ಮಲಮೂತ್ರ ವಿಸರ್ಜನೆ ಮಾಡುವಾಗ ಜನಿವಾರವನ್ನು ಬಲಗಿವಿಯ ಮೇಲೆ ಏಕೆ ಇಡಬೇಕು?

೧. ನಮ್ಮ ಅಶುಚಿತ್ವ (ಅಸ್ವಚ್ಛತೆಯ) ಅವಸ್ಥೆಯನ್ನು ಶುಚಿತಗೊಳಿಸಲು (ಸ್ವಚ್ಛವಾಗಿಡಲು) ಈ ಕೃತಿಯು ಉಪಯೋಗಕ್ಕೆ ಬರುತ್ತದೆ. ಕೈ-ಕಾಲುಗಳನ್ನು ತೊಳೆದುಕೊಂಡು ಬಾಯಿ ಮುಕ್ಕಳಿಸಿದ ಮೇಲೆ ಜನಿವಾರವನ್ನು ಕಿವಿಯ ಮೇಲಿನಿಂದ ತೆಗೆಯಬೇಕು. ಇದರ ಹಿಂದಿನ ಶಾಸ್ತ್ರೀಯ ಕಾರಣವೇನೆಂದರೆ ಶರೀರದ ನಾಭಿಯ ಮೇಲಿನ ಭಾಗವು ಧಾರ್ಮಿಕ ಕಾರ್ಯಗಳಿಗೆ ಪವಿತ್ರ ಮತ್ತು ಅದರ ಕೆಳಗಿನ ಭಾಗವು ಅಪವಿತ್ರ ಎಂದು ತಿಳಿದುಕೊಳ್ಳಲಾಗಿದೆ.

೨. ಆದಿತ್ಯ, ವಸು, ರುದ್ರ, ಅಗ್ನಿ, ಧರ್ಮ, ವೇದ, ಆಪ, ಸೋಮ, ಅನಿಲ ಮುಂತಾದ ಎಲ್ಲ ದೇವತೆಗಳ ವಾಸ್ತವ್ಯವು ಬಲಕಿವಿಯಲ್ಲಿರುವುದರಿಂದ ಬಲಕಿವಿಗೆ ಬಲಗೈಯನ್ನು ಸ್ಪರ್ಶಿಸಿದರೆ ಆಚಮನದ ಫಲ ಸಿಗುತ್ತದೆ. ಇಂತಹ ಪವಿತ್ರವಾದ ಬಲಕಿವಿಯ ಮೇಲೆ ಯಜ್ಞೋಪವೀತವನ್ನು (ಜನಿವಾರವನ್ನು) ಇರಿಸಿದರೆ ಅಶುಚಿತ್ವವು ಬರುವುದಿಲ್ಲ.

೩. ಬಲಕಿವಿಯ ಮೇಲೆ ಜನಿವಾರವನ್ನು ಹಾಕಿಕೊಳ್ಳುವುದರಿಂದ ಜನಿವಾರದಲ್ಲಿರುವ ಬ್ರಾಹ್ಮತೇಜವು ಕಿವಿಯ ಟೊಳ್ಳಿಗೆ ಸ್ಪರ್ಶವಾಗುವುದರಿಂದ ಜೀವದ ಬಲನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಜೀವದ ಸುತ್ತಲೂ ಕಡಿಮೆ ಕಾಲಾವಧಿಯಲ್ಲಿ ತೇಜೋಮಯ ಲಹರಿಗಳ ಸಂರಕ್ಷಣಾತ್ಮಕ ವಾಯುಮಂಡಲವು ತಯಾರಾಗುತ್ತದೆ. ಮೂತ್ರ ಮತ್ತು ಶೌಚದಂತಹ ರಜ-ತಮಾತ್ಮಕ ಕರ್ಮಗಳನ್ನು ಮಾಡುವಾಗ ಕಡಿಮೆ ಕಾಲಾವಧಿಯಲ್ಲಿ ಸಂರಕ್ಷಣಾತ್ಮಕ ಕಾರ್ಯವನ್ನು ಮಾಡುವ ಸೂರ್ಯನಾಡಿಯನ್ನು ಜಾಗೃತಗೊಳಿಸಲು ಜನಿವಾರವನ್ನು ಬಲಕಿವಿಯ ಮೇಲೆ ಹಾಕಿಕೊಳ್ಳುತ್ತಾರೆ.

