Showing posts with label ದೇವರ ಪೂಜೆ. Show all posts
Showing posts with label ದೇವರ ಪೂಜೆ. Show all posts

ದೇವರ ಪೂಜೆ ಮತ್ತು ಉಪಾಸನೆಯ ಬಗೆಗಿನ ಲೇಖನಗಳು

ಈ ಬ್ಲಾಗ್‌ನಲ್ಲಿರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ನಮ್ಮ ಅನುಮತಿ ಪಡೆದು, ಆಧಾರಗ್ರಂಥವನ್ನು ಉಲ್ಲೇಖಿಸಬೇಕು ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ - dharma.granth0@gmail.com

ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು; ಹೆಸರುವಾಸಿಯಾಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಆಯಾ ಧರ್ಮಶಿಕ್ಷಣದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ನೀವು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. - ಧರ್ಮಗ್ರಂಥ (ಸನಾತನ ಸಂಸ್ಥೆ)

ದೇವರ ಪೂಜೆಯ ಬಗೆಗಿನ ಲೇಖನಗಳು
  1. ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
  2. ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
  3. ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
  4. ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
  5. ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
  6. ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
  7. ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
  8. ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
  9. ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?
  10. ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು?
  11. ಶ್ರೀ ದತ್ತಸ್ತವಸ್ತೋತ್ರಮ್
  12. ಶ್ರೀದತ್ತಾತ್ರೇಯಸ್ತೋತ್ರಮ್ (ನಾರದಪುರಾಣ)
  13. ಶ್ರೀ ಗಣೇಶ ಪೂಜಾವಿಧಿ
  14. ಹಸುವಿನ ಸೆಗಣಿಯಿಂದ ಭಸ್ಮವನ್ನು ತಯಾರಿಸುವ ವಿಧಿ
  15. ಬಿಲ್ವಾಷ್ಟಕಮ್
  16. ಲಿಂಗಾಷ್ಟಕಮ್
  17. ಶಿವಾಷ್ಟಕಮ್
  18. ಶಿವಪಂಚಾಕ್ಷರಿ ಸ್ತೋತ್ರಮ್
  19. ಆತ್ಮ ಷಟಕಮ್ / ನಿರ್ವಾಣ ಷಟಕಮ್
  20. ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ
  21. ರುದ್ರಾಕ್ಷಿಧಾರಣೆ
  22. ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ
  23. ಘಂಟಾನಾದದ ಮಹತ್ವ
  24. ಭಸ್ಮಧಾರಣೆ
  25. ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?
  26. ದೇವರ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿನ ಕೆಲವು ಕೃತಿಗಳ ಶಾಸ್ತ್ರ
  27. ನವಗ್ರಹಸ್ತೋತ್ರ
  28. ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು - ದೂರ್ವೆ
  29. ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ
  30. ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
  31. ಶನಿಕಾಟ ನಿವಾರಣೆಗೆ ಮಾರುತಿಯ ಉಪಾಸನೆ ಹೇಗೆ ಮಾಡಬೇಕು?
  32. ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
  33. ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
  34. ಶ್ರೀರಾಮರಕ್ಷಾ ಸ್ತೋತ್ರ

ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ

ಬಲಗಡೆಯ ಸೊಂಡಿಲು


ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ’ ಗಣಪತಿ ಎಂದು ಹೇಳುತ್ತಾರೆ. ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರಿಶೋಧನೆ ಆಗುತ್ತದೆ, ಆದುದರಿಂದ ದಕ್ಷಿಣ ದಿಕ್ಕು ನಮಗೆ ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ ಯಾವ ರೀತಿಯ ಪರಿಶೋಧನೆಯಾಗುತ್ತದೆಯೋ, ಅದೇ ರೀತಿಯ ಪರಿಶೋಧನೆಯು ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತರೆ ಅಥವಾ ಕಾಲುಚಾಚಿ ಮಲಗಿದರೆ ಆಗುತ್ತದೆ. ದಕ್ಷಿಣಾಭಿಮುಖಿಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡುವುದಿಲ್ಲ. ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್’ (ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಅದರಿಂದ ಸಾತ್ತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

ಎಡಗಡೆಯ ಸೊಂಡಿಲು


ಎಡಬದಿಗೆ ಸೊಂಡಿಲಿರುವ ಮೂರ್ತಿ (ಎಡಮುರಿ) ಎಂದರೆ ವಾಮಮುಖಿ ಗಣಪತಿ. ವಾಮ ಎಂದರೆ ಎಡಬದಿ ಅಥವಾ ಉತ್ತರದಿಕ್ಕು. ಎಡಬದಿಗೆ ಚಂದ್ರನಾಡಿಯು ಇರುತ್ತದೆ ಮತ್ತು ಅದು ಶೀತಲತೆಯನ್ನು ಕೊಡುತ್ತದೆ, ಹಾಗೆಯೇ ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕವಾಗಿದೆ, ಆನಂದದಾಯಕವಾಗಿದೆ; ಆದುದರಿಂದಲೇ ವಾಮಮುಖಿ (ಎಡಮುರಿ) ಗಣಪತಿಯನ್ನು ಪೂಜೆಯಲ್ಲಿ ಇಡುತ್ತಾರೆ. ಈ ಗಣಪತಿಯ ಪೂಜೆಯನ್ನು ದಿನನಿತ್ಯದ ಪೂಜೆಯಂತೆ ಮಾಡುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಶ್ರೀ ಗಣಪತಿ’)

ಸಂಕಷ್ಟ ಚತುರ್ಥಿ ಅಥವಾ ಗಣೇಶನ ಹಬ್ಬದಂದು ಮಾಡುವ ಗಣೇಶ ಪೂಜಾವಿಧಿಯನ್ನು ಇಲ್ಲಿ ಓದಿ.

ಶ್ರೀ ಗಣೇಶನ ಕುರಿತು ಲಭ್ಯವಿರುವ ಸನಾತನ ಸಂಸ್ಥೆಯ ಇತರ ಗ್ರಂಥಗಳು
೧. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೨. ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು!
೩. ಶ್ರೀ ಗಣಪತಿ (ಕಿರುಗ್ರಂಥ)
೪. ಶ್ರೀ ಗಣೇಶ ಪೂಜಾವಿಧಿ (ಕೆಲವು ಮಂತ್ರಗಳ ಅರ್ಥಸಹಿತ)

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು - ದೂರ್ವೆ
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಗಣೇಶ ಚತುರ್ಥಿಯಂದು ಮಾಡಬೇಕಾದ ಕೃತಿಗಳು
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಶ್ರೀ ಗಣೇಶ : ಚತುರ್ಥಿ ಮಹತ್ವ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ
Dharma Granth

ರುದ್ರಾಕ್ಷಿಧಾರಣೆ

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.

‘ರುದ್ರಾಕ್ಷ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ

‘ರುದ್ರಾಕ್ಷ’ ಎಂಬ ಶಬ್ದವು ‘ರುದ್ರ + ಅಕ್ಷ’ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ‘ರುದ್ರ’ ಶಬ್ದದ ವಿವಿಧ ಅರ್ಥಗಳನ್ನು ವಿಷಯ ‘೫ಅ.ರುದ್ರ’ ಇದರಲ್ಲಿ ಕೊಡಲಾಗಿದೆ. ‘ಅಕ್ಷ’ ಶಬ್ದದ ಕೆಲವು ಅರ್ಥಗಳ ಆಧಾರದ ಮೇಲೆ ‘ರುದ್ರಾಕ್ಷ’ ಶಬ್ದಕ್ಕೆ ಮುಂದಿನ ಅರ್ಥಗಳಿವೆ -

೧. ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ (ಉದಾ.ಮೂರನೆಯ ಕಣ್ಣು). ಅಕ್ಷ ಎಂದರೆ ಅಕ್ಷ ರೇಖೆ. ಕಣ್ಣು ಒಂದೇ ಅಕ್ಷರೇಖೆಯ ಸುತ್ತಲೂ ತಿರುಗುತ್ತದೆ; ಆದುದರಿಂದ ಅದಕ್ಕೆ ಅಕ್ಷ ಎನ್ನುತ್ತಾರೆ.

೨. ರುದ್ರ ಎಂದರೆ ಅಳುಮುಖದವನು. ‘ಅ’ ಎಂದರೆ ತೆಗೆದುಕೊಳ್ಳುವುದು ಮತ್ತು ‘ಕ್ಷ’ ಎಂದರೆ ಕೊಡುವುದು; ಅಕ್ಷವೆಂದರೆ ತೆಗೆದುಕೊಳ್ಳುವ ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ಅಳುವವನಿಂದ ಅವನ ದುಃಖವನ್ನು ತೆಗೆದುಕೊಳ್ಳುವ ಹಾಗೂ ಅವನಿಗೆ ಸುಖವನ್ನು ಕೊಡುವ ಕ್ಷಮತೆಯಿರುವವನು.

ರುದ್ರವೃಕ್ಷ (ರುಧಿರವೃಕ್ಷ, ರುದ್ರಾಕ್ಷವೃಕ್ಷ)

ತಾರಕಪುತ್ರರು ಅಧರ್ಮಾಚರಣೆಯಲ್ಲಿ ತೊಡಗಿದರೆಂಬ ವಿಷಾದದಿಂದ ಶಂಕರನ ಕಣ್ಣುಗಳಿಂದ ಕೆಳಗೆ ಬಿದ್ದ ಅಶ್ರುಗಳಿಂದ ‘ರುದ್ರಾಕ್ಷವೃಕ್ಷ’ವು ತಯಾರಾಗುವುದು ಮತ್ತು ಶಿವನು ತಾರಕ ಪುತ್ರರನ್ನು ನಾಶಗೊಳಿಸುವುದು: ತಾಡಿನ್‌ಮಾಲಿ, ತಾರಕಾಕ್ಷ ಮತ್ತು ಕಮಲಾಕ್ಷ ಎಂಬ ತಾರಕ ಪುತ್ರರು ಧರ್ಮಾಚರಣೆ ಮತ್ತು ಶಿವಭಕ್ತಿಯನ್ನು ಮಾಡಿ ದೇವತ್ವವನ್ನು ಪ್ರಾಪ್ತಿ ಮಾಡಿಕೊಂಡರು. ಕೆಲವು ಸಮಯದ ನಂತರ ಮತ್ತೆ ಅವರು ಅಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದುದನ್ನು ನೋಡಿ ಶಂಕರನು ವಿಷಾದಗ್ರಸ್ತನಾದನು. ಅವನ ನೇತ್ರಗಳು ಅಶ್ರುಗಳಿಂದ ತುಂಬಿದವು. ಅವನ ನೇತ್ರದಿಂದ ನಾಲ್ಕು ಹನಿಗಳು ಪೃಥ್ವಿಯ ಮೇಲೆ ಬಿದ್ದವು. ಆ ಅಶ್ರುಗಳಿಂದ ಹುಟ್ಟಿದ ವೃಕ್ಷಗಳಿಗೆ ‘ರುದ್ರಾಕ್ಷವೃಕ್ಷ’ ಎನ್ನುತ್ತಾರೆ. ಆ ನಾಲ್ಕು ವೃಕ್ಷಗಳಿಂದ ಕೆಂಪು, ಕಪ್ಪು, ಹಳದಿ ಮತ್ತು ಬಿಳಿ ರುದ್ರಾಕ್ಷಗಳು ನಿರ್ಮಾಣವಾದವು. ಅನಂತರ ಶಿವನು ತಾರಕಪುತ್ರರನ್ನು ನಾಶ ಗೊಳಿಸಿದನು. - ಗುರುದೇವ ಡಾ.ಕಾಟೇಸ್ವಾಮೀಜಿ (೩೦)

ರುದ್ರವೃಕ್ಷದ ಸಾಮಾನ್ಯ ಮಾಹಿತಿ

ಇದು ಸಮುದ್ರದ ಮಟ್ಟದಿಂದ ಮೂರು ಸಾವಿರ ಮೀ. ಎತ್ತರದಲ್ಲಿ ಅಥವಾ ಮೂರು ಸಾವಿರ ಮೀ.ಸಮುದ್ರದಾಳದಲ್ಲಿ ದೊರಕುತ್ತದೆ. ರುದ್ರಾಕ್ಷಿಯ ಗಿಡಗಳು ತಗ್ಗುಪ್ರದೇಶದಲ್ಲಿ ಬೆಳೆಯುತ್ತವೆ, ಸಮತಟ್ಟು ಪ್ರದೇಶದಲ್ಲಿ ಬೆಳೆಯುವುದಿಲ್ಲ. ಈ ಗಿಡದ ಎಲೆಗಳು ಹುಣಸೆ ಮರದ ಅಥವಾ ಗುಲಗಂಜಿಯ ಎಲೆಯಂತೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಈ ಗಿಡಗಳಿಗೆ ಒಂದು ವರ್ಷದಲ್ಲಿ ಒಂದರಿಂದ ಎರಡು ಸಾವಿರ ಹಣ್ಣುಗಳು ಬಿಡುತ್ತವೆ. ಹಿಮಾಲಯದಲ್ಲಿರುವ ಯತಿಗಳು ಕೇವಲ ರುದ್ರಾಕ್ಷಿಫಲಗಳನ್ನೇ ತಿನ್ನುತ್ತಾರೆ. ಈ ಫಲಕ್ಕೆ ಅಮೃತಫಲ ಎಂದೂ ಕರೆಯುತ್ತಾರೆ. ಇವುಗಳನ್ನು ತಿಂದರೆ ಬಾಯಾರಿಕೆಯಾಗುವುದಿಲ್ಲ.

ರುದ್ರಾಕ್ಷಿ (ರುದ್ರಾಕ್ಷಿ ಹಣ್ಣುಗಳು)

ರುದ್ರಾಕ್ಷದ ಹಣ್ಣುಗಳು ಗಿಡದ ಮೇಲೆ ಹಣ್ಣಾಗಿ ಚಳಿಗಾಲದಲ್ಲಿ ಕೆಳಗೆ ಬೀಳುತ್ತವೆ. ಅನಂತರ ಒಳಗಿನ ಬೀಜಗಳು ಒಣಗುತ್ತವೆ. ಒಂದು ಹಣ್ಣಿನಲ್ಲಿ ೧೫-೧೬ ಬೀಜಗಳು (ರುದ್ರಾಕ್ಷಿಗಳು) ಇರುತ್ತವೆ. ಹಣ್ಣಿನಲ್ಲಿ ಬೀಜಗಳು ಹೆಚ್ಚಿಗೆ ಇದ್ದರೆ, ಬೀಜಗಳ ಆಕಾರವು ಕಡಿಮೆಯಿರುತ್ತದೆ ಮತ್ತು ಅವುಗಳ ಬೆಲೆಯೂ ಕಡಿಮೆಯಿರುತ್ತದೆ. ಚಿಕ್ಕ ರುದ್ರಾಕ್ಷಿಗಳನ್ನು ಬಿಡಿಬಿಡಿಯಾಗಿ ಬಳಸದೆ ಒಂದು ಮಾಲೆಯಲ್ಲಿ ಪೋಣಿಸುತ್ತಾರೆ ಮತ್ತು ಅವುಗಳೊಂದಿಗೆ ಒಂದು ದೊಡ್ಡ ರುದ್ರಾಕ್ಷಿಯನ್ನೂ ಪೋಣಿಸುತ್ತಾರೆ. ರುದ್ರಾಕ್ಷಿಗೆ ಮೊದಲಿನಿಂದಲೇ ಒಂದು ರಂಧ್ರವಿರುತ್ತದೆ, ಅದನ್ನು ಮಾಡಬೇಕಾಗುವುದಿಲ್ಲ. ಆ ರಂಧ್ರಕ್ಕೆ ವಾಹಿನಿ ಎನ್ನುತ್ತಾರೆ. ರುದ್ರಾಕ್ಷಿಯ ಬಣ್ಣವು ನಸುಗೆಂಪಾಗಿರುತ್ತದೆ. ಅದರ ಆಕಾರವು ಮೀನಿನಂತೆ ಚಪ್ಪಟೆಯಾಗಿರುತ್ತದೆ. ಅದರ ಮೇಲೆ ಹಳದಿ ಬಣ್ಣದ ಪಟ್ಟೆಗಳಿರುತ್ತವೆ. ಅದರ ಒಂದು ಬದಿಯಲ್ಲಿ ತೆರೆದಿರುವಂತೆ ಬಾಯಿ ಇರುತ್ತದೆ.


೧೦ ಮುಖಕ್ಕಿಂತ ಹೆಚ್ಚು ಮುಖಗಳಿರುವ ರುದ್ರಾಕ್ಷಿಗಳಿಗೆ ‘ಮಹಾರುದ್ರ’ ಎಂದು ಹೇಳುತ್ತಾರೆ. - ಯೋಗತಜ್ಞ ಪ.ಪೂ.ದಾದಾಜಿ ವೈಶಂಪಾಯನ (ಜೇಷ್ಠ ಶು.೫, ಕಲಿಯುಗ ವರ್ಷ ೫೧೧೧ ೨೯.೫.೨೦೦೯)



(ರುದ್ರಾಕ್ಷಿಯ ವೈಶಿಷ್ಟ್ಯಗಳು, ರುದ್ರಾಕ್ಷಿಯ ಕಾರ್ಯ, ರುದ್ರಾಕ್ಷಿಯ ಲಾಭಗಳು, ನಿಜವಾದ ರುದ್ರಾಕ್ಷಿ ಮತ್ತು ನಕಲಿ ರುದ್ರಾಕ್ಷಿಯ ವ್ಯತ್ಯಾಸ, ಎಷ್ಟು ರುದ್ರಾಕ್ಷಿಗಳನ್ನು ಧರಿಸಬೇಕು? ಎಷ್ಟು ಮುಖಗಳಿರುವ ರುದ್ರಾಕ್ಷಿ ಧರಿಸಬೇಕು ಮತ್ತು ಅದರ ಫಲವೇನು? ಮುಂತಾದ ಅನೇಕ ಮಾಹಿತಿಗಾಗಿ ಸನಾತನ ಸಂಸ್ಥೆಯ "ಶಿವ" ಗ್ರಂಥವನ್ನು ಓದಿರಿ.)

