೧. ಅನ್ನವು ‘ಪೂರ್ಣಬ್ರಹ್ಮ’ವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು. ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.
೨. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ.
೩. ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗಬಹುದು, ಆದುದರಿಂದ ಊಟದ ತಟ್ಟೆಯನ್ನು ತೊಡೆಗಳ ಮೇಲೆ ಇಟ್ಟುಕೊಂಡು ಊಟವನ್ನು ಮಾಡಬಾರದು.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)
ಆಹಾರಕ್ಕೆ ಸಂಬಂಧಿತ ವಿಷಯಗಳು
No comments:
Post a Comment
Note: only a member of this blog may post a comment.