ಬೆಲ್ಲದಿಂದಾಗುವ ಲಾಭಗಳು

ಅ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು (ನೆಲಗಡಲೆ) ಕೊಟ್ಟರೆ ಅವರ ಶಾರೀರಿಕ ವಿಕಾಸವು ಬೇಗನೇ ಆಗಿ ಮೂಳೆಗಳು ಗಟ್ಟಿಯಾಗುತ್ತವೆ: ಬೆಲ್ಲದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಸಣ್ಣ ಮಕ್ಕಳಿಗೆ ಬೆಲ್ಲವನ್ನು ತಿನ್ನಲು ಕೊಡುವುದು ಲಾಭದಾಯಕವಾಗಿದೆ, ಆದರೆ ಅದನ್ನು ಯೋಗ್ಯ ಪ್ರಮಾಣದಲ್ಲಿಯೇ ಕೊಡಬೇಕು (ಮಿತವಾಗಿರಬೇಕು). ಏಕೆಂದರೆ ಹೆಚ್ಚು ತಿಂದರೆ ಹುಳಗಳಾಗುವ (ಹೊಟ್ಟೆಯಲ್ಲಿ ಸಣ್ಣ ದೊಡ್ಡ ಜಂತುಗಳಾಗುವ) ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಯೋಗ್ಯ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾಕಾಳುಗಳನ್ನು ಕೊಟ್ಟರೆ ಅವರ ಶಾರೀರಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಮೂಳೆಗಳು ಗಟ್ಟಿಯಾಗಿ ಶರೀರವು ಬಲವಾಗುತ್ತದೆ.

ಆ. ಮಹಿಳೆಯರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಲೋಹತತ್ತ್ವದ ಕೊರತೆಯು ತುಂಬಿ ಬರುತ್ತದೆ: ಮಹಿಳೆಯರಲ್ಲಿ ಸಾಧಾರಣವಾಗಿ ಲೋಹತತ್ತ್ವದ (ಕಬ್ಬಿಣ) ಕೊರತೆಯು ಕಂಡುಬರುತ್ತದೆ. ಮಾಸಿಕ ಸರದಿಯ (ಮುಟ್ಟು) ನೈಸರ್ಗಿಕ ಚಕ್ರದಿಂದ ಈ ಕೊರತೆಯಾಗುತ್ತದೆ. ಅವರು ಹುರಿಗಡಲೆಗಳೊಂದಿಗೆ ಬೆಲ್ಲವನ್ನು ತಿಂದರೆ ಈ ಕೊರತೆಯು ತುಂಬಿ ಬರುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣವೂ ಹೆಚ್ಚುವುದರಿಂದ ನಿಃಶಕ್ತಿಯು ಬರುವುದಿಲ್ಲ.

ಇ. ಹೃದಯರೋಗಿಗಳಿಗೆ ‘ಬೆಲ್ಲ’ವು ಉತ್ತಮ ಔಷಧವಾಗಿದೆ ಮತ್ತು ಬೆಲ್ಲದ ಸೇವನೆಯಿಂದ ಹಿಮೋಗ್ಲೋಬಿನ್‌ನ ಪ್ರಮಾಣ ಸರಿಸಮಾನವಾಗುತ್ತದೆ (Normal): ಬೆಲ್ಲದಲ್ಲಿ ‘ಬಿ’ ಜೀವಸತ್ವವು ಹೇರಳವಾಗಿರುತ್ತದೆ. ಆದುದರಿಂದ ಮಾನಸಿಕ ಆರೋಗ್ಯಕ್ಕೆ ಬೆಲ್ಲವು ಲಾಭಕಾರಿಯಾಗಿದೆ. ಹೃದಯರೋಗಿಗಳಿಗೆ ಪೊಟಾಶಿಯಮ್ ಲಾಭದಾಯಕವಾಗಿದೆ. ಇದು ಬೆಲ್ಲದಿಂದ ನೈಸರ್ಗಿಕ ರೀತಿಯಲ್ಲಿ ಸಿಗುತ್ತದೆ. ಇದರ ಅರ್ಥವೇನೆಂದರೆ ಹೃದಯರೋಗಿಗಳಿಗೆ ‘ಬೆಲ್ಲ’ವು ಒಂದು ಉತ್ತಮ ಔಷಧಿಯಾಗಿದೆ. ಪಾಂಡುರೋಗ (ಎನಿಮಿಯಾ) (ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಪ್ರಮಾಣ ಕಡಿಮೆಯಾಗುವುದು) ಹಾಗೆಯೇ ಅಧಿಕ ರಕ್ತಸ್ರಾವದಿಂದ ರಕ್ತದಲ್ಲಿ ಕಡಿಮೆಯಾದ ಹಿಮೋಗ್ಲೋಬಿನ್ ಪ್ರಮಾಣವು ಬೆಲ್ಲದ ಸೇವನೆಯಿಂದ ಸರಿಸಮಾನವಾಗುತ್ತದೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)

ಸಂಬಂಧಿತ ಲೇಖನಗಳು
ಸಕ್ಕರೆಯ ದುಷ್ಪರಿಣಾಮಗಳು

4 comments:

