ಗ್ರಂಥ ಪರಿಚಯ - 'ಶಿವ'

ನಮಗೆ ಯಾವುದಾದರೊಂದು ದೇವತೆಯ ಬಗೆಗಿನ ಅಧ್ಯಾತ್ಮಶಾಸ್ತ್ರದ ಮಾಹಿತಿಯು ತಿಳಿದರೆ, ಆ ದೇವತೆಯ ಬಗೆಗಿನ ಶ್ರದ್ಧೆಯು ಹೆಚ್ಚಾಗಲು ಸಹಾಯವಾಗುತ್ತದೆ. ಶ್ರದ್ಧೆಯು ಹೆಚ್ಚಾದರೆ ಉಪಾಸನೆಯು ಭಾವಪೂರ್ಣವಾಗಿ ಆಗುತ್ತದೆ. ಭಾವಪೂರ್ಣವಾಗಿ ಮಾಡುವ ಉಪಾಸನೆಯು ಹೆಚ್ಚು ಲಾಭದಾಯಕವಾಗಿರುತ್ತದೆ. ಆದುದರಿಂದ ಈ ಗ್ರಂಥದಲ್ಲಿ ಇತರ ಕಡೆಗಳಲ್ಲಿ ಎಲ್ಲಿಯೂ ಉಪಲಬ್ಧವಿಲ್ಲದ, ಅಧ್ಯಾತ್ಮಶಾಸ್ತ್ರದ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ.

ಶಿವನ ಕೆಲವು ಹೆಸರುಗಳು ಮತ್ತು ಗಂಗೆ, ಮೂರನೆಯ ಕಣ್ಣು, ನಾಗ, ಭಸ್ಮ, ರುದ್ರಾಕ್ಷಿ ಮುಂತಾದ ಶಿವನ ವೈಶಿಷ್ಟ್ಯಗಳ ಆಧ್ಯಾತ್ಮಿಕ ಅರ್ಥ; ಮಹಾತಪಸ್ವಿ, ಭೂತಗಳ ಸ್ವಾಮಿ, ವಿಶ್ವದ ಉತ್ಪತ್ತಿ ಮಾಡುವವನು ಇಂತಹ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಕಾರ್ಯ; ರುದ್ರ, ಕಾಲಭೈರವ, ನಟರಾಜ ಇತ್ಯಾದಿ ರೂಪಗಳು; ಜ್ಯೋತಿರ್ಲಿಂಗ ಮುಂತಾದವುಗಳ ತಾತ್ತ್ವಿಕ ಮಾಹಿತಿ; ಭಸ್ಮವನ್ನು ಹಚ್ಚಿಕೊಳ್ಳುವುದು, ನಂದಿಯ ಕೊಂಬುಗಳ ಮೂಲಕ ಶಿವಲಿಂಗದ ದರ್ಶನ ಪಡೆಯುವುದು, ಶಿವನಿಗೆ ಬಿಲ್ವ ಮತ್ತು ಅಕ್ಷತೆ ಅರ್ಪಿಸುವುದು; ಆದರೆ ಅರಿಶಿನ-ಕುಂಕುಮ ಅರ್ಪಿಸದಿರುವುದು, ಮುಂತಾದ ಉಪಾಸನೆಗೆ ಸಂಬಂಧಿಸಿದ ಪ್ರಾಯೋಗಿಕ ಮಾಹಿತಿಯನ್ನೂ ಶಾಸ್ತ್ರಸಹಿತ ನೀಡಲಾಗಿದೆ. ಶೃಂಗದರ್ಶನ, ಶಿವನಿಗೆ ಬಿಲ್ವವನ್ನು ಅರ್ಪಿಸುವುದು, ಅಭಿಷೇಕ ಮಾಡುವುದು ಮುಂತಾದವುಗಳ ಸಮಯದಲ್ಲಿ ಸೂಕ್ಷ್ಮದಲ್ಲಿ ನಿರ್ದಿಷ್ಟವಾಗಿ ಏನು ನಡೆಯುತ್ತದೆ ಎಂದು ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಇದನ್ನು ತಿಳಿದುಕೊಳ್ಳುವ ಕ್ಷಮತೆಯಿರುವ ಸನಾತನದ ಸಾಧಕರು ಮಾಡಿದ ‘ಸೂಕ್ಷ್ಮಜ್ಞಾನದ ಪರೀಕ್ಷಣೆ’ ಮತ್ತು ತೆಗೆದಿರುವ ‘ಸೂಕ್ಷ್ಮಜ್ಞಾನದ ಚಿತ್ರ’ಗಳು ಈ ಗ್ರಂಥದ ಒಂದು ವೈಶಿಷ್ಟ್ಯವಾಗಿದೆ.

ಶಿವನ ಬಗೆಗಿನ ಈ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯು ಶಿವಭಕ್ತರಿಗೆ ಹಾಗೂ ಶಿವನ ಸಾಂಪ್ರದಾಯಿಕ ಸಾಧನೆಯನ್ನು ಮಾಡುವವರಿಗೆ ಖಂಡಿತವಾಗಿಯೂ ಉಪಯುಕ್ತವಾಗುವುದು; ಆದರೆ ಸಾಮಾನ್ಯ ವ್ಯಕ್ತಿಯು ಮುಂದಿನ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವರಿಗೆ ರಾಮಾಯಣವನ್ನು ಓದಿದ ಮೇಲೆ ಶ್ರೀರಾಮನ, ಶ್ರೀಗಣಪತಿ ಅಥರ್ವಶೀರ್ಷವನ್ನು ಓದಿದ ಮೇಲೆ ಶ್ರೀಗಣಪತಿಯ ಮತ್ತು ದೇವೀಮಹಾತ್ಮೆಯನ್ನು ಓದಿದ ಮೇಲೆ ದೇವಿಯ ಉಪಾಸನೆಯನ್ನು ಮಾಡಬೇಕೆಂದು ಅನಿಸುತ್ತದೆ. ಅದರಂತೆ ಈ ಪುಸ್ತಕದಲ್ಲಿನ ಮಾಹಿತಿಯನ್ನು ಓದಿ ಕೆಲವರಿಗೆ ಶಿವನ ಉಪಾಸನೆಯನ್ನು ಮಾಡಬೇಕೆಂದು ಅನಿಸಬಹುದು. ಇಂತಹ ವ್ಯಕ್ತಿಗಳು ಗಮನದಲ್ಲಿಡಬೇಕಾದ ವಿಷಯವೇನೆಂದರೆ ಈ ರೀತಿಯ ಉಪಾಸನೆಯಿಂದ ಎಲ್ಲರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗಲಾರದು; ಏಕೆಂದರೆ ಶಿವನ ಉಪಾಸನೆ ಮಾಡುವುದು ಅವರಿಗೆ ಅವಶ್ಯಕವಾಗಿದ್ದರೆ ಮಾತ್ರ ಅದರಿಂದ ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತದೆ. ಇಲ್ಲವಾದರೆ ಬಹಳಷ್ಟು ಸಾಧನೆಯನ್ನು ಮಾಡಿಯೂ ಹೆಚ್ಚು ಉನ್ನತಿಯಾಗಲಾರದು. ಶಿವನ ಉಪಾಸನೆಯು ಮುಂದಿನ ಹಂತದ ಉಪಾಸನೆಯಾಗಿದೆ. ಅದು ಆವಶ್ಯಕವಾಗಿದೆಯೋ ಅಥವಾ ಇಲ್ಲವೋ ಎಂಬುದು ಸಾಮಾನ್ಯ ವ್ಯಕ್ತಿಗೆ ತಿಳಿಯುವುದಿಲ್ಲ. ಅದು ಆಧ್ಯಾತ್ಮಿಕ ಉನ್ನತಿ ಹೊಂದಿದವರಿಗೆ ಮಾತ್ರ ತಿಳಿಯುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಯು ಈ ಗ್ರಂಥವನ್ನು ಮಾಹಿತಿಗಾಗಿ ಮಾತ್ರ ಓದಬೇಕು. ಮುಂದೆ ಶಿವನ ಅನುಭೂತಿಯು ಬರಲು ಸಾಧನೆಯ ಮೊದಲನೆಯ ಹಂತವೆಂದು ತಮ್ಮ ಕುಲದೇವತೆಯ ಹೆಸರನ್ನು ‘ಶ್ರೀ.... (ಕುಲದೇವ/ಕುಲದೇವಿಯ ಹೆಸರಿಗೆ ಚತುರ್ಥಿ ವಿಭಕ್ತಿಯ ಪ್ರತ್ಯಯವನ್ನು ಹಾಕಿ) ... ನಮಃ|’ ಈ ಪದ್ಧತಿಯಲ್ಲಿ (ಉದಾ.ಕುಲದೇವಿಯು ಭವಾನಿಯಾಗಿದ್ದರೆ ‘ಶ್ರೀ ಭವಾನೀದೇವ್ಯೈ ನಮಃ’ ಎಂದು) ಜಪಿಸಬೇಕು. ಮುಂದೆ ಗುರುಗಳು ಶಿವನ ಜಪವನ್ನು ಮಾಡಲು ಹೇಳಿದರೆ, ಶಿವನ ಬಗ್ಗೆ ವಿಶ್ವಾಸ ಹೆಚ್ಚಾಗಲು ಈ ಮಾಹಿತಿಯು ಉಪಯೋಗಕ್ಕೆ ಬರಬಹುದು. ಇತರರಿಗೆ ಈ ಪುಸ್ತಕದಲ್ಲಿನ ಮಾಹಿತಿಯನ್ನು ಓದಿ ಶಿವನ ಬಗ್ಗೆ ಹೊಸ ವಿಷಯಗಳು ತಿಳಿದವು ಎಂದೆನಿಸಬಹುದು.

ಶಿವನ ಉಪಾಸಕರ ಶಿವನ ಮೇಲಿನ ಶ್ರದ್ಧೆಯು ಈ ಗ್ರಂಥವನ್ನು ಓದಿ ದೃಢವಾಗಲಿ ಮತ್ತು ಅವರಿಗೆ ಇನ್ನೂ ಹೆಚ್ಚು ಸಾಧನೆಯನ್ನು ಮಾಡಲು ಪ್ರೇರಣೆಯು ಸಿಗಲೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

ಗ್ರಂಥದಲ್ಲಿರುವ ವಿಷಯಗಳ ಪರಿವಿಡಿಯನ್ನು ಡೌನಲೋಡ್ ಮಾಡಿಕೊಳ್ಳಿ - ಶಿವ ಗ್ರಂಥ ಪರಿವಿಡಿ

ಇತರ ವಿಷಯಗಳು
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
© Sanatan Sanstha - All Rights Reser
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು? ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ? ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ? ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು? ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

Original Post from: http://dharmagranth.blogspot.in/2012/11/blog-post_6767.html
© Sanatan Sanstha - All Rights Reserved
Dharma Granth

ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ

ಮೂರ್ತಿವಿಜ್ಞಾನ

ಪ್ರತಿಯೊಂದು ದೇವತೆ ಎಂದರೆ ಒಂದು ತತ್ತ್ವವಾಗಿದೆ. ಈ ತತ್ತ್ವವು ಎಲ್ಲ ಯುಗಗಳಲ್ಲಿ ಇದ್ದೇ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಿರುವ ಸಗುಣರೂಪದಲ್ಲಿ ಪ್ರಕಟವಾಗುತ್ತದೆ. ಉದಾ. ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಮಾನವನು ಕಾಲಕ್ಕನುಸಾರ ದೇವತೆಗಳನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ.

ಶಿವನ ಮೂರ್ತಿಯಲ್ಲಿ ಕಾಲಕ್ಕನುಸಾರ ಮುಂದೆ ಕೊಟ್ಟಿರುವಂತೆ ಬದಲಾವಣೆಯಾಗುತ್ತಾ ಹೋಯಿತು. ಈ ವಿಷಯವನ್ನು ಓದುವಾಗ ‘ಶಿವನು ಲಯದ ದೇವತೆಯಾಗಿರುವಾಗ ಶಿವನ ಶಿಶ್ನ, ನಂದಿ, ಲಿಂಗ-ಭಗ ರೂಪದಲ್ಲಿನ ಶಿವಲಿಂಗ ಮುಂತಾದ ಉತ್ಪತ್ತಿಯ ಸಂದರ್ಭದಲ್ಲಿನ ಮೂರ್ತಿಗಳನ್ನು ಏಕೆ ತಯಾರಿಸಲಾಯಿತು’ ಎಂಬ ಪ್ರಶ್ನೆಯು ಯಾರಿಗಾದರೂ ಬರುವ ಸಾಧ್ಯತೆಯಿದೆ. ಅದರ ಉತ್ತರವು ಹೀಗಿದೆ - ಶೈವ ಸಂಪ್ರದಾಯಕ್ಕನುಸಾರ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಸ್ಥಿತಿಗಳ ದೇವರು ಶಿವನೇ ಆಗಿದ್ದಾನೆ. ತ್ರಿಮೂರ್ತಿ ಸಂಕಲ್ಪನೆಯಲ್ಲಿ (ದತ್ತ ಸಂಪ್ರದಾಯದಲ್ಲಿ) ಶಿವನು ಕೇವಲ ಲಯದ ದೇವತೆಯಾಗಿದ್ದಾನೆ. ಮನಃಶಾಸ್ತ್ರದ ದೃಷ್ಟಿಯಿಂದಲೂ ಉತ್ಪತ್ತಿ ಮತ್ತು ಸ್ಥಿತಿಗೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಹೆಚ್ಚಿನ ಜನರಿಗೆ ಸುಲಭವಾಗುತ್ತದೆ ಮತ್ತು ಲಯಕ್ಕೆ ಸಂಬಂಧಿಸಿದ ಉಪಾಸನೆಯನ್ನು ಮಾಡುವುದು ಕಠಿಣವಾಗುತ್ತದೆ. ಆದುದರಿಂದ ಶೈವ ಸಂಪ್ರದಾಯದಲ್ಲಿ ಶಿವನು ಉತ್ಪತ್ತಿಗೂ ಸಂಬಂಧಿಸಿದ್ದಾನೆ.’

