ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಅ. ಆಹಾರ ಮತ್ತು ಶರೀರ

ಅ೧. ‘ಶುದ್ಧ ಆಹಾರದ ಪರಿಣಾಮವು ಸ್ಥೂಲ ಮತ್ತು ಸೂಕ್ಷ್ಮ ಈ ಎರಡೂ ದೇಹಗಳ ಮೇಲೆ ಆಗುತ್ತಿರುತ್ತದೆ.’

ಅ೨. ಖಾದ್ಯ ಮತ್ತು ಪಾನೀಯಗಳಲ್ಲಿ ಸೂಕ್ಷ್ಮ ವ್ಯತ್ಯಾಸವಾದರೂ ಶರೀರದ ಮೇಲೆ ಪರಿಣಾಮವಾಗಬಲ್ಲದು: ನಮಗೆ ರೋಗಗಳು ಬರುತ್ತವೆ, ಅಂದರೆ ಶರೀರದಲ್ಲಿನ ವ್ಯವಸ್ಥೆಯು ಕೆಡುತ್ತದೆ. ಅದು ಸರಿಯಾಗಲು ನಾವು ಔಷಧಗಳನ್ನು ತೆಗೆದುಕೊಳ್ಳುತ್ತೇವೆ. ಔಷಧವು ಹೊಟ್ಟೆ ಯೊಳಗೆ ಹೋದ ಮೇಲೆ ರಕ್ತದ ಮೂಲಕ ಶರೀರವಿಡೀ ಹರಡುತ್ತದೆ ಮತ್ತು ಅವ್ಯವಸ್ಥೆಯನ್ನು ಮಾಡುವ ಪರಮಾಣುಗಳ ಪ್ರವೃತ್ತಿಯನ್ನು ಅದು ತೆಗೆದುಬಿಡುತ್ತದೆ. ಇದರಿಂದ ಆರೋಗ್ಯವು ಲಭಿಸುತ್ತದೆ. ಕಣ್ಣುಗಳು ಉರಿಯುತ್ತಿದ್ದರೂ ಹೊಟ್ಟೆಯಲ್ಲಿ ಔಷಧಿ ತೆಗೆದುಕೊಂಡರೆ ಗುಣವಾಗುತ್ತದೆ. ಆಕಳು ಮಳೆಯಲ್ಲಿ ನೆನೆದರೆ ಅದರ ಹಾಲನ್ನು ಕುಡಿಯುವ ಮಗುವಿನ ಆರೋಗ್ಯವು ಕೆಡುತ್ತದೆ ಎಂಬ ಅನುಭವವಿದೆ. ಈ ಅನುಭವದ ತಾತ್ಪರ್ಯವೇನೆಂದರೆ, ಖಾದ್ಯ ಮತ್ತು ಪಾನೀಯಗಳಲ್ಲಿ ಸೂಕ್ಷ್ಮ ವ್ಯತ್ಯಾಸವಾದರೂ, ಅದರ ಪರಿಣಾಮವು ಶರೀರದ ಮೇಲಾಗುತ್ತದೆ.


ಅ೩. ನಾವು ತಿಂದಿರುವ ಆಹಾರವು ೧೨ ವರ್ಷಗಳ ವರೆಗೆ ಶರೀರದಲ್ಲಿ ಬೇರೆ ರೂಪದಲ್ಲಿ ಉಳಿಯುತ್ತದೆ; ಆದುದರಿಂದ ೧೨ ವರ್ಷಗಳ ವರೆಗೆ ತಪಶ್ಚರ್ಯವನ್ನು ಮಾಡಲು ಹೇಳಲಾಗಿದೆ.

ಅ೪. ಆಹಾರ ಮತ್ತು ನೀರು ಶರೀರದಲ್ಲಿ ಇರುವ ಕಾಲಾವಧಿ: ನೀರು ದೇಹದಲ್ಲಿ ೧ ದಿನ ಉಳಿಯುತ್ತದೆ; ಆದುದರಿಂದ ನೀರನ್ನು ಎಲ್ಲಿ ಬೇಕಾದರೂ ಕುಡಿಯಬಹುದು. ಅನ್ನವು ಶರೀರದಲ್ಲಿ ೪,೧೨೦ ದಿನ ಇರುತ್ತದೆ. ಆಹಾರವು ಪೃಥ್ವಿತತ್ತ್ವಕ್ಕೆ ಸಂಬಂಧಿಸಿದೆ; ಆದುದರಿಂದ ಶರೀರದಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಮತ್ತು ನೀರು ಆಪತತ್ತ್ವಕ್ಕೆ ಸಂಬಂಧಿಸಿರುವುದರಿಂದ ಶರೀರದಲ್ಲಿ ಅಲ್ಪಕಾಲ ಉಳಿಯುತ್ತದೆ. - ಸ್ವಾಮಿ ವಿದ್ಯಾನಂದ, ಮುಂಬೈ (ವರ್ಷ ೧೯೮೭)