೪. ಜನಿವಾರವು ಸೊಂಟವನ್ನು ಸ್ಪರ್ಶಿಸುತ್ತಿರುತ್ತದೆ. ಮೂತ್ರ ಮತ್ತು ಶೌಚವಿಧಿಯಂತಹ ಪ್ರಕ್ರಿಯೆಗಳಲ್ಲಿ ದೇಹದಲ್ಲಾಗುವ ರಜ-ತಮಾತ್ಮಕ ಲಹರಿಗಳ ರೂಪಾಂತರಾತ್ಮಕ ಬದಲಾವಣೆಯಿಂದಾಗಿ ಸೊಂಟದ ಸುತ್ತಲಿನ ಭಾಗವು ಅಶುದ್ಧವಾಗುತ್ತದೆ. ಜನಿವಾರವು ಈ ಸೊಂಟದ ಸುತ್ತಲಿನ ಅಶುದ್ಧ ಭಾಗವನ್ನು ಸ್ಪರ್ಶಿಸಿದರೆ ಅದರ ಪಾವಿತ್ರ್ಯವು ಕಡಿಮೆಯಾಗುತ್ತದೆ. ಹೀಗಾಗಬಾರದೆಂದು ಮೂತ್ರ ಮತ್ತು ಶೌಚಾದಿ ವಿಧಿಗಳ ಸಮಯದಲ್ಲಿ ಜನಿವಾರವನ್ನು ಬಲಕಿವಿಯ ಮೇಲೆ ಹಾಕುವ ಆಚಾರವಿದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೧೨.೨೦೦೭, ಮಧ್ಯಾಹ್ನ ೨.೧೯)

 (ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)

ಅ. ‘ನಿವೀತೀ ದಕ್ಷಿಣೇ ಕರ್ಣೇ ಯಜ್ಞೋಪವೀತಂ ಕೃತ್ವಾ ಉತ್ಕಟಕಮಾಸೀನಃ ಅಹನಿ ಉದಂಮುಖಃ ರಾತ್ರೌ ದಕ್ಷಿಣಮುಖಃ ತೃಣೈರಂತಿರಿತೇ ಮೂತ್ರಪುರೀಷೆ ವಿಸೃಜೇತ್| - ವೈಖಾನಸಧರ್ಮಸೂತ್ರ, ಖಂಡ ೧೬, ಅಂಶ ೧೦
ಅರ್ಥ: ಜನಿವಾರವನ್ನು ಮಾಲೆಯಂತೆ ಮಾಡಿ ಬಲಕಿವಿಯ ಮೇಲಿಟ್ಟು, ಕುಕ್ಕರುಗಾಲಿನಲ್ಲಿ ಕುಳಿತು ಹಗಲು ಹೊತ್ತಿನಲ್ಲಿ ಉತ್ತರದ ಕಡೆಗೆ ಮತ್ತು ರಾತ್ರಿ ದಕ್ಷಿಣದ ಕಡೆಗೆ ಮುಖ ಮಾಡಿ ಹುಲ್ಲಿನಿಂದ ಮುಚ್ಚಿದ ನೆಲದ ಮೇಲೆ ಮಲಮೂತ್ರ ವಿಸರ್ಜನೆ ಮಾಡಬೇಕು.

ಜನಿವಾರವು ಪವಿತ್ರವಾಗಿರುತ್ತದೆ. ಮಲಮೂತ್ರವನ್ನು ವಿಸರ್ಜಿಸುವಾಗ ನಾವು ಅಶುದ್ಧ ಅವಸ್ಥೆಯಲ್ಲಿರುತ್ತೇವೆ. ಬ್ರಾಹ್ಮಣರ ಬಲಕಿವಿಯಲ್ಲಿ ಅಗ್ನಿ, ಆಪ, ವರುಣ, ಸೂರ್ಯ, ವಾಯು, ಇಂದ್ರ ಮತ್ತು ಚಂದ್ರ ಈ ಏಳು ದೇವತೆಗಳು ನಿತ್ಯವೂ ವಾಸವಾಗಿರುತ್ತಾರೆ. ಇದರಿಂದ ಆ ಸ್ಥಳದಲ್ಲಿ ಜನಿವಾರವನ್ನು ಇಡಬೇಕು. ಹಾಗೆ ಮಾಡಲು ಮರೆತರೆ ಬೇರೆ ಜನಿವಾರವನ್ನು ಹಾಕಿಕೊಳ್ಳಬೇಕು. ಜನಿವಾರವನ್ನು ಮಾಲೆಯಂತೆ ಮಾಡಿ ಬಲಕಿವಿಯ ಹತ್ತಿರ ಇಟ್ಟು ಮಲಮೂತ್ರ ವಿಸರ್ಜನೆ ಮಾಡಬೇಕು.

