Showing posts with label ಧರ್ಮ ಆಘಾತ. Show all posts
Showing posts with label ಧರ್ಮ ಆಘಾತ. Show all posts

ಶಾಲಾ-ಕಾಲೇಜುಗಳಲ್ಲಿ ನಡೆಯುವ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಘಟನೆಗಳನ್ನು ವಿರೋಧಿಸಿ!

ಹಿಂದೂಗಳೇ, ಈಗ ಅನೇಕ ಕಡೆ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾ ಕಾರಂಜಿ ಅಥವಾ ಸ್ಕೂಲ್‌ ಡೇ ಗಳಂತಹ ಕಾರ್ಯಕ್ರಮಗಳಲ್ಲಿ ಹಿಂದೂ ದೇವ ದೇವತೆಗಳನ್ನು ಮತ್ತು ಪುರಾಣಕಥೆಗಳನ್ನು, ಸಂತರನ್ನು, ರಾಷ್ಟ್ರಪುರುಷರನ್ನು ಅವಮಾನಿಸುವಂತಹ ನಾಟಕಗಳನ್ನು ಮಾಡಲಾಗುತ್ತದೆ. ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಘಟನೆಗಳು ನಡೆಯುತ್ತಿದ್ದರೆ, ಅದನ್ನು ಮೂಕರಾಗಿ ನೋಡದೇ, ಸಂಬಂಧಿತರಲ್ಲಿ ಕೂಡಲೇ ದೂರ ನೀಡಿ. ಶಾಲಾ ಕಾಲೇಜು ಸಿಬ್ಬಂದಿಗಳೂ ಕೇಳದಿದ್ದಲ್ಲಿ ಪೊಲೀಸರಲ್ಲಿಯೂ ತಕ್ಷಣ ದೂರು ನೀಡಿ. ನಿಮಗೆ ಕಾನೂನುರೀತ್ಯಾ ಹೋರಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು 2010ರಲ್ಲೇ ಹೊರಡಿಸಿದ ಸುತ್ತೋಲೆಯನ್ನೇ ಇಲ್ಲಿ ನೀಡುತ್ತಿದ್ದೇವೆ. ಇದನ್ನು ಮುದ್ರಿಸಿಟ್ಟುಕೊಳ್ಳಿ ಮತ್ತು ಅಗತ್ಯ ಬಂದಾಗ ಇದನ್ನು ತೋರಿಸಿ.

ಹಿಂದೂಗಳೇ, ಇಂತಹ ನಾಟಕಗಳನ್ನು, ಛದ್ಮವೇಶಸ್ಪರ್ಧೆಗಳನ್ನು ವಿರೋಧಿಸುತ್ತೀರಲ್ಲವೇ?


ಗೋವನ್ನು ಕೊಲ್ಲುವ ಅತ್ಯಂತ ಕ್ರೂರ ಹಾಗೂ ಬರ್ಬರ ವಿಧಾನ!