ಆ. ಆಹಾರ ಮತ್ತು ಮನಸ್ಸು

ಆ೧. ಆಹಾರ ಮತ್ತು ಮನಸ್ಸು ಇವುಗಳಿಗೆ ಸಮೀಪದ ಸಂಬಂಧವಿರುವುದು: ಹಿಂದೂ ಧರ್ಮೀಯರು ‘ತಮ್ಮ ಸಾಧನೆಯಲ್ಲಿನ ಉನ್ನತಿ ಮತ್ತು ಶರೀರದ ಪೋಷಣೆಗಾಗಿ ಯಾವ ಆಹಾರವನ್ನು ಸೇವಿಸಬೇಕು’, ಎಂಬುದನ್ನು ಸ್ಥಳೀಯ ಪರಿಸ್ಥಿತಿ ಮತ್ತು ಆಹಾರದ ಲಭ್ಯತೆಯ ವಿಚಾರವನ್ನು ಮಾಡಿ ತಾವೇ ನಿರ್ಧರಿಸುತ್ತಾರೆ. ಇದಕ್ಕಾಗಿ ಅವರು ಆಹಾರ ಮತ್ತು ಮನಸ್ಸು ಇವುಗಳ ಅಧ್ಯಯನ ಮಾಡುತ್ತಾರೆ. ಆಹಾರ ಮತ್ತು ಮನಸ್ಸು ಇವುಗಳಿಗೆ ಪರಸ್ಪರ ಸಮೀಪದ ಸಂಬಂಧವಿದೆ. ಆಹಾರದ ಸ್ಥೂಲಭಾಗದಿಂದ ರಕ್ತ, ಮಾಂಸ ಮತ್ತು ಮೂಳೆಗಳ ಪೋಷಣೆಯಾಗುತ್ತದೆ ಮತ್ತು ಸೂಕ್ಷ್ಮ ಭಾಗದಿಂದ ಮನಸ್ಸಿನ ಪೋಷಣೆಯಾಗುತ್ತದೆ.

ಆ೨. ಅನ್ನದ ಸೂಕ್ಷ್ಮತಮ ಪರಮಾಣುವಿನಿಂದ ಮನಸ್ಸು ತಯಾರಾಗುವುದು ಮತ್ತು ಅದರಿಂದ ಆಹಾರಕ್ಕನುಸಾರ ಆಚಾರ-ವಿಚಾರಗಳು ಬದಲಾಗುವುದು
        ಅನ್ನಂ ಅಶಿತಂ ತ್ರೇಧಾ ವಿಧೀಯತೇ|
        ತಸ್ಯ ಯಃ ಸ್ಥವಿಷ್ಠೋ ಧಾತುಸ್ತತ್ಪುರೀಷಂ ಭವತಿ|
        ಯೋ ಮಧ್ಯಮಸ್ತನ್ಮಾಂಸಂ ಯೋಣಿಷ್ಠಸ್ತನ್ಮನಃ|
- ಛಾಂದೋಗ್ಯೋಪನಿಷತ್ತು, ಅಧ್ಯಾಯ ೬, ಖಂಡ ೫, ವಾಕ್ಯ ೧
ಅರ್ಥ: ನಾವು ತಿಂದ ಆಹಾರದ ಮೂರು ಭಾಗಗಳಾಗುತ್ತವೆ.

ಅ. ಜೀರ್ಣವಾಗದ ಆಹಾರವು ಮಲವಾಗುತ್ತದೆ.

ಆ. ಜೀರ್ಣವಾಗಿ ರಕ್ತದಲ್ಲಿ ಹೀರಲ್ಪಟ್ಟ ಆಹಾರದ ಕಣಗಳಿಂದ ಮಾಂಸಧಾತು ತಯಾರಾಗುತ್ತದೆ.