ಇತರ ವಿಷಯಗಳು
ಮಹಾಶಿವರಾತ್ರಿ
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ಬಿಲ್ವಪತ್ರೆ 


    ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|
    ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್|| - ಬಿಲ್ವಾಷ್ಟಕ, ಶ್ಲೋಕ ೧   
ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.

ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು

೧. ಸತ್ತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ. ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಅಂದರೆ ಶಂಕರನಿಗೆ ಈ ಮೂರೂ ಅವಸ್ಥೆಗಳ ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು; ಏಕೆಂದರೆ ತ್ರಿಗುಣಾತೀತವಾಗುವುದರಿಂದ ಈಶ್ವರನ ಭೇಟಿಯಾಗುತ್ತದೆ.

ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ

೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು?
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.

ಅ೧. ಶಿವನ ತಾರಕ ರೂಪದ ಉಪಾಸನೆಯನ್ನು ಮಾಡುವವರು
ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದು ವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು ನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)

ಅ೨. ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುವವರು
ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ.

ಅ. ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಆ. ಲಿಂಗದಲ್ಲಿ ಆಹತ (ಲಿಂಗದ ಮೇಲೆ ಬೀಳುವ ನೀರಿನ ಆಘಾತದಿಂದ ನಿರ್ಮಾಣವಾಗುವ) ನಾದದಲ್ಲಿನ ಪವಿತ್ರಕಗಳು ಮತ್ತು ಅನಾಹತ (ಸೂಕ್ಷ್ಮ) ನಾದದಲ್ಲಿನ ಪವಿತ್ರಕಗಳು ಹೀಗೆ ಎರಡು ವಿಧದ ಪವಿತ್ರಕಗಳಿರುತ್ತವೆ. ಈ ಎರಡು ರೀತಿಯ ಪವಿತ್ರಕಗಳನ್ನು ಮತ್ತು ಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯಲ್ಲಿನ ಪವಿತ್ರಕಗಳನ್ನು, ಹೀಗೆ ಮೂರು ರೀತಿಯ ಪವಿತ್ರಕಗಳನ್ನು ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆ ಬಿಲ್ವಪತ್ರೆಯು ಆಹತ (ನಾದ ಭಾಷೆ) ಮತ್ತು ಅನಾಹತ (ಪ್ರಕಾಶಭಾಷೆ) ಧ್ವನಿಗಳನ್ನು ಒಟ್ಟುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖ ವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಈ ಮೂರು ಪವಿತ್ರಕಗಳ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೨. ಬಿಲ್ವವನ್ನು ಅರ್ಪಿಸುವ ಪದ್ಧತಿಗನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶಿವತತ್ತ್ವದಿಂದಾಗುವ ಲಾಭ


ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ಶಿವಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡುವ ಪ್ರಮಾಣವು ಹೆಚ್ಚಿಗೆ ಇರುತ್ತದೆ. ಈ ಪದ್ಧತಿಯಿಂದ ಸಮಷ್ಟಿಗೆ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಲಿಂಗದ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ತೊಟ್ಟಿನಿಂದ ಕೇವಲ ಬಿಲ್ವವನ್ನು ಅರ್ಪಿಸುವವನಿಗೆ ಮಾತ್ರ ಶಿವತತ್ತ್ವವು ಸಿಗುತ್ತದೆ. ಈ ಪದ್ಧತಿಯಿಂದ ವ್ಯಷ್ಟಿ ಸ್ತರದಲ್ಲಿ ಹೆಚ್ಚಿಗೆ ಲಾಭವಾಗುತ್ತದೆ.

ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.
ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.

ಬಿಲ್ವಾರ್ಚನೆ

‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.

ಆರೋಗ್ಯದ ದೃಷ್ಟಿಯಿಂದ ಬಿಲ್ವಪತ್ರೆಯ ಲಾಭಗಳು

೧. ಆಯುರ್ವೇದದಲ್ಲಿನ ಕಾಯಾಕಲ್ಪದಲ್ಲಿ ತ್ರಿದಲರಸಸೇವನೆಗೆ ಬಹಳ ಮಹತ್ವವನ್ನು ಕೊಡಲಾಗಿದೆ.
೨. ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ಯಾವುದಾದರೊಂದು ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವವನ್ನು ಉಪಯೋಗಿಸಬೇಕು. ಗರ್ಭವತಿ ಸ್ತ್ರೀಯರಿಗೆ ಮಾತ್ರ ಬಿಲ್ವವನ್ನು ಕೊಡಬಾರದು, ಏಕೆಂದರೆ ಅದನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆಯಿರುತ್ತದೆ.

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಶಿವನ ವಿಶ್ರಾಂತಿಯ ಕಾಲ ಎಂದರೇನು? 
Dharma Granth

ಘಂಟಾನಾದದ ಮಹತ್ವ

ಘಂಟೆಯ ಕೋಲು ಮತ್ತು ಘಂಟೆಯ ವಿಶಿಷ್ಟ ಆಕಾರದಿಂದಾಗಿ ಭೂಮಿಲಹರಿಗಳು ಘಂಟೆಯ ಕೋಲಿನತ್ತ ಆಕರ್ಷಿತವಾಗುತ್ತವೆ ಮತ್ತು ಈ ಭೂಮಿಲಹರಿಗಳು ಘಂಟೆಯ ವಿಶಿಷ್ಟ ಆಕಾರದಲ್ಲಿ ಘನೀಕರಣಗೊಳ್ಳುತ್ತವೆ. ಘಂಟೆಯ ನಾದವನ್ನು ಮಾಡಿದಾಗ ಘಂಟೆಯಲ್ಲಿ ಘನೀಕರಣವಾದ ವಾಯುಮಂಡಲದಲ್ಲಿನ ಲಹರಿಗಳು ಕಂಪನಗೊಳ್ಳುತ್ತವೆ ಮತ್ತು ಇದರಿಂದ ಉತ್ಪನ್ನವಾದ ನಾದ ಶಕ್ತಿಯ ಕಡೆಗೆ ಬ್ರಹ್ಮಾಂಡದಲ್ಲಿನ ಶಿವತತ್ತ್ವವು ಆಕರ್ಷಿತವಾಗುತ್ತದೆ. ಶಿವತತ್ತ್ವದೊಂದಿಗೆ ಸಂಬಂಧಿತ ಈ ರಜೋಗುಣಯುಕ್ತ ಮಾರಕ ನಾದಲಹರಿಗಳು ಪಾತಾಳದಿಂದ ಹರಡುವ ತೊಂದರೆದಾಯಕ ಲಹರಿಗಳಲ್ಲಿನ ರಜ-ತಮ ಕಣಗಳನ್ನು ವಿಘಟಿಸುತ್ತವೆ.

ಘಂಟೆಯ ನಾದದಿಂದ ಭೂಮಿಗೆ ಸಮೀಪದ ಅಧೋಗಾಮಿ ದಿಶೆಯಲ್ಲಿ ಕಾರ್ಯನಿರತವಾಗಿರುವ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಂಖನಾದದಿಂದ ಊರ್ಧ್ವದಿಶೆಯಲ್ಲಿ ಕಾರ್ಯಮಾಡುವ ವಾಯುಮಂಡಲದಲ್ಲಿನ ಲಹರಿಗಳ ಶುದ್ಧೀಕರಣವಾಗುತ್ತದೆ. ಆದುದರಿಂದ ಪೂಜಾವಿಧಿಯಲ್ಲಿ ಶಂಖನಾದಕ್ಕೆ ಹಾಗೂ ಘಂಟಾನಾದಕ್ಕೆ ಬಹಳ ಮಹತ್ವವಿದೆ. ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೫, ಮಧ್ಯಾಹ್ನ ೧.೪೩)

ಘಂಟೆಯ ನಾದ ಮಾಡುವಾಗ ಆಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ
ಅ. ಸೂಕ್ಷ್ಮಜ್ಞಾನದ ಚಿತ್ರದ ಸತ್ಯತೆ: ಶೇ.೮೦
ಆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಒಳ್ಳೆಯ ಸ್ಪಂದನಗಳು: ಶೇ.೨ - ಪ.ಪೂ.ಡಾ.ಆಠವಲೆ


ಇ. ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ: ಈಶ್ವರೀ ತತ್ತ್ವ ಶೇ.೧.೨೫, ಚೈತನ್ಯ (ಸಗುಣ-ನಿರ್ಗುಣ) ಶೇ.೨ ಮತ್ತು ಶಕ್ತಿ ಶೇ.೩.೨೫

ಈ.ಇತರ ಅಂಶಗಳು
೧. ಈಶ್ವರನ ಪೂಜೆಯಲ್ಲಿ ಆಕರ್ಷಿಸುವ ಸ್ಪಂದನಗಳು ನಿರ್ಗುಣ ಸ್ವರೂಪದಲ್ಲಿರುತ್ತವೆ. ಘಂಟೆಯ ನಾದದಿಂದಾಗಿ ದೇವತೆಯ ಈ ಸ್ಪಂದನಗಳು ಸಗುಣ-ನಿರ್ಗುಣ ಸ್ವರೂಪದಲ್ಲಿ ಬರುತ್ತವೆ ಮತ್ತು ಈ ಸ್ಪಂದನಗಳು ಭಕ್ತರಿಗೆ ದೊರಕುತ್ತವೆ.
೨. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ನಿರ್ಮಿಸಿದ ಕಪ್ಪು ಶಕ್ತಿಯ ಮೋಡಗಳು ಘಂಟೆಯ ನಾದದಿಂದ ದೂರವಾಗುತ್ತವೆ. ಹಾಗೆಯೇ ಸೂರ್ಯಪ್ರಕಾಶದಂತೆ ಚೈತನ್ಯದ ಕಿರಣವು ಭಕ್ತರೆಡೆಗೆ ಬರುತ್ತದೆ.
೩. ಘಂಟೆಯನ್ನು ಅಲುಗಾಡಿಸಿದುದರಿಂದ ವಾಯುತತ್ತ್ವ ಮತ್ತು ಅದರ ನಾದದಿಂದ ಆಕಾಶತತ್ತ್ವ ಕಾರ್ಯನಿರತವಾಗುತ್ತದೆ.
೪. ಘಂಟೆಯ ನಾದದಿಂದ ‘ಣಂ’ ಎಂಬ ಬೀಜಮಂತ್ರವು ಕೇಳಿಸುತ್ತದೆ.
೫. ವ್ಯಕ್ತಿಯು ಘಂಟೆಯನ್ನು ಭಾವಪೂರ್ಣವಾಗಿ ಬಾರಿಸಿದರೆ ಅದರಿಂದ ಸತ್ತ್ವಪ್ರಧಾನ ಸ್ಪಂದನಗಳು ಪ್ರಕ್ಷೇಪಿಸುತ್ತವೆ ಮತ್ತು ಭಾವಪೂರ್ಣವಾಗಿ ಬಾರಿಸದಿದ್ದರೆ ಸತ್ತ್ವ-ಪ್ರಧಾನ ಘಂಟೆಯಿಂದಲೂ ರಜೋಗುಣಿ ಸ್ಪಂದನಗಳು ಪ್ರಕ್ಷೇಪಿಸಬಹುದು.

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಕಿರುಗ್ರಂಥ 'ದೇವರಕೋಣೆ ಮತ್ತು ಪೂಜೆಯ ಉಪಕರಣಗಳು')

ಸಂಬಂಧಿತ ಲೇಖನಗಳು
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

ಹಸುವಿನ ಸೆಗಣಿಯಿಂದ ಭಸ್ಮವನ್ನು ತಯಾರಿಸುವ ವಿಧಿ

ಶಿವನ ಪೂಜೆಯಲ್ಲಿ ಭಸ್ಮಧಾರಣೆಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಭಸ್ಮವನ್ನು ತಯಾರಿಸುವ ವಿಧಿಯನ್ನು ತಿಳಿದುಕೊಳ್ಳೋಣ.

‘ದೇಶಿ ಹಸುವಿನ ಸೆಗಣಿಯನ್ನು ನೆಲದ ಮೇಲೆ ಬೀಳದಂತೆ ಮೇಲಿನಿಂದಲೇ ಹಿಡಿಯಬೇಕು. ಅದರಿಂದ ಬೆರಣಿಗಳನ್ನು ತಯಾರಿಸಬೇಕು. ಈ ಬೆರಣಿಗಳನ್ನು ದಹನ ಮಾಡಿದ ಮೇಲೆ ಯಾವ ಬೂದಿಯು ತಯಾರಾಗುತ್ತದೆಯೋ ಅದಕ್ಕೆ ಭಸ್ಮವೆನ್ನುತ್ತಾರೆ.

ಭಸ್ಮವನ್ನು ಯಾವ ಸ್ಥಳದಲ್ಲಿ ತಯಾರಿಸುವುದಿರುತ್ತದೆಯೋ ಆ ಸ್ಥಳವನ್ನು ಮೊದಲು ಸೆಗಣಿಯಿಂದ ಸಾರಿಸಿಕೊಳ್ಳಬೇಕು. ಗೋಮೂತ್ರ ಅಥವಾ ವಿಭೂತಿಯ ತೀರ್ಥವನ್ನು ಸಿಂಪಡಿಸಿ ಆ ಸ್ಥಳವನ್ನು ಶುದ್ಧಗೊಳಿಸಿ ರಂಗೋಲಿಯನ್ನು ಹಾಕಬೇಕು. ಅನಂತರ ಹವನದ ಪಾತ್ರೆಯಲ್ಲಿ ಅಥವಾ ಯಾವುದಾದರೊಂದು ವಿಶಾಲಪಾತ್ರೆಯಲ್ಲಿ ಬೆರಣಿಗಳನ್ನು ಸರಿಯಾಗಿ ರಚಿಸಿಕೊಳ್ಳಬೇಕು. ಬೆರಣಿಗಳ ಮೇಲೆ ದೇಶಿ ಹಸುವಿನ ತುಪ್ಪವನ್ನು ಹಾಕಬೇಕು. ಕುಲದೇವತೆ, ಇಷ್ಟದೇವತೆ ಮತ್ತು ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಿ ಕರ್ಪೂರದಿಂದ ಬೆರಣಿಗಳನ್ನು ಪ್ರಜ್ವಲಿಸಬೇಕು. ಬೆರಣಿಗಳು ಸುಡುತ್ತಿರುವಾಗ ಕುಲದೇವತೆ ಅಥವಾ ಇಷ್ಟದೇವತೆಯ ನಾಮಜಪ ಮಾಡಬೇಕು. ಭಸ್ಮವು ತಯಾರಾದ ನಂತರ ಅದನ್ನು ಒಂದು ಪಾತ್ರೆಯಲ್ಲಿ ತುಂಬಬೇಕು. ಅನಂತರ ಪಾತ್ರೆಯನ್ನು ಸಾಧ್ಯವಿದ್ದಲ್ಲಿ ದರ್ಭೆಯಿಂದ ಇಲ್ಲವಾದರೆ ಬಲಗೈಯಿಂದ ಸ್ಪರ್ಶಿಸಿ ಹತ್ತು ಬಾರಿ ಗಾಯತ್ರಿ ಮಂತ್ರವನ್ನು ಹೇಳಬೇಕು. ಹೀಗೆ ಮಾಡುವುದರಿಂದ ಭಸ್ಮವು ಅಭಿಮಂತ್ರಿತವಾಗುತ್ತದೆ. ಭಸ್ಮವನ್ನು ಅಭಿಮಂತ್ರಿತಗೊಳಿಸುವುದೆಂದರೆ ಭಸ್ಮದಲ್ಲಿ ದೇವತೆಯ ಚೈತನ್ಯವನ್ನು ತರುವುದು. ಗಾಯತ್ರಿ ಮಂತ್ರದ ಪುರಶ್ಚರಣ ಮಾಡಿದ ವ್ಯಕ್ತಿಯು ಭಸ್ಮವನ್ನು ಅಭಿಮಂತ್ರಿತಗೊಳಿಸಿದರೆ ಆ ಭಸ್ಮವನ್ನು ಉಪಯೋಗಿಸುವ ವ್ಯಕ್ತಿಗೆ ಹೆಚ್ಚು ಲಾಭವಾಗುತ್ತದೆ. ಭಸ್ಮವನ್ನು ಅಭಿಮಂತ್ರಿಸುವ ವ್ಯಕ್ತಿಯು ಗಾಯತ್ರಿಮಂತ್ರದ ಪುರಶ್ಚರಣವನ್ನು ಮಾಡದಿದ್ದಲ್ಲಿ ಅವನು ಭಾವಪೂರ್ಣವಾಗಿ ‘ಓಂ ನಮಃ ಶಿವಾಯ|’ ಎಂಬ ನಾಮಜಪವನ್ನು ಮಾಡಬೇಕು ಅಥವಾ ಶಿವನ ಯಾವುದಾದರೊಂದು ಸಿದ್ಧಗೊಳಿಸಿದ ಮಂತ್ರವನ್ನು ಪಠಿಸಬೇಕು.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶಿವ')

ಇತರ ವಿಷಯಗಳು
ಶಿವಲಿಂಗದ ವಿಧಗಳು

ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?

ಸ್ಟೀಲ್ ಧಾತುವಿನ ಉಪಕರಣಗಳಿಗಿಂತ ತಾಮ್ರದ ಅಥವಾ ಹಿತ್ತಾಳೆಯ ಉಪಕರಣಗಳನ್ನು ಉಪಯೋಗಿಸುವುದು ಏಕೆ ಹೆಚ್ಚು ಶ್ರೇಯಸ್ಕರವಾಗಿದೆ?