ಪಿಂಡರೂಪ (ಲಿಂಗರೂಪ)

‘ಭಗ’ದ ಪ್ರತೀಕವಾಗಿರುವ ‘ಪಾಣಿಪೀಠ’ ಮತ್ತು ಲಿಂಗದ ಪ್ರತೀಕವಾಗಿರುವ ‘ಲಿಂಗ’ ಇವೆರಡೂ ಸೇರಿ ಶಿವಲಿಂಗವು ತಯಾರಾಯಿತು. ಭೂಮಿ ಎಂದರೆ ಸೃಜನ ಮತ್ತು ಶಿವ ಎಂದರೆ ಪಾವಿತ್ರ್ಯ, ಹೀಗೆ ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದರೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀರ್ಯದಿಂದ) ಆಗದೇ ಶಿವನ ಸಂಕಲ್ಪದಿಂದಾಯಿತು. ಈ ರೀತಿ ಶಿವ-ಪಾರ್ವತಿಯರು ಜಗತ್ತಿನ ತಂದೆ-ತಾಯಿಯಾಗಿದ್ದಾರೆ. ಕನಿಷ್ಕನ ಮಗನಾದ ಹುಇಷ್ಕನು ಎರಡನೆಯ ಶತಮಾನದಿಂದ ಶಿವಲಿಂಗ ಪೂಜೆಯನ್ನು ಪ್ರಾರಂಭಿ ಸಿದನು. ಶಕ್ತಿ ಇಲ್ಲದೇ ಶಿವನು ಏನೂ ಮಾಡಲಾರನು; ಆದುದರಿಂದ ಶಿವನ ಜೊತೆಯಲ್ಲಿ ಶಕ್ತಿಯ ಪೂಜೆಯು ಪ್ರಾರಂಭವಾಯಿತು. ಪಿಂಡರೂಪದಲ್ಲಿರುವ ಶಿವಲಿಂಗವು ಇಂಧನಶಕ್ತಿಯ ಪ್ರತೀಕವಾಗಿದೆ. ಇತ್ತೀಚಿನ ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತೆಯೇ ಇರುತ್ತದೆ.

ಶಿವಲಿಂಗದ ವಿಧಗಳನ್ನು ಈ ಕೊಂಡಿಯಲ್ಲಿ ಓದಿ.

ಲಿಂಗ

ಅ. ಲಿಂಗವೆಂದರೆ ಯಾವುದಾದರೊಂದು ವಸ್ತುವಿನ ಅಥವಾ ಭಾವನೆಯ ಚಿಹ್ನೆ ಅಥವಾ ಪ್ರತೀಕ. ಮೇದಿನಿಕೋಶದಲ್ಲಿ ಲಿಂಗ ಶಬ್ದದ ಅರ್ಥವನ್ನು ಮುಂದಿನಂತೆ ಹೇಳಲಾಗಿದೆ.
ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾವಪಿ |
ಶಿವಮೂರ್ತಿವಿಶೇಷೇ ಚ ಮೆಹನೇಪಿ ನಪುಂಸಕಮ್ ||
ಅರ್ಥ: ಲಿಂಗ ಶಬ್ದವು ಚಿಹ್ನೆ, ಅನುಮಾನ, ಸಾಂಖ್ಯಶಾಸ್ತ್ರದಲ್ಲಿನ ಪ್ರಕೃತಿ, ಶಿವಮೂರ್ತಿ ವಿಶೇಷ ಮತ್ತು ಶಿಶ್ನ ಎಂಬ ಅರ್ಥಗಳಲ್ಲಿದ್ದು ಅದು ನಪುಂಸಕವಾಗಿದೆ; ಆದರೆ ಸಾಮಾನ್ಯವಾಗಿ ಲಿಂಗ ಎಂಬ ಶಬ್ದವನ್ನು ‘ಶಿವನ ಪ್ರತೀಕ’ವೆಂದೇ ಅರ್ಥೈಸಲಾಗುತ್ತದೆ.
ಆ. ಪ್ರಳಯಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗುತ್ತದೆ ಮತ್ತು ಸೃಷ್ಟಿಕಾಲದಲ್ಲಿ ಮತ್ತೆ ಅದರಿಂದಲೇ ಸಾಕಾರವಾಗುತ್ತದೆ; ಆದುದರಿಂದ ಅದನ್ನು ಲಿಂಗ ಎನ್ನಲಾಗಿದೆ.
ಇ. ಮಹಾಲಿಂಗಕ್ಕೆ ಮೂರು ಕಣ್ಣುಗಳಿರುತ್ತವೆ. ಅವು ಉತ್ಪತ್ತಿ, ಸ್ಥಿತಿ ಮತ್ತು ಲಯ, ಹಾಗೆಯೇ ತಮ (ವಿಸ್ಫುಟಿತ), ರಜ (ತಿರ್ಯಕ್), ಸತ್ತ್ವ (ಸಮ್ಯಕ್) ಲಹರಿಗಳ ಸಂಕೇತವಾಗಿವೆ.

ಪಾಣಿಪೀಠ (ಲಿಂಗವೇದಿಕೆ)

ಭೂಮಿಯು ದಕ್ಷಪ್ರಜಾಪತಿಯ ಮೊದಲನೆಯ ಕನ್ಯೆಯಾಗಿದ್ದಾಳೆ. ಅದಿತಿ, ಉತ್ತಾನಪಾದಾ, ಮಹೀ ಮತ್ತು ಪಾಣಿಪೀಠವು ಅವಳ ರೂಪ ಗಳಾಗಿವೆ. ಪಾಣೀಪೀಠದ ಮೂಲ ಹೆಸರು ಸುವರ್ಣಶಂಖಿನಿಯಾಗಿದೆ. ಏಕೆಂದರೆ ಶಂಖದ (ಮತ್ತು ಕವಡೆಯ) ಆಕಾರವು ಸ್ತ್ರೀಯ ಸೃಜನೇಂದ್ರಿಯದಂತಿರುತ್ತದೆ. ಪಾಣಿಪೀಠದ ಪೂಜೆಯು ಮಾತೃದೇವತೆಯ ಪೂಜೆಯೇ ಆಗಿದೆ. ಪಾಣಿಪೀಠದ ಒಳಭಾಗದಲ್ಲಿ ಕೆತ್ತಿರುವ ರೇಖೆಗಳು ಮಹತ್ವದ್ದಾಗಿರುತ್ತವೆ. ಅವುಗಳಿಂದ ಲಿಂಗದಲ್ಲಿ ನಿರ್ಮಾಣವಾಗುವ ಸಾತ್ತ್ವಿಕ ಶಕ್ತಿಯು ಲಿಂಗದಲ್ಲಿ ಮತ್ತು ಗರ್ಭಗುಡಿಯಲ್ಲಿಯೇ ಸುತ್ತುತ್ತಲಿರುತ್ತದೆ ಮತ್ತು ವಿನಾಶಕರ ತಮಪ್ರಧಾನ ಶಕ್ತಿಯು ಪಾಣಿಪೀಠದ ಹರಿನಾಳದಿಂದ (ಅಭಿಷೇಕದ ನೀರು ಹೋಗುವ ದಾರಿ) ಹೊರಗೆ ಹೋಗುತ್ತದೆ.


ಅ.ಸುತ್ತಳತೆಗನುಸಾರ ಪಾಣಿಪೀಠದ ವಿಧಗಳು
೧. ಲಿಂಗದ ಸುತ್ತಳತೆಯ ಮೂರು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಅಧಮ.
೨. ಲಿಂಗದ ಸುತ್ತಳತೆಯ ಒಂದೂವರೆ ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಮಧ್ಯಮ.
೩. ಲಿಂಗದ ಸುತ್ತಳತೆಯ ನಾಲ್ಕು ಪಟ್ಟು ಸುತ್ತಳತೆ ಇರುವ ಪಾಣಿಪೀಠವು ಉತ್ತಮ.

ಆ. ಎತ್ತರ: ಪಾಣಿಪೀಠದ ಎತ್ತರವು ಲಿಂಗದ ವಿಷ್ಣುಭಾಗದಷ್ಟಿರಬೇಕು.

ಇ. ಆಕಾರ: ಪಾಣಿಪೀಠಕ್ಕೆ ೪, ೬, ೮, ೧೨ ಅಥವಾ ೧೬ ಕೋನಗಳನ್ನು ಮಾಡಬಹುದು. ಆದರೆ ಪಾಣಿಪೀಠವು ಹೆಚ್ಚಾಗಿ ವೃತ್ತಾ ಕಾರವೇ ಆಗಿರುತ್ತದೆ.
ಪಾಣಿಪೀಠವು ಉತ್ತರಮುಖಿಯಾಗಿದ್ದರೆ, ಅದರ ಆಕಾರವು ಕೆಳಗಿನ ಆಕೃತಿಯಲ್ಲಿ ತೋರಿಸಿದಂತಾಗುತ್ತದೆ.


ಈ. ವೀರ್ಯಾಣು ಮತ್ತು ಸುವರ್ಣಕಾಂತಿಮಯ ಅಧಃಶಾಯಿ (ಗರ್ಭದಲ್ಲಿ ಪ್ರವೇಶಿಸುವ ಜೀವ) ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಹೀಗೆಯೇ ಕಾಣಿಸುತ್ತವೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಮಕರ ಸಂಕ್ರಾಂತಿ


ಅ. ತಿಥಿ : ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿ ಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿ ಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ.

ಆ. ಇತಿಹಾಸ: ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

ಇ. ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ: ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ.

ಈ. ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸತ್ತ್ವ, ರಜ ಮತ್ತು ತಮ ಎಂದರೇನು?



ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ.

ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು.

  • ‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತಿ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ - ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ. 
  • ‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ.
  • ‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ.

ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು
  • ನಾವು ಪ್ರಸಂಗಗಳನ್ನು ಎದುರಿಸುವ ಬಗೆ
  • ನಾವು ತೆಗೆದುಕೊಳ್ಳುವ ನಿರ್ಧಾರಗಳು
  • ನಮ್ಮ ಆಯ್ಕೆಗಳು
  • ನಮ್ಮ ಜೀವನ ಶೈಲಿ
ಮುಂತಾದವುಗಳನ್ನು ನಿರ್ಧರಿಸುತ್ತದೆ.

ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ.

ಆಂಗ್ಲಭಾಷೆಯಲ್ಲಿ ಇನ್ನೂ ವಿವರವಾಗಿ ಇಲ್ಲಿ ಓದಿ.

ಈ ಜಾಲತಾಣದಲ್ಲಿರುವ ಇನ್ನೂ ಹಲವಾರು ಆಧ್ಯಾತ್ಮಿಕ ಶಬ್ದಗಳ ಭಾವಾರ್ಥವನ್ನು ಇಲ್ಲಿ ಓದಿ.

ಗ್ರಂಥ ಪರಿಚಯ - ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ

ಮನೋಗತ
ಹಿಂದಿನ ಕಾಲದಲ್ಲಿ ಸ್ತ್ರೀಯರು ಸ್ನಾನವನ್ನು ಮಾಡುವುದಕ್ಕಿಂತ ಮೊದಲು ಸೀರಣಿಗೆಯ ಪೆಟ್ಟಿಗೆಯ ಮುಂದೆ ಕುಳಿತುಕೊಂಡು ತಲೆಬಾಚಿಕೊಳ್ಳುತ್ತಿದ್ದರು, ಬಾಚಣಿಕೆ (ಸೀರಣಿಗೆ) ಯಲ್ಲಿ ಬಂದ ಕೂದಲುಗಳನ್ನು ಒಲೆಯಲ್ಲಿ ಹಾಕಿ ಸುಡುತ್ತಿದ್ದರು ಮತ್ತು ಕೂದಲುಗಳನ್ನು ಹಾಗೆ ಬಿಟ್ಟುಕೊಂಡು ಹೊರಗೆ ಹೋಗುತ್ತಿರಲಿಲ್ಲ. ಕೂದಲಿಗೆ ಸಂಬಂಧಿಸಿದ ಇಂತಹ ಸಂಸ್ಕಾರಗಳು (ಆಚಾರ) ತಾಯಿ ಅಥವಾ ಅಜ್ಜಿಯಿಂದ ಹೆಣ್ಣುಮಕ್ಕಳ ಮೇಲೆ ಆಗುತ್ತಿತ್ತು. ಪ್ರತಿ ತಿಂಗಳು ಹುಡುಗರನ್ನೂ ಕೂದಲು ಕತ್ತರಿಸಿಕೊಂಡು ಬರಲು ಕ್ಷೌರಿಕನ ಬಳಿ ಕಳುಹಿಸುತ್ತಿದ್ದರು. ಸ್ನಾನದ ನಂತರ ಕೂದಲಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಎಂಬುದೂ ತಂದೆಯಿಂದ ಮಗನಿಗೆ ಕಲಿಯಲು ಸಿಗುತ್ತಿತ್ತು. ಮಧ್ಯದ ಕಾಲದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿಂದಾಗಿ ಕ್ರಮೇಣ ಹಿಂದೂಗಳು ಧಾರ್ಮಿಕ ಆಚಾರ ಮತ್ತು ಪರಂಪರೆಗಳನ್ನು ಬಿಡತೊಡಗಿದರು ಅಥವಾ ಅವುಗಳ ಬಗ್ಗೆ ಅನಾಸಕ್ತಿ ಉಂಟಾಗತೊಡಗಿತು. ಇದರಿಂದ ಹಿಂದೂ ಸಮಾಜಕ್ಕೆ ಸಾಂಸ್ಕೃತಿಕ ಸ್ತರದಲ್ಲಿ ಹಾನಿಯಂತೂ ಆಯಿತು; ಆದರೆ ಅದಕ್ಕಿಂತ ಹೆಚ್ಚು ಹಾನಿ ಆಧ್ಯಾತ್ಮಿಕ ಸ್ತರದಲ್ಲಾಯಿತು.

ಮಾನವನ ಶರೀರದಲ್ಲಿ ನಿಸರ್ಗವು ನಿರ್ಮಿಸಿದ ಕೂದಲುಗಳ ವ್ಯವಸ್ಥೆಯು ಕೇವಲ ಸೌಂದರ್ಯವರ್ಧನೆಗಾಗಿ ಮಾತ್ರ ಇಲ್ಲ, ಅವುಗಳ ಮೂಲಕ ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮತ್ತು ಜೀವದ ಸಾತ್ತ್ವಿಕತೆಯನ್ನು ಹೆಚ್ಚಿಸುವುದಕ್ಕಾಗಿಯೂ ಇದೆ. ಈ ಗ್ರಂಥದಲ್ಲಿ ಕೂದಲುಗಳ ಆರೋಗ್ಯವು ಚೆನ್ನಾಗಿರಲು ಯಾವ ಆಹಾರವನ್ನು ಸೇವಿಸಬೇಕು, ಯಾವ ವ್ಯಾಯಾಮಗಳನ್ನು ಮಾಡಬೇಕು ಮುಂತಾದ ವಿಷಯಗಳ ಮಾಹಿತಿಯನ್ನು ಕೊಡುವುದ ರೊಂದಿಗೆ, ಕೂದಲುಗಳ ಮುಖಾಂತರ ಈಶ್ವರೀ ಚೈತನ್ಯವು ಗ್ರಹಿಸಲ್ಪಟ್ಟು ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆ ಹೇಗಾಗುತ್ತದೆ ಎಂಬ ಶಾಸ್ತ್ರೀಯ ಮಾಹಿತಿಯನ್ನು ಸಹ ನೀಡಲಾಗಿದೆ.