೧. ಅರೆಹೊಟ್ಟೆಯಿರುವ ಗೋವಿನ ಹಿಂದಿನ ಕಾಲನ್ನು ಯಂತ್ರದಲ್ಲಿ ಸಿಲುಕಿಸುವುದು, ಕುದಿಯುತ್ತಿರುವ ನೀರನ್ನು ಹಾಕುವುದು, ಯಂತ್ರದ ಮಾಧ್ಯಮದಿಂದ ಅವುಗಳನ್ನು ತಲೆಕೆಳಗಾಗಿ ನಿಲ್ಲಿಸುವುದು ಹಾಗೂ ತಲೆಕೆಳಗಾಗಿ ನೇತುಹಾಕಿದ ಹಸುವಿನ ಕುತ್ತಿಗೆಯ ಮುಖ್ಯವಾದ ನರವನ್ನು ಕತ್ತರಿಸುವುದು: ೭-೮ ದಿನಗಳಿಂದ ಅರೆಹೊಟ್ಟೆಯಲ್ಲಿರುವ ಹಸುಗಳನ್ನು ಒಂದು ಯಂತ್ರದ ಬಳಿ ತಂದು ಅದರ ಹಿಂದಿನ ಕಾಲನ್ನು ಯಂತ್ರದಲ್ಲಿ ಸಿಲುಕಿಸಲಾಗುತ್ತದೆ. ಅದಾದ ಬಳಿಕ ಅದರ ಮೇಲೆ ಕುದಿಯುತ್ತಿರುವ ನೀರಿನ ಉಗಿಯನ್ನು ಸಿಂಪಡಿಸಲಾಗುತ್ತದೆ. ‘ರಕ್ತದ ಪ್ರವಾಹ ಜೋರಾಗಿ ಅದರ ಚರ್ಮ ಮೃದುವಾಗಲಿ ಎಂಬುದಕ್ಕಾಗಿ ಈ ರೀತಿ ಮಾಡಲಾಗುತ್ತದೆ. ತಲೆಕೆಳಗಾಗಿ ನೇತು ಹಾಕಿರುವ ಹಸುಗಳ ಕುತ್ತಿಗೆಯ ಬಳಿಯಿರುವ ಮುಖ್ಯ ನರವನ್ನು ಕತ್ತರಿಸಲಾಗುತ್ತದೆ. ರಕ್ತವು ಹರಿಯ ತೊಡಗುತ್ತದೆ ಹಾಗೂ ಈ ರಕ್ತವನ್ನು ಮಾರಾಟಕ್ಕಾಗಿ ಶೇಖರಿಸಲಾಗುತ್ತದೆ. ಈ ರಕ್ತವು ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚು ಲಾಭದಾಯಕವಾಗಿರುವುದರಿಂದ ಈ ರಕ್ತಕ್ಕೆ ತುಂಬಾ ಬೇಡಿಕೆಯಿದೆ. ಈ ರಕ್ತ ಎಷ್ಟು ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರಿನಲ್ಲಿ ಸೇರಿ ಹೋಗುತ್ತದೆ ಎಂದರೆ, ಒಡೆದು ಹೋದ ನಲ್ಲಿಯಿಂದ (ಪೈಪ್‌ನಿಂದ) ಅದು ಕುಡಿಯುವ ನೀರಿನೊಂದಿಗೆ ಸೇರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇಂತಹ ಸ್ಥಿತಿಯಲ್ಲಿಯೂ ಆ ಹಸು-ಎತ್ತುಗಳು ಯಾತನೆ ಅನುಭವಿಸುತ್ತಾ ಜೀವಂತವಾಗಿರುತ್ತದೆ. ಈ ಸ್ಥಿತಿಯಲ್ಲಿರುವಾಗ ರಕ್ತ ಹರಿಯುವುದು ನಿಂತ ಮೇಲೆ ರಂಧ್ರ ಮಾಡಿ ಆ ಹಸುವಿನ ಶರೀರದಲ್ಲಿ ಗಾಳಿ ತುಂಬಲಾಗುತ್ತದೆ. ಈ ಸ್ಥಿತಿಯಲ್ಲಿ ಅದರ ಚರ್ಮವನ್ನು ಸುಲಿದು ತೆಗೆಯಲಾಗುತ್ತದೆ. ಈ ಮೃದುವಾದ ಚರ್ಮಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಕರುವಿನ ಚರ್ಮಕ್ಕೂ ವಿಫುಲವಾದ ಬೇಡಿಕೆಯಿರುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಅದನ್ನು ನಿರ್ದಯವಾಗಿ ಕೊಲ್ಲಲಾಗುತ್ತದೆ.