ಇ. ಅನ್ನದ ಸೂಕ್ಷ್ಮತಮ ಪರಮಾಣುಗಳಿಂದ ಮನಸ್ಸು ತಯಾರಾಗುತ್ತದೆ.
ಆಹಾರದ ಸೂಕ್ಷ್ಮತಮ ಭಾಗದಿಂದ, ಅಂದರೆ ಅನ್ನದಲ್ಲಿನ ಸತ್ತ್ವ, ರಜ ಮತ್ತು ತಮ ಘಟಕಗಳಿಂದ ಮನಸ್ಸು ತಯಾರಾಗುತ್ತದೆ, ಆದುದರಿಂದಲೇ ಆಹಾರಕ್ಕೆ ತಕ್ಕಂತೆ ನಮ್ಮ ಆಚಾರ- ವಿಚಾರಗಳು ಬದಲಾಗುತ್ತವೆ. ಸತ್ತ್ವಗುಣವನ್ನು ಹೆಚ್ಚಿಸುವ ಆಹಾರಕ್ಕೆ ಸಾತ್ತ್ವಿಕ ಮತ್ತು ಮನಸ್ಸಿನ ರಜ ಮತ್ತು ತಮ ದೋಷಗಳನ್ನು ಹೆಚ್ಚಿಸುವ ಆಹಾರಕ್ಕೆ ಕ್ರಮವಾಗಿ ರಾಜಸಿಕ ಮತ್ತು ತಾಮಸಿಕ ಆಹಾರ ಎನ್ನುತ್ತಾರೆ.

ಆ೩. ಆಹಾರದ ಬಗ್ಗೆ ಗೌರವವಿದ್ದರೆ, ಅದು ಶರೀರ ಮತ್ತು ಮನಸ್ಸು ಇವುಗಳಿಗೆ ಪುಷ್ಟಿದಾಯಕವಾಗುತ್ತದೆ: ಊಟ ಮಾಡುವಾಗ ಆಹಾರದ ಬಗ್ಗೆ ಗೌರವ ಮತ್ತು ಉಚ್ಚ ಭಾವನೆಯಿರಬೇಕು. ಅನ್ನದ ನಿಂದನೆಯನ್ನು ಎಂದಿಗೂ ಮಾಡಬಾರದು. ನಿಂದಿಸಿದರೆ ಅನ್ನವು ಲಾಭದಾಯಕವಾಗುವುದಿಲ್ಲ. ಅನ್ನದ ಬಗ್ಗೆ ಪೂಜ್ಯಭಾವವಿದ್ದರೆ, ಅದು ಶರೀರ ಮತ್ತು ಮನಸ್ಸಿಗೆ ಪುಷ್ಟಿದಾಯಕವಾಗುತ್ತದೆ.

ಆ೪. ಆಹಾರದಿಂದ ಮನಸ್ಸು ಶುದ್ಧವಾಗುವುದು
    ಆಹಾರಶುದ್ಧೌ ಸತ್ತ್ವಶುದ್ಧಿಃ| ಸತ್ತ್ವಶುದ್ಧೌ ಧ್ರುವಾ ಸ್ಮ ತಿಃ|
    ಸ್ಮ ತಿಲಂಭೇ ಸರ್ವಗ್ರಂಥೀನಾಂ ವಿಪ್ರಮೋಕ್ಷಃ|
                - ಛಾಂದೋಗ್ಯೋಪನಿಷತ್ತು, ಅಧ್ಯಾಯ ೭, ಖಂಡ ೨೬, ವಾಕ್ಯ ೨
ಅರ್ಥ: ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ. (ಆಧಾರ: ಸನಾತನದ ಗ್ರಂಥ ‘ಅನ್ನಂ ಬ್ರಹ್ಮ|: ಖಂಡ ೧’)

ಆ೫. ಮನಸ್ಸು ಮತ್ತು ಇಂದ್ರಿಯಗಳು ಕೇಳಿದ ಆಹಾರವನ್ನು ಕೊಟ್ಟರೆ, ಜ್ಞಾನನಾಶ ಮತ್ತು ಮನೋವಿಕ್ಷೇಪವಾಗುತ್ತದೆ. - ಗುರುದೇವ ಡಾ.ಕಾಟೇಸ್ವಾಮೀಜಿ

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
Dharma Granth

1 comment:

Note: only a member of this blog may post a comment.