೀರಿಕ ಸ್ತರದ ಪ್ರಯತ್ನದಿಂದಲ್ಲ ಸಾಧನೆಯನ್ನು ಮಾಡಿ ಸಂಕಲ್ಪದ ಸಾಮರ್ಥ್ಯ ನಿರ್ಮಾಣ ಮಾಡಿ ಕಾರ್ಯ ಮಾಡುವ ಆವಶ್ಯಕವಿದೆ.

೨ಆ. ಬ್ರಾಹ್ಮತೇಜದ ಮಹತ್ವ:

೧. ಸಂತರ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಸ್ವೇಚ್ಛೆಯಿಂದ ಮತ್ತು ಶ್ರದ್ಧೆಯಿಂದ ಬರುತ್ತಾರೆ. ರಾಜಕೀಯ ಸಭೆಗಳಂತೆ ಅವರಿಗೆ ಹಣ ನೀಡಿ ಅಥವಾ ವಾಹನ ಸೌಕರ್ಯಗಳನ್ನು ನೀಡಿ ಕರೆಸಬೇಕಾಗುವುದಿಲ್ಲ. ಯೋಗಋಷಿ ರಾಮದೇವಬಾಬಾ ಇವರ ಕಾರ್ಯಕ್ರಮಕ್ಕೆ ಜನರು ಬೆಳಗ್ಗೆ ೫ ಗಂಟೆಗೂ ಬರುತ್ತಾರೆ.

೨. ಬ್ರಾಹ್ಮತೇಜ ಮತ್ತು ಕ್ಷಾತ್ರತೇಜವಿರುವುದರಿಂದ ಋಷಿಗಳು ರಾಜನಿಗೆ ಶಾಪವನ್ನು ನೀಡಬಲ್ಲರು.

೩. ವಿದೇಶದಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರಚಾರವಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಸಂಸ್ಥೆಗಳ ಪ್ರಚಾರವಾಗುತ್ತದೆ; ಏಕೆಂದರೆ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಆಧ್ಯಾತ್ಮಿಕ ತೇಜ ಅರ್ಥಾತ್ ಬ್ರಾಹ್ಮತೇಜವಿರುತ್ತದೆ.

