ಯುವತಿಯನ್ನು ‘ಲವ್ ಜಿಹಾದ್’ನ ಮೂಲಕ ವಶಪಡಿಸಿಕೊಳ್ಳಲು ಮಾಡಲಾದ ವಶೀಕರಣದ ಅಥವಾ ಮಾಟ-ಮಂತ್ರಗಳ ಪ್ರಭಾವವನ್ನು ನಾಶಗೊಳಿಸಲು ಮಾಡಬೇಕಾದ ಕೆಲವು ಆಧ್ಯಾತ್ಮಿಕ ಉಪಾಯಗಳು
ಒಂದು ವೇಳೆ ಯಾವುದಾದರೊಂದು ಪ್ರಕರಣದಲ್ಲಿ ಓರ್ವ ಯುವತಿಯ ಮೇಲೆ ವಶೀಕರಣವಾಗಿದೆ ಎಂಬುದು ಗಮನಕ್ಕೆ ಬಂದರೆ, ಅವಳಿಗೆ ಈ ಮುಂದಿನಂತೆ ಆಧ್ಯಾತ್ಮಿಕ ಉಪಾಯ ಮಾಡಬೇಕು.
೧. ಯುವತಿಯ ಬಳಿ ಇರುವ ತಾಯಿತ, ಮಂತ್ರಿಸಿದ ದಾರ, ವಿಭೂತಿ ಇತ್ಯಾದಿ ವಸ್ತುಗಳನ್ನು ಅವಳಿಂದ ತೆಗೆದು ಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕುವುದು: ಮೊತ್ತಮೊದಲು ಯುವತಿಯ ವಶೀಕರಣಕ್ಕಾಗಿ ಅವಳಿಗೆ ಕಟ್ಟಿದ ತಾಯಿತ, ಮಂತ್ರಿಸಿದ ದಾರ, ಪರ್ಸ್‌ನಲ್ಲಿ ಇಡಲಾದ ಇಂತಹ ವಸ್ತುಗಳನ್ನು ಅವಳಿಂದ ತೆಗೆದುಕೊಳ್ಳಬೇಕು. ಆ ವಶೀಕರಣದ ವಸ್ತುಗಳನ್ನು ಅಗ್ನಿಗೆ ಹಾಕಿ ನಾಶಗೊಳಿಸಬೇಕು. ಅವಳಲ್ಲಿರುವ ಎಲ್ಲ ವಸ್ತುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು.
೨. ಆ ಯುವತಿಯ ತಲೆಯ ಮೇಲೆ ಕೈಯಿಟ್ಟು ಅರ್ಧ ಗಂಟೆ ಅವಳ ಕುಲದೇವತೆಯ ನಾಮಜಪ ಮಾಡಬೇಕು.
೩. ಲಿಂಬೆ ಮತ್ತು ಊದುಬತ್ತಿಯ ವಿಭೂತಿಯಿಂದ ನಿವಾಳಿಸುವುದು: ಆ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ನಿವಾಳಿಸುವ ವ್ಯಕ್ತಿ ತನ್ನ ಎರಡೂ ಕೈಗಳನ್ನು ಒಟ್ಟು ಮಾಡಿ ಅದರಲ್ಲಿ ಪೂರ್ಣ ಲಿಂಬೆ ಮತ್ತು ವಿಭೂತಿಯನ್ನು ತೆಗೆದುಕೊಂಡು ಅದನ್ನು ಆ ಪೀಡಿತ ಯುವತಿಯ ಮುಂದೆ ಹಿಡಿಯಬೇಕು. ಅನಂತರ ‘ಈ ಯುವತಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯು ಈ ನಿವಾಳಿಸುವಿಕೆಯಿಂದ ದೂರವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ತಮ್ಮ ಕೈಯಲ್ಲಿರುರುವ ಲಿಂಬೆ ಮತ್ತು ವಿಭೂತಿಯಿಂದ ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಕೊನೆಗೆ ಆ ವಸ್ತುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ನಿವಾಳಿಸುವ ವ್ಯಕ್ತಿಯು ಆ ವಸ್ತುಗಳನ್ನು ವಿಸರ್ಜನೆ ಮಾಡುವ ವರೆಗೆ ಮನಸ್ಸಿನಲ್ಲಿ ತನ್ನ ಉಪಾಸ್ಯದೇವತೆಯ ನಾಮಜಪ ಮಾಡಬೇಕು ಹಾಗೂ ಅನಂತರ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು. ಆ ಯುವತಿಗೂ ಕೈ-ಕಾಲುಗಳನ್ನು ತೊಳೆದುಕೊಳ್ಳಲು ಹೇಳಬೇಕು. ಅನಂತರ ತನ್ನ ಹಾಗೂ ಅವಳ ಮೈಮೇಲೆ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸ ಬೇಕು. ಯುವತಿಯ ಹಣೆಗೆ ದೇವರ ಎದುರಿಗೆ ಇರುವ ಅಥವಾ ಪವಿತ್ರ ಸ್ಥಾನದ ವಿಭೂತಿಯನ್ನು ಹಚ್ಚಬೇಕು.
