೧. ‘ಚಿಕನ್ ಬರ್ಗರ್’ನಲ್ಲಿ ಕಪ್ಪು ಶಕ್ತಿಯು ಕಾರ್ಯನಿರತವಾಗಿರುತ್ತದೆ: ಕೋಳಿಯನ್ನು ಸಾಯಿಸಿ ಅದರ ಮಾಂಸದಿಂದ ‘ಬರ್ಗರ್’ವನ್ನು ತಯಾರಿಸುವಾಗ ಅದರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಪ್ಪು ಶಕ್ತಿಯು ಬರುತ್ತದೆ. ಕೋಳಿಯ ಮಾಂಸದಲ್ಲಿನ ಈ ಕಪ್ಪು ಶಕ್ತಿಯು ಬರ್ಗರ್‌ನಲ್ಲೂ ಕಾರ್ಯನಿರತವಾಗಿರುತ್ತದೆ.
೨. ಬರ್ಗರ್‌ನಲ್ಲಿ ಕಪ್ಪು ಶಕ್ತಿಯು ಕಾರ್ಯನಿರತವಾಗಿರುವುದರಿಂದ, ಅದನ್ನು ತಿನ್ನಲು ಆಕರ್ಷಿಸುವುದಕ್ಕಾಗಿ ಅದರಲ್ಲಿ ಭಾಸಾತ್ಮಕ, ಆಸೆಯನ್ನು ಹುಟ್ಟಿಸುವ ಮತ್ತು ಕಂಪನಗಳಂತಹ ನಕಲಿ ಚೈತನ್ಯವು ಸಹಜ ನಿರ್ಮಾಣವಾಗುತ್ತದೆ.
೩. ಕೆಟ್ಟ ಶಕ್ತಿಗಳು ಬರ್ಗರ್‌ನಲ್ಲಿನ ೨-೩ ಸಹಾಯಕ ಮಾಧ್ಯಮಗಳನ್ನು ಬಳಸಿ ಕಪ್ಪು ಶಕ್ತಿಯನ್ನು ಪಸರಿಸುವುದು, ಅದನ್ನು ಹೆಚ್ಚಿಸುವುದು, ಅದಕ್ಕೆ ಹುಳಿ ಬರಿಸುವುದು (ಫರ್ಮೆಂಟೇಶನ), ಹಾಗೆಯೇ ಬನ್ (ಪಾವನಂತಹ ಒಂದು ವಿಧ) ಮತ್ತು ಬರ್ಗರನ್ನು ತಿನ್ನುವವರ ಶರೀರದಲ್ಲಿ ಕಪ್ಪು ಶಕ್ತಿಯನ್ನು ಅಂಟಿಸುವ ಕಾರ್ಯವನ್ನು ಮಾಡುತ್ತವೆ.
೪. ಕೆಟ್ಟ ಶಕ್ತಿಗಳು ಬಳಸುವ ಸಹಾಯಕ ಮಾಧ್ಯಮಗಳು
೪ಅ. ಗಿಣ್ಣು (ಚೀಜ್): ಇದು ಬರ್ಗರ್ ಮತ್ತು ಬನ್ನನ್ನು ಒಟ್ಟಿಗೆ ಅಂಟಿಸಲು ಸಹಾಯ ಮಾಡುತ್ತದೆ. ತಿನ್ನುವವರ ಹೊಟ್ಟೆಯಲ್ಲಿ ಗಿಣ್ಣು ಅಂಟಿಕೊಳ್ಳುತ್ತದೆ ಮತ್ತು ಹುಳಿ (ಫರ್ಮೆಂಟೇಶನ) ಯಾಗುತ್ತದೆ. ಇದರಿಂದ ಬರ್ಗರ್ ಶರೀರದಲ್ಲಿ ಹೆಚ್ಚು ಕಾಲ ಉಳಿಯಲು ಸಹಾಯವಾಗುತ್ತದೆ. ಯಾವಾಗ ಈ ಬರ್ಗರ್‌ವು ಹೊಟ್ಟೆಯಲ್ಲಿ ಅಥವಾ ಕರುಳಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆಯೋ, ಆಗ ಕೆಟ್ಟ ಶಕ್ತಿಗಳಿಗೆ ರಕ್ತಪ್ರವಾಹದಲ್ಲಿ ಕಪ್ಪು ಶಕ್ತಿಯನ್ನು ಹರಡಲು ಹೆಚ್ಚು ಸಮಯ ಸಿಗುತ್ತದೆ. ಗಿಣ್ಣಿನಿಂದ (ಚೀಜ್‌ನಿಂದ) ಬರ್ಗರ್‌ನ ಅನ್ನವು ಹೊಟ್ಟೆಯಲ್ಲಿ ಮುದ್ದೆಯಾಗಿ (ಲಂಪ್) ಉಳಿಯುತ್ತದೆ, ಹಾಗೆಯೇ ಆ ಅನ್ನವು ಕರುಳು ಮತ್ತು ಹೊಟ್ಟೆಯ ಬದಿಯಲ್ಲಿ ಅಂಟಿಕೊಳ್ಳಲು ಸಹಾಯವಾಗುತ್ತದೆ.
