೧. ಕೃಷಿ ವಿಷಯದಲ್ಲಿ ಗೋತಳಿಯ ಉಪಯುಕ್ತತೆ
೧ಅ. ಭಾರತೀಯ ಗೋತಳಿಯನ್ನಾಧರಿಸಿದ ಸೆಗಣಿಗೊಬ್ಬರ, ಕಂಪೋಸ್ಟಗೊಬ್ಬರ ಅಥವಾ ಭೂಮಿಯ ಸಾಗುವಳಿ ಇವು ಗಳಿಂದಾಗಿ ಉತ್ಪನ್ನಗೊಂಡ ಬೆಳೆಯಲ್ಲಿ ೪೦೦ ಮಿಲಿಗ್ರಾಂನಷ್ಟು ಮೆಗ್ನೆಶಿಯಮ್ ತತ್ತ್ವ ದೊರಕಿ ಹೃದ್ರೋಗದ ಅಪಾಯವನ್ನು ತಪ್ಪಿಸಬಹುದು. ರಾಸಾಯನಿಕ ಗೊಬ್ಬರವನ್ನು ಬಳಸಿದ ಗದ್ದೆಯ ಆಹಾರಧಾನ್ಯದಿಂದಾಗಿ ಅಗತ್ಯವಿರುವ ಮೆಗ್ನೆಶಿಯಮ್ ತತ್ತ್ವವು ದೊರಕುವುದಿಲ್ಲ.
೧ಆ. ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಭೂಮಿಯಲ್ಲಿ ನೀರು ಇಂಗುವ ಕ್ಷಮತೆಯು ಶೇ.೧೬ಕ್ಕಿಂತ ಕಡಿಮೆ ಯಾಗುತ್ತದೆ. ಭೂಮಿಯ ಫಲವತ್ತತೆಯನ್ನು ಕಾಪಾಡುವ ಸೂಕ್ಷ್ಮಜೀವ ಮತ್ತು ಎರೆಹುಳ ಇವುಗಳ ಸಂಖ್ಯೆಯನ್ನು ಸುಸ್ಥಿತಿ ಯಲ್ಲಿಡುವ ‘ಹ್ಯೂಮಸ್’ ಹೆಸರಿನ ಪದಾರ್ಥವು ಕಡಿಮೆಯಾಗುತ್ತದೆ. ಸೆಗಣಿಗೊಬ್ಬರದಿಂದಾಗಿ ‘ಹ್ಯೂಮಸ್’ದ ಪ್ರಮಾಣವು ಸಮತೋಲನದಲ್ಲಿದ್ದು ಸೂಕ್ಷ್ಮ ಜೀವ, ಎರೆ ಹುಳಗಳು ನೆಲವನ್ನು ಸಚ್ಛಿದ್ರ ಮಾಡುತ್ತವೆ. ನೀರು ಇಂಗಿಸುವ ಕ್ಷಮತೆ ಶೇ.೧೬ರಷ್ಟು ಹೆಚ್ಚಿಸುತ್ತದೆ. ಫಲವತ್ತತೆಯನ್ನು ಕಾಪಾಡುತ್ತದೆ.
೧ಇ. ರಾಸಾಯನಿಕ ಕೀಟನಾಶಕಕ್ಕಿಂತ ದೇಶಿ ಗೋವಿನ ಶೇ.೯೦ರಷ್ಟು ಗೋಮೂತ್ರ ಮತ್ತು ಶೇ.೧೦ರಷ್ಟು ಸೆಗಣಿಯನ್ನು ಒಟ್ಟುಗೂಡಿಸಿ ಸಿಂಪಡಿಸಿದರೆ ಪೌಷ್ಟಿಕಾಂಶಯುಕ್ತ ಆಹಾರಧಾನ್ಯ, ತರಕಾರಿ ಮತ್ತು ಹಣ್ಣುಗಳು ಪ್ರಾಪ್ತವಾಗುತ್ತವೆ.
೨. ಭಾರತೀಯ ಗೋತಳಿಯ ವೈಶಿಷ್ಟ್ಯಗಳು
೨ಅ. ಭಾರತೀಯ ಗೋತಳಿಯು ‘ಬಾಸ ಇಂಡಿಕಸ್’ ಈ ವರ್ಗಕ್ಕೆ ಸೇರಿದೆ.
೧. ಭಾರತೀಯ ಗೋತಳಿಯ ಬೆನ್ನಿನ ಆರಂಭದಲ್ಲಿ ಡುಬ್ಬ ಇದೆ. ಅದರ ಹಿಂದೆ ಸೂರ್ಯಕೇತು ನಾಡಿ ಮತ್ತು ಕೊಂಬಿನಲ್ಲಿ ಆಕಾಶತತ್ತ್ವ ಇರುವುದರಿಂದ ಸೂರ್ಯನಿಂದ ಒಂದು ಶಕ್ತಿಸ್ರೋತ ಪ್ರಾಪ್ತವಾಗಿ ಅದು ಹಾಲಿನಲ್ಲಿ ‘ಕೆರೊಟಿನ’ ಸ್ವರೂಪದಲ್ಲಿ ಉಪಲಬ್ಧವಾಗುತ್ತದೆ. ಅದರಿಂದ ‘ವಿಟಾ ಮಿನ್ ಎ, ಈ ಮತ್ತು ಸುವರ್ಣಕ್ಷಾರ ಒeಟಔಒeಜ vPಟಒoಓ ಪ್ರಾಪ್ತವಾಗುತ್ತದೆ. ಪ್ರತಿಬಂಧಕಶಕ್ತಿ ಪ್ರಾಪ್ತವಾಗುತ್ತದೆ.
