ಮನೋಗತ
ಹಿಂದಿನ ಕಾಲದಲ್ಲಿ ಸ್ತ್ರೀಯರು ಸ್ನಾನವನ್ನು ಮಾಡುವುದಕ್ಕಿಂತ ಮೊದಲು ಸೀರಣಿಗೆಯ ಪೆಟ್ಟಿಗೆಯ ಮುಂದೆ ಕುಳಿತುಕೊಂಡು ತಲೆಬಾಚಿಕೊಳ್ಳುತ್ತಿದ್ದರು, ಬಾಚಣಿಕೆ (ಸೀರಣಿಗೆ) ಯಲ್ಲಿ ಬಂದ ಕೂದಲುಗಳನ್ನು ಒಲೆಯಲ್ಲಿ ಹಾಕಿ ಸುಡುತ್ತಿದ್ದರು ಮತ್ತು ಕೂದಲುಗಳನ್ನು ಹಾಗೆ ಬಿಟ್ಟುಕೊಂಡು ಹೊರಗೆ ಹೋಗುತ್ತಿರಲಿಲ್ಲ. ಕೂದಲಿಗೆ ಸಂಬಂಧಿಸಿದ ಇಂತಹ ಸಂಸ್ಕಾರಗಳು (ಆಚಾರ) ತಾಯಿ ಅಥವಾ ಅಜ್ಜಿಯಿಂದ ಹೆಣ್ಣುಮಕ್ಕಳ ಮೇಲೆ ಆಗುತ್ತಿತ್ತು. ಪ್ರತಿ ತಿಂಗಳು ಹುಡುಗರನ್ನೂ ಕೂದಲು ಕತ್ತರಿಸಿಕೊಂಡು ಬರಲು ಕ್ಷೌರಿಕನ ಬಳಿ ಕಳುಹಿಸುತ್ತಿದ್ದರು. ಸ್ನಾನದ ನಂತರ ಕೂದಲಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಎಂಬುದೂ ತಂದೆಯಿಂದ ಮಗನಿಗೆ ಕಲಿಯಲು ಸಿಗುತ್ತಿತ್ತು. ಮಧ್ಯದ ಕಾಲದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆಯಿಂದಾಗಿ ಕ್ರಮೇಣ ಹಿಂದೂಗಳು ಧಾರ್ಮಿಕ ಆಚಾರ ಮತ್ತು ಪರಂಪರೆಗಳನ್ನು ಬಿಡತೊಡಗಿದರು ಅಥವಾ ಅವುಗಳ ಬಗ್ಗೆ ಅನಾಸಕ್ತಿ ಉಂಟಾಗತೊಡಗಿತು. ಇದರಿಂದ ಹಿಂದೂ ಸಮಾಜಕ್ಕೆ ಸಾಂಸ್ಕೃತಿಕ ಸ್ತರದಲ್ಲಿ ಹಾನಿಯಂತೂ ಆಯಿತು; ಆದರೆ ಅದಕ್ಕಿಂತ ಹೆಚ್ಚು ಹಾನಿ ಆಧ್ಯಾತ್ಮಿಕ ಸ್ತರದಲ್ಲಾಯಿತು.
ಮಾನವನ ಶರೀರದಲ್ಲಿ ನಿಸರ್ಗವು ನಿರ್ಮಿಸಿದ ಕೂದಲುಗಳ ವ್ಯವಸ್ಥೆಯು ಕೇವಲ ಸೌಂದರ್ಯವರ್ಧನೆಗಾಗಿ ಮಾತ್ರ ಇಲ್ಲ, ಅವುಗಳ ಮೂಲಕ ಈಶ್ವರೀ ಚೈತನ್ಯವನ್ನು ಗ್ರಹಿಸುವುದು ಮತ್ತು ಜೀವದ ಸಾತ್ತ್ವಿಕತೆಯನ್ನು ಹೆಚ್ಚಿಸುವುದಕ್ಕಾಗಿಯೂ ಇದೆ. ಈ ಗ್ರಂಥದಲ್ಲಿ ಕೂದಲುಗಳ ಆರೋಗ್ಯವು ಚೆನ್ನಾಗಿರಲು ಯಾವ ಆಹಾರವನ್ನು ಸೇವಿಸಬೇಕು, ಯಾವ ವ್ಯಾಯಾಮಗಳನ್ನು ಮಾಡಬೇಕು ಮುಂತಾದ ವಿಷಯಗಳ ಮಾಹಿತಿಯನ್ನು ಕೊಡುವುದ ರೊಂದಿಗೆ, ಕೂದಲುಗಳ ಮುಖಾಂತರ ಈಶ್ವರೀ ಚೈತನ್ಯವು ಗ್ರಹಿಸಲ್ಪಟ್ಟು ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆ ಹೇಗಾಗುತ್ತದೆ ಎಂಬ ಶಾಸ್ತ್ರೀಯ ಮಾಹಿತಿಯನ್ನು ಸಹ ನೀಡಲಾಗಿದೆ.