೨. ಗೋವನ್ನು ‘ಹಲಾಲ್’ ಹಾಗೂ ‘ಆಘಾತ’ ಇವೆರಡು ವಿಧದಲ್ಲಿ ಕೊಲ್ಲುವುದು ಹಾಗೂ ಯಂತ್ರೀಕರಣ, ವಿದೇಶದಲ್ಲಿನ ಬೇಡಿಕೆ, ವಿದೇಶಿ ಚಲಾವಣೆಯ ಆವಶ್ಯಕತೆ ಇವುಗಳಿಂದ ಈ ಪ್ರಕಾರಗಳು ಹೆಚ್ಚಾಗುವುದು: ಗೋವನ್ನು ಕೊಲ್ಲಲು ಎರಡು ವಿಧಗಳಿವೆ. ಅವುಗಳಿಗೆ ‘ಹಲಾಲ್’ ಹಾಗೂ ‘ಆಘಾತ’, ಎಂದು ಹೇಳಲಾಗುತ್ತದೆ. ಪ್ರಾಣಿಗಳಿಗೆ ಯಾತನೆ ನೀಡಿ ಕೊಲ್ಲುವುದು ಅಂದರೆ ಹಲಾಲ್ ಪದ್ಧತಿ! ಗೋವಿನ ಕತ್ತಿನ ಮೇಲೆ ನಿಧಾನವಾಗಿ ಚಾಕುವನ್ನು ತಿರುಗಿಸಲಾಗುತ್ತದೆ, ಅಂದರೆ ತಕ್ಷಣ ಕೊಲ್ಲುವುದನ್ನು ಬಿಟ್ಟು ನಿಧಾನವಾಗಿ ಅದನ್ನು ಕೊಲ್ಲಲಾಗುತ್ತದೆ. ಆಘಾತ ಪದ್ಧತಿಯಲ್ಲಿ ಆಘಾತ ಎಷ್ಟು ದೊಡ್ಡದಾಗಿರುತ್ತದೆ ಅಂದರೆ ಆ ಪ್ರಾಣಿ ತಕ್ಷಣ ಸಾಯುತ್ತದೆ. ಆಘಾತ ಪದ್ಧತಿಯಿಂದ ಕೊಂದ ಪ್ರಾಣಿಗಳಿಗೆ ಆಗುವ ತೊಂದರೆಗಿಂತ ಹಲಾಲ್ ಪದ್ಧತಿಯಿಂದ ಕೊಲ್ಲಲಾಗುವ ಪ್ರಾಣಿಗಳ ಮಾಂಸ ತುಂಬಾ ರುಚಿಯಾಗಿರುತ್ತದೆ, ಎಂದು ಹೇಳುತ್ತಾರೆ! ಹಲಾಲ್ ಪದ್ಧತಿಯ ಮಾಂಸಕ್ಕೆ ಅಧಿಕ ಬೇಡಿಕೆಯಿದೆ; ಆದರೆ ಇಲ್ಲಿ ಮಾನವೀ ಸುಖಕ್ಕಾಗಿ ಒಂದು ಜೀವಕ್ಕೆ ಯಾತನೆ ನೀಡಿ ಹತ್ಯೆ ಮಾಡಲಾಗುತ್ತದೆ. ಹಿಂದೆ ಕೂಡ ಈ ರೀತಿಯ ಪದ್ಧತಿ ಇತ್ತು; ಆದರೆ ಅದರ ಪ್ರಮಾಣ ತುಂಬಾ ಅಲ್ಪವಾಗಿತ್ತು.  ಈಗ ಯಂತ್ರೀಕರಣ, ವಿದೇಶಿ ಬೇಡಿಕೆ, ವಿದೇಶೀ ಚಲಾವಣೆಯ ಆವಶ್ಯಕತೆ ಇವುಗಳಿಂದ ಈ ಪ್ರಕಾರಗಳು ಹೆಚ್ಚಾಗಿದೆ.
- ಗ.ನಾ.ಕಾಪಡೀ (ರಾಷ್ಟ್ರಮತ, ೨೫.೫.೨೦೦೦)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth

ಗೋರಕ್ಷಣೆಯ ವಿಷಯದ ಕುರಿತು ಇಸ್ಲಾಮೀ ವಿಚಾರವಂತರ ಈ ವಿಚಾರಗಳೆಡೆಗೆ ಮುಸಲ್ಮಾನರು ಗಮನಹರಿಸುವರೇ ?

