ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?

ಪ್ರಾಣ ಹೋಗುವಾಗ ಬಹಳಷ್ಟು ಸಲ ವ್ಯಕ್ತಿಯ ಬಾಯಿಯು ತೆರೆದಿರುತ್ತದೆ ಮತ್ತು ಅದರಿಂದ ಶರೀರದಲ್ಲಿರುವ ನಿರುಪಯುಕ್ತ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುತ್ತವೆ. ಬಾಯಿಯಲ್ಲಿ ಗಂಗಾಜಲವನ್ನು ಹಾಕಿ ತುಳಸಿಯ ಎಲೆಯನ್ನು ಇಡುವುದರಿಂದ ಅದರ ಕಡೆಗೆ ಆಕರ್ಷಿಸುವ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳ ಸಹಾಯದಿಂದ ಬಾಯಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವ ಅಶುದ್ಧ ಲಹರಿಗಳ ವಿಘಟನೆಯಾಗಿ ವಾಯುಮಂಡಲವನ್ನು ಸತತವಾಗಿ ಶುದ್ಧವಾಗಿಡಲಾಗುತ್ತದೆ. ಅದೇರೀತಿ ಗಂಗಾಜಲ ಮತ್ತು ತುಳಸಿ ಎಲೆಗಳಿಂದಾಗಿ ಮೃತದೇಹದ ಅಂತರ್‌ಕೋಶಗಳು ಶುದ್ಧವಾಗಿ ಬಾಯಿಯಿಂದ ಒಳಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ಕೆಟ್ಟ ಶಕ್ತಿಗಳಿಗೆ ಅಡ್ಡಿಯುಂಟಾಗುತ್ತದೆ.


ಮೃತದೇಹದ ಮೂಗು ಮತ್ತು ಕಿವಿಗಳಲ್ಲಿ ತುಳಸಿ ಎಲೆಗಳ ಗೊಂಚಲನ್ನು ಏಕೆ ಇಡುತ್ತಾರೆ?
ಮೃತದೇಹದ ಮೂಗು ಮತ್ತು ಕಿವಿಗಳಲ್ಲಿ ಹತ್ತಿಯನ್ನು ಇಡುವುದರ ಬದಲು, ತುಳಸಿ ಎಲೆಗಳ ಗೊಂಚಲನ್ನು ಇಡಬೇಕು. ತುಳಸಿದಳವು ಮೂಗು ಮತ್ತು ಕಿವಿಗಳಿಂದ ಸೂಕ್ಷ್ಮ ನಿರುಪಯುಕ್ತ ವಾಯುವನ್ನು ವಾತಾವರಣದಲ್ಲಿ ಹರಡದಂತೆ ತಡೆಯುತ್ತದೆ ಮತ್ತು ವಾತಾವರಣದ ಶುದ್ಧಿಯನ್ನೂ ಮಾಡುತ್ತದೆ.
- ಶ್ರೀ ಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೫.೬.೨೦೦೫, ಮಧ್ಯಾಹ್ನ ೩.೨೯)

(ಮೇಲಿನ ವಿಷಯದೊಂದಿಗೆ ಇನ್ನೂ ಅನೇಕ ಸೂಕ್ಷ್ಮ ಸ್ತರದ ವಿಷಯಗಳು ಗ್ರಂಥದಲ್ಲಿವೆ.) 

(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಮೃತ್ಯು ಮತ್ತು ಮೃತ್ಯುವಿನ ನಂತರದ ಕ್ರಿಯಾಕರ್ಮಗಳು")

ಸಂಬಂಧಿತ ವಿಷಯಗಳು
Dharma Granth

1 comment:

  1. ನಿಮ್ಮ ಸಲಹೆಗೆ ಧನ್ಯವಾದಗಳು. ನಿಮ್ಮ ಥರ್ಮಗ್ರಂಥ ಫೇಸಬುಕ್ನಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.

    ReplyDelete

Note: only a member of this blog may post a comment.