ಎಂಜಲನ್ನವನ್ನು ಏಕೆ ತಿನ್ನಬಾರದು?


ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು

೧. ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶದಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗಿರುತ್ತದೆ.
೨. ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇವಿಸುವ ವ್ಯಕ್ತಿಯ ವಾಸನೆಯು ಅನ್ನದ ಮೇಲೆ ಮೂಡಿರುತ್ತದೆ. ಆದುದರಿಂದ ಎಂಜಲನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣವೂ ಹೆಚ್ಚಿರುತ್ತದೆ, ಹಾಗೆಯೇ ಕೆಲವು ಕೆಟ್ಟ ಶಕ್ತಿಗಳು ಎಂಜಲನ್ನವನ್ನು ಸೂಕ್ಷ್ಮದಲ್ಲಿ ಗ್ರಹಿಸುತ್ತವೆ.
- ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೫.೧೧.೨೦೦೭, ರಾತ್ರಿ ೮.೨೫)

ಎಂಜಲನ್ನವನ್ನು ಏಕೆ ತಿನ್ನಬಾರದು, ಇದರ ಹಿಂದಿನ ಶಾಸ್ತ್ರ

೧. ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಮಾಘ ಕೃಷ್ಣ ದ್ವಾದಶಿ (೪.೩.೨೦೦೮) ಸಾಯಂಕಾಲ ೭.೧೫)

೨. ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ. ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ. - ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೨೦.೬.೨೦೦೭, ಸಾಯಂ.೭.೪೩)
(ಉನ್ನತರ ಅಥವಾ ಸಂತರ ಉಚ್ಛಿಷ್ಟವನ್ನು ಪ್ರಸಾದವೆಂದು ತಿಂದರೆ ತೊಂದರೆಯಾಗುವುದಿಲ್ಲ, ಅದರಿಂದ ಚೈತನ್ಯವೇ ಸಿಗುತ್ತದೆ. - ಸಂಕಲನಕಾರರು)

ಉಚ್ಛಿಷ್ಟ (ಎಂಜಲು) ಅನ್ನವನ್ನು ತಿನ್ನಬಾರದು

‘ಬಹುತೇಕ ರೋಗಗಳು ಕಲುಷಿತ ಆಹಾರ ಸೇವನೆಯಿಂದ ಆಗುತ್ತವೆ’ ಎಂದು ಆಧುನಿಕ ವೈದ್ಯಕೀಯಶಾಸ್ತ್ರವು ಹೇಳುತ್ತದೆ. ಆಧುನಿಕ ಪಾಶ್ಚಾತ್ಯ ವೈದ್ಯರು ‘ಉಚ್ಛಿಷ್ಟ ಅನ್ನದ ದೋಷ’ಗಳನ್ನು ಹೇಳುತ್ತಾರೆ; ಆದರೂ ಇಂದಿಗೂ ಉಪಾಹಾರಗೃಹಗಳಲ್ಲಿ ಈ ಎಂಜಲು ಅನ್ನವನ್ನು ಉಪಯೋಗಿಸುತ್ತಾರೆ. ಚಿತ್ರಮಂದಿರ, ವಿಹಾರಸಂಘ (ಕ್ಲಬ್) ಇತ್ಯಾದಿ ಮನರಂಜನೆಯ ಸ್ಥಳಗಳಲ್ಲಿ ತಟ್ಟೆಯಲ್ಲಿನ ಉಚ್ಛಿಷ್ಟ ಅನ್ನವನ್ನು ಜನರಿಗೆ ಕೊಡುತ್ತಾರೆ, ಇದು ಮಹಾಪಾಪವಾಗಿದೆ. ಇದನ್ನು ಯಾರೂ ವಿರೋಧಿಸುವುದಿಲ್ಲ.’ - ಗುರುದೇವ ಡಾ.ಕಾಟೇಸ್ವಾಮೀಜಿ

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳ ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
Dharma Granth

15 comments:

  1. Your articles are amazing. How do you collect so much information is impossible to imagine. Really appreciate your knowledge and efforts in bringing to every one.

