ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?

ಅ. ಮೃತದೇಹದಿಂದ ಹೊರಸೂಸುವ ನಿರುಪಯುಕ್ತ ಲಹರಿಗಳ ಸೆಳೆತವು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ಇರುವುದು: ‘ದಕ್ಷಿಣವು ಯಮದಿಶೆಯಾಗಿದೆ. ವ್ಯಕ್ತಿಯ ಪ್ರಾಣವು ಹೊರಗೆ ಹೋಗುವಾಗ ಅದು ಯಮದಿಶೆಯ ಕಡೆ ಸೆಳೆಯಲ್ಪಡು ತ್ತಿರುತ್ತದೆ. ದೇಹದಿಂದ ಪ್ರಾಣವು ಹೊರಗೆ ಹೋದ ಕೂಡಲೇ ದೇಹದಿಂದ ಇತರ ನಿರುಪಯುಕ್ತ ವಾಯುಗಳ ಉತ್ಸರ್ಗವು (ವಿಸರ್ಜನೆಯು) ಪ್ರಾರಂಭವಾಗುತ್ತದೆ. ಈ ವಿಸರ್ಜನೆಯ ಲಹರಿಗಳ ವೇಗ, ಹಾಗೆಯೇ ಅವುಗಳ ಸೆಳೆತವೂ ದಕ್ಷಿಣ ದಿಕ್ಕಿನೆಡೆಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

ಆ. ದೇಹದಿಂದಾಗುವ ನಿರುಪಯುಕ್ತ ವಾಯುವಿನ ಉತ್ಸರ್ಗವು ಹೆಚ್ಚು ಪ್ರಮಾಣದಲ್ಲಾಗಲು ಈ ಕಾರ್ಯಕ್ಕೆ ಪೂರಕವಾಗಿರುವ ದಿಶೆಯೆಡೆಗೆ, ಅಂದರೆ ದಕ್ಷಿಣ ದಿಕ್ಕಿನೆಡೆಗೆ ಮೃತವ್ಯಕ್ತಿಯ ಕಾಲುಗಳನ್ನು ಮಾಡಲಾಗುತ್ತದೆ: ವ್ಯಕ್ತಿಯ ಸೊಂಟದ ಕೆಳಗಿನ ಭಾಗದಿಂದ ಹೆಚ್ಚು ಪ್ರಮಾಣದಲ್ಲಿ ವಾಸನಾತ್ಮಕ ಲಹರಿಗಳ ವಿಸರ್ಜನೆಯಾಗುತ್ತಿರುತ್ತದೆ, ಅದು ಉತ್ತಮ ರೀತಿಯಲ್ಲಿ ಆಗಬೇಕೆಂದು ಯಮಲಹರಿಗಳ ವಾಸ್ತವ್ಯವಿರುವ ದಕ್ಷಿಣ ದಿಕ್ಕಿನೆಡೆಗೆ ಆ ವ್ಯಕ್ತಿಯ ಕಾಲುಗಳನ್ನು ಮಾಡಿಡುವ ಶಾಸ್ತ್ರವಿದೆ. ಹೀಗೆ ಮಾಡುವುದರಿಂದ ಯಮಲಹರಿಗಳ ಸಹಾಯ ದೊರಕಿ ವ್ಯಕ್ತಿಯ ದೇಹದಿಂದ ಅವನ ಕಾಲುಗಳ ದಿಕ್ಕಿನಲ್ಲಿ, ಅಧೋಗತಿಯಿಂದ ಹೆಚ್ಚೆಚ್ಚು ನಿರುಪಯುಕ್ತ ಲಹರಿಗಳು ಸೆಳೆಯಲ್ಪಟ್ಟು ಈ ವಾಯುಗಳು ಯೋಗ್ಯ ರೀತಿಯಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ವಿಸರ್ಜನೆ ಯಾಗುವುದರಿಂದ ದೇಹವು ಚಿತೆಯನ್ನೇರುವ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗುತ್ತದೆ. ಈ ದಿಕ್ಕು ಹೆಚ್ಚಿನ ಸ್ತರದಲ್ಲಿ ದೇಹದಿಂದ ಹೊರದಿಕ್ಕಿಗೆ ವಿಸರ್ಜಿತವಾಗುವ ನಿರುಪಯುಕ್ತ ವಾಯುಗಳ ಪ್ರಕ್ಷೇಪಣೆಗೆ ಪೂರಕವಾಗಿರುತ್ತದೆ.