೪ಆ. ಮಾಯೋನೀಜ: ಇದರ ಗುಣಧರ್ಮವೂ ಗಿಣ್ಣಿನ (ಚೀಜ್‌ನ) ಗುಣಧರ್ಮದಂತೆಯೇ ಇರುತ್ತದೆ, ಆದರೆ ಇದರಲ್ಲಿ ಹುಳಿಯಾಗುವ (ಫರ್ಮೆಂಟೇಶನ) ಗುಣವು ಅಧಿಕ ಪ್ರಮಾಣದಲ್ಲಿರುತ್ತದೆ. ಮಾಯೋನೀಜ ಮತ್ತು ಬ್ರೆಡ್ಡಿನಲ್ಲಿನ ಮೈದಾ ಹೊಟ್ಟೆಯಲ್ಲಿ ಹುಳಿಯಾಗು ತ್ತವೆ. ಈ ಹುಳಿಯಾಗುವ ಪ್ರಕ್ರಿಯೆಯಿಂದ ಕಪ್ಪು ಶಕ್ತಿಯ ಕಣಗಳು ತುಂಬಾ ಹಗುರ ಮತ್ತು ಗಾಳಿಯಂತಾಗುತ್ತವೆ. ಇದರಿಂದ ಅವು ಗಾಳಿ ಮತ್ತು ರಕ್ತ ಇವುಗಳ ಮೂಲಕ ರಕ್ತಪ್ರವಾಹದಿಂದ ಸಂಪೂರ್ಣ ಶರೀರದಲ್ಲಿ ಸಹಜವಾಗಿ ಸಂಚರಿಸುತ್ತವೆ.
೪ಇ. ಮೈದಾದ ಬನ್ ಅಥವಾ ಬ್ರೆಡ್: ಮೈದಾದ ಬನ್ ಅಥವಾ ಬ್ರೆಡ್ (ಪಾವ)ನಲ್ಲಿ ಸ್ಪಂಜಿನಂತೆ ಹೀರಿಕೊಳ್ಳುವ ಗುಣ ಇದೆ, ಆದುದರಿಂದ ಚಿಕನ್‌ನಲ್ಲಿನ ಕಪ್ಪು ಶಕ್ತಿಯು ಬನ್‌ನಲ್ಲಿ ಹೀರಿಕೊಳ್ಳುತ್ತದೆ. ಕಪ್ಪು ಶಕ್ತಿಯು ಬನ್ನಿನಲ್ಲಿ ಪ್ರವೇಶಿಸಿ ಕೂಡಲೇ ಹರಡುತ್ತದೆ ಮತ್ತು ಕೆಟ್ಟ ಶಕ್ತಿಯ ಸ್ಥಾನವನ್ನು ನಿರ್ಮಿಸುತ್ತದೆ. ಯಾವಾಗ ಮೈದಾ, ಚಿಕನ್, ಚೀಜ್ ಮತ್ತು ಮಾಯೋನೀಜ ಶರೀರದಲ್ಲಿ ಪ್ರವೇಶಿಸುತ್ತವೆಯೋ, ಆಗ ಅವು ಅಂಟು ಮುದ್ದೆಯನ್ನು (ಲಂಪ್) ತಯಾರು ಮಾಡುತ್ತವೆ ಮತ್ತು ನಂತರ ಅದು ಹುಳಿಯಾಗುತ್ತದೆ. ಅದು ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ೩೬ ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದರಿಂದ, ಕಪ್ಪು ಶಕ್ತಿಯು ಹೆಚ್ಚಾಗಲು ಮತ್ತು ಶರೀರದಲ್ಲಿದ್ದುಕೊಂಡು ರಕ್ತಪ್ರವಾಹದ ಮೂಲಕ ಶರೀರದ ವಿವಿಧ ಭಾಗಗಳಲ್ಲಿ ಪಸರಿಸಲು ಹೆಚ್ಚು ಸಮಯ ಸಿಗುತ್ತದೆ.
- ಸೌ.ಭಕ್ತಿ, ಎಸ್.ಎಸ್.ಆರ್.ಎಫ್. (ಭಾದ್ರಪದ ಕೃಷ್ಣ ನವಮಿ, ಕಲಿಯುಗ ವರ್ಷ ೫೧೧೧ ೧೩.೯.೨೦೦೯)
(ವಿವರವಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು')
ಸಂಬಂಧಿತ ಲೇಖನಗಳು
No comments:
Post a Comment
Note: only a member of this blog may post a comment.