೧. ಆಕಳ ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಅದರ ಮಾಂಸ ಅತ್ಯಂತ ಅಪಾಯಕಾರಿಯಾಗಿದೆ. ‘ಕುರಾನ್’ ಅಥವಾ ಅರಬರು ಬರೆದ ‘ಆಯತ’ನಲ್ಲಿ ಹಸುವಿನ ಬಲಿದಾನವನ್ನು ಸಮರ್ಥಿಸಿಲ್ಲ. - ಹಕೀಂ ಅಜ್ಮಲ ಖಾಂ.
೨. ‘ಹಸುವಿನ ಮಾಂಸವನ್ನು ಭಕ್ಷಿಸಿ’ ಎಂದು ಇಸ್ಲಾಂ ಧರ್ಮದಲ್ಲಿ ಎಲ್ಲಿಯೂ ಹೇಳಿಲ್ಲ. - ಡಾ. ಮೊ. ಹಾಫಿಜ ಸಯ್ಯದ.
೩. ಹಿಂದೂ ಮತ್ತು ಮುಸಲ್ಮಾನ ಇವರನ್ನು ಒಂದೆಡೆಗೆ ಸೇರಿಸಲು ಗೋವಿನ ರಕ್ಷಣೆಯ ವಿಷಯಕ್ಕಿಂತ ಬೇರೊಂದು ಪರ್ಯಾಯವಿಲ್ಲ. ‘ಕುರಾನ ಶರೀಫ’ನಲ್ಲಿ ಈಶ್ವರನ (ಖುದಾ) ವಚನಗಳಿವೆ, ಆದರೆ ಅದರಲ್ಲಿ ಎಲ್ಲಿಯೂ ಗೋಮಾಂಸ ಭಕ್ಷಣೆಯ ಆದೇಶವಿಲ್ಲ - ಮೌ. ಕಾಬಿಲ ಸಾಹೇಬ.
೪. ‘ಗೋಹತ್ಯಾ ನಿಷೇಧದ ಪ್ರಶ್ನೆಯು ಈಗ ಸುದೀರ್ಘಕಾಲದ ವರೆಗೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಪ್ರಜಾತಂತ್ರದ ಸಿದ್ಧಾಂತಗಳಿಗನುಗುಣವಾಗಿ ಜನತೆಯ ಬೇಡಿಕೆಯನ್ನು ಸ್ವೀಕರಿಸಲೇಬೇಕು’ - ರಫೀಕ ಅಹಮ್ಮದ ಕಿಡ್ವಾಯಿ.
೫. ‘ಗೋವು ದೇಶದ ಗೌರವವಾಗಿದೆ, ದೇಶದಲ್ಲಿ ಗೋಹತ್ಯೆಯನ್ನು ಮಾಡುವ ವನಿಗೆ ಮರಣದಂಡನೆಯ ಶಿಕ್ಷೆಯನ್ನು ಕೊಡಬೇಕು. ಕೇಂದ್ರ ಸರಕಾರವು ಇದಕ್ಕಾಗಿ ಒಂದು ಕಾನೂನನ್ನು ರಚಿಸಬೇಕು. - ರಾಷ್ಟ್ರವಾದಿ ಮುಸ್ಲಿಂ ಮೋರ್ಚಾದ ರಾಷ್ಟ್ರೀಯ ಸಂಯೋಜಕ ಮೊ. ಅಫಜಲ
- ಗೌ ಕರುಣಾ ನಿಧಿ, ಋಷಿ ದಯಾನಂದ ಸರಸ್ವತಿ, ಸೂರಜಮಲ ತ್ಯಾಗಿ, ಈ -೩೭೦, ಎ, ಶಾಸ್ತ್ರಿನಗರ, ಅಜ್ಮೇರ (ಆರ್ಯನೀತಿ’, ೧೦.೨.೨೦೧೧)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth

ಗೋಹತ್ಯೆ ಮತ್ತು ಸದ್ಯದ ಸ್ಥಿತಿ

ಗೋಹತ್ಯೆ
೧೮೪೭: ಗೋವಿನ ಕೊಬ್ಬನ್ನು ಉಪಯೋಗಿಸಿದ ಕಾಡತೂಸುಗಳನ್ನು ಉಪಯೋಗಿಸಿದರೆಂದು ಹಿಂದೂಸ್ಥಾನಿ ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಯುದ್ಧವನ್ನು ಸಾರಿದರು.
ಸದ್ಯದ ಸ್ಥಿತಿ
೧. ೧೯೪೮ರಲ್ಲಿ ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಇಡೀ ಹಿಂದುಸ್ಥಾನದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಕಲಂ ಇದೆ. ಆದರೆ ಇದು ವರೆಗೂ ಅದು ಜಾರಿಗೆ ಬಂದಿಲ್ಲ.

