ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?


ಅ. ಮತ್ಸ್ಯಪುರಾಣದಲ್ಲಿ ಶ್ರಾದ್ಧಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ಕೇಳಲಾಗಿದೆ, ಅದು ಹೀಗಿದೆ - ಬ್ರಾಹ್ಮಣರು ಸೇವಿಸಿದ ಅಥವಾ ಹೋಮಾಗ್ನಿಯಲ್ಲಿ ಸಮರ್ಪಿಸಿದ ಅನ್ನವು ಲಿಂಗದೇಹಗಳಿಗೆ ಹೇಗೆ ತಲುಪುತ್ತದೆ? ಏಕೆಂದರೆ ಮೃತ್ಯುವಿನ ನಂತರ ಆ ಆತ್ಮಗಳು ಪುನರ್ಜನ್ಮ ವನ್ನು ಪಡೆದುಕೊಂಡು ಇನ್ನೊಂದು ದೇಹದ ಆಶ್ರಯವನ್ನು ಪಡೆದುಕೊಂಡಿರುತ್ತವೆ. ಈ ಪ್ರಶ್ನೆಗೆ ಉತ್ತರವನ್ನೂ ಅಲ್ಲಿಯೇ ನೀಡಲಾಗಿದೆ. ಅದು ಹೀಗಿದೆ - ವಸು, ರುದ್ರ ಮತ್ತು ಆದಿತ್ಯ ಈ ಪಿತೃದೇವತೆಗಳ ಮೂಲಕ ಆ ಆಹಾರವು ಪಿತೃಗಳಿಗೆ ತಲುಪುತ್ತದೆ ಅಥವಾ ಆ ಅನ್ನವು ಬೇರೆ ರೂಪದಲ್ಲಿ ಅಂದರೆ ಅಮೃತ, ತೃಣ, ಭೋಗ, ಗಾಳಿ ಮುಂತಾದ ವಸ್ತುಗಳಲ್ಲಿ ರೂಪಾಂತರ ಗೊಂಡು ಆ ವಿಭಿನ್ನ ಯೋನಿಗಳಲ್ಲಿರುವ ಪಿತೃಗಳಿಗೆ ತಲುಪುತ್ತದೆ. - ಮತ್ಸ್ಯಪುರಾಣ, ಅಧ್ಯಾಯ ೧೯, ಶ್ಲೋಕ ೩ರಿಂದ ೯, ಅಧ್ಯಾಯ ೧೪೧, ಶ್ಲೋಕ ೭೪-೭೫

ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ಪಿತೃಗಳಿಗೆ ಹೇಗೆ ಸಿಗುತ್ತದೆ
‘ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ತೇಜತತ್ತ್ವದ ಸಹಾಯದಿಂದ ಸೂಕ್ಷ್ಮ-ವಾಯುವಿನ ರೂಪದಲ್ಲಿ ಪಿತೃಗಳ ಲಿಂಗದೇಹಗಳ ಬಾಹ್ಯಕೋಶವನ್ನು ಸ್ಪರ್ಶಿಸುತ್ತದೆ ಮತ್ತು ಅದರಲ್ಲಿನ ರಜ-ತಮಯುಕ್ತ ಕಣಗಳನ್ನು ವಿಘಟನೆ ಮಾಡುತ್ತದೆ. ಈ ಅರ್ಥದಲ್ಲಿ ಹೋಮಾಗ್ನಿಯಲ್ಲಿ ಅರ್ಪಿಸಿದ ಅನ್ನವು ಪಿತೃಗಳಿಗೆ ತಲುಪುತ್ತದೆ ಎಂದು ಹೇಳಲಾಗಿದೆ’. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೩.೮.೨೦೦೬, ಮಧ್ಯಾಹ್ನ ೨.೪೧)

ಬ್ರಾಹ್ಮಣನು ಊಟ ಮಾಡಿದ ಅನ್ನವು ಪಿತೃಗಳಿಗೆ ಹೇಗೆ ತಲುಪುತ್ತದೆ?