ಈಗ ಸಮಾಜದಲ್ಲಿನ ಹೆಚ್ಚಿನ ಸ್ತ್ರೀಪುರುಷರ ಕೇಶಾಲಂಕಾರದ ಕಡೆಗೆ ನೋಡುವ ದೃಷ್ಟಿಕೋನವು ಕೇವಲ ಸೌಂದರ್ಯವರ್ಧನೆಗಾಗಿಯೇ ಇದೆ. ಇಲ್ಲಿಯೇ ಅಪಾಯವು ಪ್ರಾರಂಭವಾಗುತ್ತದೆ. ಸ್ತ್ರೀಯರು ಕೂದಲುಗಳನ್ನು ಕತ್ತರಿಸಿಕೊಳ್ಳುವುದು, ಕೂದಲನ್ನು ಬಾಚಿಕೊಳ್ಳದೆ ಹಾಗೆ ಬಿಟ್ಟು ತಿರುಗಾಡುವುದು ಮುಂತಾದ ಕೃತಿಗಳು ಸೌಂದರ್ಯವರ್ಧನೆಯ ದೃಷ್ಟಿಯಿಂದ ಜೀವಕ್ಕೆ ಒಳ್ಳೆಯದೆನಿಸಿದರೂ, ಅವುಗಳ ಮುಖಾಂತರ ಕೆಟ್ಟ ಶಕ್ತಿಗಳಿಗೆ ಆಕ್ರಮಣ ಮಾಡಲು ನಾವಾಗಿ ಆಹ್ವಾನ ಮಾಡಿದಂತಾಗುತ್ತದೆ. ಕೂದಲುಗಳ ಬಗ್ಗೆ ಇಂತಹ ಅಹಿತಕಾರಿ ಕೃತಿಗಳನ್ನು ಮಾಡದೇ, ಕೂದಲುಗಳನ್ನು ಬಾಚಿಕೊಳ್ಳುವಾಗ ಕೆಳಗೆ ಬಿದ್ದ ಕೂದಲುಗಳನ್ನು ಎರಡು ದಿನಗಳ ನಂತರ ಹೊರಗೆ ಬಿಸಾಡುವುದು, ರಾಸಾಯನಿಕ ಕೇಶರಕ್ಷಕದಿಂದ (ಶ್ಯಾಂಪೂವಿನಿಂದ) ತಲೆಸ್ನಾನ ಮಾಡದೇ, ಆಯುರ್ವೇದೀಯ ಘಟಕಗಳಿಂದ ಅಥವಾ ಆಯುರ್ವೇದೀಯ ಸಾಬೂನಿನಿಂದ ತಲೆಸ್ನಾನ ಮಾಡುವುದು ಮುಂತಾದ ಯೋಗ್ಯ ಕೃತಿಗಳ ಬಗ್ಗೆ ಈ ಗ್ರಂಥದಲ್ಲಿ ಮಾರ್ಗದರ್ಶನವನ್ನು ಮಾಡಲಾಗಿದೆ.

ಸ್ತ್ರೀಪುರುಷರ ಶರೀರದ ಅವಿಭಾಜ್ಯ ಅಂಗವಾಗಿರುವ ಕೂದಲುಗಳ ಬಗ್ಗೆ ವಾಚಕರಿಗೆ ಆಧ್ಯಾತ್ಮಿಕ ದೃಷ್ಟಿಕೋನವು ದೊರೆತು ಅವರಿಂದ ಈ ಗ್ರಂಥದಲ್ಲಿ ಹೇಳಲಾಗಿರುವ ಆಚಾರಗಳ ಪಾಲನೆಯಾಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

ಸನಾತನ ಸಂಸ್ಥೆಯು ನಿರ್ಮಿಸಿದ ಈ ಗ್ರಂಥದ ಪರಿವಿಡಿ ಡೌನಲೋಡ್ ಮಾಡಿಕೊಳ್ಳಿ. - ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ

ಜ್ಯೋತಿರ್ಲಿಂಗಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹದಿಮೂರನೆಯ ಪಿಂಡಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡವೆಂದರೆ (ದೇಹವೆಂದರೆ) ಕಾಲಪಿಂಡ. ಹನ್ನೆರಡು ಜ್ಯೋತಿರ್ಲಿಂಗಗಳು ಮುಂದಿನಂತಿವೆ.


ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡು (ನೇಪಾಳ) ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ.

ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳ ಮಹತ್ವ
ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು ಸಾತ್ತ್ವಿಕ ಲಹರಿಗಳ ಪ್ರಮಾಣವು ಹೆಚ್ಚಿರುತ್ತದೆ. ಹೇಗೆ ಸಂತರ ಸಮಾಧಿಯು ಭೂಮಿಯ ಕೆಳಗಿರುತ್ತದೆಯೋ, ಹಾಗೆಯೇ ಜ್ಯೋತಿರ್ಲಿಂಗಗಳು ಮತ್ತು ಸ್ವಯಂಭೂ ಶಿವಲಿಂಗಗಳು ಭೂಮಿಯ ಕೆಳಗಿರುತ್ತವೆ. ಈ ಶಿವಲಿಂಗಗಳಲ್ಲಿ ಇತರ ಶಿವಲಿಂಗಗಳ ತುಲನೆಯಲ್ಲಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿರುವುದರಿಂದ ಅವುಗಳಿಂದ ಚೈತನ್ಯ ಮತ್ತು ಸಾತ್ತ್ವಿಕತೆಯು ಹೆಚ್ಚು ಪ್ರಮಾಣದಲ್ಲಿ ಮತ್ತು ಸತತವಾಗಿ ಪ್ರಕ್ಷೇಪಿಸುತ್ತಿರುತ್ತದೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಸತತವಾಗಿ ಶುದ್ಧವಾಗುತ್ತಿರುತ್ತದೆ, ಅದರೊಂದಿಗೆ ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳಿಂದ ಪಾತಾಳದ ದಿಕ್ಕಿನಲ್ಲಿಯೂ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯ ಪ್ರಕ್ಷೇಪಣೆಯಾಗಿ ಪಾತಾಳ ದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಅವರ ಯುದ್ಧವು ಸತತವಾಗಿ ನಡೆಯುತ್ತಿರುತ್ತದೆ. ಇದರಿಂದ ಪಾತಾಳದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳ ಹಲ್ಲೆಯಿಂದ ಭೂಲೋಕದ ರಕ್ಷಣೆಯಾಗುತ್ತದೆ.

ವೈಶಿಷ್ಟ್ಯಗಳು
ರುದ್ರಾಕ್ಷದ ಮಂತ್ರಸಿದ್ಧಿಗಾಗಿ ಗುಣ ಹಾಗೂ ಶಕ್ತಿಗೆ ತಕ್ಕಂತೆ ಯೋಗ್ಯ ಗುಣಗಳುಳ್ಳ ಜ್ಯೋತಿರ್ಲಿಂಗವನ್ನು ಆರಿಸಿಕೊಂಡು ಆ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಬೇಕು. ಉದಾಹರಣೆಗೆ ಮಹಾಕಾಳನು ತಾಮಸಶಕ್ತಿಯಿಂದ ಯುಕ್ತನಾಗಿದ್ದಾನೆ, ನಾಗನಾಥನು ಹರಿಹರ ಸ್ವರೂಪನಾಗಿದ್ದು ಸತ್ತ್ವ ಹಾಗೂ ತಮೋಗುಣ ಪ್ರಧಾನನಾಗಿದ್ದಾನೆ, ತ್ರ್ಯಂಬಕೇಶ್ವರನು ತ್ರಿಗುಣಾತ್ಮಕ (ಅವಧೂತ) ನಾಗಿದ್ದಾನೆ ಮತ್ತು ಸೋಮನಾಥನು ರೋಗಮುಕ್ತಿಗಾಗಿ ಯೋಗ್ಯನಾಗಿದ್ದಾನೆ.

ಜ್ಯೋತಿರ್ಲಿಂಗದ ಅರ್ಥ
೧. ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ
೨. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.
೩. ಶಿವಲಿಂಗದ ಹನ್ನೆರಡು ಖಂಡಗಳು
೪. ಪಾಣಿಪೀಠವು ಯಜ್ಞವೇದಿಕೆಯ ಮತ್ತು ಲಿಂಗವು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ, ಅಂದರೆ ಯಜ್ಞಶಿಖೆಯ ಪ್ರತೀಕವಾಗಿದೆ.
೫. ದ್ವಾದಶ ಆದಿತ್ಯರ ಪ್ರತೀಕಗಳು
೬. ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕ ಸ್ಥಾನಗಳು

ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮನು ಶಂಕರನ ಅಧಿಪತ್ಯದಲ್ಲಿರುವುದರಿಂದ ದಕ್ಷಿಣ ದಿಕ್ಕು ಶಂಕರನ ದಿಕ್ಕಾಗುತ್ತದೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖಿಯಾಗಿರುತ್ತವೆ, ಅಂದರೆ ಜ್ಯೋತಿರ್ಲಿಂಗಗಳ ಪಾಣಿಪೀಠದ ಹರಿನಾಳವು ದಕ್ಷಿಣ ದಿಕ್ಕಿಗಿರುತ್ತದೆ. ಬಹುತೇಕ ಮಂದಿರಗಳು ದಕ್ಷಿಣಾಭಿಮುಖವಾಗಿರುವುದಿಲ್ಲ. ಪಾಣಿಪೀಠವು ದಕ್ಷಿಣಾಭಿಮುಖವಾಗಿದ್ದರೆ ಆ ಲಿಂಗವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹರಿನಾಳವು ಉತ್ತರ ದಿಕ್ಕಿಗಿದ್ದರೆ ಆ ಲಿಂಗವು ಕಡಿಮೆ ಶಕ್ತಿಶಾಲಿಯಾಗಿರುತ್ತದೆ.

(ಸನಾತನ ಸಂಸ್ಥೆಯ "ಶಿವ" ಗ್ರಂಥವನ್ನು ಓದಿರಿ.)

ಇತರ ವಿಷಯಗಳು
ಮಹಾಶಿವರಾತ್ರಿ
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಮೂಗುತಿ ಧರಿಸುವುದರಿಂದಾಗುವ ಲಾಭಗಳು


೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’

೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’

ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.

  • ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ.

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳನ್ನು ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
Dharma Granth

ಮಹಾಶಿವರಾತ್ರಿ

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ|’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಶಿವನ ಜನ್ಮವು ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಆಗಿದೆ.

ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು?
ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣ ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.

ವ್ರತವನ್ನಾಚರಿಸುವ ಪದ್ಧತಿ
ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.

ವ್ರತದ ವಿಧಿ
ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಂದು ಹೊತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು.

ಯಾಮಪೂಜೆ
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವು ಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು.

೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಇತರ ವಿಷಯಗಳು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ವಾಹನವನ್ನು ದೃಷ್ಟಿ ತಗಲುವುದರಿಂದ ಹೇಗೆ ರಕ್ಷಿಸುವುದು?

ವಾಹನ ಮತ್ತು ವಾಹನದಲ್ಲಿನ ವ್ಯಕ್ತಿಗಳು ಬಾಧಿತರಾಗುವ ಕಾರಣಗಳು ಮತ್ತು ಅದರ ಪರಿಣಾಮ
೧. ವಾಹನದಲ್ಲಿ ಪ್ರವಾಸ ಮಾಡುವಾಗ ಅದು ಅನೇಕ ಸ್ಥಳಗಳಲ್ಲಿನ ರಜ-ತಮಾತ್ಮಕ ವಾಯುಮಂಡಲದಿಂದ ಹೋಗುತ್ತಿರುತ್ತದೆ. ಈ ವಾಯುಮಂಡಲದಲ್ಲಿನ ತ್ರಾಸದಾಯಕ ಲಹರಿಗಳಿಂದ ಕೇವಲ ವಾಹನವಷ್ಟೇ ಅಲ್ಲದೇ, ವಾಹನದಲ್ಲಿನ ವ್ಯಕ್ತಿಗಳೂ ತೊಂದರೆಗೀಡಾಗುತ್ತಾರೆ.
೨. ಈ ಪ್ರಕ್ರಿಯೆಯಲ್ಲಿ ವಾಹನವು ರಜ-ತಮಾತ್ಮಕ ಲಹರಿಗಳಿಂದ ಬಾಧಿತವಾಗುವುದರಿಂದ ವಾಹನವು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಆ. ವಾಹನಕ್ಕೆ ದೃಷ್ಟಿ ತಗಲಬಾರದೆಂದು ಮಾಡಬೇಕಾದ ಉಪಾಯಗಳು - ವಾಹನದಲ್ಲಿ ಮೆಣಸಿನಕಾಯಿ-ಲಿಂಬೆಯನ್ನು ನೇತಾಡಿಸುವುದು ಅಥವಾ ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸುವುದು: ವಾಹನವು ರಜ-ತಮಾತ್ಮಕ ದೋಷಗಳಿಂದ ಮುಕ್ತ ವಾಗಬೇಕೆಂದು ಅದರಲ್ಲಿ ಚಾಲಕನ ಆಸನದ ಎದುರಿನ ಗಾಜಿನ ಬದಿಗೆ (ಮಧ್ಯಭಾಗಕ್ಕೆ ಬರುವಂತೆ) ಕಪ್ಪು ಗೊಂಬೆಯನ್ನು ತಲೆಕೆಳಗೆ ಮಾಡಿ ನೇತಾಡಿಸಬೇಕು ಅಥವಾ ಮೆಣಸಿನಕಾಯಿ ಮತ್ತು ಲಿಂಬೆಯನ್ನು ದಾರದಲ್ಲಿ ಪೋಣಿಸಿ (ಚಿತ್ರ ನೋಡಿ) ನೇತಾಡಿಸಬೇಕು.


