ಶಾಲಾ-ಕಾಲೇಜುಗಳಲ್ಲಿ ನಡೆಯುವ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಘಟನೆಗಳನ್ನು ವಿರೋಧಿಸಿ!

ಹಿಂದೂಗಳೇ, ಈಗ ಅನೇಕ ಕಡೆ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾ ಕಾರಂಜಿ ಅಥವಾ ಸ್ಕೂಲ್‌ ಡೇ ಗಳಂತಹ ಕಾರ್ಯಕ್ರಮಗಳಲ್ಲಿ ಹಿಂದೂ ದೇವ ದೇವತೆಗಳನ್ನು ಮತ್ತು ಪುರಾಣಕಥೆಗಳನ್ನು, ಸಂತರನ್ನು, ರಾಷ್ಟ್ರಪುರುಷರನ್ನು ಅವಮಾನಿಸುವಂತಹ ನಾಟಕಗಳನ್ನು ಮಾಡಲಾಗುತ್ತದೆ. ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಘಟನೆಗಳು ನಡೆಯುತ್ತಿದ್ದರೆ, ಅದನ್ನು ಮೂಕರಾಗಿ ನೋಡದೇ, ಸಂಬಂಧಿತರಲ್ಲಿ ಕೂಡಲೇ ದೂರ ನೀಡಿ. ಶಾಲಾ ಕಾಲೇಜು ಸಿಬ್ಬಂದಿಗಳೂ ಕೇಳದಿದ್ದಲ್ಲಿ ಪೊಲೀಸರಲ್ಲಿಯೂ ತಕ್ಷಣ ದೂರು ನೀಡಿ. ನಿಮಗೆ ಕಾನೂನುರೀತ್ಯಾ ಹೋರಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು 2010ರಲ್ಲೇ ಹೊರಡಿಸಿದ ಸುತ್ತೋಲೆಯನ್ನೇ ಇಲ್ಲಿ ನೀಡುತ್ತಿದ್ದೇವೆ. ಇದನ್ನು ಮುದ್ರಿಸಿಟ್ಟುಕೊಳ್ಳಿ ಮತ್ತು ಅಗತ್ಯ ಬಂದಾಗ ಇದನ್ನು ತೋರಿಸಿ.

ಹಿಂದೂಗಳೇ, ಇಂತಹ ನಾಟಕಗಳನ್ನು, ಛದ್ಮವೇಶಸ್ಪರ್ಧೆಗಳನ್ನು ವಿರೋಧಿಸುತ್ತೀರಲ್ಲವೇ?


No comments:

Post a Comment

Note: only a member of this blog may post a comment.