೧.
ಅರೆಹೊಟ್ಟೆಯಿರುವ ಗೋವಿನ ಹಿಂದಿನ ಕಾಲನ್ನು ಯಂತ್ರದಲ್ಲಿ ಸಿಲುಕಿಸುವುದು,
ಕುದಿಯುತ್ತಿರುವ ನೀರನ್ನು ಹಾಕುವುದು, ಯಂತ್ರದ ಮಾಧ್ಯಮದಿಂದ ಅವುಗಳನ್ನು ತಲೆಕೆಳಗಾಗಿ
ನಿಲ್ಲಿಸುವುದು ಹಾಗೂ ತಲೆಕೆಳಗಾಗಿ ನೇತುಹಾಕಿದ ಹಸುವಿನ ಕುತ್ತಿಗೆಯ ಮುಖ್ಯವಾದ ನರವನ್ನು
ಕತ್ತರಿಸುವುದು: ೭-೮ ದಿನಗಳಿಂದ ಅರೆಹೊಟ್ಟೆಯಲ್ಲಿರುವ ಹಸುಗಳನ್ನು ಒಂದು ಯಂತ್ರದ
ಬಳಿ ತಂದು ಅದರ ಹಿಂದಿನ ಕಾಲನ್ನು ಯಂತ್ರದಲ್ಲಿ ಸಿಲುಕಿಸಲಾಗುತ್ತದೆ. ಅದಾದ ಬಳಿಕ ಅದರ
ಮೇಲೆ ಕುದಿಯುತ್ತಿರುವ ನೀರಿನ ಉಗಿಯನ್ನು ಸಿಂಪಡಿಸಲಾಗುತ್ತದೆ. ‘ರಕ್ತದ ಪ್ರವಾಹ ಜೋರಾಗಿ
ಅದರ ಚರ್ಮ ಮೃದುವಾಗಲಿ ಎಂಬುದಕ್ಕಾಗಿ ಈ ರೀತಿ ಮಾಡಲಾಗುತ್ತದೆ. ತಲೆಕೆಳಗಾಗಿ ನೇತು
ಹಾಕಿರುವ ಹಸುಗಳ ಕುತ್ತಿಗೆಯ ಬಳಿಯಿರುವ ಮುಖ್ಯ ನರವನ್ನು ಕತ್ತರಿಸಲಾಗುತ್ತದೆ. ರಕ್ತವು
ಹರಿಯ ತೊಡಗುತ್ತದೆ ಹಾಗೂ ಈ ರಕ್ತವನ್ನು ಮಾರಾಟಕ್ಕಾಗಿ ಶೇಖರಿಸಲಾಗುತ್ತದೆ. ಈ ರಕ್ತವು
ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚು ಲಾಭದಾಯಕವಾಗಿರುವುದರಿಂದ ಈ ರಕ್ತಕ್ಕೆ ತುಂಬಾ
ಬೇಡಿಕೆಯಿದೆ. ಈ ರಕ್ತ ಎಷ್ಟು ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರಿನಲ್ಲಿ ಸೇರಿ
ಹೋಗುತ್ತದೆ ಎಂದರೆ, ಒಡೆದು ಹೋದ ನಲ್ಲಿಯಿಂದ (ಪೈಪ್‌ನಿಂದ) ಅದು ಕುಡಿಯುವ ನೀರಿನೊಂದಿಗೆ
ಸೇರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇಂತಹ ಸ್ಥಿತಿಯಲ್ಲಿಯೂ ಆ ಹಸು-ಎತ್ತುಗಳು
ಯಾತನೆ ಅನುಭವಿಸುತ್ತಾ ಜೀವಂತವಾಗಿರುತ್ತದೆ. ಈ ಸ್ಥಿತಿಯಲ್ಲಿರುವಾಗ ರಕ್ತ ಹರಿಯುವುದು
ನಿಂತ ಮೇಲೆ ರಂಧ್ರ ಮಾಡಿ ಆ ಹಸುವಿನ ಶರೀರದಲ್ಲಿ ಗಾಳಿ ತುಂಬಲಾಗುತ್ತದೆ. ಈ
ಸ್ಥಿತಿಯಲ್ಲಿ ಅದರ ಚರ್ಮವನ್ನು ಸುಲಿದು ತೆಗೆಯಲಾಗುತ್ತದೆ. ಈ ಮೃದುವಾದ ಚರ್ಮಕ್ಕೆ
ವಿದೇಶಿ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಕರುವಿನ ಚರ್ಮಕ್ಕೂ ವಿಫುಲವಾದ
ಬೇಡಿಕೆಯಿರುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಅದನ್ನು ನಿರ್ದಯವಾಗಿ ಕೊಲ್ಲಲಾಗುತ್ತದೆ.
೨.