೧. ಪ್ರಕ್ರಿಯೆ: ಕಪ್ಪು ಗೊಂಬೆ, ಮೆಣಸಿನಕಾಯಿ ಅಥವಾ ಲಿಂಬೆಕಾಯಿಯಲ್ಲಿನ ರಜ- ತಮಾತ್ಮಕ ಸ್ಪಂದನಗಳು ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸಿಕೊಳ್ಳುವ ಮಾಧ್ಯಮಗಳಾಗಿವೆ.
೨. ಘಟಕಗಳ ಮಿತಿ: ವಾಹನದಲ್ಲಿ ಒಂದೆರಡು ದಿನ ಪ್ರವಾಸ ಮಾಡಿದರೆ ಈ ಘಟಕಗಳನ್ನು ವಿಸರ್ಜನೆ ಮಾಡಿ ಅವುಗಳ ಬದಲಿಗೆ ಹೊಸ ಘಟಕಗಳನ್ನು ಹಾಕಬೇಕು, ಇಲ್ಲವಾದರೆ ಈ ಘಟಕಗಳಲ್ಲಿ ಘನಿಭವಿಸಿದ ರಜ-ತಮಾತ್ಮಕ ಸ್ಪಂದನಗಳ ತೊಂದರೆಯಾಗಿ ವಾಹನದ ಮೇಲೆ ಮತ್ತು ವಾಹನದಲ್ಲಿನ ವ್ಯಕ್ತಿಗಳ ಮೇಲೆ ತ್ರಾಸದಾಯಕ ಸ್ಪಂದನಗಳ ಆವರಣವು ಬರಬಹುದು ಮತ್ತು ವಾಯುಮಂಡಲವು ಅಶುದ್ಧವಾಗುವ ಸಾಧ್ಯತೆಯಿರುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜ್ಯೇಷ್ಠ ಶುಕ್ಲ ೧೦, ಕಲಿಯುಗ ವರ್ಷ ೫೧೧೧ ೨.೬.೨೦೦೯ ಮಧ್ಯಾಹ್ನ ೩.೨೬)

ವಾಹನದ ದೃಷ್ಟಿಯನ್ನು ತೆಗೆಯುವುದು
೧. ಪ್ರವಾಸದಲ್ಲಿ ಕೆಟ್ಟ ಶಕ್ತಿಗಳು ತೊಂದರೆ ಕೊಡಬಾರದೆಂದು ಪ್ರವಾಸಕ್ಕೆ ಹೊರಡುವ ಮೊದಲೇ ವಾಹನದ ದೃಷ್ಟಿಯನ್ನು ತೆಗೆಯಬೇಕು : ವಾಹನದಲ್ಲಿ ಪ್ರವಾಸ ಮಾಡುವಾಗ ಕೆಟ್ಟ ಶಕ್ತಿಗಳು ವಾಹನವನ್ನು ಹಾಳುಮಾಡಿ ಅಥವಾ ಅಪಘಾತವನ್ನು ಮಾಡಿ ಆಡಚಣೆಗಳನ್ನು ತರುವ ಸಾಧ್ಯತೆಗಳಿರುತ್ತವೆ. ಆದುದರಿಂದ ಯಾವುದೇ ಶುಭಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವಾಗ ವಾಹನದ ದೃಷ್ಟಿಯನ್ನು ತೆಗೆಯಬೇಕು.

೨. ವಾಹನಕ್ಕೆ ದೃಷ್ಟಿ ತಗಲಿದ್ದರೆ ವಾಹನದ ದೃಷ್ಟಿಯನ್ನು ತೆಗೆಯಬೇಕು: ವಾಹನದಲ್ಲಿ ಸತತವಾಗಿ ಒಂದಲ್ಲ ಒಂದು ಕಾರಣದಿಂದ ತೊಂದರೆಗಳು ನಿರ್ಮಾಣ ವಾಗುವುದು, ಅಪಘಾತದ ಪ್ರಸಂಗಗಳು ಎದುರಾಗುವುದು, ವಾಹನದಲ್ಲಿ ಕುಳಿತ ನಂತರ ತಲೆ ಭಾರವಾಗುವುದು, ವಾಹನದಲ್ಲಿ ಪ್ರವಾಸ ಮಾಡಿ ಬಂದ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ವಾಹನಕ್ಕೆ ದೃಷ್ಟಿ ತಗಲಿದೆ ಎಂದು ತಿಳಿದುಕೊಳ್ಳಬೇಕು ಮತ್ತು ವಾಹನದ ದೃಷ್ಟಿಯನ್ನು ತೆಗೆಯಬೇಕು.

೩. ವಾಹನದ ದೃಷ್ಟಿಯನ್ನು ತೆಗೆಯುವ ಪದ್ಧತಿ
ಅ. ಪ್ರವಾಸದಲ್ಲಿರುವಾಗ ವಾಹನದ ದೃಷ್ಟಿಯನ್ನು ತೆಗೆಯುವುದಿದ್ದರೆ ದಾರಿಯಲ್ಲಿ ಮಾರುತಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನವಿದ್ದರೆ ಅಥವಾ ಯಾವುದಾದರೊಂದು ಜಲಾಶಯವಿದ್ದರೆ ಅಲ್ಲಿ ದೃಷ್ಟಿಯನ್ನು ತೆಗೆಯಲು ವಾಹನವನ್ನು ನಿಲ್ಲಿಸಬೇಕು.

ಆ. ದೃಷ್ಟಿಯನ್ನು ತೆಗೆಯುವ ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು (ಬಾನೆಟ್) ತೆರೆದಿಡಬೇಕು. ವಾಹನದ ಮುಂದೆ ನಿಂತುಕೊಂಡು ವಾಹನದ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲಿನ ಮೇಲೆ ಒಡೆಯಬೇಕು ಅಥವಾ ತೆಂಗಿನಕಾಯಿಯನ್ನು ಜಲಾಶಯದಲ್ಲಿ ವಿಸರ್ಜಿಸಬೇಕು. ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ತ್ರಾಸದಾಯಕ ಸ್ಪಂದನಗಳು ದೇವತೆಯ ಕೃಪಾಶೀರ್ವಾದದಿಂದ ನಾಶವಾಗುತ್ತವೆ ಅಥವಾ ನೀರಿನಲ್ಲಿ ವಿಸರ್ಜನೆಯಾಗುತ್ತವೆ.

ಇ. ಹೆಚ್ಚಾಗಿ ದಾರಿಯಲ್ಲಿ ಮಾರುತಿಯ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳು ಅಥವಾ ಜಲಾಶಯಗಳು ಇರುವುದಿಲ್ಲ. ಇಂತಹ ಸಮಯದಲ್ಲಿ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ಆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯಬೇಕು. ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿನಿಂದ ನಾಲ್ಕೂ ದಿಕ್ಕುಗಳಿಗೆ ಎಸೆಯಬೇಕು. ದೃಷ್ಟಿತೆಗೆದ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಒಡೆಯುವುದರಿಂದ ತೆಂಗಿನಕಾಯಿಯಲ್ಲಿನ ತ್ರಾಸದಾಯಕ ಸ್ಪಂದನಗಳು ಭೂಮಿಯಲ್ಲಿ ವಿಸರ್ಜಿಸಲ್ಪಡುತ್ತವೆ.

ಈ. ದೃಷ್ಟಿಯನ್ನು ತೆಗೆದ ನಂತರ ವಾಹನಕ್ಕೆ ಊದುಬತ್ತಿಗಳಿಂದ ಬೆಳಗಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಬೇಕು. ಊದುಬತ್ತಿಗಳಿಂದ ಬೆಳಗುವುದರಿಂದ ಆ ಸ್ಥಳದ ಶುದ್ಧೀಕರಣವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ (ವಾಸ್ತು, ವಾಹನ ಮತ್ತು ಗಿಡಗಳಿಗೆ ದೃಷ್ಟಿ ತಗಲಬಾರದೆಂದು ಮಾಡುವ ಉಪಾಯಗಳೊಂದಿಗೆ)’)

ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು? ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು

ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ!

೧. ಎಚ್ಚರ : ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ !
ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ. ರವೆ ಅಥವಾ ಅಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಆ ನೀರಿನಲ್ಲಿ ರವೆ ಹಿಟ್ಟಿನ ಪುಡಿಯನ್ನು ಹಾಕಿದಾಗ ಅದಕ್ಕೆ ಗಾಢ ಕೆಂಪುಬಣ್ಣ ಬರುತ್ತದೆ. ಅದನ್ನು ತೆಗೆದು ಒಣಗಿಸಿದ ಮೇಲೆ ಅದರಿಂದ ಗುಲಾಲನ್ನು ತಯಾರಿಸುತ್ತಾರೆ. ಅಕ್ಕಿ, ರಂಗೋಲಿ ಪುಡಿ, ಆವೆ ಮಣ್ಣು ಇತ್ಯಾದಿಗಳ ಪರ್ಯಾಯವಾಗಿ ಅಗ್ಗವಾದ ಪದಾರ್ಥಗಳು ಉಪಯೋಗಿ ಸುತ್ತಾರೆ. ಇತ್ತೀಚೆಗೆ ಆರ್ಸೆನಿಕ್‌ನಂತಹ ರಾಸಾಯನಿಕ ದ್ರವ್ಯ ಮತ್ತು ಸೀಸ, ತಾಮ್ರ, ಹಿತ್ತಾಳೆಯಂತಹ ಜಡಧಾತುಗಳನ್ನೂ ಇದಕ್ಕಾಗಿ ಉಪಯೋಗಿಸುತ್ತಾರೆ.


೨. ರಾಸಾಯನಿಕ ಗುಲಾಲಿನ ದುಷ್ಪರಿಣಾಮಗಳು
ಅ. ರಾಸಾಯನಿಕ ದ್ರವ್ಯ ಅಥವಾ ಯಾವುದೇ ಜಡಧಾತುವಿನ ಅತ್ಯಂತ ಸಣ್ಣ ಕಣವು ಗುಲಾಲಿನಲ್ಲಿದ್ದರೆ ಅದರಿಂದ ಅಲರ್ಜಿ ಯಾಗಿ ಮೈಯಲ್ಲಿ ಗುಳ್ಳೆಗಳು ಬರುತ್ತದೆ.
ಆ. ಕಿವಿಯ ಹಿಂದೆ ಗುಲಾಲು ಉಳಿದಿದ್ದರೆ ಅಲ್ಲಿ ಬುರುಸು ಬಂದು ಕಿವಿಯ ಹಿಂದೆ ಗುಳ್ಳೆ ಬರುತ್ತದೆ.
ಇ. ಕೂದಲಿನಲ್ಲಿ ಗುಲಾಲು ಉಳಿದುಕೊಂಡರೆ ಕೂದಲುಗಳಲ್ಲಿ ಹೊಟ್ಟಾಗಿ ಕೂದಲು ಉದುರಲು ಆರಂಭವಾಗುತ್ತದೆ ಮತ್ತು ಕೂದಲಿಗೆ ಹೊಟ್ಟಾಗುವುದು ಇದು ಒಂದು ರೀತಿಯ ಚರ್ಮರೋಗವೇ ಆಗಿದೆ.
ಈ. ಗುಲಾಲು ಮೂಗಿನೊಳಗೆ ಹೋದರೆ ಮೂಗಿನಿಂದ ಸತತವಾಗಿ ನೀರು ಬರುತ್ತದೆ.
ಉ. ಮಕ್ಕಳು ಹೆಚ್ಚಾಗಿ ಗುಲಾಲಿನಿಂದ ಆಡುವುದರಿಂದ ಆ ಮಕ್ಕಳು ಸ್ವಚ್ಛವಾಗಿ ಸ್ನಾನವನ್ನು ಮಾಡುವುದಿಲ್ಲ ಮತ್ತು ಗುಲಾಲು ಮೈ ಮೇಲೆ ಸೂಕ್ಷ್ಮದ ರೀತಿಯಲ್ಲಿ ಅಂಟಿಕೊಂಡಿರುತ್ತದೆ. ಅದು ವಿಶೇಷವಾಗಿ ಕೂದಲು ಗಳಲ್ಲಿ ಅಂಟಿಕೊಂಡಿರುತ್ತದೆ. ಅದರಿಂದಾಗಿ ಕೂದಲುಗಳಲ್ಲಿ ಬುರುಸು ನಿರ್ಮಾಣವಾಗುತ್ತದೆ.-ಡಾ.ರೇಖಾ ಲಾಂಜೆವಾರ, ಚರ್ಮರೋಗತಜ್ಞ
ಊ. ಕಣ್ಣಿನೊಳಗೆ ಗುಲಾಲು ಹೋದರೆ ಕಣ್ಣುಗುಡ್ಡೆಯಲ್ಲಿ ಗೆರೆ ಅಥವಾ ಬಿಳಿ ಕಲೆ ನಿರ್ಮಾಣವಾಗಿ ಅದರಿಂದ ಕಣ್ಣಿಗೆ ಅಪಾಯವಾಗುತ್ತದೆ.
ಎ. ಗುಲಾಲಿನಲ್ಲಿ ರಂಗೋಲಿ ಮತ್ತು ಮಿಣುಕು ಬರುವುದಕ್ಕಾಗಿ ಅನೇಕ ಬಾರಿ ಗಾಜಿನ ತುಂಡುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಕಣ್ಣಿಗೆ ತೊಂದರೆ ಆಗುತ್ತದೆ.-ಡಾ.ಯೋಗೇಶ ಶಾಹ, ನೇತ್ರರೋಗತಜ್ಞ
ಐ. ಗುಲಾಲು ಹೊಟ್ಟೆಯಲ್ಲಿ ಹೋದರೆ ವಾಂತಿ ಮತ್ತು ಬೇಧಿಯಾಗುವ ಸಾಧ್ಯತೆ ಇರುತ್ತದೆ.
ಒ. ಗುಲಾಲು ಫುಫ್ಪುಸಕ್ಕೆ ಹೋದರೆ ಕಾಲಾಂತರದಲ್ಲಿ ಉಸಿರಾಟಕ್ಕೆ ಸಂಬಂಧಿತ ರೋಗಗಳು ಆಗುತ್ತವೆ.-ಡಾ.ಕಿರಣ ಆಂಬೇಕರ್

೩. ಕಣ್ಣಿನೊಳಗೆ ಗುಲಾಲು ಹೋದಾಗ ಮಾಡಬೇಕಾದ ಉಪಾಯೋಜನೆಗಳು
ಅ.ಕಣ್ಣುಗಳನ್ನು ಸ್ವಚ್ಛ ನೀರಿನಿಂದ ತೊಳೆ ಯಬೇಕು. ಸಾಧ್ಯವಿದ್ದಲ್ಲಿ ನೀರು ಜಂತು ಮುಕ್ತವಾಗಿರಬೇಕು (ಕುದಿಸಿ ಆರಿಸಿದ ನೀರು).
ಆ.ಯಾವುದೇ ಪರಿಸ್ಥಿತಿಯಲ್ಲಿ ಕಣ್ಣು ಗಳನ್ನು ಉಜ್ಜಬಾರದು ಮತ್ತು ಕೂಡಲೇ ಕಣ್ಣಿನ ವೈದ್ಯರ ಬಳಿ ಹೋಗಬೇಕು.
ರಾಸಾಯನಿಕ ಗುಲಾಲು ನಮ್ಮ ಮಕ್ಕಳಿಗಾಗಿ ಖರೀದಿಸಬೇಕಾ? ಇದರ ಬಗ್ಗೆ ಜಾಗರೂಕ ಗ್ರಾಹಕರೇ ವಿಚಾರ ಮಾಡಿ. - ಸೌ.ಮಾಲತಿ ಆಠವಲೆ, ಮುಂಬೈ ಗ್ರಾಹಕ ಪಂಚಾಯತ, ಗ್ರಾಹಕ ಭವನ, ವಿಲೆಪಾರ್ಲೆ(ಪಶ್ಚಿಮ), ಮುಂಬೈ (ದೈನಿಕ ಲೋಕಸತ್ತಾ, ೧೩.೩.೧೯೯೯)

(ಆಧಾರ : ಸಾಪ್ತಾಹಿಕ `ಸನಾತನ ಪ್ರಭಾತ` ಪತ್ರಿಕೆ)

ರುದ್ರಾಕ್ಷಿಧಾರಣೆ

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.