೩. ಹಿಂದೂಗಳ ಇತಿಹಾಸದಲ್ಲಿ ಬ್ರಾಹ್ಮತೇಜದ ಸ್ಥಾನ

ಹಿಂದೂಗಳ ಪೂರ್ವ ಇತಿಹಾಸದಲ್ಲಿ ಅವತಾರಿ ಪುರುಷರು ಮತ್ತು ಮಹಾಪುರುಷರು ಕ್ಷಾತ್ರತೇಜ ಮತ್ತು ಬ್ರಾಹ್ಮತೇಜವನ್ನು ಧಾರಣೆ ಮಾಡಿ ಧರ್ಮರಕ್ಷಣೆಯನ್ನು ಮಾಡಿದ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಭಗವಾನ ಪರಶುರಾಮನು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಬಲದಲ್ಲಿ ೨೧ ವೇಳೆ ಪೃಥ್ವಿಯನ್ನು ನಿಃಕ್ಷತ್ರಿಯ (ಕ್ಷತ್ರಿಯರಹಿತ) ಅಂದರೆ ದುರ್ಜನ ರಾಜರನ್ನು ನಾಶ ಮಾಡಿದನು. ಅರ್ಜುನನು ಉತ್ತಮ ಧನುರ್ಧರನಿದ್ದನು ಅದರೊಂದಿಗೆ ಅವನು ಶ್ರೀಕೃಷ್ಣನ ಭಕ್ತನೂ ಆಗಿದ್ದನು. ಅವನು ಯಾವಾಗಲೂ ಶ್ರೀಕೃಷ್ಣನ ನಾಮವನ್ನು ಜಪಿಸಿಯೇ ಬಾಣವನ್ನು ಬಿಡುತ್ತಿದ್ದನು. ಅದರಿಂದಾಗಿ ಅವನ ಬಾಣಗಳ ಗುರಿಯು ತನ್ನಿಂದತಾನೇ ತಲುಪುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಕುಲದೇವತೆ ಶ್ರೀ ಭವಾನಿದೇವಿಯ ನಿಸ್ಸೀಮ ಭಕ್ತರಾಗಿದ್ದರು. ಅವರ ಬಾಯಿಯಲ್ಲಿ ಸದಾ ‘ಜಗದಂಬಾ ಜಗದಂಬಾ’ ಎಂಬ ನಾಮಜಪವಿರುತ್ತಿತ್ತು. ಅವರ ಸೇನೆಯೂ ಹೋರಾಡುವಾಗ ‘ಹರ ಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಿತ್ತು. ಇದರಿಂದಾಗಿ ಮನುಷ್ಯಬಲ ಮತ್ತು ಸಾಧನಸಾಮಗ್ರಿ ಅಲ್ಪವಿದ್ದರೂ ಅವರಿಗೆ ಐದು ಬಲಶಾಲಿ ಮತಾಂಧ ರಾಜ್ಯಾಡಳಿತಗಳನ್ನು ಮೆಟ್ಟಿ ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಲು ಸಾಧ್ಯವಾಯಿತು.
ನಾಮಸ್ಮರಣೆಯಿಂದ, ಭಕ್ತಿಯಿಂದ ದೈವೀ ಶಕ್ತಿಯ ಸಹಾಯವು ಸಿಗುತ್ತದೆ ಹಾಗೂ ನಾವು ಕೈಗೆತ್ತಿಕೊಂಡಿರುವ ಕಾರ್ಯದಲ್ಲಿ ಸಫಲತೆ ಸಿಗುತ್ತದೆಯೆಂಬುದಕ್ಕೆ ಇವು ಉತ್ತಮ ಉದಾಹರಣೆಯಾಗಿವೆ.

೪. ಹಿಂದುತ್ವವಾದಿಗಳು ತಮ್ಮಲ್ಲಿ ಬ್ರಾಹ್ಮತೇಜವನ್ನು ನಿರ್ಮಿಸುವ ಅರ್ಥಾತ್ ಸಾಧನೆ ಮಾಡುವುದರ ಮಹತ್ವ

೪ಅ. ಪ್ರತಿಕೂಲ ಪ್ರಸಂಗಗಳಲ್ಲಿ ರಕ್ಷಣೆಗಾಗಿ ಈಶ್ವರನ ಭಕ್ತನಾಗಬೇಕು!: ಧರ್ಮರಕ್ಷಣೆಗಾಗಿ ಹೋರಾಡುವಾಗ ಮಾರಣಾಂತಿಕ ಪ್ರಸಂಗಗಳನ್ನು ಎಲ್ಲರೂ ಅನುಭವಿಸಿರಬಹುದು. ನೀವು ಈಶ್ವರನ ಭಕ್ತರಾಗಿದ್ದಲ್ಲಿ ದೊಡ್ಡ ದೊಡ್ಡ ಸಂಕಟಗಳಿಂದ ನೀವು ಸುಖವಾಗಿ ಹೊರಬರಬಹುದು. ಅರಗಿನ ಮನೆಯಿಂದ ಪಾಂಡವರ ಬಿಡುಗಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಅಫ್ಝಲಖಾನ ಭೇಟಿ, ಅವರ ಆಗ್ರಾದಿಂದ ಬಿಡುಗಡೆ ಇತ್ಯಾದಿ ಪ್ರಸಂಗಗಳನ್ನು ನೆನಪಿಸಿಕೊಳ್ಳಬಹುದು.

