ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು

೧. ಶಾಸ್ತ್ರ : ಈ ವಿಧಿಗಳನ್ನು ನಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ವಾರ್ಷಿಕ ಉತ್ಪನ್ನದ ಹತ್ತನೆಯ (೧/೧೦) ಒಂದಂಶ ಭಾಗವನ್ನು ಖರ್ಚು ಮಾಡಬೇಕು ಎಂದು ಶಾಸ್ತ್ರವು ಹೇಳುತ್ತದೆ. ನಮ್ಮ ಶಕ್ತಿಗನುಸಾರ ಖರ್ಚು ಮಾಡಿದರೂ ಆಗುತ್ತದೆ.

೨. ಈ ವಿಧಿಗಳನ್ನು ಯಾರು ಮಾಡಬಹುದು?
ಅ. ಇವು ಕಾಮ್ಯವಿಧಿಗಳಾಗಿವೆ. ಇವುಗಳನ್ನು ಯಾರು ಬೇಕಾದರೂ ಮಾಡಬಹುದು. ಯಾರ ತಂದೆ-ತಾಯಿ ಜೀವಂತವಾಗಿದ್ದಾರೆಯೋ, ಅವರೂ ಸಹ ಈ ವಿಧಿಗಳನ್ನು ಮಾಡಬಹುದು.
ಆ. ಅವಿವಾಹಿತರೂ ಸಹ ಒಬ್ಬರೇ ಈ ವಿಧಿಗಳನ್ನು ಮಾಡಬಹುದು. ವಿವಾಹಿತರಾಗಿದ್ದಲ್ಲಿ ಪತಿ-ಪತ್ನಿ ಇಬ್ಬರೂ ಕುಳಿತುಕೊಂಡು ಈ ವಿಧಿಗಳನ್ನು ಮಾಡಬೇಕು.

೩. ನಿಷೇಧ
ಅ. ಸ್ತ್ರೀಯರು ಮಾಸಿಕ ಸರದಿಯ ಸಮಯದಲ್ಲಿ ಈ ವಿಧಿಗಳನ್ನು ಮಾಡಬಾರದು.
ಆ. ಸ್ತ್ರೀಯು ಗರ್ಭವತಿಯಾಗಿದ್ದಲ್ಲಿ ೫ ತಿಂಗಳು ಆದ ನಂತರ ಈ ವಿಧಿಗಳನ್ನು ಮಾಡಬಾರದು.
ಇ. ಮನೆಯಲ್ಲಿ ಶುಭಕಾರ್ಯ ಅಂದರೆ ಮದುವೆ, ಉಪನಯನ ಮುಂತಾದವುಗಳು ಆಗಿದ್ದಲ್ಲಿ  ಅಥವಾ ಮನೆಯಲ್ಲಿ ಯಾರಾದರೊಬ್ಬ ವ್ಯಕ್ತಿಯು ಮೃತನಾಗಿದ್ದಲ್ಲಿ ಈ ವಿಧಿಗಳನ್ನು ಒಂದು ವರ್ಷದವರೆಗೆ ಮಾಡಬಾರದು.

೪. ಪದ್ಧತಿ : ವಿಧಿಗಳನ್ನು ಮಾಡಲು ಪುರುಷರಿಗೆ ಧೋತರ, ಉಪವಸ್ತ್ರ, ಬನಿಯನ್ ಮತ್ತು ಮಹಿಳೆಯರಿಗೆ ಸೀರೆ, ರವಿಕೆ ಮತ್ತು ಲಂಗ ಮುಂತಾದ ಹೊಸ ಬಟ್ಟೆಗಳು (ಕಪ್ಪು ಮತ್ತು ಹಸಿರು ಬಣ್ಣ ಇರಬಾರದು) ಬೇಕಾಗುತ್ತವೆ. ಈ ಹೊಸ ಬಟ್ಟೆಗಳನ್ನು (ಉಡುಪುಗಳನ್ನು) ಧರಿಸಿ ವಿಧಿಯನ್ನು ಮಾಡಬೇಕಾಗುತ್ತದೆ. ಅನಂತರ ಆ ಬಟ್ಟೆಗಳನ್ನು ದಾನ ಮಾಡಬೇಕಾಗುತ್ತದೆ. ಮೂರನೆಯ ದಿನ ಬಂಗಾರದ ನಾಗನ (೧.೨೫ ಗ್ರಾಂ.) ಒಂದು ಪ್ರತಿಮೆಯನ್ನು ಮಾಡಿ ಪೂಜಿಸಿ ದಾನ ಮಾಡುತ್ತಾರೆ.

೫. ವಿಧಿಗಳಿಗಾಗಿ ತಗಲುವ ಸಮಯ: ಮೇಲಿನ ಮೂರೂ ವಿಧಿಗಳು ಬೇರೆ ಬೇರೆ ವಿಧಿಗಳಾಗಿವೆ. ನಾರಾಯಣ-ನಾಗಬಲಿ ವಿಧಿಗೆ ಮೂರು ದಿನಗಳು ತಗಲುತ್ತವೆ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಯು ಒಂದು ದಿನದ ವಿಧಿಯಾಗಿದೆ. ಮೇಲಿನ ಮೂರೂ ವಿಧಿಗಳನ್ನು ಮೂರು ದಿನಗಳಲ್ಲಿ ಮಾಡಬಹುದು. ಸ್ವತಂತ್ರವಾಗಿ ಒಂದು ದಿನದ ವಿಧಿಯನ್ನು (ತ್ರಿಪಿಂಡಿ ಶ್ರಾದ್ಧ) ಮಾಡಬೇಕಾದಲ್ಲಿ ಹಾಗೆಯೂ ಮಾಡಬಹುದು.

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

2 comments:

  1. ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ 'ಶ್ರಾದ್ಧ - ೨ ಭಾಗಗಳು' ಪುಸ್ತಕ ಬೇಕಾಗಿದೆ.. ತರಿಸಿ ಕೊಳ್ಳುವ ಬಗ್ಗೆ ಮಾಹಿತಿ ನೀಡಿ...

    ReplyDelete
    Replies
    1. ನಮಸ್ಕಾರ, 8951937332 ಸಂಖ್ಯೆಗೆ ಕರೆ ಮಾಡಿದರೆ ನಿಮ್ಮ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿಸುತ್ತಾರೆ.

      Delete

Note: only a member of this blog may post a comment.