೧. ಸ್ಟೀಲ್ ಧಾತುವಿನ ಉಪಕರಣಗಳಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ ಮತ್ತು ಅದರಲ್ಲಿ ಕಪ್ಪು ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ: ಪೂಜೆಗಾಗಿ ಇತ್ತೀಚೆಗೆ ಅನೇಕ ಜನರು ಸ್ಟೀಲ್ ಧಾತುವಿನ ಉಪಕರಣಗಳನ್ನು ಉಪಯೋಗಿಸುತ್ತಿದ್ದಾರೆ. ಸ್ಟೀಲ್ ಧಾತುವಿನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಎಲ್ಲಕ್ಕಿಂತ ಕಡಿಮೆ ಮತ್ತು ಕಪ್ಪುಶಕ್ತಿಯನ್ನು ಆಕರ್ಷಿಸುವ ಸಾಧ್ಯತೆಯು ಎಲ್ಲಕ್ಕಿಂತ ಹೆಚ್ಚಿರುತ್ತದೆ. ಸ್ಟೀಲ್‌ನ ಉಪಕರಣಗಳಿಂದ ನಮಗೆ ಹೆಚ್ಚಿನ ಲಾಭ ಆಗುವುದಿಲ್ಲ; ಏಕೆಂದರೆ ಅವುಗಳಿಂದ ನಮಗೆ ಸಾತ್ತ್ವಿಕತೆ ಮತ್ತು ಚೈತನ್ಯವು ಸಿಗುವುದಿಲ್ಲ ಮತ್ತು ಭಾವಜಾಗೃತಿಯೂ ಆಗುವುದಿಲ್ಲ.

೨. ತಾಮ್ರ ಮತ್ತು ಹಿತ್ತಾಳೆಯಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ: ತಾಮ್ರ ಮತ್ತು ಹಿತ್ತಾಳೆಯ ಧಾತುಗಳ ಪ್ರತಿಯೊಂದು ಕಣದಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ. ಹಾಗೆಯೇ ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮೊದಲು ಹುಣಸೆ ಮತ್ತು ನಿಂಬೆಹಣ್ಣನ್ನು ಉಪಯೋಗಿಸಿ ತಾಮ್ರ-ಹಿತ್ತಾಳೆಯ ಉಪಕರಣಗಳನ್ನು ಸ್ವಚ್ಛಗೊಳಿಸುವುದರಿಂದ ಅವುಗಳ ಮೇಲೆ ಬಂದಿರುವ ಕಪ್ಪು ಆವರಣವೂ ದೂರವಾಗುತ್ತದೆ.

೩. ತಾಮ್ರದ ವೈಶಿಷ್ಟ್ಯಗಳು
ಅ. ತಾಮ್ರದಲ್ಲಿ ಎಲ್ಲ ದೇವತೆಗಳ ತತ್ತ್ವಗಳನ್ನು ಶೇ.೩೦ರಷ್ಟು ಗ್ರಹಿಸುವ ಕ್ಷಮತೆಯಿದೆ.
ಆ. ತಾಮ್ರದಲ್ಲಿ ಶೇ.೩೦ರಷ್ಟು ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯಿದೆ. ಆದುದರಿಂದ ತಾಮ್ರವನ್ನು ಮಂಗಲಸ್ವರೂಪವೆಂದು ತಿಳಿಯುತ್ತಾರೆ ಮತ್ತು ಅದರಿಂದ ಭಗವಂತನು ಪ್ರಸನ್ನನಾಗುತ್ತಾನೆ.
ಇ. ತಾಮ್ರದಲ್ಲಿ ರಜ-ತಮವನ್ನು ನಾಶಗೊಳಿಸುವ ಕ್ಷಮತೆಯು ಶೇ.೭೦ರಷ್ಟಿದೆ. ಆದುದರಿಂದ ತಾಮ್ರದ ಪಾತ್ರೆಗಳಲ್ಲಿ ಯಾವುದೇ ವಸ್ತುವನ್ನು ಉದಾ.ನೀರನ್ನು ಇಟ್ಟರೆ ಅದರಲ್ಲಿರುವ ರಜ-ತಮವು ಶೇ.೭೦ರಷ್ಟು ಕಡಿಮೆಯಾಗುತ್ತದೆ ಮತ್ತು ಸಾತ್ತ್ವಿಕತೆಯು ಹೆಚ್ಚಾಗತೊಡಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೫.೧.೨೦೦೫, ರಾತ್ರಿ ೧೧.೪೯)

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?

ಹೂವುಗಳ ಎಸಳುಗಳಿಗೆ ಸಂಬಂಧಿಸಿದ ಕೊಳವೆಯಂತಹ ಭಾಗಕ್ಕೆ ‘ತೊಟ್ಟು’ ಎನ್ನುತ್ತಾರೆ ಮತ್ತು ತೊಟ್ಟಿನ ಹಿಂದಿರುವ ಜಡತ್ವಧಾರಿ ಭಾಗಕ್ಕೆ ‘ತುಂಬು’ ಎನ್ನುತ್ತಾರೆ. ತುಂಬಿನಲ್ಲಿರುವ ನಾದವು ಜಡತ್ವಧಾರಿ, ಅಂದರೆ ಆಘಾತಾತ್ಮಕವಾಗಿರುತ್ತದೆ ಮತ್ತು ತೊಟ್ಟಿನ ಟೊಳ್ಳಿನಲ್ಲಿರುವ ನಾದವು ಸುಷೀರ, ಅಂದರೆ ವಾಯುಧಾರಣೆಗೆ ಸಂಬಂಧಿಸಿರುವುದರಿಂದ ಅದು ಚೈತನ್ಯವನ್ನು ಪ್ರವಹಿಸುವಲ್ಲಿ ಅಗ್ರೇಸರವಾಗಿರುತ್ತದೆ. ಹೂವುಗಳಿಗೆ ಸಂಬಂಧಿಸಿರುವ ತೊಟ್ಟು ಅಥವಾ ಹೂವುಗಳ ದಂಟನ್ನು ಯಾವಾಗಲೂ ಕೀಳಬಾರದು; ಏಕೆಂದರೆ ಅದನ್ನು ಕಿತ್ತರೆ, ಕೆಲವೊಮ್ಮೆ ಹೂವುಗಳ ಎಸಳುಗಳು ಹೂವುಗಳಿಂದ ಬೇರೆಯಾಗುವ ಮತ್ತು ಹೂವುಗಳ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಕಡಿಮೆಯಾಗುತ್ತದೆ.

ಕೆಲವು ಹೂವುಗಳಿಗೆ ಅವುಗಳ ಎಸಳುಗಳಿಗೆ ಕೂಡಿಕೊಂಡಿರುವ ತೊಟ್ಟಲ್ಲದೇ ಒಂದು ಸಣ್ಣ ಹಸಿರು ಭಾಗವು ತೊಟ್ಟಿನ ಕೆಳಗೆ ಜೋಡಿಸಿರುತ್ತದೆ. ಆ ತುಂಬನ್ನು ಅವಶ್ಯವಾಗಿ ತೆಗೆಯಬೇಕು. ಗೋರಂಟೆ (ಗೊರಟೆ, ಗೊರಟಿಗೆ) ನಂದಿಬಟ್ಟಲು ಇವುಗಳಂತಹ ಹೂವುಗಳ ತೊಟ್ಟುಗಳ ಕೆಳಗೆ ಇಂತಹ ಸಣ್ಣ ತುಂಬುಗಳು ಕಂಡುಬರುತ್ತವೆ. ಅವುಗಳನ್ನು ಅವಶ್ಯವಾಗಿ ತೆಗೆಯಬೇಕು; ಏಕೆಂದರೆ ಈ ತುಂಬುಗಳು ತೊಟ್ಟಿನ ಕಡೆಗೆ ಸಂಕ್ರಮಿತವಾಗುವ ದೇವತೆಯ ಚೈತನ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತವೆ. ಈ ತುಂಬುಗಳು ಜಡತ್ವಧಾರಿ, ಅಂದರೆ ಪೃಥ್ವಿಧಾರಕತೆಗೆ ಸಂಬಂಧಿಸಿರುವುದರಿಂದ ಅವುಗಳ ಚೈತನ್ಯವನ್ನು ಪ್ರವಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ. ಈ ತುಂಬುಗಳು ಹೂವುಗಳ ತೊಟ್ಟಿನ ಜೊತೆಗೆ ಹಾಗೇ ಬಿಟ್ಟರೆ, ತಮ್ಮ ಪೃಥ್ವಿತತ್ತ್ವಾತ್ಮಕ ಸ್ಪರ್ಶದಿಂದ ತೊಟ್ಟಿನ ಚೈತನ್ಯವನ್ನು ಪ್ರವಹಿಸುವ ಕಾರ್ಯಕ್ಷಮತೆಯನ್ನೂ ಕಡಿಮೆಗೊಳಿಸುತ್ತವೆ. ಇದರಿಂದ ಪೂಜಕನಿಗೆ ದೇವತೆಯಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಅಪೇಕ್ಷಿತ ಲಾಭವಾಗುವುದಿಲ್ಲ; ಆದುದರಿಂದಲೇ ಈ ತುಂಬುಗಳನ್ನು ತೆಗೆದೇ ಹೂವುಗಳನ್ನು ದೇವರಿಗೆ ಅರ್ಪಿಸಬೇಕು.’

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು? 
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು - ದೂರ್ವೆ


ಗಣೇಶನ ಪೂಜೆಯಲ್ಲಿ ದೂರ್ವೆಗೆ (ಗರಿಕೆ) ವಿಶೇಷ ಮಹತ್ವವಿದೆ.

ಅ. ವ್ಯುತ್ಪತ್ತಿ ಮತ್ತು ಅರ್ಥ: 
ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.

ಆ. ಶ್ರೀ ಗಣಪತಿಗೆ ದೂರ್ವೆಯನ್ನು ಅರ್ಪಿಸುವುದರ ಕಾರಣಗಳು

ಆ೧. ಪೌರಾಣಿಕ ಕಾರಣ: ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’

ಆ೨. ಆಯುರ್ವೇದಕ್ಕನುಸಾರ ಕಾರಣ: ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.

ಆ೩. ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

೧ಇ.ದೂರ್ವೆ ಹೇಗಿರಬೇಕು?: ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ದೂರ್ವೆಗಳಿಗೆ ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

೧ಈ. ದೂರ್ವೆಯು ಎಷ್ಟು ಉದ್ದವಾಗಿರಬೇಕು?: ಮೊದಲು ಗಣಪತಿಯ ಮೂರ್ತಿಯು ಸುಮಾರು ಒಂದು ಮೀಟರಿನಷ್ಟು ಎತ್ತರವಾಗಿರುತ್ತಿತ್ತು. ಆದುದರಿಂದ ಸಮಿತ್ತಿನಷ್ಟು ಉದ್ದದ ದೂರ್ವೆಗಳನ್ನು ಅರ್ಪಿಸುತ್ತಿದ್ದರು. ಮೂರ್ತಿಯೇ ಸಮಿತ್ತುಗಳ ಆಕಾರದಷ್ಟು ಇದ್ದರೆ ಚಿಕ್ಕ ಆಕಾರದ ದೂರ್ವೆಗಳನ್ನು ಅರ್ಪಿಸಬೇಕು; ಮತ್ತು ಮೂರ್ತಿಯು ತುಂಬಾ ದೊಡ್ಡದಾಗಿದ್ದರೂ ಸಮಿತ್ತಿನ ಆಕಾರದ ದೂರ್ವೆಗಳನ್ನೇ ಅರ್ಪಿಸಬೇಕು. ಸಮಿತ್ತುಗಳನ್ನು ಒಟ್ಟಿಗೆ ಕಟ್ಟುವಂತೆ ದೂರ್ವೆಗಳನ್ನೂ ಒಟ್ಟಿಗೆ ಕಟ್ಟುತ್ತಾರೆ. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ. ಇವುಗಳಿಂದ ಗಣಪತಿಯ ಪವಿತ್ರಕಗಳು ಹೆಚ್ಚು ಕಾಲ ಮೂರ್ತಿಯಲ್ಲಿ ಉಳಿಯುತ್ತವೆ.


೧ಉ. ದೂರ್ವೆಗಳ ಸಂಖ್ಯೆ ಎಷ್ಟಿರಬೇಕು?: ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ. ಬೆಸ ಸಂಖ್ಯೆಗಳಿಂದ ಮೂರ್ತಿಯಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಗಣಪತಿಗೆ ವಿಶೇಷವಾಗಿ ೨೧ ದೂರ್ವೆಗಳನ್ನು ಅರ್ಪಿಸುತ್ತಾರೆ. ೨೧ ಈ ಸಂಖ್ಯೆಯು ಸಂಖ್ಯಾಶಾಸ್ತ್ರಕ್ಕನುಸಾರ ೨ + ೧=೩ ಹೀಗೆ ಆಗಿದೆ. ಶ್ರೀ ಗಣಪತಿಯು ‘೩’ ಈ ಸಂಖ್ಯೆಗೆ ಸಂಬಂಧಿಸಿದ್ದಾನೆ. ‘೩’ ಈ ಸಂಖ್ಯೆಯು ಕರ್ತ, ಧರ್ತದೊಂದಿಗೆ ಹರ್ತವೂ ಆಗಿರುವುದರಿಂದ ಈ ಶಕ್ತಿಯಿಂದ ೩೬೦ ಲಹರಿಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ. ಸಮ ಸಂಖ್ಯೆಗಳಲ್ಲಿ ದೂರ್ವೆಗಳನ್ನು ಅರ್ಪಿಸಿದರೆ ೩೬೦ ಲಹರಿಗಳು ಹೆಚ್ಚಿಗೆ ಆಕರ್ಷಿತವಾಗುತ್ತವೆ ಮತ್ತು ನಂತರ ೧೦೮ ಲಹರಿಗಳೂ ಆಕರ್ಷಿತವಾಗುತ್ತವೆ. (ರಾವಣನು ಪ್ರತಿದಿನ ೩೬೦ + ೧೦೮ = ೪೬೮ ದೂರ್ವೆಗಳನ್ನು ಅರ್ಪಿಸುತ್ತಿದ್ದನು.)

(ದೂರ್ವೆಯಿಂದ ಸೂಕ್ಷ್ಮದಲ್ಲಾಗುವ ಲಾಭಗಳನ್ನು ತೋರಿಸುವ ಚಿತ್ರ ಮತ್ತು ಮಾಹಿತಿಯನ್ನು ಗ್ರಂಥದಲ್ಲಿ ಓದಿ.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ "ಶ್ರೀ ಗಣಪತಿ")

ಇತರ ವಿಷಯಗಳು
ಶ್ರೀ ಗಣೇಶ : ಚತುರ್ಥಿ ಮಹತ್ವ 
ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ
ಗಣೇಶ ಜಯಂತಿ
ಶ್ರೀ ಗಣೇಶ ಪೂಜಾವಿಧಿ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭ
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?
ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು?
Dharma Granth

ಶ್ರೀ ಗಣೇಶ ಪೂಜಾವಿಧಿ


ಪೂಜೆಯ ಸಿದ್ಧತೆ (ತಯಾರಿ)

ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪವನ್ನು ಹೇಗೆ ಮಾಡಬೇಕು?
ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪ ಮಾಡಬೇಕು. ನಾಮಜಪದ ತುಲನೆಯಲ್ಲಿ ಸ್ತೋತ್ರದಲ್ಲಿ ಸಗುಣ ತತ್ತ್ವವು ಹೆಚ್ಚಿರುತ್ತದೆ. ಆದುದರಿಂದ ಸ್ತೋತ್ರವನ್ನು ದೊಡ್ಡಸ್ವರದಲ್ಲಿ ಹೇಳಬೇಕು ಮತ್ತು ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡಬೇಕು. ನಾಮ ಜಪವು ಮನಸ್ಸಿನಲ್ಲಿ ಆಗ?ದ್ದರೆ ದೊಡ್ಡಸ್ವರದಲ್ಲಿ ಮಾಡಬಹುದು.

ಪೂಜಾಸಾಹಿತ್ಯದ ಪಟ್ಟಿ: ೧.ಕುಂಕುಮ ೧೦೦ ಗ್ರಾಮ್, ೨.ಅರಿಶಿನ ೧೦೦ ಗ್ರಾಮ್, ೩.ಸಿಂಧೂರ ೨೫ ಗ್ರಾಮ್, ೪.ಅಷ್ಟಗಂಧ ೫೦ ಗ್ರಾಮ್, ೫.ರಂಗೋಲಿ ಪುಡಿ ಕಾಲು ಕಿಲೋ, ೬.ಸುಗಂಧದ್ರವ್ಯ ೧ ಸೀಸೆ, ೭.ಯಜ್ಞೋಪವೀತ (ಜನಿವಾರ) ೨, ೮.ಊದುಬತ್ತಿ ೨೫ ಕಡ್ಡಿಗಳು, ೯.ಕರ್ಪೂರ ೨೫ ಗ್ರಾಮ್, ೧೦.ಬತ್ತಿ ೫೦, ೧೧.ಗೆಜ್ಜೆವಸ್ತ್ರಗಳು ೬ (೭ ಮಣಿಗಳ), ೧೨. ಅಕ್ಷತೆ (ಅಖಂಡ ಅಕ್ಕಿ) ೧೦೦ ಗ್ರಾಮ್, ೧೩.ಅಡಿಕೆ ೧೫, ೧೪.ತೆಂಗಿನಕಾಯಿ ೫, ೧೫.ವೀಳ್ಯೆದೆಲೆ ೨೫, ೧೬.ಅಕ್ಕಿ ೧ ಕಿಲೋ, ೧೭.ಒಂದು ರೂಪಾಯಿಯ ೧೦ ನಾಣ್ಯಗಳು, ೧೮.ಎಳ್ಳೆಣ್ಣೆ ೧ ಲೀಟರ್, ೧೯.ಶುದ್ಧ ತುಪ್ಪ ೧೦೦ ಗ್ರಾಮ್, ೨೦.ಹೂವು ೧ ಕಿಲೋ, ೨೧.ಹೂವುಗಳ ಹಾರ ೩, ೨೨.ತುಳಸಿ (೨ ಎಲೆಗಳಿರುವ) ೨೫, ೨೩.ಇನ್ನೂರು ದೂರ್ವೆ, ೨೪.ಬಿಲ್ವದ ೧೫ ಎಲೆಗಳು (ತ್ರಿದಳ), ೨೫.ಹಣ್ಣು ೧೦ (ಐದು ರೀತಿಯ), ೨೬.ಪತ್ರೆ, ೨೭.ದೇವರ ಮೂರ್ತಿ (ಶ್ರೀ ಗಣಪತಿ) ೧, ೨೮.ಚೌರಂಗ ೧, ೨೯.ಮಣೆ ೪, ೩೦.ಕಲಶ ೧, ೩೧.ತಾಮ್ರದ ತಟ್ಟೆ ೩, ೩೨.ಘಂಟೆ ೧, ೩೩.ಕಾಲು?ಪ ೨, ೩೪.ನೀಲಾಂಜನ ೪, ೩೫.ಪಂಚಪಾತ್ರೆ ೧, ೩೬ ಉದ್ಧರಣೆ ೧, ೩೭.ತಟ್ಟೆ ೫, ೩೮.ಬಟ್ಟಲು ೧೫, ೩೯.ಪಾತ್ರೆ (ಪಾತೇಲಿ) ೧, ೪೦.ಮಾವಿನ ಎಲೆ ೫ ಟೊಂಗೆಗಳು, ೪೧.ಏಕಾರತಿ ೧, ೪೨.ಪಂಚಾರತಿ ೧, ೪೩.ಒಂದು ಬೆಂಕಿಪೊಟ್ಟಣ, ೪೪.ಹರಿವಾಣ ೧, ೪೫.ಮೋದಕ ೩೫, ೪೬.ಕರ್ಜಿಕಾಯಿ ೧೫, ೪೭.ಧೂಪ ೧೦೦ ಗ್ರಾಮ್, ೪೮.ರವಿಕೆ ಖಣ ೧, ೪೯.ತೋರಣದ (ಮಾಟೋಳೀ) ಸಾಹಿತ್ಯ, ೫೦.ದೇವರನ್ನು ಒರೆಸಲು ವಸ್ತ್ರ, ೫೧.ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಪ್ರತಿಯೊಂದು ೧ ಸಣ್ಣ ಬಟ್ಟಲು)

ಪೂಜಾಸ್ಥಳದ ಶುದ್ಧೀಕರಣ ಮತ್ತು ಉಪಕರಣಗಳಲ್ಲಿನ ದೇವತ್ವವನ್ನು ಜಾಗೃತಗೊಳಿಸುವುದು

ಪೂಜಾಸ್ಥಳದ ಶುದ್ಧೀಕರಣ
ಅ. ಪೂಜೆ ಮಾಡುವವನು ಆ ಕೋಣೆಯ ಕಸ ಗುಡಿಸಬೇಕು. ಆದಷ್ಟು ಪೂಜೆ ಮಾಡುವ ವ್ಯಕ್ತಿಯೇ ಕಸ ಗುಡಿಸಬೇಕು.