೪ಆ. ಹಿಂದೂ ಸಂಘಟನೆಯಲ್ಲಿ ಅಡಚಣೆಯಾಗಿರುವ ಅಹಂಕಾರವನ್ನು ನಿರ್ಮೂಲನೆ ಮಾಡಲು ಸಾಧನೆ ಉಪಯುಕ್ತವಾಗಿರುವುದು: ಹಿಂದುತ್ವವಾದಿಗಳಲ್ಲಿರುವ ಅಹಂಕಾರವು ಹಿಂದೂಐಕ್ಯದಲ್ಲಿ ಪ್ರಮುಖ ಅಡಚಣೆಯಾಗಿರುತ್ತದೆ. ಸಾಧನೆ ಮಾಡುವುದರಿಂದ ಅಹಂಕಾರವು ದೂರವಾಗುತ್ತದೆ, ನಮ್ರತೆ ಬೆಳೆಯುತ್ತದೆ ಹಾಗೂ ಇತರರೊಂದಿಗೆ ಹೊಂದಾಣಿಕೆ ಮಾಡಲು ಸುಲಭವಾಗುತ್ತದೆ. ಸಾಧನೆಯಿಂದಾಗಿ ಈಶ್ವರೀ ಗುಣಗಳು ಬೆಳೆಯುತ್ತವೆ. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಸನಾತನ ಸಂಸ್ಥೆಯ ಸಾಧಕರು ಪ್ರತಿದಿನ ಸಾಧನೆಯನ್ನು ಮಾಡುತ್ತಾರೆ. ಆದುದರಿಂದ ಇತರರೊಂದಿಗೆ ಅವರು ಬೇಗನೇ ಹೊಂದಿಕೊಳ್ಳುತ್ತಾರೆ.

೫. ಯಾವ ಸಾಧನೆಯನ್ನು ಮಾಡಬೇಕು?

೫ಅ. ಪ್ರತಿದಿನ ಕಡಿಮೆಪಕ್ಷ ೧ ಗಂಟೆ ಕುಲದೇವತೆಯ ಅಥವಾ ಇಷ್ಟದೇವತೆಯ ನಾಮಜಪವನ್ನು ಮಾಡಬೇಕು: ಪೂಜೆ-ಅರ್ಚನೆ, ಸ್ತೋತ್ರಪಠಣ, ಉಪವಾಸ ಇತ್ಯಾದಿಗಳನ್ನು ಮಾಡುವುದರೊಂದಿಗೆ ಭಗವಂತನ ನಾಮಜಪವನ್ನೂ ಸದಾಕಾಲ ಮಾಡುತ್ತಿರಬೇಕು. ನಾಮಜಪದ ಮಾಧ್ಯಮದಿಂದ ಮನಸ್ಸಿನಿಂದ ನಿರಂತರವಾಗಿ ಭಗವಂತನ ಸಮೀಪದಲ್ಲಿರಲು ಸಾಧ್ಯವಾಗುತ್ತದೆ. ಮೊದಲಿಂದಲೂ ಯಾವುದಾದರೂ ದೇವತೆಯ ಅಥವಾ ಗುರುಗಳ ಮೂಲಕ ನೀಡಲಾದ ನಾಮಜಪವನ್ನು ಮಾಡುತ್ತಿದ್ದಲ್ಲಿ ಅದನ್ನು ಅಖಂಡವಾಗಿ ಮಾಡಲು ಪ್ರಯತ್ನವನ್ನು ಮಾಡಬೇಕು.

೫ಆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ಪ್ರಾರ್ಥನೆಯನ್ನು ಮಾಡುವುದು: ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಯಾವುದೇ ಇತರ ಸಂಘಟನೆಯ ಉಪಕ್ರಮ ಮತ್ತು ಆಂದೋಲನವಾಗುತ್ತಿದ್ದರೆ ಅದರ ಯಶಸ್ಸಿಗಾಗಿ ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ಅದಕ್ಕನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ಪ್ರಾರ್ಥನೆಯನ್ನು ಮಾಡಬೇಕು.

೬. ಧರ್ಮಾಭಿಮಾನ ನಿರ್ಮಾಣವಾಗಲು ಧರ್ಮಾಚರಣೆಯನ್ನೂ ಮಾಡಬೇಕು !