‘ರುದ್ರಾಕ್ಷ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ

‘ರುದ್ರಾಕ್ಷ’ ಎಂಬ ಶಬ್ದವು ‘ರುದ್ರ + ಅಕ್ಷ’ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ‘ರುದ್ರ’ ಶಬ್ದದ ವಿವಿಧ ಅರ್ಥಗಳನ್ನು ವಿಷಯ ‘೫ಅ.ರುದ್ರ’ ಇದರಲ್ಲಿ ಕೊಡಲಾಗಿದೆ. ‘ಅಕ್ಷ’ ಶಬ್ದದ ಕೆಲವು ಅರ್ಥಗಳ ಆಧಾರದ ಮೇಲೆ ‘ರುದ್ರಾಕ್ಷ’ ಶಬ್ದಕ್ಕೆ ಮುಂದಿನ ಅರ್ಥಗಳಿವೆ -

೧. ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ (ಉದಾ.ಮೂರನೆಯ ಕಣ್ಣು). ಅಕ್ಷ ಎಂದರೆ ಅಕ್ಷ ರೇಖೆ. ಕಣ್ಣು ಒಂದೇ ಅಕ್ಷರೇಖೆಯ ಸುತ್ತಲೂ ತಿರುಗುತ್ತದೆ; ಆದುದರಿಂದ ಅದಕ್ಕೆ ಅಕ್ಷ ಎನ್ನುತ್ತಾರೆ.

೨. ರುದ್ರ ಎಂದರೆ ಅಳುಮುಖದವನು. ‘ಅ’ ಎಂದರೆ ತೆಗೆದುಕೊಳ್ಳುವುದು ಮತ್ತು ‘ಕ್ಷ’ ಎಂದರೆ ಕೊಡುವುದು; ಅಕ್ಷವೆಂದರೆ ತೆಗೆದುಕೊಳ್ಳುವ ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ಅಳುವವನಿಂದ ಅವನ ದುಃಖವನ್ನು ತೆಗೆದುಕೊಳ್ಳುವ ಹಾಗೂ ಅವನಿಗೆ ಸುಖವನ್ನು ಕೊಡುವ ಕ್ಷಮತೆಯಿರುವವನು.

ರುದ್ರವೃಕ್ಷ (ರುಧಿರವೃಕ್ಷ, ರುದ್ರಾಕ್ಷವೃಕ್ಷ)

ತಾರಕಪುತ್ರರು ಅಧರ್ಮಾಚರಣೆಯಲ್ಲಿ ತೊಡಗಿದರೆಂಬ ವಿಷಾದದಿಂದ ಶಂಕರನ ಕಣ್ಣುಗಳಿಂದ ಕೆಳಗೆ ಬಿದ್ದ ಅಶ್ರುಗಳಿಂದ ‘ರುದ್ರಾಕ್ಷವೃಕ್ಷ’ವು ತಯಾರಾಗುವುದು ಮತ್ತು ಶಿವನು ತಾರಕ ಪುತ್ರರನ್ನು ನಾಶಗೊಳಿಸುವುದು: ತಾಡಿನ್‌ಮಾಲಿ, ತಾರಕಾಕ್ಷ ಮತ್ತು ಕಮಲಾಕ್ಷ ಎಂಬ ತಾರಕ ಪುತ್ರರು ಧರ್ಮಾಚರಣೆ ಮತ್ತು ಶಿವಭಕ್ತಿಯನ್ನು ಮಾಡಿ ದೇವತ್ವವನ್ನು ಪ್ರಾಪ್ತಿ ಮಾಡಿಕೊಂಡರು. ಕೆಲವು ಸಮಯದ ನಂತರ ಮತ್ತೆ ಅವರು ಅಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದುದನ್ನು ನೋಡಿ ಶಂಕರನು ವಿಷಾದಗ್ರಸ್ತನಾದನು. ಅವನ ನೇತ್ರಗಳು ಅಶ್ರುಗಳಿಂದ ತುಂಬಿದವು. ಅವನ ನೇತ್ರದಿಂದ ನಾಲ್ಕು ಹನಿಗಳು ಪೃಥ್ವಿಯ ಮೇಲೆ ಬಿದ್ದವು. ಆ ಅಶ್ರುಗಳಿಂದ ಹುಟ್ಟಿದ ವೃಕ್ಷಗಳಿಗೆ ‘ರುದ್ರಾಕ್ಷವೃಕ್ಷ’ ಎನ್ನುತ್ತಾರೆ. ಆ ನಾಲ್ಕು ವೃಕ್ಷಗಳಿಂದ ಕೆಂಪು, ಕಪ್ಪು, ಹಳದಿ ಮತ್ತು ಬಿಳಿ ರುದ್ರಾಕ್ಷಗಳು ನಿರ್ಮಾಣವಾದವು. ಅನಂತರ ಶಿವನು ತಾರಕಪುತ್ರರನ್ನು ನಾಶ ಗೊಳಿಸಿದನು. - ಗುರುದೇವ ಡಾ.ಕಾಟೇಸ್ವಾಮೀಜಿ (೩೦)

ರುದ್ರವೃಕ್ಷದ ಸಾಮಾನ್ಯ ಮಾಹಿತಿ

ಇದು ಸಮುದ್ರದ ಮಟ್ಟದಿಂದ ಮೂರು ಸಾವಿರ ಮೀ. ಎತ್ತರದಲ್ಲಿ ಅಥವಾ ಮೂರು ಸಾವಿರ ಮೀ.ಸಮುದ್ರದಾಳದಲ್ಲಿ ದೊರಕುತ್ತದೆ. ರುದ್ರಾಕ್ಷಿಯ ಗಿಡಗಳು ತಗ್ಗುಪ್ರದೇಶದಲ್ಲಿ ಬೆಳೆಯುತ್ತವೆ, ಸಮತಟ್ಟು ಪ್ರದೇಶದಲ್ಲಿ ಬೆಳೆಯುವುದಿಲ್ಲ. ಈ ಗಿಡದ ಎಲೆಗಳು ಹುಣಸೆ ಮರದ ಅಥವಾ ಗುಲಗಂಜಿಯ ಎಲೆಯಂತೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಈ ಗಿಡಗಳಿಗೆ ಒಂದು ವರ್ಷದಲ್ಲಿ ಒಂದರಿಂದ ಎರಡು ಸಾವಿರ ಹಣ್ಣುಗಳು ಬಿಡುತ್ತವೆ. ಹಿಮಾಲಯದಲ್ಲಿರುವ ಯತಿಗಳು ಕೇವಲ ರುದ್ರಾಕ್ಷಿಫಲಗಳನ್ನೇ ತಿನ್ನುತ್ತಾರೆ. ಈ ಫಲಕ್ಕೆ ಅಮೃತಫಲ ಎಂದೂ ಕರೆಯುತ್ತಾರೆ. ಇವುಗಳನ್ನು ತಿಂದರೆ ಬಾಯಾರಿಕೆಯಾಗುವುದಿಲ್ಲ.

ರುದ್ರಾಕ್ಷಿ (ರುದ್ರಾಕ್ಷಿ ಹಣ್ಣುಗಳು)

ರುದ್ರಾಕ್ಷದ ಹಣ್ಣುಗಳು ಗಿಡದ ಮೇಲೆ ಹಣ್ಣಾಗಿ ಚಳಿಗಾಲದಲ್ಲಿ ಕೆಳಗೆ ಬೀಳುತ್ತವೆ. ಅನಂತರ ಒಳಗಿನ ಬೀಜಗಳು ಒಣಗುತ್ತವೆ. ಒಂದು ಹಣ್ಣಿನಲ್ಲಿ ೧೫-೧೬ ಬೀಜಗಳು (ರುದ್ರಾಕ್ಷಿಗಳು) ಇರುತ್ತವೆ. ಹಣ್ಣಿನಲ್ಲಿ ಬೀಜಗಳು ಹೆಚ್ಚಿಗೆ ಇದ್ದರೆ, ಬೀಜಗಳ ಆಕಾರವು ಕಡಿಮೆಯಿರುತ್ತದೆ ಮತ್ತು ಅವುಗಳ ಬೆಲೆಯೂ ಕಡಿಮೆಯಿರುತ್ತದೆ. ಚಿಕ್ಕ ರುದ್ರಾಕ್ಷಿಗಳನ್ನು ಬಿಡಿಬಿಡಿಯಾಗಿ ಬಳಸದೆ ಒಂದು ಮಾಲೆಯಲ್ಲಿ ಪೋಣಿಸುತ್ತಾರೆ ಮತ್ತು ಅವುಗಳೊಂದಿಗೆ ಒಂದು ದೊಡ್ಡ ರುದ್ರಾಕ್ಷಿಯನ್ನೂ ಪೋಣಿಸುತ್ತಾರೆ. ರುದ್ರಾಕ್ಷಿಗೆ ಮೊದಲಿನಿಂದಲೇ ಒಂದು ರಂಧ್ರವಿರುತ್ತದೆ, ಅದನ್ನು ಮಾಡಬೇಕಾಗುವುದಿಲ್ಲ. ಆ ರಂಧ್ರಕ್ಕೆ ವಾಹಿನಿ ಎನ್ನುತ್ತಾರೆ. ರುದ್ರಾಕ್ಷಿಯ ಬಣ್ಣವು ನಸುಗೆಂಪಾಗಿರುತ್ತದೆ. ಅದರ ಆಕಾರವು ಮೀನಿನಂತೆ ಚಪ್ಪಟೆಯಾಗಿರುತ್ತದೆ. ಅದರ ಮೇಲೆ ಹಳದಿ ಬಣ್ಣದ ಪಟ್ಟೆಗಳಿರುತ್ತವೆ. ಅದರ ಒಂದು ಬದಿಯಲ್ಲಿ ತೆರೆದಿರುವಂತೆ ಬಾಯಿ ಇರುತ್ತದೆ.


೧೦ ಮುಖಕ್ಕಿಂತ ಹೆಚ್ಚು ಮುಖಗಳಿರುವ ರುದ್ರಾಕ್ಷಿಗಳಿಗೆ ‘ಮಹಾರುದ್ರ’ ಎಂದು ಹೇಳುತ್ತಾರೆ. - ಯೋಗತಜ್ಞ ಪ.ಪೂ.ದಾದಾಜಿ ವೈಶಂಪಾಯನ (ಜೇಷ್ಠ ಶು.೫, ಕಲಿಯುಗ ವರ್ಷ ೫೧೧೧ ೨೯.೫.೨೦೦೯)



(ರುದ್ರಾಕ್ಷಿಯ ವೈಶಿಷ್ಟ್ಯಗಳು, ರುದ್ರಾಕ್ಷಿಯ ಕಾರ್ಯ, ರುದ್ರಾಕ್ಷಿಯ ಲಾಭಗಳು, ನಿಜವಾದ ರುದ್ರಾಕ್ಷಿ ಮತ್ತು ನಕಲಿ ರುದ್ರಾಕ್ಷಿಯ ವ್ಯತ್ಯಾಸ, ಎಷ್ಟು ರುದ್ರಾಕ್ಷಿಗಳನ್ನು ಧರಿಸಬೇಕು? ಎಷ್ಟು ಮುಖಗಳಿರುವ ರುದ್ರಾಕ್ಷಿ ಧರಿಸಬೇಕು ಮತ್ತು ಅದರ ಫಲವೇನು? ಮುಂತಾದ ಅನೇಕ ಮಾಹಿತಿಗಾಗಿ ಸನಾತನ ಸಂಸ್ಥೆಯ "ಶಿವ" ಗ್ರಂಥವನ್ನು ಓದಿರಿ.)

ಇತರ ವಿಷಯಗಳು
ಮಹಾಶಿವರಾತ್ರಿ
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ಬಿಲ್ವಪತ್ರೆ 


    ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|
    ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್|| - ಬಿಲ್ವಾಷ್ಟಕ, ಶ್ಲೋಕ ೧   
ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.

ಶಿವನಿಗೆ ತ್ರಿದಳ ಬಿಲ್ವವನ್ನು ಅರ್ಪಿಸುವುದರ ಹಿಂದಿನ ಮನಃಶಾಸ್ತ್ರದ ಕಾರಣಗಳು

೧. ಸತ್ತ್ವ, ರಜ ಮತ್ತು ತಮಗಳಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಉತ್ಪನ್ನವಾಗುತ್ತವೆ. ಕುಮಾರಾವಸ್ಥೆ, ಯೌವನಾವಸ್ಥೆ ಮತ್ತು ವೃದ್ಧಾಪ್ಯ ಅವಸ್ಥೆ ಇವುಗಳ ಪ್ರತೀಕವೆಂದು ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಅಂದರೆ ಶಂಕರನಿಗೆ ಈ ಮೂರೂ ಅವಸ್ಥೆಗಳ ಆಚೆಗೆ ಹೋಗುವ ಇಚ್ಛೆಯನ್ನು ಪ್ರಕಟಿಸಬೇಕು; ಏಕೆಂದರೆ ತ್ರಿಗುಣಾತೀತವಾಗುವುದರಿಂದ ಈಶ್ವರನ ಭೇಟಿಯಾಗುತ್ತದೆ.

ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ಪದ್ಧತಿಯ ಹಿಂದಿನ ಅಧ್ಯಾತ್ಮಶಾಸ್ತ್ರ

೧. ತಾರಕ ಅಥವಾ ಮಾರಕ ಉಪಾಸನೆಯ ಪದ್ಧತಿಗನುಸಾರ ಬಿಲ್ವವನ್ನು ಹೇಗೆ ಅರ್ಪಿಸಬೇಕು?
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.