೪. ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಅದನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದು ಅಥವಾ ಅಗ್ನಿಗೆ ಅರ್ಪಿಸುವುದು: ಈ ಮೇಲಿನ ಉಪಾಯದ ನಂತರವೂ ಆ ಯುವತಿಯ ಮೇಲಿನ ವಶೀಕರಣದ ಪ್ರಭಾವ ಕಡಿಮೆಯಾಗದೆ ಅವಳು ಭ್ರಮಿಷ್ಟಳಾಗಿ ವರ್ತಿಸುತ್ತಿದ್ದರೆ ಅಥವಾ ಅವಳನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿದ ಮುಸಲ್ಮಾನನನ್ನು ಸ್ಮರಿಸುತ್ತಿದ್ದರೆ, ತೆಂಗಿನಕಾಯಿಯಿಂದ ಅವಳ ದೃಷ್ಟಿ ನಿವಾಳಿಸಬೇಕು. ದೃಷ್ಟಿ ನಿವಾಳಿಸುವುದರಿಂದ ಯುವತಿಯಲ್ಲಿ ಮಾಟ-ಮಂತ್ರದ ದೋಷವಿದ್ದರೆ ದೂರವಾಗುತ್ತದೆ. ಈ ಪದ್ಧತಿಯಲ್ಲಿ ಯುವತಿಯನ್ನು ಮಣೆಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು. ದೃಷ್ಟಿ ನಿವಾಳಿಸಲು ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಳ್ಳ ಬೇಕು. ದೃಷ್ಟಿ ನಿವಾಳಿಸುವವರು ಈ ತೆಂಗಿನಕಾಯಿಯನ್ನು ಬೊಗಸೆಯಲ್ಲಿ ಹಿಡಿದುಕೊಂಡು ಆ ಯುವತಿಯ ಎದುರು ನಿಂತುಕೊಳ್ಳಬೇಕು. ತೆಂಗಿನಕಾಯಿಯ ಜುಟ್ಟು ಯುವತಿಯ ಎದುರು ಇರುವಂತೆ ಹಿಡಿದುಕೊಂಡು ‘ಹೇ ಮಾರುತಿರಾಯಾ, ನೀನು ಈ ಯುವತಿಯ ದೇಹದಲ್ಲಿ ಮತ್ತು ದೇಹದ ಹೊರಗಿರುವ ತೊಂದರೆದಾಯಕ ಸ್ಪಂದನಗಳನ್ನು ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ಅವುಗಳನ್ನು ಸಂಪೂರ್ಣವಾಗಿ ನಾಶಗೊಳಿಸು’ ಎಂದು ಪ್ರಾರ್ಥನೆ ಮಾಡಬೇಕು. ಅನಂತರ ಆ ತೆಂಗಿನಕಾಯಿಯನ್ನು ಯುವತಿಯ ಕಾಲಿನಿಂದ ತಲೆಯ ವರೆಗೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ವರ್ತುಲಾಕಾರದಲ್ಲಿ ಮೂರು ಬಾರಿ ನಿವಾಳಿಸಬೇಕು. ಅನಂತರ ಆ ಯುವತಿಯ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುವಾಗ ತೆಂಗಿನಕಾಯಿಯ ಜುಟ್ಟು ಯುವತಿಯ ಕಡೆಗಿರಬೇಕು. ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು ಅಥವಾ ಬೆಂಕಿಗೆ ಅರ್ಪಿಸಬೇಕು. ಆಗ ‘ಹನುಮಂತನಿಗೆ ವಿಜಯವಾಗಲಿ!’, ಎಂದು ಜಯಘೋಷ ಮಾಡಬೇಕು. (‘ಲವ್ ಜಿಹಾದ್’ನಲ್ಲಿ ಸಿಲುಕಿದ ಯುವತಿ ಹಿಂತಿರುಗಿ ಬರದಿದ್ದರೂ, ಅವಳ ಮೇಲಿನ ವಶೀಕರಣ ಅಥವಾ ಮಂತ್ರ-ತಂತ್ರದ ತೊಂದರೆಯನ್ನು ಹೋಗಲಾಡಿಸಲು ಅವಳ ಛಾಯಾಚಿತ್ರವನ್ನಿಟ್ಟು ಕೂಡ ಈ ಮೇಲಿನಂತೆ ದೃಷ್ಟಿ ತೆಗೆಯಬಹುದು.)