    ReplyDelete
    Replies
    1. ನಮಸ್ಕಾರ ಮುರಳೀಧರರವರೇ, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಇಷ್ಟು ಜ್ಞಾನ ಮತ್ತು ಸಂಪೂರ್ಣವಾದ ಶಾಸ್ತ್ರಬದ್ಧ ಜ್ಞಾನವು ಹೇಗೆ ಸಿಗುತ್ತದೆ ಎಂಬುದರ ಬಗ್ಗೆ ಇದೇ ಬ್ಲಾಗ್‌ನ 'ಸನಾತನದ ಸಾಧಕರಿಗೆ ಜ್ಞಾನ ಸಿಗುವ ಪ್ರಕ್ರಿಯೆ' ಮತ್ತು 'ಆರನೆಯ ಇಂದ್ರಿಯ' ಎಂಬ ಎರಡು ಲೇಖನಗಳನ್ನು ಓದಿ. ಈ ಬ್ಲಾಗ್‌ನಲ್ಲಿ ನೀಡಿದಂತೆ ಧರ್ಮಾಚರಣೆ ಮಾಡಿ ಮತ್ತು ಇತರರಿಗೂ ತಿಳಿಸಿ.

      Delete
  2. Really Great..
    Sanathana dharma has strong scientific connection to our daily rituals.
    We all need to follow, encourage & pass it on to next generation

    Basavaraj Gavati

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಬಸವರಾಜುರವರೇ. ಈ ಬ್ಲಾಗ್‌ನಲ್ಲಿ ನೀಡಿದಂತೆ ಧರ್ಮಾಚರಣೆ ಮಾಡಿ ಮತ್ತು ಇತರರಿಗೂ ತಿಳಿಸಿ.

      Delete
  3. The information given here are very useful and are eye openers to the present generation. Pl continue this GOOD work . MAY GOD BLESS YOUR EFFORTS.

    V S Rangachar
    Bangalore

    ReplyDelete
    Replies
    1. ನಮಸ್ಕಾರ ರಂಗಾಚಾರ್‌ರವರೇ, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಧರ್ಮಾಚರಣೆ ಮಾಡಿ ಮತ್ತು ಇತರರಿಗೂ ಧರ್ಮದ ಶ್ರೇಷ್ಠತೆ ತಿಳಿಸಿ.

      Delete
    2. Good information about our sanathan drama.

      Delete
    3. Dharmagranth is just great.everyday everyone must read.
      Prasanna
      Kuwait.

      Delete
    4. @gkdini, @prasu747, ನಮಸ್ಕಾರ, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು

      Delete
  4. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಪ್ರತಿಯೊಬ್ಬ ಹಿಂದೂಗಳಿಗೆ ಧರ್ಮದ ಶ್ರೇಷ್ಠತೆ ತಿಳಿಸಿ ಮತ್ತು ಧರ್ಮಾಚರಣೆ ಮಾಡಬೇಕಾಗಿ ವಿನಂತಿಸುತ್ತೇವೆ.

    ReplyDelete
  5. Very useful infomation is published by your WEB pertains to each rituals, festivals and each day keep going. Thanks

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು.

      Delete
  6. It is vryy good information sir .....

    Jai hind......

    ReplyDelete
  7. It's best suggestions all people know these things thqs for dharmagrantha founder great THANKS from my family side

    ReplyDelete
  8. ಈ ಬ್ಲಾಗ್ ನನಗೆ ಪರಿಚಯಿಸಿದ ಮಿತ್ರ ರಾಜಸಿಂಹರಿಗೆ ದನ್ಯವಾದಗಳು. ಬಹಳ ಉಪಯೋಗಿಯಾದ ಬರಹಗಳು. ನಿಮ್ಮಂತಹವರ ಸಂಖ್ಯೆ ಸಾವಿರ ಸಾವಿರ ವಾಗಲಿ

    ReplyDelete

Note: only a member of this blog may post a comment.