ಅ೧. ಶಿವನ ತಾರಕ ರೂಪದ ಉಪಾಸನೆಯನ್ನು ಮಾಡುವವರು
ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಶಿವನ ತಾರಕ ಉಪಾಸನೆಯು ಅವರ ಪ್ರಕೃತಿಗೆ ಹೊಂದು ವಂತಹ ಮತ್ತು ಅವರ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುತ್ತದೆ. ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. (ಬಿಲ್ವಂ ತು ನ್ಯುಬ್ಜಂ ಸ್ವಾಭಿಮುಖಾಗ್ರಂ ಚ|)

ಅ೨. ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುವವರು
ಶಾಕ್ತಪಂಥೀಯರು ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ.

ಅ. ಇಂತಹವರು ಶಿವನ ಮಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು.
ಆ. ಲಿಂಗದಲ್ಲಿ ಆಹತ (ಲಿಂಗದ ಮೇಲೆ ಬೀಳುವ ನೀರಿನ ಆಘಾತದಿಂದ ನಿರ್ಮಾಣವಾಗುವ) ನಾದದಲ್ಲಿನ ಪವಿತ್ರಕಗಳು ಮತ್ತು ಅನಾಹತ (ಸೂಕ್ಷ್ಮ) ನಾದದಲ್ಲಿನ ಪವಿತ್ರಕಗಳು ಹೀಗೆ ಎರಡು ವಿಧದ ಪವಿತ್ರಕಗಳಿರುತ್ತವೆ. ಈ ಎರಡು ರೀತಿಯ ಪವಿತ್ರಕಗಳನ್ನು ಮತ್ತು ಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯಲ್ಲಿನ ಪವಿತ್ರಕಗಳನ್ನು, ಹೀಗೆ ಮೂರು ರೀತಿಯ ಪವಿತ್ರಕಗಳನ್ನು ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆ ಬಿಲ್ವಪತ್ರೆಯು ಆಹತ (ನಾದ ಭಾಷೆ) ಮತ್ತು ಅನಾಹತ (ಪ್ರಕಾಶಭಾಷೆ) ಧ್ವನಿಗಳನ್ನು ಒಟ್ಟುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖ ವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಈ ಮೂರು ಪವಿತ್ರಕಗಳ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೨. ಬಿಲ್ವವನ್ನು ಅರ್ಪಿಸುವ ಪದ್ಧತಿಗನುಸಾರ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಿ ಶಿವತತ್ತ್ವದಿಂದಾಗುವ ಲಾಭ


ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ಶಿವಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡುವ ಪ್ರಮಾಣವು ಹೆಚ್ಚಿಗೆ ಇರುತ್ತದೆ. ಈ ಪದ್ಧತಿಯಿಂದ ಸಮಷ್ಟಿಗೆ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವಾಗ ನಾವು ಬಿಲ್ವದ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಲಿಂಗದ ಕಡೆಗೆ ಮಾಡಿ ಬಿಲ್ವವನ್ನು ಅರ್ಪಿಸುತ್ತೇವೆಯೋ, ಆಗ ತೊಟ್ಟಿನಿಂದ ಕೇವಲ ಬಿಲ್ವವನ್ನು ಅರ್ಪಿಸುವವನಿಗೆ ಮಾತ್ರ ಶಿವತತ್ತ್ವವು ಸಿಗುತ್ತದೆ. ಈ ಪದ್ಧತಿಯಿಂದ ವ್ಯಷ್ಟಿ ಸ್ತರದಲ್ಲಿ ಹೆಚ್ಚಿಗೆ ಲಾಭವಾಗುತ್ತದೆ.

ಬಿಲ್ವಪತ್ರೆಯನ್ನು ಕೆಳಮುಖವಾಗಿ ಏಕೆ ಅರ್ಪಿಸಬೇಕು?

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.
ಶಿವನಿಗೆ ತಾಜಾ ಬಿಲ್ವಪತ್ರೆ ಸಿಗದಿದ್ದರೆ ಹಿಂದಿನ ದಿನ ತೆಗೆದಿಟ್ಟ ಬಿಲ್ವಪತ್ರೆಯು ನಡೆಯುತ್ತದೆ, ಆದರೆ ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ.

ಬಿಲ್ವಾರ್ಚನೆ

‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.

ಆರೋಗ್ಯದ ದೃಷ್ಟಿಯಿಂದ ಬಿಲ್ವಪತ್ರೆಯ ಲಾಭಗಳು

೧. ಆಯುರ್ವೇದದಲ್ಲಿನ ಕಾಯಾಕಲ್ಪದಲ್ಲಿ ತ್ರಿದಲರಸಸೇವನೆಗೆ ಬಹಳ ಮಹತ್ವವನ್ನು ಕೊಡಲಾಗಿದೆ.
೨. ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ಯಾವುದಾದರೊಂದು ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವವನ್ನು ಉಪಯೋಗಿಸಬೇಕು. ಗರ್ಭವತಿ ಸ್ತ್ರೀಯರಿಗೆ ಮಾತ್ರ ಬಿಲ್ವವನ್ನು ಕೊಡಬಾರದು, ಏಕೆಂದರೆ ಅದನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆಯಿರುತ್ತದೆ.

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಶಿವನ ವಿಶ್ರಾಂತಿಯ ಕಾಲ ಎಂದರೇನು? 
Dharma Granth

ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?

ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ಇದರ ಬದಲು ನಾವು ಕಾಲುಗಳನ್ನು ತೊಳೆದುಕೊಂಡಾಗ ನಮ್ಮ ಕಾಲಿಗೆ ಅಂಟಿಕೊಂಡಿರುವ ಧೂಳಿನ ಕಣಗಳು ದೂರವಾಗುತ್ತವೆ. ಇದರಿಂದ ನಾವು ಸಾತ್ತ್ವಿಕ ಲಹರಿಗಳನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ರಜ-ತಮಾತ್ಮಕ ಲಹರಿಗಳ ಪ್ರಕ್ಷೇಪಣೆಯೂ ಕಡಿಮೆಯಾಗುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುವುದಿಲ್ಲ.

(ವಿವರವಾಗಿ ಓದಿ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ


ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಮ್ |

ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಮ್ |

ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಮ್
ವೀಣಾಭೇರಿಮೃದಂಗಕಾಹಲಕಲಾ ಗೀತಂ ಚ ನೃತ್ಯಂ ತಥಾ |

ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || ೪ ||

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |

ವಿಹಿತಮವಿಹಿತಂ ವಾ ಸರ್ವಮೇತತ್ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವಶಂಭೋ || ೫ ||

|| ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಾ ಶಿವಮಾನಸಪೂಜಾ ಸಮಾಪ್ತಾ ||

ಶ್ಲೋಕವನ್ನು ಹೇಗೆ ಪಠಿಸಬೇಕು ಎಂಬುದನ್ನು ಕೇಳಲು ಈ ಮರಾಠಿ ಜಾಲತಾಣವನ್ನು ನೋಡಿ - ಶಿವಮಾನಸಪೂಜಾ

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದು: ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ನಂದಿಯ ಕೊಂಬುಗಳಿಂದ ದರ್ಶನವನ್ನು ಪಡೆದುಕೊಳ್ಳದೇ ನೇರವಾಗಿ ಶಿವನ ದರ್ಶನವನ್ನು ಪಡೆದು ಕೊಂಡರೆ ತೇಜಲಹರಿಗಳ ಆಘಾತದಿಂದ ಶರೀರದಲ್ಲಿ ಉಷ್ಣತೆ ನಿರ್ಮಾಣವಾಗುವುದು, ತಲೆ ಭಾರವಾಗುವುದು, ಶರೀರ ಅಕಸ್ಮಾತ್ತಾಗಿ ಕಂಪಿಸುವುದು ಮುಂತಾದ ತೊಂದರೆಗಳಾಗಬಹುದು.

ಶೃಂಗದರ್ಶನದ ಮಹತ್ವವೇನು?
‘ಶೃಂಗದರ್ಶನ’ ಎಂದರೆ ನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ನೋಡುವುದು.

ಶೃಂಗದರ್ಶನದ ಯೋಗ್ಯ ಪದ್ಧತಿ
ವಾಮಹಸ್ತಿ ವೃಷಣ ಧರೋನಿ|
ತರ್ಜನಿ ಅಂಗುಷ್ಠ ಶೃಂಗೀ ಠೆವೋನಿ|| – ಶ್ರೀಗುರುಚರಿತ್ರೆ
ಅರ್ಥ: ೧. ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು.
೨. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು.
ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು.


ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು: ಶಿವಲಿಂಗದಿಂದ ಬರುವ ಶಕ್ತಿಶಾಲಿ ಸಾತ್ತ್ವಿಕ ಲಹರಿಗಳು ಮೊದಲು ನಂದಿಯ ಕಡೆಗೆ ಆಕರ್ಷಿತವಾಗಿ ನಂತರ ನಂದಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತವೆ. ನಂದಿಯ ವೈಶಿಷ್ಟ್ಯವೇನೆಂದರೆ ನಂದಿಯಿಂದ ಈ ಲಹರಿಗಳು ಆವಶ್ಯಕತೆಗನುಸಾರವಾಗಿಯೇ ಪ್ರಕ್ಷೇಪಿತವಾಗುತ್ತಿರುತ್ತವೆ. ಇದರಿಂದ ಶಿವಲಿಂಗದ ದರ್ಶನವನ್ನು ಪಡೆಯುವವರಿಗೆ ಲಹರಿಗಳು ಶಿವನಿಂದ ನೇರವಾಗಿ ಸಿಗುವುದಿಲ್ಲ; ಇದರಿಂದ ಅವರಿಗೆ ಶಿವನಿಂದ ಬರುವ ಶಕ್ತಿ ಶಾಲಿ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಸಂಗತಿಯೇನೆಂದರೆ ಶಿವನಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದ ಕಾರಣ ಆ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಆದುದರಿಂದ ಈ ಲಹರಿಗಳಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಗಳು ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತು ಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಗೆ ನಿಂತು ಕೊಳ್ಳಬೇಕು.
(ಈ ತತ್ತ್ವಕ್ಕನುಸಾರ ಶ್ರೀವಿಷ್ಣು ಇತ್ಯಾದಿ ದೇವತೆಗಳ ದೇವಸ್ಥಾನಗಳಲ್ಲಿ ದೇವತೆಯ ಮೂರ್ತಿ ಮತ್ತು ಅದರ ಎದುರಿನಲ್ಲಿರುವ ಆಮೆಯ ಪ್ರತಿಮೆಯ ನಡುವೆ ನಿಂತು ಕೊಂಡು/ಕುಳಿತುಕೊಂಡು ದರ್ಶನ ಪಡೆಯಬಾರದು. ದರ್ಶನ ಪಡೆಯಲು ಬಯಸುವವರು ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತುಕೊಂಡು ದರ್ಶನ ಪಡೆಯಬೇಕು.)

ಶೇ. ೫೦ ಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ಭಕ್ತರಲ್ಲಿ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಸಹಿಸುವ ಕ್ಷಮತೆಯಿರುತ್ತದೆ, ಆದುದರಿಂದ ಅವರಿಗೆ ಆ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಂತಹ ಭಕ್ತರು ದೇವತೆಯ ದರ್ಶನವನ್ನು ಎದುರಿನಿಂದಲೇ ಪಡೆದುಕೊಳ್ಳಬೇಕು. ಅವರಿಗೆ ದೇವತೆಗಳಿಂದ ಪ್ರಕ್ಷೇಪಿತವಾಗುವ ಲಹರಿಗಳನ್ನು ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. 

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವನ ವಿಶ್ರಾಂತಿಯ ಕಾಲ ಎಂದರೇನು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಘಂಟಾನಾದದ ಮಹತ್ವ

ಘಂಟೆಯ ಕೋಲು ಮತ್ತು ಘಂಟೆಯ ವಿಶಿಷ್ಟ ಆಕಾರದಿಂದಾಗಿ ಭೂಮಿಲಹರಿಗಳು ಘಂಟೆಯ ಕೋಲಿನತ್ತ ಆಕರ್ಷಿತವಾಗುತ್ತವೆ ಮತ್ತು ಈ ಭೂಮಿಲಹರಿಗಳು ಘಂಟೆಯ ವಿಶಿಷ್ಟ ಆಕಾರದಲ್ಲಿ ಘನೀಕರಣಗೊಳ್ಳುತ್ತವೆ. ಘಂಟೆಯ ನಾದವನ್ನು ಮಾಡಿದಾಗ ಘಂಟೆಯಲ್ಲಿ ಘನೀಕರಣವಾದ ವಾಯುಮಂಡಲದಲ್ಲಿನ ಲಹರಿಗಳು ಕಂಪನಗೊಳ್ಳುತ್ತವೆ ಮತ್ತು ಇದರಿಂದ ಉತ್ಪನ್ನವಾದ ನಾದ ಶಕ್ತಿಯ ಕಡೆಗೆ ಬ್ರಹ್ಮಾಂಡದಲ್ಲಿನ ಶಿವತತ್ತ್ವವು ಆಕರ್ಷಿತವಾಗುತ್ತದೆ. ಶಿವತತ್ತ್ವದೊಂದಿಗೆ ಸಂಬಂಧಿತ ಈ ರಜೋಗುಣಯುಕ್ತ ಮಾರಕ ನಾದಲಹರಿಗಳು ಪಾತಾಳದಿಂದ ಹರಡುವ ತೊಂದರೆದಾಯಕ ಲಹರಿಗಳಲ್ಲಿನ ರಜ-ತಮ ಕಣಗಳನ್ನು ವಿಘಟಿಸುತ್ತವೆ.

