ಹಿಂದೂ ಸಂಸ್ಕೃತಿಯಲ್ಲಿ ವಿವಾಹಕ್ಕೆ ಹದಿನಾರು ಸಂಸ್ಕಾರಗಳಲ್ಲಿನ ಕೊನೆಯ ಸಂಸ್ಕಾರದ ಮಹತ್ವವಿದೆ. ಆದುದರಿಂದ ಹಿಂದಿನ ಕಾಲದಲ್ಲಿ ಹಿಂದೂಗಳು ವಿವಾಹಗಳನ್ನು ಧಾರ್ಮಿಕ ಪದ್ಧತಿಯಿಂದ ಆಚರಿಸುತ್ತಿದ್ದರು. ಅಲ್ಲದೇ ವಧು-ವರರಿಗೆ ದೇವಸ್ಥಾನಗಳಲ್ಲಿನ ಚೈತನ್ಯದ ಲಾಭವು ಸಿಗಬೇಕೆಂದು ವಿವಾಹ ಸಂಸ್ಕಾರಗಳನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿತ್ತು; ಆದರೆ ಇತ್ತೀಚೆಗೆ ಹಿಂದೂಗಳಿಗೆ ವಿವಾಹವೆಂದರೆ ಒಂದು ಮೋಜು ಮಾಡುವ ಮನೋರಂಜನೆಯ ಕಾರ್ಯಕ್ರಮವಾಗಿದೆ ಎಂದೆನಿಸುತ್ತಿದೆ. ಆದುದರಿಂದ ವಿವಾಹದ ವಿಧಿಗಳು ನಡೆಯುತ್ತಿರುವಾಗ ಅಲ್ಲಿ ಸೇರಿದ ಜನರು ಹರಟೆ ಹೊಡೆಯುವುದರಲ್ಲಿ ಮಗ್ನರಾಗಿರುತ್ತಾರೆ. ಅಲ್ಲದೇ ಅಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾರೆ ಮತ್ತು ಬ್ಯಾಂಡ್‌ಗಳೂ ಸಹ ಇರುತ್ತವೆ. ಈ ಗಲಾಟೆಯಿಂದಾಗಿ ವಿಧಿಗಳಲ್ಲಿನ ಸಾತ್ತ್ವಿಕತೆಯು ಉಳಿಯುವುದಿಲ್ಲ, ಬದಲಾಗಿ ಅದು ಕಡಿಮೆಯಾಗುತ್ತದೆ. ಕೆಲವರು ವಧು-ವರರು ಪರಸ್ಪರರ ಕೊರಳಿಗೆ ಮಾಲೆಯನ್ನು ಹಾಕಿದ ನಂತರ ಹೊರಗೆ ಪಟಾಕಿಗಳನ್ನು ಸಿಡಿಸುತ್ತಾರೆ. ಇದರಿಂದಾಗಿಯೂ ಅಲ್ಲಿನ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ಇಂತಹ ಧಾರ್ಮಿಕವಲ್ಲದ ಮತ್ತು ಸಾಮಾಜಿಕ ಪದ್ಧತಿಯ ವಿವಾಹವನ್ನು ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಿದರೆ ದೇವಸ್ಥಾನದ ಚೈತನ್ಯದ ಲಾಭವು ಯಾರಿಗೂ ಸಿಗುವುದಿಲ್ಲ. ಇದರ ಬದಲಾಗಿ ದೇವಸ್ಥಾನದಲ್ಲಿ ರಜ-ತಮವು ಹರಡುತ್ತದೆ. ಆದುದರಿಂದ ಹಿಂದೂಗಳೇ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿಕೊಂಡು ಅಲ್ಲಿ ವಿವಾಹ ಸಂಸ್ಕಾರವನ್ನು ನೆರವೇರಿಸಿರಿ. ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದ ಹೊರಗೆ ಆಚರಿಸಿರಿ. - ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆ, ಸನಾತನ ಸಂಸ್ಥೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ವಿವಾಹ ಸಂಸ್ಕಾರ')
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ವಿವಾಹ ಸಂಸ್ಕಾರ')
No comments:
Post a Comment
Note: only a member of this blog may post a comment.