೧. ‘ಶ್ರಾದ್ಧಕರ್ಮಗಳಲ್ಲಿನ ಮಂತ್ರಗಳ ಪರಿಣಾಮದಿಂದ ಬ್ರಾಹ್ಮಣರ ಬ್ರಾಹ್ಮತೇಜವು ಜಾಗೃತವಾಗುತ್ತದೆ. ಪಿತೃಗಳನ್ನು ಆವಾಹನೆ ಮಾಡಿ ಅನ್ನೋದಕಗಳ ಮೇಲೆ ಮಂತ್ರಯುಕ್ತ ನೀರನ್ನು ಸಿಂಪಡಿಸುವುದರಿಂದ ಹವಿರ್ಭಾಗದಿಂದ (ಅನ್ನದಿಂದ) ಪ್ರಕ್ಷೇಪಿತವಾಗುವ ಸೂಕ್ಷ್ಮವಾಯುವು ವಿಶ್ವೇದೇವರ ಕೃಪೆಯಿಂದ ಪಿತೃಗಳಿಗೆ ಸಿಗುತ್ತದೆ.

೨. ಬ್ರಾಹ್ಮತೇಜ ಜಾಗೃತವಾದ ಬ್ರಾಹ್ಮಣನಿಗೆ ಪಿತೃಗಳ ಹೆಸರಿನಲ್ಲಿ ಭೋಜನವನ್ನು ಕೊಡುವುದರಿಂದ ಶ್ರಾದ್ಧಕರ್ತನಿಗೆ ಮತ್ತು ಪಿತೃಗಳಿಗೆ ಪುಣ್ಯವು ಪ್ರಾಪ್ತವಾಗುತ್ತದೆ. ಹೀಗೆ ಬ್ರಾಹ್ಮಣರ ಆಶೀರ್ವಾದದಿಂದಲೂ ಪಿತೃಗಳಿಗೆ ಗತಿ ಸಿಗಲು ಸಹಾಯವಾಗುತ್ತದೆ.

೩. ಪಿತೃಗಳ ಹೆಸರಿನಲ್ಲಿ ಬ್ರಾಹ್ಮಣರಿಗೆ ಭೋಜನವನ್ನು ಕೊಟ್ಟರೆ ನಮ್ಮ ಕರ್ತವ್ಯವು ಪೂರ್ಣವಾಯಿತು ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳದೇ, ಬ್ರಾಹ್ಮಣರ ಮಾಧ್ಯಮದಿಂದ ಪಿತೃಗಳೇ ಊಟವನ್ನು ಮಾಡುತ್ತಿದ್ದಾರೆ ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಊಟವನ್ನು ಮಾಡಿ ಸಂತೋಷಗೊಂಡ ಬ್ರಾಹ್ಮಣರಿಂದ ಪ್ರಕ್ಷೇಪಿತವಾಗುವ ಆಶೀರ್ವಾದಾತ್ಮಕ ಸಾತ್ತ್ವಿಕ ಲಹರಿಗಳ ಶಕ್ತಿಯು ಪಿತೃಗಳಿಗೆ ಪ್ರಾಪ್ತವಾಗುತ್ತದೆ. ಈ ಅರ್ಥದಲ್ಲಿ ‘ಬ್ರಾಹ್ಮಣರು ಊಟ ಮಾಡಿದ ಅನ್ನವು ಪಿತೃಗಳಿಗೆ ತಲುಪುತ್ತದೆ’ ಎಂದು ಹೇಳಲಾಗಿದೆ.

೪. ಕೆಲವೊಮ್ಮೆ ತೀವ್ರ ವಾಸನೆಯಿರುವ ಪಿತೃಗಳು ಬ್ರಾಹ್ಮಣರ ದೇಹದಲ್ಲಿ ಪ್ರವೇಶಿಸಿ ಅನ್ನವನ್ನು ಸ್ವೀಕರಿಸುತ್ತವೆ.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

No comments:

Post a Comment

Note: only a member of this blog may post a comment.