ಇ. ಯಮ (ದಕ್ಷಿಣ) ದಿಕ್ಕಿನಲ್ಲಿ ಯಮದೇವತೆಯ ವಾಸ್ತವ್ಯವಿರುವುದರಿಂದ ಅವನ ಸಾನ್ನಿಧ್ಯದಲ್ಲಿ ದೇಹದಿಂದ ಹೊರಸೂಸುವ ನಿರುಪಯುಕ್ತ ವಾಯುಗಳು ವಾತಾವರಣದಲ್ಲಿ ವಿಲೀನವಾಗುವ ಪ್ರಕ್ರಿಯೆಯನ್ನು ದೋಷರಹಿತವಾಗಿ ಮಾಡಲು ಪ್ರಯತ್ನಿಸಲಾಗುತ್ತದೆ: ಯಮ (ದಕ್ಷಿಣ) ದಿಕ್ಕಿನಲ್ಲಿ ಯಮ ದೇವತೆಯ ಅಸ್ತಿತ್ವವಿರುವುದರಿಂದ ಅವನ ಸಾನ್ನಿಧ್ಯದಲ್ಲಿ ದೇಹದಿಂದ ಪ್ರಕ್ಷೇಪಿಸುವ ನಿರುಪಯುಕ್ತ ವಾಯುಗಳ ಉತ್ಸರ್ಗದಲ್ಲಿನ ವಿಲೀನೀಕರಣಾತ್ಮಕ ಪ್ರಕ್ರಿಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ದೋಷವಿರಹಿತವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತದೆ, ಇಲ್ಲದಿದ್ದರೆ ನಿರುಪಯುಕ್ತ ವಾಯುವಿನ ವಿಸರ್ಜನೆಗೆ ಆಯಾ ದಿಕ್ಕನ್ನು ಪೂರಕವಾಗಿಡದಿದ್ದರೆ, ಈ ಲಹರಿಗಳು ಹೆಚ್ಚು ಸಮಯ ಮನೆಯಲ್ಲಿ ಘನೀಕರಣವಾಗುವ ಸಾಧ್ಯತೆಯಿರುತ್ತದೆ; ಆದ್ದರಿಂದ ಯಮದಿಶೆಯ ಕಡೆಗೆ ಈ ನಿರುಪಯುಕ್ತ ಲಹರಿಗಳು ಪ್ರವಹಿಸಲು ಮೃತವ್ಯಕ್ತಿಯ ಕಾಲುಗಳನ್ನು ಅವನು ಮನೆಯಲ್ಲಿರುವಾಗ ದಕ್ಷಿಣ ದಿಕ್ಕಿನೆಡೆಗೆ ಮಾಡಿಡುವ ಪದ್ಧತಿಯಿದೆ.’
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಭಾದ್ರಪದ ಕೃಷ್ಣ ಪಂಚಮಿ, ಕಲಿಯುಗ ವರ್ಷ ೫೧೧೨ (೨೮.೯.೨೦೧೦), ಸಾಯಂ.೫.೫೬)

ಮೃತದೇಹವು ಮನೆಯಲ್ಲಿರುವಾಗ ಮೃತನ ಕಾಲುಗಳನ್ನು ದಕ್ಷಿಣಕ್ಕೆ ಮಾಡುವ ಹಿಂದಿನ ಶಾಸ್ತ್ರವು ತಿಳಿದಿಲ್ಲದಿರುವುದರಿಂದ ಸದ್ಯ ಕೆಲವು ಕಡೆಗಳಲ್ಲಿ ಮೃತದೇಹವು ಮನೆಯಲ್ಲಿರುವಾಗ ಮೃತನ ಕಾಲುಗಳನ್ನು ಉತ್ತರಕ್ಕೆ ಮಾಡಿಡುವ ಅಯೋಗ್ಯ ಕೃತಿಯನ್ನು ಮಾಡಲಾಗುತ್ತದೆ.
ಮೃತದೇಹವನ್ನು ಸ್ಮಶಾನಕ್ಕೆ ಒಯ್ದ ಮೇಲೆ ಮೃತದೇಹವನ್ನು ಚಿತೆಯ ಮೇಲಿಡುವಾಗ ಮಾತ್ರ ಮೃತನ ಕಾಲುಗಳನ್ನು ಉತ್ತರ ದಿಕ್ಕಿನೆಡೆಗೆ ಮಾಡುವುದು ಆವಶ್ಯಕವಾಗಿದೆ.

(ಮೇಲಿನ ವಿಷಯದೊಂದಿಗೆ ಇನ್ನೂ ಅನೇಕ ಸೂಕ್ಷ್ಮ ಸ್ತರದ ವಿಷಯಗಳು ಗ್ರಂಥದಲ್ಲಿವೆ.) 

(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಮೃತ್ಯು ಮತ್ತು ಮೃತ್ಯುವಿನ ನಂತರದ ಕ್ರಿಯಾಕರ್ಮಗಳು")

ಸಂಬಂಧಿತ ವಿಷಯಗಳು
Dharma Granth

1 comment:

Note: only a member of this blog may post a comment.