ಈಗ ಸಮಾಜದಲ್ಲಿನ ಹೆಚ್ಚಿನ ಸ್ತ್ರೀಪುರುಷರ ಕೇಶಾಲಂಕಾರದ ಕಡೆಗೆ ನೋಡುವ ದೃಷ್ಟಿಕೋನವು ಕೇವಲ ಸೌಂದರ್ಯವರ್ಧನೆಗಾಗಿಯೇ ಇದೆ. ಇಲ್ಲಿಯೇ ಅಪಾಯವು ಪ್ರಾರಂಭವಾಗುತ್ತದೆ. ಸ್ತ್ರೀಯರು ಕೂದಲುಗಳನ್ನು ಕತ್ತರಿಸಿಕೊಳ್ಳುವುದು, ಕೂದಲನ್ನು ಬಾಚಿಕೊಳ್ಳದೆ ಹಾಗೆ ಬಿಟ್ಟು ತಿರುಗಾಡುವುದು ಮುಂತಾದ ಕೃತಿಗಳು ಸೌಂದರ್ಯವರ್ಧನೆಯ ದೃಷ್ಟಿಯಿಂದ ಜೀವಕ್ಕೆ ಒಳ್ಳೆಯದೆನಿಸಿದರೂ, ಅವುಗಳ ಮುಖಾಂತರ ಕೆಟ್ಟ ಶಕ್ತಿಗಳಿಗೆ ಆಕ್ರಮಣ ಮಾಡಲು ನಾವಾಗಿ ಆಹ್ವಾನ ಮಾಡಿದಂತಾಗುತ್ತದೆ. ಕೂದಲುಗಳ ಬಗ್ಗೆ ಇಂತಹ ಅಹಿತಕಾರಿ ಕೃತಿಗಳನ್ನು ಮಾಡದೇ, ಕೂದಲುಗಳನ್ನು ಬಾಚಿಕೊಳ್ಳುವಾಗ ಕೆಳಗೆ ಬಿದ್ದ ಕೂದಲುಗಳನ್ನು ಎರಡು ದಿನಗಳ ನಂತರ ಹೊರಗೆ ಬಿಸಾಡುವುದು, ರಾಸಾಯನಿಕ ಕೇಶರಕ್ಷಕದಿಂದ (ಶ್ಯಾಂಪೂವಿನಿಂದ) ತಲೆಸ್ನಾನ ಮಾಡದೇ, ಆಯುರ್ವೇದೀಯ ಘಟಕಗಳಿಂದ ಅಥವಾ ಆಯುರ್ವೇದೀಯ ಸಾಬೂನಿನಿಂದ ತಲೆಸ್ನಾನ ಮಾಡುವುದು ಮುಂತಾದ ಯೋಗ್ಯ ಕೃತಿಗಳ ಬಗ್ಗೆ ಈ ಗ್ರಂಥದಲ್ಲಿ ಮಾರ್ಗದರ್ಶನವನ್ನು ಮಾಡಲಾಗಿದೆ.
ಸ್ತ್ರೀಪುರುಷರ ಶರೀರದ ಅವಿಭಾಜ್ಯ ಅಂಗವಾಗಿರುವ ಕೂದಲುಗಳ ಬಗ್ಗೆ ವಾಚಕರಿಗೆ ಆಧ್ಯಾತ್ಮಿಕ ದೃಷ್ಟಿಕೋನವು ದೊರೆತು ಅವರಿಂದ ಈ ಗ್ರಂಥದಲ್ಲಿ ಹೇಳಲಾಗಿರುವ ಆಚಾರಗಳ ಪಾಲನೆಯಾಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು
ಸನಾತನ ಸಂಸ್ಥೆಯು ನಿರ್ಮಿಸಿದ ಈ ಗ್ರಂಥದ ಪರಿವಿಡಿ ಡೌನಲೋಡ್ ಮಾಡಿಕೊಳ್ಳಿ. - ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ
ಸನಾತನ ಸಂಸ್ಥೆಯು ನಿರ್ಮಿಸಿದ ಈ ಗ್ರಂಥದ ಪರಿವಿಡಿ ಡೌನಲೋಡ್ ಮಾಡಿಕೊಳ್ಳಿ. - ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ
ತುಂಬಾ ಉಪಯುಕ್ತವಾದ ಗ್ರಂಥ ಸಾರ್,
ReplyDeleteನನಗು ಒಂದು ಧರ್ಮಗ್ರಂಥ ಬೇಕು ಹೇಗೆ ಪಡೆದುಕೊಳ್ಳೂವುದು
ನಮಸ್ಕಾರ, 8951937332 ಗೆ ಕರೆ ಮಾಡಿದರೆ ನಿಮ್ಮ ಊರಿನಲ್ಲಿ ಅಥವಾ ಸಮೀಪದ ಊರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿಸುತ್ತಾರೆ. ಧನ್ಯವಾದಗಳು.
Delete