೨. ಮಹಾರಾಷ್ಟ್ರ ಸರಕಾರದ ವಿಧಾನ ಸಭೆಯು ೧೯೯೫ರ ಮಧ್ಯದಲ್ಲಿ ಗೋಹತ್ಯಾ ನಿಷೇಧದ ಕಾನೂನನ್ನು ಅನುಮೋದಿಸಿ ರಾಷ್ಟ್ರಪತಿಗಳಿಗೆ ಮಂಜೂರಾತಿಗಾಗಿ ಕಳುಹಿಸಿಕೊಟ್ಟಿತು. ಇಂದಿನ ವರೆಗೆ ಅದು ಹಾಗೆಯೇ ಧೂಳು ತಿನ್ನುತ್ತಿದೆ. ೧೪ ವರ್ಷಗಳಾದ ನಂತರವೂ ಆ ಕಾನೂನಿಗೆ ರಾಷ್ಟ್ರಪತಿಗಳ ಸಮ್ಮತಿ ದೊರೆತಿಲ್ಲ. ಅದರಿಂದ ಇಂದಿನ ವರೆಗೆ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿಲ್ಲ.

೩. ಕೇಂದ್ರ ಸರಕಾರವು ಗೋಹತ್ಯಾ ನಿಷೇಧದ ಕುರಿತು ಏನೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ. ಈ ವಿಷಯದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಭಾಗ ಮಾತ್ರವಲ್ಲದೇ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಗೋ ಮಾಂಸದಿಂದ ಪ್ರಚಂಡ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಬಹುದೊಡ್ಡ ಪ್ರಮಾಣದಲ್ಲಿ ಡಾಲರ್ಸ, ಯುರೋ, ರಿಯಾಲ, ದಿನಾರ ಈ ಸ್ವರೂಪ ಗಳಲ್ಲಿ ಧನ ಪ್ರಾಪ್ತವಾಗುತ್ತದೆ. ಸರಕಾರಕ್ಕೆ ಕೇವಲ ಹಣ ಬೇಕಾಗಿದೆ. ಹಿಂದೂ ಗಳೊಂದಿಗೆ ಅವರಿಗೆ ಯಾವುದೇ ಸಂಬಂಧ ಇಲ್ಲ.

೪. ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ ಇಂತಹ ಕೆಲವು ರಾಜ್ಯಗಳು ಗೋಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿದವು. ಆದರೆ ಅಲ್ಲಿಯೂ ಗೋಹತ್ಯೆಗಳಾಗುತ್ತಲಿವೆ. ಹಿಂದುಸ್ಥಾನದ ಅನೇಕ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಕಾನೂನುಗಳಿದ್ದರೂ, ಗೋಹತ್ಯೆಯು ನಿರಾತಂಕವಾಗಿ ನಡೆಯುತ್ತಲಿದೆ. ಇಂತಹ ಸಂದರ್ಭದಲ್ಲಿ ಗೋಹತ್ಯೆ ಕಾನೂನು ಜಾರಿಯಲ್ಲಿಲ್ಲದ ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರದಲ್ಲಿಯ ಅನೇಕ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ಕುರಿತು ಏನು ಹೇಳುವುದು?