ಘಂಟೆಯ ನಾದದಿಂದ ಭೂಮಿಗೆ ಸಮೀಪದ ಅಧೋಗಾಮಿ ದಿಶೆಯಲ್ಲಿ ಕಾರ್ಯನಿರತವಾಗಿರುವ ವಾಯುಮಂಡಲದ ಶುದ್ಧೀಕರಣವಾಗುತ್ತದೆ. ಶಂಖನಾದದಿಂದ ಊರ್ಧ್ವದಿಶೆಯಲ್ಲಿ ಕಾರ್ಯಮಾಡುವ ವಾಯುಮಂಡಲದಲ್ಲಿನ ಲಹರಿಗಳ ಶುದ್ಧೀಕರಣವಾಗುತ್ತದೆ. ಆದುದರಿಂದ ಪೂಜಾವಿಧಿಯಲ್ಲಿ ಶಂಖನಾದಕ್ಕೆ ಹಾಗೂ ಘಂಟಾನಾದಕ್ಕೆ ಬಹಳ ಮಹತ್ವವಿದೆ. ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೫, ಮಧ್ಯಾಹ್ನ ೧.೪೩)

ಘಂಟೆಯ ನಾದ ಮಾಡುವಾಗ ಆಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ
ಅ. ಸೂಕ್ಷ್ಮಜ್ಞಾನದ ಚಿತ್ರದ ಸತ್ಯತೆ: ಶೇ.೮೦
ಆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಒಳ್ಳೆಯ ಸ್ಪಂದನಗಳು: ಶೇ.೨ - ಪ.ಪೂ.ಡಾ.ಆಠವಲೆ


ಇ. ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ: ಈಶ್ವರೀ ತತ್ತ್ವ ಶೇ.೧.೨೫, ಚೈತನ್ಯ (ಸಗುಣ-ನಿರ್ಗುಣ) ಶೇ.೨ ಮತ್ತು ಶಕ್ತಿ ಶೇ.೩.೨೫

ಈ.ಇತರ ಅಂಶಗಳು
೧. ಈಶ್ವರನ ಪೂಜೆಯಲ್ಲಿ ಆಕರ್ಷಿಸುವ ಸ್ಪಂದನಗಳು ನಿರ್ಗುಣ ಸ್ವರೂಪದಲ್ಲಿರುತ್ತವೆ. ಘಂಟೆಯ ನಾದದಿಂದಾಗಿ ದೇವತೆಯ ಈ ಸ್ಪಂದನಗಳು ಸಗುಣ-ನಿರ್ಗುಣ ಸ್ವರೂಪದಲ್ಲಿ ಬರುತ್ತವೆ ಮತ್ತು ಈ ಸ್ಪಂದನಗಳು ಭಕ್ತರಿಗೆ ದೊರಕುತ್ತವೆ.
೨. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ನಿರ್ಮಿಸಿದ ಕಪ್ಪು ಶಕ್ತಿಯ ಮೋಡಗಳು ಘಂಟೆಯ ನಾದದಿಂದ ದೂರವಾಗುತ್ತವೆ. ಹಾಗೆಯೇ ಸೂರ್ಯಪ್ರಕಾಶದಂತೆ ಚೈತನ್ಯದ ಕಿರಣವು ಭಕ್ತರೆಡೆಗೆ ಬರುತ್ತದೆ.
೩. ಘಂಟೆಯನ್ನು ಅಲುಗಾಡಿಸಿದುದರಿಂದ ವಾಯುತತ್ತ್ವ ಮತ್ತು ಅದರ ನಾದದಿಂದ ಆಕಾಶತತ್ತ್ವ ಕಾರ್ಯನಿರತವಾಗುತ್ತದೆ.
೪. ಘಂಟೆಯ ನಾದದಿಂದ ‘ಣಂ’ ಎಂಬ ಬೀಜಮಂತ್ರವು ಕೇಳಿಸುತ್ತದೆ.
೫. ವ್ಯಕ್ತಿಯು ಘಂಟೆಯನ್ನು ಭಾವಪೂರ್ಣವಾಗಿ ಬಾರಿಸಿದರೆ ಅದರಿಂದ ಸತ್ತ್ವಪ್ರಧಾನ ಸ್ಪಂದನಗಳು ಪ್ರಕ್ಷೇಪಿಸುತ್ತವೆ ಮತ್ತು ಭಾವಪೂರ್ಣವಾಗಿ ಬಾರಿಸದಿದ್ದರೆ ಸತ್ತ್ವ-ಪ್ರಧಾನ ಘಂಟೆಯಿಂದಲೂ ರಜೋಗುಣಿ ಸ್ಪಂದನಗಳು ಪ್ರಕ್ಷೇಪಿಸಬಹುದು.

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಕಿರುಗ್ರಂಥ 'ದೇವರಕೋಣೆ ಮತ್ತು ಪೂಜೆಯ ಉಪಕರಣಗಳು')

ಸಂಬಂಧಿತ ಲೇಖನಗಳು
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

ಶಿವನ ವಿಶ್ರಾಂತಿಯ ಕಾಲ ಎಂದರೇನು?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ ೪ ಪ್ರಹರಗಳು ಮತ್ತು ರಾತ್ರಿಯಲ್ಲಿ ೪ ಪ್ರಹರಗಳು ಹೀಗೆ ೨೪ ಗಂಟೆಗಳಲ್ಲಿ ಒಟ್ಟು ೮ ಪ್ರಹರಗಳಿವೆ. ಒಂದು ಪ್ರಹರವು ೩ ಗಂಟೆಯದ್ದಾಗಿದೆ.

ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ: ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ ೩೦ ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ. ೧೦೦ ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ. ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವತತ್ತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ. - ಬ್ರಹ್ಮತತ್ತ್ವ (ಓರ್ವ ಸಾಧಕಿಯ ಮಾಧ್ಯಮದಿಂದ)

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶಿವ')

ಇತರ ವಿಷಯಗಳು
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
Dharma Granth

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?

ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ (ಸೋಮನ ದಿಕ್ಕಿನ ಕಡೆಗೆ) ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಪ್ರದಕ್ಷಿಣೆಗಳನ್ನು ಹಾಕುವಾಗ ಎಡಬದಿಯಿಂದ ಹರಿನಾಳದವರೆಗೆ ಹೋಗಿ ಅದನ್ನು ದಾಟದೇ ಹಿಂತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಬಲಬದಿಗೆ ಹರಿನಾಳದವರೆಗೆ ಹೋಗಿ ಪ್ರದಕ್ಷಿಣೆಯನ್ನು ಮುಗಿಸಬೇಕು. ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.

ಪ್ರದಕ್ಷಿಣೆ ಹಾಕುವ ಮಾರ್ಗ


(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)

ಇತರ ವಿಷಯಗಳು
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
© Sanatan Sanstha - All Rights Reser
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು? ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ? ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ? ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು? ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

Original Post from: http://dharmagranth.blogspot.in/2012/11/blog-post_6767.html
© Sanatan Sanstha - All Rights Reserved
Dharma Granth

ಬಾದಾಮಿಯ ಶಕ್ತಿದೇವತೆ ಶ್ರೀ ಬನಶಂಕರಿ ದೇವಿ


ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಶ್ರೀ ಬಾದಾಮಿಯ ಶಾಕಾಂಭರಿ ಶಕ್ತಿ ಪೀಠವೂ ಒಂದಾಗಿದೆ. ಇವಳಿಗೆ ಬನಸಿರಿದೇವಿ, ಬನಶಂಕರಿ ಎಂದೂ ಕರೆಯುತ್ತಾರೆ. ಶ್ರೀ ಶಾಕಾಂಭರಿ ದೇವಿಯ ವಿವರವು ಸ್ಕಂದಪುರಾಣದಲ್ಲಿ ಬರುತ್ತದೆ. ಪದ್ಮಪುರಾಣದಲ್ಲಿಯೂ ಇದರ ವಿವರಣೆ ಇದೆ. ಬಾದಾಮಿ ಬನಶಂಕರಿ ದೇವತೆಯು ನಾಡಿನ ಜನತೆಯ ಆರಾಧ್ಯದೇವಿಯಾಗಿ, ಶಕ್ತಿದೇವತೆಯಾಗಿ, ವನದೇವತೆಯಾಗಿ ಭಕ್ತರ ಕಾಮಧೇನುವಾಗಿ ಅವರ ಕಷ್ಟಗಳನ್ನು ದೂರ ಮಾಡುವವಳಾಗಿದ್ದಾಳೆ. ಬನಶಂಕರಿ ಜಾತ್ರೆಯ ಪ್ರಯುಕ್ತ ದೇವಿಯ ಮಾಹಿತಿ ನೀಡುತ್ತಿದ್ದೇವೆ.

ಚರಿತ್ರೆ
ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು. ಶಿವ ಬ್ರಹ್ಮಾದಿ ದೇವತೆಗಳೆಲ್ಲ ಸೇರಿ ತ್ರಿಗುಣಾತ್ಮಿಕಾ ಸ್ವರೂಪಳಾದ ಬನಶಂಕರಿ ದೇವಿಯನ್ನು ಪ್ರಾರ್ಥಿಸಿದರು. ಪ್ರಾರ್ಥನೆಗೆ ಒಲಿದ ಶ್ರೀದೇವಿ ತನ್ನ ಶರೀರದಿಂದ ಉತ್ಪನ್ನವಾದ ಶಾಕಾಹಾರದಿಂದ ಸಕಲ ಜಗತ್ತನ್ನು ಕಾಪಾಡಿ ದಳು. ಅವಳ ಕೃಪೆಯಿಂದ ಬರ ನೀಗಿತು, ದಾಹ ತೀರಿತು, ಹಸಿವು ಇಂಗಿತು, ಜಲ ಸಂಪತ್ತಿನಿಂದ ಭೂದೇವಿ ಹಸಿರು ವರ್ಣ ತಾಳಿದಳು. ಎಲ್ಲ ಬನಗಳು ಹಸಿರು ವರ್ಣ ದಿಂದ ನಲಿದವು ಶ್ರೀ ದೇವಿ ಶಾಕಾಂಭರಿ ಎಂದು ಪ್ರಸಿದ್ಧಳಾದಳು.

ಬನಶಂಕರಿ ದೇವಿಯ ಜಾತ್ರೆ
ಪ್ರತೀವರ್ಷ ಶ್ರೀ ದೇವಿಯ ನವರಾತ್ರ್ಯುತ್ಸವವು ಪುಷ್ಯ ಮಾಸದ ಅಷ್ಟಮಿಯಂದು ಆರಂಭವಾಗಿ ಪೂರ್ಣಿಮೆಯಂದು(ಬನದ ಹುಣ್ಣಿಮೆಯಂದು) ರಥೋತ್ಸವದೊಂದಿಗೆ ಮುಕ್ತಾಯವಾಗುತ್ತದೆ.

ದೇವಿಯ ಮೂರ್ತಿ
ಶ್ರೀ ದೇವಿಯ ಮೂರ್ತಿಯು ಎಂಟು ಭುಜಗಳಿಂದ ಕೂಡಿದೆ, ಕೈಗಳಲ್ಲಿ ಹಿಡಿದ ಖಡ್ಗ, ಘಂಟೆ, ತ್ರಿಶೂಲ, ಲಿಪಿ ಮತ್ತು ಢಮರುಘ, ಢಾಲು, ರುಂಡ ಮತ್ತು ಅಮೃತಪಾತ್ರೆ ಇವು ದೇವಿಯ ಲೀಲೆಯನ್ನು ಸಾರುತ್ತವೆ. ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮಿ, ಶ್ರೀ ಮಹಾಸರಸ್ವತಿಯೆಂದು ಅವಳನ್ನು ಪೂಜಿಸುತ್ತಾರೆ.

ದೇವಿಯ ವಿವಿಧ ಪೂಜೆಗಳು
ಶ್ರೀದೇವಿ ದರ್ಶನ ಮಾಡಿಕೊಂಡು ಜ್ಞಾನ, ಶೌರ್ಯ ಹಾಗೂ ಐಶ್ವರ್ಯ ಪ್ರಾಪ್ತಿಗೆ ಅವಳ ಆರಾಧನೆ ಮಾಡಿ ಭಕ್ತರು ತಮ್ಮ ಜೀವನ ಸಾರ್ಥಕಮಾಡಿಕೊಳ್ಳುತ್ತಾರೆ. ಶ್ರಾವಣ ಮಾಸದ ಬಿಲ್ವಾರ್ಚನೆ, ಕಾರ್ತಿಕ ಮಾಸದ ದೀಪಾರಾಧನೆ ಮತ್ತು ನವರಾತ್ರಿ ದಸರಾ ಉತ್ಸವದಲ್ಲಿ ದೇವಿಗೆ ವಿಶೇಷ ಉತ್ಸವವು ನಡೆಯುತ್ತದೆ. ಪ್ರತಿ ಹುಣ್ಣಿಮೆಯ ದಿನ ದೇವಿಗೆ ಅಭ್ಯಂಜನ, ಪಂಚಾಮೃ ತಾಭಿಷೇಕ, ಸಕೃತಾವರ್ತನ, ರುದ್ರಾಭಿಷೇಕಗಳು ವಿಶೇಷವಾಗಿ ನಡೆಯುತ್ತವೆ.

ರಥೋತ್ಸವ
ಶ್ರೀ ದೇವಿಯ ರಥೋತ್ಸವವು ಪುಷ್ಯ ಮಾಸದ ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ನಡೆಯುತ್ತದೆ. ಶಾಕಾಂಭರಿಗೆ (ಶುದ್ಧ) ಚತುರ್ದಶಿಯಂದು ಪಲ್ಲೇದ ಹಬ್ಬ ಅಚರಿಸುತ್ತಾರೆ. ದೇವಿಗೆ ಹಬ್ಬದಲ್ಲಿ ೧೦೮ ಪಲ್ಲೇದ ನೈವೇದ್ಯ ಮಾಡುತ್ತಾರೆ. ವಿವಿಧ ಜನಾಂಗದವರು ಸೇರಿ ಅದ್ಧೂರಿಯಿಂದ ಜಾತ್ರೆ ಮಾಡುತ್ತಾರೆ.
- ಶ್ರೀ.ಗದಾಧರ ಪೂಜಾರ, ಚೊಳಚಗುಡ್ಡ

ಪ್ರಾಯಶ್ಚಿತ್ತದ ನಿಜವಾದ ಅರ್ಥ

ರಾಜಾ ಪರೀಕ್ಷಿತ: ಪ್ರಾಯಶ್ಚಿತ್ತ, ರಾಜದಂಡ ಮತ್ತು ನರಕಕ್ಕೆ ಹೋಗಿಯೂ ಜನರು ಪುನಃ ಪುನಃ ಪಾಪ ಕೃತ್ಯಗಳನ್ನೇಕೆ ಮಾಡುತ್ತಾರೆ?
ಶುಕದೇವ: ಕರ್ಮಗಳ ಮೂಲಕ ಕರ್ಮಗಳ ಮೂಲ ಬೀಜವು ನಾಶವಾಗುವುದಿಲ್ಲ, ಏಕೆಂದರೆ ಕರ್ಮಗಳ ಮೂಲವು ಅಜ್ಞಾನದಲ್ಲಿ ಇರುತ್ತದೆ. ಅಜ್ಞಾನವಿರುವವರೆಗೆ ಪಾಪವಾಸನೆಯು ಸಂಪೂರ್ಣ ನಾಶವಾಗುವುದಿಲ್ಲ; ಆದುದರಿಂದ ಜ್ಞಾನವೇ ನಿಜವಾದ ಪ್ರಾಯಶ್ಚಿತ್ತವಾಗಿದೆ.