೨. ಭಾರತೀಯ ಗೋತಳಿಯ ಶರೀರ ದಲ್ಲಿ ಬೆವರುಗ್ರಂಥಿ ಹೆಚ್ಚಿರುತ್ತದೆ. ಒಂದು ಕ್ಯೂಬಿಕ್ ಮಿಲಿಮೀಟರ್ ಚರ್ಮದಲ್ಲಿ ೧೬೦೦ ರೋಮಕೂಪಗಳಿರುತ್ತವೆ. ಅಲ್ಲದೇ ಪೃಷ್ಠಭಾಗದಲ್ಲಿರುವ ಮಾಂಸಖಂಡಗಳು ಸ್ವಯಂಸ್ಫೂರ್ತಿಯಿಂದ ಆಕುಂಚನ ಮತ್ತು ಪ್ರಸರಣವಾಗುತ್ತದೆ, ಅದರಿಂದಾಗಿ ಉಷ್ಣತಾಪಮಾನದ ಸಮತೋಲನ ಕಾಯ್ದುಕೊಳ್ಳುವುದರಿಂದಾಗಿ ಭಾರತೀಯ ಗೋತಳಿಯು ಜಗತ್ತಿನಲ್ಲಿ ಎಲ್ಲಿಯೂ ಬದುಕಬಲ್ಲದು.
೩. ಭಾರತೀಯ ಗೋತಳಿಯ ಚರ್ಮವು ಸೂಕ್ಷ್ಮ ಕೂದಲುಳ್ಳದ್ದಾಗಿರುವುದರಿಂದ ಬಾಹ್ಯಕ್ರಿಮಿಗಳ ಪ್ರಭಾವವು ಅತ್ಯಂತ ಕಡಿಮೆಯಾಗುತ್ತದೆ.
೪. ಗೋಮೂತ್ರ ಸೇವನೆಯಿಂದ ತೀವ್ರ ಪ್ರತಿಬಂಧಕಶಕ್ತಿಯು ಪ್ರಾಪ್ತವಾಗುತ್ತದೆ. ಅದರಿಂದಾಗಿ ದುಬಾರಿ ಮತ್ತು ಘಾತಕ ಆಧುನಿಕ ಚಿಕಿತ್ಸಾ ಪದ್ಧತಿಯ ಆವಶ್ಯಕತೆ ಅನಿಸುವುದಿಲ್ಲ ಮತ್ತು ಪರಂಪರಾಗತ ಮನೆಯಲ್ಲಿನ ಚಿಕಿತ್ಸೆಯಿಂದ ಆರೋಗ್ಯವು ಒಳ್ಳೆಯದಾಗಿರುತ್ತದೆ.
೫. ದೇಶೀ ಆಕಳಿನ ಹಾಲಿನಲ್ಲಿ ಸೂಕ್ಷ್ಮ ತುಪ್ಪದ ಕಣಗಳು ೩.೭೦ ಮೈಕ್ರಾನ್‌ನಷ್ಟು ದಪ್ಪದ್ದಿರುವುದರಿಂದ ಮೆದುಳಿನ ಆವರಣದಿಂದ ಪ್ರವೇಶಿಸಬಹುದು ಹಾಗೂ ‘ಬೀಟಾ ಕೆಸಿನ್ ಎ ೨’, ‘ಒಮೆಗಾ ೩ ಮತ್ತು ೬’ ಈ ತತ್ತ್ವ ಇರುವುದರಿಂದ ಈ ಹಾಲು ಮತ್ತು ಕ್ಷೀರೋತ್ಪನ್ನದ ಪದಾರ್ಥವು ಆರೋಗ್ಯಕ್ಕೆ ಉಪಯುಕ್ತವಿದ್ದು ಅದರಿಂದಾಗಿ ಮಾನವನ ಆರೋಗ್ಯ ಉತ್ತಮವಾಗಿರುತ್ತದೆ.