ಆ. ಕಸ ಗುಡಿಸಿದ ನಂತರ ಕೋಣೆಯಲ್ಲಿನ ನೆಲವು ಮಣ್ಣಿನದ್ದಾಗಿದ್ದರೆ, ನೆಲವನ್ನು ಸೆಗಣಿಯಿಂದ ಸಾರಿಸಬೇಕು. ಮಣ್ಣಿನ ನೆಲವಲ್ಲದಿದ್ದರೆ ಸ್ವಚ್ಛ ನೀರಿನಿಂದ ನೆಲ ಒರೆಸಬೇಕು.

ಇ. ಮಾವಿನ ಅಥವಾ ತುಳಸೀ ಎಲೆಯಿಂದ ಕೋಣೆಯಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು. ಗೋಮೂತ್ರವಿಲ್ಲದಿದ್ದರೆ ನೀರಿನಲ್ಲಿ ಊದುಬತ್ತಿಯ ವಿಭೂತಿ ಹಾಕಿ ಆ ನೀರನ್ನು ಕೋಣೆ ಯಲ್ಲಿ ಸಿಂಪಡಿಸಬೇಕು. ಅನಂತರ ಕೋಣೆಯಲ್ಲಿ ಧೂಪ ಹಾಕಬೇಕು.

ಉಪಕರಣಗಳಲ್ಲಿನ ದೇವತ್ವದ ಜಾಗೃತಿ: ದೇವರ ಪೂಜೆಯ ಉಪಕರಣಗಳನ್ನು ತಿಕ್ಕಿ ತೊಳೆದ್ಳುಒರೆಸಿ ಸ್ವಚ್ಛಗೊಳಿಸಬೇಕು. ಅನಂತರ ಅವುಗಳ ಮೇಲೆ ತುಳಸೀ ಎಲೆ ಅಥವಾ ದೂರ್ವೆ ಇವುಗಳಿಂದ ಜಲಪ್ರೋಕ್ಷಣ (ನೀರು ಸಿಂಪಡಿಸುವುದು) ಮಾಡಬೇಕು.

ರಂಗೋಲಿ ಬಿಡಿಸುವುದು
೧. ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು, ಪುರುಷರು ಬಿಡಿಸಬಾರದು.
೨. ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಅವಳ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿ ಬಿಡಿಸಬೇಕು.
೩. ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿ ಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿ ಯನ್ನು ಬಿಡಿಸಬೇಕು.
೪. ರಂಗೋಲಿ ಬಿಡಿಸಿದ ನಂತರ ಅದಕ್ಕೆ ಅರಿಶಿನ್ಳಕುಂಕುಮ ಅರ್ಪಿಸಬೇಕು.

ಶಂಖನಾದ ಮಾಡುವುದು (ಶಂಖವನ್ನು ಊದುವುದು)
೧. ಶಂಖನಾದ ಮಾಡುವಾಗ ನಿಂತುಕೊಂಡು ಕುತ್ತಿಗೆಯನ್ನು ಮೇಲೆ ಮಾಡಿ ಮತ್ತು ಸ್ವಲ್ಪ ಹಿಂದೆ ಬಗ್ಗಿ ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸಬೇಕು.
೨. ಶ್ವಾಸವನ್ನು ಎದೆಯಲ್ಲಿ ಪೂರ್ಣ ತುಂಬಿಕೊಳ್ಳಬೇಕು.
೩. ಅನಂತರ ಶಂಖನಾದವನ್ನು ಮಾಡಲು ಪ್ರಾರಂಭಿಸಿ ಧ್ವನಿಯ ತೀವ್ರತೆಯನ್ನು ಹೆಚ್ಚಿಸುತ್ತಾ ಹೋಗಬೇಕು ಮತ್ತು ಕೊನೆಯ ವರೆಗೆ ತೀವ್ರನಾದವನ್ನು ಮಾಡಬೇಕು. ಆದಷ್ಟು ಒಂದೇ ಶ್ವಾಸದಲ್ಲಿ ಶಂಖವನ್ನು ಊದಬೇಕು.
೪. ಶಂಖಿಣಿಯನ್ನು ಊದಬಾರದು.

ದೇವರಪೂಜೆಗೆ ಕುಳಿತುಕೊಳ್ಳಲು ಮಣೆ ತೆಗೆದುಕೊಳ್ಳುವುದು
ದೇವರಪೂಜೆಗೆ ಕುಳಿತುಕೊಳ್ಳಲು ಆಸನವೆಂದು ಮರದ (ಕಟ್ಟಿಗೆಯ) ಮಣೆಯನ್ನು ತೆಗೆದುಕೊಳ್ಳಬೇಕು. ಮಣೆ ಯನ್ನು ಎರಡು ಹಲಗೆಗಳನ್ನು ಜೋಡಿಸಿ ತಯಾರಿಸಿರಬಾರದು, ಅದು ಅಖಂಡವಾಗಿರಬೇಕು. ಅದಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆ?ರಬಾರದು ಮತ್ತು ಆದಷ್ಟು ಅದಕ್ಕೆ ಬಣ್ಣವನ್ನು ಹಚ್ಚಿರ ಬಾರದು. ಮಣೆಯ ಕೆಳಗೆ ರಂಗೋಲಿ ಬಿಡಿಸಿರಬೇಕು.

ಪೂಜೆಯ ಸಂದರ್ಭದಲ್ಲಿ ಕೆಲವು ಸೂಚನೆಗಳು
ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಪಿತಾಂಬರ ಅಥವಾ ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು.

ಆ. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.

ಇ. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತುಕೊಂಡು ಭೂಮಿ ಮತ್ತು ದೇವತೆಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ’ ಎಂದು ಪ್ರಾರ್ಥನೆ ಮಾಡಬೇಕು.

ಈ. ಪೂಜೆ ಮಾಡುವಾಗ ‘ದೇವತೆಯು ತಮ್ಮೆದುರಿಗೆ ಪ್ರತ್ಯಕ್ಷ ಪ್ರಕಟವಾಗಿ ಆಸೀನಳಾಗಿದ್ದಾಳೆ ಮತ್ತು ನಾವು ಅನನ್ಯ ಶರಣಾಗತ ಭಾವದಿಂದ ಮಾಡುತ್ತಿರುವ ಪೂಜೆಯನ್ನು ಅವಳು ಸ್ವೀಕರಿಸುತ್ತಿದ್ದಾಳೆ’, ಎಂಬ ಭಾವವನ್ನಿಡಬೇಕು ಮತ್ತು ಈ ಭಾವದಿಂದ ಪ್ರತಿಯೊಂದು ಉಪಚಾರವನ್ನು ದೇವತೆಯ ಚರಣಗಳಲ್ಲಿ ಅರ್ಪಿಸಬೇಕು.

ಉ. ಪ್ರತಿದಿನ ಬೆಳಗ್ಗೆ ಮೂರ್ತಿಯ ಮೇಲಿನ ನಿರ್ಮಾಲ್ಯ ವನ್ನು ತೆಗೆದು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಸಾಯಂಕಾಲ ಷೋಡಶೋಪಚಾರ ಪೂಜೆ ಅಥವಾ ಗಂಧಾ? ಪಂಚೋಪಚಾರ ಪೂಜೆ ಮಾಡಬೇಕು.

ಊ. ಪೂಜೆಯಲ್ಲಿನ ಶ್ಲೋಕ ಅಥವಾ ಮಂತ್ರವನ್ನು ಉಚ್ಚರಿ ಸಲು ಬರದವರು ಕೇವಲ ನಾಮಮಂತ್ರ ಉಚ್ಚರಿಸಿ ದೇವತೆಗೆ ಉಪಚಾರ ಸಮರ್ಪಿಸಬೇಕು, ಉದಾ. (ಆಸನಕ್ಕಾಗಿ ಅಕ್ಷತೆ ಅರ್ಪಿಸುವಾಗ) ‘ಶ್ರೀ ಮಹಾಗಣಪತಯೇ ನಮಃ| ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ||’, ಎಂದು ಹೇಳಬೇಕು.

|| ಅಥ ಪೂಜಾ ಪ್ರಾರಂಭ ||

ಪೂಜೆಯ ಆರಂಭದಲ್ಲಿ ಮಾಡಬೇಕಾದ ಪ್ರಾರ್ಥನೆ: 
‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡು ತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ. ಪೂಜೆಯಲ್ಲಿ ಬರಬಹುದಾದ ವಿಘ್ನಗಳು ದೂರವಾಗಲಿ. ಪೂಜೆಯಲ್ಲಿನ ಚೈತನ್ಯವು ನನಗೆ ಮತ್ತು ಉಪಸ್ಥಿತರೆಲ್ಲರಿಗೂ ದೊರಕಲಿ.’

ಕುಂಕುಮತಿಲಕ ಹಚ್ಚುವುದು: ಪೂಜಕನು (ಯಜಮಾನನು) ಮೊದಲು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು.

ಆಚಮನ ಮಾಡುವುದು: ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು

೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |

ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.

೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆ ಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.

೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |

ಪುನಃ ಆಚಮನ ಮಾಡಿ ೨೪ ಹೆಸರುಗಳನ್ನು ಹೇಳಬೇಕು. ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.

ದೇವತಾಸ್ಮರಣ

ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.
ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.
ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.
ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.
ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.
ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.
ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.

ಅವಿಘ್ನಮಸ್ತು| ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.

‘ದೇಶಕಾಲ’ ಮತ್ತು ‘ಸಂಕಲ್ಪ’

‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.

ದೇಶಕಾಲ: 
ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.

ಶ್ರೀಮದ್‌ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತವಾರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಂಬುದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಶಾಲಿವಾಹನ ಶಕೇ ವ್ಯಾವಹಾರಿಕೇ ಅಮುಕನಾಮ ಸಂವತ್ಸರೇ ದಕ್ಷಿಣಾಯನೇ ವರ್ಷಾಋತೌ ಭಾದ್ರಪದಮಾಸೇ ಶುಕ್ಲಪಕ್ಷೇ ಚತುರ್ಥ್ಯಾಂ ತಿಥೌ ಅಮುಕವಾಸರೇ ಅಮುಕದಿವಸನಕ್ಷತ್ರೇ ಶುಭಯೋಗೇ ಶುಭಕರಣೇ ಏವಂಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ

‘ದೇಶಕಾಲ’ದ ಸಂದರ್ಭದಲ್ಲಿನ ಸೂಚನೆ

೧. ಪಂಚಾಂಗವನ್ನು ನೋಡಿ ಮೇಲಿನ ಸಂಸ್ಕೃತ ಬರವಣಿಗೆಯಲ್ಲಿನ ‘ಅಮುಕ’ ಎಂಬ ಶಬ್ದಗಳ ಜಾಗದಲ್ಲಿ ಸಂವತ್ಸರ, ವಾರ ಮತ್ತು ನಕ್ಷತ್ರ ಇವುಗಳನ್ನು ಉಚ್ಚರಿಸಬೇಕು.

೨. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.

ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||

ಅರ್ಥ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.

ಸಂಕಲ್ಪ: ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ಮಮ ಆತ್ಮನಃ ಪರಮೇಶ್ವರಾಜ್ಞಾರೂಪಸಕಲಶಾಸ್ತ್ರ
ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತಿದ್ವಾರಾ ಶ್ರೀಪರಮೇಶ್ವರ‍
ಪ್ರೀತ್ಯರ್ಥಂ ಮಮ ಶ್ರೀಸಿದ್ಧಿವಿನಾಯಕಪ್ರೀತಿದ್ವಾರಾಸಕಲ
ಪಾಪಕ್ಷಯಪೂರ್ವಕಂಸರ್ವಕರ್ಮನಿರ್ವಿಘ್ನತ್ವಪುತ್ರಪೌತ್ರಾಭಿವೃದ್ಧಿ
ಮಹೈಶ್ವರ್ಯವಿದ್ಯಾವಿಜಯಸಂಪದಾಧಿಕಲ್ಪೋಕ್ತಫಲಸಿದ್ಧ್ಯರ್ಥಮ್
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕ
ದೇವತಾಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರೈಃ
ಪೂಜನಮಹಂ ಕರಿಷ್ಯೇ | ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ
ಶ್ರೀ ಮಹಾಗಣಪತಿಪೂಜನಂ ಕರಿಷ್ಯೇ | ಶರೀರಶುದ್ಧ್ಯರ್ಥಂ ವಿಷ್ಣುಸ್ಮರಣಂ ಕರಿಷ್ಯೇ |
ಕಲಶಶಂಖಘಂಟಾದೀಪಪೂಜನಂ ಚ ಕರಿಷ್ಯೇ ||

‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.

ಶ್ರೀ ಮಹಾಗಣಪತಿಪೂಜೆ : ಮೊದಲು ಮಣ್ಣಿನ ಮೂರ್ತಿಯ ಎದುರು ಅಥವಾ ಉಪಲಬ್ಧವಿರುವ ಸ್ಥಳಕ್ಕನುಸಾರ ಹರಿವಾಣ ಅಥವಾ ಬಾಳೆಯ ಎಲೆಯನ್ನಿಡಬೇಕು. ಅದರ ಮೇಲೆ ಅಕ್ಕಿಯ ರಾಶಿಯನ್ನು ಹಾಕಬೇಕು. ಅದರ ಮೇಲೆ ತೆಂಗಿನಕಾಯಿ ಯನ್ನು ಅದರ ಜುಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ನಂತರ ಚಂದನಾದಿ ಉಪಚಾರಗಳಿಂದ ಶ್ರೀ ಮಹಾಗಣಪತಿಯ ಪೂಜೆಯನ್ನು ಮಾಡಬೇಕು.

ಧ್ಯಾನ : ನಮಸ್ಕಾರದ ಮುದ್ರೆಮಾಡಿ ಕೈಗಳನ್ನು ಎದೆಯ ಬಳಿ ಇಡಬೇಕು ಮತ್ತು ಕಣ್ಣುಗಳನ್ನು ಮುಚ್ಚಿ ಶ್ರೀ ಮಹಾಗಣಪತಿಯ ರೂಪವನ್ನು ಮನಸ್ಸಿನಲ್ಲಿ ಸ್ಮರಿಸಬೇಕು ಮತ್ತು ಮುಂದಿನ ಶ್ಲೋಕವನ್ನು ಪಠಿಸಬೇಕು.

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಅರ್ಥ: ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ, ಪ್ರಚಂಡ ಶರೀರವಿರುವ ಮತ್ತು ಕೋಟಿ ಸೂರ್ಯರ ತೇಜವಿರುವ ಹೇ ಗಣಪತಿದೇವಾ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ನೀನು ಶಾಶ್ವತವಾಗಿ ದೂರಗೊಳಿಸು. ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ.