ಸಾಧನೆಯ ಜೊತೆಗೆ ಧರ್ಮಾಚರಣೆಯನ್ನು ಮತ್ತು ಆಚಾರಧರ್ಮವನ್ನು ಪಾಲಿಸುವುದೂ ಮಹತ್ವದ್ದಾಗಿದೆ. ಹಿಂದೂ ಸಂಸ್ಕೃತಿಯ ಉಪಾಸನಾಮಾರ್ಗ, ಹಬ್ಬ-ಹರಿದಿನಗಳು, ಆಹಾರ-ವಿಹಾರ ಪದ್ಧತಿಯಿಂದ ಮಾತ್ರವಲ್ಲ, ದೈನಂದಿನ ಜೀವನದ ಪ್ರತಿಯೊಂದು ಕೃತಿಯಿಂದ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ಯೋಜನೆಯು ಹಿಂದೂ ಧರ್ಮದಲ್ಲಿದೆ. ಇದು ಹಿಂದೂ ಧರ್ಮದ ಅದ್ವಿತೀಯ ವೈಶಿಷ್ಟ್ಯವಾಗಿದೆ. ದೈನಂದಿನ ಧಾರ್ಮಿಕ ಕೃತಿಗಳು, ಉದಾ. ಪೂಜೆ-ಅರ್ಚನೆ, ಆರತಿ, ಪ್ರಾಸಂಗಿಕ ಮತ್ತು ಉತ್ಸವ ಇತ್ಯಾದಿಗಳನ್ನು ಶಾಸ್ತ್ರಾನುಸಾರ ಅರ್ಥ ಮಾಡಿಕೊಂಡು ಆಚರಿಸುವುದು; ಅದರಂತೆ ಕುಲಾಚಾರಗಳ ಪಾಲನೆ, ಕುಲದ ರೂಢಿ-ರೀತಿಗಳನ್ನು ಮತ್ತು ಪರಂಪರೆಗಳನ್ನು ಆಚರಿಸುವುದು, ಇವುಗಳಿಗೆ ‘ಧರ್ಮಾಚರಣೆ’ ಎಂದು ಹೇಳುತ್ತಾರೆ. ಉದಾ. ಹಸ್ತಲಾಘವ (ಶೆಕ್-ಹ್ಯಾಂಡ್) ಮಾಡದೆ ಕೈಜೋಡಿಸಿ ನಮಸ್ಕಾರ ಮಾಡುವುದು, ಜನ್ಮದಿನವನ್ನು ದಿನಾಂಕಾನುಸಾರವಲ್ಲ, ತಿಥಿಗನುಸಾರ ಮತ್ತು ಆರತಿ ಬೆಳಗಿ ಆಚರಿಸುವುದು, ಸ್ತ್ರೀಯರು ಪ್ರತಿದಿನ ಗೋಲಾಕಾರವಾಗಿ ಕುಂಕುಮ ಮತ್ತು ಪುರುಷರು ಕುಂಕುಮದ ತಿಲಕವನ್ನು ಹಚ್ಚಿ ಮನೆಯ ಹೊರಗೆ ಹೋಗುವುದು ಇತ್ಯಾದಿ.

೭. ಹಿಂದುತ್ವವಾದಿ ಕಾರ್ಯಕರ್ತರಿಗೂ ಸಾಧನೆ ಮಾಡಲು ಪ್ರವೃತ್ತಗೊಳಿಸಿ!

ಸಾಧನೆಯಿಂದ ಆತ್ಮಬಲವು ಜಾಗೃತವಾಗುತ್ತದೆ ಮತ್ತು ಆತ್ಮಬಲವು ಜಾಗೃತವಾದ ವ್ಯಕ್ತಿಯಿಂದ ಪರಿಣಾಮಕಾರಿ ಧರ್ಮಕಾರ್ಯವಾಗುತ್ತದೆ. ಇದರಿಂದಾಗಿ ಸಂಘಟನೆಯ ಕಾರ್ಯಕರ್ತರಿಗೂ ಸಾಧನೆಯನ್ನು ಮಾಡಲು ಪ್ರವೃತ್ತಗೊಳಿಸಬೇಕು.

ಇದಕ್ಕಾಗಿ ಸಂಘಟನೆಯ ಸ್ತರದಲ್ಲಿ ಮುಂದೆ ಕೊಟ್ಟಿರುವಂತಹ ಪ್ರಯತ್ನಗಳನ್ನು ಮಾಡಬಹುದು.