೫. ಯಾವ ರಾಜ್ಯದಲ್ಲಿ ಗೋವಧೆಯನ್ನು ನಿಷೇಧಿಸಲಾಗಿದೆಯೋ, ಆ ರಾಜ್ಯಗಳ ಮತಾಂಧರು ಎಲ್ಲಿ ಗೋವಧೆಯನ್ನು ನಿಷೇಧಿಸಿಲ್ಲವೋ ಆ ರಾಜ್ಯಗಳಿಗೆ ಗೋವುಗಳನ್ನು ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಬರುತ್ತಾರೆ. ಅಲ್ಲಿ ಗೋವುಗಳನ್ನು ವಧಿಸುತ್ತಾರೆ. ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಆಕಳುಗಳನ್ನು ತೆಗೆದುಕೊಂಡು ಬರುತ್ತಾರೆ  ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ಮತ್ತು ಮುಂಬಯಿಯಲ್ಲಿ ಮತಾಂಧರ ಬಾಹುಳ್ಯ ಇರುವ ಭಾಗದಲ್ಲಿ ವಧಿಸುತ್ತಾರೆ. ನಾಗಪೂರದ ಪ್ರದೇಶವೊಂದರಲ್ಲಿ ಬಹಿರಂಗವಾಗಿ ಎಲ್ಲರೆದುರೇ ಮನೆ, ಮನೆಗಳಲ್ಲಿ ಗೋಹತ್ಯೆಯನ್ನು ಮಾಡುತ್ತಾರೆ. ಕಸಾಯಿಖಾನೆಯನ್ನು ಹೊರತುಪಡಿಸಿ ನಾಗಪೂರ, ದೆಹಲಿ, ಪುಣೆ, ಸಾಂಗ್ಲಿ, ಕೊಲ್ಲಾಪೂರ, ಸಾತಾರಾ ಇಂತಹ ದೊಡ್ಡ ನಗರಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲ್ಲದೇ ಮತಾಂಧರ ಬಾಹುಳ್ಯವಿರುವ ಸ್ಥಳಗಳಲ್ಲಿ ಮನೆಮನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗಿ ವಧಿಸಲಾಗುತ್ತದೆ.

೬. ಹೈದ್ರಾಬಾದಿನ ಕಸಾಯಿಖಾನೆಯು ಮುಂಬಯಿಯ ಹತ್ತಿರದ ದೇವನಾರಿನ ಕಸಾಯಿಖಾನೆಯಂತೆ ದೊಡ್ಡದಾಗಿದೆ.   ಇವೆರಡೂ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಕಸಾಯಿಖಾನೆಗಳಾಗಿವೆ.

೭. ಖಾನದೇಶದ ನಡೋಂಜಾ ಗ್ರಾಮದಲ್ಲಿ  ಪ್ರತಿದಿನ ೪೦೦ ಆಕಳುಗಳನ್ನು ವಧಿಸಲಾಗುತ್ತಿದೆ. ಅಲ್ಲಿಂದ  ಗೋಮಾಂಸ ದಿಂದ ತುಂಬಿದ ಸಾವಿರಾರು ಟ್ರಕ್‌ಗಳು ಮುಂಬಯಿಗೆ ಬರುತ್ತವೆ. ಇಲ್ಲಿಂದ ಹೊರ ದೇಶಗಳಿಗೆ ಗೋಮಾಂಸ ರಫ್ತಾಗುತ್ತವೆ. ಕುವೈತ, ಅರಬ ರಾಷ್ಟ್ರಗಳು, ಮಲೇಶಿಯಾ, ಈಜಿಪ್ಟ, ಮಧ್ಯ ಏಷ್ಯಾದ ದೇಶಗಳಿಗೆ ಲಕ್ಷಾಂತರ ಟನ್‌ಗಳಷ್ಟು ಗೋಮಾಂಸ ಮಾರಲಾಗುತ್ತಿದೆ.

೮. ಮಾನಖುರ್ದನಲ್ಲಿ ಎರಡು ಟ್ರಕ್ ಗಳಲ್ಲಿ ತುಂಬಿದ ೬ ಟನ್ ಗೋಮಾಂಸವನ್ನು ಆರಕ್ಷಕರು ಜಪ್ತಿ ಮಾಡಿದರು. ಆರು ಟನ್ ಗೋಮಾಂಸವೆಂದರೆ, ಈ ಸೈತಾನನರು ಎಷ್ಟು ಆಕಳುಗಳ ಹತ್ಯೆ ಮಾಡಿರಬಹುದು?

೯. ಬಕರಿ ಈದ್ ಹತ್ತಿರ ಬಂತೆಂದರೆ ಇಡೀ ಭಾರತದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ನಿರುಪದ್ರವಿ ಜೀವಿಗಳಾದ ಪವಿತ್ರ ಗೋವು, ಎತ್ತು, ಕರುಗಳ ಕಳ್ಳಸಾಗಾಣಿಕೆ ನಡೆಯುತ್ತದೆ. ಮತಾಂಧರು ಬಕರಿ ಈದ್ಗಾಗಿ ಅಗಾಧ ಪ್ರಮಾಣದಲ್ಲಿ ಗೋವುಗಳ ಸಾಮೂಹಿಕ ಹತ್ಯೆಯನ್ನು ನಡೆಸುತ್ತಾರೆ. ಹಿಂದುಸ್ಥಾನದಲ್ಲಿ ಮತಾಂಧರು ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಗೋವುಗಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡುತ್ತಾರೆ.