ಶ್ರೀ ಮಹಾಗಣಪತಯೇ ನಮಃ | ಧ್ಯಾಯಾಮಿ ||

ಆವಾಹನೆ : ಬಲಗೈಯಲ್ಲಿ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಂದುಗೂಡಿಸಿ) ಅಕ್ಷತೆಗಳನ್ನು ತೆಗೆದು ಕೊಂಡು ‘ಆವಾಹಯಾಮಿ’ ಎನ್ನುವಾಗ ಆ ತೆಂಗಿನಕಾಯಿಯ ರೂಪದಲ್ಲಿನ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀಮಹಾಗಣಪತಯೇ ನಮಃ | ಮಹಾಗಣಪತಿಂ ಸಾಂಗಂ ಸಪರಿವಾರಂ ಸಾಯುಧಂ ಸಶಕ್ತಿಕಂ ಆವಾಹಯಾಮಿ ||

ಆಸನ : 
ಬಲಗೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಅವುಗಳನ್ನು ಶ್ರೀ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀ ಮಹಾಗಣಪತಯೇ ನಮಃ | ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||

ಚಂದನಾದಿ ಉಪಚಾರ: ದೇವರಿಗೆ ಬಲಗೈಯ ಅನಾಮಿಕಾದಿಂದ ಗಂಧವನ್ನು (ಚಂದನ) ಹಚ್ಚಬೇಕು. ಅನಂತರ ಮುಂದಿನ ನಾಮಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದವನ್ನು ಉಚ್ಚರಿಸುತ್ತಾ ಕಂಸದಲ್ಲಿ ನೀಡಿದಂತೆ ಉಪಚಾರ ವನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀ ಮಹಾಗಣಪತಯೇ ನಮಃ | ಚಂದನಂ ಸಮರ್ಪಯಾಮಿ || (ಗಂಧವನ್ನು ಹಚ್ಚಬೇಕು.) ಋದ್ಧಿಸಿದ್ಧಿಭ್ಯಾಂ ನಮಃ | ಹರಿದ್ರಾಂ ಸಮರ್ಪಯಾಮಿ || (ಅರಿಶಿನವನ್ನು ಅರ್ಪಿಸಬೇಕು.) ಋದ್ಧಿಸಿದ್ಧಿಭ್ಯಾಂ ನಮಃ | ಕುಂಕುಮಂ ಸಮರ್ಪಯಾಮಿ || (ಕುಂಕುಮವನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಋದ್ಧಿಸಿದ್ಧಿಭ್ಯಾಂ ನಮಃ | ಸಿಂದೂರಂ ಸಮರ್ಪಯಾಮಿ || (ಸಿಂದೂರವನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ || (ಅಕ್ಷತೆಗಳನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಪುಷ್ಪಂ ಸಮರ್ಪಯಾಮಿ || (ಹೂವನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ದೂರ್ವಾಂಕುರಾನ್ ಸಮರ್ಪಯಾಮಿ || (ದೂರ್ವೆಯನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಧೂಪಂ ಸಮರ್ಪಯಾಮಿ || (ಊದುಬತ್ತಿಯಿಂದ ಬೆಳಗಬೇಕು.) ಶ್ರೀ ಮಹಾಗಣಪತಯೇ ನಮಃ | ದೀಪಂ ಸಮರ್ಪಯಾಮಿ|| (ನೀಲಾಂಜನದಿಂದ ಬೆಳಗಬೇಕು.)

ಬಲಗೈಯಲ್ಲಿ ೨ ದೂರ್ವೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ದೂರ್ವೆಗಳಿಂದ ಆ ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು ಮತ್ತು ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಪವಾದ: ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.

ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ | ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||

ಟಿಪ್ಪಣಿ : ವೇದೋಕ್ತ ಪೂಜಾವಿಧಿಯಲ್ಲಿ ‘ಪ್ರಾಣಾಯ ನಮಃ |’ ಎಂಬುದರ ಬದಲು ‘ಓಂ ಪ್ರಾಣಾಯ ಸ್ವಾಹಾ |’ ಎಂದು ಮಂತ್ರವನ್ನು ಹೇಳುತ್ತಾರೆ.

ಕೈಯಲ್ಲಿರುವ ಒಂದು ದೂರ್ವೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ದೂರ್ವೆಯನ್ನು ಶ್ರೀ ಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.

ಶ್ರೀಮಹಾಗಣಪತಯೇ ನಮಃ | ನೈವೇದ್ಯಂ ಸಮರ್ಪಯಾಮಿ || ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ || (ಗಂಧ್ಳ ಹೂವುಗಳನ್ನು ಅರ್ಪಿಸಬೇಕು.) ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||

ನಮಸ್ಕಾರದ ಮುದ್ರೆ ಮಾಡಿ ಪ್ರಾರ್ಥನೆ ಮಾಡಬೇಕು.

ಕಾರ್ಯಂ ಮೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿ ಧಾತರಿ| ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||

ಅರ್ಥ : ಹೇ ಗಣನಾಯಕಾ, ನೀನು ನನ್ನ ಮೇಲೆ ಪ್ರಸನ್ನನಾಗು. ಹಾಗೆಯೇ ನನ್ನ ಕಾರ್ಯದಲ್ಲಿನ ಎಲ್ಲ ವಿಘ್ನಗಳನ್ನು ದೂರಗೊಳಿಸಿ ನೀನೇ ನನ್ನ ಕಾರ್ಯವನ್ನು ಪೂರ್ಣಗೊಳಿಸು.

ಅನಂತರ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ‘ಪ್ರೀಯತಾಮ್’ ಎಂಬ ಶಬ್ದವನ್ನು ಹೇಳುವಾಗ ಅದನ್ನು ಹರಿವಾಣದಲ್ಲಿ ಬಿಡಬೇಕು.

ಅನೇನ ಕೃತಪೂಜನೇನ ಶ್ರೀ ಮಹಾಗಣಪತಿಃ ಪ್ರೀಯತಾಮ್ |

ಶ್ರೀವಿಷ್ಣುಸ್ಮರಣೆ : ಎರಡೂ ಕೈಗಳನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸ ಬೇಕು. ನಂತರ ೯ ಸಲ ‘ವಿಷ್ಣವೇ ನಮೋ’ ಎನ್ನಬೇಕು ಮತ್ತು ಕೊನೆಯಲ್ಲಿ ‘ವಿಷ್ಣವೇ ನಮಃ |’ ಎಂದು ಹೇಳಬೇಕು.

ಪೂಜೆಗೆ ಸಂಬಂಧಿಸಿದ ಉಪಕರಣಗಳ ಪೂಜೆ

ಕಲಶಪೂಜೆ

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಅರ್ಥ: ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.

ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ || ಕಲಶದೇವತಾಭ್ಯೋ ನಮಃ |
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||

ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.

ಶಂಖಪೂಜೆ

ಶಂಖದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಪುಷ್ಪಂ ಸಮರ್ಪಯಾಮಿ ||

ಅರ್ಥ: ಹೇ ಶಂಖದೇವತೇ, ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ ಹೂವುಗಳನ್ನು ಅರ್ಪಿಸುತ್ತೇನೆ.

(ಪ್ರತಿಯೊಂದು ಮನೆಯಲ್ಲಿ ಶಂಖ ಇರುತ್ತದೆ ಎಂದೇನಿಲ್ಲ. ಯಾರ ಮನೆಯಲ್ಲಿ ಶಂಖವಿದೆಯೋ, ಅವರು ಮೇಲಿನಂತೆ ಪೂಜೆ ಮಾಡಬೇಕು.)

ಘಂಟೆಯ ಪೂಜೆ

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||

ಅರ್ಥ: ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ನಾದ ಮಾಡುವ ಘಂಟಾದೇವತೆಗೆ ವಂದಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ.

ಘಂಟಾಯೈ ನಮಃ | ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ದೀಪಪೂಜೆ

ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛ ಮೇ||
ದೀಪದೇವತಾಭ್ಯೋ ನಮಃ| ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಅರ್ಥ: ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)

ಮಂಟಪಪೂಜೆ: ಮುಂದಿನ ಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದದ ಸಮಯದಲ್ಲಿ ಮಂಟಪದ ಮೇಲೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.

ಮಂಡಪದೇವತಾಭ್ಯೋ ನಮಃ | ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ
ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.

ಮೇಲಿನ ಮಂತ್ರವನ್ನು ಪಠಿಸಲು ಕಠಿಣವಾದರೆ ‘ಶ್ರೀ ಪುಂಡರೀಕಾಕ್ಷಾಯ ನಮಃ|’ ಎಂಬ ನಾಮಮಂತ್ರ ಹೇಳುತ್ತಾ ಮೇಲಿನ ಕೃತಿ ಮಾಡಬೇಕು. ಅನಂತರ ತುಳಸೀದಳವನ್ನು ಹರಿವಾಣದಲ್ಲಿ ಬಿಡಬೇಕು.

ವಿನಾಯಕನ ಮಣ್ಣಿನ ಮೂರ್ತಿಯ ಪೂಜೆ

ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮತ್ತು ಪ್ರಾಣಪ್ರತಿಷ್ಠೆ

ಅ. ಶ್ರೀ ಗಣೇಶಮೂರ್ತಿಯ ಸ್ಥಾಪನೆಯನ್ನು ಪೂರ್ವದಿಕ್ಕಿನಲ್ಲಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಪೂಜಕನ ಮುಖವು ದಕ್ಷಿಣ ದಿಕ್ಕಿಗೆ ಬರದಂತೆ ಶ್ರೀ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು.

ಆ. ಯಾವ ಮಣೆಯ ಮೇಲೆ ಮೂರ್ತಿಯ ಸ್ಥಾಪನೆ ಮಾಡ ಬೇಕಾಗಿರುತ್ತದೆಯೋ, ಆ ಮಣೆಯ ಮಧ್ಯಭಾಗದಲ್ಲಿ ೧ ಮುಷ್ಠಿ ಅಕ್ಷತೆಯನ್ನು (ತೊಳೆದ ಅಖಂಡ ಅಕ್ಕಿ) ಇಡಬೇಕು. ಅದರ ಮೇಲೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಬೇಕು.

ಇ. ನಂತರ ಆ ಅಕ್ಕಿಯ ಮೇಲೆ ಮುಂದಿನಂತೆ ಮೂರ್ತಿಯ ‘ಪ್ರಾಣಪ್ರತಿಷ್ಠೆ’ ಮಾಡಬೇಕು.

‘ಪ್ರಾಣಪ್ರತಿಷ್ಠೆ’ ಎಂದರೆ ಮೂರ್ತಿಯಲ್ಲಿ ದೇವತ್ವವನ್ನು ತರುವುದು. ಇದಕ್ಕಾಗಿ ಪೂಜಕನು ತನ್ನ ಬಲಗೈಯನ್ನು ಮೂರ್ತಿಯ ಹೃದಯಕ್ಕೆ ಸ್ಪರ್ಶಿಸಿ ‘ಈ ಮೂರ್ತಿಯಲ್ಲಿ ಸಿದ್ಧಿವಿನಾಯಕನ ಪ್ರಾಣ (ತತ್ವ)ವು ಆಕರ್ಷಿಸುತ್ತಿದೆ’, ಎಂಬ ಭಾವವನ್ನಿಟ್ಟು ಮುಂದಿನ ಮಂತ್ರಗಳನ್ನು ಪಠಿಸಬೇಕು.

ಅಸ್ಯಶ್ರೀಪ್ರಾಣಪ್ರತಿಷ್ಠಾಮಂತ್ರಸ್ಯ ಬ್ರಹ್ಮವಿಷ್ಣುಮಹೇಶ್ವರಾ
ಋಷಯಃ ಋಗ್ಯಜುಃಸಾಮಾನಿಛಂದಾಂಸಿ ಪರಾಪ್ರಾಣ
ಶಕ್ತಿರ್ದೇವತಾ ಆಂ ಬೀಜಂ ಹ್ರೀಂ ಶಕ್ತಿಃ ಕ್ರೋಂ ಕೀಲಕಮ್ |
ಅಸ್ಯಾಂ ಮೂರ್ತೌ ಪ್ರಾಣಪ್ರತಿಷ್ಠಾಪನೇ ವಿನಿಯೋಗಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |
ದೇವಸ್ಯ ಪ್ರಾಣಾ ಇಹ ಪ್ರಾಣಾಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |
ದೇವಸ್ಯ ಜೀವ ಇಹ ಸ್ಥಿತಃ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |
ದೇವಸ್ಯ ಸರ್ವೇಂದ್ರಿಯಾಣಿ ||
ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್|
ದೇವಸ್ಯ ವಾಙ್ಮನಃಚಕ್ಷುಃಶ್ರೋತ್ರಜಿಹ್ವಾಘ್ರಾಣಪ್ರಾಣಾ ಇಹಾಗತ್ಯ ಸುಖಂಸುಚಿರಂ ತಿಷ್ಠಂತು ಸ್ವಾಹಾ ||

(ಟಿಪ್ಪಣಿ  ಮೇಲಿನ ಪ್ರಾಣಪ್ರತಿಷ್ಠೆಯ ಮಂತ್ರಗಳು ವೇದೋಕ್ತವಾಗಿವೆ.)

ಅಸ್ಯೈ ಪ್ರಾಣಾಃ ಪ್ರತಿಷ್ಠಂತು ಅಸ್ಯೈ ಪ್ರಾಣಾಃ ಕ್ಷರಂತು ಚ |
ಅಸ್ಯೈ ದೇವತ್ವಮರ್ಚಾಯೈ ಮಾಮಹೇತಿ ಚ ಕಶ್ಚನ ||

ನಂತರ ‘ಓಂ’ ಅಥವಾ ‘ಪರಮಾತ್ಮನೇ ನಮಃ |’ ಎಂದು ೧೫ ಸಲ ಹೇಳಬೇಕು.

ಷೋಡಶೋಪಚಾರ ಪೂಜೆ

ಧ್ಯಾನ: ಕೈಜೋಡಿಸಿ ನಮಸ್ಕಾರದ ಮುದ್ರೆ ಮಾಡಬೇಕು.

(ಟಿಪ್ಪಣಿ  ಈ ಮಂತ್ರವು ವೇದೋಕ್ತವಾಗಿದೆ.)

ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |
ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್ ||

ಅರ್ಥ: ಯಾರ ಮುಖಕಮಲದಲ್ಲಿ ಒಂದೇ ದಂತವಿದೆ, ಕಿವಿಗಳು ಮೊರದಗಲವಾಗಿವೆ, ಮುಖವು ಆನೆಯದಾಗಿದೆ, ನಾಲ್ಕು ಕೈಗಳಿವೆ ಮತ್ತು ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ, ಇಂತಹ ಶ್ರೀ ಸಿದ್ಧಿವಿನಾಯಕದೇವರನ್ನು ನಾನು ಧ್ಯಾನಿಸುತ್ತೇನೆ (ಚಿಂತನ).

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಧ್ಯಾಯಾಮಿ ||

ಆವಾಹನೆ
ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಆವಾಹಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಅರ್ಪಿಸಬೇಕು. (ಅಕ್ಷತೆಯನ್ನು ಅರ್ಪಿಸುವಾಗ ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಟ್ಟು ಮಾಡಿ ಅರ್ಪಿಸಬೇಕು.)

ಆವಾಹಯಾಮಿ ವಿಘ್ನೇಶ ಸುರರಾಜಾರ್ಚಿತೇಶ್ವರ|
ಅನಾಥನಾಥ ಸರ್ವಜ್ಞ ಪೂಜಾರ್ಥಂ ಗಣನಾಯಕ||

ಅರ್ಥ : ಹೇ ವಿಘ್ನೇಶಾ, ದೇವಗಣರು ಪೂಜಿಸಿದ, ಅನಾಥರ ನಾಥ ಮತ್ತು ಸರ್ವಜ್ಞ ಗಣನಾಯಕಾ, ನಾನು ಪೂಜೆಗಾಗಿ ನಿನ್ನ ಆವಾಹನೆ ಮಾಡುತ್ತೇನೆ.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಆವಾಹಯಾಮಿ ||

ಆಸನ
ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ದೇವರ ಚರಣಗಳಲ್ಲಿ ಅರ್ಪಿಸಬೇಕು.

ವಿಚಿತ್ರರತ್ನರಚಿತಂ ದಿವ್ಯಾಸ್ತರಣಸಂಯುತಮ್ |
ಸ್ವರ್ಣಸಿಂಹಾಸನಂ ಚಾರು ಗೃಹಾಣ ಸುರಪೂಜಿತ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||

ಪಾದಪೂಜೆ :
ಬಲಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ ಮತ್ತು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಸರ್ವತೀರ್ಥಸಮುದ್‌ಭೂತಂ ಪಾದ್ಯಂ ಗಂಧಾದಿಭಿರ್ಯುತಮ್ |
ವಿಘ್ನರಾಜ ಗೃಹಾಣೇದಂ ಭಗವನ್ಭಕ್ತವತ್ಸಲ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪಾದ್ಯಂ ಸಮರ್ಪಯಾಮಿ ||

ಅರ್ಘ್ಯ : 
ಎಡಗೈಯಿಂದ ಉದ್ಧರಣೆಯಲ್ಲಿ ನೀರು ತೆಗೆದುಕೊಳ್ಳಿ. ಆ ನೀರಿನಲ್ಲಿ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾಕಿ. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಅರ್ಘ್ಯಂ ಚ ಫಲಸಂಯುಕ್ತಂ ಗಂಧಪುಷ್ಪಾಕ್ಷತೈರ್ಯುತಮ್ |
ಗಣಾಧ್ಯಕ್ಷ ನಮಸ್ತೇಸ್ತು ಗೃಹಾಣ ಕರುಣಾನಿಧೇ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಅರ್ಘ್ಯಂ ಸಮರ್ಪಯಾಮಿ ||

ಆಚಮನ :  
ಎಡಗೈಯಲ್ಲಿ ಒಂದು ಉದ್ಧರಣೆ ನೀರನ್ನು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಿ. ನಂತರ ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳ ಮೇಲೆ ಪ್ರೋಕ್ಷಣೆ ಮಾಡಿ.