ಆ. ಊರ್ಧ್ವಂ ನಾಭೇರ್ಮೇಧ್ಯತರಃ ಪುರುಷಃ ಪರಿಕೀರ್ತಿತಃ|
                        - ಮನುಸ್ಮೃತಿ, ಅಧ್ಯಾಯ ೧, ಶ್ಲೋಕ ೯೨
ಅರ್ಥ: ಪುರುಷನ ನಾಭಿಯ ಮೇಲಿನ ದೇಹದ ಭಾಗವು ಹೆಚ್ಚು ಪವಿತ್ರವಾಗಿರುತ್ತದೆ.

ನಾಭಿಯ ಕೆಳಗಿನ ಭಾಗವನ್ನು ಅಪವಿತ್ರವೆಂದು ಪರಿಗಣಿಸಲಾಗಿರುವುದರಿಂದ ಮೂತ್ರವನ್ನು ಮತ್ತು ಪುರೀಷವನ್ನು (ಶೌಚವನ್ನು) ವಿಸರ್ಜಿಸುವಾಗ ಜನಿವಾರವನ್ನು ನಿವೀತವನ್ನಾಗಿಸಿ (ಎರಡೂ ಹೆಗಲಿನಿಂದ ಕೊರಳಿನಲ್ಲಿ ಮಾಲೆಯಂತೆ) ಬಲಗಿವಿಯ ಮೇಲೆ ಇಡಬೇಕು. ಬಲಗಿವಿಯ ಮಹತ್ವವನ್ನು ಶಾಸ್ತ್ರದಲ್ಲಿ ಬಹಳಷ್ಟು ಕಡೆಗಳಲ್ಲಿ ಹೇಳಲಾಗಿದ್ದು ಆದಿತ್ಯ, ವಸು, ರುದ್ರ, ವಾಯು, ಅಗ್ನಿ, ಧರ್ಮ, ವೇದ, ಆಪ, ಸೋಮ, ಸೂರ್ಯ, ಅನಿಲ ಮುಂತಾದ ಎಲ್ಲ ದೇವತೆಗಳು ಬಲಗಿವಿಯಲ್ಲಿ ವಾಸವಿರುವುದರಿಂದ ಬಲಗಿವಿಯನ್ನು ಕೇವಲ ಸ್ಪರ್ಶಿಸುವುದರಿಂದಲೇ ಆಚಮನದ ಫಲವು ಲಭಿಸುತ್ತದೆ. ಇಂತಹ ಪವಿತ್ರ ಬಲಗಿವಿಯ ಮೇಲೆ ಜನಿವಾರವನ್ನು ಇಡುವುದರಿಂದ ಅದಕ್ಕೆ ಅಶುಚಿತ್ವವು ತಗಲುವುದಿಲ್ಲ.

ಬಲಗಿವಿಗೆ ಇಷ್ಟೊಂದು ಮಹತ್ವ ಬರಲು ವೈಜ್ಞಾನಿಕ ಕಾರಣವೆಂದರೆ ಬಲಗಡೆಯ ಕಿವಿಯಲ್ಲಿನ ನರ ಹಾಗೂ ಗುಪ್ತೇಂದ್ರಿಯ ಮತ್ತು ಅಂಡಕೋಶ ಇವುಗಳ ನಡುವೆ ಅನ್ಯೋನ್ಯ ಸಂಬಂಧವಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಸೂಕ್ಷ್ಮವೀರ್ಯಸ್ರಾವವಾಗುವ ಸಾಧ್ಯತೆಯಿರುತ್ತದೆ. ಬಲಗಿವಿಗೆ ದಾರವನ್ನು ಸುತ್ತುವುದರಿಂದ ವೀರ್ಯನಾಶವನ್ನು ತಪ್ಪಿಸಬಹುದೆಂದು ಆಯುರ್ವೇದ ಶಾಸ್ತ್ರದಲ್ಲಿ ಸಿದ್ಧಪಡಿಸಲಾಗಿದೆ. ಸ್ವಪ್ನದಲ್ಲಿ ಆಗಾಗ ವೀರ್ಯಪತನ ಆಗುತ್ತಿದ್ದಲ್ಲಿ ಬಲಗಿವಿಯನ್ನು ಕಟ್ಟಿ ಮಲಗಿದರೆ ಆ ದೋಷವು ನಿವಾರಣೆಯಾಗುತ್ತದೆ ಎನ್ನುವುದು ಕಂಡು ಬಂದಿದೆ. ಯಾವುದೇ ಪ್ರಾಣಿಯ ಕಿವಿಯನ್ನು ಹಿಡಿದು, ಅದರ ಮದವನ್ನು (ಸೊಕ್ಕನ್ನು) ಕಡಿಮೆ ಮಾಡಬಹುದು ಎಂಬುದು ಕಂಡು ಬರುತ್ತದೆ. ಅಂಡವೃದ್ಧಿಗೆ ಏಳು ಕಾರಣಗಳಿದ್ದು, ಮೂತ್ರಜ ಅಂಡವೃದ್ಧಿ ಇವುಗಳಲ್ಲಿ ಒಂದಾಗಿದೆ. ಕಿವಿಗೆ ದಾರವನ್ನು ಕಟ್ಟಿದರೆ ಮೂತ್ರಜ ಅಂಡವೃದ್ಧಿ ಆಗುವುದಿಲ್ಲ.’