೧೦. ಬಕರಿ-ಈದ್ ದಿನ ದೊಡ್ಡ ದೊಡ್ಡ ನಗರಗಳು ಮಾತ್ರವಲ್ಲದೇ, ಸಣ್ಣಪುಟ್ಟ ಊರುಗಳಲ್ಲಿಯೂ ಆಕಳು ಮತ್ತು ಕರುಗಳ ಹತ್ಯೆಯು ಅಗಾಧ ಪ್ರಮಾಣದಲ್ಲಾಗುತ್ತದೆ. ಸರಕಾರವು ಕಟುಕರನ್ನು ಬಂಧಿಸುವ ಧೈರ್ಯವನ್ನು ತೋರಿಸುವುದಿಲ್ಲ. ಕಾನೂನು ರೀತ್ಯಾ ಗೋಹತ್ಯೆಗೆ ನಿಷೇಧ ವಿರುವಲ್ಲಿಯೂ ಆರಕ್ಷಕರ ಕಣ್ಮುಂದೆಯೇ ಬೀದಿಬೀದಿಗಳಲ್ಲಿ ಗೋಮಾಂಸದ ಮಾರಾಟ ನಡೆಯುತ್ತದೆ.

೧೧. ಭಾರತದಲ್ಲಿ ಆಗುತ್ತಿರುವ ಪಶುಗಳ ಹತ್ಯೆಯ ಬಗ್ಗೆ ಶೇಕಡಾವಾರು ಅಂಕಿಅಂಶ ಗಳನ್ನು ಸಂಯುಕ್ತ ರಾಷ್ಟ್ರ ಸಂಘದ ಅಗ್ರಿಕಲ್ಚರ್ ಆರ್ಗನೈಸೇಶನ್ ೫ ವರ್ಷಗಳ ಹಿಂದೆ ಕೊಟ್ಟಿತ್ತು. ಅದೊಂದೇ ವರ್ಷದಲ್ಲಿ ಒಂದು ಕೋಟಿ ಅರವತ್ತು ಲಕ್ಷ ಎಪ್ಪತ್ತು ಸಾವಿರ ಆಕಳು ಮತ್ತು ಕರುಗಳ ವಧೆಯಾಗಿರುವ ದಾಖಲೆ ಇದೆ. ಇಂದು ಸರಿಸುಮಾರು ಎರಡೂವರೆ ಕೋಟಿಯಷ್ಟು ಆಕಳು ಮತ್ತು ಕರುಗಳ ವಧೆಯಾಗುತ್ತದೆ.

೧೨. ದಿನಪತ್ರಿಕೆಯೊಂದರ ಸಂಪಾದಕರಾದ ಗಿರೀಶ ಕುಮಾರ ಇವರು ಹೇಳಿದಂತೆ, “ಗೋಮಾಂಸವನ್ನು ಮಾರಾಟ ಮಾಡುವ (ಫಾಸ್ಟ್‌ಫುಡ್‌ನಂತೆ) ಅಮೇರಿಕಾ ಮತ್ತು ಯುರೋಪಿನ ಬಹುರಾಷ್ಟ್ರೀಯ ಕಂಪನಿಗಳು ಭಾರತ ಸರಕಾರಕ್ಕೆ  ಭಾರತದೆಲ್ಲೆಡೆ ಮಾಂಸಮಾರಾಟದ ದೊಡ್ಡ ಯೋಜನೆಯನ್ನು ನೀಡಿದೆ. ಇದು ಒಂದು ರೀತಿಯಲ್ಲಿ ಭಾರತವನ್ನು ಬಲವಂತವಾಗಿ ಮಾಂಸಾಹಾರಿಯನ್ನಾಗಿ ಮಾಡುವ ಕುತಂತ್ರವಾಗಿದೆ. ಭಾರತವು ಅದನ್ನು ಸ್ವೀಕರಿಸಿದೆ. ಅವರ ನಿಯೋಜನೆಯ ಅಡಿಯಲ್ಲಿ ಆ ಯೋಜನೆಗಳು ಕಾರ್ಯಾನ್ವಿತವಾಗುತ್ತಿವೆ. ಗೋಹತ್ಯಾ ನಿಷೇಧದ ವಿಷಯವು ಇಂದು ಬಹುದೂರದ ವಿಷಯವಾಗಿದ್ದು, ಈಗ ಸರಕಾರವೇ ಗೋಹತ್ಯೆಗಾಗಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಬಹುದು.