ಅ. ಸಂಘಟನೆಯ ಕಾರ್ಯಕರ್ತರಿಗೆ ನಾಮಜಪದ ಸಾಧನೆ ಮಾಡಲು ಹೇಳಿರಿ.

ಆ. ಸಂಘಟನೆಗಳ ಸಭೆಗಳಲ್ಲಿ ಯಾವ ರೀತಿಯಲ್ಲಿ ಉಪಕ್ರಮಗಳ ವರದಿಯನ್ನು ತೆಗೆದುಕೊಳ್ಳಲಾಗುತ್ತದೆಯೋ ಅದರಂತೆ ಸ್ವಲ್ಪ ಸಮಯ ತಡೆದು ಪ್ರತಿಯೊಬ್ಬ ಕಾರ್ಯಕರ್ತರಿಂದ ವಾರವಿಡೀ ಸಾಧನೆಗಾಗಿ ಯಾವ ಪ್ರಯತ್ನಗಳು ಆಗಿವೆ ಎಂಬುದರ ವರದಿಯನ್ನು ತೆಗೆದುಕೊಳ್ಳಿರಿ.

ಇ. ಸಂಘಟನೆಗಳ ಕಾರ್ಯಕರ್ತರಿಗೆ ಧರ್ಮಶಿಕ್ಷಣ ಸಿಗಬೇಕು ಎಂದು ಅಭ್ಯಾಸವರ್ಗಗಳನ್ನು ತೆಗೆದುಕೊಳ್ಳಬೇಕು. ಅವರಿಗೆ ಧರ್ಮಶಿಕ್ಷಣ ನೀಡುವ ಗ್ರಂಥಗಳು, ಧ್ವನಿಚಿತ್ರಮುದ್ರಿಕೆಗಳನ್ನು ಒದಗಿಸಿಕೊಡಿ. ಹಿಂದುತ್ವವಾದಿಗಳಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ಅರಿವಾದಾಗ ಅವರು ಧರ್ಮದ್ರೋಹಿ, ನಾಸ್ತಿಕರ ಮತ್ತು ಇತರ ಧರ್ಮ ಪ್ರಸಾರಕರ ಹಿಂದೂವಿರೋಧಿ ವಿಚಾರಗಳನ್ನು ಬೌದ್ಧಿಕ ಸ್ತರದಲ್ಲಿ ಖಂಡಿಸಬಲ್ಲರು.

ಈ. ಹಿಂದೂ ಸಂಘಟನೆಯಲ್ಲಿ ಹಾನಿಕರವಾಗಿರುವಂತಹ ದೋಷಗಳನ್ನು ಕಾರ್ಯಕರ್ತರಿಗೆ ಅರಿವು ಮಾಡಿಕೊಡಬೇಕು ಹಾಗೂ ಆ ದೋಷಗಳನ್ನು ದೂರ ಮಾಡಲು ಅವರಿಗೆ ಸಹಾಯವನ್ನು ಮಾಡಬೇಕು.

ಸಾಧನೆ ಮಾಡುವ ವ್ಯಕ್ತಿಯ ಜೀವನವು ಕ್ರಮೇಣ ನೀತಿವಂತ ಮತ್ತು ಚಾರಿತ್ರ್ಯಸಂಪನ್ನವಾಗುತ್ತದೆ. ಇದರಿಂದಾಗಿ ಅವರಲ್ಲಿ ದುಶ್ಚಟಗಳು, ಅಹಂಕಾರಿ ವೃತ್ತಿ, ಉದ್ಧಟತನದಂತಹ ದೋಷಗಳಿದ್ದರೆ ಅವು ಸಹ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತವೆ ಮತ್ತು ಕಾರ್ಯಕರ್ತರ ವೃತ್ತಿಯಲ್ಲಿಯೂ ಬದಲಾವಣೆಯಾಗುತ್ತಿದೆ ಎಂದು ಅನುಭವಕ್ಕೆ ಬರುತ್ತದೆ.

ಆಧಾರ - ಕನ್ನಡ ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ"

ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ
ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ
Dharma Granth