(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಹದಿನಾರು ಸಂಸ್ಕಾರಗಳು")

ಟಿಪ್ಪಣಿ : ವೈಜ್ಞಾನಿಕ ಕಾರಣಗಳು ಕೇವಲ ಶಾರೀರಿಕ ಸ್ತರದಲ್ಲಿ ಮತ್ತು ಕೆಲವು ಪ್ರಮಾಣದಲ್ಲಿ ಮಾನಸಿಕ ಸ್ತರದಲ್ಲಿ ಆಗುವ ಲಾಭಗಳನ್ನು ಮಾತ್ರ ತಿಳಿಸುತ್ತವೆ.

ಸಂಬಂಧಿತ ವಿಷಯಗಳು
ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
Dharma Granth

7 comments:

  1. From many days I was wondering why Brahmins used to follow this kind of custom?
    Today You cleared my doubts.
    Very useful information..!!

    Thanks,
    Ramesh

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಮ್ಮ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಸಿ.

      Delete
  2. Please also write these posts in English
    Other state People will be beneficial

    ReplyDelete
    Replies
    1. thank you for your opinion. most of the matters in this blog are in english, hindi and marathi in other websites/facebooks. this blog is for those who dont know other languages. so please visit below sites for english and marathi.
      http://www.spiritualresearchfoundation.org/
      http://www.forumforhinduawakening.org/
      http://www.sanatan.org/

      Delete
  3. SIR WE ARE VERY THANK FULL TO YOU ARE GIVING SUCH DETAIL. BUT MY HUMBLE REQUEST THAT PLEASE PUBLISH THE DETAILS IN NORMAL KANNADA. YOU ARE USING SOME TYPICAL KANNADA PLEASE USE SIMPLY KANNADA WORDS SOME KANNADA WE ARE NOT ABLE UNDERSTAND AND FOR WE KANNADA EASY FOR US.

    ReplyDelete
  4. ಬಹಳ ಚೆನ್ನಾಗಿದೆ. ಇದರೊಂದಿಗೆ ಮತ್ತಷ್ಟು ಸೇರಿಸಬಹುದು.
    ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ /
    ವಿಪ್ರಸ್ಯ ದಕ್ಷಿಣೆ ಕರ್ಣೇ ಸಂತೀತಿ ಮನುರಬ್ರವೀತ್ // ಪರಾಶರ ಸ್ಮೃತಿ .
    ಬ್ರಾಹ್ಮಣರ ಬಲ ಕಿವಿಯಲ್ಲಿ ಪುಷ್ಕರ ಗಂಗಾ ಮೊದಲಾದ ಎಲ್ಲ ತೀರ್ಥಾಭಿಮಾನಿ ದೇವತೆಗಳು.ಇದ್ದಾರೆ ಎಂದು ಮನು ಹೇಳ್ತಾನೆ ಅಂತ ಪರಾಶರ ಸ್ಮೃತಿ ಯಲ್ಲಿ ಇದೆ. ಇಷ್ಟೇ ಅಲ್ಲದೇ ಮುಖ್ಯವಾಗಿ ಗಂಗಾ ಜನಕನಾದ ತ್ರಿವಿಕ್ರಮನೆ ಅಲ್ಲಿ ಇದ್ದು ನಮ್ಮನ್ನು ಪವಿತ್ರೀಕರಿಸುತ್ತಾನೆ.

    ReplyDelete

Note: only a member of this blog may post a comment.