೫. ಯುವತಿಗೆ ಉಪ್ಪು ನೀರಿನಲ್ಲಿ ಸ್ನಾನ ಮಾಡಲು ಹೇಳುವುದು: ಪೀಡಿತ ಯುವತಿಯ ದೃಷ್ಟಿ ನಿವಾಳಿಸಿದ ನಂತರ ಅಥವಾ ತೆಂಗಿನಕಾಯಿಯಿಂದ ಅವಳ ದೃಷ್ಟಿ ತೆಗೆದ ನಂತರ ಒಂದು ಬಾಲ್ದಿ ನೀರಿಗೆ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ಅವಳಿಗೆ ಆ ನೀರಿನಿಂದ ಸ್ನಾನ ಮಾಡಲು ಹೇಳಬೇಕು.
೬. ನಾಮಜಪ ಮಾಡಲು ಹಾಗೂ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಪಠಣ ಮಾಡಲು ಹೇಳುವುದು: ಯುವತಿಗೆ ಪುನಃ ವಶೀಕರಣ ಅಥವಾ ಮಂತ್ರ-ತಂತ್ರಗಳ ತೊಂದರೆಯಾಗದಿರಲು ಅವಳಿಗೆ ದೇವರಿಗೆ ಪ್ರಾರ್ಥನೆ ಮಾಡಲು ಹಾಗೂ ಒಂದು ಗಂಟೆ ಅವಳ ಕುಲದೇವತೆ ಅಥವಾ ಉಪಾಸ್ಯ ದೇವತೆಯ ನಾಮಜಪ ಮಾಡಲು ಹೇಳಬೇಕು. ಅವಳಿಗೆ ದಿನನಿತ್ಯ ೧ಬಾರಿ ಮಾರುತಿಸ್ತೋತ್ರ ಅಥವಾ ಹನುಮಾನ ಚಾಲೀಸಾ ಹೇಳಲು ಹೇಳಬೇಕು. ಹಾಗೆಯೇ ಅವಳಿಗೆ ಪ್ರತಿದಿನ ಈ ಉಪಾಸನೆಯನ್ನು ಮಾಡಲು ಹೇಳಬೇಕು.
೭. ಗಾಣಗಾಪುರದಂತಹ ಜಾಗೃತ ತೀರ್ಥಕ್ಷೇತ್ರದಲ್ಲಿ ಅಥವಾ ಸಂತರ ಆಶ್ರಮದಲ್ಲಿ ಸ್ವಲ್ಪ ಸಮಯ ಹೋಗಿ ವಾಸಿಸಬೇಕು.
ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ
ಸಂಬಂಧಿತ ಲೇಖನಗಳು
‘ದೃಷ್ಟಿ ತಗಲುವುದು’ ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ಮಾಟದಂತಹ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗಲು ಮಾಡಬೇಕಾದ ಉಪಾಯಗಳು
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದುತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ
very gud information sir thanks for dharma granth
ReplyDeleteJai Hanuman
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ರಾಜುರವರೇ
Deletewe should educate our gals about this...
ReplyDeleteThanks for Dharma Granth
Jai Hanuman
ಧನ್ಯವಾದಗಳು ರಾಜುರವರೇ
Delete