ಅಂಗೀರಸನು ಪ್ರಾಯಶ್ಚಿತ್ತದ ಯೌಗಿಕ ಅರ್ಥವನ್ನು ಮುಂದಿನಂತೆ ಹೇಳಿದ್ದಾನೆ
ಪ್ರಾಯೋ ನಾಮ ತಪಃ ಪ್ರೋಕ್ತಂ ಚಿತ್ತಂ ನಿಶ್ಚಯ ಉಚ್ಯತೆ |
ತಪೋನಿಶ್ಚಯಸಂಯುಕ್ತಂ ಪ್ರಾಯಶ್ಚಿತ್ತಮಿತಿ ಸ್ಮೃತಮ್ ||
ಅರ್ಥ: ಪ್ರಾಯಃ ಅಂದರೆ ತಪಸ್ಸು ಮತ್ತು ಚಿತ್ತ ಅಂದರೆ ನಿಶ್ಚಯ. ತಪಸ್ಸು ಮತ್ತು ನಿಶ್ಚಯಗಳಿಂದ ಕೂಡಿದ ಕರ್ಮಗಳಿಗೆ ಪ್ರಾಯಶ್ಚಿತ್ತ ಎನ್ನಬೇಕು.

ಪಶ್ಚಾತ್ತಾಪ: ಪಶ್ಚಾತ್ತಾಪವಾಗಬೇಕು, ಏಕೆಂದರೆ ಪಶ್ಚಾತ್ತಾಪವಾದರೆ ಮನುಷ್ಯನು ಮತ್ತೊಮ್ಮೆ ಪಾಪಕರ್ಮಗಳನ್ನು ಮಾಡುವುದಿಲ್ಲ. ಪಶ್ಚಾತ್ತಾಪವು ಪ್ರಾಯಶ್ಚಿತ್ತದ ಒಂದು ಅಂಗವೇ ಆಗಿದೆ. ಯಾವುದಾದರೊಂದು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳದಿದ್ದರೆ ಪಾಪದ ಕ್ಷಾಲನೆಯಾಗುವುದಿಲ್ಲ ಎಂದು ಧರ್ಮಶಾಸ್ತ್ರಕಾರರು ಹೇಳುತ್ತಾರೆ. ಜ್ಞಾನದಿಂದ (ತಿಳಿದು) ಮತ್ತು ಅಜ್ಞಾನದಿಂದ (ತಿಳಿಯದೆ) ಎಂಬ ಎರಡು ರೀತಿಯ ಪಾಪಗಳನ್ನು ಮನುವು (೧೧.೪೬) ಹೇಳಿದ್ದಾನೆ. ಅಜ್ಞಾನದಿಂದ ಮಾಡಿದ ಪಾಪಗಳ ಕ್ಷಾಲನವು ಪಶ್ಚಾತ್ತಾಪದಿಂದ ಅಥವಾ ಆ ಪಾಪವನ್ನು ಬಹಿರಂಗವಾಗಿ ಹೇಳುವುದರಿಂದ ಆಗಬಹುದು, ಆದರೆ ‘ಜ್ಞಾನದಿಂದ (ತಿಳಿದೂ) ಮಾಡಿದ ಪಾಪಗಳಿಗೆ ಮಾತ್ರ ಕಠಿಣ ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಬೇಕು’ ಎಂದು ಮನುವು ಹೇಳಿದ್ದಾನೆ.

ಪಾಪಿ ಮನುಷ್ಯರು ಪಶ್ಚಾತ್ತಾಪದಿಂದ ಬೆಂದು ಹೋದರೆ ಮುಕ್ತರಾಗಬಲ್ಲರು. ಇದಕ್ಕೆ ಕಾರಣವೇನೆಂದರೆ ಪಶ್ಚಾತ್ತಾಪವಾದ ಮನುಷ್ಯನಿಗೆ ತನ್ನ ಅಜ್ಞಾನ, ತನ್ನ ದೋಷಗಳು, ಮೋಹಮಾಯೆಯ ಜೀವನದ ದುಷ್ಪರಿಣಾಮ ಇತ್ಯಾದಿ ತಿಳಿಯುತ್ತದೆ. ಆದುದರಿಂದ ತನ್ನೆಡೆಗೆ ಮತ್ತು ಜಗತ್ತಿನ ಕಡೆಗೆ ನೋಡುವ ಅವನ ದೃಷ್ಟಿಕೋನವು ಬದಲಾಗಿರುತ್ತದೆ. ಇಂತಹ ಮನುಷ್ಯರು ಧರ್ಮಪರಾಯಣರಾಗುವ ಮತ್ತು ಸಾಧನೆಯತ್ತ ಹೊರಳುವ ಸಾಧ್ಯತೆಯು ಹೆಚ್ಚಿಗೆ ಇರುತ್ತದೆ. ಇದರ ಫಲವೆಂದು ಅವರಿಗೆ ಮರಣದ ನಂತರ ಸದ್ಗತಿಯು ಸಿಗುತ್ತದೆ. ಈ ಅರ್ಥದಲ್ಲಿ ಪಶ್ಚಾತ್ತಾಪದಿಂದ ಬೆಂದಿರುವವನು ಮುಕ್ತನಾಗುತ್ತಾನೆ ಎಂದು ಹೇಳಲಾಗಿದೆ.

ಮಹತ್ವ: ಪಾಪಮುಕ್ತಿಗಾಗಿ ಪ್ರಾಯಶ್ಚಿತ್ತಗಳಿವೆ.
೧. ಪ್ರಾಯಶ್ಚಿತ್ತಗಳಿಂದ ಪಾಪ ಮಾಡುವ ವ್ಯಕ್ತಿಯು ವ್ರತಬದ್ಧನಾಗುತ್ತಾನೆ ಮತ್ತು ಕಠೋರ ವ್ರತಾಚರಣೆಗಳನ್ನು ಮಾಡಿ ಒಳ್ಳೆಯ ಮನುಷ್ಯನಾಗುತ್ತಾನೆ. ಅಲ್ಲದೇ ಇನ್ನು ಮುಂದೆ ಪಾಪಗಳನ್ನು ಮಾಡುವುದಿಲ್ಲವೆಂದು ನಿರ್ಧಾರ ಮಾಡುತ್ತಾನೆ. ಇದಕ್ಕೆ ವಿರುದ್ಧವಾಗಿ ಕೇವಲ ಅಪರಾಧಗಳನ್ನು ಒಪ್ಪಿಕೊಳ್ಳುವುದರಿಂದ ಅಥವಾ ಶಿಕ್ಷೆಗಳನ್ನು ಭೋಗಿಸುವುದರಿಂದ ತಪ್ಪುಗಳನ್ನು ತಡೆಯಲು ಆಗುವುದಿಲ್ಲ. ಅಪರಾಧಿಗಳು ತಮ್ಮ ಅಪರಾಧಗಳಿಗಾಗಿ ಶಿಕ್ಷೆಯನ್ನು ಭೋಗಿಸುತ್ತಾರೆ, ಆದರೆ ಅವರಲ್ಲಿ ಸುಧಾರಣೆ ಆಗುವುದಿಲ್ಲ; ಏಕೆಂದರೆ ಅವರಿಗೆ ಪಶ್ಚಾತ್ತಾಪವಾಗುವುದಿಲ್ಲ ಮತ್ತು ಅವರಿಗೆ ಅವರು ಮಾಡಿದ ಕೆಟ್ಟ ಕೃತಿಗಳ ಪರಿಣಾಮಗಳ ಅರಿವೂ ಇರುವುದಿಲ್ಲ.
೨. ‘ಪಶ್ಚಾತ್ತಾಪೇನ ಶುದ್ಧ್ಯತಿ’ ಅಂದರೆ ‘ಪಶ್ಚಾತ್ತಾಪದಿಂದ (ಮನುಷ್ಯನು) ಶುದ್ಧನಾಗುತ್ತಾನೆ’ ಎಂಬ ಒಂದು ವಚನವಿದೆ.
೩. ಇತರರಿಗೆ ಕೇಡು ಮಾಡುವುದರಿಂದ ಉಂಟಾದ ಪಾಪಗಳಿಗೆ ರಾಜನು ನೀಡಿದ ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ತನಗೆ ಅಹಿತವಾಗುವ ಪಾಪಗಳಿಂದ (ಉದಾ.ವ್ಯಸನಾಧೀನತೆ) ಮನುಷ್ಯನು ಪ್ರಾಯಶ್ಚಿತ್ತ ಮತ್ತು ಸಾಧನೆಗಳಿಂದ ಮುಕ್ತನಾಗುತ್ತಾನೆ.
೪. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ, ಭಾವನೆಯ ಭರದಲ್ಲಿ ಮಾಡಿದ ತಪ್ಪುಗಳಿಂದ ನಿರ್ಮಾಣವಾದ ಅಪರಾಧೀ ಭಾವನೆಯಿಂದ ವ್ಯಕ್ತಿಯು ಮುಕ್ತನಾಗುತ್ತಾನೆ.
೫. ಪಾಪಗಳ ಪರಿಣಾಮಗಳಿಂದ ನಿರ್ಮಾಣವಾಗುವ ಕರ್ಮವು ಪ್ರಾಯಶ್ಚಿತ್ತಗಳನ್ನು ತೆಗೆದು ಕೊಳ್ಳುವುದರಿಂದ ಸಂಚಿತದಲ್ಲಿ ಸಂಗ್ರಹವಾಗುವುದಿಲ್ಲ. ಆದುದರಿಂದ ಸಂಚಿತವು ಹೆಚ್ಚಾಗುವುದಿಲ್ಲ. ಇದರಿಂದ ಲೌಕಿಕ ಮತ್ತು ಆಧ್ಯಾತ್ಮಿಕ ಪ್ರಗತಿಯಲ್ಲಿ ಬರುವ ಅಡಚಣೆಗಳು ದೂರವಾಗುತ್ತವೆ.
೬. ಪ್ರಾಯಶ್ಚಿತ್ತದಿಂದ ಮನಸ್ಸಿಗೆ ಸಮಾಧಾನವು ಸಿಗುತ್ತದೆ.
೭. ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದೆ ಎಂಬುದರ ಬಗ್ಗೆ ಇತರರಲ್ಲಿ ವಿಶ್ವಾಸ ಮೂಡುತ್ತದೆ.
೮. ಅನ್ಯಾಯವನ್ನು ಮಾಡುವವನು ತನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೆ, ಯಾರ ಮೇಲೆ ಅನ್ಯಾಯವಾಗಿದೆಯೋ, ಅವನ ಮನಸ್ಸಿನಲ್ಲಿನ ಕ್ರೋಧವು ಕಡಿಮೆಯಾಗುತ್ತದೆ ಅಥವಾ ನಾಶವಾಗುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಗ್ರಂಥ 'ಪುಣ್ಯ-ಪಾಪ ಮತ್ತು ಪಾಪದ ಪ್ರಾಯಶ್ಚಿತ್ತ')

ಅಗ್ನಿಹೋತ್ರದ ಲಾಭಗಳು


ಜಗತ್ತಿನಲ್ಲಿ ಅಗ್ನಿಹೋತ್ರದ ಆಚರಣೆಯನ್ನು ಮಾಡುವ ವಿಭಿನ್ನ ವಂಶ, ವಿಭಿನ್ನ ಭಾಷೆ, ವಿಭಿನ್ನ ಧರ್ಮ ಮತ್ತು ಆಧ್ಯಾತ್ಮಿಕ ಗುಂಪುಗಳಿವೆ. ಅವರು ಮುಂದಿನ ಲಾಭಗಳನ್ನು ಅನುಭವಿಸಿದ್ದಾರೆ.

೧. ‘ಚೈತನ್ಯದಾಯಕ ಮತ್ತು ಔಷಧಿಯ ವಾತಾವರಣ ನಿರ್ಮಾಣವಾಗುತ್ತದೆ.
೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ.
೩. ಪ್ರಾಣಿಜೀವಗಳ ಪೋಷಣೆ: ಹೇಗೆ ಅಗ್ನಿಹೋತ್ರವು ವನಸ್ಪತಿಗಳ ಪೋಷಣೆಯನ್ನು ಮಾಡುತ್ತದೆಯೋ, ಅದೇ ರೀತಿ ಮನುಷ್ಯರ ಮತ್ತು ಎಲ್ಲ ಪ್ರಾಣಿಗಳ ಪೋಷಣೆಯನ್ನೂ ಮಾಡುತ್ತದೆ.’
೪. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ
  • ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.
  • ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.
  • ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.
  • ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಉಪಚಾರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ.
೫. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾ ಶಕ್ತಿ ನಿರ್ಮಾಣವಾಗಿ ಮನೋವಿಕಾರಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು
೬. ನರವ್ಯೂಹದ ಮೇಲಾಗುವ ಪರಿಣಾಮ: ‘ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.’
೭. ರೋಗಜಂತುಗಳ ಪ್ರತಿರೋಧ: ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದು ಬಂದಿದೆ.’
೮. ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ: ‘ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚವಿರುವುದರ ಅರಿವಾಗುತ್ತದೆ.’
೯. ಅಗ್ನಿಹೋತ್ರದಿಂದ ಪ್ರಾಣಶಕ್ತಿಯು ಶುದ್ಧವಾಗಿ, ಆ ವಾತಾವರಣದಲ್ಲಿನ ವ್ಯಕ್ತಿಗಳ ಮನಸ್ಸು ಕೂಡಲೇ ಪ್ರಸನ್ನ ಮತ್ತು ಆನಂದಿತವಾಗುವುದು ಹಾಗೂ ಆ ವಾತಾವರಣದಲ್ಲಿ ಸಹಜವಾಗಿ ಧ್ಯಾನ ಧಾರಣೆಯಾಗಲು ಸಾಧ್ಯವಾಗುತ್ತದೆ.

ಅಗ್ನಿಹೋತ್ರದ ಮಂತ್ರಗಳನ್ನು ಹೇಗೆ ಉಚ್ಚರಿಸಬೇಕು? ಮಂತ್ರ ಹೇಳುವಾಗ ಭಾವ ಹೇಗಿರಬೇಕು? ಮಂತ್ರವನ್ನು ಯಾರು ಹೇಳಬೇಕು? ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಏಕೆ ಮಾಡಬೇಕು? ಅಗ್ನಿಹೋತ್ರದ ನಂತರ ಮಾಡಬೇಕಾದ ಕೃತಿಗಳು ಯಾವುವು? ಅಗ್ನಿಹೋತ್ರ ಮಾಡುವ ಬಗ್ಗೆ ವಿವರವಾದ ಮಾಹಿತಿಗಾಗಿ ಸನಾತನದ ಗ್ರಂಥ ‘ಅಗ್ನಿಹೋತ್ರ’ ವನ್ನು ಓದಿರಿ.

ಸಂಬಂಧಿತ ಲೇಖನಗಳು
ಅಗ್ನಿಹೋತ್ರದ ಮಹತ್ವ
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು