ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವ ಮತ್ತು ಲಾಭಗಳು
೧. ‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.
೨. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.
೩. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’
- ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೬.೧೧.೨೦೦೭, ಮಧ್ಯಾಹ್ನ ೨.೩೦)
೪. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ: ‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’ - ಬ್ರಹ್ಮತತ್ತ್ವ (ಸೌ.ಪಾಟೀಲರ ಮಾಧ್ಯಮದಿಂದ, ೧೭.೧.೨೦೦೫, ಮಧ್ಯಾಹ್ನ ೧.೩೦)
ಕುಂಕುಮದ ಪರಿಮಳ, ಬಣ್ಣ ಮತ್ತು ಶಕ್ತಿಗಳಿಂದಾಗುವ ಲಾಭಗಳ ಪ್ರಮಾಣ ಮತ್ತು ಜೀವದ ಮೇಲಾಗುವ ಪರಿಣಾಮಗಳು
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೪.೨೦೦೭, ಸಾಯಂ. ೬.೦೧ ಮತ್ತು ೧೩.೪.೨೦೦೭, ರಾತ್ರಿ ೯)
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
ಶಾಸ್ತ್ರ : ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.
ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೮.೨೦೦೪, ಮಧ್ಯಾಹ್ನ ೩.೪೬ ಮತ್ತು ೮.೬.೨೦೦೮, ಸಾಯಂ. ೬.೪೧)
(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ’)
ಸಂಬಂಧಿತ ವಿಷಯಗಳು
ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
for others, its the middle finger.. which finger to use to keep kumkum for oneself?
ReplyDeleteನಮಸ್ಕಾರ, ನಿಮ್ಮ ಪ್ರಶ್ನೆಗೆ ಉತ್ತರ ವಿಷಯದಲ್ಲೇ ಇದೆ. ಪದ್ಧತಿ ಎಂಬ ಸಾಲನ್ನು ಓದಿ ನೋಡಿ.
DeleteRight ring finger... :-)
Deleterathan kumar c bangalore
ReplyDeleteathiutthamavaada kunkuma yelli doreyuthade ? vilaasa kodi
uttharavannu nanna gmail id ge kaluhisi (rathankumarnaik@gmail.com)