ಗೋವನ್ನು ‘ಹಲಾಲ್’ ಹಾಗೂ ‘ಆಘಾತ’ ಇವೆರಡು ವಿಧದಲ್ಲಿ ಕೊಲ್ಲುವುದು ಹಾಗೂ ಯಂತ್ರೀಕರಣ,
ವಿದೇಶದಲ್ಲಿನ ಬೇಡಿಕೆ, ವಿದೇಶಿ ಚಲಾವಣೆಯ ಆವಶ್ಯಕತೆ ಇವುಗಳಿಂದ ಈ ಪ್ರಕಾರಗಳು
ಹೆಚ್ಚಾಗುವುದು: ಗೋವನ್ನು ಕೊಲ್ಲಲು ಎರಡು ವಿಧಗಳಿವೆ. ಅವುಗಳಿಗೆ ‘ಹಲಾಲ್’ ಹಾಗೂ
‘ಆಘಾತ’, ಎಂದು ಹೇಳಲಾಗುತ್ತದೆ. ಪ್ರಾಣಿಗಳಿಗೆ ಯಾತನೆ ನೀಡಿ ಕೊಲ್ಲುವುದು ಅಂದರೆ ಹಲಾಲ್
ಪದ್ಧತಿ! ಗೋವಿನ ಕತ್ತಿನ ಮೇಲೆ ನಿಧಾನವಾಗಿ ಚಾಕುವನ್ನು ತಿರುಗಿಸಲಾಗುತ್ತದೆ, ಅಂದರೆ
ತಕ್ಷಣ ಕೊಲ್ಲುವುದನ್ನು ಬಿಟ್ಟು ನಿಧಾನವಾಗಿ ಅದನ್ನು ಕೊಲ್ಲಲಾಗುತ್ತದೆ. ಆಘಾತ
ಪದ್ಧತಿಯಲ್ಲಿ ಆಘಾತ ಎಷ್ಟು ದೊಡ್ಡದಾಗಿರುತ್ತದೆ ಅಂದರೆ ಆ ಪ್ರಾಣಿ ತಕ್ಷಣ ಸಾಯುತ್ತದೆ.
ಆಘಾತ ಪದ್ಧತಿಯಿಂದ ಕೊಂದ ಪ್ರಾಣಿಗಳಿಗೆ ಆಗುವ ತೊಂದರೆಗಿಂತ ಹಲಾಲ್ ಪದ್ಧತಿಯಿಂದ
ಕೊಲ್ಲಲಾಗುವ ಪ್ರಾಣಿಗಳ ಮಾಂಸ ತುಂಬಾ ರುಚಿಯಾಗಿರುತ್ತದೆ, ಎಂದು ಹೇಳುತ್ತಾರೆ! ಹಲಾಲ್
ಪದ್ಧತಿಯ ಮಾಂಸಕ್ಕೆ ಅಧಿಕ ಬೇಡಿಕೆಯಿದೆ; ಆದರೆ ಇಲ್ಲಿ ಮಾನವೀ ಸುಖಕ್ಕಾಗಿ ಒಂದು
ಜೀವಕ್ಕೆ ಯಾತನೆ ನೀಡಿ ಹತ್ಯೆ ಮಾಡಲಾಗುತ್ತದೆ. ಹಿಂದೆ ಕೂಡ ಈ ರೀತಿಯ ಪದ್ಧತಿ ಇತ್ತು;
ಆದರೆ ಅದರ ಪ್ರಮಾಣ ತುಂಬಾ ಅಲ್ಪವಾಗಿತ್ತು. ಈಗ ಯಂತ್ರೀಕರಣ, ವಿದೇಶಿ ಬೇಡಿಕೆ, ವಿದೇಶೀ
ಚಲಾವಣೆಯ ಆವಶ್ಯಕತೆ ಇವುಗಳಿಂದ ಈ ಪ್ರಕಾರಗಳು ಹೆಚ್ಚಾಗಿದೆ.
- ಗ.ನಾ.ಕಾಪಡೀ (ರಾಷ್ಟ್ರಮತ, ೨೫.೫.೨೦೦೦)
(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")
(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")
ಸಂಬಂಧಿತ ವಿಷಯಗಳು
ಗೋಹತ್ಯೆ ಮತ್ತು ಸದ್ಯದ ಸ್ಥಿತಿ
ಗೋರಕ್ಷಣೆಯ ವಿಷಯದ ಕುರಿತು ಇಸ್ಲಾಮೀ ವಿಚಾರವಂತರ ಈ ವಿಚಾರಗಳೆಡೆಗೆ ಮುಸಲ್ಮಾನರು ಗಮನಹರಿಸುವರೇ ?
ಸರ್ವೋಪಕಾರಿಯಾದ ಗೋಮಾತೆ!
ಗೋವನ್ನು ಕೊಲ್ಲುವ ಅತ್ಯಂತ ಕ್ರೂರ ಹಾಗೂ ಬರ್ಬರ ವಿಧಾನ!
ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು!
ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ!
Dharma Granthಗೋರಕ್ಷಣೆಯ ವಿಷಯದ ಕುರಿತು ಇಸ್ಲಾಮೀ ವಿಚಾರವಂತರ ಈ ವಿಚಾರಗಳೆಡೆಗೆ ಮುಸಲ್ಮಾನರು ಗಮನಹರಿಸುವರೇ ?
ಸರ್ವೋಪಕಾರಿಯಾದ ಗೋಮಾತೆ!
ಗೋವನ್ನು ಕೊಲ್ಲುವ ಅತ್ಯಂತ ಕ್ರೂರ ಹಾಗೂ ಬರ್ಬರ ವಿಧಾನ!
ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು!
ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ!
ವಿದೇಶೀಯರು ತುಂಬಾ ನಿಕೃಷ್ಟರು.....
ReplyDeleteಮನಸಲ್ಲಿ ಭಾವಗಳೇ ಹುಟ್ಟಲ್ಲ...