ಗೋವು ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿದೆ. ಗೋರಕ್ಷಣೆಗಾಗಿ ಹಿಂದೂಗಳು ಸಹಜವಾಗಿ ಪ್ರಾಣವನ್ನು ಬೇಕಾದರೂ ಕೊಡುತ್ತಾರೆ. ಇಂದಿಗೂ ಹಿಂದೂಗಳು ರಸ್ತೆ ಮೇಲೆ ಹೋಗುವಾಗ ಗೋವು ಕಂಡರೆ, ಅವರು ತಮಗರಿವಿಲ್ಲದಂತೆ ಸಹಜ ಭಕ್ತಿ ಭಾವದಿಂದ ಗೋವನ್ನು ಸ್ಪರ್ಶಿಸಿ ವಂದಿಸು ತ್ತಾರೆ. ಆದರೆ, ಸರಕಾರವು ಹಿಂದೂಗಳ ಶ್ರದ್ಧಾಸ್ಥಾನವನ್ನು ನಿರ್ದಾಕ್ಷಿಣ್ಯವಾಗಿ ನಾಶಗೊಳಿಸಲು ಪಣತೊಟ್ಟಂತಿದೆ. ಹಿಂದೂಸ್ಥಾನದಲ್ಲಿ ನಾಲ್ಕು ಸಾವಿರ ಕಸಾಯಿಖಾನೆಗಳಿದ್ದು, ಈ ಕಸಾಯಿಖಾನೆಗಳಲ್ಲಿ ನಿರಂತರವಾಗಿ ಹಿಂದೂಗಳ ಶ್ರದ್ಧೆಯನ್ನು ಹೊಸಕಿ ಹಾಕಲಾಗುತ್ತಿದೆ.

೧೩. ಆಧುನಿಕ ಜಾತ್ಯತೀತ ಜನರು ಆಕಳು ಮತ್ತು ಕರುಗಳಿಂದಾಗಿ ಡಾಲರುಗಳ ರೂಪದಲ್ಲಿ ಹಣ ದೊರೆಯುತ್ತದೆಯೆಂದು ಆನಂದಾಶ್ರು ಸುರಿಸುತ್ತಾರೆ : “ಆಧುನಿಕ ಜನರ ಬೌದ್ಧಿಕ ದಿವಾಳಿ ಖೋರತನವು ಪ್ರತ್ಯಕ್ಷ ಪಿಸ್ತೂಲಿನಿಂದ ಕೊಲ್ಲುವುದಕ್ಕಿಂತಲೂ ಘೋರವಾಗಿದೆ. ಈ ಆಧುನಿಕ ಜಾತ್ಯತೀತರ ಕಣ್ಣೀರನ್ನು ನೋಡಿ, ಅವರು ಆಕಳು ಮತ್ತು ಕರುಗಳ ದುರ್ದೆಶೆಗಾಗಿ ಕಣ್ಣೀರು ಹಾಕುತ್ತಾರೆಂದು ಕೊಂಡರೆ ತಪ್ಪಾಗುತ್ತದೆ. ಅವರು ಆಕಳು ಮತ್ತು ಕರುವಿನ ದುರ್ದೆಶೆಗಾಗಿ ಕಣ್ಣೀರು ಹಾಕದೇ, ಅವುಗಳನ್ನು ಸಮಾಪ್ತಿಗೊಳಿಸಿ, ಅವುಗಳ ಮೂಲಕ ದೊರೆಯುವ ಡಾಲರುಗಳನ್ನು ಬಾಚಿಕೊಳ್ಳುವ ಸಲುವಾಗಿ ಆನಂದಾಶ್ರುಗಳನ್ನು ಹರಿಸುತ್ತಿದ್ದಾರೆ.
- ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೭.೧.೨೦೧೦)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth