ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸ!

ಹದಿನಾರನೇ ಶತಮಾನವು ಆರಂಭವಾದ ನಂತರ ಯುರೋಪಿನಲ್ಲಿ ‘ಮಸೂರ’ದ ಸಂಶೋಧನೆಯಾದರೆ ಭಾರತದಲ್ಲಿ ಕ್ರಿ.ಪೂ.೮೦೦ರಲ್ಲಿಯೇ ಮಸೂರವು ಬಳಕೆಯಲ್ಲಿತ್ತು!
ಈಗ ಪ್ರಶ್ನೆಯೇನೆಂದರೆ ಆ ಕಾಲದಲ್ಲಿ ‘ಮಸೂರ’ಗಳು ಅಥವಾ ‘ಲೆನ್ಸ್’ ಇದ್ದವೇನು? ಇದರ ಉತ್ತರ ‘ಹೌದು’; ಏಕೆಂದರೆ ಆದಿಶಂಕರಾಚಾರ್ಯರು ‘ಅಪರೋಕ್ಷಾನುಭೂತಿ’ಯಲ್ಲಿನ ೮೧ನೇ ಶ್ಲೋಕದಲ್ಲಿ ಹೀಗೆ ಬರೆದಿದ್ದಾರೆ, ‘ಸೂಕ್ಷ್ಮತ್ವೇ ಸರ್ವ ವಸ್ತೂನಾಂ ಸ್ಥೂಲತ್ವಂ ಚ ಉಪನೇತ್ರತಃ| ತದ್ವತ್ ಆತ್ಮಾನಿ ದೇಹತ್ವಂ ಪಶ್ಯತಿ ಅಜ್ಞಾನಯೋಗತಃ|’ ಇದರ ಅರ್ಥವೇನೆಂದರೆ, ಯಾವ ರೀತಿ ಉಪನೇತ್ರದಿಂದಾಗಿ ಸೂಕ್ಷ್ಮ ವಸ್ತುಗಳೂ ಸ್ಥೂಲದಲ್ಲಿ ಹಾಗೂ ದೊಡ್ಡದಾಗಿ ಕಾಣಿಸುತ್ತವೆಯೋ, ಅದೇ ರೀತಿ ಅಜ್ಞಾನದಿಂದಾಗಿ ನಾವು ನಮ್ಮನ್ನು ದೇಹಸ್ವರೂಪದಿಂದಲೇ ನೋಡುತ್ತೇವೆ. ಶಂಕರಾಚಾರ್ಯರು ಅಧ್ಯಾತ್ಮವನ್ನು ತಿಳಿಸಿ ಹೇಳುವಾಗ ಈ ಉಪಮೆಯನ್ನು ಅತ್ಯಂತ ಸಹಜವಾಗಿ ಉಪಯೋಗಿಸಿದ್ದಾರೆ. ಇದರಿಂದ ‘ಉಪನೇತ್ರ’ ಅಂದರೆ ‘ಕನ್ನಡಕ’ವು ಜನರ ದೈನಂದಿನ ಬಳಕೆಯ ವಸ್ತುವಾಗಿರಬಹುದು ಎಂಬುದು ತಿಳಿದು ಬರುತ್ತದೆ. ಬಹಿರ್ವಕ್ರ ಮಸೂರದಿಂದ ಚಿಕ್ಕ ವಸ್ತುವನ್ನು ದೊಡ್ಡದಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ಆ ಕಾಲದಲ್ಲಿ ಮಸೂರಗಳಿದ್ದವು. ಆದುದರಿಂದ ‘ದೂರದರ್ಶಕ’ ಯಂತ್ರಗಳೂ ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಶಂಕರಾಚಾರ್ಯರ ಕಾಲವನ್ನು ಸುಮಾರು ಕ್ರಿ.ಪೂ. ೮೦೦ ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಆ ಕಾಲದಲ್ಲಿಯೇ ‘ಮಸೂರ’ವನ್ನು ಉಪಯೋಗಿಸಲಾಗುತ್ತಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ‘ಯುರೋಪದಲ್ಲಿ ಮಾತ್ರ ಹದಿನಾರನೇ ಶತಮಾನ ಆರಂಭವಾದ ನಂತರ ಮಸೂರವನ್ನು ಶೋಧಿಸಲಾಯಿತು’. (ವೈದಿಕ ವಿಜ್ಞಾನ ಮತ್ತು ವೇದಕಾಲನಿರ್ಣಯ, ಪುಟ ಕ್ರ. ೧೫೧ ಮತ್ತು ೧೫೨, ಡಾ. ಪದ್ಮಾಕರ ವಿಷ್ಣು ವರ್ತಕ)

ಪ್ರಾಚೀನ ಭಾರತದಲ್ಲಿ ಸೂಕ್ಷ್ಮದರ್ಶಕಗಳಿರುವ ಬಗ್ಗೆ ಮಹಾಭಾರತದಲ್ಲಿ ಪುರಾವೆಗಳಿದ್ದವು!
ಆ ಕಾಲದಲ್ಲಿ ಸೂಕ್ಷ್ಮದರ್ಶಕಗಳಿದ್ದವೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ‘ಹೌದು’ ಎಂದು ಹೇಳಬಹುದು; ಏಕೆಂದರೆ ಮಹಾಭಾರತ, ಶಾಂತಿ ೩೦೮ರ ೧೦ನೇ ಶ್ಲೋಕದಲ್ಲಿ ‘ಅವ್ಯಕ್ತಲೋಚನಃ’ ಮತ್ತು ೧೨ನೇ ಶ್ಲೋಕದಲ್ಲಿ ‘ಅವ್ಯಕ್ತ ದರ್ಶನ’ ಎಂಬ ಶಬ್ದಗಳು ಇವೆ. ‘ವ್ಯಕ್ತವಿಲ್ಲದ್ದನ್ನು ನೋಡುವ ಕ್ಷಮತೆ ಇರುವ ವ್ಯಕ್ತಿಗಳು ಆ ಕಾಲದಲ್ಲಿದ್ದರು’ ಎಂಬುದು ಇದರಿಂದ ಕಂಡುಬರುತ್ತದೆ. ಇವರನ್ನೇ ಇಂದು ‘ಮೈಕ್ರೋಸ್ಕೋಪ್ ಬಳಸುವವರು’ ಎಂದು ಹೇಳಬಹುದು.

(ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ)

No comments:

Post a Comment

Note: only a member of this blog may post a comment.