ವಿನಾಯಕ ನಮಸ್ತುಭ್ಯಂ ತ್ರಿದಶೈರಭಿವಂದಿತಮ್ |
ಗಂಗೋದಕೇನ ದೇವೇಶ ಶೀಘ್ರಮಾಚಮನಂ ಕುರು ||

ಅರ್ಥ: ಹೇ ವಿನಾಯಕಾ, ದೇವತೆಗಳೂ ವಂದಿಸುವ ದೇವಾ, ಈ ಗಂಗೆಯ ನೀರನ್ನು ಆಚಮನಕ್ಕಾಗಿ ನೀನು ಸ್ವೀಕರಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಆಚಮನೀಯಂ ಸಮರ್ಪಯಾಮಿ ||

ಸ್ನಾನ :  
ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ. ನಂತರ ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಗಂಗಾಸರಸ್ವತೀರೇವಾಪಯೋಷ್ಣೀಯಮುನಾಜಲೈಃ |
ಸ್ನಾಪಿತೋಸಿ ಮಯಾ ದೇವ ತಥಾ ಶಾಂತಿ ಕುರುಷ್ವ ಮೇ ||

ಅರ್ಥ : ಗಂಗಾ, ಸರಸ್ವತೀ, ರೇವಾ (ನರ್ಮದಾ), ಪಯೋಷ್ಣಿ ಮತ್ತು ಯಮುನಾ ಈ ನದಿಗಳ ನೀರಿನಿಂದ ನಾನು ನಿನಗೆ ಸ್ನಾನ ಮಾಡಿಸುತ್ತಿದ್ದೇನೆ. ಹೇ ದೇವಾ, ನನಗೆ ಶಾಂತಿಯನ್ನು ಪ್ರದಾನಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಸ್ನಾನಂ ಸಮರ್ಪಯಾಮಿ ||

ಪಂಚಾಮೃತಸ್ನಾನ
ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳ ಸ್ನಾನ ಹಾಕಬೇಕು. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಹಾಲು, ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು. ಇದೇ ರೀತಿ ಉಳಿದ ಉಪಚಾರಗಳಿಂದ ದೇವರಿಗೆ ಸ್ನಾನ ಹಾಕಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪಯಸ್ನಾನಂ ಸಮರ್ಪಯಾಮಿ |
ತದಂತೇ ಶುದ್ಧೋದಕಸ್ನಾನಂ ಸಮರ್ಪಯಾಮಿ ||

ಮುಂದಿನ ಪ್ರತಿಯೊಂದು ಸ್ನಾನದ ನಂತರ ಮೇಲಿನ ಶುದ್ಧೋದಕದ ಮಂತ್ರವನ್ನು ಪಠಿಸಿ ದೇವರ ಚರಣಗಳಲ್ಲಿ ನೀರನ್ನು ಪ್ರೋಕ್ಷಣೆ ಮಾಡಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ದಧಿಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಘೃತಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಮಧುಸ್ನಾನಂ ಸಮರ್ಪಯಾಮಿ ||
ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಶರ್ಕರಾಸ್ನಾನಂ ಸಮರ್ಪಯಾಮಿ ||

ಗಂಧೋದಕಸ್ನಾನ

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಗಂಧೋದಕಸ್ನಾನಂ ಸಮರ್ಪಯಾಮಿ || ತದಂತೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ || (ನೀರಿನಲ್ಲಿ ಗಂಧ ಮತ್ತು ಕರ್ಪೂರವನ್ನು ಹಾಕಿ ಅದನ್ನು ದೇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಬೇಕು. ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು.)

ಅಭಿಷೇಕ :  
ಪಂಚಪಾತ್ರೆಯಲ್ಲಿ ನೀರನ್ನು ತುಂಬಿಕೊಳ್ಳಬೇಕು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಬೇಕು. ನಂತರ ಉದ್ಧರಣೆಯಲ್ಲಿನ ನೀರನ್ನು ದೇವರ ಮೇಲೆ ಪ್ರೋಕ್ಷಣೆ ಮಾಡುವಾಗ ‘ಶ್ರೀಗಣಪತಿ ಅಥರ್ವಶೀರ್ಷ’ ಅಥವಾ ‘ಸಂಕಟನಾಶನ ಗಣಪತಿಸ್ತೋತ್ರ’ವನ್ನು ಪಠಿಸಬೇಕು.

ವಸ್ತ್ರ : 
ಎರಡು ಗೆಜ್ಜೆವಸ್ತ್ರಗಳನ್ನು ತೆಗೆದುಕೊಳ್ಳಬೇಕು ಮತ್ತು ‘ಸಮರ್ಪಯಾಮಿ’ ಎನ್ನುವಾಗ ಅವುಗಳಲ್ಲಿನ ಒಂದು ವಸ್ತ್ರವನ್ನು ಮೂರ್ತಿಯ ಕೊರಳಿನಲ್ಲಿ ಅಲಂಕಾರದಂತೆ ಹಾಕಬೇಕು ಮತ್ತು ಇನ್ನೊಂದು ಮೂರ್ತಿಯ ಚರಣಗಳಲ್ಲಿ ಅರ್ಪಿಸಬೇಕು.

ರಕ್ತವಸ್ತ್ರಯುಗಂ ದೇವ ದೇವತಾರ್ಹಂ ಸುಮಂಗಲಮ್ |
ಸರ್ವಪ್ರದ ಗೃಹಾಣೇದಂ ಲಂಬೋದರ ಹರಾತ್ಮಜ ||

ಅರ್ಥ: ಹೇ ಶಿವಪುತ್ರನೇ, ಲಂಬೋದರನೇ, ಸುಯೋಗ್ಯ, ಸುಮಂಗಲ ಮತ್ತು ಎಲ್ಲ ವಿಷಯಗಳನ್ನು ಪ್ರದಾನಿಸುವ ಈ ಕೆಂಪು ವಸ್ತ್ರಗಳ ಜೋಡಿಯನ್ನು ನೀನು ದೇವತೆಗಳಿಗಾಗಿ ಸ್ವೀಕರಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಕಾರ್ಪಾಸನಿರ್ಮಿತಂ ವಸ್ತ್ರಂ ಸಮರ್ಪಯಾಮಿ ||

ಯಜ್ಞೋಪವೀತ : 
ಮಹಾದೇವ ಮತ್ತು ಸಿದ್ಧಿವಿನಾಯಕ ಇವರಿಗೆ ಯಜ್ಞೋಪವೀತ (ಜನಿವಾರ) ವನ್ನು ಅರ್ಪಿಸಬೇಕು ಮತ್ತು ದೇವಿಗೆ ಅಕ್ಷತೆಯನ್ನು ಅರ್ಪಿಸಬೇಕು.

ರಾಜತಂ ಬ್ರಹ್ಮಸೂತ್ರಂ ಚ ಕಾಂಚನಸ್ಯೋತ್ತರೀಯಕಮ್ |
ವಿನಾಯಕ ನಮಸ್ತೇಸ್ತು ಗೃಹಾಣ ಸುರವಂದಿತ ||

ಅರ್ಥ: ಹೇ ಸುರಗಣಪೂಜಿತ ವಿನಾಯಕಾ, ಸುವರ್ಣದ ಉತ್ತರೀಯ ಮತ್ತು ಬೆಳ್ಳಿಯಂತೆ ಹೊಳೆಯುವ ಯಜ್ಞೋಪವೀತ ವನ್ನು ನೀನು ಸ್ವೀಕರಿಸು.

ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಯಜ್ಞೋಪವೀತಂ ಸಮರ್ಪಯಾಮಿ ||
ಶ್ರೀ ಉಮಾಯೈ ನಮಃ | ಉಪವೀತಾರ್ಥೇ ಅಕ್ಷತಾನ್ ಸಮರ್ಪಯಾಮಿ ||

ಯಜ್ಞೋಪವೀತವನ್ನು ಶ್ರೀ ಗಣೇಶನ ಕೊರಳಲ್ಲಿ ಹಾಕಬೇಕು ಮತ್ತು ನಂತರ ಅದನ್ನು ಮೂರ್ತಿಯ ಬಲಗೈ ಕೆಳಗೆ ತರಬೇಕು. ಪೂಜೆಯಲ್ಲಿ ಮಹಾದೇವನ ಮೂರ್ತಿ ಇಲ್ಲದಿರುವುದರಿಂದ, ಮಹಾದೇವನಿಗೆ ಆವಾಹನೆ ಮಾಡಿದ ಜಾಗದಲ್ಲಿ ಯಜ್ಞೋಪವೀತವನ್ನು ಅರ್ಪಿಸಬೇಕು.

ಚಂದನ: 
ಶ್ರೀ ಗಣಪತಿಗೆ ಅನಾಮಿಕಾದಿಂದ ಗಂಧವನ್ನು ಹಚ್ಚಬೇಕು.

ಶ್ರೀಖಂಡ ಚಂದನಂ ದಿವ್ಯಂ ಗಂಧಾಢ್ಯಂ ಸುಮನೋಹರಮ್ |
ವಿಲೇಪನಂ ಸುರಶ್ರೇಷ್ಠ ಚಂದನಂ ಪ್ರತಿಗೃಹ್ಯತಾಮ್ ||

ಅರ್ಥ: ಹೇ ದೇವಶ್ರೇಷ್ಠನೇ, ಅತ್ಯಂತ ಮನೋಹರ, ತುಂಬಾ ಸುಗಂಧಯುಕ್ತ ದಿವ್ಯವಾದ ಶ್ರೀಖಂಡ ಚಂದನದ ಲೇಪನವನ್ನು ನೀನು ಸ್ವೀಕರಿಸು.

ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ ||

ಶ್ರೀ ಉಮಾಯೈ ನಮಃ | ಹರಿದ್ರಾಂ ಕುಂಕುಮಂ ಸಮರ್ಪಯಾಮಿ || (ಅರಿಶಿನ್ಳಕುಂಕುಮವನ್ನು ಅರ್ಪಿಸಬೇಕು.) ಶ್ರೀ ಉಮಾಯೈ ನಮಃ | ಶ್ರೀಸಿದ್ಧಿವಿನಾಯಕಾಯ ನಮಃ | ಸಿಂದೂರಂ ಸಮರ್ಪಯಾಮಿ || (ಗೌರಿ ಮತ್ತು ಸಿದ್ಧಿವಿನಾಯಕ ಇವರಿಗೆ ಸಿಂಧೂರ ಅರ್ಪಿಸಬೇಕು.)

ಹೂವು ಪತ್ರೆ (ಎಲೆ) :  
ಲಭ್ಯವಿರುವ ವಿವಿಧ ರೀತಿಯ ಹೂವುಗಳನ್ನು ಮತ್ತು ಪತ್ರೆಗಳನ್ನು ಅರ್ಪಿಸಬೇಕು.

ಮಾಲ್ಯಾದಿನಿ ಸುಗಂಧೀನಿ ಮಾಲತ್ಯಾದಿನಿ ವೈ ಪ್ರಭೋ |
ಮಯಾ ಹೃತಾನಿ ಪೂಜಾರ್ಥಂ ಪುಷ್ಪಾಣಿ ಪ್ರತಿಗೃಹ್ಯತಾಮ್ ||
ಸೇವಂತಿಕಾಬಕುಲಂಪಕಪಾಟಲಾಬ್ಜೈಃ
ಪುನ್ನಾಗಜಾತಿಕರವೀರರಸಾಲಪುಷ್ಪೈಃ |
ಬಿಲ್ವಪ್ರವಾಲತುಲಸೀದಲಮಾಲತೀಭಿಃ
ತ್ವಾಂ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ ||

ಅರ್ಥ: ಹೇ ಪ್ರಭೂ, ನಾನು ಪೂಜೆಗಾಗಿ ತಂದಿರುವ ಹೂವುಗಳ ಮಾಲೆ, ಹಾಗೆಯೇ ಚಮೇಲಿ ಇತ್ಯಾದಿ ಸುಗಂಧಿತ ಹೂವುಗಳನ್ನು ತಾವು ಸ್ವೀಕರಿಸಬೇಕು. ಹಾಗೆಯೇ ಸೇವಂತಿಗೆ, ಬಕುಳ, ಸಂಪಿಗೆ, ಸುರಹೊನ್ನೆ, ಶ್ವೇತಕಮಲ, ಜಾಜಿ, ಕಣಗಿಲೆ, ಮಾವಿನ ಹೂವು, ಬಿಲ್ವ, ತುಳಸಿ, ಚಮೇಲಿ ಇತ್ಯಾದಿ ಹೂವುಗಳಿಂದ ನಾನು ನಿನ್ನನ್ನು ಪೂಜಿಸುತ್ತೇನೆ. ಹೇ ಜಗದೀಶ್ವರಾ, ನೀನು ಪ್ರಸನ್ನನಾಗು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಋತುಕಾಲೋದ್ಭವಪುಷ್ಪಾಣಿ ಸಮರ್ಪಯಾಮಿ ||

ಮಹಾದೇವ ಮತ್ತು ಗೌರಿಗೆ ತುಳಸಿ ಮತ್ತು ಬಿಲ್ವಪತ್ರೆ ಯನ್ನು ಅರ್ಪಿಸಬೇಕು.

ಶ್ರೀ ಉಮಾಮಹೇಶ್ವರಾಭ್ಯಾಂ ನಮಃ |
ತುಲಸೀಪತ್ರಂ ಬಿಲ್ವಪತ್ರಂ ಚ ಸಮರ್ಪಯಾಮಿ ||

ಅಂಗಪೂಜೆ : 
ಮುಂದಿನ ಹೆಸರುಗಳಿಂದ ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಅಥವಾ ದೇವರ ಆಯಾ ಅವಯವಗಳ ಮೇಲೆ ಬಲಗೈಯಿಂದ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳು ಇವುಗಳನ್ನು ಒಟ್ಟುಗೂಡಿಸಿ) ಅಕ್ಷತೆಯನ್ನು ಅರ್ಪಿಸಬೇಕು.

ಶ್ರೀ ಗಣೇಶಾಯ ನಮಃ | ಪಾದೌ ಪೂಜಯಾಮಿ || (ಚರಣಗಳ ಮೇಲೆ) ಶ್ರೀ ವಿಘ್ನರಾಜಾಯ ನಮಃ | ಜಾನುನೀ ಪೂಜಯಾಮಿ || (ಮಂಡಿಗಳ ಮೇಲೆ) ಶ್ರೀ ಆಖುವಾಹನಾಯ ನಮಃ | ಊರೂ ಪೂಜಯಾಮಿ || (ತೊಡೆಗಳ ಮೇಲೆ) ಶ್ರೀ ಹೇರಂಬಾಯ ನಮಃ | ಕಟಿಂ ಪೂಜಯಾಮಿ || (ಸೊಂಟದ ಮೇಲೆ) ಶ್ರೀ ಕಾಮಾರಿಸೂನವೇ ನಮಃ | ನಾಭಿಂ ಪೂಜಯಾಮಿ || (ಹೊಕ್ಕುಳಿನ ಮೇಲೆ) ಶ್ರೀ ಲಂಬೋದರಾಯ ನಮಃ | ಉದರಂ ಪೂಜಯಾಮಿ || (ಹೊಟ್ಟೆಯ ಮೇಲೆ) ಶ್ರೀ ಗೌರೀಸುತಾಯ ನಮಃ | ಹೃದಯಂ ಪೂಜಯಾಮಿ || (ಎದೆಯ ಮೇಲೆ) ಶ್ರೀ ಸ್ಥೂಲಕಂಠಾಯ ನಮಃ | ಕಂಠಂ ಪೂಜಯಾಮಿ || (ಕೊರಳಿನ ಮೇಲೆ) ಶ್ರೀ ಸ್ಕಂದಾಗ್ರಜಾಯ ನಮಃ | ಸ್ಕಂಧೌ ಪೂಜಯಾಮಿ || (ಭುಜಗಳ ಮೇಲೆ) ಶ್ರೀ ಪಾಶಹಸ್ತಾಯ ನಮಃ | ಹಸ್ತೌ ಪೂಜಯಾಮಿ || (ಕೈಗಳ ಮೇಲೆ) ಶ್ರೀ ಗಜವಕ್ತ್ರಾಯ ನಮಃ | ವಕ್ತ್ರಂ ಪೂಜಯಾಮಿ || (ಮುಖದ ಮೇಲೆ) ಶ್ರೀ ವಿಘ್ನಹರ್ತ್ರೇ ನಮಃ | ನೇತ್ರೇ ಪೂಜಯಾಮಿ || (ಕಣ್ಣುಗಳ ಮೇಲೆ) ಶ್ರೀ ಸರ್ವೇಶ್ವರಾಯ ನಮಃ | ಶಿರಃ ಪೂಜಯಾಮಿ || (ಮಸ್ತಕದ ಮೇಲೆ) ಶ್ರೀ ಗಣಾಧಿಪಾಯ ನಮಃ | ಸರ್ವಾಂಗಂ ಪೂಜಯಾಮಿ || (ಸರ್ವಾಂಗಗಳ ಮೇಲೆ)
ಪತ್ರಪೂಜಾ (ಎಲೆಗಳಿಂದ ಪೂಜೆ): ಮುಂದಿನ ಹೆಸರುಗಳಿಂದ ಪತ್ರೆಗಳ ತೊಟ್ಟನ್ನು ದೇವರೆಡೆಗೆ ಮಾಡಿ ‘ಸಮರ್ಪಯಾಮಿ’ ಎನ್ನುವಾಗ ದೇವರ ಚರಣಗಳಲ್ಲಿ ಅರ್ಪಿಸಬೇಕು. (ಎಲ್ಲ ಕಡೆಗಳಲ್ಲಿ ಪ್ರತಿಯೊಂದು ರೀತಿಯ ಪತ್ರೆಗಳು ಸಿಗುತ್ತವೆ ಎಂದೇನಿಲ್ಲ. ಆದುದರಿಂದ ಯಾವ ಪತ್ರೆಗಳು ಸಿಗಲಿಲ್ಲವೋ, ಅವುಗಳ ಬದಲು ೨ ದೂರ್ವೆ/ಅಕ್ಷತೆಯನ್ನು ದೇವರಿಗೆ ಅರ್ಪಿಸಬೇಕು.)

