ಮುಸ್ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚುವುದರ ಶಾಸ್ತ್ರ

ಸಂಧಿಕಾಲದ ವ್ಯಾಖ್ಯೆ: ‘ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ ೪೮ ನಿಮಿಷಗಳ (೨ ಘಟಿಕೆಗಳ) ಕಾಲಕ್ಕೆ ‘ಸಂಧಿಕಾಲ’ ಎಂದು ಹೇಳುತ್ತಾರೆ.

ಸಂಧಿಕಾಲದ ಸಮಾನಾರ್ಥ ಶಬ್ದ: ಪರ್ವಕಾಲ’

ಸಂಧಿಕಾಲದಲ್ಲಿ ಆಚಾರಪಾಲನೆಯ ಮಹತ್ವ: ಸಂಧಿಕಾಲವು ಕೆಟ್ಟ ಶಕ್ತಿಗಳ ಆಗಮನದ ಕಾಲವಾಗಿರುವುದರಿಂದ ಅವುಗಳಿಂದ ನಮ್ಮ ರಕ್ಷಣೆಯಾಗಬೇಕೆಂದು ಈ ಕಾಲದಲ್ಲಿ ಧರ್ಮವು ಆಚಾರಪಾಲನೆಗೆ ಮಹತ್ವವನ್ನು ನೀಡಿದೆ. (ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ? ಎಂದು ಇಲ್ಲಿ ಓದಿ.)

ಸಂಧಿಕಾಲದಲ್ಲಿ ಇವುಗಳನ್ನು ಮಾಡಿ
೧. ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿ ದೀಪಕ್ಕೆ ನಮಸ್ಕಾರ ಮಾಡಬೇಕು
೨. ಸಾಯಂಕಾಲ ಸಂಧ್ಯಾವಂದನೆ ಮಾಡಬೇಕು ಮತ್ತು ದೇವರ ಮುಂದೆ ದೀಪವನ್ನು ಹಚ್ಚಬೇಕು. ಹಾಗೆಯೇ ಅಂಗಳದಲ್ಲಿರುವ ತುಳಸಿಯ ಮುಂದೆಯೂ ದೀಪವನ್ನು ಹಚ್ಚಬೇಕು.
೩. ದೇವರ ಮುಂದೆ ಹಚ್ಚಿದ ದೀಪವು ೨೪ ಗಂಟೆಗಳ ಕಾಲ ಉರಿಯಬೇಕು. ಸಾಯಂಕಾಲ ಬತ್ತಿಯು ಉರಿದು ಉಳಿದಿರುವ ಕಪ್ಪು ಕಾಡಿಗೆಯನ್ನು ತೆಗೆಯಬೇಕು. ಇತ್ತೀಚೆಗೆ ಹೆಚ್ಚಿನ ಜನರ ಮನೆಗಳಲ್ಲಿ ೨೪ ಗಂಟೆಗಳ ಕಾಲ ದೀಪವನ್ನು ಉರಿಸುವುದಿಲ್ಲ. ಆದುದರಿಂದ ಅವರು ಸಾಯಂಕಾಲದ ಸಮಯದಲ್ಲಿ ದೇವರ ಮುಂದೆ ದೀಪವನ್ನು ಹಚ್ಚಬೇಕು.


೪. ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುವುದು ಮತ್ತು ಆ ಸಮಯದಲ್ಲಿ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಮನೆಯಲ್ಲಿಯೇ ಇರಬೇಕು: ‘ಮುಸ್ಸಂಜೆಯ ಸಮಯದಲ್ಲಿ (ದೀಪವನ್ನು ಹಚ್ಚುವ ಸಮಯದಲ್ಲಿ) ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ಇದರಿಂದ ಮನೆಯಲ್ಲಿರುವ ವ್ಯಕ್ತಿಗಳು ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರದಿಂದಾಗುವ ತೊಂದರೆದಾಯಕ ಲಹರಿಗಳ ಹಲ್ಲೆಗಳಿಂದ ರಕ್ಷಿಸಲ್ಪಡುತ್ತಾರೆ. ಆದುದರಿಂದ ಸಾಧ್ಯವಿದ್ದಷ್ಟು ದೀಪ ಹಚ್ಚುವ ಸಮಯಕ್ಕಿಂತ ಮೊದಲೇ ಮನೆಗೆ ಬರಬೇಕು ಮತ್ತು ದೀಪ ಹಚ್ಚಿದ ನಂತರ ಮನೆಯಿಂದ ಹೊರಗೆ ಹೋಗಬಾರದು. ಬಹಳಷ್ಟು ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳು ಮುಸ್ಸಂಜೆಯ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತವೆ. ಅಘೋರಿ ವಿದ್ಯೆಯ ಉಪಾಸಕರು ಮುಸ್ಸಂಜೆಯ ಸಮಯದಲ್ಲಿ ವಾತಾವರಣದ ಕಕ್ಷೆಯನ್ನು ಪ್ರವೇಶಿಸುವ ಕೆಟ್ಟ ಶಕ್ತಿಗಳನ್ನು ವಶಪಡಿಸಿಕೊಂಡು ಅವುಗಳಿಂದ ಕೆಟ್ಟಕೃತ್ಯಗಳನ್ನು ಮಾಡಿಸಿಕೊಳ್ಳುತ್ತಾರೆ. ಆದುದರಿಂದ ಮುಸ್ಸಂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಘಾತಗಳು, ಕೊಲೆಗಳು ಆಗುತ್ತವೆ ಅಥವಾ ಬಲಾತ್ಕಾರದಂತಹ ಕೃತಿಗಳು ಘಟಿಸುತ್ತವೆ. ಈ ಕಾಲಕ್ಕೆ ‘ತೊಂದರೆದಾಯಕ ಅಥವಾ ವಿನಾಶದ ಸಮಯ’ ಎಂದು ಹೇಳುತ್ತಾರೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ಮಧ್ಯಾಹ್ನ ೧.೨೮)

