ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?

ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ಇದರ ಬದಲು ನಾವು ಕಾಲುಗಳನ್ನು ತೊಳೆದುಕೊಂಡಾಗ ನಮ್ಮ ಕಾಲಿಗೆ ಅಂಟಿಕೊಂಡಿರುವ ಧೂಳಿನ ಕಣಗಳು ದೂರವಾಗುತ್ತವೆ. ಇದರಿಂದ ನಾವು ಸಾತ್ತ್ವಿಕ ಲಹರಿಗಳನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ರಜ-ತಮಾತ್ಮಕ ಲಹರಿಗಳ ಪ್ರಕ್ಷೇಪಣೆಯೂ ಕಡಿಮೆಯಾಗುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುವುದಿಲ್ಲ.

(ವಿವರವಾಗಿ ಓದಿ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)

ವಿಷಯದಲ್ಲಿರುವ ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ ತಿಳಿದುಕೊಳ್ಳಲು ಓದಿ - ಆಧ್ಯಾತ್ಮಿಕ ಸಂಜ್ಞೆಗಳು

7 comments:

  1. ರಜ-ತಮಾತ್ಮಕ ಲಹರಿಗಳು ?
    ಸಾತ್ತ್ವಿಕ ಲಹರಿಗಳ?
    what it mean i did't get ple explain...

    ReplyDelete
    Replies
    1. namaskar, pls see http://dharmagranth.blogspot.in/p/blog-page_7.html

      Delete
  2. tumba olleya vicharagalannu prakatisuttiruttiri.. Dhanyavaadagalu :)

    ReplyDelete
    Replies
    1. ಶ್ರೀನಿಧಿಯವರೇ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete
  3. ದೇವಸ್ಥಾನದಿಂದ ಬಂದ ನಂತರದಲ್ಲಿ ಕಾಲುಗಳನ್ನು ತೊಳೆಯದೇ ಮನೆಗೆ ಹೋಗಬೇಕು ಅಂತಾರಲ್ಲ ಯಾಕೆ?

    ReplyDelete
    Replies
    1. ದೇವಸ್ಥಾನದಿಂದ ತೆಗೆದುಕೊಂಡು ಹೋದ ಸಾತ್ತ್ವಿಕತೆಯು ಸ್ವಲ್ಪ ಕಾಲವಾದರೂ ಮನೆಯಲ್ಲಿ ಉಳಿಯಲಿ ಎಂಬ ಉದ್ದೇಶದಿಂದ

      Delete
  4. Dharma granthada yella vicharagalannu thilisuva books eddalli thilisi sir...naana mail id janardhank97@gmail.com thank you

    ReplyDelete

Note: only a member of this blog may post a comment.