ಶ್ರೀ ಸುಮುಖಾಯ ನಮಃ | ಮಾಲತೀಪತ್ರಂ ಸಮರ್ಪಯಾಮಿ || (ಮಲ್ಲಿಗೆ ಪತ್ರೆ) ಶ್ರೀ ಗಣಾಧಿಪಾಯ ನಮಃ | ಭೃಂಗರಾಜಪತ್ರಂ ಸಮರ್ಪಯಾಮಿ || (ಭೃಂಗರಾಜ) ಶ್ರೀ ಉಮಾಪುತ್ರಾಯ ನಮಃ | ಬಿಲ್ವಪತ್ರಂ ಸಮರ್ಪಯಾಮಿ || (ಬಿಲ್ವ) ಶ್ರೀ ಗಜಾನನಾಯ ನಮಃ | ಶ್ವೇತದೂರ್ವಾಪತ್ರಂ ಸಮರ್ಪಯಾಮಿ || (ಬಿಳಿ ದೂರ್ವೆ) ಶ್ರೀ ಲಂಬೋದರಾಯ ನಮಃ | ಬದರೀಪತ್ರಂ ಸಮರ್ಪಯಾಮಿ || (ಬದರೀ ಪತ್ರೆ) ಶ್ರೀ ಹರಸೂನವೇ ನಮಃ | ಧತ್ತೂರಪತ್ರಂ ಸಮರ್ಪಯಾಮಿ || (ಧತ್ತೂರಿ) ಶ್ರೀ ಗಜಕರ್ಣಾಯ ನಮಃ | ತುಲಸೀಪತ್ರಂ ಸಮರ್ಪಯಾಮಿ || (ತುಳಸಿ) ಶ್ರೀ ಗುಹಾಗ್ರಜಾಯ ನಮಃ | ಅಪಾಮಾರ್ಗಪತ್ರಂ ಸಮರ್ಪಯಾಮಿ || (ಉತ್ತರಣೆ) ಶ್ರೀ ವಕ್ರತುಂಡಾಯ ನಮಃ | ಶಮೀಪತ್ರಂ ಸಮರ್ಪಯಾಮಿ || (ಶಮೀ) ಶ್ರೀ ಏಕದಂತಾಯ ನಮಃ | ಕೇತಕೀಪತ್ರಂ ಸಮರ್ಪ ಯಾಮಿ || (ಕೇದಗೆ) ಶ್ರೀ ವಿಕಟಾಯ ನಮಃ | ಕರವೀರಪತ್ರಂ ಸಮರ್ಪಯಾಮಿ || (ಕಣಗಿಲೆ) ಶ್ರೀ ವಿನಾಯಕಾಯ ನಮಃ | ಅಶ್ಮಂತಕಪತ್ರಂ ಸಮರ್ಪಯಾಮಿ || (ಮಂದಾರ) ಶ್ರೀ ಕಪಿಲಾಯ ನಮಃ | ಅರ್ಕಪತ್ರಂ ಸಮರ್ಪಯಾಮಿ || (ಎಕ್ಕೆ) ಶ್ರೀ ಭಿನ್ನದಂತಾಯ ನಮಃ | ಅರ್ಜುನಪತ್ರಂ ಸಮರ್ಪಯಾಮಿ || (ಮತ್ತಿ) ಶ್ರೀ ಪತ್ನೀಯುತಾಯ ನಮಃ | ವಿಷ್ಣುಕ್ರಾಂತಾಪತ್ರಂ ಸಮರ್ಪಯಾಮಿ || (ಶಂಖಪುಷ್ಟ) ಶ್ರೀ ಬಟವೇ ನಮಃ | ದಾಡಿಮೀಪತ್ರಂ ಸಮರ್ಪಯಾಮಿ || (ದಾಳಿಂಬೆ) ಶ್ರೀ ಸುರೇಶಾಯ ನಮಃ | ದೇವದಾರೂಪತ್ರಂ ಸಮರ್ಪಯಾಮಿ || (ದೇವದಾರ) ಶ್ರೀ ಭಾಲಚಂದ್ರಾಯ ನಮಃ | ಮರೂಬಕಪತ್ರಂ ಸಮರ್ಪಯಾಮಿ || (ಮರುಗ) ಶ್ರೀ ಹೇರಂಬಾಯ ನಮಃ | ಸಿಂದುವಾರಪತ್ರಂ ಸಮರ್ಪಯಾಮಿ || (ಸಿಂದುವಾರ/ ನಿರ್ಗುಂಡಿ) ಶ್ರೀ ಶೂರ್ಪಕರ್ಣಾಯ ನಮಃ | ಜಾತೀಪತ್ರಂ ಸಮರ್ಪಯಾಮಿ || (ಜಾಜಿ) ಶ್ರೀ ಸರ್ವೇಶ್ವರಾಯ ನಮಃ | ಅಗಸ್ತಿಪತ್ರಂ ಸಮರ್ಪಯಾಮಿ || (ಅಗಸೆ ಎಲೆ)

ಅನಂತರ ಶ್ರೀ ಸಿದ್ಧಿವಿನಾಯಕನ ೧೦೮ ಹೆಸರುಗಳನ್ನು ಉಚ್ಚರಿಸಿ ಒಂದೊಂದು ದೂರ್ವೆಯನ್ನು ಅರ್ಪಿಸುತ್ತಾರೆ.

ಧೂಪ : 
ಊದುಬತ್ತಿಯಿಂದ ಬೆಳಗಬೇಕು ಅಥವಾ ಧೂಪವನ್ನು ತೋರಿಸಬೇಕು.

ವನಸ್ಪತಿರಸೋದ್ಭೂತೋ ಗಂಧಾಢ್ಯೋ ಗಂಧ ಉತ್ತಮಃ |

ಆಘ್ರೇಯಃ ಸರ್ವದೇವಾನಾಂ ಧೂಪೋಯಂ ಪ್ರತಿಗೃಹ್ಯತಾಮ್ ||

ಅರ್ಥ : ವನಸ್ಪತಿಗಳ ರಸದಿಂದ ಉತ್ಪನ್ನವಾದ, ತುಂಬಾ ಸುಗಂಧವಿರುವ ಮತ್ತು ಎಲ್ಲ ದೇವತೆಗಳೂ ಪರಿಮಳವನ್ನು ತೆಗೆದುಕೊಳ್ಳಲು ಯೋಗ್ಯವಾಗಿರುವ ಧೂಪವನ್ನು ನಾನು ನಿನಗೆ ತೋರಿಸುತ್ತಿದ್ದೇನೆ. ಹೇ ದೇವಾ, ನೀನು ಇದನ್ನು ಸ್ವೀಕರಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಧೂಪಂ ಸಮರ್ಪಯಾಮಿ||

ದೀಪ
ಆಜ್ಯಂ ಚ ವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ ||
ಭಕ್ತ್ಯಾ ದೀಪಂ ಪ್ರಯಚ್ಛಾಮಿ ದೇವಾಯ ಪರಮಾತ್ಮನೇ|
ತ್ರಾಹಿ ಮಾಂ ನಿರಯಾದ್ ಘೋರಾದ್ ದೀಪೋಯಂ ಪ್ರತಿಗೃಹ್ಯತಾಮ್ ||

ಅರ್ಥ : ಈ ತ್ರಿಭುವನದಲ್ಲಿನ ಅಂಧಃಕಾರವನ್ನು ದೂರಗೊಳಿಸುವ ದೇವೇಶನೇ, ನಾನು ಅಗ್ನಿಯಿಂದ ಸಂಯುಕ್ತಗೊಳಿಸಿದ ತುಪ್ಪದ ಬತ್ತಿಯನ್ನು ನಿನಗೆ ಅರ್ಪಿಸುತ್ತಿದ್ದೇನೆ. ಹೇ ಪರಮಾತ್ಮನೇ, ಭಕ್ತಿ ಪೂರ್ವಕವಾಗಿ ಅರ್ಪಿಸಿದ ಈ ದೀಪವನ್ನು ನೀನು ಸ್ವೀಕರಿಸು. ಹೇ ಭಗವಂತಾ, ನೀನೇ ನನ್ನನ್ನು ಈ ಘೋರ ನರಕದಿಂದ ಬಿಡಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ದೀಪಂ ಸಮರ್ಪಯಾಮಿ || (ನೀಲಾಂಜನದಿಂದ ಬೆಳಗಬೇಕು.)

ನೈವೇದ್ಯ : 
ಬಲಗೈಯಲ್ಲಿ ೨ ದೂರ್ವೆಗಳನ್ನು (ದೂರ್ವೆ ಇಲ್ಲದಿದ್ದಲ್ಲಿ ತುಳಸೀ ದಳ ಅಥವಾ ಬಿಲ್ವಪತ್ರೆ ನಡೆಯುತ್ತದೆ.) ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ಆ ನೀರನ್ನು ನೈವೇದ್ಯದ ಮೇಲೆ ಸಿಂಪಡಿಸಿ ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಳ್ಳಬೇಕು. ದೂರ್ವೆಗಳೊಂದಿಗೆ ನೀರಿನಿಂದ ನೈವೇದ್ಯದ ಸುತ್ತಲೂ ಮಂಡಲವನ್ನು ಹಾಕಬೇಕು. ನಂತರ ತಮ್ಮ ಎಡಗೈಯನ್ನು ಎದೆಯ ಮೇಲೆ ಇಟ್ಟುಕೊಳ್ಳಬೇಕು (ಅಪವಾದ: ತಮ್ಮ ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ ಮೇಲಿಟ್ಟುಕೊಳ್ಳಬೇಕು). ಹಾಗೆಯೇ ತಮ್ಮ ಬಲಗೈಯ ಬೆರಳುಗಳಿಂದ ದೇವತೆಗೆ ಆ ನೈವೇದ್ಯದ ಗಂಧವನ್ನು (ನೈವೇದ್ಯವನ್ನು ಅರ್ಪಿಸುವಾಗ) ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.

ನೈವೇದ್ಯಂ ಗೃಹ್ಯತಾಂ ದೇವ ಭಕ್ತಿಂ ಮೇ ಹ್ಯಚಲಾಂ ಕುರು |
ಈಪ್ಸಿತಂ ಮೇ ವರಂ ದೇಹಿ ಪರತ್ರ ಚ ಪರಾಂ ಗತಿಮ್ ||
ಶರ್ಕರಾಖಂಡಖಾದ್ಯಾನಿ ದಧಿಕ್ಷೀರಘೃತಾನಿ ಚ |
ಆಹಾರಂ ಭಕ್ಷ್ಯಭೋಜ್ಯಂ ಚ ನೈವೇದ್ಯಂ ಪ್ರತಿಗೃಹ್ಯತಾಮ್ ||

ಅರ್ಥ : ಹೇ ಭಗವಂತಾ, ಈ ನೈವೇದ್ಯವನ್ನು ಸ್ವೀಕರಿಸಬೇಕು ಮತ್ತು ನನ್ನ ಭಕ್ತಿಯನ್ನು ಸ್ಥಿರಗೊಳಿಸಬೇಕು. ಈ ಲೋಕದಲ್ಲಿ ನನ್ನ ಅಭೀಷ್ಟ ಮತ್ತು ಇಚ್ಛಿತಗಳನ್ನು ಪೂರ್ಣಗೊಳಿಸಬೇಕು. ಹಾಗೆಯೇ ಪರಲೋಕದಲ್ಲಿ ನನಗೆ ಶ್ರೇಷ್ಠ ಗತಿ ದೊರಕಲಿ. ಕಲ್ಲುಸಕ್ಕರೆ ಇತ್ಯಾದಿ ಖಾದ್ಯಪದಾರ್ಥಗಳು; ಮೊಸರು, ಹಾಲು, ತುಪ್ಪ ಇತ್ಯಾದಿ ಭಕ್ಷ್ಯ ಮತ್ತು ಭೋಜ್ಯ ಆಹಾರರೂಪಿ ನೈವೇದ್ಯ ವನ್ನು ತಾವು ಸ್ವೀಕರಿಸಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪುರತಸ್ಥಾಪಿತಮಧುರನೈವೇದ್ಯಂ ನಿವೇದಯಾಮಿ ||
ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ | ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||

(ಟಿಪ್ಪಣಿ  ವೇದೋಕ್ತ ಪೂಜಾವಿಧಿಯಲ್ಲಿ ‘ಪ್ರಾಣಾಯ ನಮಃ |’ ಎನ್ನುವುದರ ಬದಲು ‘ಓಂ ಪ್ರಾಣಾಯ ಸ್ವಾಹಾ |’ ಈ ರೀತಿಯಲ್ಲಿ ಮಂತ್ರವನ್ನು ಪಠಿಸುತ್ತಾರೆ.)

ಪೂಜಕನು ಕೈಯಲ್ಲಿನ ಒಂದು ದೂರ್ವೆಯನ್ನು ನೈವೇದ್ಯದ ಮೇಲಿಡಬೇಕು ಮತ್ತು ಇನ್ನೊಂದನ್ನು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಅರ್ಪಿಸಬೇಕು. ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳಿ ನೀರನ್ನು ಹರಿವಾಣದಲ್ಲಿ ಬಿಡಬೇಕು.

ನೈವೇದ್ಯಂ ಸಮರ್ಪಯಾಮಿ | ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ ||

ಹೂವಿಗೆ ಗಂಧವನ್ನು ಹಚ್ಚಿ ದೇವರಿಗೆ ಅರ್ಪಿಸಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||

ಆರತಿ : 
ನೈವೇದ್ಯ ಅರ್ಪಿಸಿದ ನಂತರ ಆರತಿ ಮಾಡಬೇಕು. ಅದಕ್ಕೂ ಮೊದಲು ಮೂರು ಸಲ ಶಂಖನಾದ ಮಾಡಬೇಕು. ಆರತಿ ಮಾಡುವಾಗ ‘ಪ್ರತ್ಯಕ್ಷ ಶ್ರೀ ಗಣೇಶನು ಎದುರಿಗಿದ್ದಾನೆ ಮತ್ತು ನಾನು ಅವನಿಗೆ ಆರ್ತತೆಯಿಂದ ಪ್ರಾರ್ಥನೆ ಮಾಡುತ್ತಿದ್ದೇನೆ’ ಎಂಬ ಭಾವದಿಂದ ಆರತಿಯನ್ನು ಮಾಡಬೇಕು. ಆರತಿಯ ತಟ್ಟೆಯನ್ನು ದೇವರ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕೃತಿಯಲ್ಲಿ ಬೆಳಗಿಸಬೇಕು. ಆರತಿಯನ್ನು ಬೆಳಗಿಸುವಾಗ ಅದನ್ನು ದೇವರ ತಲೆಯ ಮೇಲಿನಿಂದ ಬೆಳಗಬಾರದು, ದೇವರ ಅನಾಹತಚಕ್ರದಿಂದ ಆಜ್ಞಾಚಕ್ರದವರೆಗೆ (ಎದೆಯಿಂದ ಹಣೆಯವರೆಗೆ) ಬೆಳಗಬೇಕು.

ಆರತಿಗೆ ಉಪಸ್ಥಿತರಿರುವವರು ಆರತಿಯ ಅರ್ಥವನ್ನು ಗಮನದಲ್ಲಿಟ್ಟುಕೊಂಡು ಆರತಿಯನ್ನು ಹೇಳಬೇಕು. ಆರತಿಯನ್ನು ಹೇಳುವಾಗ ಆರತಿ ಲಯಬದ್ಧವಾಗಿ ಆಗಲು ಚಪ್ಪಾಳೆಗಳನ್ನು ನಿಧಾನವಾಗಿ ತಟ್ಟಬೇಕು. ಚಪ್ಪಾಳೆಗಳೊಂದಿಗೆ ವಾದ್ಯಗಳನ್ನು ನಿಧಾನವಾಗಿ ಬಾರಿಸಬೇಕು. ಘಂಟೆಯನ್ನು ಮಂಜುಳ ನಾದದಲ್ಲಿ ಬಾರಿಸಬೇಕು ಮತ್ತು ಅದರ ನಾದದಲ್ಲಿ ಸಾತತ್ಯವಿರಬೇಕು.

ಕರ್ಪೂರದ ಆರತಿ : 
ಆರತಿಯಾದ ನಂತರ ‘ಕರ್ಪೂರಗೌರಂ ಕರುಣಾವತಾರಂ...’ ಎಂಬ ಮಂತ್ರವನ್ನು ಪಠಿಸುತ್ತಾ ಕರ್ಪೂರದಾರತಿಯನ್ನು ಮಾಡಬೇಕು.

ಆರತಿಯನ್ನು ಸ್ವೀಕರಿಸುವುದು : 
ಕರ್ಪೂರದಾರತಿಯನ್ನು ಸ್ವೀಕರಿಸಬೇಕು, ಅಂದರೆ ಜ್ಯೋತಿಯ ಮೇಲೆ ಎರಡೂ ಕೈಗಳ ಅಂಗೈಗಳನ್ನು ಹಿಡಿದು ನಂತರ ಬಲಗೈಯನ್ನು ತಲೆಯ ಮೇಲಿನಿಂದ ಮುಂದಿನ ಬ?ಯಿಂದ ಹಿಂದೆ ಕುತ್ತಿಗೆಯವರೆಗೆ ಸವರಬೇಕು. (ಯಾವುದಾದರೂ ಕಾರಣದಿಂದ ಕರ್ಪೂರದಾರತಿಯನ್ನು ಮಾಡಿರ ?ದ್ದರೆ ತುಪ್ಪದ ನೀಲಾಂಜನದ ಜ್ಯೋತಿಯ ಮೇಲೆ ಕೈಗಳನ್ನು ಹಿಡಿದು ಆರತಿಯನ್ನು ಸ್ವೀಕರಿಸಬೇಕು.)

ಸದ್ಯ ಬಹಳಷ್ಟು ಕಡೆಗಳಲ್ಲಿ ಆರತಿಯ ನಂತರ ‘ಮಂತ್ರಪುಷ್ಪ, ಪ್ರದಕ್ಷಿಣೆ ಮತ್ತು ನಮಸ್ಕಾರ’ ಈ ಕ್ರಮದಿಂದ ಉಪಚಾರವನ್ನು ಮಾಡಲಾಗುತ್ತದೆ. ಆದರೆ ಶಾಸ್ತ್ರದಲ್ಲಿ ಆರತಿಯ ನಂತರ ‘ನಮಸ್ಕಾರ, ಪ್ರದಕ್ಷಿಣೆ ಮತ್ತು ಮಂತ್ರಪುಷ್ಪ’ ಈ ಕ್ರಮವನ್ನು ಹೇಳಲಾಗಿದೆ. ಆದುದರಿಂದ ಇಲ್ಲಿ ಇದೇ ಕ್ರಮದಿಂದ ಉಪಚಾರವನ್ನು ನೀಡಲಾಗಿದೆ.

ನಮಸ್ಕಾರ : 
ಮುಂದಿನ ಶ್ಲೋಕವನ್ನು ಪಠಿಸಿ ದೇವರಿಗೆ ಪೂರ್ಣ ಶರಣಾಗತ ಭಾವದಿಂದ ಸಾಷ್ಟಾಂಗ ನಮಸ್ಕಾರ ಮಾಡಬೇಕು.