 1. ಮಾನ್ಯರೇ, ನಿಮ್ಮ ತಾಣದ ಪ್ರೇರಣೆಯಿಂದ, ಬೆಲ್ಲವನ್ನು ಅವಶ್ಯವಿರುವಾಗೆಲ್ಲಾ ಬಳಸುತ್ತಿದ್ದೆವು. ವಿಜಯ ಕರ್ನಾಟಕ ದಿನ ಪತ್ರಿಕೆಯ ಒಂದು ಲೇಖನದಲ್ಲಿ ಬೆಲ್ಲ ಉತ್ತಮ ಆಹಾರ ನಿಜ. ಆದರೆ, ಅದು ಆಕರ್ಶಕವಾಗಿ ಕಾಣಲೆಂದು ಬೆಲ್ಲದ ಪೌಡರ್ ಹಾಕುವುದರಿಂದ ನೋಡಲು ಬೆಳ್ಳಗಿರುತ್ತದೆ. ಆಕರ್ಷಕವಾಗಿಯೂ ಇರುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಇದರಿಂದ ಅನಿವಾರ್ಯವಾಗಿ ಸಕ್ಕರೆಯನ್ನು ಉಪಯೊಗಿಸ ಬೇಕಾಗಿದೆ. ರೈತರು ಸಹ ವ್ಯಾಪಾರದ ದೃಷ್ಟಿಯಿಂದ ಪೌಡರ್ ಬಳಸಬೇಕಾಗುತ್ತದೆ ಎನ್ನುತ್ತಾರೆ. ಇದಕ್ಕೆ ಪರಿಹಾರವನ್ನು ತಿಳಿಸುವಿರಾ?

  ReplyDelete
  Replies
  1. ನಮಸ್ಕಾರ ನಂಜುಂಡರಾಜುರವರೇ, ನಮ್ಮ ತಾಣದಿಂದ ಪ್ರೇರಣೆ ಪಡೆದು ಅದರಂತೆ ಆಚರಣೆ ಮಾಡಿರುವ ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಇಂತಹ ಭ್ರಷ್ಟಾಚಾರಿ, ನೀತಿಹೀನ ಪ್ರಪಂಚದಲ್ಲಿ ಕಲಬೆರಕೆಯಿಲ್ಲದ ವಸ್ತು ಸಿಗುವುದೇ ನಿಮಗೆ ವಿರಳವಾಗಿದೆ. ನೀವು ಯಾವುದೇ ಆಹಾರ, ಧಾನ್ಯ, ತರಕಾರಿಗಳನ್ನು ತೆಗೆದುಕೊಂಡರೂ ಕಲಬೆರಕೆ ಅಥವಾ ಹಾನಿಕರ ಕೀಟನಾಶಕಗಳ ಉಪಯೋಗಿಸಿರುವುದು ಕಂಡುಬರುತ್ತದೆ. ಹಾಗಾಗಿ ನೀವು ಹೇಳಿರುವಂತಹ ಬಿಳಿ ಬಣ್ಣದ ಬೆಲ್ಲವನ್ನು ಬಿಟ್ಟು ನಿಜವಾದ ಬೆಲ್ಲ ಸಿಗುವ ಕಡೆ ಖರೀದಿಸಬಹುದು. ನಾವೂ ಬೆಲ್ಲವನ್ನು ಖರೀದಿ ಮಾಡುವಾಗ ಕಂದು ಬಣ್ಣದ ಬೆಲ್ಲ ಮತ್ತು ವಿಶ್ವಾಸನೀಯವಾಗಿರುವವರಿಂದ ಖರೀದಿಸುತ್ತೇವೆ. (ಉದಾ.ಶಿರಸಿ, ಶಿವಮೊಗ್ಗಗಳಿಂದ)

   ನೀವು ಹೇಳಿರುವ ವಿಷಯದ ಬಗ್ಗೆ ವಿಚಾರ ಮಾಡಿದರೆ, ಬೆಲ್ಲ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕಲಬೆರಕೆಯಾಗಿದೆ, ಹೀಗಿರುವಾಗ ಸಕ್ಕರೆ ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿದ್ದರೂ ಅದರಲ್ಲಿಯೂ ಬಿಳಿ ಬಣ್ಣದ ಕಲ್ಲಿನ ಪುಡಿಗಳನ್ನು ಹಾಕಿ ಕಲಬೆರಕೆಯಾಗಿರುತ್ತದೆ. ಹೀಗೆ ನೋಡಿದಾಗ ಮೊದಲೇ ಹಾನಿಕರ ಸಕ್ಕರೆ ಇನ್ನೂ ಹಾನಿಕರವಾಗುತ್ತದೆ. ಹಾಗಾಗಿ ಉತ್ತಮ ಬೆಲ್ಲವನ್ನೇ ಖರೀದಿಸಲು ಪ್ರಯತ್ನಿಸಿ ಎಂದು ಹೇಳಲಿಚ್ಛಿಸುತ್ತೇವೆ. ಆಹಾರಧಾನ್ಯಗಳಲ್ಲಿ ಕಲಬೆರಕೆಯನ್ನು ಗುರುತಿಸುವುದರ ಬಗ್ಗೆ ಮತ್ತು ಅದರ ದೂರು ಎಲ್ಲಿ ನೋಂದಾಯಿಸಬೇಕು ಎಂಬುದರ ಬಗ್ಗೆ ಕೆಲವು ದಿನಗಳಲ್ಲಿ ಮಾಹಿತಿ ಹಾಕಲಿದ್ದೇವೆ.

   Delete
 2. ಬೆಲ್ಲದ ಉಪಯೋಗ ವಿಚಾಪೂರ್ಣವಾಗಿದೆ. ಸಕ್ಕರೆ ಖಾಯಿಲೆ ಇರುವವರು ಬೆಲ್ಲ ಉಪಯೋಗಿಸಬಹುದೇ?

  ReplyDelete

Note: only a member of this blog may post a comment.