‘ಮಿಶ್ರ ತಳಿಯ (ಸಂಕರಿತ) ಆಕಳಿನ’ ಹಾಲಿನಲ್ಲಿ ೪.೮೭ ಮೈಕ್ರಾನ್‌ನಷ್ಟು ದಪ್ಪದ ತುಪ್ಪದ ಕಣಗಳು ಇರುವುದರಿಂದ ಅದು ಮೆದುಳಿನ ಆವರಣದಿಂದ ಪ್ರವೇಶ ಮಾಡಲು ಅಸಾಧ್ಯವಿರುತ್ತದೆ ಹಾಗೂ ‘ಬೀಟಾ ಕೆಸಿನ್ ಎ ೧’ ಪ್ರೋಟಿನ್‌ಗಳು ಇರುತ್ತವೆ, ಆದರೆ ‘ಒಮೆಗಾ ೩ ಮತ್ತು ೬ ತತ್ತ್ವ’ ಇಲ್ಲದ್ದರಿಂದಾಗಿ ಕೀಲುನೋವು, ತಲೆನೋವು, ಹೃದ್ರೋಗ, ಮಧುಮೇಹ (ಸಕ್ಕರೆ ರೋಗ) ಕರ್ಕರೋಗ ಮತ್ತು ಮಸ್ತಕ ವಿಕಾರಗಳು ಆಗುತ್ತವೆ.
ದೇಶೀ ಗೋವಿನ ಹಾಲಿನಲ್ಲಿ ‘ಸ್ಯಾಲಿಬರ್ ಫಾಸ್ಫೆಟ್’ ಈ ತತ್ತ್ವವು ಸಮತೋಲನ ಪ್ರಮಾಣದಲ್ಲಿ ಅಂದರೆ ೧ ಮಿಲಿಲೀಟರದಲ್ಲಿ ೧೮ ಮೈಕ್ರೋಗ್ರಾಂನಷ್ಟು ಇರುವುದರಿಂದ ಅದು ಜೀರ್ಣವಾಗಲು ಸುಲಭವಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಮತ್ತು ಅನಾರೋಗ್ಯದ ವ್ಯಕ್ತಿಗೂ ಉಪಯುಕ್ತವಾಗಿದೆ. ದೇಶಿ ಗೋವುಗಳ ತುಪ್ಪದಿಂದ ಕೊಬ್ಬು ಹೆಚ್ಚಾಗುವುದಿಲ್ಲ.
೬. ಭಾರತೀಯ ಗೋವಂಶದ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟು ಅಮೇರಿಕಾವು ೧೮೩೫ ರಲ್ಲಿ ಇಂಗ್ಲೆಂಡಿನ ಮಾರ್ಗವಾಗಿ ಭಾರತದಿಂದ ‘ಅಂಗೋಲ’, ‘ಗೀರ’, ‘ಧಾರಪಾರಕರ’, ‘ಸಹಿವಾಲ’, ‘ಅಂಕೋಲಾ ವಾಟಸಿ’ ತಳಿಯ ಗೂಳಿಗಳನ್ನು ಕೊಂಡೊಯ್ದು ಗೋವಿನ ಒಂದು ಜಾತಿಯನ್ನು ತಯಾರಿಸಿತು. ಅದನ್ನು ‘ಬ್ರಾಹ್ಮಣ ಆಕಳು’ ಎನ್ನುತ್ತಾರೆ. ಅವು ಎಲ್ಲ ದೃಷ್ಟಿಯಿಂದ ಉಪಯುಕ್ತವಾಗಿದೆ.
ಕ್ಯೂಬಾ ದೇಶವು ‘ಸಹಿವಾಲ ಆಕಳು’ ಕೊಂಡೊಯ್ದು ಕೃಷಿ ಮತ್ತು ಆರ್ಥಿಕ ಪ್ರಗತಿಯನ್ನು ಮಾಡಿತು. ಇಂದು ಕ್ಯೂಬಾ ದೇಶವು ಜಗತ್ತಿನಲ್ಲಿ ಸಂಪೂರ್ಣ ಜೈವಿಕ ಕೃಷಿ ಮಾಡುತ್ತಿರುವ ಏಕೈಕ ದೇಶವಾಗಿದೆ. ಬ್ರೆಜಿಲ್ ೭ವರ್ಷಗಳ ಹಿಂದೆ ನಮ್ಮ ದೇಶದಿಂದ ಭಾರತೀಯ ‘ಗೂಳಿ’ಯನ್ನು ಕೊಂಡೊಯ್ದು ಬಹಳಷ್ಟು ಅಭಿವೃದ್ಧಿ ಮಾಡಿದೆ. ಇಂದು ಬ್ರಾಝಿಲ್‌ನ ಶೇ. ೯೦ರಷ್ಟು ಗೋಸಂಪತ್ತು ಭಾರತೀಯ ಗೋತಳಿಯನ್ನು ಆಧರಿಸಿದೆ.
‘ಸಹಿವಾಲ ಆಕಳು’ ಇದು ಭಾರತದಲ್ಲಿ ವಿನಾಶದ ಅಂಚಿನಲ್ಲಿದೆ; ಆದರೆ ಅನೇಕ ದೇಶಗಳು ಸಹೀವಾಲ ಆಕಳುಗಳನ್ನು ಕೊಂಡೊಯ್ದು ಅಭಿವೃದ್ಧಿ ಹೊಂದಿವೆ, ಅದರಿಂದ ಈ ಗೋವುಗಳಿಗೆ ‘ಭಾರತದ ರಾಜದೂತ’ ಎಂದು ಹೇಳುತ್ತಾರೆ.
No comments:
Post a Comment
Note: only a member of this blog may post a comment.