ನಮಃ ಸರ್ವಹಿತಾರ್ಥಾಯ ಜಗದಾಧಾರಹೇತವೇ |
ಸಾಷ್ಟಾಂಗೋಯಂ ಪ್ರಣಾಮಸ್ತೇ ಪ್ರಯತ್ನೇನ ಮಯಾ ಕೃತಃ ||
ನಮೋಸ್ತ್ವನಂತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ ||
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟೀ ಯುಗಧಾರಿಣೇ ನಮಃ ||

ಅರ್ಥ: ಇಡೀ ಜಗತ್ತಿನ ಆಧಾರ ಮತ್ತು ಕಾರಣವಾಗಿರುವ ಹಾಗೂ ಎಲ್ಲರ ಹಿತವನ್ನು ಮಾಡುವ ದೇವನೇ, ನಾನು ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಸಹಸ್ರ ಶರೀರ, ಪಾದ (ಕಾಲು), ಕಣ್ಣು, ತಲೆ, ತೊಡೆ ಮತ್ತು ಸಹಸ್ರ ಬಾಹುಗಳಿರುವ; ಸಹಸ್ರ ಹೆಸರು ಗಳಿರುವ; ಸಹಸ್ರ ಕೋಟಿ ಯುಗಗಳನ್ನು ಧಾರಣೆ ಮಾಡುವ; ಶಾಶ್ವತ ಮತ್ತು ಅನಂತನಾಗಿರುವ ಮಹಾಪುರುಷನಿಗೆ ನನ್ನ ನಮಸ್ಕಾರವಿರಲಿ.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ನಮಸ್ಕಾರನ್ ಸಮರ್ಪಯಾಮಿ ||

ಪ್ರದಕ್ಷಿಣೆ : 
ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಎರಡೂ ಕೈಗಳನ್ನು ಜೋಡಿಸಬೇಕು ಮತ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಮ್ಮ ಸುತ್ತಲೂ ಗೋಲಾಕಾರವಾಗಿ ತಿರುಗಿ ಮುಂದಿನ ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆಗಳನ್ನು ಹಾಕಬೇಕು.

ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಪದೇ ಪದೇ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ಕಾರುಣ್ಯಭಾವೇನ ರಕ್ಷ ಮಾಮ್ ಪರಮೇಶ್ವರ ||

ಅರ್ಥ: ಇಲ್ಲಿಯವರೆಗೆ ಜನ್ಮಜನ್ಮಾಂತರಗಳಲ್ಲಿ ನನ್ನಿಂದಾದ ಪಾಪಗಳು ನಾನು ನಿನಗೆ ಪ್ರದಕ್ಷಿಣೆಗಳನ್ನು ಹಾಕುವಾಗ ಇಡುತ್ತಿರುವ ಪ್ರತಿಯೊಂದು ಹೆಜ್ಜೆಯಿಂದ ನಾಶವಾಗುತ್ತಿವೆ. ಹೇ ದೇವಾ, ನಿನ್ನನ್ನು ಬಿಟ್ಟು ನನ್ನನ್ನು ಬೇರೆ ಯಾರೂ ರಕ್ಷಿಸುವವರಿಲ್ಲ, ನೀನೇ ನನಗೆ ಆಧಾರ, ಆದುದರಿಂದ ಹೇ ಭಗವಂತಾ, ಕರುಣಾಮಯ ದೃಷ್ಟಿಯಿಂದ ನನ್ನನ್ನು ರಕ್ಷಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |
ಪ್ರದಕ್ಷಿಣಾಂ ಸಮರ್ಪಯಾಮಿ ||

ದೂರ್ವಾಯುಗ್ಮಸಮರ್ಪಣ  
(ಅಪವಾದ: ಕೆಲವು ಕಡೆಗಳಲ್ಲಿ ನೈವೇದ್ಯದ ನಂತರ ದೂರ್ವಾಯುಗ್ಮವನ್ನು (ದೂರ್ವೆಯ ಜೋಡಿ) ಅರ್ಪಿಸುತ್ತಾರೆ.)

ದೂರ್ವೆಗಳ ತೊಟ್ಟು ದೇವರೆಡೆಗೆ ಮತ್ತು ಅಗ್ರಭಾಗವು ನಮ್ಮೆಡೆಗೆ ಮಾಡಿ ಮುಂದಿನ ಪ್ರತಿಯೊಂದು ಹೆಸರಿನಿಂದ ಎರಡು ದೂರ್ವೆಗಳನ್ನು ಒಟ್ಟು ಮಾಡಿ ದೇವರ ಚರಣಗಳಲ್ಲಿ ಅರ್ಪಿಸ ಬೇಕು, ಉದಾ.ಶ್ರೀ ಗಣಾಧಿಪಾಯ ನಮಃ | ದೂರ್ವಾಯುಗ್ಮಂ ಸಮರ್ಪಯಾಮಿ || ಇದರಂತೆ ಪ್ರತಿಯೊಂದು ನಾಮಮಂತ್ರ ಉಚ್ಚರಿಸಿದ ನಂತರ ‘ದೂರ್ವಾಯುಗ್ಮಂ ಸಮರ್ಪಯಾಮಿ |’ ಎಂದು ಹೇಳಬೇಕು.

ಶ್ರೀ ಗಣಾಧಿಪಾಯ ನಮಃ | ಶ್ರೀ ಉಮಾಪುತ್ರಾಯ ನಮಃ |
ಶ್ರೀ ಅಘನಾಶನಾಯ ನಮಃ | ಶ್ರೀ ಏಕದಂತಾಯ ನಮಃ |
ಶ್ರೀ ಇಭವಕ್ತ್ರಾಯ ನಮಃ | ಶ್ರೀ ಮೂಷಕವಾಹನಾಯ ನಮಃ |
ಶ್ರೀ ವಿನಾಯಕಾಯ ನಮಃ | ಶ್ರೀ ಈಶಪುತ್ರಾಯ ನಮಃ |
ಶ್ರೀ ಸರ್ವಸಿದ್ಧಿಪ್ರದಾಯಕಾಯ ನಮಃ |
ಶ್ರೀ ಕುಮಾರಗುರವೇ ನಮಃ ||

ನಂತರ ಮುಂದಿನ ಶ್ಲೋಕವನ್ನು ಪಠಿಸಿ ದೇವರ ಚರಣಗಳಲ್ಲಿ ಇಪ್ಪತ್ತೊಂದನೆಯ ದೂರ್ವೆಗಳನ್ನು ಅರ್ಪಿಸಬೇಕು.

ಗಣಾಧಿಪ ನಮಸ್ತೇಸ್ತು ಉಮಾಪುತ್ರಾಘನಾಶನ |
ಏಕದಂತೇಭವಕ್ತ್ರೇತಿ ತಥಾ ಮೂಷಕವಾಹನ ||
ವಿನಾಯಕೇಶಪುತ್ರೇತಿ ಸರ್ವಸಿದ್ಧಿಪ್ರದಾಯಕ |
ಕುಮಾರಗುರವೇ ತುಭ್ಯಂ ಪೂಜಯಾಮಿ ಪ್ರಯತ್ನತಃ ||
ಶ್ರೀ ಸಿದ್ಧಿವಿನಾಯಕಾಯ ನಮಃ |
ದೂರ್ವಾಮೇಕಾಂ ಸಮರ್ಪಯಾಮಿ ||

ಮಂತ್ರಪುಷ್ಪಾಂಜಲಿ ಮತ್ತು ಪ್ರಾರ್ಥನೆ

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ | (ದೇವರಿಗೆ ಮಂತ್ರಪುಷ್ಪಾಂಜಲಿಯನ್ನು ಅರ್ಪಿಸಬೇಕು.)

ನಂತರ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು.

ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ |
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ |
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ||
ಅಪರಾಧಸಹಸ್ರಾಣಿ ಕ್ರಿಯಂತೇಹರ್ನಿಶಂ ಮಯಾ |
ದಾಸೋಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ ||

ಅರ್ಥ: ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆಯನ್ನು ಮಾಡುವಾಗ ಏನಾದರೂ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನನಾಗಿದ್ದೇನೆ. ನಾನು ಮಾಡಿದ ಪೂಜೆಯನ್ನು, ನೀನು ಪರಿಪೂರ್ಣವಾಗಿಸಿಕೋ. ಹಗಲು ರಾತ್ರಿ ನನ್ನಿಂದ ತಿಳಿದೋ ಅಥವಾ ತಿಳಿಯದೆಯೋ ಸಹಸ್ರಾರು ಅಪರಾಧಗಳಾಗುತ್ತಿರುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಾವಿಸಿ ನನ್ನನ್ನು ಕ್ಷಮಿಸು.

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ | ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯೇತ್ತತ್ ||

ಅರ್ಥ : ಹೇ ದೇವಾ, ಪೂಜೆ ಮಾಡುವಾಗ ನನ್ನಿಂದ ಕಾಯ್ಳಾ ವಾಚ್ಳಾಮನಸ್ಸ್ಳುಬುದ್ಧಿ ಮುಂತಾದವುಗಳಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ನನ್ನನ್ನು ಕ್ಷಮಿಸಬೇಕು ಮತ್ತು ಪೂಜೆಯನ್ನು ಪರಿಪೂರ್ಣವಾಗಿಸಿಕೊಳ್ಳಬೇಕು.

ಅನೇನ ದೇಶಕಾಲಾದ್ಯನುಸಾರತಃ ಕೃತಪೂಜನೇನ ಶ್ರೀ ಉಮಾ ಮಹೇಶ್ವರಸಹಿತಶ್ರೀಸಿದ್ಧಿವಿನಾಯಕದೇವತಾ ಪ್ರೀಯತಾಂ || (ಕೈಯಲ್ಲಿ ನೀರು ತೆಗೆದುಕೊಂಡು ಹರಿವಾಣದಲ್ಲಿ ಬಿಡಬೇಕು.)

ಪ್ರೀತೋ ಭವತು | ತತ್ಸದ್‌ಬ್ರ್ರಹ್ಮಾರ್ಪಣಮಸ್ತು ||

ಅರ್ಥ : ದೇವರು ನನ್ನ ಮೇಲೆ ಪ್ರಸನ್ನನಾಗಲಿ. ಈ ಎಲ್ಲ ಕರ್ಮಗಳನ್ನು ಬ್ರಹ್ಮನಿಗೆ ಅರ್ಪಿಸುತ್ತೇನೆ.

ಜಯಘೋಷ : 
ದೇವತೆಗಳ ಹೆಸರಿನ ಜಯಘೋಷ ಮಾಡಬೇಕು.

ಪೂಜೆಯ ಕೊನೆಯಲ್ಲಿ ವ್ಯಕ್ತಪಡಿಸಬೇಕಾದ ಕೃತಜ್ಞತೆ : 
‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಕೃಪೆಯಿಂದ ನನ್ನಿಂದ ಭಾವಪೂರ್ಣ ಪೂಜೆಯಾಯಿತು. ನಿನ್ನ ಕೃಪೆಯಿಂದ ಪೂಜೆಯನ್ನು ಮಾಡುತ್ತಿರು ವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿತ್ತು. ನನಗೆ ಪೂಜೆಯಲ್ಲಿನ ಚೈತನ್ಯದ ಲಾಭವಾಯಿತು. ಇದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.’

ಈ ಸಮಯದಲ್ಲಿ ಕಣ್ಣುಗಳನ್ನು ಮುಚ್ಚಿ ‘ಮೂರ್ತಿಯಲ್ಲಿರುವ ಚೈತನ್ಯವು ನಮ್ಮ ಹೃದಯದಲ್ಲಿ ಬರುತ್ತಿದೆ’, ಎಂಬ ಭಾವವನ್ನಿಟ್ಟು ಕೊಳ್ಳಬೇಕು.

ತೀರ್ಥಪ್ರಾಶನ ಮತ್ತು ಪ್ರಸಾದಸೇವನೆ : 
ಬಲಗೈಯಲ್ಲಿ ತೀರ್ಥವನ್ನು ತೆಗೆದುಕೊಂಡು ಮುಂದಿನ ಮಂತ್ರವನ್ನು ಪಠಿಸುತ್ತಾ ತೀರ್ಥವನ್ನು ಪ್ರಾಶನ ಮಾಡಬೇಕು.

ಅಕಾಲಮೃತ್ಯುಹರಣಂ ಸರ್ವವ್ಯಾಧಿವಿನಾಶನಮ್ |
ದೇವಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಮ್ ||

ಅರ್ಥ : ಅಕಾಲದಲ್ಲಿ ಮೃತ್ಯು ಬರಬಾರದು ಮತ್ತು ಎಲ್ಲ ರೋಗಗಳು ನಾಶವಾಗಬೇಕು ಎಂಬುದಕ್ಕಾಗಿ ನಾನು ದೇವರ (ಶ್ರೀ ಉಮಾಮಹೇಶ್ವರಸಹಿತ ಶ್ರೀ ಸಿದ್ಧಿವಿನಾಯಕನ) ಚರಣಗಳನ್ನು ತೊಳೆದ ಪವಿತ್ರ ತೀರ್ಥವನ್ನು ಸೇವಿಸಿ ನನ್ನ ಜಠರದಲ್ಲಿ ಧಾರಣೆ ಮಾಡುತ್ತೇನೆ.

ಹಾಗೆಯೇ ಪ್ರಸಾದವನ್ನೂ ಭಾವಪೂರ್ಣವಾಗಿ ಸೇವಿಸಬೇಕು.

ಮೋದಕ ಬಾಗಿನದಾನ ಮಂತ್ರ : 
ಒಂದು ಬಾಳೆಎಲೆಯ ಮೇಲೆ ಅಥವಾ ತಟ್ಟೆಯಲ್ಲಿ ೧೦ ಅಥವಾ ೨೧ ಮೋದಕಗಳನ್ನಿಡಬೇಕು. ಅದರ ಮೇಲೆ ಬಾಳೆಎಲೆ ಅಥವಾ ತಟ್ಟೆಯನ್ನು ಮಗುಚಿ ಇಡಬೇಕು. ಅದರ ಮೇಲೆ ಗಂಧ ಹೂವು ಅರ್ಪಿಸಬೇಕು. ನಂತರ ಮುಂದಿನ ಮಂತ್ರವನ್ನು ಪಠಿಸುತ್ತಾ ಬ್ರಾಹ್ಮಣನಿಗೆ ಮೋದಕದ ಬಾಗಿನದಾನವನ್ನು ಕೊಡಬೇಕು.

ವಿನಾಯಕ ನಮಸ್ತುಭ್ಯಂ ಸತತಂ ಮೋದಕಪ್ರಿಯ |
ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ದಶಾನಾಂ ಮೋದಕಾನಾಂ ಚ ದಕ್ಷಿಣಾಫಲಸಂಯುತಮ್ |
ವಿಪ್ರಾಯ ತವ ತುಷ್ಟ್ಯರ್ಥಂ ವಾಯನಂ ಪ್ರದದಾಮ್ಯಹಮ್ ||

ಅನಂತರ ಆಚಮನ ಮಾಡಿ ‘ವಿಷ್ಣವೇ ನಮೋ ವಿಷ್ಣವೇ ನಮೋ ವಿಷ್ಣವೇ ನಮಃ |’ ಎನ್ನಬೇಕು.

ಮೂರ್ತಿ ವಿಸರ್ಜನೆಯ ಮಂತ್ರ : 
ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಮುಂದಿನ ಮಂತ್ರವನ್ನು ಹೇಳಬೇಕು.

ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥಿವಾತ್ |
ಇಷ್ಟಕಾಮಪ್ರಸಿದ್ಧ್ಯರ್ಥಂ ಪುನರಾಗಮನಾಯ ಚ ||

ಅರ್ಥ : ಇಂದಿನವರೆಗೆ ನಾನು ಮಾಡಿದ ಮಣ್ಣಿನ ಮೂರ್ತಿಯ ಪೂಜೆಯನ್ನು ಎಲ್ಲ ದೇವಗಣರು ಸ್ವೀಕರಿಸಲಿ ಮತ್ತು ಇಚ್ಛಿತ ಕಾರ್ಯದ ಸಿದ್ಧಿಗಾಗಿ ಮತ್ತು ಪುನಃ ಬರಲು ಈಗ ಪ್ರಸ್ಥಾನ ಮಾಡಲಿ.

ನಂತರ ಆ ಅಭಿಮಂತ್ರಿತ ಅಕ್ಷತೆಗಳನ್ನು ಶ್ರೀ ಮಹಾಗಣಪತಿ ಪೂಜೆಯನ್ನು ಮಾಡಿದ ತೆಂಗಿನಕಾಯಿಯ ಮೇಲೆ, ಹಾಗೆಯೇ ಶ್ರೀ ಉಮಾಮಹೇಶ್ವರ ಮತ್ತು ಶ್ರೀ ಸಿದ್ಧಿವಿನಾಯಕ ಇವರ ಮೇಲೆ ಅರ್ಪಿಸಬೇಕು. ನಂತರ ಮೂರ್ತಿಯನ್ನು ಸ್ಥಳದಿಂದ ಸ್ವಲ್ಪ ಸರಿಸಬೇಕು ಮತ್ತು ಅದನ್ನು ಕುಲಾಚಾರದಂತೆ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.

(ಆಧಾರ : ಸನಾತನ ಸಂಸ್ಥೆ ಪ್ರಕಾಶಿಸಿದ ಗ್ರಂಥ 'ಗಣೇಶ ಪೂಜಾವಿಧಿ')
ವಿವರವಾಗಿ ಓದಲು ಗ್ರಂಥವನ್ನು ನೋಡಿ.

ಶ್ರೀ ಗಣೇಶನ ಕುರಿತು ಲಭ್ಯವಿರುವ ಸನಾತನ ಸಂಸ್ಥೆಯ ಇತರ ಕಿರುಗ್ರಂಥಗಳು
೧. ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಷ್ಟನಾಶನಸ್ತೋತ್ರ (ಅರ್ಥಸಹಿತ)
೨. ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು!
೩. ಶ್ರೀ ಗಣಪತಿ (ಕಿರುಗ್ರಂಥ)
೪. ಶ್ರೀ ಗಣಪತಿ (ಗ್ರಂಥ)

ಶ್ರೀ ಗಣೇಶನಿಗೆ ಸಂಬಂಧಿತ ಮಾಹಿತಿಗಳು
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ?
ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ!
ಶಾಸ್ತ್ರೀಯ ಗಣೇಶಮೂರ್ತಿಯನ್ನೇ ಪೂಜಿಸಿ!
ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು?
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ!
ಗಣೇಶ ಚತುರ್ಥಿಯಂದು ಮಾಡಬೇಕಾದ ಕೃತಿಗಳು
ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು
ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ! 
ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ
Dharma Granth