೫. ಶ್ಲೋಕಪಠಣದ ನಂತರ ದೇವರಿಗೆ ಆರತಿ ಮತ್ತು ಪ್ರಾರ್ಥನೆಯನ್ನು ಮಾಡಬೇಕು
೬. ದೀಪಹಚ್ಚುವ ಸಮಯದಲ್ಲಿ ಮನೆಯಲ್ಲಿನ ಎಲ್ಲ ಸದಸ್ಯರೂ ಉಪಸ್ಥಿತರಿರಬೇಕು

೬ಅ. ಎಲ್ಲರೂ ಉಪಸ್ಥಿತರಿರುವುದರಿಂದಾಗುವ ಲಾಭಗಳು
ಅ. ‘ದೀಪಹಚ್ಚುವ ಸಮಯದಲ್ಲಿ ಮನೆಯ ಎಲ್ಲ ಸದಸ್ಯರು ಉಪಸ್ಥಿತರಿರುವುದರಿಂದ ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳಾಗುತ್ತವೆ.
ಆ. ಪ್ರಾರ್ಥನೆಯ ನಿಮಿತ್ತದಿಂದ ಕುಟುಂಬದಲ್ಲಿನ ಎಲ್ಲ ವ್ಯಕ್ತಿಗಳು ಒಂದಾಗುತ್ತಾರೆ, ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವುದು, ಪರಸ್ಪರರ ಕುಶಲತೆಯನ್ನು ವಿಚಾರಿಸುವುದು, ಯಾವುದಾದರೊಂದು ಹಬ್ಬವಿದ್ದಲ್ಲಿ ಅದರ ಮಹತ್ವವನ್ನು ಚಿಕ್ಕ ಮಕ್ಕಳಿಗೆ ತಿಳಿಸುವುದು ಇತ್ಯಾದಿಗಳಿಂದಾಗಿ ಮನೆಯು ಸ್ಥಿರವಾಗಿ ಉಳಿಯಲು ಸಹಾಯವಾಗುತ್ತದೆ.

ಇತ್ತೀಚಿನ ಸ್ಥಿತಿ: ಇಂದು ದೂರದರ್ಶನದ ಶಬ್ದದಲ್ಲಿ ಸ್ತೋತ್ರಪಠಣದ ಶಬ್ದವು ಎಲ್ಲಿಯೋ ಕಳೆದುಹೋಗಿದೆ. ಇಂದು ವಿಭಕ್ತ ಕುಟುಂಬಪದ್ಧತಿಯಿಂದಾದ ಹಾನಿಯನ್ನು ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ಯಾರು ಜವಾಬ್ದಾರರು? ದೂರದರ್ಶನ, ತಂದೆ-ತಾಯಿ, ಅಧ್ಯಾತ್ಮದ ಜೊತೆಯಿಲ್ಲದ ಶಿಕ್ಷಣಪದ್ಧತಿ, ಸಮಾಜ ಅಥವಾ ಪ್ರತಿಯೊಬ್ಬ ವ್ಯಕ್ತಿಯೋ?’

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')

ಸಂಬಂಧಿತ ವಿಷಯಗಳು
ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
Dharma Granth

9 comments:

  1. You shared very useful information..!!
    I will also share this information with others and let them know its importance.

    Thanks once again..!!
    Ramesh

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ರಮೇಶ್‌ರವರೇ...
      ಇದೇ ರೀತಿ ಧರ್ಮಪ್ರಸಾರ ಮಾಡಿ ಎಲ್ಲರೂ ಧರ್ಮಾಚರಣೆ ಮಾಡುವಂತಾಗಲಿ...

      Delete
    2. Deepada mahatva tilidu tumba santoshavayitu
      Tamage dhanyawaadagalu

      Basavaraj Gavati

      Delete
    3. ಧನ್ಯವಾದಗಳು ಬಸವರಾಜ್‌ರವರೇ, ಧರ್ಮಾಚರಣೆಯನ್ನೂ ಮಾಡಿ...

      Delete
    4. Nibe Hannina Dipa hachabeku banashankari Devi mundi dayavittu tilisi, yava reti hachabeku, yava samayadali hachabeku, adara rasavanu eanu madabeku pls- Gajednra

      Delete
  2. Very nice and important information our Job is to educate the new generation about our culture.

    Tks

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಬ್ಲಾಗ್‌ನಲ್ಲಿ ನೀಡಿದ ಪ್ರಕಾರ ಧರ್ಮಾಚರಣೆ ಮಾಡಿ ಮತ್ತು ಧರ್ಮಪ್ರಸಾರ ಮಾಡಿ.

      Delete

Note: only a member of this blog may post a comment.